ವಿಶ್ವ ವಿದ್ಯಾಲಯ – ವಿಶ್ವಾಸ, ವಿದ್ಯೆಯೇ ಲಯ!

March 18, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೂರಲ್ಲಿ ಕೂದು ನಮ್ಮ ಭಾಶೆಯ ಮರದೋರ ಬಗ್ಗೆ, ದೂರಂದಲೇ ನಮ್ಮ ಭಾಶೆಯ ನೆಂಪುಮಡಿಗಿದೋರ ಬಗ್ಗೆ – ನಾವು ಕಳುದವಾರಂದ ಶುದ್ದಿ ಮಾತಾಡಿದ್ದು.
ಭಾಶೆ ಮರದರೂ ಭಾಶೆ ಇಪ್ಪೋರು, ಭಾಶೆ ನೆಂಪಿದ್ದರೂ ಭಾಶೆಇಲ್ಲದ್ದೋರು – ಈ ನಮುನೆ ಜೆನಂಗಳ ಬಗ್ಗೆಯೂ ನಾವು ಶುದ್ದಿ ತೆಗದ್ದು.
ಭಾಶೆ, ನಮ್ಮತ್ವ ಒಳಿಶುತ್ತದರ ಬಗ್ಗೆ ವಿಶೇಷ ಚಿಂತನೆಯೂ ಆಯಿದು ಬೈಲಿಲಿ.
ಕೇಜಿಮಾವನ ಇಂಜೆಕ್ಷನಿಲಿ ಅಂತೂ ಅರ್ದ ಒರಕ್ಕಿಲಿ ಇದ್ದೋನು ಎದ್ದು ಕೂದ ನಮುನೆ ಆತಿದಾ! 😉
ಅದಿರಳಿ.
ಎಲ್ಲರ ಭಾವವೂ ಒಂದೇ ನಮುನೆ, ತೋರುಸಿಗೊಂಬ ರೀತಿ ಬೇರೆಬೇರೆ ಇಕ್ಕು!
~

ನಿನ್ನೆಲ್ಲಮೊನ್ನೆ ಕೊಳಚ್ಚಿಪ್ಪು ಭಾವನ ಮನೆಗೆ ಹೋಗಿತ್ತಿದ್ದೆ.
ಹೋದ್ದೆಂತಕೆ? ಅಂತೇ!
ಆಚಮನೆದೊಡ್ಡಣ್ಣ ಹೊಸಾ ಬೈಕ್ಕು ತೆಗದ ಮತ್ತೆ ನವಗೆ ಅತ್ತಿತ್ತೆ ಹೋಪದಕ್ಕೆ ವಿಶೇಷ ಕಾರಣ ಹೇಳಿ ಏನೂ ಇರ್ತಿಲ್ಲೆ! 😉
ಹೋಯೆಕ್ಕು ಕಂಡ್ರೆ ಹೋಪದು, ಬಡಬಡನೆ!
ಬೈಕ್ಕಿನ ಹೇಂಡ್ಳು ಹೇಂಗೆ ತಿರುಗುತ್ತೋ – ಕೂದ ಮೇಗೆಯೇ ಅಂದಾಜಿ ಅಪ್ಪದು.
ಮೊನ್ನೆ ಮುಳ್ಳೇರಿಯಕ್ಕೆ ಹೋಗಿಪ್ಪಾಗ ಟೇಂಕಿಲಿ ಕುತ್ತ ಪೆಟ್ರೋಲು ತುಂಬುಸಿದ್ದನಾಡ, ಹಾಂಗಾಗಿ ಎಡೆದಾರಿಲಿ ನೂಕೆಕ್ಕಾದ ತಲೆಬೆಶಿ ಇಲ್ಲೆ! ಮೊನ್ನೆ ಕೊಳಚ್ಚಿಪ್ಪು ಮಾರ್ಗಲ್ಲೆ ಆಗಿ ಮಾಲಿ ಬೈಕ್ಕು ಎಡತ್ತಿಂಗೆ ತಿರುಗಿತ್ತು, ಅದ – ಕೊಳಚ್ಚಿಪು ಬಾವನ ಮನೆಗೆ!
~
ಗಂಟೆ ಹತ್ತೂವರೆ ಆದರೂ ಕೊಳಚ್ಚಿಪ್ಪುಬಾವ° ಎದ್ದಿತ್ತಿದ್ದನಿಲ್ಲೆ.
ಒಪ್ಪಣ್ಣ ಹೋಪದ್ದೇ – ಬೆನ್ನಿಂಗೆ ಉರಿಕಚ್ಚಿದ ಹಾಂಗೆ – ಎದ್ದು ಕೂದಿಕ್ಕಿದ°! ಪಕ್ಕನೆ ಹಸೆಮಡುಸಿ ಹಲ್ಲುತಿಕ್ಕಿ ಬಂದ°.
ಆಗಂದ ಏಳುಸುಲೆ ಹೆರಟು ಸೊರಬಿದ್ದ ಕೊಳಚ್ಚಿಪ್ಪು ಅತ್ತೆಗೆ ಈ ಚೋದ್ಯ ಕಂಡು ಆಶ್ಚರ್ಯವೇ ಆಶ್ವರ್ಯ! 😉
ಇನ್ನುದೇ ಒರಗಿರೆ ಒಪ್ಪಣ್ಣ ಬೈಲಿಂಗಿಡೀ ಹೇಳುಗು ಹೇಳಿ ಹೆದರಿಗೊಂಡನೋ ಏನೋ! ಉಮ್ಮಪ್ಪ!!

ಜ್ಞಾನ ಗಂಗೋತ್ರಿ - ಜ್ಞಾನ ಹುಟ್ಟೇಕಾದಲ್ಲಿ ಬೇರೆಂತದೋ ಹುಟ್ಟುತ್ತೋ..?

~
ಮುನ್ನಾಣದಿನ ಇರುಳು ಅವ° ಬಸ್ಸಿಲಿ ಬಂದದಷ್ಟೇ ಅಡ – ಮಯಿಸೂರಿಂದ, ಕೊಳಚ್ಚಿಪ್ಪು ಅತ್ತೆ ಹೇಳಿದವು.
ಉದೆಕಾಲಕ್ಕೆ ಮನಗೆ ಎತ್ತಿ ಮನುಗಿದವ° ಹತ್ತು-ಹನ್ನೊಂದು ಗಂಟೆ ಒರೆಂಗೆ ಒರಗುತ್ತದು ಇಪ್ಪದೇ ಇದಾ!
ಆಟಕ್ಕೆ ಹೋದ ಮುಳಿಯಬಾವನೂ ಒಂದೊಂದರಿ ಹಾಂಗೇ ಮಾಡುಗು – ಲವಕುಶರು ಯುದ್ಧ ಸುರುಮಾಡುವಗಳೇ ಏಳುದು!! 😉
ಅದಿರಳಿ,
ಕೊಳಚ್ಚಿಪ್ಪುಬಾವ° ಉದೆಕಾಲಕ್ಕೆ ಮಯಿಸೂರಿಂದ ಬಂದು ಒರಗಿದೋನು ಈಗ ಎದ್ದದಷ್ಟೇ!
ಅಪ್ಪು, ಅವ° ಹಾಂಗೇ, ಒಂದಿನ ಮಯಿಸೂರು, ಒಂದಿನ ಬೆಂಗುಳೂರು, ಒಂದಿನ ಡೆಳ್ಳಿ, ಒಂದಿನ ಬೈಲು, ಒಂದಿನ ಶಿರ್ಸಿ – ಹೀಂಗೆ ಊರಿಡೀ ಗುರ್ತದೋರೇ, ಊರಿಡೀ ಬೇಕಾದೋರೇ!
~

ನಿನ್ನೆ ಮಯಿಸೂರಿಂಗೆ ಹೋದ್ದೆಂತಕೆ ಅಂಬಗ – ಕೇಳಿದೆ; ಚೆಂಡಿಹರ್ಕಿಲಿ ಚೆಂಡಿ ಮೋರೆಉದ್ದಿಗೊಂಡು ಬಂದ ಕೊಳಚ್ಚಿಪ್ಪು ಬಾವನ ಹತ್ತರೆ!
ಅಂಬಗ ಗೊಂತಾತು ಅವ ವಿಶ್ವವಿದ್ಯಾಲಯಕ್ಕೆ ಹೋದ್ದದು – ಹೇಳಿಗೊಂಡು.
ಸಮಾಜಶಾಸ್ತ್ರಲ್ಲಿ ಎಮ್ಮೆ ಕಟ್ಟೇಕು – ಹೇಳಿ ಆಶೆ ಇದ್ದಾಡ ಆ ಮಾಣಿಗೆ!
ಊರಿನ ಇಷ್ಟೆಲ್ಲ ಒಯಿವಾಟುಗಳ ಎಡಕ್ಕಿಲಿ ಅದೂ ಒಂದು ಆಶೆಮಡಗಿದ್ದು ಒಪ್ಪಣ್ಣಂಗೆ ಭಾರೀ ಕೊಶಿ ಆತು.
~
ಕೊಳಚ್ಚಿಪ್ಪುಮಾವನ ಹತ್ರೆ ದೊಡ್ಡಣ್ಣ ಏನೋ ಅಡಕ್ಕೆ ಪಂಚಾತಿಗೆ ಸುರುಮಾಡಿದ°.
ಬಾಬು ಅಡಕ್ಕೆಕೊಯಿವಲೆ ಬಾರದ್ದೆ ಮತ್ತೆ ಮೂರ್ನೇ ಕೊಯಿಲುದೇ, ಕಡೆಕ್ಕೊಯಿಲುದೇ ಒಂದೇ ಮಾಡಿದ – ಶುದ್ದಿಯ ಹೇಳಿಗೊಂಡಿತ್ತಿದ್ದ° ದೊಡ್ಡಣ್ಣ.
ಕೊಳಚ್ಚಿಪ್ಪುಮಾವ ಹೂಂಕುಟ್ಟಿಗೊಂಡೇ ಚೆಂಡಿಹರ್ಕು ಬೀಸಿಗೊಂಡಿತ್ತಿದ್ದವು, ನೆಳವು ಓಡುಸಲೂ ಆತು, ಸೆಕೆ ಅಪ್ಪದಕ್ಕೂ ಆತು – ಹೇಳಿಗೊಂಡು!!
ಕೊಳಚ್ಚಿಪ್ಪುಬಾವಂಗುದೇ ಎರಡೊಂದು ಮಾಡ್ಲಕ್ಕು, ಉದಿಯಪ್ಪಗಾಣದ್ದುದೇ, ಮದ್ಯಾನದ ಊಟವುದೇ.
ಆದರೆ ಅವ° ಮಾಡ°, ಎರಡನ್ನೂ ಬಿಟ್ಟಿಕ್ಕ° ಇದಾ! 😉
~
ದೊಡ್ಡವರ ಗಂಭೀರ ಮಾತುಕತೆಗೆ ತೊಂದರೆ ಆಗದ್ದ ನಮುನೆ ಮೆಲ್ಲಂಗೆ ಕೇಳಿದೆ ಕೊಳಚ್ಚಿಪ್ಪುಬಾವನ ಹತ್ರೆ – ಮೊನ್ನೆ ಅದೆಂತದೋ ವಿಶ್ವವಿದ್ಯಾಲಯದ ಶುದ್ದಿ ಬಂದಿತ್ತು ಪೇಪರಿಲಿ – ಅದೆಂತರ ಹೇಳಿಗೊಂಡು.!!

ಮೊನ್ನೆ ಒಂದೆರಡು ದಿನ ಪೇಪರಿಲಿ ಅದರದ್ದೇ ಗವುಜಿ! ವಿಶ್ವವಿದ್ಯಾಲಯಲ್ಲಿ ಹಾಂಗಾತು, ಹೀಂಗಾತು – ಹೇಳಿಗೊಂಡು!!
ಅದೆಂತರ ಹೇಳ್ತದು ಸಮಗಟ್ಟು ನವಗೆ ಗೊಂತಾಯಿದಿಲ್ಲೆ. ಹಾಂಗಾಗಿ ಗೊಂತಿಪ್ಪ ಕೊಳಚ್ಚಿಪ್ಪುಬಾವನ ಹತ್ರೆ ಕೇಳಿದೆ!

ಕೊಳಚ್ಚಿಪ್ಪುಬಾವಂಗೆ ಅದೆಲ್ಲ ಅರಡಿಗಿದಾ.
ಅವಂಗೆ ಮದಲೇ ಗೊಂತಿಕ್ಕು ಹೇಳಿ ಅಲ್ಲ, ಆದರೆ ಹೀಂಗುರ್ತದರ ಕೂಡ್ಳೇ ತಿಳ್ಕೊಂಗು!
ಅರಡಿಗಾದ್ದರ ಅವ° ಹೇಳುಗು.
– ಹೀಂಗುರ್ತ ವಿಶಯಂಗಳಲ್ಲಿ ಒಪ್ಪಣ್ಣ ನಂಬುದು ಅವನನ್ನೇ!

ಉದಿಉದಿಅಪ್ಪಗಳೇ ಆ ಶುದ್ದಿ ತೆಗದು ಹಾಳುಮಾಡಿದೆನ್ನೇ – ಹೇಳಿಗೊಂಡು ಒಂದು ನೆಗೆಮಾಡಿ, ಶುದ್ದಿ ಹೇಳುಲೆ ಸುರುಮಾಡಿದ°.
~

ಈಗಾಣ ವಿಶ್ವವಿದ್ಯಾಲಯಂಗಳಲ್ಲಿ ನಿಜವಾದ ವಿದ್ವತ್ತು ಇಪ್ಪೋರಿಂದಲೂ ಹೆಚ್ಚು ಜಾತಿ ಲೆಕ್ಕಲ್ಲಿ ಬಂದು ಕೂದೋರು ಹೆಚ್ಚು ಇಪ್ಪದಡ – ಎಲ್ಲೋರು ಅಲ್ಲ, ಕೆಲವು ಜೆನ!
ವಿಜ್ಞಾನ ಹೇಳಿಕೊಡ್ತದರಿಂದಲೂ ಮಾರ್ಕಿಷ್ಟು ತತ್ವಂಗಳ ತುರ್ಕುವೋರೇ ಇಪ್ಪದಾಡ –
ಕೆಲವು ಜೆನ – ಒಂದರಿ ಪರೀಕ್ಷೆ ಪಾಸಾಗಿ ಲೆಗುಚ್ಚರ ಅಪ್ಪಲೆತಕ್ಕ ಓದುತ್ತವಡ, ಮತ್ತೆ ಅವರ ಜನ್ಮಲ್ಲಿ ಪುಸ್ತಕ ಮುಟ್ಟುತ್ತವಿಲ್ಲೇಡ.
ಕೆಲಸಕ್ಕೆ ಸೇರಿ ಆದ ಮೇಗೆ ಓದಲೆ ಹೇಂಗೂ ಇರ್ತಿಲ್ಲೆ, ಮಾಡ್ಳೆ ಎಂತಾರು ಕೆಲಸ ಬೇಕನ್ನೆ, ಅದಕ್ಕೆ ಸಂಘರ್ಷ ಸಮಿತಿ, ಓರಾಟ ಸಮಿತಿಗಳ ಮಾಡಿಗೊಂಡು, ಮೀಟಿಂಗು, ಹಕ್ಕೊತ್ತಾಯ ಧರಣಿಗಳ ಮಾಡಿಗೊಂಡು ಹೊತ್ತುಕಳೆತ್ತದಡ.
ರಜಾ ಗೆಡ್ಡಬಿಟ್ಟು, ಚೂಡಿದಾರದ ನಮುನೆ ಅಂಗಿ ಹಾಕಿಂಡರೆ ಬುದ್ಧಿವಂತ° – ಹೇಳಿ ಲೆಕ್ಕ ತೆಕ್ಕೊಳೇಕಡ!
ಸೇರಿದ ಕೂಡ್ಳೆ ಆರಾರು ಹೆರಿಯೋರ ಕೈಕ್ಕಾಲಿಂಗೆ ದಮ್ಮಯ ಹಾಕಲೆ ಸುರುಮಾಡಿರೆ ಬೇಗ ಬೇಗ ಪ್ರೊಮೋಶನು ಆವುತ್ತಡ.
ಪ್ರೊಮೋಶನು ಆರಿಂಗೆ ಬೇಡ! – ಎಲ್ಲೋರಿಂಗೂ ಹೆಂಡತ್ತಿಮಕ್ಕೊ ಇರ್ತವಲ್ಲದೋ!
ಮಾಡೆಕ್ಕಾದ ಕಾರ್ಯ ಸಮಗಟ್ಟು ಮಾಡದ್ದರೆ ಬಿಟ್ಟಿಚಾಕ್ರಿ ಮಾಡೆಕ್ಕಾವುತ್ತಿದಾ! – ಹಾಂಗಾಗಿ ಮೇಗಾಣೋರು ಮಾಡುಸುತ್ತವು, ಕೆಳಾಣೋರು ಮಾಡ್ತವು.
ಮೇಗಾಣೋರು ಮಾಡುಸಿಗೊಂಬದು ಎಂತ್ಸಕೆ ಹೇಳಿತ್ತುಕಂಡ್ರೆ, ಅವು ಅವರಿಂದ ಮೇಗಾಣೋರ ಬಿಟ್ಟಿಚಾಕ್ರಿ ಮಾಡಿರ್ತವು! ಹಾಂಗೆ.
ಮೇಗಾಣವರ ಗುಟ್ಟುಗೊ ಕೆಳಾಣೋರಿಂಗೆ ಅರಡಿಗು, ಕೆಳಾಣೋರ ಜೊಟ್ಟು ಮೇಗಾಣೋರ ಹತ್ತರೆ ಇರ್ತು!
ಹಾಂಗಾಗಿ, ಇಬ್ರಿಂಗೂ ಇಬ್ರೂ ಮನಸ್ಸಿನೊಳವೇ ಹೆದರಿಗೊಂಡು, ಹೆದರಿಸೆಂಡು ಜೀವನ ದೂಡ್ತದಡ.
ಇದೆಲ್ಲ ಒಯಿವಾಟುಗಳೆಡಕ್ಕಿಲಿ ಪುರುಸೊತ್ತಾದರೆ ಒಂದೊಂದರಿ ಕ್ಳಾಸಿಂಗೆ ಹೋಗಿ ಮಕ್ಕೊ ಬಯಿಂದವೋ ನೋಡಿಕ್ಕಿ ಬಪ್ಪದಾಡ.
~
ಇದರೊಟ್ಟಿಂಗೆ, ಇನ್ನೊಂದು ವಿಶಯ ಇದ್ದು.
ನಿಜವಾಗಿ ನೋಡಿರೆ, ಲೆಗುಚ್ಚರಂಗೆ ಅನುಭವ ಆದ ಹಾಂಗೆಯೇ – ಅವನಂತೆಯೇ ಕೆಲವು ಜೆನವ ಸಿದ್ಧಮಾಡಿ ದೇಶಸೇವೆ ಮಾಡೆಕ್ಕಲ್ಲದೋ – ಹಾಂಗೆ ಪ್ರೊಪೆಸರಂಗೊಕ್ಕೆ ಇನ್ನೊಬ್ಬಂಗೆ ಮಾರ್ಗದರ್ಶನದ ಜೆವಾಬ್ದಾರಿಯೂ ಕೊಡ್ತವಡ.
ಅದಕ್ಕೆ “ಗೈಡು” ಹೇಳುದಡ.
ಹಾಂಗೆ ಗೈಡು ಆಗಿಪ್ಪವ° ತನ್ನ ಹತ್ತರಂಗೆ ಬಪ್ಪ ವಿದ್ಯಾರ್ಥಿಗೊಕ್ಕೆ ಯೇವದಾರೊಂದು ವಿಶಯಲ್ಲಿ ಅಧ್ಯಯನ ಮಾಡ್ಳೆ ಸಕಾಯ ಮಾಡಿ ಅವನನ್ನೂ ಡಾಗುಟ್ರೇಟು ಮಾಡುಸೇಕಡ.
ಕೆಲವು ಜೆನ ಅಲ್ಲಿಯೂ ಮೋಸವೇ ಅಡ!!
– ಆಗ ಮಾತಾಡಿದ ಹಾಂಗೆ ಕಳ್ಳದಾರಿಲಿ ಬಂದೋರಿಂಗೆ ಇನ್ನೊಬ್ಬಂಗೆ ಹೇಳಿಕೊಡ್ತ ನಮುನೆ ಏನಾರು ಗೊಂತಿದ್ದರಲ್ಲದೋ!
ಅಂತೇ ಆರಾರ ಬೈಕ್ಕೊಂಡು ತಿರುಗಿದೋರಿಂಗೆ “ಹೇಳಿಕೊಡಿ” ಹೇಳಿರೆ ಮರಿಯಾದಿ ಹೋಗದೋ – ಅದಕ್ಕೆ ಆ ಹೆಡ್ಡುಕೆಲಸಕ್ಕೆ ಹೆರಡ್ತವೇ ಇಲ್ಲೇಡ.
ಹೆರಟ ಕೆಲವುಜೆನವುದೇ ಬರ್ಕತ್ತಿಂಗೆ ಕೆಲಸ ಮಾಡ್ತವಿಲ್ಲೆಡ!
ಅವರ ಹತ್ತರೆ ಮಾರ್ಗದರ್ಶನಕ್ಕೆ ಹೇಳಿ ಬಂದೋರ ಹತ್ತರೆ ನಾಯಿಂದ ಕಡೆ ಕೆಲಸ ಮಾಡುಸುತ್ತವಡ.
ಮನಗೆ ಅಳತ್ತೊಂಡೆ ಸೌತ್ತೆ ನೆಟ್ಟಿಕಾಯಿ ತಪ್ಪದರಿಂದ ಹಿಡುದು, ಮಗನ ಶಾಲಗೆ ಕರಕ್ಕೊಂಡು ಹೋಪದರಿಂದ ತೊಡಗಿ, ಆಪೀಸಿನ ಉದ್ದಿಉಡುಗಿ ಮನಾರ ಮಾಡ್ತಲ್ಲಿ ಒರೆಂಗೆ ಆಯೇಕಾದ ಅಕ್ಕಾದ ಆಗದ್ದ ಸಮಸ್ತ ಕಾರ್ಯಂಗಳನ್ನೂ ಮಾಡಿಸಿಗೊಳ್ತವಡ.
~
ಇನ್ನು, ಕಲಿವಲೆ ಬಂದೋರು ಕೂಸುಗೊ / ಹೆಮ್ಮಕ್ಕೊ ಆದರೆ ಕೇಳುದೇ ಬೇಡ!
ಮೊನ್ನೆ ಪೇಪರಿಲಿ ಬಂದದು ಇದೇ ನಮುನೆ ಒಂದು ಶುದ್ದಿ ಅಡ.
ಮದುವೆ ಆಗಿ ನೆಮ್ಮದಿಯ ಸಂಸಾರ ಮಾಡಿಗೊಂಡಿದ್ದ ಒಂದು ಹೆಮ್ಮಕ್ಕೊಗೆ “ಇನ್ನೂ ಕಲಿಯೇಕು” – ಹೇಳಿ ಆತಡ.
ಹಾಂಗೆ, ಒಂದು ಗೈಡನ ಹಿಡುದತ್ತಾಡ.
ವಿದ್ಯಾತುರಾಣಾಂ ನಸುಖಂ ನ ನಿದ್ರಾ!! – ಹಾಂಗೇ ಆತುದೇ.
ಸರಿಯಾಗಿ ಕಲಿಯೇಕು ಹೇಳ್ತ ಈ ಹೆಮ್ಮಕ್ಕೊಗೆ ನೆಮ್ಮದಿಯ ಒರಕ್ಕುದೇ ಬಾರದ್ದ ನಮುನೆ ಮನಸ್ಥಿತಿ ಆಗಿ ಬಿಟ್ಟತ್ತು!
ಆರಂಭಲ್ಲಿ ಚೆಂದಕೇ ನೆಡಕ್ಕೊಂಡತ್ತು, ಆದರೆ ರಜ ಸಮೆಯ ಆಗಿಅಪ್ಪಗಳೇ ಅದರ ದುರ್ಬುದ್ಧಿ ಗೊಂತಾತಡ!
ವಿದ್ಯಾಭ್ಯಾಸಕ್ಕಾಗಿ ಬಂದ ಈ ಹೆಮ್ಮಕ್ಕಳ ಹತ್ತರೆಯೇ ಅದರ ದುರ್ಬುದ್ಧಿ ತೋರುಸಲೆ ಸುರು ಮಾಡಿತ್ತಡ!
ಕಾಮಾತುರಾಣಾಂ ನಭಯಂ ನ ಲಜ್ಜಾ!! – ಹಾಂಗೇ ಆತುದೇ! ಕಳ್ಳ ಬುದ್ಧಿಯ ಆ ಲೆಗುಚ್ಚರು ಮರಿಯಾದಿ ಕೆಡ್ತ ವೆಗ್ತಿತ್ವ ತೋರುಸಲೆ ಸುರುಮಾಡಿತ್ತಾಡ!

ಮರಿಯಾದಸ್ಥ ಮನೆತನದ ಆ ಹೆಮ್ಮಕ್ಕೊಗೆ – ತನ್ನ ಸಂಸಾರ ಜೀವನಕ್ಕೆ ಅನ್ಯಾಯ ಆವುತ್ತಾ ಇದ್ದು ಹೇಳ್ತದು ಮನಸ್ಸಿಂಗೆ ಬಂತಡ.
ದಿನದಿನವೂ ಮಾನಸಿಕ ಚಿತ್ರ ಹಿಂಸೆ..
ಕಲಿತ್ತ ಆಶೆಗಾಗಿ ಸಹಿಸಿಗೊಂಡತ್ತು!

ಸಹಿಸಿಗೊಂಬದು ಎಷ್ಟು ದಿನ, ಪಾಪ!
ಎಷ್ಟು ದಿನ ಆದರೂ ಬಿಡ್ತೇ ಇಲ್ಲೆ, ಪಾಪಿ!
ಕಲಿತ್ತ ಆಶೆ ಇಲ್ಲಿ ಒರೆಂಗೆ ತಂದು ನಿಲ್ಲುಸಿದ್ದು,
ಅದರ ಅರ್ದಲ್ಲೇ ಬಿಟ್ರೆ ಜೀವನವೇ ಮುಗುದ ನಮುನೆ!!

ಅಪ್ಪು!! ಜೀವನ ಮುಗಿತ್ತದೇ ಒಳ್ಳೆದು..
ತನ್ನ ಗೆಂಡಂಗೂ ಅಪಚಾರ ಅಪ್ಪಲಿಲ್ಲೆ, ತನ್ನ ಅಧ್ಯಯನದ ಆಶೆಗೂ ಎಳ್ಳುನೀರು ಅಪ್ಪಲಿಲ್ಲೆ, ತನ್ನ ಜೀವನಕ್ಕೇ ಎಳ್ಳುನೀರು ಬಿಟ್ಟುಗೊಂಬ – ಹೇಳಿ ಯೋಚನೆ ಮಾಡಿತ್ತಡ.
ಹಾಂಗೆ, ಒರಕ್ಕಿನ ಮಾತ್ರೆಯ ಒಂದು (ಮೆಡಿಕಲು) ಮದ್ದಿನಂಗುಡಿಂದ ತಂದು, ಒಂದೇ ಸರ್ತಿಲಿ ಒಂದು ಮುಷ್ಠಿ ತಿಂದು ಮನುಗಿತ್ತಡ!!
~
ಪುಣ್ಯ, ಬೇರೆ ಆರಿಂಗೋ ಗೊಂತಾಗಿ, ಅದರ ಆಸುವತ್ರೆಗೆ ಸೇರುಸಿ ಮದ್ದು ಮಾಡಿದವಡ.
ಕಲಿಯೇಕು ಹೇಳ್ತ ಆಶೆಲಿ ಕಲಿವಲೆ ಹೆರಟ ಆ ಹೆಮ್ಮಕ್ಕೊ ಜೀವವನ್ನೇ ಬಿಡ್ಳೆ ಹೆರಟತ್ತಡ!
ಅಂತೂ ಆಯುಶ್ಶ ಗಟ್ಟಿ ಇತ್ತು, ಆ ಹೆಮ್ಮಕ್ಕೊ ಒಳ್ಕೊಂಡತ್ತಡ.
ಸರಸ್ವತಿ ಅನುಗ್ರಹಂದಾಗಿ ಆಯುಷ್ಯ ಒಳುದತ್ತು! ಪಾಪ!!
~
ಇನ್ನು ಬೇರೆ ಆರತ್ರಾರು ಮಾರ್ಗದರ್ಶನ ತೆಕ್ಕೊಂಡು ಅದಕ್ಕೆ ಕಲಿವದರ ಮುಂದುವರುಶುಲೆ ಅಕ್ಕನ್ನೇ – ಕೇಳಿದೆ ಆನು.
ಬದ್ಕೇಕು ಹೇಳಿಯೇ ಆಶೆ ಇಲ್ಲೆ, ಇನ್ನು ಕಲಿಯೇಕು ಹೇಳ್ತ ಆಶೆ ಇಕ್ಕೋ ಅದಕ್ಕೇ – ಕೇಳಿದ ಕೊಳಚ್ಚಿಪ್ಪು ಭಾವ!!
ಅದಪ್ಪುದೇ!!
~
ಮಾತಾಡಿಂಡು ಇಪ್ಪಗಳೇ ಕೊಳಚ್ಚಿಪ್ಪು ಅತ್ತೆ ಆಸರಿಂಗೆ ತಂದವು.
– ಷ್ಟ್ರೋಂಗು ಚಾಯವುದೇ, ಪಾರ್ಲೆಜಿ ಬಿಸ್ಕೇಟುದೇ!
ಕುಡುದಾದ ಕೂಡ್ಳೆ ಆಚಮನೆದೊಡ್ಡಣ್ಣ ’ಹೆರಡುವನಾ ಒಪ್ಪಣ್ಣ’ ಕೇಳಿದ°,
ಸರಿ! ಹೆರಟತ್ತು ನಾವು.
ಎಲ್ಲಿಗೆ? ಬೈಲಿಲೇ ಇನ್ನೊಂದು ಹೊಡೆಂಗೆ!
~
ಕೊಳಚ್ಚಿಪ್ಪು ಬಾವ ಹೇಳಿದ್ದುದೇ ಸರಿಯೇ!
ಸಮಾಜಕ್ಕೆ ಕಲಿತ್ತ ಆಶೆ ಹುಟ್ಟುಸೇಕಾದ ವಿಶ್ವವಿದ್ಯಾಲಯಂಗಳೇ ಹೀಂಗೆ ಮಾಡಿರೆ ಅಕ್ಕೋ?
ಅಲ್ಲಿ ಇದ್ದಂಡು ಗುರುಸ್ಥಾನ ತುಂಬುಸೇಕಾದ ಜೆನಂಗೊ ಈ ನಮುನೆ ಬೇಡಂಗಟ್ಟೆ ಮಾಡಿರೆ ವಿಶ್ವಾಸ ಒಳಿಗೋ?
ವಿದ್ಯೆ ಕಲಿಶೇಕಾದ ಅವರ ಮೇಗೆ ವಿಶ್ವಾಸವೇ ಲಯ ಆಗದೋ?

ಈ ನಮುನೆ ಕಾಟುಗೊ ಅಂತಲ್ಲಿಯೂ ಇದ್ದವೋ? ಅಂಬಗ ನಮ್ಮೋರ ಮಕ್ಕೊ ಹೋಗಿ ಮುಂದೆ ಕಲಿತ್ತದಾರೂ ಹೇಂಗಪ್ಪಾ?
ತಲೆಲಿ ಇದೇ ಆಲೋಚನೆ ತಿರುಗಿಂಡು ಇತ್ತು!!
ಯೇವತ್ತು ವಿದ್ಯೆಗೆ ಬೆಲೆಕೊಡದ್ದೆ, ಕೇವಲ ಜಾತಿರಾಜಕೀಯ ಮಾಡಿ ಜೆನಂಗಳ ವಿದ್ಯಾಲಯಕ್ಕೆ ಲೆಗುಚ್ಚರುಗೊ ಮಾಡ್ತವೋ, ಅಲ್ಲಿ ಒರೆಂಗೆ ಹೀಂಗ್ರುತ್ತ ಅವಸ್ತೆ ಇದ್ದೇ ಇದ್ದು!
ಎಂತ ಹೇಳ್ತಿ?

ಒಂದೊಪ್ಪ: ವಿದ್ಯೆ ಕಲಿಶದ್ರೂ ಸರಿ, ವಿಶ್ವಾಸ ಒಳಿಶಿಗೊಳೆಕ್ಕಾದ್ದು ಮುಖ್ಯ! ವಿಶ್ವಾಸ ಕಳಕ್ಕೊಂಡ ವಿದ್ಯೆ ಪ್ರಯೋಜನ ಇದ್ದೋ?

ಸೂ: ಒಳ್ಳೆಗುಣದ ಲೆಗುಚ್ಚರುಗೊ ಧಾರಾಳ ಇದ್ದವು. ಆದರೆ ಹೀಂಗ್ರುತ್ತ ಕಾಟುಗಳೂ ಇಪ್ಪದು ಬೈಲಿನೋರಿಂಗೆ ಬೇಜಾರಪ್ಪದು, ಅಷ್ಟೆ. :-(

ವಿಶ್ವ ವಿದ್ಯಾಲಯ - ವಿಶ್ವಾಸ, ವಿದ್ಯೆಯೇ ಲಯ! , 4.8 out of 10 based on 4 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಗಣೇಶ ಮಾವ°

  ಶಿಕ್ಷಣ ಹೇಳುದೇ ಇಂದು ಪೈಸೆ ಇದ್ದವರ ಸೊತ್ತು ಹೇಳುದು ಆಯಿದು.ಒಬ್ಬ ವಿದ್ಯಾರ್ಥಿಯ ಪ್ರತಿಭೆಯ ನೋಡಿ ಗೌರವಿಸುವ ವಿಶ್ವವಿದ್ಯಾಲಯ ಇಂದಿಂಗೆ ಕಾಂಬದು ಕಷ್ಟ..ಮುಂದಕ್ಕೆ ಹೇಂಗೆ ಅಕ್ಕು ಹೇಳಿ ಹೇಳುಲೇ ಕಷ್ಟ..ಒಳ್ಳೆ ಅನುಭವದ ಲೇಖನ..ಶಿಕ್ಷಣದ ಮಟ್ಟ ಆದಷ್ಟು ಒಳ್ಳೆ ರೀತಿಲಿ ಬರಲಿ.ಆ ಮೂಲಕ ಸರಸ್ವತಿ ಒಲಿದು ಬರಲಿ…

  [Reply]

  VN:F [1.9.22_1171]
  Rating: 0 (from 0 votes)
 2. vidya s

  ಲೇಖನ ಲಾಯಕ ಆಯಿದು. ವಿಶ್ವವಿದ್ಯಾನಿಲಯ ಹೇಳುವಗ ನೆನಪ್ಪಪ್ಪದು ಕನಸುಗಳ ಮೇಲೆ ಕಟ್ಟಿದಗೋರಿ ಹೇಳ್ತ ಮಾತು………

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವವಿದ್ವಾನಣ್ಣಚೆನ್ನೈ ಬಾವ°ನೆಗೆಗಾರ°ಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ಹಳೆಮನೆ ಅಣ್ಣಶ್ರೀಅಕ್ಕ°ಚುಬ್ಬಣ್ಣಮಾಲಕ್ಕ°ಚೆನ್ನಬೆಟ್ಟಣ್ಣಪವನಜಮಾವಒಪ್ಪಕ್ಕಶಾಂತತ್ತೆಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ವಸಂತರಾಜ್ ಹಳೆಮನೆಡಾಗುಟ್ರಕ್ಕ°ಡಾಮಹೇಶಣ್ಣಸುಭಗಅಕ್ಷರದಣ್ಣಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿದೊಡ್ಡಭಾವಉಡುಪುಮೂಲೆ ಅಪ್ಪಚ್ಚಿಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ