ಆತಿಥ್ಯಕ್ಕೆ ಷರತ್ತು ಇಪ್ಪಲಾಗ!!

October 21, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆಂದ ಜೋರು ಜೋರು ಪೇಪರುಗಳಲ್ಲಿ ಬತ್ತಾ ಇದ್ದು – ಉಡುಪಿಯ ಗಲಾಟೆಯ ಬಗ್ಗೆ.
ಉಡುಪಿ ಮಠಲ್ಲಿ ಬಟ್ಟಕ್ಕೊಗೆ ಬೇರೆ ಹಂತಿ ಹಾಕುತ್ತವು – ಹೇಳ್ತ ಕಾರಣವ ಮುಂದೆ ಮಡಗಿ ದೊಡಾ ವಿರೋಧ ಕಾರ್ಯಕ್ರಮವ ಕಮ್ಮಿನಿಷ್ಠೆಯೋರು ಮಡಗಿಂಡವು ಅಪ್ಪೋ;
ಅದಕ್ಕೆ ಸಮಾನ ಮನಸ್ಕ ಪ್ರಗತಿಪರರು ಹಲವೂ ಜೆನ ಬಂದು ಸೊರುಗಿ ಬಿದ್ದಿತ್ತಿದ್ದವು.
ಮುಖ್ಯಮಂತ್ರಿ ಕಛೇರಿಯ ನೇರ ಸಂಬಂಧ ಇಪ್ಪ ಕೆಲವು ಜೆನಂಗಳಿಂದ ಹಿಡುದು, ಈಗ ಬೇಲೆ ಇದ್ಯಾಂತಿನ ಹವು ನೇತಾರಂಗೊ ಆ ದಿನ ಸೇರಿ ಭಾಷಣ ಬಿಗುದ್ದವು.
ಕಾರ್ಯಕ್ರಮದ ಹೆಸರೇ – ಚಲೋ ಉಡುಪಿ – ಹೇಳಿ ಅಡ.
~
ಮಠಲ್ಲಿ ಮೂರು ನಮುನೆ ಹಂತಿ ಇದ್ದಾಡ.

ಒಂದನೇದಾಗಿ, ಆ ದಿನ ಸೇವೆ ಮಾಡುಸಿದ ಸೇವಾಕರ್ತರಿಂಗೆ.
ಎರಡನೇದು – ಸಾರ್ವಜನಿಕ ಊಟ.
ಮೂರ್ನೇದು – ಮಠ, ದೇವಸ್ಥಾನಲ್ಲಿ ಪೂಜಾ ಕೈಂಕರ್ಯಂಗಳ ನೆಡೆಶುವ ಶುದ್ಧಲ್ಲಿ ಇಪ್ಪ ಭಟ್ಟಮಾವಂದ್ರಿಂಗೆ.

ಚಲೋ ಉಡುಪಿ ಮಾಡ್ತೋರಿಂಗೆ ಬೇಕಪ್ಪದು ಈ ಮೂರ್ನೇ ಹಂತಿಯ ಊಟ.
ಆರು ನ್ಯಾಯ ನಿಷ್ಠೆಲಿ ಇದ್ದುಗೊಂಡು ಶುಭ್ರ ಮನಸ್ಸಿಲಿ ದೇವಪೂಜೆ ಮಾಡ್ತವೋ – ಅವಕ್ಕಾಗಿ ಇಪ್ಪ ಪ್ರತ್ಯೇಕ ಹಂತಿಯ ಊಟ ಈ ಬೆಗುಡಂಗೊಕ್ಕೆ ಬೇಕಪ್ಪದು.
ಎಂತಕೆ ಅದೇ ಹಂತಿ ಆಯೆಕ್ಕು!? ಅದು ಅವಕ್ಕೂ ಗೊಂತಿಲ್ಲೆ. ಆದರೆ ಅದೇ ಹಂತಿ ಆಯೆಕ್ಕು.
~
ಸಾರ್ವಜನಿಕ ಹಂತಿ – ಹೇದರೆ ಮಠಕ್ಕೆ ಬಪ್ಪ ಅಷ್ಟೂ ಅನ್ನಾಶ್ರಿತರಿಂಗೆ ಹೊಟ್ಟೆ ತುಂಬುಸುವ ವೆವಸ್ತೆ. ಇದಕ್ಕೆ ಜಾತಿ ಮತ ಭೇದ ಇಲ್ಲೆ. ಆರೆಲ್ಲ ಕೃಷ್ಣಭಕ್ತರಾಗಿ ಬತ್ತವೋ – ಅವಕ್ಕೆಲ್ಲರಿಂಗೂ ಧರ್ಮಾರ್ಥ ಊಟ. ಕೃಷ್ಣನ ಅನ್ನ ಪ್ರಸಾದ.
ಇದಕ್ಕೆ ಬಳುಸುಲೆ ಬಪ್ಪದುದೇ ಒಂದು ಸೇವೆ. ಎಷ್ಟೋ ಜೆನ ಬೇಂಕಿಲಿ ಇಪ್ಪೋರು, ಶಾಲೆಲಿ ಕೆಲಸ ಮಾಡ್ತೋರು, ವಿದ್ಯಾರ್ಥಿಗೊ ಬಂದು – ಇಲ್ಲಿ ಬಳುಸುವ ಸೇವೆ ಮಾಡ್ತವು.
~
ಸೇವಾಕರ್ತರಿಂಗೆ ಒಂದು ವಿಶೇಶ ಹಂತಿ ಇರ್ತು.
ಅದೇಕೇ ಹೇದರೆ – ಅವು ಶುದ್ಧಲ್ಲಿ ಸೇವೆಗೆ ಕೂರೆಕ್ಕಾವುತ್ತು, ದೇವಸ್ಥಾನಲ್ಲಿ ಕಿಟ್ಟಿ-ಮುಟ್ಟಿ ಮಾಡೇಕಾವುತ್ತು. ಈ ಕಾರಣಂದ ಅವರ ಪ್ರತ್ಯೇಕ ಕೂರ್ಸುದು. ಇಲ್ಲಿ ಜಾತಿ ಕೇಳ್ತವಿಲ್ಲೆ. ಆರೆಲ್ಲ ಕೃಷ್ಣಂಗೆ ಸೇವೆ ಕೊಡ್ತವೋ, ಅವಕ್ಕೆಲ್ಲೋರಿಂಗೂ ಈ ಮುಖ್ಯ ಅತಿಥಿ ಊಟ ಇದ್ದೇ ಇದ್ದು.
~
ಮಠಲ್ಲಿ ಬಟ್ಟಮಾವಂದ್ರ ಊಟದ ಹಂತಿ ಹೇಳಿದೆ ಅಲ್ದೋ – ಆ ಹಂತಿಲಿ ಒಳುದ ಇತರರಿಂಗೆ ಪ್ರವೇಶ ಇಲ್ಲೆ. ಸನಾತನ ರೀತಿಲಿ ಶುದ್ಧಲ್ಲಿ ಬ್ರಹ್ಮವಸ್ತ್ರ ಹಾಂಗೆ ಬತ್ತೋರಿಂಗೆ ಇಪ್ಪ ಹಸ್ತೋದಕ ಹಂತಿ ಅದು.
ಉಡುಪಿ ಮಠದ ಬಟ್ಟಮಾವನ ಖಾಸಾ ಅಪ್ಪನೇ, ಅಥವಾ ಮಗನೇ – ಶುದ್ಧಲ್ಲಿ ಇಲ್ಲೆ ಹೇದಾದರೆ, ಅವಂಗೆ ಆ ಹಂತಿಗೆ ಪ್ರವೇಶ ಇಲ್ಲೆ. ಸುರುವಾಣ ಸಾರ್ವಜನಿಕ ಹಂತಿಲೇ ಆತಷ್ಟ. ಸರಿಯಾದ ನಿಷ್ಠೆ ನಿಯತ್ತಿಲಿ ಇದ್ದರೆ ಮಾಂತ್ರ ಅವಂಗೆ ಈ ಹಂತಿ ಪ್ರವೇಶ.
ಉದಿಯಪ್ಪಗ ಎದ್ದುಗೊಂಡು ಜೀನ್ಸು ಪೇಂಟು ಸುರ್ಕೊಂಡು, ಹೋಟ್ಳಿಲಿ ತಣ್ಣನೆ ಉಂಡಿಕ್ಕಿ, ಎಂಜಲು ಗ್ಲಾಸಿಲಿ ಕಾಪಿ ಕುಡುದಿಕ್ಕಿ, ಮಠಕ್ಕೆ ಬಂದು – ಎನಗೆ ಶುದ್ಧ ಹಂತಿಯೇ ಆಯೇಕು – ಹೇದರೆ ಕೇಳುವೋನು ಆರಿದ್ದ ಬೇಕೆ!
ಆರೂ ಇರ್ತವಿಲ್ಲೆ.
ಮೊನ್ನೆ ಆದ್ದೂ ಇದುವೇ.
~
ಅದೇ ಕಾರ್ಯಕ್ರಮಕ್ಕೆ ಚಲೋ ಉಡುಪಿ – ಹೇದು ಹೆಸರು ಮಡಗಿದವು.
ಹತ್ತು ಐವತ್ತು ಜೆನ ಬೇಲೆ ಇದ್ಯಾಂತಿನ ಗಿರಾಕಿಗಳ ಪೈಶೆ ಕೊಟ್ಟು ಬರುಸಿ, ಉಡುಪಿಲಿ ಕೂರ್ಸಿ ಭಾಶಣ ಮಾಡಿದ್ದೇ ಮಾಡಿದ್ದು. ಬ್ರಾಹ್ಮಣರ ಹಂತಿಂದಾಗಿ ಜಾತಿವಾದ ಅದು ಇದು – ಹೇದು ಬಿಗುದ್ದೇ ಬಿಗುದ್ದು.
ಅದಕ್ಕೆ ಕೆಲವು ಪತ್ರಿಕೆಗಳೂ ಜಾಗೆ ಮಾಡಿ ಕೊಟ್ಟವು.
~
ಅಲ್ಲಿ ಇದು ದೊಡ್ಡ ಸಂಗತಿ ಆಯಿದಿಲ್ಲೆ. ಆದರೆ ಇವರ ಹೀಂಗಿರ್ಸ ಪೆದಂಬಿಂಗೆ ಊರಿಡೀ ದೊಡ್ಡ ಚಿಂತನೆಗೊ, ಕ್ರಾಂತಿಗೊ ಎದ್ದು ಬಂತು.
~
ಎಂಗೊ ಕೇಳ್ತಾ ಇಪ್ಪದು ಸೌಹಾರ್ದತೆ. ಎಂಗೊಗೂ ಉಂಬಲೆ ಧಾರಾಳ ಇದ್ದು, ಊಟಕ್ಕಿಲ್ಲದ್ದೆ ಕೇಳುದಲ್ಲ.
ಆದರೆ ನಿಂಗಳೊಟ್ಟಿಂಗೆ ಕೂದು ಹೃದಯಕ್ಕೆ ಹತ್ತರೆ ಆವುತ್ತೆಯೋ° – ಹೇದು ಕೆಲವು ಜೆನ ಡೋಂಗಿಗೊ ಭೋಂಗು ಬಿಟ್ಟವು.
ಆದರೆ, ಹೀಂಗೆ ಬೆಲಕ್ಕಿರೆ ಆರುದೇ ಹೃದಯಕ್ಕೆ ಹತ್ತರೆ ಆವುತ್ತವಿಲ್ಲೆ. ಬದಲಾಗಿ, ಎಲ್ಲೋರುದೇ ದೂರವೇ ಅಪ್ಪದಷ್ಟೆ.
ಆರಾರು ಮನೆಗೆ ನಮ್ಮ ಬಪ್ಪಲೆ ಹೇಳಿರೆ, ಅವರ ಮನೆಲಿ ಉಂಡಿಕ್ಕಿ ಬರೆಕ್ಕೇ ವಿನಃ, ಆನು ನಿಂಗಳ ಅಡಿಗೆ ಕೋಣೆಲೇ ಕೂರ್ತೆ, ನಿಂಗಳ ಮಗಳೊಟ್ಟಿಂಗೇ ಉಂಬಲೆ ಕೂರ್ತೆ, ಹೃದಯಕ್ಕೆ ಹತ್ತರೆ ಆವುತ್ತೆ – ಹೇದರೆ ಆರಾರು ನೆಗೆ ಮಾಡುಗು. ಇದೂ ಅದೇ ಸಂಗತಿ.
ಕೆಲವೆಲ್ಲ ಸಮಾಜದ ಕಟ್ಟುಪಾಡಿನ ಅದೇ ರೀತಿ ಒಳಿಶಿಗೊಂಡು ಬರೆಕ್ಕು.
ಕೆಲವು ದೇವಸ್ಥಾನ, ಮಠಂಗಳಲ್ಲಿ ಪ್ರಥಮ ಊಟ ಅಲ್ಯಾಣ ದೇವರ ಚಾಕರಿಗಾರಂಗೊಕ್ಕೆ ಇರ್ತು. ಅದರ ಬದಲುಸಿ, ಇಲ್ಲೆ – ಎಂಗೊಗೆ ನಿಂಗಳ ಹೃದಯಕ್ಕೆ ಹತ್ತರೆ ಆಯೆಕ್ಕು,
ಊಟ ಮೊದಾಲು ಎಂಗೊಗೆ ಬಳುಸಿ – ಹೇದರೆ ಆರಾರು ಇವಂಗೆ ಎರೆಪ್ಪು – ಹೇದು ಮುಂದೆ ನೆಡಗು.
~
ಇದು ಬ್ರಾಹ್ಮಣರ ಹಂತಿಗೆ ಮಾಂತ್ರ ಅಲ್ಲ.
ಕೆಲವು ತರವಾಡು ಮನೆಗಳಲ್ಲಿ / ಗುತ್ತಿನ ಮನೆಗಳಲ್ಲಿ ಭೂತ ಕೋಲದ ಆಚರಣೆ ಇಪ್ಪ ದಿನ – ಅಲ್ಲಿ ಭೂತ ಕಟ್ಟುವ ಜೆನ ಉಂಡಾಗದ್ದೆ ಮನೆ ಎಜಮಾನ ಯೇವ ಜಾತಿಯೇ ಆದರೂ – ಉಂಬಲಿಲ್ಲೆ.
ಹಾಂಗಾರೆ – ಇಲ್ಲೆ, ಎಂಗೊ ಹೃದಯಕ್ಕೆ ಹತ್ತರೆ ಆಯೇಕು – ಹೇದು ಆ ಭೂತಕಟ್ಟುಅದರ ಒಟ್ಟಿಂಗೆ ಕೂದು ಮುಕ್ಕಿರೆ, ಭೂತ ದರುಸಿ ಶಾಪ ಕೊಡುಗು.
~
ಇದೆಲ್ಲ ನಮ್ಮ ಊರಿನ ನಡಾವಳಿಗೊ. ನಾವದರ ಬದಲುಸಿರೆ ಅದು ಬೆಳವಣಿಗೆ ಆವುತ್ತಿಲ್ಲೆ, ಬದಲಾಗಿ ಕಮ್ಮಿನಿಷ್ಠೆಯ ಒಂದು ಕೆಟ್ಟ ಪ್ರಚೋದನೆ ಆವುತ್ತು.
ನಮ್ಮ ಊರು ಬೆಳದು, ಒಳುದು ಬಂದದೇ ಹೀಂಗಿರ್ಸ ಅಮೋಘ ಆಚರಣೆಗಳಿಂದ.
ಅದರ ಚೆಂದಕೆ ಒಳುಶಿಗೊಂಡು ಬಂದದೇ ನಮ್ಮ ಕೈಲಿ ಆಯೇಕಾದ ಮಹಾನ್ ಕಾರ್ಯ.
ಪೂರ ಪಾಶ್ಚಾತ್ಯರ ಅನುಸರಣೆ ಮಾಡಿರೆ ನಮ್ಮತನ ಒಳಿವದೆಲ್ಲಿ!?
~
ಆರೇ ಎಂತದೇ ಮಾಡಲಿ – ಕೃಷ್ಣಪೂಜೆ ಎಥಾವತ್ತಾಗಿ ನೆಡಕ್ಕೊಂಡು ಮೂಂದುವರುದ್ದು. ಅದು ನಿಂದಿದೂ ಇಲ್ಲೆ, ನಿಲ್ಲುತ್ತೂ ಇಲ್ಲೆ.
~
ಒಂದೊಪ್ಪ: ಉಡುಪಿಗೆ ಕಂಸ ಆಗಿ ಬಪ್ಪ ಬದಲು ಕನಕ ಆಗಿ ಬಪ್ಪದು ನವಗೊಳ್ಳೆದು.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಪುಣಚ ಡಾಕ್ಟ್ರು

  ಒಟ್ಟಾರೆ ಪ್ರಗತಿ ಹೆಸರಿಲಿ ಅನಾಚಾರ ಮಾಡುದು ಅಷ್ಟೇ
  ದಾರಿಲಿ ಕೊಳಕ್ಕು ಮಾಡಿ ಆದರೂ ಅಪ್ಪಂಗೆ ಹೆಸರು ತರೆಕ್ಕು ಹೇಳುವ ಜಾತಿ ಇವರದ್ದು

  [Reply]

  VN:F [1.9.22_1171]
  Rating: 0 (from 0 votes)
 2. ಅವರ ಬಟ್ಟಕ್ಕಳ ಹಂತಿಲಿ ಕೂರಿಸೆಕ್ಕು. ಎಂಗ ಹೇಳದ್ದೆ ಉಂಬಲೆ ಸುರುಮಾಡ್ಲಾಗ ಹೇಳಿ ಹೇಳೆಕ್ಕು. ಮತ್ತೆ ಎಲ್ಲೋರಿಂಗೂ ಎಲ್ಲ ಬಗೆಯು ಬಳುಸಿ ಆದ ಮೇಲೆ ಬಟ್ಟಕ್ಕೊ ರುದ್ರ ಹೇಳುಲೆ ಸುರುಮಾಡೆಕ್ಕು. ಸುಮಾರು 2-3 ಘಂಟೆ ವೇದ ಘೋಷ ಮಾಡಿಗೊಂಡು ಇರೆಕು. ಆಗ ನಿಂಗಳೊಟ್ಟಿಂಗೆ ಉಣ್ಣೆಕ್ಕು ಹೇದವು ಹಶುವಾಗಿ ಎದ್ದು ಓದುಗು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಅಕ್ಷರದಣ್ಣನೆಗೆಗಾರ°ಡಾಮಹೇಶಣ್ಣಡೈಮಂಡು ಭಾವಕೇಜಿಮಾವ°ವೆಂಕಟ್ ಕೋಟೂರುಅಕ್ಷರ°ಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಕಜೆವಸಂತ°ಅನು ಉಡುಪುಮೂಲೆವೇಣೂರಣ್ಣಚುಬ್ಬಣ್ಣಬಟ್ಟಮಾವ°ವಿದ್ವಾನಣ್ಣಚೆನ್ನೈ ಬಾವ°ಸುವರ್ಣಿನೀ ಕೊಣಲೆಹಳೆಮನೆ ಅಣ್ಣವೇಣಿಯಕ್ಕ°ಗೋಪಾಲಣ್ಣvreddhiದೇವಸ್ಯ ಮಾಣಿದೊಡ್ಡಭಾವನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ