ತಂತ್ರಿಗಳ ಮನೆಯೊಳ ಶುದ್ಧಾಚಾರ…

February 14, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳಿಯ ಭಾವನ ಕೊಡೆಯಾಲದ ಮನೆ ಒಕ್ಕಲು ಮೊನ್ನೆ ಕಳಾತು.
ಕಣಿಯಾರ ಪೇಟೆಲಿ ದೊಡ್ಡಭಾವನ ಬೈಕ್ಕು ಸಿಕ್ಕಿದ ಕಾರಣ ಟಿಗೇಟು ಖರ್ಚಿಲ್ಲದ್ದೆ ಹೋಪಲೆ ಸುಲಬ ಆತು ನವಗೆ. ಕುರ್ಚಿಪ್ಪಳ್ಳ ಕಳುದಪ್ಪದ್ದೇ ಒಂದು ಬೊಂಡವೂ ಸಿಕ್ಕಿತ್ತು. ಅಲ್ಲದ್ದರೆ ಆ ಉರಿ ಬೆಶಿಲಿಂಗೆ ಹೋಪದು ಹೇಂಗೆ ಬೇಕೆ, ಅಲ್ಲದೋ?
ಅದಿರಳಿ.

ಕೊಡೆಯಾಲದ ಆ ಜೆಂಬ್ರದ ಮನೆ ಎತ್ತುವಾಗ ಯಕ್ಷಗಾನ ಸುರು ಆಗಿತ್ತು.
ಮುಳಿಯದಜ್ಜ° ಬರದ ಪ್ರಸಂಗಕ್ಕೆ ಮುಳಿಯದಳಿಯಂದ್ರು, ಭಾವಂದ್ರು ಎಲ್ಲೋರುದೇ ವೇಷ ಹಾಕಿ ಚೆಂದಕಾಣುಸಿ ಕೊಟ್ಟಿದವು. ಒಳ್ಳೆ ಭಾಗವತಿಗೆ, ರಂಗಸಜ್ಜಿಕೆ ಇದ್ದಕಾರಣ ಪ್ರಸಂಗವೂ ರೈಸಿತ್ತು – ಹೇದವು ಬೊಳುಂಬುಮಾವ°.

ಯಕ್ಷಗಾನ ರೈಸಿದ್ದು, ಮನೆ ಒಕ್ಕಲು ರೈಸಿದ್ದು, ಊಟವೂ ರೈಸಿದ್ದು, ಊಟಕ್ಷಿಣೆಯೂ ರೈಸಿದ್ದು. ಅದಿರಳಿ.

~

ಹೋದ್ದದು ದೊಡ್ಡಭಾವನ ಒಟ್ಟೀಂಗೆ.
ದೊಡ್ಡಭಾವನ ಬೈಕ್ಕಿಲಿ ಹಿಂದೆ ಕೂದರೆ ಮಾತಾಡದ್ದೆ ಹೋಪ ಕ್ರಮ ಇಲ್ಲೆ. ಹಲವೂರಿನ ಹಲವು ಶುದ್ದಿಗೊ ಬಾಯಿಲಿ ಬಂದುಗೊಂಡಿಕ್ಕು. ಹಾಂಗೆ ಬಂದ ಹಲವು ಶುದ್ದಿಗಳಲ್ಲಿ ಒಂದು ಇಂದು ಮಾತಾಡುವನೋ?

~

ದೊಡ್ಡಜ್ಜನ ಮನೆಯ ನೆರೆಕರೆಲಿ ಕಣ್ಣಿಪ್ಪಾರೆ ಹೇದು ಒಂದು ಊರಿದ್ದಾಡ.
ಊರು ಹೇದರೆ ಒಂದು ಊರು. ಮದಲಿಂಗೆ ಇಡೀ ಊರು ಒಬ್ಬಂದೇ ಆಗಿದ್ದತ್ತಾಡ.
ಇಡೀ ಸಾವಿರಾರು ಎಕ್ರೆಯ ಜಾಗೆ ಒಂದೇ ಮನೆದು.
ಸಣ್ಣ ಸಣ್ಣ ಒಕ್ಕಲುಗೊ, ಹಲವು ಗುಡಿಚ್ಚೆಲುಗೊ ಆ ತೋಟ-ಗೆದ್ದೆಗಳ ಎಡೆಲಿ ಇದ್ದೂ – ಜಾಗೆ ಇಡೀ ಕಣ್ಣಿಪ್ಪಾರೆ ಧಣಿಗಳದ್ದು.
ಇಡೀ ಊರು ಧಣಿಗೊ ಹೇಳಿದ ಹಾಂಗೇ ನೆಡಗಷ್ಟೆ. ಅವು ಕೊಟ್ರೆ ಇದ್ದು. ಅವು ಕೊಡದ್ರೆ ಇಲ್ಲೆ – ಹಾಂಗಿರ್ಸ ಸ್ಥಿತಿ.
ಅಲ್ಯಾಣ ಗೆದ್ದೆಗೊ, ಅಲ್ಯಾಣ ಗುಡ್ಡೆಗೊ, ಅಲ್ಯಾಣ ದೇವಸ್ಥಾನಂಗೊ – ಎಲ್ಲವುದೇ ಅವರದ್ದೇ.

ಕಾಲ ಹೋದ ಹಾಂಗೇ ಒಂದೊಂದು ಗೆದ್ದೆ ಗೇಣಿಗೂ ಕೊಟ್ಟವು.
ವಿಷು ಸಮೆಯಲ್ಲಿ ಎಲ್ಲೋರುದೇ ಗೇಣಿ ತಂದು ಒಪ್ಪುಸುತ್ತ  ಗೌಜಿಯ ಕಂಡೋನಿಂಗೇ ಗೊಂತಾಡ! ಯಬ್ಬ!

ಊರಿಡೀ ಜಾಗೆ ಇಪ್ಪ ದೊಡಾ ಕುಳ. ಅದರೊಟ್ಟಿಂಗೆ ತಂತ್ರ ತೂಗುತ್ತ ಮನೆತನವೂ ಅಪ್ಪು.  ಹಾಂಗಾಗಿ ಕಣ್ಣಿಪ್ಪಾರೆ ತಂತ್ರಿಗೊ – ಹೇಳಿಯೂ ಹೇಳುಗು.
(ಅವರದ್ದೇ ಒಂದು ಜಾಗೆ ಕನ್ನೆಪ್ಪಾಡಿಲಿ ಇದ್ದು, ಅಲ್ಲಿಯೂ ಒಂದು ಪಾಲುಗಾರಕ್ಕಳ ಮನೆ ಇಪ್ಪ ಕಾರಣ ಕನ್ನೆಪ್ಪಾಡಿ ತಂತ್ರಿಗೊ ಹೇಳಿಯೂ ಹೇಳ್ತ ಕ್ರಮ ಇದ್ದು.)

~

ಕಣ್ಣಿಪ್ಪಾರೆಲಿ ಇಷ್ಟು ದೊಡ್ಡ ಜಾಗೆ ಇದ್ದರೆ, ಅದಕ್ಕೆ ಅನುರೂಪದ ಒಂದು ಮನೆ ಬೇಡದೋ? ಅದೂ ಇದ್ದು.
ನಾಲ್ಕು ಸೂತ್ರದ ದೊಡಾ ಮನೆ.
ಒಂದೊಂದು ಹೊಡೆಯ ಇಳುಶಿಕಟ್ಟಿದ ಜೆಗಿಲಿಯೇ ಒಂದು ಸಾದಾರ್ಣ ಮನೆಯಷ್ಟು ವಿಶಾಲ ಇದ್ದಾಡ. ಪ್ರತಿ ಕೋಣೆಗೂ ಅದರದ್ದೇ ಆದ ಸ್ವರೂಪ, ಅದರದ್ದೇ ಆದ ಗಾಂಭೀರ್ಯ.
ಹಳೇ ಕಾಲದ ಮರಂಗಳ ಹಾಕಿ ಮಾಡಿದ ವಿಶಾಲ ಉಪ್ಪರಿಗೆ.
ಉಪ್ಪರಿಗೆ ಮೇಗೆಯೇ ನೂರೈವತ್ತು ಜೆನರ ಹಂತಿ ಹಾಕಲೆಡಿಗು, ಆ ನಮುನೆ ಜಾಗೆ.
ಅದರಿಂದಲೂ ಮೇಗೆ ಅಟ್ಟ. ಭತ್ತವ ತುಂಬುಸಿ ಮಡಗುತ್ತ ದೊಡ್ಡ ಪತ್ತಾಯ.
ಅಡಕ್ಕೆ ಪತ್ತಾಯ ಬೇರೆ, ಭತ್ತದ ಪತ್ತಾಯ ಬೇರೆ!
ಎರಡುದೇ ಪತ್ತಾಯಲ್ಲಿ ಹಿಡಿಯದ್ದಷ್ಟಿಕ್ಕು ಮದಲಿಂಗೆ. ಸ್ವಂತ ಉಳುಮೆ ಮಾಡ್ತ ಗೆದ್ದೆಗೊ ಬೇರೆ, ಗೇಣಿ ಬಪ್ಪ ಫಲ ಬೇರೆ – ಎಲ್ಲ ಒಟ್ಟಾಗಿ – ಶ್ರೀಮಂತಿಗೆ ಆ ಮನೆಲಿ ಹೊಡಚ್ಚಿಂಡು ಇದ್ದತ್ತು.
ಮನೆ ಒಳ ಬಂದ ಲಕ್ಷ್ಮಿಗೆ ಹೆರ ಹೋಪಲೇ ಅರಡಿಯ, ಅಷ್ಟು ಎತ್ತರದ ಹೊಸ್ತಿಲುಗೊ ತುಂಬಿದ ದೊಡಾ ಬಾಗಿಲುಗೊ. ಹಲವಾರು ಕೋಣೆಗೊ.

~

ತಂತ್ರಿಗೊ ಹೇದರೆ ಅಂತೇ ಆವುತ್ತೋ? ತಂತ್ರಸಮುಚ್ಚಯ ಓದಿ, ಕಲ್ತು, ಅರದುಕುಡುದು, ಅದರೊಟ್ಟಿಂಗೆ ವೇದ ಮಂತ್ರದ ಪರಿಚಯಂಗೊ, ಜ್ಯೋತಿಷ್ಯ-ವಾಸ್ತುವಿನ ಜ್ಞಾನಂಗೊ – ಎಲ್ಲವುದೇ ಬೇಕು.ತಪ್ಪದ್ದ ತಂತ್ರಿಗಳ ನಿತ್ಯಾನುಷ್ಠಾನ
ಕನ್ನೆಪ್ಪಾಡಿ ಅಜ್ಜತಂತ್ರಿಗೊ – ನಾರಾಯಣ ತಂತ್ರಿಗೊ ಹೇದು; ಶಂಬಜ್ಜನ ಕಾಲದೋರು.
ದಿನಕ್ಕೆ ಮೂರು-ಮೂರು ಒಟ್ಟು ಆರು ಘಂಟೆ ನಿತ್ಯಾನುಷ್ಠಾನ ಇಕ್ಕು. ಉಪ್ಪರಿಗೆಲಿ ಅಜ್ಜಂಗೆ ಒಂದು ಕೋಣೆ ಇದ್ದತ್ತಾಡ. ಜೆಪ ಆದ ಮತ್ತೆ ವಿಶ್ರಾಂತಿ, ಅಧ್ಯಯನ, ಅಧ್ಯಾಪನ ಮಾಡ್ಳೆ. ಕೋಣೆಯ ಹೆರ ಬಾಗಿಲಿಲಿ, ಉಪ್ಪರಿಗೆ ಮೆಟ್ಳಿನ ಬುಡಲ್ಲಿ ಕಾದುನಿಂಗು ಮನೆಯೋರು – ಅವರತ್ರೆ ಒಂದು ಗಳಿಗೆ ಮಾತಾಡ್ಳೆ. ಅಲ್ಲದ್ದರೆ ಅಂತೇ ಅಂತೇ ಮಾತಾಡ್ಳೆ ಸಿಕ್ಕವು; ಅಷ್ಟೂ ಗಂಭೀರ.

ನೂರಾರು ಒಕ್ಕಲಿನೋರು ವಿಷುವಿನ ದಿನ ಬಂದು ಬಾಳೆಗೊನೆ ಮಡಗಿ ಕಾಲು ಹಿಡಿತ್ತ ಚೆಂದವೂ, ಅವಕ್ಕೆಲ್ಲ ಒಂದೊಂದು ಕೈನೀಡಿ  ಕೈನೀಟ್ಟಂ ನ ಕೊಡ್ತ ಚೆಂದವೂ – ವರ್ಣುಸಿದಷ್ಟೂ ಸಾಲ ಅವರ ಕಾರ್ಯಸ್ಥ° ಕರ್ತಂಬುವಿಂಗೆ. ಅದಿರಳಿ.
ಪಕ್ಕಾ ಮಡಿವಂತ ತಂತ್ರಿಗೊಕ್ಕೆ ಜೀವನ ಇಡೀ ಶುದ್ಧಾಚಾರಕ್ಕೆ ರಜವೂ ಸಮಸ್ಯೆ ಆಯಿದಿಲ್ಲೆ. ಆ ನಮುನೆಯ ಸುಂದರ ಜೀವನ.
ಅವರ ಕಾಲಲ್ಲಿ ತಂತ್ರಿಗಳ ಮನೆ ಹೇದರೆ ದೇವಲೋಕವೇ ಆಗಿದ್ದತ್ತು.

~

ಮುಂದೆ ನಾರಾಯಣತಂತ್ರಿಗಳ ಹೆರೀಮಗ ಸುಬ್ರಾಯ ತಂತ್ರಿಗೊ ಎಜಮಾನ ಆದವು.
ಊರ ದೇವಸ್ಥಾನಂಗಳಲ್ಲಿ ತಂತ್ರತೂಗಲೆ ಸುಬ್ರಾಯಜ್ಜನ ತಮ್ಮಂದ್ರು – ಕನ್ನೆಪ್ಪಾಡಿಲಿಪ್ಪೋರು ಹೋಪಲೆ ಸುರುಮಾಡಿದವು.

ಸುಬ್ರಾಯಜ್ಜ ತಂತ್ರಿಗೊ ಜಾಗೆ ಒಳಿಶಲೆ, ಗೆಯ್ಮೆ ಮಾಡ್ಳೆ ತೋಟದ ಮಟ್ಟಿಂಗೇ ನಿಂದವು. ಆದರೂ, ಮನೆಯೊಳ ಅವರ ಶುದ್ಧಾಚಾರ ಕಡಮ್ಮೆ ಆಯಿದಿಲ್ಲೆ.

ಸುಬ್ರಾಯಜ್ಜನ ಕಾಲಲ್ಲೇ ಅದಾ – ಗೇಣಿ ಜಾಗೆಗೊ ಹೋದ್ದು, ಒಕ್ಕಲು ಮಸೂದೆ ಬಂದದು.
ಅಷ್ಟಪ್ಪಗ ಗೇಣಿ ಬಪ್ಪದು ನಿಂದರೂ, ಅವರದ್ದೇ ಅಧಿಪತ್ಯದ ಭೂಮಿಗೊಕ್ಕೆ ಏನೂ ಕಡಮ್ಮೆ ಆಯಿದಿಲ್ಲೆ. ಹಾಂಗಾಗಿ, ಪತ್ತಾಯಂಗೊ ತುಂಬಿಂಡೇ ಇದ್ದತ್ತು.

ಕೋರ್ಟು-ಕಛೇರಿ-ನಂಬ್ರ ಹೇದು ಪೇಟೆ ತಿರ್ಗಾಟವೂ ಸುರು ಆತು. ದಿನವೂ ಹೇರಂಗಿ, ನಂಬ್ರ. ಸಾವಿರಗಟ್ಳೆ ಎಕ್ರೆಯ ಜಾಗೆ ನೂರುಗಟ್ಳೆಗೆ ಬಂದು ನಿಂದತ್ತು. ಇಂದು ಅಷ್ಟಾರೂ ಜಾಗೆ ಅಲ್ಲಿದ್ದು ಹೇದರೆ ಅದಕ್ಕೆ ಸುಬ್ರಾಯಜ್ಜ ತಂತ್ರಿಗಳ ಪರಿಶ್ರಮವೇ ಕಾರಣ ಹೇಳ್ತದು ಸ್ಪಷ್ಟ.

~

ಪೇಟೆ ಸಂಪರ್ಕ ಹಾಂಗಿರಳಿ, ಮನೆ ಒಳ ಬಂದರೆ ಸುಬ್ರಾಯ ತಂತ್ರಿಗೊ ಪಕ್ಕಾ ಮಡಿವಂತರು.
ಪೇಟಗೆ ಹೋಗಿ ಬಂದರೆ, ಮನೆ ಹೊಕ್ಕುವ ಮದಲೇ – ಮನೆ ಮುಂದಾಣ ಕೆರೆಲಿ ಮುಂಗಿ ಮಿಂದಿಕ್ಕಿ – ದಾರಿಮೈಲಿಗೆ ಕಳದು ಒಳಬಕ್ಕು.
ಪೇಟೆಂದ ಬಂದ ಅಂಗಿ ಒಸ್ತ್ರಂಗಳ ಚೆಂಡಿಮಾಡಿ ಹೆರಾಣ ಜೆಗಿಲಿಯ ಹೆರ ಹಾಕುಗು.

ತಂತ್ರಿಗಳ ಮನೆ ಹೇದರೆ ದೇವಸ್ಥಾನವೇ!! ಅಷ್ಟೂ ಶುದ್ಧಾಚಾರ.
ಸುಬ್ರಾಯಜ್ಜ° ಚೆಂದಕೆ ಒಳಿಶಿಗೊಂಡು ಬಂದವು.

~
ಸುಬ್ರಾಯ ತಂತ್ರಿಗಳ ಮಕ್ಕಳ ಕಾಲಕ್ಕಪ್ಪಗ ಕಾಲ ತುಂಬ ಬದಲಿತ್ತು.
ಒಬ್ಬ ಮಗ° ಶಾಲೆಲಿ ಮಾಷ್ಟ್ರ°, ಮತ್ತೊಬ್ಬ° ಗೋರ್ಮೆಂಟು ಉದ್ಯೋಗಿ, ಮತ್ತೊಬ್ಬಂಗೆ ಶೇರು ಒಯಿವಾಟು.
ತಂತ್ರ ತೂಗಲೆ ಆರೂ ಇಲ್ಲೆ. ಕನ್ನೆಪ್ಪಾಡಿ ಕವಲಿಲಿ ಇಬ್ರು ಇದ್ದವು, ಅವು ಮಾಂತ್ರ.

ತಂತ್ರಿಗಳ ಮೂಲಮನೆಲಿ ತಂತ್ರ ತೂಗಲೆ ಆರೂ ಇಲ್ಲೆ.

ಮಾಷ್ಟ್ರಿಂಗೆ ಶಾಲೆ ಬದಲಿತ್ತು, ಗೋರ್ಮೆಂಟು ಉದ್ಯೋಗಿಗೆ ಟ್ರಾನ್ಸುವರು ಆತು, ಶೇರು ಒಯಿವಾಟಿನೋರಿಂಗೆ ಮನೆ ಮರದತ್ತು. ಅಂತೂ ಇಂತೂ – ತಂತ್ರಿಗಳ ಮನೆಲಿ ಕೆಣುದತ್ತು.

ಮುಂದೆಂತಾತು? ಬಪ್ಪವಾರ ಹೇಳ್ತೆ, ಆಗದೋ?

~

ಒಂದೊಪ್ಪ: ಮನೆಯ ಕ್ರಮಂಗೊ ಒಳಿಯೇಕಾರೆ ಮನೆಯೋರೇ ಒಳಿಶೇಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಇನ್ನಿದ ನಿಜವಾದ ಕತೆ ಇಪ್ಪದು-ಕುತೂಹಲಕಾರಿ ಘಟ್ಟಲ್ಲಿ ನಿಂದಿದು.ಬಪ್ಪ ವಾರದ ವರೆಗೆ ಕಾಯೆಕ್ಕು;ಬೇರೆ ಉಪಾಯ ಇಲ್ಲೆ!

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಯಬ್ಬ!!….. ಮತ್ತೋ°?!!

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ
  ವಿಜಯತ್ತೆ

  ಹರೇರಾಮ,ಹಳೆಮನೆ,ಹಳೆನಮೂನೆ,ಹಳೆಆಚಾರ-ವಿಚಾರ,ಹಳೆಸಂಪ್ರದಾಯಂಗೊ, ಹಳೆವಸ್ತುಗೊ,ಇದೆಲ್ಲ ಒಳುಶೆಂಡು ಬರೆಕು. ತುಳುವಿಲ್ಲಿ ಒಂದು ಗಾದೆ ಇದ್ದು. ‘ಪರಕೈ ಬಂಜಿಗೆಡ್ಡೇ ಪೊಸಕೈ ಪೊರ್ಲುಗೆಡ್ಡೆ ‘ ಮುಂದಾಣ ಪೊಸಬ್ಬರಿಂಗೆ ಹಳೆಕಾಲದ ಮಹಿಮೆ ಹೀಂಗೆ ಬರದು ಮಡಗಿದ್ದರ ನೋಡಿಯೇ ಆಯೆಕ್ಕಷ್ಟೆ!

  [Reply]

  VA:F [1.9.22_1171]
  Rating: 0 (from 0 votes)
 4. ಯಮ್.ಕೆ

  ಗಿ೦ಡಿ ಹೊಳವದರ ನೋಡಿದರೆ,
  ಅ೦ತೂ ಎಲ್ಲಾ” ಪಾತ್ರಕ್ಕೂ.”
  ಹುಳಿ ಹಾಕಿ ತಿಕ್ಕಿ ಮಡುಗುವ ಪ್ರಯತ್ನ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ತಂತ್ರಿಗಳ ಕತೆ ನಂತ್ರ ಎಂತ್ರ ಹೇಳುವದು ಈಗ ಪ್ರಶ್ನೆ. ಗೋಪಾಲಣ್ಣ ಹೇಳಿದ ಹಾಂಗೆ ಒಂದು ವಾರ ಕಾಯೆಕಷ್ಟೆ. ಹಳತ್ತರ ಬಿಡ್ಳಾಗ, ಹೊಸತ್ತಕ್ಕೂ ಹೊಂದ್ಯೊಳೆಕು. ಎಲ್ಲವುದೆ ಒಂದು ಹೊಂದಾಣಿಕೆ ಹೇಳುವನೊ ?

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಕತೆ ಹಳತಾದರುದೆ ನಮ್ಮ ನೆಡುಸರೆ ಇದರ ಹೋಲುವ ಅದೆಷ್ಟೋ ಬದುಕುಗೊ ಕಾ೦ಬಲೆ ಧಾರಾಳ ಸಿಕ್ಕುತ್ತು.ಹಳೆಯ ಸ೦ಪ್ರದಾಯವ ಇ೦ದು ಉಳುಶಿಗೊ೦ಬಲೆ ಈಗಣ ತಲೆಮಾರಿನವಕ್ಕೆಡಿತ್ತಿಲ್ಲೆ.ಇ೦ದ್ರಾಣ ಸಮಾಜಲ್ಲಿ ಸುಲಭಲ್ಲಿ ಪ್ರಸಿದ್ಧಿ ಪಡವದು-ಸನ್ಮಾನ ಮಾಡಿಸಿಗೊ೦ಬದು ಹೇ೦ಗೇ ಹೇಳುವ ಆಲೋಚನೆಯೇ ಹೆಚ್ಚಾಗಿ ಇದ್ದ ಹಾ೦ಗೆ ಕಾಣ್ತಾ ಇದ್ದು! ಕಾಲಾಯ ತಸ್ಮೈನಮಃ ಅದಿರಳಿ;ತ೦ತ್ರಿಗಳ ಮನೆಯ ಕತೆ ಮತ್ತೆ೦ತಾತು?ಕುತೂಹಲ ಇನ್ನೊ೦ದು ವಾರದ ವರಗೆ ಕಾಯೆಕ್ಕನ್ನೆಯಪ್ಪಾ!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಹಳೆಮನೆ ಅಣ್ಣಶುದ್ದಿಕ್ಕಾರ°ಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿಶ್ಯಾಮಣ್ಣದೀಪಿಕಾಅಕ್ಷರದಣ್ಣಶರ್ಮಪ್ಪಚ್ಚಿಪಟಿಕಲ್ಲಪ್ಪಚ್ಚಿಸುಭಗಗೋಪಾಲಣ್ಣಗಣೇಶ ಮಾವ°ವಿಜಯತ್ತೆನೆಗೆಗಾರ°ಮುಳಿಯ ಭಾವದೊಡ್ಡಮಾವ°ಒಪ್ಪಕ್ಕಪೆರ್ಲದಣ್ಣಸಂಪಾದಕ°ಮಾಷ್ಟ್ರುಮಾವ°ಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ