Oppanna.com

ತರವಾಡು ಮನೆಲಿ ಎರಡಡಿಗೆ ಅಡ..!!

ಬರದೋರು :   ಒಪ್ಪಣ್ಣ    on   12/08/2011    30 ಒಪ್ಪಂಗೊ

ಆಡಿಆಡಿ ಆಟಿ ಇಡೀ ಕಳಿತ್ತು.
ಹೊಸತ್ತು ಎಂತದೂ ಸುರುಮಾಡದ್ದೆ, ಹಳತ್ತರ  ಒಂದನ್ನೂ ಮರೆಯದ್ದೆ ಇಪ್ಪ ಕಾಲಘಟ್ಟ ಅಲ್ಲದೋ?
ಒರಿಶ ಇಡೀಕ ಹೇಮಾರ್ಸಿ ಮಡಗಿದ್ದರ ಮುಗುಶಿಗೊಂಡು, ಅತ್ತಿತ್ತೆ ಕೊಟ್ಟುಗೊಂಡು, ಬೈಲಿನೊಳಾಣ ಹಳೆ ಶುದ್ದಿಗಳ ಮಾತಾಡಿಗೊಂಡು, ಹೊತ್ತು ಕಳೆತ್ತ ರಜೆಯ ಕಾಲಾವಧಿ ಇದು.
– ರಜೆ ಹೇಳಿರೆ ಎಲ್ಲೋರಿಂಗೂ ರಜೆಯೇ.
ಅಡಕ್ಕೆಗೆ ಮದ್ದು ಬಿಡ್ತ ಸುಂದರಂದ ಹಿಡುದು, ಪೂಜೆಕಾರ್ಯ ಮಾಡುಸುತ್ತ ಬಟ್ಟಮಾವನ ಒರೆಂಗೆ – ಎಲ್ಲೋರಿಂಗೂ!
ಒಂದರಿ ಆಟಿ ಕಳಿಯಲಿ; ಕೂಸು ನೋಡ್ತದು, ಜಾಗೆ ನೋಡ್ತದು, ಮನೆ ನೋಡ್ತದು, ಅದು ಇದು – ಎಲ್ಲವುದೇ ಸುರು ಆವುತ್ತು. ಗುಟ್ಟಿಲೇ ತಿರುಗೆಂಡಿದ್ದ ಹಲವು ಪ್ರಸ್ತಾಪಂಗೊ ಬದ್ಧ, ನಾಂದಿ ಇತ್ಯಾದಿ ಜೆಂಬ್ರಂಗೊಕ್ಕೆ ನಾಂದಿ ಆವುತ್ತು!

ಆಟಿಲಿ ಹೊಸ-ಶುಭ ಜೆಂಬ್ರಂಗೊಕ್ಕೆ ನಿಷೇಧ! ಕಳುದವಾರ ಅಂತೂ – ಅಜ್ಯಕ್ಕಳ ನಿಷೇಧಂಗಳ ಬಗ್ಗೆ ಮಾತಾಡಿದ್ದು.
– ಅಂತೂ ಆಟಿ ರಜೆಲಿ ಇಡೀ ಹಳೆಶುದ್ದಿಯನ್ನೇ ಮಾತಾಡಿದ್ದು!
ಹೇಳಿದಾಂಗೆ, ಬೇರೆಶುದ್ದಿ ಮಾತಾಡ್ಳೇ ಆಗ ಹೇಳಿ ಏನಿಲ್ಲೆ ಇದಾ!
~

ಸುರುಸುರುವಿಂಗೆ ಮನೆ ಒಳದಿಕೆ, ಅಟ್ಟ, ಹೊಗೆ ಅಟ್ಟಲ್ಲಿ ತಿರುಗೆಂಡಿದ್ದ ರಂಗಮಾವಂಗೆ ಕ್ರಮೇಣ ಅದಕ್ಕೂ ಹಂದಲೆಡಿಯದ್ದ ನಮುನೆ ಆತು.
ಮೊಳಪ್ಪಿನ ಎಲುಗುದೇ, ಮಾಂಸವುದೇ ಕೂಡ್ತಲ್ಲಿ ಎಂತದೋ ಡೇಮೇಜು ಆಯಿದು, ಒಂದು ಓಪ್ರೇಶನು ಮಾಡಿರೆ ಎಲ್ಲ ಸರಿ ಅಕ್ಕು – ಹೇಳಿ ಕೊಡೆಯಾಲದ ಡಾಗುಟ್ರು ಹೇಳಿದ್ದವಡ ರಂಗಮಾವನ ಕೈಲಿ.
ಮೊಳಪ್ಪುಸಂದಿಲಿ ವಾತ ಸುರು ಆದ್ದು; ಮೂರೊತ್ತು ಲೇಪ ಹಾಕಿ ನಿತ್ಯವೂ ಶೇಕ ಕೊಟ್ರೆ ಸರಿ ಅಕ್ಕು – ಹೇಳಿ ಉದ್ದುತ್ತ ಮಾಲಿಂಗಮಾವ° ಹೇಳಿದ್ದವು. ಒಟ್ಟು, ಯೇವದರ ನಂಬುತ್ತದು, ಯೇವದರ ಬಿಡ್ತದು ಹೇಳಿ ರಂಗಮಾವಂಗೆ ತಲೆಬೆಶಿ!!
ಶಾಂಬಾವಂಗೆ ಕೊಡೆಯಾಲದ ಡಾಗುಟ್ರ ಮೇಲೆ ನಂಬಿಕೆ ಜಾಸ್ತಿ, ಆದರೆ ರಂಗಮಾವಂಗೆ ಮಾಲಿಂಗೆಬಾವನ ಮಾತೇ ಹೆಚ್ಚು ಹಿತ!
ಅಂತೂ, ಸುರುವಿಂಗೆ ಲೇಪ ಉದ್ದುಸಿ ನೋಡ್ತದು. ಎರಡು ವಾರಲ್ಲಿ ಬೇನೆಇಳಿಯದ್ದರೆ ಮತ್ತೆ ಓಪ್ರೇಶನು ಮಾಡ್ತದು – ಹೇಳಿ ಪಾತಿಅತ್ತೆಯ ಕೈಲಿ ಮೊನ್ನೆ ಹೇಳಿದವಡ.
ಪಾತಿಅತ್ತೆಗೆ – “ಅಕ್ಕು” ಹೇಳ್ತದು ಮಾಂತ್ರ ಅರಡಿಗಷ್ಟೆ! ಶಾಂಬಾವನ ಕೈಲಿ ಪಾತಿ ಅತ್ತೆ ಹೇಳಿ ಇದಕ್ಕೆ ಒಪ್ಪುಸಿತ್ತು.
~

ರಂಗಮಾವಂಗೆ ಏವತ್ತು ಮೊಳಪ್ಪುಬೇನೆ ಜೋರಾತೋ, ಆ ದಿನಂದ ಪಾತಿಅತ್ತೆಗೂ ಮೊಳಪ್ಪು ಕಟ್ಟಿಹಾಕಿದ ನಮುನೆ ಆಯಿದು.
ಸೊಂಟಬೇನೆ ಇದ್ದರೂ ಲವಲವಿಕೆಲಿ ಮನೆ-ತೋಟ-ಜಾಗೆ ಇಡೀಕ ತಿರುಗೆಂಡಿದ್ದಿದ್ದ ಪಾತಿಅತ್ತೆ ಈಗ ಹೆಚ್ಚಾಗಿ ರಂಗಮಾವನ ಹತ್ತರೆಯೇ ಇಪ್ಪದು.
ಹಾಂಗೆ ಹೇಳಿ, ಹೆರ ಹೋವುತ್ತವೇ ಇಲ್ಲೆ ಹೇಳಿ ಏನಿಲ್ಲೆ.
ಜಾಲ ಹತ್ತರಾಣ ನೆಟ್ಟಿತರಕಾರಿ ಸೆಸಿ ನೋಡಿಗೊಳ್ತವೇ ವಿನಃ, ಅದರಿಂದ ಹೆರಾಣ ಒಯಿವಾಟಿಲಿ ಪಾತಿಅತ್ತೆ ಇಲ್ಲೆ!

ಹಾಂಗೆ, ಈಗ ಮಾಲಿಂಗಮಾವ° ಕೊಟ್ಟ ಲೇಪದ ಹೊಡಿಯ, ಮದ್ದಿನ ಕೊರಡಿನ, ಮೊಟ್ಟೆಲಿ ಅರದು ಕಾಲಿಂಗೆ ಉದ್ದುತ್ತದು; ನೀಡಿಮಡಗಿದ ಕಾಲಿನ ಮಡುಸದ್ದ ಹಾಂಗೆ, ಉದ್ದಿದ ಮದ್ದು ಹಾಳಾಗದ್ದ ಹಾಂಗೆ – ಕಾದು ಕೂರ್ತದು ಪಾತಿಅತ್ತೆಯ ನಿತ್ಯಕೆಲಸದ ಬುಹುಮುಖ್ಯ ಸಮಯ ಹಿಡಿತ್ತ ಕಾರ್ಯ.
ಮದಲಾದರೆ ಉದಿಯಾಂದ ಇರುಳೊರೆಗೆ ನಾಕು ಸರ್ತಿ ತೋಟಕ್ಕೆಹೋಗಿ ಬಕ್ಕು ಪಾತಿ ಅತ್ತೆ, ಈಗ ಒಂದೇ ಸರ್ತಿ ಹೋಪಲಾವುತ್ತಟ್ಟೆ!
ಆಟಿಯ ಮಳೆ – ಹೇಳ್ತ ಕಾರಣವೂ ಅಲ್ಲದ್ದೆ ಅಲ್ಲ ಇದಾ!
ಎಲ್ಲವುದೇ ಎರಡು ವಾರ ಅಷ್ಟೇ, ಕಮ್ಮಿ ಆವುತ್ತರೆ ಅಷ್ಟ್ರಲ್ಲಿ ಗೊಂತಾವುತ್ತು – ಹೇಳಿದ್ದವಾಡ ಮಾಲಿಂಗಮಾವ°.

ಈ ಸರ್ತಿ ಬೆಳಿಕ್ಕಿರಿಯೇ ಇಲ್ಲದ್ದೆ ಸೊಯ್ಪಿದ ಮಳೆ ನೋಡಿರೆ ಎಂತವಂಗೂ ಮನೆ ಹೆರಡ್ಳೆ ಮನಸ್ಸು ಬಾರ, ಅದು ಬೇರೆ!!
ಆದರೆ, ಜಾಲಕರೆಲಿಯೇ ಹಟ್ಟಿಯೊಳದಿಕ್ಕೆ ಇರ್ತ ಅಬ್ಬೆಕ್ಕಳ ಮಾತಾಡುಸದ್ರೆ ಪಾತಿಅತ್ತೆಗೆ ಸಮದಾನ ಅಕ್ಕೋ –
ಹೊತ್ತೊತ್ತಿಂಗೆ ಹೋಗಿ ಬೆಳುಲೋ, ಹುಲ್ಲೋ, ಎಂತಾರು ಹಾಕಿ ವಿಚಾರುಸಿಗೊಂಡು ಬತ್ತದು ಕೊಶಿಯ ಕೆಲಸ.
ಸದ್ಯ ಹುಲ್ಲುಮಾಡ್ಳೆ ಸುಂದರಿ ಬತ್ತು – ಹಾಂಗಾಗಿ ಅದೊಂದು ತಲೆಬೆಶಿ ಇಲ್ಲೆ!
~
ರಂಗಮಾವಂಗೆ ಕೆಲಸಮಾಡದ್ದೆ ಕೂದು ಅರಡಿಯ.
ಒಂದು ದಿನ ತೋಟಕ್ಕೆ ಹೋಗದ್ದರೆ ಎಲ್ಲಿಯೋ ಪೇಟಗೆ ಹೋಗಿ ಕೂದ ನಮುನೆ ಆವುತ್ತಾಡ.
ಈಗ ವಾರಗಟ್ಳೆ ಒಳವೇ ಇದ್ದೊಂಡು ಹಟ್ಟಿಲೇ ಕಟ್ಟಿದ ದನಗಳ ಹಾಂಗಾಯಿದು, ಪಾಪ!
ಈ ಮದ್ದಿನಲೇಪ ಒಂದು ಮುಗುದಿಕ್ಕಿರೆ ಮತ್ತೆ ಪಾತಿ ಪರಂಚಿರೂ ಸಾರ ಇಲ್ಲೆ, ತೋಟಕ್ಕೆ ಹೋಪಲಕ್ಕು ಹೇಳಿ ಗ್ರೇಶಿಗೊಂಡಿದ್ದವು ರಂಗಮಾವ°.  ಅಪ್ಪು, ಲೇಪ ಇಪ್ಪಾಗ ಮೆಟ್ಳು ಹತ್ತಲೆ ಆಗದ್ದ ಕಾರಣ ಅಟ್ಟ ಹತ್ತಿ ಅರಟುಲೂ ಎಡಿಯದ್ದ ಪರಿಸ್ಥಿತಿ ಇದಾ!
ಹೆರಾಣ ಜೆಗೆಲಿಲಿಪ್ಪ ಮಂಚಲ್ಲೇ ಅಜ್ಜ° ಮನುಗಿಪ್ಪದರ ಕಂಡ್ರೆ ಪುಳ್ಳಿಮಾಣಿ ವಿನುವಿಂಗೆ ಸಲೀಸು ಅಪ್ಪದು.
‘ಬೇನೆ ಹೇಂಗಿದ್ದಜ್ಜಾ°..?’ ಹೇಳಿ ದಿನಕ್ಕೆ ಹನ್ನೆರಡು ಸರ್ತಿ ಕೇಳ್ತನಾಡ ಅಜ್ಜನ ಕೈಲಿ.
ಶಾಲೆಬಿಟ್ಟು ಬಂದಕೂಡ್ಳೇ ಅಜ್ಜನೊಟ್ಟಿಂಗೆ – ಒಂದೇ ಹೊದಕ್ಕೆಲಿ ಚುರುಂಟಿ ಮನುಗುತ್ತ ಒಂದೊಂದರಿ.
ಜಡಿಮಳೆಗೆ ಬೆಶ್ಚಂಗೆ ಅಜ್ಜನ ಒಟ್ಟಿಂಗೆ ಮನುಗುದು ಹೇಳಿರೆ ಎಂತಾ ಕೊಶಿ!
– ಪಕ್ಕನೆ ಕೆಲವು ದಿನ ವಿನು ಬಾರದ್ದರೆ ರಂಗಮಾವನೇ ದಿನಿಗೆಳುಲಿದ್ದು.
ದಿನ ಇಡೀ ಮನುಗಿದ ಅಜ್ಜಂಗೂ ಉರು ಅಪ್ಪದಕ್ಕೆ ಲಾಯಿಕಾವುತ್ತು, ಬಾಯಿಗೆ ಕೋಲು ಹಾಕಿ ಪುಳ್ಳಿಯ ಎಳಗುಸಲೆ.
– ಶಾಂಬಾಂವಂದೇ ಶಂಬಜ್ಜನ ಒಟ್ಟಿಂಗೆ ಹೀಂಗೇ ಮನಿಕ್ಕೊಂಡಿತ್ತಿದ್ದನಾಡ!

ವಿನು ಶಾಲೆಂದ ಬಂದಕೂಡ್ಳೇ ಮಾವನ ಮಂಚಲ್ಲಿ ಮನುಗಿ ಒರಗುತ್ತ°.
ಸಮಗಟ್ಟು ಓದಲೆ ಸಮಯ ಕೊಡ್ತನಿಲ್ಲೆ – ಹೇಳ್ತದು ವಿದ್ಯಕ್ಕನ ಬೇಜಾರು.
ಇದರ ನೇರವಾಗಿ ಹೇಳುಲೆ ಎಡಿಯದ್ರೂ, ಶಾಂಬಾವನ ಕೈಲಿ ಪಿರಿಪಿರಿ ಮಾಡ್ತಡ.
ಅಜ್ಜನ ಒಟ್ಟಿಂಗೆ ಪುಳ್ಳಿ ಇದ್ದರೆ, ಶಾಲೆಪುಸ್ತಕ ಓದುದರಿಂದಲೂ ಹೆಚ್ಚಿಂದರ ಕಲ್ತುಗೊಳ್ತ ಹೇಳಿ ವಿದ್ಯಕ್ಕಂಗೆ ಎಂತ ಗೊಂತು, ಅಲ್ಲದೋ?
~
ರಂಗಮಾವನ ಒಬ್ಬನೇ ಮಗ ಶಾಂಬಾವಂಗೆ ಈಗ ಜೆವಾಬ್ದಾರಿ ರಜ್ಜ ಜಾಸ್ತಿ ಬಯಿಂದೋ ತೋರ್ತು.
ಕೆಮ್ಕಕ್ಕೆ ಈ ಸರ್ತಿ ಅಡಕ್ಕೆ ಅವನೇ ಹಾಕಿದ್ದಾಡ.
ಒಂದು ಜೀಪಿಲಿ ಅಡಕ್ಕೆ ತುಂಬುಸಿಗೊಂಡು, ಇನ್ನೊಂದು ಜೀಪಿಲಿ ಮನೆಸಾಮಾನು ತಂದು, ಒಳುದ ಪೈಶೆಯ ಒಂದು ಪರ್ಸಿಲಿ ತುಂಬುಸೆಂಡು ಬಂದು ಸೊಸಯಿಟಿಗೆ ಹಾಕಿದ್ದನಾಡ.
ಕಳುದೊರಿಶ ಒರೆಂಗೂ ಮನೆಯ ಅಡಕ್ಕೆ ಒಯಿವಾಟಿಂಗೆ ಮಗ° ಬಂದುಗೊಂಡಿತ್ತಿದ್ದನಿಲ್ಲೆ; ಅವಂಗೆ ಅವನದ್ದೇ ಆದ ಅಂಗುಡಿ ಇದ್ದನ್ನೇ, ಕಾಸ್ರೋಡಿಲಿ.
ಅದರ ನೋಡಿಗೊಂಡಪ್ಪಗ ಸಾರೋಸಾರ ಆವುತ್ತು.
~
ಮನಗೆ ಬಂದರೆ ವಿದ್ಯಕ್ಕಂದು ಸುರು ಆವುತ್ತು.
ಮೊನ್ನೆ ಅಡಕ್ಕೆ ಕೊಡ್ತ ಮುನ್ನಾಣದಿನವೇ ಟೀವಿ ಬದಲುಸುವೊ° – ಹೇಳಿ ಪಿರಿ ಕಾಸಿತ್ತಾಡ.
ಹೊಸ ಮಂಚ ತರೇಕು ಹೇಳ್ತ ಆಶೆಲಿದ್ದಿದ್ದ ಶಾಂಬಾವಂಗೆ ಪಿಸುರೇ ಬಂದು ಬಿಟ್ಟತ್ತು!
ಪಿಸುರಿಲಿ ಬೈದ್ದದು ಜೋರಾಗಿ ಸ್ವರ ಹೆರ ಕೇಳಿದ ಕಾರಣ ಆ ಸಂಗತಿ ಹೆರಿಯೋರಿಂಗೂ ಗೊಂತಪ್ಪ ಹಾಂಗಾತು.
ಆರಾರಿಂಗೆ ಯೇವದರ್ಲಿ ಆಸಗ್ತಿಯೋ, ಅದೇ ಬೇಕು ಹೇಳಿ ಕಾಣ್ತು – ಹೇಳಿಗೊಂಡವು ರಂಗಮಾವ°.
ದೇವರೊಳ ಪೀಠ ಹಳತ್ತಾಯಿದು, ಹೊಸತ್ತು ಈ ಮಳೆಗಾಲವೇ ಮಾಡುಸಿಕೊಡೇಕು – ಹೇಳಿ ರಂಗಮಾವ° ಅಂದೇ ಆಚಾರಿಯ ಕೈಲಿ ನೆಂಪುಹೇಳಿಕ್ಕಿ ಬಂದಿತ್ತವು. ಅಟ್ಟಲ್ಲಿ ಮೊನ್ನೆ ಗುರುಟುವಗ ಹಲಸಿನ ಹಲಗೆಗಳ ನೋಡಿ ಮಡಗಿತ್ತಿದ್ದವು.
~
ಹೋ, ತರವಾಡುಮನೆ ಶುದ್ದಿ ಮಾತಾಡ್ತರೆ ಎಷ್ಟೂ ಇದ್ದು; ಹತ್ತರಾಣ ಮನೆಗಳ ಒಳ-ಹೆರ ಗೊಂತಪ್ಪದು ಜಾಸ್ತಿ ಇದಾ!
ಅದಿರಳಿ. ವಿಶಯ ವಿಶೇಷ ಎಂತ್ಸರ ಹೇಳಿತ್ತುಕಂಡ್ರೆ, ತರವಾಡುಮನೆಲಿ ಈಗ – ಮದಲಾಣ ಹಾಂಗೆ ಒಂದೇ ಅಡಿಗೆ, ಒಂದೇ ಪಾಕ ಅಲ್ಲ ಅಡ!
ರಜ ಸಮೆಯಂದ ಎರಡಡಿಗೆ ಅಡ.
ಅದು.. ಅದು – ಕೋಪಲ್ಲಿ ಹಾಂಗೆ ಆದ್ದದಲ್ಲ – ಬದಲಾಗಿ ಈಗಾಣ ಕಾಲವೆವಸ್ಥೆಲಿ ಆತಷ್ಟೆ!
ನಿತ್ಯಕ್ಕೂ ಎರಡಡಿಗೆ ಹೇಳಿ ಏನಿಲ್ಲೆ, ಕೆಲವು ಸರ್ತಿ ಒಂದರ್ಲೇ ನಿವುರ್ತಿ ಆವುತ್ತು. ಆದರೆ ಕೆಲವು ಸರ್ತಿ ಎರಡಡಿಗೆ ಮಾಡ್ಳೇ ಬೇಕಾವುತ್ತು.
ಅದೆಂತಕಪ್ಪಾ? – ಅಲ್ಲೇ ಇಪ್ಪದು ಇಂದ್ರಾಣ ಶುದ್ದಿ!
~
ವಿನುವಿನ ದೊಡ್ಡಮ್ಮಂದ್ರು ಅಮೇರಿಕ-ಬೆಂಗ್ಳೂರು ಆಗಿಂಡು ಇಪ್ಪದು; ಅದು ಗೊಂತಿಪ್ಪದೇ. ಅಲ್ಲದೋ?
ಅವರ ಮಕ್ಕೊ ಭಯಾನಕವಾಗಿ ಪೇಟೆಶೈಲಿಲೇ ಬೆಳಕ್ಕೊಂಡಿದ್ದವು. ವಿನುವನ್ನುದೇ ಅದೇ ನಮುನೆಲಿ ಬೆಳೆಶೇಕು – ಹೇಳ್ತದು ವಿದ್ಯಕ್ಕನ ಚಿಂತನೆ!
ಮುಂದಕ್ಕೆ ಇಂಗ್ಳೀಶೇ ಬಾರದ್ದ ಹಳ್ಳಿಮಾಣಿ ಆಗಿಕ್ಕುದು ಬೇಡ ಹೇಳ್ತ ಉದ್ದೇಶವೂ ಅಪ್ಪು.
ಟೀವಿಲಿ ಇಂಗ್ಳೀಶು ಮಾತಾಡ್ತ ಷ್ಟೇಶನುಗಳನ್ನೇ ಮಡಗುತ್ತದು, ಕಂಪ್ಯೂಟರಿಲಿ ಹೆಚ್ಚು ಹೊತ್ತು ಕೂಪಲೆ ಬಿಡ್ತದು, ವೇಷ-ಭೂಷಣಂಗಳ ಪೇಟೆನಮುನೆಗೇ ಹೆಚ್ಚು ಹೊಂದುಸಿಗೊಂಬದು – ಇತ್ಯಾದಿ ವಿಧವಿವಿಧ ಅಂಗಂಗೊ!
ಈಗ ಅದರೊಟ್ಟಿಂಗೆ ಹೊಸತ್ತೊಂದು ಸುರು ಆಯಿದು.
ಅದೇ ಆಹಾರ ವಿತ್ಯಾಸ.
~

ಕೊಟ್ಟಿಗೆ.. ಬೇಶಿ ತಿಂಬಲೆ ಮಾತ್ರ ಬಾಕಿ

ಪಾತಿಅತ್ತೆಯ ಅಡಿಗೆ ಭಾರೀ ಲಾಯಿಕ! ಒಪ್ಪಣ್ಣ ಅಲ್ಲಿಗೆ ಹೋದಿಪ್ಪಾಗ ರುಚಿ ನೋಡಿದ್ದುದೇ ಇದ್ದಿದಾ.
ಹಸಿ ತರಕಾರಿ, ತೋಟಲ್ಲಿ ಸಿಕ್ಕಿದ ಕೊಡಿಗೊ, ಅಟ್ಟಲ್ಲಿ ಸಿಕ್ಕಿದ ಹೇಮಾರ್ಸಿದ ವಸ್ತುಗೊ, ಎಂತ ಇದ್ದೋ – ಅದರದ್ದೇ ರುಚೀ ಅಡಿಗೆ ಮಾಡಿ ಹೊಟ್ಟೆ ತುಂಬ ಬಳುಸುಗು.
ಉಂಡೆ – ರವೆ, ಪತ್ರೋಡೆ – ತೆಂಗಿನೆಣ್ಣೆ, ಕೊಟ್ಟಿಗೆ – ಶುಂಟಿಚಟ್ಣಿ, ಎಲ್ಲ ಹಳೆ ಪಾಕಂಗಳ ಒಂದಕ್ಕೊಂದು ಅನುರೂಪವಾಗಿ ಮಾಡಿ ಬಳುಸುಗು.
ಎಂಗಳಲ್ಲಿ ದಮಯಂತಿಯೇ ಅಡಿಗೆಮಾಡ್ತು – ಹೇಳಿ ರಂಗಮಾವ° ಒಂದೊಂದರಿ ನೆಗೆಮಾಡ್ಳಿದ್ದು ಪಾತಿಅತ್ತೆಯ!
ಎಂತರ ನಿಂಗಳದ್ದು ಯೇವತ್ತೂ – ಹೇಳಿ ಪಾತಿಅತ್ತೆ ಪರಂಚಿರೆ ನಳಂಗೆ ಕೇಳೆಕ್ಕೆ!
ಮಣ್ಣಳಗೆಲಿ ಪಾತಿಅತ್ತೆ ಮಾಡಿದ ಉಂಡೆಮೇಲಾರವ ಉಂಡರೆ ಹೊಟ್ಟೆಯೂ ಉಂಡೆ ಅಪ್ಪನ್ನಾರ ನಿಲ್ಲುಸಲೆ ಮನಸ್ಸಿರ ಚೆನ್ನೈಭಾವಂಗೆ!
~
ಸೊಸೆ ವಿದ್ಯಕ್ಕಂಗೆ ಈ ಹಳೆ ಆಹಾರಂಗಳ ಬಗ್ಗೆ ರಜ್ಜ ಸಸಾರ ಜಾಸ್ತಿ.
ಕಾನಕಲ್ಲಟೆ ಮೇಲಾರ, ಮುಂಡಿ ತಾಳು, ಹಲಸಿನಣ್ಣು ಕೊಟ್ಟಿಗೆ, ಕಣಿಲೆ ಬೆಂದಿ – ಇದರೆಲ್ಲ ಮಾಡುವಗ ಇಪ್ಪ ಬಂಙಂಗೊಕ್ಕೆ ಹೋಲುಸುವಗ ರುಚಿ ಸಾಲ – ಹೇಳಿಯೇ ಕಾಂಬದು.
ಆದರೆ, ಸುಲಾಬಲ್ಲಿ ಮಾಡ್ತ ನಮುನೆ ಕೆಲವು ಪೆಕೆಟುಗೊ ಸಿಕ್ಕುತ್ತು ಪೇಟೆಲಿ – ಮಸಾಲೆಗಳದ್ದು.
ಒಂದು ಒಗ್ಗರಣೆ ಬಲುಗಿ, ಬೆಣ್ತಕ್ಕಿ ಅಶನ ಬಿಕ್ಕಿ, ಈ ಮಸಾಲೆಗಳ ಹಾಕಿ ಎರಡು ನಿಮಿಶ ಕಾಸಿರೆ ಸಮ – ಬಗೆಬಗೆಯ ಅಶನಂಗೊ ತೆಯಾರು.
ಬದನೆ ಬಾತು, ನಿಂಬೆ ರೈಸು, ಟೊಮೆಟೊ ಬಾತು, ರೈಸುತ್ತ ಬಾತು, ಆಚ ಬಾತು, ಈಚ ಬಾತು – ಎಲ್ಲವನ್ನುದೇ ವಿದ್ಯಕ್ಕ° ಮಾಡಿನೋಡುಗು. ಪೆಕೆಟಿಲೇ ಬರದಿಪ್ಪ ನಮುನೆ ಮಾಡಿರಾತು, ಎಷ್ಟಾರೂ ಅಶನ ಒಗ್ಗರಣೆ ಅಲ್ಲದೋ, ರುಚಿ ಆಗದ್ದೆ ಇರ್ತೋ?!
ತಾನೂ ತಿಂಬದಲ್ಲದ್ದೆ, ವಿನುವಿಂಗೂ ಇದನ್ನೇ ಅಭ್ಯಾಸ ಮಾಡುಸುತ್ತಾ ಇದ್ದಾಡ ಈ ವಿದ್ಯಕ್ಕ°.
ಹೊಸ ನಮುನೆ ತಿಂಡಿಗಳ ತಿಂದು ಗೊಂತಿಲ್ಲೆ ಹೇಳಿ ಅಪ್ಪದು ಬೇಡ ಹೇಳಿಗೊಂಡು ಈ ವೆವಸ್ತೆ!
ಮತ್ತೆ ಅಮೇರಿಕಂದಲೊ ಮತ್ತೊ ಫೋನು ಬಂದರೆ ಅವು ‘ಕಾಪಿಗೆಂತರ’ ಕೇಳಿಯಪ್ಪಗ ತೆಳ್ಳವು, ಉಂಡೆ, ಕೊಟ್ಟಿಗೆ ಹೇಳಿ ಎಲ್ಲ ಹೇಳುಲಾವುತ್ತೋ?
ಆ ರೈಸು ಈ ರೈಸು ಹೇಳಿದರೇ ರಯಿಸುದನ್ನೇ!

~
ರಂಗಮಾವನ ಮೊಳಪ್ಪುಬೇನೆಂದ ಮತ್ತೆ ಪಾತಿಅತ್ತೆಗೆ ಜಾಸ್ತಿ ಕೆಲಸ ಮಾಡ್ಳೆ ಪುರುಸೊತ್ತಾವುತ್ತಿಲ್ಲೆ –ಹೇಳಿತ್ತಿದ್ದೆ ಆಗ, ಅಲ್ಲದೋ?
ಅಡಿಗೆ ಕೋಣೆಗೂ ಹೋಪಲೆ ಅಷ್ಟು ಅವಕಾಶ ಆವುತ್ತಿಲ್ಲೆ ಹೇಳ್ತ ಪರಿಸ್ಥಿತಿ!
ಆದರೂ, ಈಗ ಒಂದು ಸಮಸ್ಯೆ ಆಯಿದು ಭಾವ!
ಅದೆಂತರ?

ವಿದ್ಯಕ್ಕನ ಮದುವೆ ಆದ ಲಾಗಾಯ್ತು, ಮೊನ್ನೆಮೊನ್ನೆ ಒರೆಂಗೂ ಪಾತಿಅತ್ತೆಯೇ ಅಡಿಗೆ ಒಳ ಇದ್ದದು.
ವಿದ್ಯಕ್ಕ° ಅದರ ಕೋಣೆಯೊಳದಿಕ್ಕೇ ಇದ್ದದು ಜಾಸ್ತಿ. 😉
ಈಗ ಪಾತಿಅತ್ತೆಗೆ ಪುರುಸೊತ್ತಿಲ್ಲೆ, ಅನಿವಾರ್ಯ!
ಹೊಟ್ಟೆ ಹಶುವಿಂಗೆ ಬೇಶೇಕಾದ್ದು ಅನಿವಾರ್ಯ ಆತು ವಿದ್ಯಕ್ಕಂಗೆ.

ಅನಿವಾರ್ಯತೆಲಿ ಬೇಶುದು ಬೇರೆ, ನಿತ್ಯಕ್ಕೆ ಬೇಶುದು ಬೇರೆ!
ಪಾತಿಅತ್ತೆಗೆ ಅಡಿಗೆಮಾಡುದು ಸಿದ್ಧಿ ಆಯಿದು. ಆದರೆ ವಿದ್ಯಕ್ಕಂಗೆ?
ಒಂದರಿ ಅಡಿಗೆ ಮಾಡಿರೆ ಒಂದು ಕೈಗೆ ತಾಗುದೋ, ಒಗ್ಗರಣೆ ಸೌಟು ಮುಟ್ಟುದೋ – ಎಂತಾರು ಅಪ್ಪದಿದ್ದು!
ಅಭ್ಯಾಸ ಇಲ್ಲೆ ಇದಾ..
ಅತ್ತೆಯೊಟ್ಟಿಂಗೆ ಕೆಲಸಕ್ಕೆ ಸೇರಿದರೆ ಅಲ್ಲದೋ – ಅಭ್ಯಾಸ ಅಪ್ಪದು!?
ಪಾತಿಅತ್ತೆ ಕಾಂಬುಅಜ್ಜಿಯ ಒಟ್ಟೀಂಗೆ ಇದ್ದದು, ಆದರೆ ಪಾತಿಅತ್ತೆಗೆ ಸಂಗಾತಕ್ಕೆ ಈ ಸೊಸೆ ಬಯಿಂದಿಲ್ಲೆ ಇದಾ!
ಅನಿವಾರ್ಯತೆಗೆ ಆತು – ಹೇಳಿ ಅಂಬೆರ್ಪಿನ ಅಡಿಗೆಗಳ ಕೆಲವು ಕಲ್ತುಗೊಂಡಿತ್ತು ವಿದ್ಯಕ್ಕ°,
ಈಗ ಅದನ್ನೇ ಮಾಡ್ಳೆ ಪ್ರಯೋಗ ಸುರು ಮಾಡಿದ್ದು.
ಅಂತೂ, ಯೇವತ್ತು ಅಡಿಗೆಕೋಣೆ ಉಸ್ತುವಾರಿಯ ವಿದ್ಯಕ್ಕಂಗೇ ಬಿಟ್ಟತ್ತೋ – ವಿದ್ಯಕ್ಕನ ಎಲ್ಲ ಅಡಿಗೆಯೂ ಈ ಹೊಸ ನಮುನೆದೇ ಅಪ್ಪಲೆ ಸುರು ಆತು.
ಹಳತ್ತರ ಮಾಡ್ಳೆ ವಿದ್ಯಕ್ಕಂಗೆ ಅರಡಿತ್ತಿಲ್ಲೆ, ಹೊಸತ್ತರ ಮಾಡಿರೆ ಹಳಬ್ಬರಿಂಗೆ ಮೆಚ್ಚುತ್ತಿಲ್ಲೆ!
~
ಶಾಂಬಾವಂಗೆ ಮದಲೇ ಅಕ್ಕು ಈ ಹೊಸ ಅಡಿಗೆಗೊ..

ವಾಂಗಿ(ತಿ) ಬಾತು

ವಿನುವಿಂಗೆ ಪಾತಿಅತ್ತೆ ಮಾಡಿದ ಹಳೆ ಅಡಿಗೆಗಳೂ ಆವುತ್ತು, ವಿದ್ಯಕ್ಕ° ಮಾಡುವ ಹೊಸ ಅಡಿಗೆಗಳೂ ಆವುತ್ತು..
ಬುತ್ತಿಲಿ ತುಂಬುಸಿಕೊಟ್ರೆ ಆತು, ಹೊತ್ತಪ್ಪಗ ಬಪ್ಪಗ ಬುತ್ತಿ ಕಾಲಿ ಮಾಡಿರ್ತ° ಅಷ್ಟೇ!
ರಂಗಮಾವಂಗಾದರೂ, ಒಂದೊಂದರಿ ಹೋದಲ್ಲಿ ತಿಂದು ಗೊಂತಿದ್ದು – ಈ ನಮುನೆ ಹೊಸ ತಿಂಡಿಗಳ,
ಆದರೆ, ಪಾತಿ ಅತ್ತೆಗೆ ಅದರ ವಾಸನೆ ಕೇಳಿರೇ ಆವುತ್ತಿಲ್ಲೆ. ಆ ಮಸಾಲೆಯೋ, ಆ ಒಗ್ಗರಣೆಯ ಘಾಟೋ, ಆ ಸೂರ್ಯಕಾಂತಿ ಎಣ್ಣೆಯೋ!
ವಾಂಗಿಬಾತಿನ ಅಂತೂ ವಾಂತಿಬಾತು ಹೇಳಿಯೇ ಹೇಳ್ತು ಪಾತಿಅತ್ತೆ! 🙁
ನ್ಯಾಯವಾಗಿ ಹೊರುದು ಕಡದರೆ ಅಲ್ಲದೋ ಕೊದಿಲು ಅಪ್ಪದು? ತೊಟ್ಟೆಲಿಪ್ಪ ಸಾಂಬಾರು ಹೊಡಿಯ ಬಾಗಬೇಶಿದ್ದಕ್ಕೆ ಹಾಕಿರೆ ಪಾತಿ ಅತ್ತೆಗೆ ಮೆಚ್ಚುಗೋ?!
ಅವರ ಆಹಾರ ಪ್ರಕೃತಿಲಿ ಈ ಗಟ್ಟದ ಮೇಗೆ ಮಾಡ್ತ ನಮುನೆಯ ತಿಂಡಿಗಳ ವಿಚಿತ್ರ ಪರಿಮ್ಮಳ ಇಲ್ಲೆ ಇದಾ; ಹಾಂಗಾಗಿ ಅವಕ್ಕೆ ಹೊಂದಿಗೊಂಬಲೆ ಬಂಙ ಅಪ್ಪದು.
– ಹೀಂಗೊಂದು ವಿಚಿತ್ರ ಸನ್ನಿವೇಶ ಆತು ತರವಾಡು ಮನೆಲಿ!
~
ಎಷ್ಟೇ ಸಮಯ ಇಲ್ಲದ್ದರೂ, ಅಂಬೆರ್ಪು ಇದ್ದರೂ ಮೊನ್ನೆಂದಿತ್ತೆ ಪಾತಿಅತ್ತೆ ಪುನಾ ಅಡಿಗೆಕೋಣಗೆ ಹೆರಟವಡ.
ಎಲ್ಲೋರಿಂಗೂ ಬೇಶಿ ಹಾಕಲೆ ಪಾತಿಅತ್ತೆಗೆ ಎಡಿತ್ತಿಲ್ಲೆ, ಆದರೆ ಪಾತಿಅತ್ತೆಗೆ, ರಂಗಮಾವಂಗೆ ದಕ್ಕಿತ ಅಡಿಗೆ ಮಾಡುವಷ್ಟು ಅನಿವಾರ್ಯ.
ದಿನಾಗುಳೂ ಉದಿಯಪ್ಪಗ ಎದ್ದು, ರಜ್ಜ ಅಕ್ಕಿ ಕಡದು ಎಂತಾರು ಮಾಡ್ತದು.
ಉಂಡೆಯೋ, ತೆಳ್ಳವೋ, ಉಪ್ಪಿಟ್ಟೋ, ಹಸರೊಗ್ಗರುಸಿದ್ದೋ – ಹೀಂಗೆಂತಾರು.
ಆಚ ಒಲೆಲಿ ವಿದ್ಯಕ್ಕಂದು ಬಾತುಗೊ ಆವುತ್ತಾ ಇರ್ತು ಇದಾ.
ಇಬ್ರಿಂಗೂ ಅತ್ತಿತ್ತೆ ಕೋಪ ಇಲ್ಲೆ, ಆದರೆ ಅನಿವಾರ್ಯ ಆಯಿದು. ಅಷ್ಟೇ!
~
ಪಾತಿತ್ತೆ ಹೊಸ ಆಹಾರಕ್ಕೆ ಹೊಂದಿಗೊಂಬದರಿಂದ, ವಿದ್ಯಕ್ಕ° ಹಳೆ ಆಹಾರ ತೆಯಾರಿ ಕಲ್ತುಗೊಂಬದು ಒಳ್ಳೆದು ಹೇಳಿ ರಂಗಮಾವನ ಅಭಿಪ್ರಾಯ. ಆದರೆ ಶಾಂಬಾವನ ಕೈಲಿ ಹೇಳಿ ವಿದ್ಯಕ್ಕನ ಒಪ್ಪುಸುದು ಹೇಂಗೆ?!
ಶಾಂಬಾವನೂ ಹೇಳಿ ನೋಡಿದ, ಉಹೂಂ – ಹಳೆಅಡಿಗೆಗಳ ಮಾಡ್ಳೆ ವಿದ್ಯಕ್ಕಂಗೆ ಕೈಯೇ ಬಗ್ಗುತ್ತಿಲ್ಲೆ.
ಆ ಒಗ್ಗರಣೆ, ಮಸಾಲೆ, ಹೊರಿವದು, ಕಡವದು – ಎಲ್ಲವನ್ನುದೇ ಮಾಡಿಗೊಂಡು ಬಪ್ಪಗ ತಟಪಟ ಆವುತ್ತು!
ಒಂದೋ ಹೊರುದ್ದು ಜಾಸ್ತಿ, ಅಲ್ಲದ್ದರೆ ಕಡದ್ದು ಕಮ್ಮಿ – ಎಂತಾರು ಆಗಿ ರುಚಿ ಅನರ್ಥ ಆವುತ್ತು, ಹಾಂಗಾಗಿ ಆನು ಮಾಡ್ತಿಲ್ಲೆ ಹೇಳ್ತದು ವಿದ್ಯಕ್ಕನ ವಾದ.

~
ಮೊನ್ನೆ ಒಪ್ಪಣ್ಣ ಹೋಗಿಪ್ಪಾಗ ಶಾಂಬಾವಂದೇ ವಿದ್ಯಕ್ಕಂದೇ ವಿನುವಿನ ಕರಕ್ಕೊಂಡು ಪೇಟಗೆ ಹೋಗಿತ್ತವು.
ಮನೆಲಿ ಪಾತಿಅತ್ತೆ-ರಂಗಮಾವ° ಮಾಂತ್ರ ಇದ್ದದು.
ಮಂಚಲ್ಲೇ ಕೂದುಗೊಂಡು ರಂಗಮಾವ° ಈ ಸಂಗತಿಗಳ ಬಗ್ಗೆ ರಜ ಹೇಳಿದವು.
ಅಡಿಗೆ ಒಂದೇ ಮಾಡುವ ಹಾಂಗಾಯೇಕು, ವಿದ್ಯನ ಕೈಲಿ ಪಾತಿಅತ್ತೆಗೆ ಮೆಚ್ಚುತ್ತ ಅಡಿಗೆ ಮಾಡುಸುದು, ಅದು ಎಲ್ಲೋರಿಂಗೂ ಅಕ್ಕನ್ನೇ..
ಒಂದೆರಡು ದಿನ ರುಚಿ ಸಮಗಟ್ಟು ಆಗ, ಆದರೆ ಅಭ್ಯಾಸ ಅಪ್ಪಗ ಎಲ್ಲವೂ ಎಡಿತ್ತನ್ನೇ,
ಹುಟ್ಟುವಗಳೇ ಎಲ್ಲೋರುದೇ ಕಲ್ತುಗೊಂಡು ಬಂದಿರ್ತವಿಲ್ಲೆ, ಕಲಿಯಲೀ.. – ಬುದ್ಧಿವಾದ ಹೇಳುಗು ರಂಗಮಾವ°.
~
ಆನು ಎಂತ ಹೇಳಿರೂ ಪಾತಿ ಹೂಂಕುಟ್ಟುಗು. ಆದರೆ ಶಾಮ ಎಂತ ಮಾಡುಗು…?
ಬಾಜಿರಕಂಬಲ್ಲಿರ್ತ ಕೆತ್ತನೆಯ ಪಟ್ಟಿಗಳನ್ನೇ ನೋಡಿಗೊಂಡು ರಂಗಮಾವ° ಕೂಯಿದವು; ಎಷ್ಟು ಹೊತ್ತೋ…
ಉದ್ದಿದ ಲೇಪ ಒಣಗಿ ಶೇಕ ಕೊಡ್ಳೆ ಪ್ರೀತಿಯ ಪಾತಿ ಬಪ್ಪನ್ನಾರವೂ.

ಒಂದೊಪ್ಪ: ಉಂಬ ಊಟ ಒಂದೇ ಆದರೆ ಚಿಂತನೆಯೂ ಒಂದೇ ರೀತಿ ಇರ್ತು. ಊಟ ಸಾತ್ವಿಕ ಆದರೆ ಮನಸ್ಸೂ ಸಾತ್ವಿಕ ಆಗಿರ್ತು.

30 thoughts on “ತರವಾಡು ಮನೆಲಿ ಎರಡಡಿಗೆ ಅಡ..!!

  1. shuddi bhari koshili odide laaikaidu.
    kottige innude timbale aidille. kottige noduvaga timbalakku heli greshide.
    sooper pata.
    innu mundana talemaringe tumba kambu ajjigo pati attego hutti barali.
    mane belaguva soseyakko sikkali.
    ella maneliyu onde alage ashana undugondu santhosha nemmadi irali.
    good luck.

  2. ಲೇಖನ ಭಾರಿ ಲಾಯ್ಕಾದು ಒಪ್ಪಣ್ಣಾ…

    ಓದಿ ಮುಗುಶಿಯಪ್ಪಗ ಮನಸ್ಸಿಲಿ ಒಂದು ಸಣ್ಣ ಚಿಂತನೆ ಶುರು ಆತು.

    ಇಂಜಿನಿಯರಿಂಗ್ ಮಡುವಗ ಎನಗುದೆ ಭಾರಿ ತೊಂದರೆ ಆಯಿದು. ಮೈಸೂರಿಲಿ ಎನಗೆ ಊಟ ತಿಂಡಿ ಹಿಡಿಶಿದ್ದಿಲ್ಲೆ. ಅವರ ಬಾತು ಅವಕ್ಕೆ ಅಕ್ಕಶ್ತೆ.

    ನಮ್ಮದು ಸಾತ್ವಿಕ ಆಹಾರ. ನವಗೆ ಈ ಘರಂ ಮಸಾಲೆ ಉಪಯೊಗುಸಿರೆ ಹಿಡಿಶ.

    ನಮ್ಮ ಆಹಾರ ಪದ್ದತಿಯ ಹಾಂಗೆ ಒಳುಶಿಗೊಂಬದು ನಮ್ಮ ಕರ್ತವ್ಯ. ಮಾಂಸಾಹಾರಿಗಳ ಹಾಂಗೆ ನಮ್ಮ ಅಡಿಗೆ ಅಪ್ಪಲಾಗ.

    ಏವಗಾರು ಒಂದರಿ ಹೀಂಗಿಪ್ಪ ಅಡಿಗೆ ಮಾಡಿರೆ ತೊಂದರೆ ಇಲ್ಲೆ. ಆದರೆ ಇದುವೆ ನಮ್ಮ ಆಹರ ಪದ್ದತಿ ಅಪ್ಪಲಾಗ.

    ಈಗ ಒಂದು ರಜ್ಜ ವರಷಂದ ನಮ್ಮ ಜೆಂಬಾರಂಗಳಲ್ಲಿ ಪಲಾವು ಶುರು ಆಯಿದು. ಆದರೆ ಈಗೀಗ ಬ್ಯಾರಿಗಳ ಹಾಂಗೆ ಗೀ ರೈಸ್ ಅದು ಇದು ಹೆಳಿ ಕೆಲವರು ಶುರು ಮಡಿದ್ದವು. ಇದು ತಪ್ಪು.

    ಆಹಾರ ಪದ್ದತಿ ಸಂಸ್ಕ್ರತಿಯ ಭಾಗ ಅದರ ನಾವೆಲ್ಲ ಒಳುಶಿ ಬೆಳೆಶೆಕ್ಕು.

    1. ನಂದನಣ್ಣನ ಒಪ್ಪ ಓದಿರೆ ಬೇಜಾರವೇ ನಂದುತ್ತು! 🙂
      ಹೇಳೇಕಾದ್ದರ ನೇರವಾಗಿ, ಖಡ್ಪಕ್ಕೆ ಹೇಳಿದ್ದಿ, ಓದುವಗ ಕೊಶಿಲಿ ನೆಗೆಬತ್ತು!

      ಹೊಸ ಅಡಿಗೆಗಳ ಸೇರುಸುತ್ತದು ತಪ್ಪಲ್ಲದ್ದರೂ, ಹಳತ್ತರ ಬಿಡ್ತದು ತಪ್ಪು.
      ಜೆಂಬ್ರಂಗಳಲ್ಲಿ ಹಸರಪಾಯಸವೇ ಕಾಂಬಲಿಲ್ಲೆ, ಅಲ್ಲದೋ? 🙁
      ಎಂತ ಹೇಳ್ತಿ? 🙂

  3. ಕಾನಕಲ್ಲಟೆ ಮೇಲಾರ, ಮುಂಡಿ ತಾಳು, ಹಲಸಿನಣ್ಣು ಕೊಟ್ಟಿಗೆ… ಬೆ೦ಗ್ಳೂರಿಲಿ ಎಲ್ಲಿಯಾದರೂ ಸಿಕ್ಕುತ್ತ? ಆಶೆ ಆವ್ತು..

    1. ಗಿರಿಭಾವಾ,
      ಪೆರ್ಲದಣ್ಣನ ಮನಗೆ ಅಜ್ಜಕಾನಬಾವ ಬಂದಿಪ್ಪಗ ಇದರ ಎಲ್ಲ ಮಾಡುಗು; ಇಬ್ರುದೇ ಸೇರಿಗೊಂಡು.
      ಅವರ ಇಬ್ರ ಕೈಲಿ ಮಾತಾಡಿಗೊಂಡ್ರೆ ಅವರೊಟ್ಟಿಂಗೆ ಸೇರ್ಲಕ್ಕಿದಾ!! 🙂

      ಆಸಕ್ತಿ ಕಂಡು ತುಂಬಾ ಸಂತೋಷ ಆತು.

  4. ಒಪ್ಪನ್ಣನ ಬರವಣಿಗೆ ಯಾವತೂ ಮನಸ್ಸಿಂಗೆ ಆಪ್ತ ಅಪ್ಪ ರೀತಿಲಿ ಇರ್ತು, ಅದು ಆರದ್ದೇ ಶುದ್ದಿ ಆಗಿರಲಿ, ನಮ್ಮದೇ ಜನ ಹೇಳುವ ಭಾವ ಅಲ್ಲಿ ಇರ್ತು. ಅವರ ಸಮಸ್ಯೆ ನಮ್ಮದು ಅನ್ಸುತ್ತು, ಅವರ ಸಂತೋಷಲ್ಲಿ ನಮ್ಮದೂ ಸಂತೋಷ ಇದ್ದು ಅನ್ಸುತ್ತು.. ಹಾಂಗಿಪ್ಪ ಬರವಣಿಗೆಯ ಶೈಲಿಗೆ ಧನ್ಯವಾದ .. ’ಒಪ್ಪಣ್ಣಂಗೆ ಜೈ’
    ನಮ್ಮ ಸಮಾಜಲ್ಲಿ ನಿಧಾನಕ್ಕೆ ಆವ್ತಾ ಇಪ್ಪ ಬದಲಾವಣೆಂದಾಗಿ ನಾವು ಎದುರ್ಸೆಕಪ್ಪ ಸಮಸ್ಯೆಗಳ ಮೇಲೆ ಬೆಣಚ್ಚು ಹಾಕುವ ಒಪ್ಪನ್ಣನ ಪ್ರಯತ್ನ ತುಂಬಾ ಒಳ್ಳೆದು. ಸುಮಾರು ಜೆನ ವಿದ್ಯಕ್ಕಂಗೊ ಇದರ ಓದಿ ನಮ್ಮ ಹಳೇ ಕ್ರಮದ ಅಡಿಗೆ ಮಾಡುಲೆ ಕಲಿವಲೆ ಆಸಕ್ತಿ ಹೆಚ್ಚಿಸಿಗೊಂಡರೆ ಒಪ್ಪಣ್ಣನ ಲೇಖನ ಆಶಯ ಈಡೇರಿದ ಹಾಂಗೆ 🙂

    1. ಸುವರ್ಣಿನಿಅಕ್ಕಾ,
      ಶುದ್ದಿಗೆ ನಿಂಗೊ ಕೊಟ್ಟ ಈ ಒಪ್ಪವ ಕಾಂಬಗ, ನಿಂಗೊ ಮಾಡಿದ ಅಪ್ಪೆಹುಳಿಯ ನೆಂಪಾಗಿ ಬಾಯಿಲಿ ನೀರು ಬತ್ತು ಒಪ್ಪಣ್ಣಂಗೆ.
      ಆಧುನಿಕ ಚಿಂತನೆಗಳ ಮಡಿಕ್ಕೊಂಡು, ಹಳೇಕಾಲದ ಸಂಸ್ಕಾರ, ಆಚರಣೆಗಳ ಪಡಕ್ಕೊಂಡ ನಿಂಗಳೂ ಇನ್ನಾಣ ತಲೆಮಾರಿನ ಹೆಮ್ಮಕ್ಕೊಗೆ ದಾರಿದೀಪ ಆಗಿರ್ತಿ ಹೇಳ್ತದು ಒಪ್ಪಣ್ಣನ ಧೃಡ ವಿಶ್ವಾಸ.

      ವಿದ್ಯಕ್ಕಂಗೊಕ್ಕೆ ಪಾತಿಅತ್ತೆಕ್ಕೊ ಕಲಿಶಿಕೊಡ್ಳಿ. ಹಳತ್ತರ ಬೆಲೆ ಗೊಂತುಮಾಡುಸಿರೆ ಮತ್ತೆ ಮುಂದರುಸಿಗೊಂಡು ಹೋಕು. ಅಲ್ಲದೋ? 🙂

      ಒಪ್ಪ ಒಪ್ಪಕ್ಕೆ ಒಪ್ಪಂಗೊ.
      ಹರೇರಾಮ.

  5. ಒಪ್ಪಣ್ಣಾ,
    ಕಾಣೆ ಆದವರ ಲೀಸ್ಟಿಲ್ಲೆ “ಶ್ರೀಶನ” ಹಾಕುತ್ತೆ ಹೇಳಿ ಶ್ರೀ ಅಕ್ಕ ಜೋರು ಮಾಡ್ಲೆ ಸುರು ಮಾಡಿದ್ದವಿದ.
    ಬೈಲಿನ ಶುದ್ದಿ ಓದಿಂಡಿದ್ದರೂ ಒಪ್ಪ ಬರವಲೆ ಆಯಿದಿಲ್ಲೆ ಅಶ್ಟೆ.
    ತರವಾಡು ಮನೆ ಹೇಳಿ ಅಪ್ಪಗ ಕೆಮಿ ಕುತ್ತ ಅವ್ತಿದ.
    ***
    ಪಾತಿ ಅತ್ತೆ ರಂಗ ಮಾವನ ಸಂಬಂಧ ಹೇಳಿರೆ ಎಷ್ಟು ಅನ್ಯೋನ್ಯತೆ ಹೇಳ್ತರ ಗಮನಿಸಿರೆ ಗೊಂತಾವ್ತು
    [ಪಾತಿಅತ್ತೆಗೆ – “ಅಕ್ಕು” ಹೇಳ್ತದು ಮಾಂತ್ರ ಅರಡಿಗಷ್ಟೆ!] ಹಿಂದಾಣ ಕಾಲದವು ಗಂಡ ಹೇಳಿದ್ದಕ್ಕೆ ಅಕ್ಕು ಹೇಳುಗಲ್ಲದ್ದೆ ಅದಕ್ಕೆ ಎದುರು ಮಾತಾಡವು. ಆಗ ಹೇಳ್ತರೂ ಇಂಗ್ಲೀಶಿಲ್ಲಿ ಒಂದು ಮಾತು ಇದ್ದು “yes,,, but” ಆ ನಮೂನೆ ಹೇಳುಗಷ್ಟೆ
    [ಪಾತಿಅತ್ತೆಗೂ ಮೊಳಪ್ಪು ಕಟ್ಟಿಹಾಕಿದ ನಮುನೆ ಆಯಿದು]. ತಾನೂ ಆ ಬೇನೆಯ ಒಂದಂಶ ಅನುಭವಿಸಿದ ಹಾಂಗೆ ಆವ್ತು. ಅವರ ಸೇವೆಗಾಗಿ ಹೆಚ್ಚು ಸಮಯ ಕೊಡೆಕಾವ್ತು. ದೇಹ ಎರಡಾದರೂ ಜೀವ ಒಂದೇ-ಅರ್ಧಾಂಗಿ
    [ಹಟ್ಟಿಯೊಳದಿಕ್ಕೆ ಇರ್ತ ಅಬ್ಬೆಕ್ಕಳ ಮಾತಾಡುಸದ್ರೆ ಪಾತಿಅತ್ತೆಗೆ ಸಮದಾನ ಅಕ್ಕೋ ] ಹಟ್ಟಿಲಿ ಇಪ್ಪ ದನಗೊ ಹೇಳಿರೆ ಅಬ್ಬೆಯ ಹಾಂಗೆ ಹೇಳ್ತ ಭಾವನೆ. ಒಬ್ಬನ ಬಿಟ್ಟು ಇನ್ನೊಬ್ಬ ಇಲ್ಲೆ. ಪಾತಿ ಅತ್ತೆಯ ಕಾಣದ್ದರೆ ಹಟ್ಟಿಲಿ ಇಪ್ಪ ಅಬ್ಬೆಯಕ್ಕೊಗೂ ಸಮಾಧಾನ ಆಗ.
    ***
    [ರಂಗಮಾವಂಗೆ ಕೆಲಸಮಾಡದ್ದೆ ಕೂದು ಅರಡಿಯ] [ಒಳವೇ ಇದ್ದೊಂಡು ಹಟ್ಟಿಲೇ ಕಟ್ಟಿದ ದನಗಳ ಹಾಂಗಾಯಿದು]
    ಕೆಲಸ ಮಾಡದ್ದೆ ಸುಮ್ಮನೆ ಕೂಬಲೆ ಅರಡಿಯ. ಇದು ಎನ್ನ ಮನೆ, ಎನ್ನ ಸಂಸಾರ, ಅದಕ್ಕೆ ಬೇಕಾಗಿ ಕೆಲಸ ಮಾಡುವದಲ್ಲದ್ದೆ, ಸಂಬಳಕ್ಕಾಗಿ ಅಲ್ಲ. ಹಾಂಗೆ ದುಡುದ ಶರೀರವೇ ಗಟ್ಟಿ ಮುಟ್ಟಾಗಿ ಇಪ್ಪದು. ಕೆಲಸ ಮಾಡ್ಲೆ ಎಡಿಯದ್ದೆ ಅನಿವಾರ್ಯತೆಲಿ ಕೂದಪ್ಪಗ ಕಟ್ಟಿ ಹಾಕಿದ ಹಾಂಗೆ ಅಪ್ಪದು.
    **
    ಅಜ್ಜ ಪುಳ್ಳಿಯ ಸಂಬಂಧ ತುಂಬಾ ಲಾಯಿಕಲಿ ಬಯಿಂದು. ಶಾಲೆ ಬಿಟ್ಟ ಕೂಡ್ಲೆ ಅಜ್ಜನೊಟ್ಟಿಂಗೆ ಇಪ್ಪದು, ಅವರೊಟ್ಟಿಂಗೆ ಮನುಗುವದು, ಅವರ ಅರೋಗ್ಯ ವಿಚಾರುಸುವದು…. ಶಾಲೆಲಿ ಕಲ್ತದರಿಂದ ಹೆಚ್ಚು ಮನೆಲಿ ಅಜ್ಜನೊಟ್ಟಿಂಗೆ ಇದ್ದು ತಿಳ್ಕೊಂಬದು. ಎಲ್ಲರಿಂಗೂ ಸಿಕ್ಕದ್ದ ಭಾಗ್ಯವೇ. ಶಾಲೆಲಿ ಕಲುಸುತ್ತ ಹಾಂಗೆ ಅಜ್ಜನ ಹತ್ರೆ ಸಿಲೆಬಸ್ ಇಲ್ಲೆ. ಜೀವನದ ಅನುಭವ ಇದ್ದು. ಇದರ ತಿಳ್ಕೊಳ್ತ ಮನಸ್ಸು ವಿದ್ಯಕ್ಕಂಗೆ ಇಲ್ಲೆ ಹೇಳ್ತರ ಈ ವಾಕ್ಯಲ್ಲಿ ಹೇಳಿದ್ದು ಲಾಯಿಕ ಆಯಿದು:
    [ಅಜ್ಜನ ಒಟ್ಟಿಂಗೆ ಪುಳ್ಳಿ ಇದ್ದರೆ, ಶಾಲೆಪುಸ್ತಕ ಓದುದರಿಂದಲೂ ಹೆಚ್ಚಿಂದರ ಕಲ್ತುಗೊಳ್ತ ಹೇಳಿ ವಿದ್ಯಕ್ಕಂಗೆ ಎಂತ ಗೊಂತು]

    ***
    [ಕೋಪಲ್ಲಿ ಹಾಂಗೆ ಆದ್ದದಲ್ಲ – ಬದಲಾಗಿ ಈಗಾಣ ಕಾಲವೆವಸ್ಥೆಲಿ ಆತಷ್ಟೆ!
    ಇಬ್ರಿಂಗೂ ಅತ್ತಿತ್ತೆ ಕೋಪ ಇಲ್ಲೆ, ಆದರೆ ಅನಿವಾರ್ಯ ಆಯಿದು. ಅಷ್ಟೇ!]
    ಬದಲಾವಣೆ ಜಗದ ನಿಯಮ ಅಡ. ಒಳ್ಳೆದಕ್ಕಾಗಿ ಅನಿವಾರ್ಯತೆಯ ಬದಲಾವಣೆ ಆದರೆ ತೊಂದರೆ ಇಲ್ಲೆ. ಇಲ್ಲಿ ಕೋಪಂದ ಅದ್ದಲ್ಲ ಹೇಳ್ತದೇ ಸಮಾಧಾನದ ಅಂಶ.
    ***
    ಕೊಶೀ ಆದ ಕೆಲವು ತಮಾಶೆಗೊ:
    ಉಂಡೆಮೇಲಾರವ ಉಂಡರೆ ಹೊಟ್ಟೆಯೂ ಉಂಡೆ ಅಪ್ಪನ್ನಾರ ನಿಲ್ಲುಸಲೆ ಮನಸ್ಸಿರ ಚೆನ್ನೈಭಾವಂಗೆ!
    ಆ ರೈಸು ಈ ರೈಸು ಹೇಳಿದರೇ ರಯಿಸುದನ್ನೇ!
    ***

    ಅಡಿಗೆ ಮಾಡಿ ಬಳುಶುವದು ಹೇಳಿರೆ ಒಂದು ಕಲೆ. ಪಾಠ ಓದಿ ತಿಳ್ಕೊಳ್ಳದ್ದರೂ, ಅನುಭವಂದ ಬಂದ ಅಡುಗೆಲಿ, ಶರೀರಕ್ಕೆ ಹಿತವಾದ್ದೇ ಇಪ್ಪದು. ಈಗಾಣ ಫಾಸ್ಟ್ ಫುಡ್ ಹೇಳಿ ರೆಡಿ ಮೇಡ್ ಮಿಕ್ಸ್ ತಂದು ಅದರಲ್ಲಿ ಸುದಾರುಸುತ್ತೆ ಹೇಳಿರೆ ಆರೋಗ್ಯಕ್ಕೂ ಹಾಳು, ಪೈಸವೂ ವ್ಯರ್ಥ ಹೇಳ್ತರ ಈ ವಾಕ್ಯಂಗಳಲ್ಲಿ ಹೇಳಿದ್ದು ಲಾಯಿಕ ಆಯಿದು:
    [ಅನಿವಾರ್ಯತೆಲಿ ಬೇಶುದು ಬೇರೆ, ನಿತ್ಯಕ್ಕೆ ಬೇಶುದು ಬೇರೆ!]
    [ಹಳತ್ತರ ಮಾಡ್ಳೆ ವಿದ್ಯಕ್ಕಂಗೆ ಅರಡಿತ್ತಿಲ್ಲೆ, ಹೊಸತ್ತರ ಮಾಡಿರೆ ಹಳಬ್ಬರಿಂಗೆ ಮೆಚ್ಚುತ್ತಿಲ್ಲೆ!]
    [ವಾಂಗಿಬಾತಿನ ಅಂತೂ ವಾಂತಿಬಾತು ಹೇಳಿಯೇ ಹೇಳ್ತು ಪಾತಿಅತ್ತೆ!]
    ***
    [ಹುಟ್ಟುವಗಳೇ ಎಲ್ಲೋರುದೇ ಕಲ್ತುಗೊಂಡು ಬಂದಿರ್ತವಿಲ್ಲೆ, ಕಲಿಯಲೀ.. – ಬುದ್ಧಿವಾದ ಹೇಳುಗು ರಂಗಮಾವ°.] ಒಳ್ಳೆ ಅನುಭವದ ಮಾತು.
    ಅರಡಿತ್ತಿಲ್ಲೆ ಹೇಳಿ ಕೂದರೆ ಯಾವದೂ ಅರಡಿಯ. ಕಲಿತ್ತೆ ಹೇಳಿ ಕಲ್ತರೆ ಎಲ್ಲವೂ ಬಕ್ಕು.
    ***
    [ಆನು ಎಂತ ಹೇಳಿರೂ ಪಾತಿ ಹೂಂಕುಟ್ಟುಗು. ಆದರೆ ಶಾಮ ಎಂತ ಮಾಡುಗು…] ರಂಗ ಮಾವ ಮತ್ತೆ ಪಾತಿ ಅತ್ತೆಯ ಸಂಬಂಧಲ್ಲಿ ಮಾವ ಹೇಳಿದ್ದಕ್ಕೆ ಅತ್ತೆ ಎದುರು ಉತ್ತರ ಕೊಡ, ಆದರೆ ಶಾಂ ಭಾವನ ಕೇಸ್ ಹಾಂಗಲ್ಲ ಅಲ್ಲದಾ? ತಲೆಮಾರಿನ ಅಂತರಲ್ಲಿ ಗಂಡ ಹೆಂಡತಿ ಸಂಬಂಧಲ್ಲಿ ಕಂಡ ವೆತ್ಯಾಸವ ಸೂಚ್ಯವಾಗಿ ಮಾವ ಹೇಳಿದ್ದು ಹೆಚ್ಚಿನ ಕಡೆ ಸರಿಯಾಗಿ ಇಕ್ಕಲ್ಲದಾ?
    ***
    ಒಂದು ಹಳೆ ಪದದ ಹೊಸ ಪ್ರಯೋಗ “ಸಾರೋಸಾರ”
    [ಅದರ ನೋಡಿಗೊಂಡಪ್ಪಗ ಸಾರೋಸಾರ ಆವುತ್ತು.]
    ***
    ಒಂದೊಪ್ಪ ಲಾಯಿಕ ಅಯಿದು.

    1. ಶ್ರೀಶಣ್ಣೋ..
      ಅಬ್ಬ, ನಿನ್ನ ಕಾಣದ್ದೆ ಅಸಕ್ಕ ಹಿಡುದಿತ್ತು, ಗೊಂತಿದ್ದೋ?
      ಮಕ್ಕೊ ಪಾಚಂದ ಬೀಜದಬೊಂಡು ಹೆರ್ಕಿ ಹೆರ್ಕಿ ತಿಂತ ನಮುನೆ ಶುದ್ದಿಯ ಕೊಡಿಂದ ಕೊಡಿಒರೆಂಗೆ ಕೇಳಿ, ಅದರ್ಲಿ ಕೊಶೀ ಆದ ಕೆಲವು ವಾಕ್ಯಂಗಳ ಎತ್ತಿ ತೋರುಸುತ್ತ ಕ್ರಮ ಬಾರೀ ಕೊಶೀ ಆವುತ್ತು.

      {
      ಕೊಶೀ ಆದ ಕೆಲವು ತಮಾಶೆಗೊ:
      ಉಂಡೆಮೇಲಾರವ ಉಂಡರೆ ಹೊಟ್ಟೆಯೂ ಉಂಡೆ ಅಪ್ಪನ್ನಾರ ನಿಲ್ಲುಸಲೆ ಮನಸ್ಸಿರ ಚೆನ್ನೈಭಾವಂಗೆ! }
      ಇದು ತಮಾಶೆಗೆ ಹೇಳಿದ್ದಲ್ಲ ಶ್ರೀಶಣ್ಣಾ, ತಮಾಶೆಗಲ್ಲ!
      ಗಾತಿಗೆ! 😉 😀
      ಆತೋ?

      ಒಪ್ಪ ಕೊಶೀ ಆತು ಹೇಳ್ತರಲ್ಲಿ ಒಂದೊಪ್ಪ!

      1. [ಇದು ತಮಾಶೆಗೆ ಹೇಳಿದ್ದಲ್ಲ ಶ್ರೀಶಣ್ಣಾ, ತಮಾಶೆಗಲ್ಲ!
        ಗಾತಿಗೆ!]
        ಇದಾ ಇನ್ನೊಂದು ಹೊಸ ಶಬ್ದ ಸಿಕ್ಕಿತ್ತಿದಾ “ಗಾತಿಗೆ”

    1. ಯೋಗಾಯೋಗಂಗಳ ಸರಿಯಾಗಿ ನಿಷ್ಕರ್ಷೆ ಮಾಡಿ ಒಪ್ಪಕೊಟ್ಟ ಹರೀಶಣ್ಣಂಗೆ ಒಪ್ಪಂಗೊ.
      ನಿಂಗೊಗೆ ಕೊಶಿ ಆದರೆ ನೆರೆಕರೆಯ ನಾಕುಜೆನರ ಕೆಮಿಗೆ ತಟ್ಟುಸಿಕ್ಕಿ. ಆತೋ? 🙂

  6. ಅಡಿಗೆ ಕೆಲಸ ಹೇಳಿರೆ ವಿದ್ಯಾಭ್ಯಾಸ ಇಲ್ಲದ್ದವು ಮಾಡುವದು ಹೇಳಿಯೋ, ಹೇ೦ಗಾರು ಹೊಟ್ಟೆ ತು೦ಬುಸಲೆ ಬೇಕಾಗಿ ಮಾಡ್ತ ಕೆಲಸ ಹೇಳಿಯೋ, ದೊಡ್ಡ ದೊಡ್ಡ ಕೆಲಸಲ್ಲಿ ಇಪ್ಪವು ಅಡಿಗೆ ಮಾಡುವದು ಸ್ಟೇಟಸ್ಸಿ೦ಗೆ ಕಮ್ಮಿ ಹೇಳಿಯೋ ಇಪ್ಪ ಭಾವನೆ ಸುರೂವಿ೦ಗೆ ಮನಸ್ಸಿ೦ದ ಬದಲಾಯೆಕು. ಮತ್ತೆ ಎಲ್ಲರಿ೦ಗುದೆ ಅತ್ಲಾಗಿಯುದೆ ಇತ್ಲಾಗಿಯುದೆ ಚೂರು ಸಹಕಾರ ಮನೋಭಾವವುದೆ ಇದ್ದರೆ ಆತು ಹೇಳಿ ಎನ್ನ ಅಭಿಪ್ರಾಯ.

    1. ಮದುವೆಪ್ರಾಯಕ್ಕೆ ಬಂದ ಕಾರಣ ಪೆರುವದ ಗಣೇಶಣ್ಣ ಈ ಸರ್ತಿ ಅತ್ತೆ-ಸೊಸೆ ವಿಶಯಲ್ಲಿ ಒಪ್ಪ ಬರೆಯವು – ಹೇಳಿ ಚೆನ್ನೈಬಾವ ನೆಗೆಮಾಡಿತ್ತಿದ್ದವು.
      ಒಪ್ಪ ಕಂಡಪ್ಪಗ ಕೊಶೀ ಆತಿದಾ! 🙂

      ಅಡಿಗೆ ಮಾಡುದು ಪುಸ್ಕ – ಹೇಳಿ ಗ್ರೇಶಿ ಅದಕ್ಕೆ ಜೆನ ಮಡಗುತ್ತ ಸಂಪ್ರದಾಯ ಪೇಟೆಗಳಲ್ಲಿ ಇದ್ದಾಡ. ಅಡಿಗೆ ಮಾಡ್ತದು ಪುಸ್ಕ ಆದರೆ ಉಂಬದುದೇ ಪುಸ್ಕ – ಅಲ್ಲದೋ ಗಣೇಶಣ್ಣಾ? 😉

  7. ಕಾನಕಲ್ಲಟೆ ಮೇಲಾರ, ಮುಂಡಿ ತಾಳು, ಹಲಸಿನಣ್ಣು ಕೊಟ್ಟಿಗೆ, ಕಣಿಲೆ ಬೆಂದಿ ಎಲ್ಲ ಕೇಳುವಗಲೇ ಬಾಯಿಲಿ ನೀರು ಬತ್ತು. ಅದರೆಲ್ಲ ದಿನಾ ತಿಂದರೂ ಬೊಡಿತ್ತಿಲ್ಲೆ. ಈ ಪೇಟೆ ತಿಂಡಿಗೊ ಒಂದೊಂದರಿಯಂಗೆ ಅಕ್ಕು ದಿನಾಗಿಲೂ ರುಚಿ ಅವ್ತಿಲ್ಲೆ. ಗಡಿ ಬಿಡಿಲಿಪ್ಪಗ ಹಾಂಗಿಪ್ಪ ಹೊಸ ನಮುನೆದು ಬೇಗ ಅಪ್ಪಲೆ ಮಾಡ್ಲಿ, ಆ ದಿನಕ್ಕೆ ಹೊಸ ರುಚಿದೆ ಆತು. ಯಾವಗಲಿಂಗೆ ನಮ್ಮ ಮಾಮುಲಿ ಅಡಿಗೆಗಳ ಮಾಡಿರೆ ಅದೆ ರುಚಿ ಅಲ್ಲದ? ಸುರುವಿಂಗೆ ರಜ್ಜ ರುಚಿ ಸರಿ ಆಗ ಕಲಿವಗ, ಅಮೇಲೆ ಸರಿ ಅಕ್ಕು. ತುಂಬಾ ಲಾಯಿಕಯಿದು ಲೇಖನ. ಪಾತಿ ಅತ್ತೆ ಕೈಂದ ರುಚಿಯಾಗಿ ಅಡಿಗೆ ಮಾಡ್ಲೆ ಕಲ್ತರೆ ಅದುದೆ ವಿದ್ಯಕ್ಕಂಗೆ ಒಂದು ಹೊಸ ನಮುನೆ ಅಡಿಗೆ ಕಲ್ತ ಹಾಂಗೆ ಅತನ್ನೆ?
    ಕಡೆಯ ಒಂದೊಪ್ಪದೆ ತುಂಬಾ ಲಾಯ್ಕಯಿದು.
    ಉತ್ತಮ ಬರಹ, ಇನ್ನಾಣ ವಾರಕ್ಕೆ ಕಾಯ್ತೆ,
    ಸುಮನಕ್ಕ

    1. ವಿದ್ಯಕ್ಕಂಗೆ ಉಪಾಯಲ್ಲಿ ಕೆಣಿ ಹೇಳಿಕೊಟ್ಟ ಕ್ರಮ ಭಾರೀ ಕೊಶಿ ಆತು ಸುಮನಕ್ಕ.
      ಅಪ್ಪು, ಪಾತಿಅತ್ತೆಯ ಕೈಂದ ಎಲ್ಲ ಹಳೆಅಡಿಗೆಗಳ ಕಲ್ತುಗೊಳಲಿ. ಅಷ್ಟಪ್ಪಗ ಪಾತಿಅತ್ತೆಂದಲೂ ಹೆಚ್ಚು ಅಡಿಗೆ ಗೊಂತಿದ್ದ ಹಾಂಗಾತಿದಾ! 🙂
      ಪಾತಿಅತ್ತೆಯ ಬಯಕೆಯೂ ಇದುವೇ – ಸೊಸೆ ತನ್ನಿಂದಲೂ ಉಶಾರಿ ಆಯೇಕು – ಹೇಳಿಗೊಂಡು!

      ದೂರದ ಊರಿಲಿದ್ದೊಂಡುದೇ ನಮ್ಮ ಹಳೆ ಅಡಿಗೆಗಳ ನೆಂಪುಮಡಾಗಿ ಮಾಡ್ತ ನಿಂಗಳ ಬಗ್ಗೆ ಕೊಶಿ ಆವುತ್ತು.
      ಅಲ್ಲಿಗೆ ಬಂದರೆ ಒಪ್ಪಣ್ಣಂಗೆ ಮಾಡಿ ಬಳುಸುವಿರಲ್ಲದೋ? 🙂

  8. ಜಡಿಮಳೆಗೆ ಬೆಶ್ಚಂಗೆ ಅಜ್ಜನ ಒಟ್ಟಿಂಗೆ ಚುರುಟಿ ಮನುಗುದು ಹೇಳಿರೆ ಎಂತಾ ಕೊಶಿ! ನವಗುದೆ ಅಂತ ಅನುಭವ ಇದ್ದು. ಅಜ್ಜ/ಅಪ್ಪ ಹೇಳ್ತ ಕಥೆಗಳ ಕೆಳ್ಯೊಂಡು ಮನುಗುತ್ತದು ಕೊಶಿ ಹೇಳಿರೆ, ಕೊಶಿಯೇ. ಅದರ ಎದುರು, ಈಗಾಣ ಕಂಪ್ಯೂಟರು ಗೇಮುದೆ ಬಾರ, ಟಿವಿಯ ಹುಳು ಕಾರ್ಟೂನುದೆ ಬಾರ.

    ಅಜ್ಜನ ಒಟ್ಟಿಂಗೆ ಪುಳ್ಳಿ ಇದ್ದರೆ, ಶಾಲೆಪುಸ್ತಕ ಓದುದರಿಂದಲೂ ಹೆಚ್ಚಿಂದರ ಕಲ್ತುಗೊಳ್ತ ಹೇಳಿ ವಿದ್ಯಕ್ಕಂಗೆ ಎಂತ ಗೊಂತು, ಅಲ್ಲದೋ? ನಿಜ ಒಪ್ಪಣ್ಣಾ. ರಂಗಮಾವ/ಪಾತಿ ಅತ್ತೆಯ ನಳ ದಮಯಂತಿಯ ಹೋಲಿಕೆ ಲಾಯಕಾಯಿದು.

    “ಕೋಪಲ್ಲಿ ಹಾಂಗೆ ಆದ್ದದಲ್ಲ – ಬದಲಾಗಿ ಈಗಾಣ ಕಾಲವೆವಸ್ಥೆಲಿ ಆತಷ್ಟೆ!” ಎಲ್ಲಿ ತರವಾಡು ಮನೆಲೆ ಪಾಲು ಆವ್ತೋ ಹೇಳಿ ಬೇಜಾರು ಸುರುವಾಗಿತ್ತು. ಈ ವಿಷಯ ಕೇಳಿ ಅಪ್ಪಗ ರಜಾ ಸಮಾಧಾನ ಆತು. ರಜಾ ಹೊಂದಾಣಿಕೆ ಮಾಡಿರೆ ಸರಿ ಅಕ್ಕಪ್ಪಾ.
    ಹುಟ್ಟುವಗಳೇ ಎಲ್ಲೋರುದೇ ಕಲ್ತುಗೊಂಡು ಬಂದಿರ್ತವಿಲ್ಲೆ ಹೇಳ್ತದು ಸರಿ, ಹೊಸ ಅತ್ತೆಕ್ಕೊ ಹಾಂಗೇ ಹೊಸ ಸೊಸೆಯಕ್ಕಳುದೆ ತಿಳುಕ್ಕೋಳೆಕಾದ ವಿಷಯ.
    ಒಪ್ಪಣ್ಣ ಬರದ ಕಡೆಣ ಒಪ್ಪ, ಒಪ್ಪ ಆಯಿದು.

    1. ಅಬ್ಬ! ಬೊಳುಂಭುಮಾವಾ, ಎಂತಾ ಪ್ರೀತಿ ತರವಾಡುಮನೆಯ ಮೇಗೆ. ಅಲ್ಲದೋ? ಕೊಶೀ ಆತು. ಆಗಪ್ಪಾ, ಪಾಲಪ್ಪಲಾಗ – ಹೇಳಿಯೇ ಒಪ್ಪಣ್ಣನ ಬಯಕೆಯುದೇ.
      ಬೈಲಿನ ಎಲ್ಲೋರುದೇ ಹಾಂಗೇ ಗ್ರೇಶಿಗೊಳ್ತವು.

      ಆದರೆ, ಕಾಲಗತಿಲಿ ಒಂದೊಂದರಿ ರಜ್ಜ ತಟಪಟ ಆವುತ್ತು.
      ನೋಡೊ°, ಆದಷ್ಟು ಬೇಗ ವಿದ್ಯಕ್ಕ° ಹಳೆ ಅಡಿಗೆಗಳ ಕಲ್ತುಗೊಂಗು. ಕಾಂಬುಅಜ್ಜಿಗೆ ಪಾತಿಅತ್ತೆ ಹೊಂದಿಗೊಂಡ ಹಾಂಗೆ ಪಾತಿಅತ್ತೆಗೆ ವಿದ್ಯಕ್ಕ ಹೊಂದಿಗೊಂಗು.
      ರಜ್ಜ ಸಮಯ ಹೆಚ್ಚು ಹಿಡಿಗು, ಅಷ್ಟೇ.
      ಪಾತಿಅತ್ತೆಗೆ ತಾಳ್ಮೆ ಇದ್ದು, ನವಗೆ?! 🙂

  9. ಒಪ್ಪಣ್ಣೋ … ಲೇಖನ ಭಾರಿ ಲಾಯಿಕ ಆಯಿದು … ಮೊದಲು ಅದಕ್ಕೆ ಒಂದೊಪ್ಪ ….
    ಸದ್ಯದ ಜೀವನ ಕ್ರಮಲ್ಲಿ ಹಳೇಕ್ರಮದ ಅಡಿಗೆಗ – “ಬಾತು ” ಅಡಿಗೆಗ ಇಪ್ಪದೇ … ಈಗಣಾ ಮಕ್ಕಗೆ ಕೆಲವು ತರದ ಬಾತುಗ … ಚೀನದವು ತಿಂಬಂತ ಹುಳುಗ … ಅಮೇರಿಕದವು ತಿಂಬಂತ ಬ್ರೆಡ್ಡುಗ ಎಲ್ಲದರ ರುಚಿಯೇ ಲಾಯಿಕ ಅಪ್ಪದು …. ಮೊದಲಾಣ ಮಕ್ಕಳ ಹಾಂಗೆ ಉಂಡೆ … ಪತ್ರೊಡೆ ಎಲ್ಲ ಮೆಚ್ಚ …. ಅದಕ್ಕೆ ಸರಿಯಾಗಿ ಈಗ ಪೇಟೆಲಿ ಎಲ್ಲವುದೇ ಸಿಕ್ಕುತ್ತು ….ದೊಡ್ಡ ದೊಡ್ಡ ಪೇಟೆಲಿ ಓರ್ಡರ್ ಮಾಡಿರೆ 5-10 ನಿಮಿಷಲ್ಲಿ ಫಿಜಾ – ಬರ್ಗರ್ ಬತ್ತಿದಾ …

    ಅದಲ್ಲದ್ದೆ ಮದಲಾದರೆ ಕೂಸುಗ ಶಾಲೆಗೆ ಹೋಗವು … ಮನೆಲೆ ಕೂದುಗೊಂಡು ಅಡಿಗೆ ಎಲಾ ಕಲಿಗು / ಅಬ್ಬೆಕ್ಕ ಕಲಿಶುಗು .. ಈಗ ಹಾಂಗಲ್ಲ ಕೂಸುಗಳೂ ಕಲಿತ್ತವು .. ಅದು ಜೀವನದ ಅನಿವಾರ್ಯತೆಯೂ ಅಪ್ಪು .. ಈ ಶಾಲಗೆ ಹೋಪ ಸಮಯಲ್ಲಿ ಅಡಿಗೆ ಕಲಿವಲೆ ಸಮಯ ಎಲ್ಲಿದ್ದು …. ಉದಿಯಪ್ಪಗ ಬೇಗ ಎದ್ದಿಕ್ಕಿ ಹೋಯೆಕ್ಕು … ಹೊತ್ತಪ್ಪಗ ಬಪ್ಪಗ ತಡವಾವುತ್ತು ಅಥವಾ ಆ ನೊಡ್ಸು-ಎಸ್ಸೈನ್ ಹೇಳಿ ಇರುಳು 12 ಗಂಟೆ ಆವುತ್ತು .. ಆದಿತ್ಯವಾದ ಒಂದು ದಿನ ರಜೆ ಅಲ್ಲದಾ .. ಮಗಳು ರಜಾ ಬಚ್ಚೆಲು ತೆಗೆಯಲಿ ಹೇಳಿ ಗ್ರೆಹಿಶುತ್ತವು ಅಬ್ಬೆಕ್ಕ .. ಮತ್ತೆಲ್ಲಿಂದ ಕಲಿವದು ಅಡಿಗೆಯಾ …ಶಾಲೆ ಕಲ್ತಾದ ಮತ್ತೆ ಕಲ್ತ ತಪ್ಪಿಂಗೆ ಕೆಲಸಕ್ಕೆ ಹೋಗದ್ರೆ ಆಗ … ಆವಗಲೂ ಪುರ್ಸೊತ್ತಿಲ್ಲೆ … ಹೆರ ಪೇಟೆಲಿ ರೂಮ್ ಮಾಡಿಗೊಂಡಿಪ್ಪವು ಒಂದೋ ಹೋಟೆಲಿಂಗೆ ಹೋವುತ್ತವು ಅಥವಾ ಪೇಕೆಟಿಲಿಪ್ಪದರ ತಿಂತವು …

    ಮದುವೆ ಆದ ಮೇಲೆ ಸೊಸೆಗೆ ಅಡಿಗೆ ಬಾರದ್ರೆ .. ಅತ್ತೆಯಕ್ಕಳೇ ಪರಂಚಿಗೊಂಡು ಮಾಡ್ತವು .. ಅನಿವಾರ್ಯತೆ ಇದಾ … ಹಾಂಗಾಗಿ ಆರ ದೂರಿದರೂ ಪ್ರಯೋಜನ ಇಲ್ಲೆ … ಹೋವುತ್ತ ಹೋವುತ್ತ ಹಳಬ್ಬರು ಈಗಾಣ ಪ್ಯಾಕೇಟ್ ಅಡಿಗೆಗವಕ್ಕೆ ಅನಿವಾರ್ಯವಾಗಿ ಹೊಂದಿಗೊಂದು ಹೋಯೆಕ್ಕಕ್ಕು …..

    1. ಅಪ್ಪಚ್ಚೀ, ಈ ಬಾತು ಹೇಳ್ತದು ಮರಾಠಿ ಪದ ಅಡ, ಅವು ಅಶನಕ್ಕೇ ಬಾತು ಹೇಳಿ ಹೇಳುದಡ ಅಪ್ಪೋ ನಿಂಗೊಗೆ ಎಂತಾರೂ ಗೊಂತಿದ್ದೋ…………….?

      1. ಅಪ್ಪಡ, ಬಾತು – ಹೇಳಿರೆ ಅಶನ ಅಡ.
        ಮರಾಟಿಲಿ ಹಾಂಗೇ ಹೇಳ್ತದಡ. ಮರಾಠಿ ಭಾಶೆ ಅರಡಿವ ಅಕ್ಷರದಣ್ಣ ಮೊನ್ನೆ ಹೇಳಿದವು, ಕೇಳಿಪ್ಪಗ. 🙂

  10. ಒಪ್ಪಣ್ಣೋ … ಲೇಖನ ಭಾರಿ ಲಾಯಿಕ ಆಯಿದು … ಮೊದಲು ಅದಕ್ಕೆ ಒಂದೊಪ್ಪ ….
    ಸದ್ಯದ ಜೀವನ ಕ್ರಮಲ್ಲಿ ಹಳೇಕ್ರಮದ ಅಡಿಗೆಗ – “ಬಾತು ” ಅಡಿಗೆಗ ಇಪ್ಪದೇ … ಈಗಣಾ ಮಕ್ಕಗೆ ಕೆಲವು ತರದ ಬಾತುಗ … ಚೀನದವು ತಿಂಬಂತ ಹುಳುಗ … ಅಮೇರಿಕದವು ತಿಂಬಂತ ಬ್ರೆಡ್ಡುಗ ಎಲ್ಲದರ ರುಚಿಯೇ ಲಾಯಿಕ ಅಪ್ಪದು …. ಮೊದಲಾಣ ಮಕ್ಕಳ ಹಾಂಗೆ ಉಂಡೆ … ಪತ್ರೊಡೆ ಎಲ್ಲ ಮೆಚ್ಚ …. ಅದಕ್ಕೆ ಸರಿಯಾಗಿ ಈಗ ಪೇಟೆಲಿ ಎಲ್ಲವುದೇ ಸಿಕ್ಕುತ್ತು ….ದೊಡ್ಡ ದೊಡ್ಡ ಪೇಟೆಲಿ ಓರ್ಡರ್ ಮಾಡಿರೆ 5-10 ನಿಮಿಷಲ್ಲಿ ಫಿಜಾ – ಬರ್ಗರ್ ಬತ್ತಿದಾ …

    ಅದಲ್ಲದ್ದೆ ಮದಲಾದರೆ ಕೂಸುಗ ಶಾಲೆಗೆ ಹೋಗವು … ಮನೆಲೆ ಕೂದುಗೊಂಡು ಅಡಿಗೆ ಎಲಾ ಕಲಿಗು / ಅಬ್ಬೆಕ್ಕ ಕಲಿಶುಗು .. ಈಗ ಹಾಂಗಲ್ಲ ಕೂಸುಗಳೂ ಕಲಿತ್ತವು .. ಅದು ಜೀವನದ ಅನಿವಾರ್ಯತೆಯೂ ಅಪ್ಪು .. ಈ ಶಾಲಗೆ ಹೋಪ ಸಮಯಲ್ಲಿ ಅಡಿಗೆ ಕಲಿವಲೆ ಸಮಯ ಎಲ್ಲಿದ್ದು …. ಉದಿಯಪ್ಪಗ ಬೇಗ ಎದ್ದಿಕ್ಕಿ ಹೋಯೆಕ್ಕು … ಹೊತ್ತಪ್ಪಗ ಬಪ್ಪಗ ತಡವಾವುತ್ತು ಅಥವಾ ಆ ನೊಡ್ಸು-ಎಸ್ಸೈನ್ ಹೇಳಿ ಇರುಳು 12 ಗಂಟೆ ಆವುತ್ತು .. ಆದಿತ್ಯವಾದ ಒಂದು ದಿನ ರಜೆ ಅಲ್ಲದಾ .. ಮಗಳು ರಜಾ ಬಚ್ಚೆಲು ತೆಗೆಯಲಿ ಹೇಳಿ ಗ್ರೆಹಿಶುತ್ತವು ಅಬ್ಬೆಕ್ಕ .. ಮತ್ತೆಲ್ಲಿಂದ ಕಲಿವದು ಅಡಿಗೆಯಾ … ಕಲ್ತಾದ ಮತ್ತೆ ಕಲ್ತ ತಪ್ಪಿಂಗೆ ಕೆಲಸಕ್ಕೆ ಹೋಗದ್ರೆ ಆಗ … ಆವಗಲೂ ಪುರ್ಸೊತ್ತಿಲ್ಲೆ … ಹೆರ ಪೇಟೆಲಿ ರೂಮ್ ಮಾಡಿಗೊಂಡಿಪ್ಪವು ಒಂದೋ ಹೋಟೆಲಿಂಗೆ ಹೋವುತ್ತವು ಅಥವಾ ಪೇಕೆಟಿಲಿಪ್ಪದರ ತಿಂತವು …
    ಮದುವೆ ಆದ ಮೇಲೆ ಸೊಸೆಗೆ ಅಡಿಗೆ ಬಾರದ್ರೆ .. ಅತ್ತೆಯೇ ಪರಂಚಿಗೊಂಡು ಮಾಡ್ತವು .. ಅನಿವಾರ್ಯತೆ ಇದಾ … ಹಾಂಗಾಗಿ ಆರ ದೂರಿದರೂ ಪ್ರಯೋಜನ ಇಲ್ಲೆ … ಹೋವುತ್ತ ಹೋವುತ್ತ ಹಳಬ್ಬರು ಈಗಾಣ ಪ್ಯಾಕೇಟ್ ಅಡಿಗೆಗವಕ್ಕೆ ಅನಿವಾರ್ಯವಾಗಿ ಹೊಂದಿಗೊಂದು ಹೋಯೆಕ್ಕಕ್ಕು …..

    1. ಎರುಂಬುಅಪ್ಪಚ್ಚೀ..
      ನವಿರಾದ ನೆಗೆಯೊಟ್ಟಿಂಗೆ ಚೆಂದಕೆ ತೊಳದು ಮಡಗಿದ್ದಿ, ಈಗಾಣೋರ ಸಂಸ್ಕಾರವ.
      ಕಲಿಶಲೆ ಅಬ್ಬೆಕ್ಕಗೆ ಮನಸ್ಸು ಬಂದರೆ ಕಲಿಯಲೆ ಮಕ್ಕೊಗೂ ಮನಸ್ಸು ಬಕ್ಕು – ಅಲ್ಲದೋ?
      ಶಾಲಗೆ ಹೋವುತ್ತರ ಎಡಕ್ಕಿಲಿಯೂ ಹಳೆ ಅಡಿಗೆಗಳ ಕಲ್ತ ಕೆಲವು ಜೆನ ನಮ್ಮ ಬೈಲಿಲಿಯೇ ಇದ್ದವು. ಅವರ ಕಂಡ್ರೆ ಒಪ್ಪಣ್ಣಂಗೆ ಅಭಿಮಾನ ಇದ್ದು.

      ಸಕಾಲಿಕ ಒಪ್ಪಕ್ಕೆ ಒಂದೊಪ್ಪ! 🙂

  11. ಬರದ್ದದು ಬಾರೀ ಲಾಯಿಕಾಯಿದು ಒಪ್ಪಣ್ಣೋ…..
    ಮೇಗೆ ಎರಡಡಿಗೆ ಹೇಳಿ ಓದಿಯಪ್ಪಗ ಮನೆ ಎರಡಾದ್ದದೋ ಹೇಳಿ ಗ್ರೇಶಿದೆ ಆದರೆ ಮನೆ ಎರಡಾದ್ದಲ್ಲ ಹೇಳಿ ಗೊಂತಾದಪ್ಪಗ ಸಮಾದಾನ ಆತು. ಅಪ್ಪು ಒಪ್ಪಣ್ಣೋ ಇಂದ್ರಾಣ ದಿನಲ್ಲಿ ಮನೆಲಿದ್ದೋರು ಎಲ್ಲಾ ಹೆರ ಹೋಗಿ ದುಡಿತ್ತ ಕಾರಣ ಎರಡೆರಡು ಬಗೆ ಅಡಿಗೆ ಮಾಡಿಗೊಂಡು ಕೂಪ ಪುರುಸೊತ್ತು ಆರಿಂಗಿದ್ದು? ಬ್ರೆಡ್ ಜಾಮು ಆದರೂ ಆವುತ್ತು ಅಲ್ಲದ್ದರೆ ಓರ್ಡರು ಮಾಡೀರೆ ಪಿಜ್ಜಾ ಬತ್ತಿದಾ ಅದೇ ಸಾಕಾವುತ್ತು.(ಹೇಂಗಾದರೂ ಬೆಗರು ಅರುಶಿ ಮಾಡ್ತ ಕೆಲಸ ಅಲ್ಲನ್ನೇ) ಅದೇ ಅಭ್ಯಾಸ ಆಗಿ ಎಲ್ಲಿಯಾದರೂ ಜೆಂಬ್ರಕ್ಕೆ ಹೋದರುದೇ ಒಂದೇ ಬೆಂದಿಲಿ ಊಟ ಮುಗಿತ್ತಿದ, ಹಾಂಗಾಗಿಯೇ ಹೇಳಿ ಕಾಣ್ತು ಜೆಂಬ್ರಕ್ಕೆ ಬಂದವರ ಎಲ್ಲೋರ ಊಟ ಆದರುದೇ ಮಾಡಿದ ಅಡಿಗೆ ಯೆಲ್ಲಾ ಹಾಂಗೇ ಉಳಿತ್ತದು……..
    ಹೇಳಿದಹಾಂಗೆ ಮೊಳಪ್ಪು ಬೇನಗೆ ಹಾಕುತ್ತ ಲೇಪವ ಮೊಟ್ಟೆಲಿ ಅರದೇ ಹಾಕೆಕ್ಕು ಹೇಳಿ ಇಲ್ಲೆ ಅಡಾ ಲೋಳೆರಸಲ್ಲಿ ಅರದು ಹಾಕೀರುದೇ ಆವುತ್ತಡ,ಲೋಳೆರಸಕ್ಕುದೇ ಮೊಟ್ಟೆದೇ ಪವರು ಇದ್ದಡಾ ಅಣ್ಣೋ….ಹಾಂಗೆ ಎನ್ನಮಾವ ಹೇಳಿಗೊಂಡು ಇತ್ತಿದ್ದವು.

    1. ಏ ಪ್ರಸಾದಣ್ಣೊ., ರಂಗಮಾವ ಅಲ್ಲದ್ದೇ ಮಾಲಿಂಗ ಮಾವ ಹೇಳಿದ್ದರ ಕೇಳುತ್ಸೋ, ಮಂಗಳೂರ ಡಾಕುಟ್ರಕ್ಕೊ ಹೇಳಿದ್ದರ ಕೇಳುತ್ಸೋ ಅಲ್ಲ ಎಲ್ಲದಕ್ಕೂ ತಲೆ ಆಡ್ಸುವ ಶಾಂಭಾವನ ಒಪ್ಪುತ್ತದೋ ಹೇಳಿ ಗೊಂದಲಲ್ಲಿ ಇದ್ದವು. ನಿಂಗೊ ಎಂತಕೆ ಈಗ ಲೋಳೆರಸ, ಇನ್ನೊಬ್ಬ ಇನ್ನು ಬಂದು ತ್ಯಾಂಪಣ್ಣನ ಎಣ್ಣೆ ಹೇಳಿ ಕನ್ಪ್ಯೂಸ್ ಮಾಡುಸ್ಸು ಹು. ಏ. ಏವುದಿದ್ದು ಅರದು ತಿಕ್ಕಲೆ. ಪಾತಿ ಅತ್ತಗೂ ಎಡಿತ್ತಿಲ್ಲೆ ಅಲ್ಲದಾ!

      1. ಕನ್ಫ್ಯುಸ್ ಮಾಡುಲೆ ಹೇಳಿ ಹೇಳಿದ್ದದು ಅಲ್ಲ ಬಾವಾ…….ಈಗ ಕೆಲವು ಜನಕ್ಕೆ ನಕ್ಕಲೆ ಬೇಕಾವುತ್ತಿದಾ ಹಾಂಗಾಗಿ. ಲೋಳೆರಸ ಅದರೆ ಕೈಕ್ಕೆ ಅಲ್ಲದೋ ಅದರ ನಕ್ಕುಲೆ ಎಡಿಯನ್ನೆ ಹಾಂಗಾಗಿ ಹೇಳಿದ್ದು. ಪಾತಿಅತ್ತೆಯ ಕಾಲಿಂಗೆ ಲೇಪಹಾಕುತ್ತ ಹೆಳೆಲಿ ಮಕ್ಕೊ ಮೊಟ್ಟೆ ತಿಂಬದು ಬೇಡ ಹೇಳ್ತದು ಎನ್ನ ಉದ್ದೇಶ ಅಶ್ಟೇ………

        1. ಪ್ರಸಾದಣ್ಣಾ,
          ಹಸಿ ಮೈದ ಹಿಟ್ಟಿನ ಪಿಜ್ಜವ ತಿಂದು ಹುಳಿತೇಗು ತೆಗೇಕಾದ ಪರಿಸ್ಥಿತಿ ಪೇಟೆಗಳಲ್ಲಿ ಬಯಿಂದು. ಒಳ್ಳೆ ಸಂದರ್ಭಲ್ಲಿ ನೆಂಪುಮಾಡಿದಿ.

          ಞೋಳಿಸರ, ಮಾಲಿಂಗಮಾವನ ಲೇಪ, ಎಣ್ಣೆ – ಎಲ್ಲ ಹೇಳುವಗ ನೆಂಪಾತು – ಮಜಲುಕೆರೆ ಎಣ್ಣೆಯುದೇ ಆವುತಿತಪ್ಪೋ?
          ಇನ್ನು ಆ ಶುದ್ದಿ ತೆಗೇಡಿ, ಚೆನ್ನೈಭಾವಂಗೆ ಪಿಸುರು ಬಕ್ಕು.

          ತ್ಯಾಂಪಣ್ಣ ಹೇಳುವಗ ನೆಂಪಾತು, ಅಜ್ಜಕಾನಬಾವಂಗೆ ಪೋಡಿ ಕಾಸಿಕೊಡುದು ಇದೇ ಬೇನೆ ಎಣ್ಣೆಲಿಯಾ? 😉

  12. ಎಂದಿನಂತೆ ಇಂದೂ ಶುದ್ದಿ ಪಸ್ಟಾಯಿದು ಹೇಳಿ ಮದಾಲು ಒಂದೊಪ್ಪ.
    [ರಂಗಮಾವಂಗೆ ಏವತ್ತು ಮೊಳಪ್ಪುಬೇನೆ ಜೋರಾತೋ, ಆ ದಿನಂದ ಪಾತಿಅತ್ತೆಗೂ ಮೊಳಪ್ಪು ಕಟ್ಟಿಹಾಕಿದ ನಮುನೆ ಆಯಿದು.] – ಸಂಸಾರ ಹೇಳ್ವ ಜೀವನ ಬಂಡಿಲಿ ಎರಡು ಚಕ್ರಂಗಳೂ ಏಕಪ್ರಕಾರ ಆಗಿ ಇರೆಕ್ಕು. ಒಂದು ಸಾಂಚಿರೆ ಇನ್ನೊಂದೂ ವಾಲುತ್ತು ಹೇಳಿ ಉತ್ತಮ ನಿರೂಪಣೆ.
    [ಹನ್ನೆರಡು ಸರ್ತಿ ಕೇಳ್ತನಾಡ ಅಜ್ಜನ ಕೈಲಿ.] – ಎಂತಾ ಭಾವೋದ್ವೇಗದ ಕುಟುಂಬ! ಕುಟುಂಬ ಹೇಳ್ವ ಸ್ವಾರಸ್ಯ ಇಪ್ಪದು ಇದರ್ಲೇ. ರೂಪತ್ತಗೆ ಎಂದಿಂಗೆ ಅರ್ಥ ಅಕ್ಕೋ ಇದು.!
    [ಅಜ್ಜನ ಒಟ್ಟಿಂಗೆ ಪುಳ್ಳಿ ಇದ್ದರೆ…….] – ಮಕ್ಕೊಗೆ ಸಂಸಾರ ಪ್ರೀತಿ ಸಿಕ್ಕುವದು ಇಲ್ಲಿಯೇ ಅಲ್ಲದೋ ಮತ್ತೆ. ಒಟ್ಟಿಂಗೆ ಹಲವೊಂದು ಕಥೆ, ಕ್ರಮ , ನಿಯಮ – ನಿಷೇಧಂಗಳ ಪಾಠ ದೊರಕುವ ಸೌಲಭ್ಯ.
    [ಶಾಂಬಾವಂಗೆ ಮದಲೇ ಅಕ್ಕು ಈ ಹೊಸ ಅಡಿಗೆಗೊ]- ಕೆಣಿಯಾ!
    ನಿಂಗಳ ವಿದ್ಯಕ್ಕನ ಒಂದರಿ ರೂಪತ್ತೆ ಒಟ್ಟಿಂಗೆ ಬೆಂಗಳೂರಿಂಗೆ ಒಂದು ಹತ್ತು ದಿನಕ್ಕೆ ಕಳ್ಸೆಕ್ಕಾತಪ್ಪೋ!. ವಾಪಸ್ಸು ಬಪ್ಪಗ ಬ್ರೆಡ್ ಜಾಮು ಆವ್ತಿತ್ತೊ ಮತ್ತೆ ಮುಂದಕ್ಕೆ ಅಡಿಗೆ!! ಕಾಲ ಬದಲಾದಾಂಗೆ ಕೋಲ ಹೇಳ್ವದು ಸರಿ ಅಪ್ಪಾದರೂ ಪ್ರಾಯದೋರ ಮನಸ್ಸು ಬೇನೆ ಮಾಡ್ಳಾಗ ಹೇಳ್ವದರ ಮರವಲಾಗ. ಅಡಿಗೆ ಎರಡು ಆದರೂ ಮನೆ ಎರಡು ಆಯ್ದಿಲ್ಲೆ ಈ ಶುದ್ಧಿಲಿ ಹೇಳಿ ಹೇಳ್ವ ಸಮಾಧಾನ ಇದ್ದು.
    ಕಡೇಂಗೆ ಒಪ್ಪ ಲಾಯ್ಕ ಆಯ್ದು ಹೇಳಿಗೊಂಡು ಇಲ್ಲಿಂದಲೂ ಒಂದೊಪ್ಪ.

    1. ಮದಾಲಾಣ ಒಂದೊಪ್ಪಕ್ಕೆ ಚೆನ್ನೈಬಾವಂಗೆ ಒಂದೊಪ್ಪ!
      ಶುದ್ದಿಯ ಗೆರೆಗಳ ಹೆರ್ಕಿ, ಪೂರಕ ಮಾತುಗಳೊಟ್ಟಿಂಗೆ ಕೊಶಿಯ ತೋರುಸಿದ ಒಪ್ಪವ ಕಂಡು ಮನಸ್ಸು ತುಂಬಿತ್ತು.
      ಬ್ರೆಡ್ಡು-ಜೇಮಿನ ಕತೆಗೆ ಎತ್ತುತ್ತೋ ಏನೋ ಮುಂದೆ; ಇದೇ ನಮುನೆಲಿ ಹೋದರೆ.
      ಕಾಲಬದಲಾದಾಂಗೆ ಕೋಲ; ಆದರೆ ಮೂಲವ ಬಿಟ್ರೆ ಎಲ್ಲ ಕೋಲವೂ ಪುಸ್ಕ ಅಕ್ಕು – ಹೇಳ್ತದು ರಂಗಮಾವನ ಅನಿಸಿಕೆ!
      ಹರೇರಾಮ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×