Oppanna.com

ವಿಜಯ ಸಂವತ್ಸರಲ್ಲಿ ಬೈಲಿನ “ಅಟ್ಟಿನಳಗೆ”ಗೂ ವಿಜಯವಾಗಲಿ..

ಬರದೋರು :   ಒಪ್ಪಣ್ಣ    on   02/08/2013    19 ಒಪ್ಪಂಗೊ

ಮಾಣಿ ಮಠದೊಳ ಚಾತುರ್ಮಾಸ್ಯದ ಶುದ್ದಿ, ಚಾತುರ್ಮಾಸ್ಯಲ್ಲೊಂದು ರಾಮಕಥೆಯ ಶುದ್ದಿ, ರಾಮಕಥೆಯೊಳ ಹನುಮಂತನ ಶುದ್ದಿ – ಹೀಂಗೆ ಶುದ್ದಿಗಳೇ ನಮ್ಮ ಬೈಲಿಲಿ ತಿರುಗೆಂಡು ಇಪ್ಪಗ ಮತ್ತಾಣ ಶುದ್ದಿ ಹೇಳುಲೂ ದಿನ ಬಂತದ!
ನಾವುದೇ ಒಂದು ಶುದ್ದಿ ಮಾತಾಡುವೊ; ಎಂತಾರು ಹೊಸತ್ತು. ಆಗದೋ?
ಹೇಂಗಿರ್ತ ಶುದ್ದಿ!? ನಮ್ಮ ಬೈಲಿಂದೇ ಶುದ್ದಿ.
~
ಐದೊರಿಶ ಹಿಂದಂದಲೇ ನೋಡಿರೆ, ನಮ್ಮ ಬೈಲು ಹುಟ್ಟಿ ಗೆಡು ಆಗಿ, ಮುಂದೆ ಬೆಳದು ಬೆಳಗಿ ದೊಡಾ ಮರದ ಹಾಂಗೆ ಎಲ್ಲಾ ಹೊಡೆಂಗೆ ಗೆಲ್ಲು ಹಬ್ಬುಸಿದ್ದು.
ಊರು-ಸೀಮೆ-ಹೋಬಳಿ, ದೇಶ – ಯೇವದೂ ಲಗಾವು ಇಲ್ಲದ್ದೆ ಒಂದೇ ವೇಗಲ್ಲಿ ಬೆಳೆತ್ತಾ ಇದ್ದು.
ಇದಕ್ಕೆಲ್ಲದಕ್ಕೂ ಕಾರಣ, ಹವ್ಯಕ ಸರಸ್ವತಿಯೂ, ಆ ಗುರುದೇವರ ಆಶೀರ್ವಾದವೂ ಹೇದು ನಂಬುತ್ತದು ಒಪ್ಪಣ್ಣನ ಕೊಶಿ.
ನಾವೆಲ್ಲೋರುದೇ ಸೇರಿಗೊಂಡು ಇದು ಬೆಳೆತ್ತಾ ಇದ್ದು ಹೇದು ಹೇಳಿಗೊಂಬೊ. ಅದೊಂದು ನವಗೆ ಹೆಮ್ಮೆಯ ಶುದ್ದಿಯೇ ಇದಾ!
ಬರೇ ಕಂಪ್ಲೀಟ್ರಿನ ಒಳದಿಕೆ ಮಾಂತ್ರ ಶುದ್ದಿಗೊ ಇದ್ದರೆ ಆಚಮನೆ ದೊಡ್ಡಪ್ಪಂಗೆ, ಪಳ್ಳತ್ತಡ್ಕ ದೊಡ್ಡಪ್ಪಂಗೆ ಎಲ್ಲ ಅರಡಿಸ್ಸು ಹೇಂಗೆ?
ಪಾರು ಅತ್ತೆಗೆ ಕಂಪ್ಲೀಟ್ರು ಬುಡಲ್ಲಿ ಕೂಪಲೆ ಪುರುಸೊತ್ತು ಸಿಕ್ಕುತ್ತೋ? ರೂಪತ್ತೆಯ ಐಪೇಡಿಲಿ ಬೈಲಿನ ಎಲ್ಲ ನೋಡ್ಲೆ ಪುರುಸೊತ್ತು ಸಿಕ್ಕುಗೋ? ಗುಣಾಜೆಮಾಣಿಯ ಸೇಮೆಸೂಂಗು ಪೋನಿಲಿ ಕಾಣ್ತೋ?
ಇಲ್ಲೆ.
ಹಾಂಗಾಗಿ, ಹಳಬ್ಬರಿಂಗೂ ಆತು, ಹೊಸಬ್ಬರಿಂಗೂ ಆತು; ಇಂದಿಂಗೂ ಆತು, ಮುಂದಂಗೂ ಆತು – ಎಂದೆಂದಿಂಗೂ ಆತು – ಹೇದು ನಾವು ಕಂಪ್ಲೀಟ್ರಿಂದ ಕಾಗತಕ್ಕೆ ಇಳುಶುಲೆ ಹೆರಟದು ನಿಂಗೊಗೆಲ್ಲೋರಿಂಗೂ ಅರಡಿಗು.
ಅಪ್ಪು, ಅದೇ – ಬೈಲಿನ ಶುದ್ದಿಗಳ ಪುಸ್ತಕ ರೂಪಲ್ಲಿ ಮಾಡಿದ್ದು.
ಕಳುದೊರಿಶ, ಬೆಂಗ್ಳೂರಿಲಿ – ನಂದನ ಚಾತುರ್ಮಾಸ್ಯಕ್ಕೆ ಕೂದ ಗುರುಗೊನಮ್ಮ ಬೈಲಿನ ಎರಡು ಪುಸ್ತಕಂಗಳ ಬಿಡುಗಡೆ ಮಾಡಿ ಅನುಗ್ರಹ ಮಾಡಿದ ಸಂಗತಿ ನಿಂಗೊಗೆ ನೆಂಪಿಕ್ಕು. (ಸಂಕೊಲೆ)
ಒಪ್ಪಣ್ಣ ಹೇಳಿದ ಪುಸ್ತಕಂಗೊ ಒಂದನೇದಾಗಿ “ಒಂದೆಲಗ” ಹೇಳ್ತ ಪುಸ್ತಕ ಆಗಿ, ಚೆನ್ನೈಭಾವ ಹೇಳಿದ ಲೇಖನಮಾಲೆ “ಷೋಡಶ ಸಂಸ್ಕಾರಂಗೊ” ಹೇಳ್ತ ಪುಸ್ತಕಕ ಆಗಿ ಮೂಡಿ ಬಯಿಂದು.
ಸಾವಿರಾರು ಜೆನ ಸಹೃದಯಿಗೊ ಕ್ರಯಕೊಟ್ಟು ತೆಕ್ಕೊಂಡಿದವು. ಅದರ್ಲಿ ಕೆಲವು ಜೆನ ಓದಿದ್ದವುದೇ. ಮತ್ತೂ ಕೆಲವು ಜೆನ ಪ್ರತಿಕ್ರಿಯೆಯೂ ಕೊಟ್ಟಿದವಿದಾ!
ಅದಿರಳಿ.
ಬೊಳುಂಬು ಮಾವ°, ಚೆನ್ನೈಬಾವ°, ದೊಡ್ಡಬಾವ°, ಶರ್ಮಪ್ಪಚ್ಚಿಯ ಹಾಂಗೆ ಹಗಲಿರುಳು ಮನೆಮನೆಗಳ ಸಂಪರ್ಕ ಮಾಡಿ “ಇದಾ, ನಮ್ಮ ಭಾಶೆಯ ಪುಸ್ತಕ, ಓದಿ, ಹೇಂಗಿದ್ದು ನೋಡಿ” ಹೇದು ಪ್ರಚಾರ, ಪ್ರಸಾರ ಮಾಡಿ ಹಲವೂ ಮನೆಗೊಕ್ಕೆ, ಮನಸ್ಸುಗೊಕ್ಕೆ ಎತ್ತುಸಿದ್ದು ಮರಗೋ? ಪ್ರಿಂಟು ಮಾಡಿದ ಕಟ್ಟ ಬಿಡುಸಿ ಐವತ್ತೇ ದಿನಲ್ಲಿ ಇರುವಾರ ಪ್ರಿಂಟಿಂಗೆ ಹೋಯೇಕಾದ ಹೆಮ್ಮೆ ಬೈಲಿಂದು.
ಇಂದಿಂಗೂ – ಮಾರ್ತಲ್ಲಿ ಬೈಲಿನ ಪುಸ್ತಕ ಕಂಡ್ರೆ ಒಂದರಿ ಕೈಲಿನೆಗ್ಗಿ ನೋಡ್ತ ಉದಾರಿಗೊ, ಕ್ರಯಕೊಟ್ಟು ತೆಕ್ಕೊಂಡು ಮನೆಗೆ ತತ್ತ ಉದಾರಿಗೊ ಧಾರಾಳ ಇದ್ದವು.
~

ಅಕ್ಷರದಣ್ಣ ಮಾಡಿಕೊಟ್ಟ ಬೋರ್ಡುಚಿತ್ರ
ಅಕ್ಷರದಣ್ಣ ಮಾಡಿಕೊಟ್ಟ ಬೋರ್ಡುಚಿತ್ರ

ಓದುತ್ತೋರಿದ್ದರೆ ಬರವೋರಿಂಗೆ ಬೆಂಬಲವೇ ಅಲ್ಲದೋ?
ಬೈಲಿಲಿಯೂ ಹಾಂಗೇ ಆತು. ಬೈಲಿನೋರು ಬೆಳದ ಹಾಂಗೇ ನೆರೆಕರೆಯೂ ಬೆಳದತ್ತು. ಇನ್ನೂ ಇನ್ನೂ ಜೆನಂಗೊ ಬಂದು ಶುದ್ದಿ ಹೇಳುಲೆ ಸುರು ಮಾಡಿದವು. ಒಪ್ಪಣ್ಣಂಗೆ ಒಬ್ಬನೇ ಹೇಳ್ತ ಅಸಕ್ಕಿಲ್ಲೆ, ಸಂಗಾತಕ್ಕೆ ನೆರೆಕರೆಯೋರು ಇದ್ದವನ್ನೇ!
ದೊಡ್ಡಮಾವ°, ಮಾಷ್ಟ್ರುಮಾವ°, ಬೊಳುಂಬು ಮಾವ°, ಶರ್ಮಪ್ಪಚ್ಚಿ, ಸರ್ಪಮಲೆ ಮಾವ°, ಅಡ್ಕತ್ತಿಮಾರುಮಾವ°, ಬಂಡಾಡಿ ಅಜ್ಜಿ, ಸುವರ್ಣಿನಿ ಅಕ್ಕ°, ವಿದ್ವಾನಣ್ಣ – ಹೀಂಗೆ ಹತ್ತೆಂಭತ್ತು ಜೆನ ಬಂದವು.
ಅಂದಿಂದ – ಇಂದಿನ ಒರೆಂಗೂ ಒಪ್ಪಣ್ಣನ, ಬೈಲಿನ ಕೈಹಿಡುದು ನೆಡೆಶುತ್ತರಲ್ಲಿ ನೆರೆಕರೆಯೋರದ್ದೂ ಮುಖ್ಯ ಪಾತ್ರ.
ಅವಕ್ಕವಕ್ಕೆ ಮನಸ್ಸಿಂಗೆ ಬಂದ ಶುದ್ದಿಗೆ ಚೆಂದ ರೂಪು ಕೊಟ್ಟು ಸಮಾಜಕ್ಕೆ ಅರ್ತ ಅಪ್ಪ ಹಾಂಗೆ ಮಾಡಿ ಶುದ್ದಿ ಮಾಡಿ ಬೈಲಿಲಿ ಹೇಳ್ತವು ನೆರೆಕರೆಯ ನೆಂಟ್ರುಗೊ.
ಕೇಳ್ತೋರು ಕೇಳ್ತವು, ಶುದ್ದಿಗಳ ಮೆಚ್ಚಿ ಒಪ್ಪ ಕೊಡ್ತೋರು ಕೊಡ್ತವು.
ಹಾಂಗಾಗಿ, ಈಗ ಹೇಮಾರ್ಸಿ ಮಡಗಿದಲ್ಲಿ ನೋಡಿರೆ – ನೆರೆಕರೆಂದಾಗಿ, ನೆರೆಕರೆಗಾಗಿ ನೆರೆಕರೆಂದಲೇ ಬಂದ ಹಲವು ಶುದ್ದಿಗಳದ್ದೇ ಕಟ್ಟ ಸುಮಾರು ಇದ್ದು.
~
ಹಾಂಗೆ ಶುದ್ದಿಗಳ ಅಂತೇ ಹೇಮಾರ್ಸಿ ಮಡಗಿರೆ ಅಡಿಗೆ ಸತ್ಯಣ್ಣಂಗೆ ಸಿಕ್ಕುಗೋ? – ಕೇಳುಗು ಚೆನ್ನೈಭಾವ.
ಅಂಬಗ ಎಂತ ಮಾಡೇಕು? – ಕಳುದೊರಿಶ ಮಾಡಿದ ಹಾಂಗೇ – ಬೈಲಿನ ಕಂಪ್ಲೀಟ್ರಿಲಿ ಇಪ್ಪದರ ಎಲ್ಲೊರ ಕೈಲಿ ಮಡಗೆಕ್ಕು!
ಹೇದರೆ, ಶುದ್ದಿಗಳ ತಂದು ಪುಸ್ತಕ ಮಾಡೇಕು!
ಆದರೆ – ಎಲ್ಲವನ್ನೂ ಒಟ್ಟಿಂಗೇ ಪುಸ್ತಕ ಮಾಡ್ತೇನೇ – ಹೇದರೆ, ಆ ಪುಸ್ತಕವ ಹೊರ್ಲೆಡಿಗೋ?! ಎಡಿಯಲೇ ಎಡಿಯ
ಅದಕ್ಕೆಂತ ಮಾಡೇಕು? ಅರಡಿತ್ತೋರು ಚಿಂತನೆ ಮಾಡಿಗೊಂಡವು ಬೈಲಿಲಿ.
ತುಂಬ ಇಡ್ಳಿ ಹಿಟ್ಟಿದ್ದರೆ, ಅಟ್ಟಿನಳಗೆಲಿ ಒಂದೊಂದು ಸರ್ತಿಂಗೆ ಹಿಡಿತ್ತಷ್ಟೇ ಬೇಶುತ್ತದಲ್ಲದೋ ಅಡಿಗೆ ಸತ್ಯಣ್ಣ? – ಕೇಳಿದವು ಚೆನ್ನೈಭಾವ°.
ಹಲಸಿನಣ್ಣಿನ ಕಾಲಲ್ಲಿ ತರವಾಡುಮನೆಲಿ ಒಂದೊಂದು ಸರ್ತಿಂಗೆ ಹಿಡಿತ್ತಷ್ಟೇ ಕೊಟ್ಟಿಗೆ ಕಟ್ಟಿಗೊಂಡಿದ್ದದಲ್ಲದೋ – ಕಾಂಬು ಅಜ್ಜಿ? – ಕೇಳಿದವು ಶ್ರೀಅಕ್ಕ°.
ಅದೇ ನಮುನೆ, ನಾವುದೇ ಬೈಲಿನ ಶುದ್ದಿಗಳಲ್ಲಿ ಈ ಸರ್ತಿಂಗೆ ಹಿಡಿತ್ತಷ್ಟೇ ಶುದ್ದಿಗಳ ಕೊಟ್ಟಿಗೆ ಕಟ್ಟಿ ಅಟ್ಟಿನಳಗೆಲಿ ತುಂಬುಸುವನೋ – ಹೇದು ಅಭಿಪ್ರಾಯ ಬಂತು.
ಅದೇ ಅಭಿಪ್ರಾಯಲ್ಲಿ ಈ ಸರ್ತಿಗೆ ಒಂದರಿಯಂಗೆ ಹಿಡಿತ್ತಷ್ಟೇ ಬೇಶಿದ್ದು.
ಅದರ್ಲಿ ಇಡ್ಳಿಯೂ, ಕೊಟ್ಟಿಗೆಯೂ, ಗೆಣಸಲೆಯೂ, ಸೆಕೆಗೆರದ್ದೂ – ಎಲ್ಲವೂ ಇಪ್ಪ ಹಾಂಗೆ ಮಾಡಿದ್ದು.
ಹಾಂಗಾಗಿ, ಆರಿಂಗೆ ಯೇವದು ಮೆಚ್ಚುತ್ತೋ ಅದರ ಆಂತುಗೊಂಬಲಕ್ಕು!

~
ಗಾತಿಗೂ ಆತು, ಕುಶಾಲಿಂಗೂ ಆತು ಹೇಳ್ತ ಹಾಂಗೆ ಪುಸ್ತಕಕ್ಕೆ “ಅಟ್ಟಿನಳಗೆ” ಹೇಳಿಯೇ ಹೆಸರು ಮಡಗುವೊ° – ಹೇದು ಸುಭಗಣ್ಣ ಸಲಹೆ ಕೊಟ್ಟವು.
ಎಲ್ಲೋರುದೇ ಒಪ್ಪಿದವು.
ಏನಂಕೂಡ್ಳಣ್ಣ ಅಟ್ಟಿನಳಗೆಯ ಮೋರೆಪುಟವ ಉದ್ದಿ ತೊಳದು ಕೊಟ್ಟವು,
ಡೈಮಂಡು ಭಾವ ಶುದ್ದಿಗಳ ಪಾಕ ಮಾಡಿದವು,
ಮುಳಿಯಭಾವ ಮುಚ್ಚಲು ಹಾಕಿದ್ದು ಸರಿ ಆಯಿದೋ ನೋಡಿಗೊಂಡವು,
ಅಭಾವ ಒಲೆಲಿ ಮಡಗಿದ್ದು ಸರಿ ಆವುತ್ತಾ ಇದ್ದನ್ನೇ – ಹೇದು ನೋಡಿಗೊಂಡವು.
ನೆರೆಕರೆಯ ಹತ್ತು ಸಮಸ್ತರು ಸೇರಿಗೊಂಡು ಆಯೇಕಾದ ಒಯಿವಾಟುಗಳ ಆಯೇಕಾದ ನಮುನೆಲಿ ಮುತುವರ್ಜಿಲಿ ತೆಕ್ಕೊಂಡು ಹೋದ ಕಾರಣ ಸುಲಾಬಲ್ಲಿ ಕೆಲಸ ಮುಗಾತು.
ಬೇಕಾದ ಚಿತ್ರ, ಚಿತ್ತಾರ, ಆಯೆತ ಎಲ್ಲ ಆಗಿ, ಪ್ರಿಂಟುದೇ ಆಗಿ ಈಗ ಲೋಕಾರ್ಪಣೆ ಆಗಿ ನಿಂಗಳ ಕೈಗೆ ಬಪ್ಪಲೆ ಹೆರಟು ನಿಂದಿದು!
ನಾಳ್ತು, ನಾಲ್ಕನೇ ತಾರೀಕಿಂಗೆ, ಆಯಿತ್ಯವಾರ ನಮ್ಮ ಮಾಣಿಮಠಲ್ಲಿ, ನಮ್ಮ ಗುರುಗೊ, ನಮ್ಮ ಬೈಲಿನ ಹೆರಿಯೋರ ಕೋರಿಕೆ ಮೇರೆಗೆ ಲೋಕಾರ್ಪಣೆ ಮಾಡಿ ಕೊಡ್ತವು!
~
ಈ ಅಟ್ಟಿನಳಗೆಲಿ ಆರದ್ದೆಲ್ಲ ಕೊಟ್ಟಿಗೆ ಇದ್ದು?
ನಿಂಗೊಗೆ ಗೊಂತಿದ್ದೋ? ಗೊಂತಾಯೇಕೋ? – ಸದ್ಯಲ್ಲೇ ಗೊಂತಾವುತ್ತು.
~
ಹೇಳಿದಾಂಗೆ, ಓ ಮನ್ನೆ ಪುತ್ತೂರಿಲಿ ಅಷ್ಟಾವಧಾನ ಕಳಾತು, ಗೊಂತಿದ್ದನ್ನೇ?
ಆ ಅಷ್ಟಾವಧಾನ ಕಾರ್ಯಕ್ರಮವ ನಮ್ಮ ಹಳೆಮನೆ ಅಣ್ಣತಮ್ಮಂದ್ರು ಕೆಮರಲ್ಲಿ ಹಿಡುದು ಮಡಿಕ್ಕೊಂಡದು ನಿಂಗೊಗೆ ಗೊಂತಿಕ್ಕು.
ಅವು ಅಂತೇ ಹಿಡುದು ಮಡಿಕ್ಕೊಂಡದಲ್ಲ, ಅದರ ಸೀಡಿ ಮಾಡಿ ನಿಂಗೊಗೆ ಎತ್ತುಸಲೆ ಬೇಕಾಗಿ.
ಹಾಂಗಾಗಿ, ಅದರ ಓ ಮನ್ನೆ ಕೂದುಗೊಂಡು ರಜ ತಿದ್ದಿ, ಉದ್ದಿ, ಬೇಕಾದ ನಮುನೆ ಮಾಡಿ, ಉರೂಟು ಸೀಡಿಲಿ ಪ್ರಿಂಟು ಮಾಡಿದ್ದವಾಡ.
ಅಟ್ಟಿನಳಗೆಯ ಒಟ್ಟಿಂಗೆ ಈ ಒಟ್ಟೆತಟ್ಟೆಯನ್ನೂ ಲೋಕಾರ್ಪಣೆ ಮಾಡ್ತವಾಡ ಗುರುಗೊ.
~
ವಿಜಯ ಸಂವತ್ಸರಲ್ಲಿ ನಮ್ಮ ಬೈಲಿಂದ ಪ್ರಕಟ ಆವುತ್ತಾ ಇಪ್ಪ ಎರಡು ಪ್ರಕಟಣೆಗೊ, ಶುದಿ ಪುಸ್ತಕ ಅಟ್ಟಿನಳಗೆ, ಅಷ್ಟಾವಧಾನ ಒಟ್ಟೆತಟ್ಟೆ (ಸೀಡಿ) – ಎರಡನ್ನೂ ವಿಜಯಗೊಳುಸೇಕು,
ಬೈಲಿನ ಎಲ್ಲೋರುದೇ ತೆಕ್ಕೊಂಡು ಓದಿ, ಕೇಳಿ, ಓದುಸಿ, ಕೇಳುಸಿ ಎಲ್ಲೊರಿಂಗೂ ಈ ವಸ್ತುಗೊ ಎತ್ತುತ್ತ ನಮುನೆ ಮಾಡಿಕೊಡೇಕು,
ಹವ್ಯಕ ಸಾಹಿತ್ಯ ಸೇವೆಲಿ ನಮ್ಮ ಬೈಲು ಮಾಡ್ತ ಅಲ್ಪ ಕಾರ್ಯವ ಪ್ರೋತ್ಸಾಹಿಸೇಕು,
– ಹೇಳ್ತದು ಬೈಲಿನ ಎಲ್ಲೋರ ಕೋರಿಕೆ.

ಸಾರಾಂಶ:
ಯೇವದು?: “ಅಟ್ಟಿನಳಗೆ” ಪುಸ್ತಕ
ಎಂತರ: ಒಪ್ಪಣ್ಣನ ಬೈಲಿಲಿ ಬಂದ ವಿವಿಧ ಅಭಿರುಚಿಯ ಲೇಖನ ಸಂಗ್ರಹ – ಭಾಗ ೧
ಲೋಕಾರ್ಪಣೆ ಮಾಡುಸ್ಸು: ನಮ್ಮ ಗುರುಗೊ
ಯೇವತ್ತು? : ೦೪-ಅಗೋಸ್ತು-೨೦೧೩, ಮಧ್ಯಾಹ್ನ
ಎಲ್ಲಿ?: ವಿಜಯ ಸಂವತ್ಸರ ಚಾತುರ್ಮಾಸ್ಯ, ಮಾಣಿ ಮಠ, ಪೆರಾಜೆ

ಎಲ್ಲೋರುದೇ ಬತ್ತಿರಲ್ಲದೋ?
~

ಒಂದೊಪ್ಪ: ಮನಸ್ಸಿಲಿಪ್ಪದು ಕಾರ್ಯಲ್ಲಿ ಇರಲಿ; ಬೈಲಿಲಿಪ್ಪದು ಕೈಲಿ ಇರಳಿ.
~
ಸೂ: “ಅಟ್ಟಿನಳಗೆ” ಪುಸ್ತಕಕ್ಕೆ ಶುದ್ದಿಗಳ ಸಂತೋಷಲ್ಲಿ ಒದಗುಸಿ ಕೊಟ್ಟ ಎಲ್ಲ ನೆರೆಕರೆ ನೆಂಟ್ರಿಂಗೂ ಒಪ್ಪಣ್ಣನ ಅಭಿಮಾನದ ವಂದನೆಗೊ.
ಮುಂದೆಯೂ ಸಹಕಾರ ಹೀಂಗೇ ಮುಂದುವರಿಯಲಿ. ಎರಡ್ಣೇ ಸರ್ತಿ ಅಟ್ಟಿನಳಗೆ ಕಟ್ಳೆ ಇನ್ನಷ್ಟು ಶುದ್ದಿಗಳ ಹೆರ್ಕುವಾಗಳೂ ಒಟ್ಟಿಂಗೆ ಸೇರೇಕು ಹೇದು ಕೋರಿಕೆ.

19 thoughts on “ವಿಜಯ ಸಂವತ್ಸರಲ್ಲಿ ಬೈಲಿನ “ಅಟ್ಟಿನಳಗೆ”ಗೂ ವಿಜಯವಾಗಲಿ..

  1. ಕಾರ್ಯಕ್ರಮಕ್ಕೆ ಭಾಗಿ ಅಪ್ಪಲಾಗದ್ರು ಅಟ್ಟಿನಳಗೆಯ ಮುಚ್ಚಲು ತೆಗದು ಒಂದರಿ ನೋಡಿ ಆಯ್ದು..ಸುಂದರವಾಗಿ ಬಂದಿದು ನಮ್ಮ ಬೈಲಿನ ಪ್ರಕಟಣೆ..ಹೀಂಗೆ ನಮ್ಮೆಲ್ಲರ ಸಹಕಾರಲ್ಲಿ ಮುಂದೆಯೂ ಯಶಸ್ಸಿನ ಮೆಟ್ಟಲು ಏರಲಿ..ಶುಭಾಶಯ.

  2. ಅಟ್ಟಿನಳಗೆಯ ಬೆಶಿ ಬೆಶಿ ಕೊಟ್ಟಿಗೆಯ ರುಚಿ ನೋಡ್ಳೆ ಕಾರ್ಯಕ್ರಮಕ್ಕೆ ಹೋತಿಕ್ಕಲೆಡಿಗಾತಿಲ್ಲೆ. ಅಂತೂ ಕಾರ್ಯಕ್ರಮ ಚೆಂದ ಆಯಿಕ್ಕು ಹೇಳಿ ಗ್ರೇಶುತ್ತೆ. “ಅಟ್ಟಿನಳಗೆ”ಗೆ ಒಳ್ಳೆ ಡಿಮಾಂಡು ಬಂದು ಮರುಮುದ್ರಣಗೊಳ್ಳಲಿ ಹೇಳುವ ಹಾರೈಕೆಗೊ, ನಾವೆಲ್ಲ ಕೈಜೋಡುಸಿ ಈ ಪುಸ್ತಕವ ಬೈಲಿನವಕ್ಕೆ, ನೆರೆಕರೆಯವಕ್ಕೆ ಎತ್ತುಸುವಲ್ಲಿ ಸಹಕರಿಸುವೊ. ಶುಭವಾಗಲಿ.

  3. ಅಟ್ಟಿನಳಗೆಯ ಒಳವೆ
    ಹಿಟ್ಟು ಮಡಗಿಯೆ ಬೇಶಿ
    ಕೊಟ್ಟರದು ರುಚಿಯಿಕ್ಕು ಪರಿಮಳವು ಬಕ್ಕು /
    ಹೊಟ್ತೆ ತುಂಬುಗು ಮತ್ತೆ
    ಕಟ್ತಿ ಮನಸಿನ ಒಟ್ತು,
    ಗಿಟ್ತುಗದ ಬಯಲಿಂಗೆ, ಕೆಲಸ ಒಪ್ಪಕ್ಕು /

  4. ಶುಭಾಶಯ೦ಗೊ.
    ‘ಅಟ್ಟಿನಳಗೆ’ –” ಇದು ಅಡಿಗೆ ಪುಸ್ತಕ ಅಲ್ಲ” ಹೇಳುವ ಸೂಚನೆ ಮತ್ತೂ ಲಾಯಿಕಾಯಿದು.

  5. ಶುಭಾಶಯಂಗೊ. ಅಟ್ಟಿನಳಗೆಲಿ ಮಾಡಿದ ತಿಂದಿಯ ರುಚಿಯ ತಿಂದೋರಿಂಗೇ ಗೊಂತಿಕ್ಕಷ್ತೆ….. ಭಾರೀ ಖುಷಿ ಆತು …ಒಳುದ ಲೇಖನಂಗಳುದೇ ಪುಸ್ತಕ ರೂಪಲ್ಲಿ ಬೇಗ ಹೆರ ಬರಲಿ ಹೇಳಿ ಹಾರೈಸುತ್ತೆ.
    ಇದಾ ಎನಗೆ ಒಂದು ಪುಸ್ತಕ ಬೇಕು. ಎಲ್ಲ ಖರ್ಚಾಯೆಕ್ಕರೆ ಮದಲೇ ತೆಗದು ಮಡಿಗಿ…

  6. ತುಂಬಾ ಖುಷಿ ಆತು ಈ ಶುಧ್ಧಿ ಕೇಳಿ.
    ಎಲ್ಲಾ ಲಾಯಿಕಾಗಲಿ, ಇನ್ನೂ ಹೀಂಗಿಪ್ಪ ಪುಸ್ತಕಂಗೋ ಹೆರ ಬರಳಿ.
    ಶುಭಹಾರೈಕೆಗೋ,
    ಹರೇ ರಾಮ….

  7. ಭಾರೀ ಸಂತೋಷ ಆತು. ಒಪ್ಪಣ್ಣಾ .. ಇನ್ನೂ ಒಪ್ಪ ಒಪ್ಪ ಪುಸ್ತಕಂಗೋ ಬಂದಂಡೆ ಇರಲಿ

  8. ಹರೇ ರಾಮ, ಶುಭಹಾರೈಕೆಗೊ. ಒಪ್ಪಣ್ಣನ ಬೈಲಿ೦ದ ಇನ್ನೂ ಹೀ೦ಗಿಪ್ಪ ಕಾರ್ಯ೦ಗ ಮು೦ದುವರಿಯಲಿ.

  9. ಅಟ್ಟಿನಳಗೆಯ ಮುಚ್ಚಳು ತೆಗವ ಮುಹೂರ್ತಕ್ಕೆ ಕಾಯ್ತಾ ಇದ್ದೆ. ಶುಭ ಹಾರೈಕೆಗೊ.

  10. ಹವ್ಯಕ ಭಾಷಾಸರಸ್ವತಿಯ ಸೇವೆ ಸಾ೦ಗವಾಗಿ ಮು೦ದುವರಿಯಲಿ ,ಶುಭಹಾರೈಕೆಗೊ .

  11. ಪುಸ್ತಕಕ್ಕೆ ಎಂತ ಹೆಸರೂಳಿ ಎಲ್ಲವು ಚರ್ಚೆ ಮಾಡಿದಾಗ ಆನು ಎಲ್ಲೋ ತೋಟಕ್ಕೆ ಹೋಗಿತ್ತಿದ್ದೇಳಿ ಕಾಣ್ತು. ಎನಗೊಂದು ಒಳ್ಳೆ ಹೆಸರು ಮನಸ್ಸಿಂಗೆ ಬೈಯಿಂದು. ಬೇಕಿದ್ದರೆ ಇನ್ನಾಣ ಪುಸ್ತಕಕ್ಕೆ ಮಡುಗಲಕ್ಕು. ಅದು “ಸಾಂಬಾರ ಮರಿಗೆ”.

  12. ಅಟ್ಟಿನಳಗೆಯ ಮುಚ್ಚಳ ತೆಗುದು ಅಟ್ಟಿನಳಗೆಯ ಒಳ ಇಪ್ಪ ಕೊಟ್ಟಿಗೆ ತಿಂಬ ಜೆಂಬರ ಲಾಯಕ್ಕಾಗಲಿ. ಹೇಳದ್ಹಾಂಗೆ ಎನ್ನದೂ ಒಂದು ಕೊಟ್ಟಿಗೆ ಇದ್ದು ಅದರಲ್ಲಿ.

  13. ಹರೇರಾಮ. ಅಟ್ಟಿನಳಗೆ ಮುಚ್ಹಲು ತೆಗವಗ ಘಮ ಘಮ ಬಂದು ಎಲ್ಲರೂ ರುಚಿ ನೋಡಿ ಅಪ್ಪಗಳೇಮುಗಿಯಲಿ ಹಾಂಗಿದ್ದ ಸ್ವಾದಕ್ಕೆ ಮತ್ತೊಂದರಿ ಅಟ್ಟಿನಳಗೆ ಮಡಗಲೆ ಸೇರುವೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×