ಅವಿಚ್ಛಿನ್ನ ಮಠದ ಶಾಸ್ತ್ರಿಗೊಕ್ಕೂ ಅವಿಚ್ಛಿನ್ನ ಪರಂಪರೆ ಇರ್ತು!!

ಮೊನ್ನೆ ಮೊನ್ನೆ ಶಿವರಾತ್ರಿಗೆ ಗೋಕರ್ಣಕ್ಕೆ ಹೋಗಿ ಬಂದ್ಸು. ಎಡಪ್ಪಾಡಿ ಬಾವನ ಒಟ್ಟಿಂಗೆ ಹೋದ ಕಾರಣ ದಾರಿಕರ್ಚೂ ಬೇಕಾಯಿದಿಲ್ಲೆ, ಅಸಕ್ಕೂ ಆಯಿದಿಲ್ಲೆ. ಅದಿರಳಿ.

ಶಿವರಾತ್ರಿ ಹೇದರೆ ಅದು ದೊಡಾ ಅಂಬೆರ್ಪಿನ ದಿನ. ಇಡೀ ಊರಿಲೇ ಹಾಂಗೆ, ಇನ್ನು ಗೋಕರ್ಣಲ್ಲಿ ಕಡಮ್ಮೆ ಇರ್ತೋ. ವಿಪರೀತ ರಶ್ಶು.
ದೇವಸ್ಥಾನದ ನಾಲ್ಕೂ ಸುತ್ತು ಇಪ್ಪ ಸಾಲು ಒಂದು ಹೊಡೆ; ಆ ಸಾಲಿನ ಬೀಲ ಸೀತ ಸಮುದ್ರ ಕರೆಂಗೆ ಒರೆಂಗೆ ಎತ್ತಿದ್ದು ಇನ್ನೊಂದು ವಿಶೇಷ.
ಅಂತೂ ಆತ್ಮಲಿಂಗ ದರ್ಶನ ಆತು, ಅಭಿಶೇಕ ಆತು, ಪ್ರಸಾದ ತೆಕ್ಕೊಂಡು ಹೆರ ಬಂದಾತು.
~
ಎಡಪ್ಪಾಡಿ ಬಾವಂಗೆ ಗುರ್ತದವು ಎಲ್ಲಿ ಹೋದರೂ ಸಿಕ್ಕುಗು.
ಎಲ್ಲಿ ಬೇಕಾರೂ ಸಿಕ್ಕುತ್ತವು, ಇನ್ನು ಗೋಕರ್ಣಲ್ಲಿ ಸಿಕ್ಕದ್ದೆ ಇರ್ತವೋ. ಅಲ್ಯಾಣ ಆಡಳ್ತೆ ನೋಡಿಗೊಂಬ ಬೆಳಿ ಗೆಡ್ಡದ ಮಾವನೇ ಸಿಕ್ಕಿದವು.
ಅವರ ಆಪೀಸಿಲಿ ಮಾತಾಡ್ಸಿದವು.

ಅಷ್ಟಪ್ಪಗ ಬಂದ ಒಂದು ಶುದ್ದಿ – ನಮ್ಮ ಮಠದ ಶಾಸ್ತ್ರಿಗೊಕ್ಕೆ ಉಶಾರಿಲ್ಲೆ’ಡ – ಹೇದು.
~
ಮಠದ ಶಾಸ್ತ್ರಿಗೊ:
ನಮ್ಮ ಮಠ ಹೇದರೆ ಶಂಕರ ಪೀಠ.
ಗುರು ಪೀಠ ಹೇಳಿದ ಮತ್ತೆ ಸಾಕಷ್ಟು ಅನುಷ್ಠಾನಂಗೊ, ಧಾರ್ಮಿಕ ಕಾರ್ಯಕ್ರಮಂಗೊ ಇರ್ತು ಅಪ್ಪೋ.
ಕಾರ್ಯಕ್ರಮಂಗೊ ಇಪ್ಪಾಗ ಆಚಾರ ವಿಚಾರ ಶಾಸ್ತ್ರಂಗೊ ಇರ್ತು, ಅಪ್ಪೋ.
ಶಾಸ್ತ್ರಂಗೊ ಇಪ್ಪಲ್ಲಿ ಶಾಸ್ತ್ರಿಗಳೂ ಇರ್ತವು.
ಅವಿಚ್ಛಿನ್ನ ಪರಂಪರೆಯ ಗುರುಪೀಠದ ಒಟ್ಟಿಂಗೆ ಶಾಸ್ತ್ರಿಗಳೂ ಸದಾ ಕಾಲಲ್ಲೂ ಇತ್ತಿದ್ದವು.
ಅವಿಚ್ಛಿನ್ನವಾಗಿ ಶಾಸ್ತ್ರಿಗಳ ಪಟ್ಟವೂ ಇದ್ದತ್ತು.
~

ಶಾಸ್ತ್ರಂಗಳ ಅಧ್ಯಯನ ಮಾಡುದು;
ಕಾಲಕಾಲಕ್ಕೆ ಶಾಸ್ತ್ರಂಗಳ ಶಿಷ್ಯಸಮಾಜಕ್ಕೆ ತಿಳಿಶುದು;
ಅನುಷ್ಠಾನ ಕರ್ಮಂಗಳ ನಿಖರವಾಗಿ ಮಾಡುಸುದು;
ಶ್ರೀಕರಾರ್ಚಿತ ಪೂಜೆಗೆ ಮುಖ್ಯವಾಗಿ ಏರ್ಪಾಡು ಮಾಡುದು;
ಶ್ರೀಪಾದುಕಾ ಪೂಜೆ, ಗುರುಭಿಕ್ಷೆಯ ನೆರವೇರುಸಿ ಪ್ರಸಾದ ಕೊಡುಸುದು – ಇತ್ಯಾದಿ ಹಲವೂ ಜೆವಾಬ್ದಾರಿಗೊ ಶಾಸ್ತ್ರಿಗಳದ್ದು.
ಆರಿಂಗಾರು ಏನಾರು ಸಮಸ್ಯೆ ಬಂದರೆ, ಅವರ ಜಾತಕ ನೋಡಿ ಪರಿಹಾರ ಹೇಳ್ತದುದೇ ಶಾಸ್ತ್ರಿಗಳ ಒಂದು ಕೆಲಸ ಆಗಿದ್ದತ್ತು.
ಶಾಸ್ತ್ರಿಗೊ ಹೇದರೆ ಗುರುಗಳ ನೇರ ಪ್ರತಿನಿಧಿ.
ಹಾಂಗಾಗಿ, ಆರಿಂಗಾರು ಪಕ್ಕನೆ ಗುರುಗಳ ಕಾಂಬಲೆ ಎಡಿಯದ್ರೆ ಶಾಸ್ತ್ರಿಗಳ ಕೈಂದ ಶ್ರೀಕರಾರ್ಚಿತ ಪ್ರಸಾದ ತೆಕ್ಕೊಂಬ ಕ್ರಮ ಇದ್ದು.
~

ಇದೆಲ್ಲ ಅಂಬಗ ಎಂತ್ಸಕೆ ನೆಂಪಾತು ಹೇದರೆ, ನಮ್ಮ ಮಠದ ಶಾಸ್ತ್ರಿಗೊ ಆಗಿದ್ದ ಉಂಚಗೇರಿ ಸುಬ್ರಹ್ಮಣ್ಯ ಶಾಸ್ತ್ರಿಗೊ ಪ್ರಾಯ ಆಗಿ ದೈಹಿಕ ಅನಾರೋಗ್ಯಲ್ಲಿ ಮನುಗಿದಲ್ಲೇ ಆಗಿತ್ತಿದ್ದವಾಡ.
ಗುರುಗೊ ಶಿವರಾತ್ರಿಯ ಸಮೆಯಲ್ಲಿ ಒಂದರಿ ಹೋಗಿ, ಮನುಗಿದಲ್ಲಿಗೇ ಮಂತ್ರಾಕ್ಷತೆ ಹಾಕಿ, ಹರಸಿದವಾಡ – ಹೇದು ಎಡಪ್ಪಾಡಿ ಬಾವನೂ, ಗೋಕರ್ಣಲ್ಲಿ ಸಿಕ್ಕಿದ ಹೆಗಡೇ ಮಾವನೂ ಮಾತಾಡಿಗೊಂಡವು.
ಮನುಗಿದಲ್ಲೇ ಆದ ಒಬ್ಬರ ಹತ್ತರಂಗೇ ಗುರುಪೀಠ ಬಂದು ಆಶೀರ್ವಾದ ಮಾಡೇಕಾರೆ – ಎಂತಾ ಪುಣ್ಯವಂತ ಆಗಿಕ್ಕು ಅಲ್ದೋ!
– ಹೇದು ಮಾತಾಡಿಗೊಂಡವು.
~
ಗೋಕರ್ಣಂದ ಬಂದು ಒಂದೆರಡು ವಾರವೇ ಕಳಾತು.
ನಿನ್ನೆ ಒಂದು ಶುದ್ದಿ ಕೇಳಿತ್ತು, ಶಾಸ್ತ್ರಿಗೊ ಕಾಲವಾದವಾಡ – ಹೇದು.
ಅಯ್ಯೋ! – ಹೇದು ಅನುಸಿತ್ತು ಒಂದರಿ.

ಮೊನ್ನೆ ಮಾತಾಡಿದ್ದರ ಕೇಳಿದ ಮೇಗೆ ಅವರ ಬಗ್ಗೆ ಗೌರವಾಭಿಮಾನ ಇನ್ನೂ ಹೆಚ್ಚಾಗಿತ್ತು.
ನಮ್ಮ ಮಠದ ಮೂವತ್ತ ನಾಲ್ಕನೇ ಶಂಕರಾಚಾರ್ಯರಾದ ಶ್ರೀ ಶ್ರೀ ರಾಮಚಂದ್ರ ಭಾರತೀ ಸ್ವಾಮಿಗಳವರ ಸಮೆಯಲ್ಲಿ ‘ಪುಟ್ಟತಮ’ ಆಗಿ ಬಂದದಾಡ. ಅಷ್ಟಪ್ಪಗಂದಲೇ ಸೇವೆ ಸುರು ಮಾಡಿದ ಶಾಸ್ತ್ರಿಗೊ, ಮೂವತ್ತೈದನೇ ಶಂಕರಾಚಾರ್ಯರಾದ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗೊಕ್ಕೆ ಶಾಸ್ತ್ರಿಗೊ ಆಗಿ ಸೇವೆ ಸಲ್ಲುಸಿದ್ದವಾಡ.
ಅದಾಗಿ, ಮೂವತ್ತಾರನೇ ಶಂಕರಾಚಾರ್ಯರ ಸಮೆಯ ಇದು. ಮೊನ್ನೆ ಮೊನ್ನೆ ಒರೆಂಗೂ ಶಾಸ್ತ್ರಿ ಸ್ಥಾನಲ್ಲಿ ವಿಶೇಷವಾಗಿ ಅಲಂಕರುಸಿಗೊಂಡು ಇತ್ತಿದ್ದವಾಡ ಈ ಹಿರಿಯ ಅಜ್ಜ°.
ಈಗ ಪ್ರಾಯದ ಅಸಹಕಾರಂದಾಗಿ ಸಣ್ಣ ಪ್ರಾಯದ ಶಾಸ್ತ್ರಿಗಳು ಇದ್ದಿದ್ದರೂ, ಈ ಅಜ್ಜನ “ದೊಡ್ಡ ಶಾಸ್ತ್ರಿಗಳು” – ಹೇಳಿಯೇ ಹೇಳಿಗೊಂಡು ಇತ್ತಿದ್ದವಾಡ ಎಲ್ಲೋರುದೇ.

ಗುರುಗಳ ಯಾವ ರೀತಿ ದೊಡ್ಡ ಗುರುಗೊ, ಕಿರಿಯ ಗುರುಗೊ – ಹೇದು ಗುರುತುಸುತ್ತವೋ, ಶಾಸ್ತ್ರಿಗಳಲ್ಲೂ “ದೊಡ್ಡ ಶಾಸ್ತ್ರಿಗೊ”, ಕಿರಿಯ ಶಾಸ್ತ್ರಿಗೊ – ಹೇದು ಗುರುತುಸುವ ಕ್ರಮ ಇದ್ದು.
ಒಟ್ಟಿಲಿ, ಅವಿಚ್ಚಿನ್ನ ಪರಂಪರೆಯ ಗುರುಪೀಠಕ್ಕೆ ಅವಿಚ್ಚಿನ್ನ ಶಾಸ್ತ್ರಿ ಪರಂಪರೆಯೂ ಒಟ್ಟಿಂಗಿರ್ತು.

ಮೂರು ತಲೆಮಾರುಗಳ ಕಾಲ ಗುರುಸೇವೆ ನೆಡೆಶಿ, ನಿನ್ನೆ ಸ್ವರ್ಗಸ್ಥರಾದ ಶಾಸ್ತ್ರಿಗಳದ್ದೂ ಅವಿಚ್ಚಿನ್ನ ಶಾಸ್ತ್ರಿ ಪರಂಪರೆ.
ತನ್ನ ಮತ್ತಾಣ ಶಾಸ್ತ್ರಿಗೊಕ್ಕೆ ಸರ್ವವಿದ್ಯೆಯನ್ನೂ ಧಾರೆ ಎರದು ರಾಮನ ಪಾದ ಸೇರಿದವು.
~
ಜೀವನ ಇಡೀ ಮಠಲ್ಲಿ ಸೇವೆ ಮಾಡಿದ ಅವರ ಹಿರಿಮೆಯ ಎಷ್ಟು ಹೇದರೂ ಕಡಮ್ಮೆಯೇ.
ಅವ್ವೇ ಬೇರೆ ಎಲ್ಯಾರು ಹೋಗಿ ಪೈಶೆಗೆ ದುಡುದಿದ್ದಲ್ಲಿ ಈಗ ಯಥಾಶಕ್ತಿ ಪೈಶೆ ಸಂಪಾದನೆ ಮಾಡ್ಳೆ ಆವುತ್ತಿತು;
ಆದರೆ ಈಗ ಸಂಪಾದಿಸಿದ ಪುಣ್ಯ ಸಿಕ್ಕುತಿತೋ?

ನಾವು ಎಲ್ಲೊರುದೇ ಆಲೋಚನೆ ಮಾಡೇಕಾದ ಸಂಗತಿ ಅದು.

ಒಂದೊಪ್ಪ: ಮಠದ ದೇವರು ರಾಮನೂ, ಮಠದ ಸ್ಥಾಪಕ ಶಕ್ತಿ ಶಂಕರನೂ ಅನುಗ್ರಹಿಸಿದ ಕಾರಣ – ಕೈಲಾಸ, ವೈಕುಂಠ ಎರಡೂ ಪ್ರಾಪ್ತಿ ಅಕ್ಕು ಶಾಸ್ತ್ರಿಗೊಕ್ಕೆ.

ಒಪ್ಪಣ್ಣ

   

You may also like...

2 Responses

  1. ಒಂಡೆಡೆಲಿ ಬೇಜಾರಾದರೆ; ಮತ್ತೊಂದೆಡೆಲಿ ಒಳ್ಳೆ ಶುದ್ದಿ. ದೊಡ್ಡಗುರುಗೊ ಕುಂಟಿಕಾನ ಮಠಕ್ಕೆ ಬಂದಿಪ್ಪಾಗ ಎನ್ನಪ್ಪಂಗೂ ದೊಡ್ಡಶಾಸ್ತ್ರಿಗಳಿಂಗೂ ದೊಡ್ಡ ಪಂಚಾತಿಗೆ,ದೊಡ್ಡ ಶಾಸ್ತ್ರಿಗಳ ದೊಡ್ಡ ನೆಗೆ, ಈಗಳೂ ಎನ್ನ ಕಣ್ಣಿಂಗೆ ಕಟ್ಟುತ್ತಾ ಇದ್ದು.
    ದೊಡ್ಡಗುರುಗಳ ಕಾರ್ಯಸ್ಥನಾಂಗಿದ್ದ; ದೊಡ್ಡಶಾಸ್ತ್ರಿಗಳಿಂಗೆ, ಶಿಷ್ಯ ವರ್ಗಲ್ಲಿ ಗುರುಗಳ ಮತ್ತಾಣ ಚಾನ್ಸು ದೊಡ್ಡಕೇ ಸಲ್ಲುಗು. ಭೂಮಿಂದ ಕಾಲವಾದ ಅವಕ್ಕೆ ಸಾಯುಜ್ಯ ಸಿಕ್ಕಲಿ ಹೇಳಿ ಪ್ರಾರ್ಥನೆ.

  2. S.K.Gopalakrishna Bhat says:

    ಅವಕ್ಕೆ ಸಾಯುಜ್ಯ ಸಿಕ್ಕಲಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *