ದೊಡ್ಡಾಸ್ಪತ್ರೆಯ ಎಂಬುಲೆನ್ಸಿಲಿ ದೇವರ ಪಟ ಇದ್ದಡ!!!

October 9, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಾತುರ್ಮಾಸ್ಯದ ಅಕೇರಿಯಾಣ ದಿನ ’ಚಾತುರ್ಮಾಸ್ಯ ಪ್ರಶಸ್ತಿ’ – ಹೇದು ಕೊಡ್ತ ಪರಿವಾಡಿ ಇದ್ದು ನಮ್ಮ ಮಠಲ್ಲಿ, ಅಪ್ಪೋ.
ಆರಾರು ಯೋಗ್ಯ, ಉನ್ನತ ಸಾಧನೆಯ ವೆಗ್ತಿಯ ಹುಡ್ಕಿ, ಅವರ ಸನ್ಮಾನಿಸಿ, ಅವಕ್ಕೆ ಪ್ರಶಸ್ತಿ ಒಟ್ಟಿಂಗೆ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸುತ್ತದು ನಮ್ಮ ಗುರುಗೊ ನೆಡೆಶಿಗೊಂಡು ಬಂದ ಒಂದು ಕ್ರಮ. ಹಲವೂ ಒರಿಶ ಆತು, ಹಲವೂ ಹೆರಿಯೋರಿಂಗೆ ಆ ಪ್ರಶಸ್ತಿ ಸಿಕ್ಕುಸ್ಸು.
ಯೇವತ್ರಾಣಂತೆ, ಈ ಸರ್ತಿ ಚಾತ್ರ ಚಾತುರ್ಮಾಸ್ಯಲ್ಲಿಯೂ ಪ್ರಶಸ್ತಿ ಸಂದಿತ್ತು.
ಯೋಗ್ಯ ಶಿಷ್ಯರೊಬ್ಬರ ಹುಡ್ಕಿ, ಅವರ ಸಾಧನೆಯ ತಿಳುಶಿ, ಅವರ ಮೇಗೆ ಮಂತ್ರಾಕ್ಷತೆ ಅನುಗ್ರಹಿಸಿ – ಇನ್ನೂ ಹಲವು ವಿದ್ಯಾರ್ಥಿಗೊ ಇವರ ಕೈಂದ ಪ್ರೇರೇಪಣೆ ಪಡಕ್ಕೊಳಲಿ – ಹೇದು ಅನುಗ್ರಹಿಸಿದವು ನಮ್ಮ ಗುರುಗೊ.
~
ಈ ಸರ್ತಿ ಚಾತುರ್ಮಾಸ್ಯ ಪ್ರಶಸ್ತಿಗೆ ಭಾಜನರಾದವು ಡಾ. ಪಿ.ಜೆ. ಭಟ್ – ಹೇದು ಕುಮಟಾ ಹೊಡೆಯಾಣ ಒಬ್ಬರು ವಿಜ್ಞಾನಿಗೊ ಅಡ.
ನಲುವತ್ತು ಒರಿಶ ಕಾಲ ಇಸ್ರೋ ಸಂಸ್ಥೆಲಿ ವಿಜ್ಞಾನಿ ಆಗಿ ಕೆಲಸ ಮಾಡಿದ ಅವಕ್ಕೆ ಕಳುದ ತಿಂಗಳೋ, ಕಳುದೊರಿಶವೋ ಏನೋ ನಿವೃತ್ತಿ ಆದ್ಸು.
ಆರ್ಯಭಟ ಉಪಗ್ರಹದ ಕಾಲಂದಲೇ ಸಂಸ್ಥೆಲಿ ಇದ್ದಿದ್ದ ಅವರ ಸೇವೆ ಮೊನ್ನೆ ಮೊನ್ನೆ ಇನ್ಸೇಟು, ಇಂಟರ್ನೆಟ್ಟು ಒರೆಂಗೂ ಎತ್ತಿದ್ದು.
ಎಷ್ಟೋ ಎಳೆ ವಿಜ್ಞಾನಿಗೊ ಅವರ ಕೈ ಕೆಳ ಸೇವೆ ಸಲ್ಲುಸಿ, ಅವರ ಕೈಂದ ಪಾಠ ಹೇಳುಸಿಗೊಂಡಿದವು.
ಸಂಸ್ಥೆಲಿ ಮಾಂತ್ರ ಅಲ್ಲದ್ದೆ, ಸಂಸ್ಥೆಂದ ಹೆರವೂ ಅವು ಹಲವಾರು ವಿದ್ಯಾರ್ಥಿಗೊಕ್ಕೆ ಮಾರ್ಗದರ್ಶನ ಕೊಟ್ಟಿದವಡ.
ನಮ್ಮ ಮಠದ ಗುರುಕುಲಕ್ಕೆ – ತಿಂಗಳಿಂಗೊಂದರಿ ಬಂದು ಪಾಠ ಮಾಡಿ ಹೋವುತ್ತವಾಡ, ಅಷ್ಟೂ ಮಕ್ಕಳ ಮೇಗೆ ಶ್ರದ್ಧೆ, ವಿಶ್ವಾಸ, ಪ್ರೀತಿ.
ಹಾಂಗಿರ್ಸ ವಿಜ್ಞಾನಿಗೆ ಈ ಸರ್ತಿಯಾಣ ಚಾತುರ್ಮಾಸ್ಯ ಪ್ರಶಸ್ತಿ ಒಲುದತ್ತು.

ಪ್ರಶಸ್ತಿ ಸ್ವೀಕಾರ ಮಾಡಿಕ್ಕಿ ಅವು ನಾಲ್ಕು ಎಡ್ಡೆಪಾತೆರ ಹೇಳಿದವಲ್ಲದೋ – ಅಷ್ಟಪ್ಪಗ ಒಪ್ಪಣ್ಣಂಗೂ ಅದರ ಕೇಳುವ ಭಾಗ್ಯ ಸಿಕ್ಕಿದ್ದತ್ತು.
ಒಪ್ಪಣ್ಣ ಬೆಂಗ್ಳೂರಿಂಗೆ ಹೋದನೋ – ಹೇದು ಇನ್ನು ಕೇಳೆಡಿ; ಅಲ್ಲ – ಈಗ ಎಲ್ಲಿದ್ದರೂ ಗುರುಗಳ ಆಶೀರ್ವಚನ ನೋಡ್ಳೆಡಿತ್ತು; ಗುರುಗಳ ಬೈಲಿಲಿ.
ಹಾಂಗೆ, ನಾವು ಮೊನ್ನೆ ತರವಾಡು ಮನೆ ಶಾಂಬಾವನ ಕಾಂಬಲೆ ಹೋಗಿತ್ತು, ಅಲ್ಲಿ ಗುರುಗಳ ಚಾತುರ್ಮಾಸ್ಯದ ವೀಡ್ಯಂಗೊ ಕಂಡತ್ತು. ಟೀವಿಲಿ ಬತ್ತ ಹಾಂಗೆ, ನೇರಪ್ರಸಾರ ಇದಾ!
~

ಪ್ರಶಸ್ತಿ ಸ್ವೀಕರುಸಿದ ವಿಜ್ಞಾನಿ ಎಂತ ಹೇಳಿದವು? ಪ್ರಶಸ್ತಿ ತೆಕ್ಕೊಂಡ ವೆಗ್ತಿಯ ಬಗ್ಗೆ ಗುರುಗೊ ಎಂತ ಹೇಳಿದವು? ಪ್ರಶಸ್ತಿ ತೆಕ್ಕೊಂಡವರ ಬಗ್ಗೆ ಪರಿಚಯ ಭಾಶಣಲ್ಲಿ ಹೆಗ್ಡೇರಣ್ಣ ಎಂತ ಹೇಳಿದವು? ಒಪ್ಪಣ್ಣಂಗೆ ಪೂರ್ತ ನೆಂಪಿಲ್ಲೆ. ಆದರೆ, ಆ ವಿಜ್ಞಾನಿ ಮಾತಾಡುವಾಗ ಹೇಳಿದ ಹಲವೂ ವಿಶಯಂಗಳಲ್ಲಿ ಒಂದು ಸರೀ ನೆಂಪಿದ್ದು.
ಅದುವೇ – ನಂಬಿಕೆಯ ಬಗ್ಗೆ.

ನಂಬಿಕೆಯೇ ಜೀವನಲ್ಲಿ ಮುಖ್ಯವಾಗಿ ಬೇಕಪ್ಪದು; ಮನುಷ್ಯಂಗೆ ನಂಬಿಕೆ ಮುಖ್ಯ ಆಡ.
ವಿಜ್ಞಾನ ಎಷ್ಟೇ ಮುಂದುವರುದರೂ, ಅದರಿಂದ ಮೇಗಾಣದ್ದು ನಂಬಿಕೆಯೇ ಇರ್ಸು – ಹೇದು ವಿವರವಾಗಿ ಹೇಳಿದವು.
ಎರಡು ಅಣುಗಳ ಹಿಡುದು ಮಡಗುಸ್ಸ ಶೆಗ್ತಿ ಎಂತರ? ಆ ಬಂಧ ಎಂತರ? ಆ ಅಣುಗೊ ಎಂತಗೆ ಅಲ್ಲಿಯೇ ನಿಲ್ಲುತ್ತು?
ಅದರ ವಿವೇಚನೆ ಮಾಡಿದ ಸುರೂವಾಣ ವಿಜ್ಞಾನಿ ’ಅಲ್ಲೊಂದು ಬಂಧ ಇದ್ದು’ – ಹೇದು ಬರದ.
ಅವಂಗೆ ಅಲ್ಲಿ ಇಪ್ಪದಪ್ಪೋ ಹೇದು ನಿಜಕ್ಕಾದರೂ ಗೊಂತಿತ್ತಿಲ್ಲೆ.
ಅಲ್ಲಿ ನಿಜವಾಗಿಯೂ ಒಂದು ಬಂಧಶೆಗ್ತಿ ಇದ್ದು ಹೇದು ಗೊಂತಾಯೇಕಾರೆ ಮತ್ತೆ ಹಲವೂ ಒರಿಶ ಹಿಡುದ್ದು.
ಸುರುವಿಂಗೆ ದೇವರ ಮೇಗೆ ಬಾರ ಹಾಕಿಯೇ ಮಾಡೀದ ಕಲ್ಪನೆ ಅದು.

ಉಪಗ್ರಹ ಉಡಾವಣೆಗೆ ಸಿದ್ಧ ಆಯಿದು, ೧೦, ಒಂಭತ್ತು, ೮, ಏಳು, ೬, ಐದು – ಹೀಂಗೆ ಕೆಳಾಂತಾಗಿ ಸಂಖೆ ಎಣುಸಿಗೊಂಡು ಇದ್ದು ಮಿಷನು;
ಅಷ್ಟಪ್ಪಗ ವಿಜ್ಞಾನಿಗೊ ಎಂತ ಮಾಡ್ತವು?
ಸತ್ಯಕ್ಕಾದರೂ – ’ದೇವರ ನೆಂಪು ಮಾಡಿಗೊಳ್ತವು’.
ಆದರೆ, ವಿಜ್ಞಾನದ ಲೆಕ್ಕಲ್ಲಿ ನೋಡಿರೆ, ದೇವರಿಂದ ಆಯೇಕಾದ್ಸು ಎಂತ್ಸೂ ಇಲ್ಲೆ. ಎಲ್ಲ ಮಿಷನು ಕೆಲಸ ಮಾಡುಸ್ಸು, ಗುರುತ್ವ ಮೀರಿ ಹೆರ ಹೋಗಿ ಉಪಗ್ರಹವ ನಿಲ್ಲುಸುತ್ತು.
ಆದರೆ, ಎಲ್ಲದರಿಂದಲೂ ಹೆಚ್ಚು ಒಂದು ದೇವರ ಶೆಗ್ತಿ ಇದ್ದನ್ನೇ – ಅದರ ನಾವು ನೆಂಪುಮಾಡಿಗೊಳ್ತು.

ಇದು ಭಾರತದ ಇಸ್ರೋಲ್ಲಿ ಮಾಂತ್ರ ಅಲ್ಲ, ಎಲ್ಲ ದೇಸಂಗಳ ವಿಜ್ಞಾನಿಗಳ ಕತೆಯೂ ಹೀಂಗೇ.
ಸ್ವತಃ ವಿಜ್ಞಾನಿ ಆಗಿದ್ದರೂ, ಅವರ ವ್ಯಾಪ್ತಿಂದ ಹೆರ ಎಂತದೋ ಅಗೋಚರ ಅವ್ಯಕ್ತ ಶೆಗ್ತಿ ಇದ್ದು – ಹೇಳ್ತರ ನಂಬಿರ್ತವು.
~
ಇಷ್ಟೆಲ್ಲ ಅಪ್ಪಗ ಶಾಂಬಾವ° ಒಂದು ಸಂಗತಿ ಹೇಯಿದ°.
ಕೊಡೆಯಾಲಲ್ಲಿ ಎರಡು ಮೂರು ದೊಡ್ಡಾಸ್ಪತ್ರೆಗೊ ಇದ್ದು. ದೊಡ್ಡಾಸ್ಪತ್ರೆ ಹೇಯಿದ ಮತ್ತೆ ಅದಕ್ಕೊಂದು ಊಯಿಊಯಿಊಯಿ ಬಸ್ಸು ಇರ್ತಪ್ಪೋ – ಏಂಬುಲೆನ್ಸು!
ಸಣ್ಣ ಆಸ್ಪತ್ರೆಗೇ ಈಗಾಣ ಕಾಲಲ್ಲಿ ಏಂಬುಲೆನ್ಸು ಇದ್ದು; ಇನ್ನು ದೊಡ್ಡಾಸ್ಪತ್ರೆಗೆ ಇಲ್ಲದ್ದೆ ಇಕ್ಕೋ?

ಅತ್ಯಾಧುನಿಕ ವ್ಯವಸ್ಥೆಗೊ.
ಬೆಶಿಗಾಳಿ, ತಂಪುಗಾಳಿ, ಮದ್ದು, ಮಾತ್ರೆ, ಉಪಕರಣ, ಸಲಕರಣ, ಆಮ್ಲಜನಕದ ಸಿಲಿಂಡ್ರುಗೊ, ನಾಲ್ಕೈದು ನರ್ಸೆತ್ತಿಗೊ, ಒಂದೆರಡು ಡಾಗುಟ್ರು – ಎಲ್ಲವೂ.
ರೋಗಿ ಒಂದು ಒಳ ಬಂದು ಮನುಗುಲೇ ಇರ್ಸು; ಮತ್ತೆ ಪೂರ ವಿಜ್ಞಾನವೇ ಸರಿ.
ಹೊಟ್ಟೆಗೆ ಮಾತ್ರೆ, ನೆತ್ತರಿಂಗೆ ಮದ್ದು, ಮೂಗಿಂಗೆ ಗಾಳಿ, ಎದೆಗೆ ಕರೆಂಟು – ಎಲ್ಲವುದೇ ಇದ್ದು ಅದರ್ಲಿ.
ಹಾಂಗಿಪ್ಪ ಸರ್ವ ಸುಸಜ್ಜಿತ ವ್ಯವಸ್ಥೆ ಅದು.

ಆದರೆ –

ಒಟ್ಟಿಂಗೆ, ಅದರಲ್ಲಿ ಒಂದು ದೇವರ ಪಟವೂ ಇದ್ದಾಡ.

ರೋಗಿಗೆ ಬೇಕಾದ ವೈಜ್ಞ್ನಾನಿಕ ಸಲಕರಣೆಗೊ, ವೆವಸ್ತೆಗೊ ಎಲ್ಲವೂ ಮಾಡ್ಳಕ್ಕು. ಆದರೆ, ಅವನ ಒಳಿಶುದು ನಮ್ಮ ಕೈಲಿದ್ದೋ?
ಅದು ದೇವರ ಕೈಲೇ ಇಪ್ಪದಲ್ಲದೋ?
ಆ ಡಾಗುಟ್ರು, ನರ್ಸುಗಳೂ ಮನುಶ್ಯರೇ ಅಲ್ದೋ? ಅವುದೇ ಕೊನೆಗೆ ಬಾರ ಹಾಕುಸ್ಸು ದೇವರ ಮೇಗೆಯೇ ಅಲ್ಲದೋ?
ಹಾಂಗಾಗಿ, ಎಂಬುಲೆನ್ಸು ಎಷ್ಟೇ ಸುಸಜ್ಜಿತ ಆಗಿರಳಿ, ಎಂಬುಲೆನ್ಸಿಲಿ ಎಂತದೇ ಸಲಕರಣೆಗೊ ಇರಳಿ, ಮುಖ್ಯವಾಗಿ ಅದರ್ಲಿ ಒಂದು ದೇವರ ಪಟ ಇದ್ದೇಇದ್ದು.
ದೈವ ಸಾನ್ನಿಧ್ಯ ಇಲ್ಲದ್ದೆ ಆತೇ ಇಲ್ಲೆ – ಹೇಳುಸ್ಸು ತಾತ್ಪರ್ಯ.

ವಿಜ್ಞಾನಿಗೊಕ್ಕೂ ಅಷ್ಟೆ, ದಾಕುದಾರಂಗೂ ಅಷ್ಟೆ, ಮತ್ತೊಬ್ಬಂಗೂ ಅಷ್ಟೆ. ಎಷ್ಟೇ ಮಾಡಲಿ, ಎಷ್ಟೇ ಮುಂದುವರಿಯಲಿ;
ಕೊನೆಗೆ ಒಂದು ಹಂತಂದ ಮತ್ತಾಣದ್ದು ಅದೃಷ್ಯ.
ಅದರ ಕಾಣೇಕಾರೆ ದೇವರೇ ಆಯೇಕಷ್ಟೆ.
~

ಎಂತದೂ ಅರಡಿಯದ್ದೋರು ದೇವರ ನಂಬುತ್ತವು.
ಎಲ್ಲವನ್ನೂ ಅರಡಿತ್ತೋರು ದೇವರ ನಂಬುತ್ತವು.
ಆದರೆ ಎಡಕ್ಕಿಲಿ ಇರ್ತವಲ್ಲದೋ – ಅವಕ್ಕೆ ದೇವರ ನಂಬುದು ಅನಗತ್ಯ, ದೇವರಿಲ್ಲೆ – ಇತ್ಯಾದಿ ಕಾಂಬದು.
ಅಂದೇ ಈ ಬಗ್ಗೆ ಆಲೋಚನೆ ಇದ್ದತ್ತು ಒಪ್ಪಣ್ಣಂಗೆ, ಆದರೆ ಮೊನ್ನೆ ವಿಜ್ಞಾನಿಗೊ ಹೇಳುವಾಗ ಧೃಡ ಆತು.

ನಿಂಗೊ ಎಂತ ಹೇಳ್ತಿ?
~

ಒಂದೊಪ್ಪ: ಜ್ಞಾನ ಮುಂದುವರುದಷ್ಟೂ ದೈವ ರಹಸ್ಯವೂ ಮುಂದುವರಿತ್ತು. ಅಲ್ದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ವಿಜಯತ್ತೆ

  ಒಳ್ಳೆ ಶುದ್ದಿ ಒಪ್ಪಣ್ಣಾ, ಎಷ್ಟೇ ವಿಜ್`ಜಾನ ಬೆಳದರೂ ಜನನ-ಮರಣದ ಗುಟ್ಟು ಪ್ರಕೃತಿ ಬಿಟ್ಟು ಕೊಟ್ಟಿದಿಲ್ಲೆ ಅಲ್ಲೋ! ಅದು ದೇವರ, ಪ್ರಕೃತಿಯ ಕೈಒಳವೇ ಇದ್ದನ್ನೇ!. ಅಷ್ಟಪ್ಪಗ ತನ್ನಿಂತಾನೇ ದೇವರ ಮೇಗೆ ಭಾರ ಹಾಕುತ್ತವು.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ದೇವರ ಕೃಪೆ ಇಲ್ಲದ್ರೆ ಎಂತದೂ ನೆಡೆಯ. ನಿಜ ಒಪ್ಪಣ್ಣ. ಒಳ್ಳೆ ಶುದ್ದಿ. ಕಲ್ತವು, ಕಲಿಯದ್ದವರ ಎಡಕ್ಕಿಲ್ಲಿ ಇದ್ದವು, ದೇವರ ಹೆಸರನ್ನೇ ಮಡೆಗಿಯೊಂಡು, ಏನಕೇನಪ್ರಕಾರೇಣ ಹೆಸರುಗಳಿಸಲೆ ದೇವರಿಲ್ಲೆ ಹೇಳ್ತದು ನಿಜವಾಗಿಯೂ ಬೇಜಾರಿನ ಸಂಗತಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಪೆಂಗಣ್ಣ°ವಸಂತರಾಜ್ ಹಳೆಮನೆಕಜೆವಸಂತ°ಸುಭಗಪವನಜಮಾವಶುದ್ದಿಕ್ಕಾರ°ಬಟ್ಟಮಾವ°ಶ್ರೀಅಕ್ಕ°ಪಟಿಕಲ್ಲಪ್ಪಚ್ಚಿಸಂಪಾದಕ°ಪೆರ್ಲದಣ್ಣನೆಗೆಗಾರ°ಕೇಜಿಮಾವ°ಶೇಡಿಗುಮ್ಮೆ ಪುಳ್ಳಿದೊಡ್ಡಭಾವಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಜಯಶ್ರೀ ನೀರಮೂಲೆಕಳಾಯಿ ಗೀತತ್ತೆಚುಬ್ಬಣ್ಣಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ