Oppanna.com

ಒಲುದರೆ ಗಂಗೆ, ಮುನಿದರೆ ಮೇಗಂಗೆ..

ಬರದೋರು :   ಒಪ್ಪಣ್ಣ    on   28/06/2013    9 ಒಪ್ಪಂಗೊ

ನೆಕ್ರಾಜೆ ಅಪ್ಪಚ್ಚಿಯಲ್ಲಿ ನಾಗಸಂಪಗೆಯ ದೊಡಾ ಮರ ಇದ್ದಪ್ಪೋ – ಅದರ ಬುಡಲ್ಲಿ ಗೆಡುಗೊ ಹುಟ್ಟಿದ್ದೋ ನೋಡಿಕ್ಕಲೆ ನಾವು ಅಲ್ಲಿಗೆ ಹೋಗಿತ್ತದು ಕಳುದವಾರ.
“ಈ ಮಳೆಗೆ ಮರದ ಬುಡಕ್ಕೆ ಹೋವುಸ್ಸು ಎಂತ್ಸಕೆ, ಮಳೆ ಬಿಡ್ಳಿ – ಒಳ ಬಾ” ಹೇದು ಅಪ್ಪಚ್ಚಿ ದಿನಿಗೆಳಿರೆ “ಬತ್ತಿಲ್ಲೆ” ಹೇಳುಲೆ ಕಾರಣ ಇದ್ದೋ?
ಪೆರಟಿ ಪಾಚವೋ, ಹಲಸಿನಣ್ಣು ಕೊಟ್ಟಿಗೆಯೋ ಎಂತೆಲ್ಲ ನೆಂಪಾಗಿಹೋತು ಒಪ್ಪಣ್ಣಂಗೆ.
ಅಲ್ಲಿ ಮನೆ ಒಳಂಗೆ ಹೋಪಗಳೇ ಮಾಷ್ಟ್ರುಮಾವನ ದೊಡ್ಡಮಗನ ಕಂಡದು!
ಬೈಲಿನ ಎಲ್ಲೋರನ್ನೂ ಪ್ರಪ್ರತ್ಯೇಕವಾಗಿ ವಿಚಾರ್ಸಿದ°. ಹೀಂಗೆ ಬಂದು ಹಾಂಗೆ ಹೋಪಗ ವಾರ ಲೆಕ್ಕ ಪೂರ ಮುಗಾತಡ, ಈ ವಾರಲಿ ಹೆರಟು ಒಪಾಸು ಹೋವುಸ್ಸಾಡ, ಹಾಂಗೊಂದರಿ ನೆರೆಕರೆಲಿ ಮಾತಾಡ್ಸಿಗೊಂಬೊ° ಹೇದು ಬೈಲಕರೆಲಿ ಆಗಿ ನೆಕ್ರಾಜೆಗೆ ಬಂದ್ಸಾಡ.
~

ನೆಕ್ರಾಜೆ ಅಪ್ಪಚ್ಚಿಯ ಮಾತುಗಳಲ್ಲಿ ಅಪೂರ್ವವಾದ ತತ್ವಜ್ಞಾನಂಗಳನ್ನೂ, ಚಿಂತನೆಗಳನ್ನೂ ಒಂದೊಂದರಿ ಕಾಣ್ತ ಸಂಗತಿ ಬೈಲಿಂಗೆ ಅರಡಿಗು. ಮೊನ್ನೆ ಮಾತಾಡುವಾಗ ಈ ಸಂಗತಿ ಪುನಾ ನೆಂಪಾತು.
ಮೊನ್ನೆ ಮಾತಾಡಿದ್ದು ಎಂತ ಸಂಗತಿ ಹೇದರೆ- ಉತ್ತರಭಾರತ ಪ್ರವಾಹದ ಶುದ್ದಿಯನ್ನೇ.
ಈ ಶುದ್ದಿ ಒಪ್ಪಣ್ಣ ಸುರುಮಾಡಿದ್ದಲ್ಲ, ನಾವು ಎತ್ತುವಾಗಳೇ ಹಲವು ದೂರ ಮುಂದುವರುದಿತ್ತು. ನಾವು ಎಡಕ್ಕಿಲಿ ಸೇರಿಗೊಂಡದು ಅಷ್ಟೇ. ಹಾಂಗಾಗಿ ಆರು ಸುರುಮಾಡಿದ್ದು, ಆರು ಹೂಂಕುಟ್ಟಿದ್ದು ಹೇದು ನವಗರಡಿಯ.
ನಾವು ಇಪ್ಪಗ ಎಂತ ವಿಷಯ ಬಂತು ಹೇಳಿ ಹೇಳ್ಳಕ್ಕು ಬೇಕಾರೆ.
ಆದರೆ, ಪೀಠಿಕೆ ಎಂತರ ಹೇದರೆ,
~
ಉತ್ತರದ ಹಿಮಾಲಯದ ಬುಡಲ್ಲಿ ಹಲವು ದೇವಸ್ಥಾನಂಗೊ, ಪುರಾಣ ಪುಣ್ಯಕ್ಷೇತ್ರಂಗೊ ಇರ್ಸು ನವಗರಡಿಗು.
ಈ ಕಾಲಲ್ಲೇ ದರ್ಶನಕ್ಕೆ ಹೆಚ್ಚು ಹೇಳಿದ ಕಾಲ ಆಡ. ಇನ್ನು ಒಂತಿಂಗಳು ಕಳುದರೆ ಜೋರು ಮಳೆ ಬಂದು, ಅದಾದ ಮತ್ತೆ ಚಳಿ ಎಳಗಿ, ಅದಾದ ಮತ್ತೆ ಮಂಜು ಬಿದ್ದು ಹೋಪಲೆಡಿಯದ್ದ ಹಾಂಗಾಗಿ ಬಿಡ್ತು.
ಅದಕ್ಕೇ ಈ ಕಾಲಲ್ಲಿ ಲೋಕದ ಎಲ್ಲ ದಿಕ್ಕಂದಲೂ ಯಾತ್ರಿಗೊ, ದರ್ಶನಾರ್ಥಿಗೊ ಈ ಸಮಯಲ್ಲಿ ಅಲ್ಲಿ ಬಂದಿರ್ತವಾಡ.
ಎಂದಿನಂತೆ, ಕಳುದ ವಾರ ಒಂದು ದಿನ ಉದಿಯಾತು, ಮಧ್ಯಾಹ್ನ ಆತು, ಹೊತ್ತು ಕಂತುಲೆ ಹೆರಟತ್ತು.
ಬಾನಲ್ಲಿದ್ದ ಮುಗಿಲಿಂಗೆ ಎಂತಾತೋ ಅರಡಿಯ – ಮಳೆ ಸುರುಆತು, ಮಳೆ ಜೋರಾತು, ಕುಂಭದ್ರೋಣಕ್ಕೆ ತಿರುಗಿತ್ತು – ಅಷ್ಟೇ ಅಲ್ಲ, ಮೇಘಸ್ಫೋಟವೇ ಆತು.

ಎಂತರ ಇದು ಮೇಘಸ್ಫೋಟ? ಮಂಗಂಗೆ ಗರ್ನಾಲು ಇಡ್ಕಿ ಅಪ್ಪಗ ಅಪ್ಪ ನಮುನೆಯ ಸ್ಫೋಟವೋ? ಶಾಂತಿಪ್ರಿಯರು ಬೋಂಬುಮಡಗಿ ಅಪ್ಪ ಸ್ಪೋಟವೋ? ಅಲ್ಲ.
ವಾತಾವರಣದ ತಾಪಮಾನ ಏಕಾಏಕಿ – ಒಂದೇ ಸರ್ತಿ ಇಳುದ ಹಾಂಗಾದರೆ, ಮೋಡಲ್ಲಿಪ್ಪ ಆವಿಗೆ ರಜರಜವೇ ನೀರಪ್ಪಲೆ ಪುರುಸೊತ್ತು ಕೊಡದ್ದೆ, ಒತ್ತರೆಗೆ – ಒಂದೇ ಸರ್ತಿ ನೀರಪ್ಪದು.
ಕಟ್ಟ ಕಡುದ ನೀರಿನ ಹಾಂಗೆ ಬಾನಂದ ಉದುರುದು. ರಜ ಹೊತ್ತು ಕಳುದರೆ, ತಂಪಿಲಿ ನೀರಪ್ಪಷ್ಟೂ ಪುರುಸೊತ್ತಿಲ್ಲದ್ದೆ ಸೀತ ಆಲಿಕಲ್ಲುಗೊ ಆವುತ್ತು. ಆಲಿ-ಅದ್ರಾಮ ಹೇದು ನೋಡದ್ದೆ ಎಲ್ಲೋರ ತಲಗೂ ಬೀಳುದೇ.
ಕೆಲವು ಬಂಡೆಕಲ್ಲಿನಷ್ಟಕೆಯೂ ಇಕ್ಕಾಡ; ಕೆಲವು ಚೂಪು ಬೆಡಿಬಿಟ್ಟ ಹಾಂಗೆಯೂ ಇಕ್ಕಾಡ.
ಗಾತ್ರ ಎಷ್ಟೇ ಇರಳಿ, ಪೆಟ್ಟು ಪೆಟ್ಟೇ.
ಒಂದು ಹೊಡೆಲಿ ಆಲಿಕಲ್ಲು, ಇನ್ನೊಂದು ಹೊಡೆಲಿ ಕಟ್ಟದ ನೀರು  – ಎಲ್ಲ ಆಗಿ ನೋಡುವಾಗ ಊರೆಂತಾತು?
ಊರೇ ಇಲ್ಲೆ, ಇಡೀ ನೀರೇ. ಏಕೇದರೆ, ಊರಿನ ಚರಂಡಿಗೊಕ್ಕೆ ಈ ನಮುನೆ ನೀರಿನ ಕಂಡೇ ಅರಡಿಯ ಇದಾ.
ಇಷ್ಟು ರಭಸಲ್ಲಿ ನೀರು ಬಪ್ಪಾಗ ಅದರೊಟ್ಟಿಂಗೆ ದೊಡ್ಡದೊಡ್ಡ ಬಂಡೆಕಲ್ಲುಗೊ, ಮರದ ಪೊದೆಲುಗೊ, ಗೆಂಟುಗೊ – ಎಲ್ಲವೂ ಬಂದುಬಿಡ್ತು. ಬರೆ ಪೂರಾ ಜೆರುದು ತೋಡುಗೊ ಪೂರಾ ಮುಚ್ಚಿಹೋವುತ್ತು; ನೈಸರ್ಗಿಕವಾಗಿ ಎಷ್ಟೋ ಒರಿಶಂದ ನೀರು ಹೋಗಿಂಡಿದ್ದ ದಾರಿ ಮುಚ್ಚಿಯೇ ಹೋವುತ್ತು. ಮತ್ತೆಂತ್ಸರ? ಅದೇ ಒಂದು ದಾರಿ ಮಾಡಿಗೊಂಡು ಹೋವುತ್ತು. ಆ ದಾರಿ ಹೇದರೆ ಎಲ್ಲಿ? ಮನೆ-ಮಠ-ದೇವಾಲಯ-ಚರ್ಚು-ಪಳ್ಳಿ-ಕಳ್ಳಿ-ಬೆಳ್ಳಿ-ಎಲ್ಲವುದೇ. ಸಿಕ್ಕಿದ್ಸರ ಎಲ್ಲವನ್ನೂ ತೆಕ್ಕೊಂಡೇ ಹೋವುಸ್ಸು.
ಪ್ರಕೃತಿಗೆ ಅದರದ್ದೇ ಆದ ಅಸ್ತಿತ್ವ ಇದ್ದು. ನದಿಗೆ ತನ್ನದೇ ಆದ ಹರಿವು ಇದ್ದು. ಆಯಾ ಕಾಲಕ್ಕೆ ತಕ್ಕ ಹಾಂಗೆ ನದಿ ಹರಿವು ಮಾಡಿಗೊಳ್ತು. ನದಿ ದಾರಿ ಬದಲ್ಸಿತ್ತು ಹೇದು ನಾವು ಅಲ್ಲಿ ಮನೆ ಕಟ್ಟಿದರೆ, ಮುಂದೆ ತನಗೆ ಬೇಕಾದಲ್ಲಿ ಇರುವಾರ ಹೋಪಲೆ ಅದಕ್ಕೆಡಿಯದೋ? ಅಂಬಗ ತನ್ನ ದಾರಿಲಿ ಅದು ಹೋಪಲೆ ಅಡ್ಡಿ ಮಾಡಿದೋರ ಅದು ಬಿಡುಗೊ?
ನೀರಿನ ಶೆಗ್ತಿಗೆ ಎದುರೆಂತ್ಸ ಇದ್ದು?!
~

ಗಂಗೆ - ಶಿವನನ್ನೂ ಕರಕ್ಕೊಂಡತ್ತು ಒಟ್ಟಿಂಗೇ
ಗಂಗೆ – ಶಿವನನ್ನೂ ಕರಕ್ಕೊಂಡತ್ತು ಒಟ್ಟಿಂಗೇ

ಮೇಘಸ್ಪೋಟ ಆದರೆ ತಡವಷ್ಟು ವೆವಸ್ಥೆ ಹಾಂಗಿರ್ತ ಗುಡ್ಡಗಾಡು ಜಾಗೆಲಿ ಇರ. ಇಪ್ಪಲೆ ಸಾಧ್ಯವೂ ಇಲ್ಲೆ.
ಆ ಮೇಘಸ್ಪೋಟ ಅಪ್ಪದೂ ಕಮ್ಮಿಯೇ, ತೀರಾ ತೀರಾ ಅಪುರೂಪದ ಸಂಗತಿ.
ವೈಜ್ಞಾನಿಕವಾಗಿ ನೋಡಿರೆ – ಅಷ್ಟು ಪಕ್ಕ ವಾತಾವರಣದ ತಾಪ ಕಮ್ಮಿ ಅಪ್ಪ ಸಾಧ್ಯಾಸಾಧ್ಯತೆ ಕಮ್ಮಿ – ಹೇಳುಗು ಮಾಷ್ಟ್ರುಮಾವನ ಮಗ°.
ದೈವೀಕವಾಗಿ ಹೇಳ್ತರೆ, ಅದೆಲ್ಲವೂ ಆ ದೇವರು ಬರದ ಹಾಂಗೆ, ದೇವರಿಂಗೆ ಕೋಪ ಬಂದರೆ ಹೀಂಗಪ್ಪದು – ಹೇಳುಗು ನೆಕ್ರಾಜೆ ಅಪ್ಪಚ್ಚಿ.
ಆರೇ ಎಂತದೇ ಹೇಳಲಿ, ಜಲಪ್ರಳಯ ಆದ್ದಂತೂ ನಿಜ.
~
ಈ ನೀರೇ ಮುಂದೆ ಗಂಗೆ ಅಪ್ಪದಿದಾ.
ಶಾಂತವಾಗಿ ತರಲತರ ತರಂಗಿಯಾಗಿ ಹರಿವ ಗಂಗೆಗೆ ಏಕಾಏಕಿ ಈ ನಮುನೆ ನೀರು ಬಂದರೆ ಹೇಂಗಕ್ಕು?
ನದೀತಟಲ್ಲಿ ಬೆಳದ ನಾಗರೀಕ ಜೆನಾಂಗ ಹೇಂಗೆ ಪ್ರತಿಕ್ರಿಯಿಸುಗು!?
ಇದನ್ನೇ ನಮ್ಮ ಬೈಲಿಲಿ ಮುಳಿಯಭಾವ°, ಇಂದಿರತ್ತೆ, ಬಾಲಮಾವ° ಎಲ್ಲ ಸೇರಿ ಹರನ ಜೆಡಿಲಿಪ್ಪ ಗಂಗೆಗೆ ಪಿಸುರು ಬಂತೋ – ಹೇದು ಕೇಳಿದ್ದು.
ಮೋಕ್ಷ ಸಿಕ್ಕಲಿ ಹೇದು, ಎಂದಿನಂತೆ ಮೊನ್ನೆ ಎಷ್ಟೋ ಜೆನ ತೀರ್ಥಯಾತ್ರೆಲಿ ಇತ್ತಿದ್ದವು. ಅವರ ಎಲ್ಲೋರನ್ನುದೇ ಒಂದೇಸರ್ತಿ ತನ್ನ ಗರ್ಭದೊಳ ಸೇರ್ಸಿ ಸೀತಾ ಶಿವಕೈಲಾಸಕ್ಕೆ ಸೇರ್ಸಿಬಿಟ್ಟತ್ತೋ?
ಅದೆಷ್ಟೋ ಸಹಸ್ರ ಸಹಸ್ರ ಜೆನಂಗೊ ಗಂಗೆಯ ಮೂಲಕ ಶಿವನ ಪಾದ ಸೇರಿದವಾಡ.
~
ಸುಖಮರಣವೇಯೋ, ದುರ್ಮರಣವೆಯೋ – ಹೋದೋರು ಹೋದವು. ಒಳುದೋರು?
ಗಂಗೆಯ ಈ ರೌದ್ರಾವತಾರಲ್ಲಿಯೂ – ಕೆಲವು ಜೆನ ಗುಡ್ಡೆಲಿ, ಮತ್ತೆ ಕೆಲವು ಜೆನ ಮರದ ಕೊಡಿಲಿ, ಇನ್ನು ಕೆಲವು ಜೆನ ಬರೆಕರೆಲಿ –ಎಲ್ಲೆಲ್ಲಿ ಎಡಿತ್ತೋ ಅಲ್ಲೆಲ್ಲ ನಿಂದುಗೊಂಡು ಜೀವ ಒಳಿಶಿದ ಎಷ್ಟೋ ಜೆನಂಗೊ ಈಗಳೂ ಆ ಛಳಿಊರಿಲಿ ಅಸಬಡಿತ್ತಾ ಇದ್ದವಾಡ.
ಸಂಘದ ಸ್ವಯಂಸ್ವೇವಕರುಗೊ, ಸೈನ್ಯದ ಸೇನಾನಿಗೊ, ಊರ ನೆರೆಕರೆಯ ಹಲವು ಸಹೃದಯಿಗೊ ಈ ಜೆನಂಗಳ ರಕ್ಷಣೆಗೆ ಕೈಜೋಡುಸಿಗೊಂಡು ಇದ್ದವಾಡ.
ಅಲ್ಲಿಗೂ ಮತ್ತೆ ಮಳೆಯ ಉಪದ್ರ ಬಂದು ಕೆಲಸಂಗೊ ಕುಂಟುತ್ತಾ ಇದ್ದಾಡ, ಮಾಮಾದೊಮ ಹೇಳಿದ್ಸು.
ಪಾಪ! 🙁
~
ಎಷ್ಟೋ ಜೀವರಾಶಿಗೊಕ್ಕೆ ಜನ್ಮ ಕೊಡುವ ಗಂಗಾಮಾತೆ, ಆ ದಿನ ಹೇಂಗಾಗಿತ್ತು?
ಮೊನ್ನೆ ನೆಕ್ರಾಜೆ ಅಪ್ಪಚ್ಚಿ ಹೇಳಿಗೊಂಡಿದ್ದದೂ ಅದನ್ನೇ – ಶಾಂತವಾಗಿದ್ದರೆ ಗಂಗೆ, ಅಲ್ಲದ್ದರೆ ಪಾಪ ಹುಲು ಮಾನವಂಗಾದರೂ ಎಂತ ಮಾಡ್ಳೆಡಿಗು? ಎಲ್ಲೋರುದೇ ಮೇಗಂಗೇ ಹೋಯೇಕಟ್ಟೆ!
ಗಂಗೆಗೆ ಜನ್ಮ ಮಾಂತ್ರ ಅರಡಿವದಲ್ಲ, ಮೋಕ್ಷವೂ ಅರಡಿಗು ಹೇದು.
~
ನೆಕ್ರಾಜೆ ಅಪ್ಪಚ್ಚಿ ಹೇಳಿದವು: ಇದನ್ನೇ ಅಲ್ಲದಾ ಪ್ರಳಯ ಹೇಳುದು?
ದೊಡಾ ಮಳೆ ಬಂದು ಲೋಕ ಮುಳುಂಗುತ್ತು, ಇಡೀ ಜೀವರಾಶಿ ನಾಶ ಆವುತ್ತು – ಹೇದು ಪ್ರಳಯದ ಭವಿಷ್ಯ ಹೇಳಿದ್ದವಾಡ.
ಅಲ್ಲಿದ್ದ ಆ ಜೆನಂಗೊಕ್ಕೆ ಅದುವೇ ಪ್ರಳಯ.
ನಾವು ಇರುಳು ಉಣ್ತು, ಒರಗುತ್ತು; ಮರದಿನ ಎದ್ದು ಎಂದಿನಂತೆ ಜೀವನ ಮಾಡ್ತು. ಹೋದವಕ್ಕೆ ಅದುವೇ ಪ್ರಳಯ.
ನಾಷ್ಟ್ರಡಾಮಸ್ ಆಗಲಿ, ಆರ್ಯಭಟ್ರು ಆಗಲಿ – ಹೀಂಗಿರ್ಸರನ್ನೇ ಹೇಳಿದ್ದಾಯಿಕ್ಕೋದು ಸಂಶಯ ಮಾಡಿಗೊಂಡವು. ಹ್ಮ್ ಹೇದು ಮಾಮಾದೊಮ ಉಗುರು ಕಚ್ಚಿಗೊಂಡೇ ಹೇಳಿದ°.
ಕೋಟ್ಯಂತರ ಜೀವಿಗೊ ಕಾಲಗರ್ಭಲ್ಲಿ ಆಗಿ ಹೋಯಿದವು. ಕಾಲನಿಂದ ಶಕ್ತಿವಂತ ನಾವಾರೂ ಅಲ್ಲ.
ಅವ° ಹೇಳಿದ ಹಾಂಗೇ ಒಳುದೋರ ಜೀವನ; ಇಡೀ ಲೋಕವ ಬೇಕಾದ ಹಾಂಗೆ ಉಪಯೋಗುಸಿಗೊಳ್ತೆ ಹೇದರೆ ಪ್ರಕೃತಿ ಬಿಡ.
ಬೌಶ್ಷ ಕಾಲಕಾಲಕ್ಕೆ ಅದರದ್ದೇ ಆದ ಶುದ್ಧೀಕರಣವ ಪ್ರಕೃತಿ ಮಾಡಿಗೊಳ್ತು; ಹಾಂಗೇ ಇಪ್ಪ ಒಂದು ಶುದ್ಧೀಕರಣ ಕಾರ್ಯ ಇದೊಂದು ಆಗಿಕ್ಕು – ಹೇದು ನೆಕ್ರಾಜೆ ಅಪ್ಪಚ್ಚಿ ಹೇಳಿದವು.
ಈಗ ಮಾರ್ಗ ಪೂರ ಜೆರುದು ಕೆಲವು ದಿಕ್ಕಂಗೆ ಹೋಪಲೇ ಎಡಿಯ ಇದಾ; ಹಾಂಗೆ ಮನುಷ್ಯರು ಹೋಗದ್ದೇ ಇದ್ದರೆ ಅದುವೇ ಶುದ್ಧೀಕರಣ – ಹೇದು ಮಾಷ್ಟ್ರುಮಾವನ ದೊಡ್ಡಮಗ° ಹೇಳಿದ°.
ಅಪ್ಪಾದ ವಿಷಯವೇ – ನಿಸರ್ಗವ ಹಾಳುಮಾಡಿಕ್ಕಿ ನೆಮ್ಮದಿಲಿ ಬದ್ಕುತ್ತರೆ ಅದು ಮನುಷ್ಯನೇ ಆಯಿಕ್ಕಟ್ಟೆ, ಅಪ್ಪೋ!

ಪೆರಟಿ ಪಾಚವೂ ಬೇಡ, ಹಲಸಿನಣ್ಣು ಕೊಟ್ಟಿಗೆಯೂ ಬೇಡ; ಕೊಟ್ಟ ಕಾಪಿಯ ಉರ್ಪಿದೋನೇ ಸೀತಾ ಹೆರಟೆ.
ಹೇಳಿದಾಂಗೆ, ನಾಗಸಂಪಗೆ ಗೆಡುಗೊ ಇದ್ದು, ಬೇಕಾದೋರು ಹೇಳೇಕಡ, ಆತೋ?!
~
ಸಾವಿರಾರು ಮಕ್ಕಳ ಗಂಗೆ ಮೇಗಂಗೆ ಕೊಂಡೋದ ಶುದ್ದಿ ದೇಶಕ್ಕೇ ತುಂಬ ಬೇಜಾರದ್ದು.
ಮನೆ ಮಠ ಕಳಕ್ಕೊಂಡು ನಿರ್ವಸತಿಕರಾಗಿ ದಾರಿಗೆ ಬಿದ್ದ ನಾಗರೀಕರ ಜೀವನದ ಕತೆ ಬೇಜಾರದ್ದು.
ಬದ್ಕಿ ಒಳುದೋರ ಕುಟುಂಬಲ್ಲಿ ಪ್ರೀತಿಪಾತ್ರರ ಅಗಲುವಿಕೆ ಮತ್ತೂ ಬೇಜಾರದ್ದು.
ಈ ಎಲ್ಲ ಬೇಜಾರವ ಸಹಿಸುವ ಶೆಗ್ತಿಯ ಗಂಗೆಯೂ, ಆ ಗಂಗೆಯ ಜಟೆಲಿ ಕಟ್ಟಿಗೊಂಡ ಶಿವನೂ ಕೊಡ್ಳಿ; ಮುಂದಕ್ಕೆ ಸುಖಶಾಂತಿ ತುಂಬುಸಿ ದೇಶವ ಸುಭಿಕ್ಷಗೊಳುಸಲಿ ಹೇದು ಬೈಲಿನ ಆಶಯ. ಅಲ್ಲದೋ?
~
ಹೇಳಿದಾಂಗೆ, ಗಂಗಾಮಾತೆಯ ರೌದ್ರಾವತಾರ ಬಪ್ಪಗಳೂ ನಮ್ಮ ಗುರುಪೀಠಕ್ಕೆ ಏನೂ ಸಮಸ್ಯೆ ತೊಂದರೆಗೊ ಆಗದ್ದೆ ಇತ್ತಾಡ.
ಗಂಗೆ ಇಳುದ ಮೇಗೆ ಎಡಪ್ಪಾಡಿಭಾವಂಗೆ ಪೋನು ಮಾಡಿ ಸೌಖ್ಯಲ್ಲಿದ್ದೆಯೊ° – ಹೇಳಿದ್ದವಾಡ.
ಸಂತೋಷದ ಶುದ್ದಿ.

ಒಂದೊಪ್ಪ: ಗಂಗೆ ಒಲುದರೆ ಅಡಿಂಗೆ ಬಿದ್ದೋನುದೇ ಮೇಗಂಗೆ ಬಕ್ಕು. ಅಲ್ಲದೋ?

9 thoughts on “ಒಲುದರೆ ಗಂಗೆ, ಮುನಿದರೆ ಮೇಗಂಗೆ..

  1. ಹರೆರಾಮ, ನಮ್ಮ ಶ್ರೀ ಸಂಸ್ಥಾನ ಆಶೀರ್ವಚನಲ್ಲಿ ಹೇಳುವದು ಕೇಳಿದ್ದೆ . “ಆರುದೆ ಜನಸಂಖ್ಯಾನಿಯಂತ್ರಣ ಮಾಡೆಡಿ ಹುಟ್ಟದ್ದ ಮಕ್ಕೊಗೆ ಮೋಕ್ಷ ಕೊಡೆಡಿ ಅದು ಪ್ರಕೃತಿಯೇ ಮಾಡುತ್ತು” ಇದು ನೆಂಪಾತು. ಹಾಂಗೇ ತೀರ್ಥಕ್ಷೇತ್ರಕ್ಕೆ ಹೋದಿಪ್ಪಾಗ ಎಲ್ಲೋರೊಟ್ಟಿಂಗೆ ಮೋಕ್ಷ ಸಿಕ್ಕೆಕ್ಕಾರು ಅದೊಂದು ಪುಣ್ಯವೇ

  2. ಕೇದಾರವ ನಡಕ್ಕೊಂಡು ಹೋಗಿ ನೋಡಿ ಬಂದೋರಿಂಗೆ ಅಂದಾಜಿ ಅಕ್ಕು, ಅಲ್ಲಿ ಅನಾಹುತ ಆದರೆ ಹೇಂಗಕ್ಕು ಹೇಳಿ. ಅನಾಹುತವೇ ಆತು. ರುದ್ರ ಮಾತ್ರ ಒಳಿದು ಶಂಕರಾಚರ್ಯರ ಸಮಾಧಿ ಒಟ್ಟಿಂಗೆ ಎಲ್ಲವು, ಎಲ್ಲರು ತೊಳಕ್ಕೊಂಡು ಹೋದವು. ಶಿವಾ

  3. ಶುದ್ದಿಯ ತಲೆಬರಹಲ್ಲಿಪ್ಪ ಹೊಸ ಗಾದೆ ಮಾತಿನ ಕೇಳುವಗ ರಜಾ ತಮಾಷೆ ಆಗಿ ಕಂಡರೂ, ಆ ಘಟನೆಲಿ ಸಿಕ್ಕಿ ಹಾಕೆಂಡವರ ಕಷ್ಟ ನಷ್ಟಂಗಳ ಕಂಡಪ್ಪಗ ಅಬ್ಬಾ ಅದೊಂದು ಜಲಪ್ರಳಯವೇ ಹೇಳಿ ಕಂಡತ್ತು. ಇನ್ನೂ ಹೀಂಗಿಪ್ಪದು ನಾವೆಷ್ಟು ಕಾಂಬಲಿದ್ದೊ ಆ ಶಿವನೇ ಬಲ್ಲ. ಪ್ರಕೃತಿಗೆ ಕೋಪ ಬಂದರೆ ಅದರ ಎದುರು, ಪೈಸೆಕ್ಕಾರ, ಬಡವ, ಕಲ್ತವ, ಬೋಸ ಹೇಳಿ ಎಂತೂ ಇಲ್ಲೆ ಅಲ್ಲದೊ ? ಎಲ್ಲವೂ ಒಂದೇ. ಎಲ್ಲ ಜೆನಕ್ಕೆ ಅರ್ಥ ಆಯೆಕಷ್ಟೆ.

  4. ಕಣ್ಣಾರೆ ಎರಡು ವರ್ಶದ ಹಿಂದೆ ಕಂಡ ಜಾಗೆ ಹೊದ ಜಾಗೆ ಈ ಸರ್ತಿಯಾಣ ಅವಸ್ಥೆ ಕಾಮಂಬಾಗ ಛೆ ಹೀಂಗಿಪ್ಪ ಪರಿಸ್ಥಿತಿ ಬಂತೋ ಹೇಳಿ ಆತು..ನಿಜ ಹೇಳೆಕ್ಕಾರೆ ಅಲ್ಲಿ ಅವ್ಯಹತವಾಗಿ ಗಣಿಗಾರಿಕೆ ನದಿ ತಿರುವು ಇತ್ಯಾದಿಗ ಆಗ್ತಾ ಇದ್ದು ಅದರ ಪರಿಣಾಮ ಇಷ್ಟು ದೊಡ್ಡ ಅನ್ನಹುತಕ್ಕೆ ನಾಂದಿಯೋ ಹೇಳಿ ಕಾಣ್ತು..

  5. ತುಂಬಾ ಬೇಜಾರ ಅಪ್ಪ ಶುಧ್ಧಿ. ಪೇಪರಿಲ್ಲಿದೆ ಬಂದದು ಓದುವಗ ಬೇಜಾರ ಆವ್ತು.
    ಗುರುಗೊ ಮತ್ತೆ ಎಲ್ಲೋರುದೆ ಸೌಖ್ಯಲ್ಲಿದವು ಹೇಳಿ ಸಂತೋಶ ಆತು.

  6. ಅದರಲಿ, ಎಲ್ಲಿಯ್ಯೋಣರ ,ಪಾತ್ರವೂ ಇದ್ದೂ ಹೇಳೀ ಪ್ರಚಾರ ಕ೦ಡತ್ತಪ್ಪ.

  7. ಎಲ್ಲರಿಂಗೂ ಶುಭವಾಗಲಿ. ಮಳೆ ರುದ್ರನ ಬಾಣಂಗಳಲ್ಲಿ ಒಂದಡ.[ಅನ್ನಂ ವಾತೋ ವರ್ ಷಮಿಷವಃ]ಇದರ ಸರಿಯಾದ ಅರ್ಥ ಈಗ ಆತು.

  8. ನೆಡು ಇರುಳಾತು. ಇನ್ನು ಮನುಗಿ ಒರಗುತ್ತೆ. ನಾಳೆ ಎಂತಾವ್ತೋ ಆ ಶಿವನೇ ಬಲ್ಲ. ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ – ಅಟ್ಟು ಮಾತ್ರ ನಾವು ಹೇಳ್ಳೆಡಿಗಷ್ಟೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×