ವರ ಕೊಡುವ ಮಹಾಲಕ್ಷ್ಮಿಗೆ ನಾವುದೇ ವರ ಅಪ್ಪೊ°..!

August 8, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಶುಭ ಆಷಾಡ ಕಳುದು ಬತ್ತ ಶ್ರಾವಣ ತುಂಬ ವಿಶೇಷ ಗಟ್ಟದ ಮೇಗೆ.
ಚಾಂದ್ರಮಾನ ಶ್ರಾವಣ ಮಾಸ ಹೇದರೆ ಸಂಭ್ರಮವೇ; ಶ್ರಾವಣ ಹುಣ್ಣಮೆ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ – ಒಟ್ಟಿಲಿ ಇಡೀ ಶ್ರಾವಣ ಮಾಸ – ಬೇರೆಬೇರೆ ಗೌಜಿಗಳ ಆಚರಣೆ ಮಾಡ್ತವು!
ಶ್ರಾವಣ ಮಾಸದ ಎರಡ್ಣೇ ಶುಕ್ರವಾರ – ಒಂದು ವಿಶೇಷ ಹಬ್ಬ ಇದ್ದು. ಅದುವೇ “ವರ ಮಹಾಲಕ್ಷ್ಮೀ” ಹಬ್ಬ. ಕಾಂಬು ಅಜ್ಜಿಯ ಕಾಲಲ್ಲಿ ದೊಡ್ಡ ವಿಶೇಷ ಇಲ್ಲದ್ದರೂ – ಈಗ ಸುರು ಆಯಿದು. ಪೇಟೆ ಪೇಟೆಗಳಲ್ಲಿ ಹಬ್ಬಿ ಕ್ರಮೇಣ ಹಳ್ಳಿಗೊಕ್ಕೂ ಎತ್ತುಲೆ ಸುರು ಆಯಿದು.

~
ಬ್ರಹ್ಮ – ವಿಷ್ಣು – ಮಹೇಶ್ವರರಾದ ತ್ರಿಮೂರ್ತಿಗೊಕ್ಕೆ ಒಂದೊಂದು ವ್ಯವಹಾರಂಗೊ ಇದ್ದು. ಒಬ್ಬ° ಸೃಷ್ಟಿಕರ್ತ°, ಮತ್ತೊಬ್ಬ° ಸ್ಥಿತಿಕಾರಕ°, ಇನ್ನೊಬ್ಬ° ಲಯಕರ್ತ°. ಜೀವದ ಉಗಮ ಭೂಲೋಕಲ್ಲಿ ಇರೆಕ್ಕಾರೆ ಬ್ರಹ್ಮದೇವನ ಅನುಗ್ರಹ ಆಯೇಕು. ಆ ಜೀವದ ಆಯುಷ್ಯ ತೀರೆಕ್ಕಾರೆ, ಒಪಾಸು ಮೋಕ್ಷಕ್ಕೆ ಹೋಯೇಕಾರೆ ಶಿವನ ಕೃಪೆ ಒಲಿಯೆಕ್ಕು. ಇದರೆಡಕ್ಕಿಲಿ ಸ್ಥಿತಿಕಾರಕ ಆದ ವಿಷ್ಣುವಿನ ಅನುಗ್ರಹ ಇದ್ದರೆ ಭೂಲೋಕಲ್ಲಿ ಚೆಂದಲ್ಲಿ ಬದ್ಕಲೆಡಿತ್ತು – ಹೇದು ಕಾಂಬುಅಜ್ಜಿಯ ಕತೆ.

ವಿಷ್ಣು “ಸ್ಥಿತಿ”ಕಾರಕ. ಹೇದರೆ, ಸ್ಥಿತಿವಂತ. ಅವಂಗೆ ಒಳ್ಳೆ ಸ್ಥಿತಿ ಇರೆಕ್ಕಾರೆ ಕಾರಣ ಎಂತರ?
ಆರಾರು “ಒಳ್ಳೆ ಸ್ಥಿತಿಲಿ ಇದ್ದವು” ಹೇದರೆ, ಅದಕ್ಕೆಂತ ಅರ್ಥ? – ಅವನತ್ರೆ ಪೈಶೆ ಇದ್ದು ಹೇದು, ಅಲ್ಲದೋ?
ವಿಷ್ಣುದೇ ಸ್ಥಿತಿವಂತ° ಆಗಿದ್ದ°; ಹೇದರೆ ಅದರ ಅರ್ಥ ಎಂತ್ಸರ? ಅವನ ಹತ್ತರೆ ಪೈಶೆ ಇದ್ದು ಹೇಳಿಯೋ?
ಅಪ್ಪು, ಅವನ ಹೆಂಡತ್ತಿಯ ಕೈಲಿ ಒಳ್ಳೆತ ಪೈಶೆ ಇದ್ದು. ಎಂದಿಂಗೂ ಮುಗಿಯದ್ದಷ್ಟು ಪೈಶೆ ಇದ್ದು. ಇಡೀ ಲೋಕಕ್ಕೇ ಸಾಕಪ್ಪಷ್ಟು ಪೈಶೆ ಇದ್ದು! ಆರು ಅವನ ಹೆಂಡತ್ತಿ?
ಆರ ಕೃಪಾದೃಷ್ಟಿ ಒಬ್ಬ ಬಡವನ ಮೇಗೆ ಬಿದ್ದಪ್ಪಗ ಅವ ಶ್ರೀಮಂತ ಆವುತ್ತನೋ, ಆರ ಅವದೃಷ್ಟಿಂದಾಗಿ ಆಗರ್ಭ ಶ್ರೀಮಂತ ಭಿಕಾರಿ ಆವುತ್ತನೋ – ಅಂತಾ ಲಕ್ಷ್ಮೀ ದೇವಿ.

ಲಕ್ಷ್ಮೀದೇವಿಯ ಗೆಂಡ ವಿಷ್ಣುವಿಂಗೆ ಬೇಂಕಿಲಿ ಕೂದ ಹಾಂಗೇ ಅಕ್ಕು! ದೊಡ್ಡ ದೊಡ್ಡ ಕಟ್ಟದ ಪೈಶೆ. ಆದರೆ ತನ್ನದಲ್ಲ! ನೋಡ್ಳೆ ಮಾಂತ್ರ ಸಿಕ್ಕುತ್ತದು.
~

ಉದಿಯಪ್ಪಗ ಎದ್ದ ಕೂಡ್ಳೇ “ಕರಾಗ್ರೇ ವಸತೇ ಲಕ್ಷ್ಮೀ “ – ಹೇದು ಒಪ್ಪಕ್ಕ° ಕೈನೋಡಿಗೊಂಡು ಶ್ಲೋಕ ಹೇಳುಸ್ಸು.
ಲಕ್ಷ್ಮಿ ಕೈ ಕೊಡೀಲಿ ಇರ್ತಾಡ ಯೇವಗಳು. ಪೈಶೆ – ತೆಕ್ಕೊಂಬಲೋ ಕೊಡ್ಳೋ ಮಾಡೇಕಾರೆ ಕೈಯ ಕೊಡೀಲಿ ಮಡಿಕ್ಕೊಳೆಕ್ಕಾವುತ್ತಿದಾ.  ಅದಿರಳಿ.

~

ಸರಸ್ವತಿ ವಿದ್ಯೆಗೆ ಮಾತೆ ಆದರೆ ಲಕ್ಷ್ಮಿ ಪೈಶೆಗೆ ಅಧಿದೇವತೆ.
ಅದಕ್ಕೇ ಈಗಾಣ ಕಾಲಲ್ಲಿ ಲಕ್ಷ್ಮಿಯ ಬಗ್ಗೆ ಹೆಚ್ಚು ಒಲವು ಸುರು ಆದ್ಸೋ ಏನೋ! ಉಮ್ಮಪ್ಪ!! ಒಪ್ಪಣ್ಣಂಗರಡಿಯ.

ಧನಾಧಿಪತಿ ಲಕ್ಷ್ಮೀದೇವಿಯ ಪೂಜೆ ಮಾಡ್ತದು ನಮ್ಮ ಸಂಪ್ರದಾಯವೇ.
ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಕಲಶಕ್ಕೆ ಆವಾಹನೆ ಮಾಡಿ – ಪ್ರೋಕ್ಷಣೆ ಅರ್ಚನೆ ಅಲಂಕಾರ ನೈವೇದ್ಯ ಮಂಗಳಾರತಿ ಮೂಲಕ ಪೂಜೆ ಮಾಡುದು ಭಟ್ಟಮಾವನ ಸತ್ಯನಾರಾಯಣ ಪೂಜೆಲಿ ಬತ್ತು. ಸತ್ನಾರ್ಣಪೂಜೆಲಿ “ಲಕ್ಷ್ಮೀ ಸಹಿತ” – ಹೇದು ಒತ್ತಿ ಹೇಳ್ತವು.
ಹೆಂಡತ್ತೀ ಸಹಿತ ಗೆಂಡಂಗೆ ಪೂಜೆ ಮಾಡ್ತೆ – ಹೇಳುಸ್ಸೆಂತಕೆ? ಉಮ್ಮಪ್ಪ!
ವಿಷ್ಣುವಿನ ಹೆಂಡತ್ತಿ ಅಲ್ಲದೋ? ಧನನಿಧಿ ಒಟ್ಟಿಂಗೇ ಇದ್ದಲ್ಲದೋ –  ಹಾಂಗಾಗಿ ಜಾಗ್ರತೆಲೇ ಇರೆಕ್ಕಾವುತ್ತು; ಪಕ್ಕನೆ ಸಾಲದ್ದೆ ಬಪ್ಪಲಾಗ ಇದಾ – ಹೇದು ಕುಂಬ್ರಜೋಯಿಷರು ನೆಗೆಮಾಡ್ಳಿದ್ದು ಒಂದೊಂದರಿ.

ಅದಿರಳಿ.
~

ಒರಿಶಕ್ಕೊಂದರಿ ಬಪ್ಪ ಶ್ರಾವಣ ಮಾಸದ ಎರಡ್ಣೇ ಶುಕ್ರವಾರ ಇಂದು.
ಗಟ್ಟದ ಮೇಗಾಣ ಅತ್ತೆಕ್ಕೊ ಇದರ “ವರಮಹಾಲಕ್ಷ್ಮೀ ವ್ರತ” ಹೇದು ಆಚರಣೆ ಮಾಡ್ಳಿದ್ದು. ವರಮಹಾಲಕ್ಷ್ಮಿ ಹಬ್ಬದ ದಿನ ವರಮಹಾಲಕ್ಷ್ಮಿ ವ್ರತ. ಸತ್ಯನಾರಾಯಣ ವ್ರತದ ಹಾಂಗೇ ಇದಕ್ಕೂ ಆಚರಣೆ, ಕಥೆ, ನೈವೇದ್ಯ – ಎಲ್ಲವೂ ಇದ್ದು. ಬೆಂಗ್ಳೂರಿನ ಶುಭತ್ತೆಗೆ ಇದು ಸರೀ ಅರಡಿಗು; ಅಲ್ಯಾಣ ನೆರೆಕರೆಯೋರು ಮಾಡ್ಸರ ನೋಡಿ, ಅವರೊಟ್ಟಿಂಗೆ ಸೇರಿಗೊಂಡು ಸರೀ ಅಭ್ಯಾಸ ಆಯಿದು.

ಉದಿಯಾಂದಲೇ ಶುದ್ಧಲ್ಲಿದ್ದುಗೊಂಡು ಹೆಮ್ಮಕ್ಕಳೇ ಸೇರಿ ಮಾಡ್ತ ಪೂಜೆ ಅಡ ಅದು.
ಸತ್ನಾರ್ಣ ಪೂಜೆಯ ಕಲಶದ ಹಾಂಗೇ ಒಂದು ಕಲಶ ಮಡಗಿ, ಅದಕ್ಕೆ ಅಲಂಕಾರ.
ಪಟ್ಟೆಸೀರೆಯೋ, ರವಕ್ಕೆ ಕಣವೋ, ಮಲ್ಲಿಗೆ ಮಾಲೆಯೋ – ಇತ್ಯಾದಿಗಳ ಚೆಂದಕೆ ಅಲಂಕಾರ ಮಾಡಿ – ಅದಕ್ಕೆ ಲಕ್ಷ್ಮಿಯ ಕಲ್ಪಿಸಿಗೊಂಬದು.
ಅಳಗೆಯ ಹಾಂಗೆ ಉರೂಟು ಇರ್ತು ಹೇದು ನೆಗೆಮಾಡುದು ಅಲ್ಲ ಮಿನಿಯ! ದೇವರುದೇ ಕಾಂಬಲೆ ಶುಭತ್ತೆಯ ಹಾಂಗೆ ಹೇದು ಗ್ರೇಶೇಕು ಹೇದು ಏನಿಲ್ಲೆ!

ಹಾಂಗೆ ಮಡಗಿದ ಕಲಶದ ಸುತ್ತವೂ ಲಕ್ಷ್ಮಿಗೆ ಅರ್ಪಣೆ ಮಾಡ್ತ ವಸ್ತುಗಳ ಮಡಗುಸ್ಸು. ಮಂತ್ರಾಚರಣೆ ಜಾಸ್ತಿ ಇಲ್ಲದ್ದರೂ ಹೆಮ್ಮಕ್ಕಳ ಬಾಯಿಲಿ ಸದಾ ತಿರುಗುತ್ತ ಲಕ್ಷ್ಮೀಪುರಾಣ, ಸೌಂದರ್ಯ ಲಹರಿ, ಲಲಿತಾ ಸಹಸ್ರನಾಮ –ಹೀಂಗಿರ್ಸರ ಹೇಳುಸ್ಸು. ಅರ್ಚನೆ, ಆರತಿ ಎಲ್ಲ ಶ್ರದ್ಧೇಲಿ ಮಾಡುಸ್ಸು. ನೈವೇದ್ಯಕ್ಕೆ ಮಾಡಿದ್ದರ ದೇವರಿಂಗೆ ಮಡಗುಸ್ಸು. ಸೇರಿದ ಎಲ್ಲೋರುದೇ ದೇವರಿಂಗೆ ಹೂಗು ಹಾಕಿ ನಮಸ್ಕಾರ ಮಾಡುಸ್ಸು. ಬಂದೋರು ಇದ್ದರೆ ದಕ್ಷಿಣೆ ಕೊಟ್ಟು ಕಾಲಿಡಿಸ್ಸು.
ಕಲಶಕ್ಕೆ ಕಟ್ಟಿದ ಪಟ್ಟೆನೂಲಿನ ಪೂಜೆ ಮಾಡಿದ ಹೆಮ್ಮಕ್ಕೊ ಕಟ್ಟಿಗೊಂಬಲ್ಯಂಗೆ ಪೂಜೆ ಮುಗಾತು ಹೇದು ಲೆಕ್ಕ.
ಲಕ್ಷ್ಮಿಯ ಸತತ ಅನುಗ್ರಹ ಸಿಕ್ಕಿ ತನ್ನ ಯೆಜಮಾನ, ತನ್ನ ಸ್ವಂತದ, ತನ್ನ ಮಕ್ಕಳ – ಇಡೀ ಸಂಸಾರದ ಪೈಶೆ ಅಗತ್ಯಕ್ಕೆ ಸರಿಯಾದ ದಾರಿ ತೋರುಸಿ ಅನುಗ್ರಹ ಮಾಡು – ಹೇದು ಲಕ್ಷ್ಮಿಯ ಹತ್ತರೆ ಕೇಳುಸ್ಸು.

ವರಲಕ್ಷ್ಮಿಯಾಗಿ ಸಿದ್ಧಿಯ ವರಕೊಡು,
ವಿದ್ಯಾಲಕ್ಷ್ಮಿಯಾಗಿ ಸಂಸಾರಕ್ಕೆ ಸಂಸ್ಕಾರ ಕೊಡು,
ಆರೋಗ್ಯ ಲಕ್ಷ್ಮಿಯಾಗಿ ಆಯುರಾರೋಗ್ಯ ಸೌಭಾಗ್ಯ ಕೊಡು,
ಧಾನ್ಯಲಕ್ಷ್ಮಿಯಾಗಿ ಅಡಿಗೆ ಕೋಣೆಲಿ ಇರು,
ಧನಲಕ್ಷ್ಮಿಯಾಗಿ ಕಪಾಟಿಲಿ ಇರು,
ವಿಜಯಲಕ್ಷ್ಮಿಯಾಗಿ ಒಲುದು ಇಡೀ ಕುಟುಂಬದ ಜೀವನವ ವಿಜಯದ ಹೊಡೆಂಗೆ ಕೊಂಡೋಗು – ಹೇಳ್ತದು ಆ ದಿನದ ಪ್ರಾರ್ಥನೆ ಆಗಿರ್ತು.

ಇಡಿಯ ಸಂಸಾರಕ್ಕಾಗಿ ಸಂಸಾರದ ಸಾರಥಿಯಾದ ಸೌಭಾಗ್ಯಲಕ್ಷ್ಮಿ ಮಾಡುವ ಪೂಜೆ ಅದು.

~

ಆಗಳೇ ಹೇಯಿದ ಹಾಂಗೆ ಇದು ಕಾಂಬು ಅಜ್ಜಿಯ ಕಾಲದ್ದಲ್ಲ. ಮತ್ತೆ ಎಲ್ಲಿಯೋ ಹೊಸ ಕಾಲಲ್ಲಿ ಸೇರಿಗೊಂಡದು.
ತಪ್ಪಲ್ಲನ್ನೇ, ಒಳ್ಳೆ ಆಚರಣೆಗೊ ಆದರೆ ಯೇವತ್ತು ಬೇಕಾರೂ ಸೇರ್ಲಕ್ಕು –ಹೇಳುಗು ಅರ್ತೋರು.

~
ಇದು ಮಹಾಲಕ್ಷ್ಮಿಯ ಕತೆ ಆತು.
ಸ್ತ್ರೀ ದೇವತೆಗೆ ಇಪ್ಪ ಅನನ್ಯ ಗೌರವಾದರವ ತೋರುಸಿ ಪೂಜಿಸಿ, ತನಗೆ ಬೇಕಾದ್ದರ ಒಲುಶಿ ಕೊಡು – ಹೇದು ಪ್ರಾರ್ಥನೆ ಮಾಡುವ ಸನ್ನಿವೇಶ.
ಅದೆಲ್ಲ ಸರಿ, ಆದರೆ ಬೇಜಾರಪ್ಪದು ಯೇವಗ – ಹೇದರೆ..
ಕಲ್ಲ ನಾಗನ ಕಂಡ್ರೆ ಹಾಲೆರೆತ್ತೋರು ನಿಜನಾಗನ ಕಂಡರೆ ಬಡಿಗೆ ತೆಗೆತ್ತ ಹಾಂಗೆ ಆವುತ್ತನ್ನೇ!

ಮಾತೆ, ಸ್ತ್ರೀ, ಸರಸ್ವತಿ, ಲಕ್ಷ್ಮಿ, ದುರ್ಗೆ, ದೇವಿ ಹೇದು ಗೌರವಲ್ಲಿ ಕಂಡ್ರೆ, ಆ ಗೌರವ ಯೇವತ್ತೂ ಒಟ್ಟಿಂಗೆ ಇರೆಕ್ಕಲ್ಲದೋ?
ನಮ್ಮ ಸಮಾಜದ ಒಳ ಇರ್ತ ಅಮ್ಮಂದ್ರ, ಅಕ್ಕಂದ್ರ ಅತ್ಯಾಚಾರ ಆವುತ್ತಾ ಇದ್ದು – ಹೇದರೆ ಇದು ಲಕ್ಷ್ಮಿಗೆ ಮಾಡುವ ದ್ರೋಹವೇ ಅಲ್ಲದೋ?
ನಾವು ಮಾಡುದಲ್ಲ, ನಮ್ಮೋರು ಮಾಡುದಲ್ಲ ಹೇದು ಕಣ್ಣು ಮುಚ್ಚಿ ಕೂದರೆ ಆವುತ್ತೋ?
ಪೂಜ್ಯ ನಾರಿಯರ ಗೌರವವ ಕಾಪಾಡಿಗೊಂಬಲೆ ಎಡಿಯದ್ದ ಕಾಮಾಂಧರು ನಮ್ಮೊಟ್ಟಿಂಗೆ ಇದ್ದವು ಹೇಳಿ ಆದರೆ, ಅವರ ನಿರ್ನಾಮ ಆಗೆಡದೋ?  ಅದಲ್ಲದ್ದೇ ಲಕ್ಷ್ಮಿಯ ಪೂಜಿಸಿರೆ ಎಷ್ಟು ಗುಣ ಸಿಕ್ಕುಗು?

~

ಯೇವದೋ ಬೇರೆ ಮನೆಲಿ ಹುಟ್ಟಿರೂ, ತಾನು ಕೈ ಹಿಡುದು ಬಂದ ಮನೆಯ ಬೆಳಗುವ ಪಣತೊಟ್ಟಿಪ್ಪ ಹೆಮ್ಮಕ್ಕಳ ಮಾತೆಗಳ ಹಾಂಗೆ ಕಾಣೆಕ್ಕು. ಮಕ್ಕಳ ಪಡೆದು, ದೊಡ್ಡಮಾಡಿ ಬೆಳೆಶಿ ಅದರ್ಲೇ ಸಾರ್ಥಕತೆ ಕಾಂಬ, ಅದರ ಹಿಂದೆ ಇಪ್ಪ ತ್ಯಾಗವ ನೋಡಿರೆ ಮಾತೆಗೊಕ್ಕೆ ಎಷ್ಟು ಗೌರವ ಕೊಟ್ರೂ ಕಮ್ಮಿಯೇ ಹೇದು ಅನುಸುತ್ತು.
ಹಾಂಗಿಪ್ಪಗ, ಅವಕ್ಕೆ ಅವಮರ್ಯಾದೆ ಕೊಡ್ಳಾಗ.
ಅಂತಾ ನೀಚರುದೇ – ತನ್ನ ಕೈಹಿಡುದು ಬಪ್ಪ ಹೆಣ್ಣುಜೀವವ ಒಂದರಿ ಗ್ರೇಶಲಿ, ಆ ಮಾತೆ ಮಾಡುವ ತ್ಯಾಗವ ಒಂದರಿ ಗ್ರೇಶಲಿ, ಆ ಮೂಲಕ ತನ್ನ ನೀಚತ್ವ ಬಿಡ್ಳೆ ಕಾರಣ ಆಗಲಿ – ಹೇಳ್ತದು ನಮ್ಮ ನಿರೀಕ್ಷೆ.

~

ವರಮಹಾಲಕ್ಷ್ಮಿ ದಿನ ಎಲ್ಲೋರಿಂಗೂ ಲಕ್ಷ್ಮಿಯ ಅನುಗ್ರಹ ಆಗಲಿ.
ಬೈಲಿನ ಎಲ್ಲ ಅಕ್ಕ-ಅಮ್ಮಂದ್ರಿಂಗೂ ಸಮಾಜಂದ ಅಭಯ ಸಿಕ್ಕಲಿ.

~

ಒಂದೊಪ್ಪ:  ನಮ್ಮ ಸಮಾಜದ ಮಾತೆಯರ ರಕ್ಷಣೆ ಮಾಡಿರೆ ಅದುವೇ ವರ; ಅದುವೇ ವ್ರತ; ಅದುವೇ ವರಮಹಾಲಕ್ಷ್ಮಿ ವ್ರತ. ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ವಿಜಯತ್ತೆ

  ಅಪ್ಪು, |ಕರಾಗ್ರೇ ವಸತೇ ಲಕ್ಷ್ಮೀ | ಕೈ ಬೆರಳುಗಳ ಕೊಡಿಲಿ ಲಕ್ಷ್ಮಿ ಇಪ್ಪದಾಡ . ಎಂತಕೆ ಹೇಳಿರೆ ನಾವು ಕೆಲಸ ಮಾಡಿ ಆ ಮಹಾಮಾತೆಯ ಒಲಿಸಿಗೊಳೆಕ್ಕು ಹೇಳುಗು . ಸೇವಾ ಕಾರ್ಯಕ್ಕೂ ನಮ್ಮ ಕೈಗಳೇ ಮಾಧ್ಯಮ . ಒಳ್ಳೆ ಸಂದರ್ಭದ ಸುದ್ದಿ ಒಪ್ಪಣ್ಣ .ವರಕೊಟ್ಟು ಹರಸೋ ವರಮಹಾಲಕ್ಷ್ಮಿ .

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ನಮ್ಮ ಸಮಾಜದ ಹೆಣ್ಮಕ್ಕಳ ರಕ್ಷಣೆ ಮಾಡಿರೆ ಅದುವೇ ವರ; ಅದುವೇ ವ್ರತ; ಅದುವೇ ವರಮಹಾಲಕ್ಷ್ಮಿ ವ್ರತ. ಭಲೇ, ಸರಿಯಾದ ಸಮಯಕ್ಕೆ ಸರಿಯಾದ ಮಾತು. ಒಪ್ಪಣ್ಣನ ಒಂದೊಪ್ಪಕ್ಕೆ ಒಂದೊಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 4. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಹರೇ ರಾಮ; ಬಹಳ ಗ೦ಭೀರವಾದ ವಿಷಯ ನಮ್ಮ ಹಿ೦ದೂ ಸಮಾಜವೇ ಇ೦ಥ ಸಮಯಲ್ಲಿ ಒಟ್ಟಾಯೆಕು.“ಯಾ ದೇವಿ ಸರ್ವ ಭೂತೇಷು ಮಾತೃರೂಪೇಣ ಸ೦ಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||”ಹೇಳುವ ಸ೦ಸ್ಕೃತಿ ನಮ್ಮದು ಹೇಳ್ವದರ ನಾವು ಕ್ರಿಯಾರೂಪಕ್ಕೆ ತರೇಕಾದ್ದು ಅನಿವಾರ್ಯ.ಅದರ ಕೊರತ್ತೆಯೇ ಇ೦ಥ ಅನಿಷ್ಟ೦ಗಕ್ಕೆ ಮೂಲಕಾರಣ.ಇನ್ನಾದರೂ ನಾವು ವರಕ್ಕು ತೂಗುವದರ ಬಿಟ್ಟು ಸ೦ಘಟನೆಯ ಬಲಪಡ್ಸುವದು ಒಳ್ಳೆದು.ಸಕಾಲಿಕ ಬರಹ.ಅಭಿನ೦ದನಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ

  ಲಾಯ್ಕ ಆಯಿದು

  [Reply]

  VN:F [1.9.22_1171]
  Rating: 0 (from 0 votes)
 6. shyamaraj.d.k

  ಲಾಯಕ ಆಯಿದು ಒಪ್ಪಣ್ಣ….

  [Reply]

  VA:F [1.9.22_1171]
  Rating: 0 (from 0 votes)
 7. Vinayak Rajat Bhat

  Ningo heliddu sari iddu. Ee kaalalli bhakti kaarya li manassu maadire dushkaryakke manassu baara. Aadare kaamaturaanam na bhayam na lajja. Kamaturaringe hedarike aagali naachige aagali irtille.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಡಾಗುಟ್ರಕ್ಕ°ದೊಡ್ಮನೆ ಭಾವದೇವಸ್ಯ ಮಾಣಿಮಂಗ್ಳೂರ ಮಾಣಿಕೇಜಿಮಾವ°ಒಪ್ಪಕ್ಕಚುಬ್ಬಣ್ಣಡೈಮಂಡು ಭಾವಪ್ರಕಾಶಪ್ಪಚ್ಚಿಬೋಸ ಬಾವಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಪವನಜಮಾವರಾಜಣ್ಣವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಸರ್ಪಮಲೆ ಮಾವ°ನೆಗೆಗಾರ°ಯೇನಂಕೂಡ್ಳು ಅಣ್ಣದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ