Oppanna.com

ಒರಿಶಾರಂಭದ ವಿಶೇಷವಾದ ‘ವಿಷುಕಣಿ’ಯ – ಆಶೀರ್ವಾದ..

ಬರದೋರು :   ಒಪ್ಪಣ್ಣ    on   15/04/2011    27 ಒಪ್ಪಂಗೊ

ಅಜ್ಜಸುರಿಯ!
ಮೌಢ್ಯಲ್ಲಿ ಪುರುಸೋತು ಸಿಕ್ಕುಗು ಹೇಳಿ ಗ್ರೇಶಿದ್ದು ಮಾಂತ್ರ; ಪುರುಸೊತ್ತು ಮೋಸವೇ!
ಬೆಂಗುಳೂರಿಲಿರ್ತ ಪೇಂಟಿನಪುಟ್ಟಂಗೆ ಮಾಂತ್ರ ಅಲ್ಲ ಅಂಬೆರ್ಪು, ನವಗೂ ಇದ್ದು! 😉
ಜೆಂಬ್ರದೆಡಕ್ಕಿನ ಅಂಬೆರ್ಪಿಲಿ ಕೆಲವು ಕೆಲಸಂಗಳ ’ಮೌಢ್ಯಲ್ಲಿ ಮಾಡುವೊ’ ಹೇಳಿಗೊಂಡು ಮಡಗಿರ್ತು; ಹಾಂಗೆ ಮಡಗಿದ ಕೆಲಸಂಗೊಕ್ಕೆ ಮೌಢ್ಯ ಇರ್ತೋ? ಮಾಡ್ಳೇ ಬೇಕು.ಅದೆಲ್ಲ ಆಗೆಡದೋ?
ಈಗ ಹೇಂಗೂ ಅಡಕ್ಕಗೆ ಒಳ್ಳೆತ ಕ್ರಯ, ಹಾಂಗಾಗಿ ಕೆಲಸ ರಜ ಜಾಸ್ತಿಯೇ!
ಸೊಲುದ ಅಡಕ್ಕೆಲಿ ಕೋಕ ಹೆರ್ಕುದೋ, ಸೋಗೆ ಕಡುದು ಅಟ್ಟೊಳಿಗೆಲಿ ಮಾಡ್ತದೋ, ಚುಕ್ರನ ಕೈಲಿ ಸೌದಿ ಒಡೆಶುದೋ – ಅದು ಬತ್ತೆ ಹೇಳಿದ ದಿನ ಬಾರ!, ಹೊಳ್ಳಚ್ಚು (ಸೌದಿ) ಒಯಿಶುದೋ, ಮಾಡಿನ ಕರೆ ದಂಬೆ ಮನಾರ ಮಾಡ್ತದೋ, ಹಾಳೆ ಕಟ್ಟ ಕಟ್ಟಿ ಸೌದಿಕೊಟ್ಟಗೆ ಅಟ್ಟಕ್ಕೆ ಹಾಕುತ್ತದೋ – ಮಳೆಗಾಲ ಎದುರುಬತ್ತಿದಾ ಇನ್ನು!, ನೇಮ-ಬೂತ-ಕೋಲಂಗೊಕ್ಕೆ ಹೋಪದೋ – ಹೀಂಗೆಂತಾರು ಕೆಲಸಂಗಳೇ ಕೆಲಸಂಗೊ!
ಎಲ್ಲವನ್ನೂ ಮಾಡಿ ಪೂರೈಶುವಗ ಮೌಢ್ಯ ಮುಗಿವಲೂ ಆತಿದಾ. ಮತ್ತೆ ಪುನಾ ಜೆಂಬ್ರಂಗಳ ಚೊರಿ! ಅದಿರಳಿ.
~
ಅಂಬೆರ್ಪಿನ ಎಡಕ್ಕಿಲೇ ಗವುಜಿಗೊ ಬಪ್ಪದೋ; ಅಲ್ಲ ಗವುಜಿ ಬಪ್ಪಗ ಅಂಬೆರ್ಪು ಅಂಬೆರ್ಪು ಅಪ್ಪದೋ – ಒಪ್ಪಣ್ಣಂಗರಡಿಯ.
ಅದರಡೂ ಒಟ್ಟಿಂಗೇ ಅಪ್ಪಗ ಯೇವದು ಸುರುವಿಂಗೆ ಒದಗಿ ಬತ್ತದು ಹೇಳ್ತದು ದೊಡಾ ಕನುಪ್ಯೂಸು!

ಈ ಸರ್ತಿಯೂ ಹಾಂಗೇ ಆಯಿದು. ನೋಡಿ ಬೇಕಾರೆ!
ಮನ್ನೆ ಉದೆಕಾಲಕ್ಕೇ ಶ್ರೀಅಕ್ಕ ಪೋನಿಲಿ ತಿಳುಸಿದವು, ಮಾಷ್ಟ್ರುಮಾವನಲ್ಲಿಗೆ – “ಮೆಡಿಮುರಿವಲಿದ್ದು, ಒಪ್ಪಣ್ಣ ಬರಳಿ!” ಹೇಳಿಗೊಂಡು.
ಹ್ಮ್, ಹೆರಟತ್ತು; ಒಟ್ಟಿಂಗೆ ಬೋಚಬಾವನೂ, ಪೆಂಗಣ್ಣನೂ ಇದ್ದಿದ್ದವಾದರೂ – ಅವಕ್ಕೆ ಮೆಡಿಮುರಿವಲೆ ಇಂತಿಷ್ಟೇ ಅರಡಿಗು ಹೇಳಿ ಬೈಲಿಂಗೇ ಗೊಂತಿದ್ದು. ಮೆಡಿಮುರಿವದು ಹೇಳಿರೆ ಮರಮುರುದ ಹಾಂಗೆ – ಗ್ರೇಶಿತ್ತಿದ್ದ ನೆಗೆಮಾಣಿ, ಹಾಂಗೆ ಅವನ ಬಿಟ್ಟಿಕ್ಕಿ ಹೋದ್ದು.
ಮತ್ತೆ, ಆ ದಿನ ಇರುಳು ಒಪಾಸು ಮನಗೆ ಬಂದೆಯೊ°.
ಮರದಿನ ಅದಾ – ಬೈಲಿನೋರು ಒಂದರಿ ಸೇರ್ತದು ಹೇಳಿ ಮಾತಾಡಿದ್ದಿದ್ದವು.
~
ಮರದಿನ ಯೇನಂಕೂಡ್ಳಣ್ಣನಲ್ಲಿಗೆ ಹೋಗಿ ಎಲ್ಲೋರ ಕಂಡಿಕ್ಕಿ ಬಂದದು. ಕೊಶಿ ಆತು.
ಗುಣಾಜೆಮಾಣಿ ಒಬ್ಬನೇ ಬಂದದು. ಈ ಓಟಿನ ಗವುಜಿಯ ಎಡಕ್ಕಿಲಿಯೂ ಕೆಂಪು ಉಯಿಉಯಿ ಬಲ್ಬಿನ ಪೋಲೀಸು ವೇನು ಅವನೊಟ್ಟಿಂಗೆ ಇತ್ತಿಲ್ಲೆ – ಹೇಳ್ತದೇ ಬೈಲಿನ ಎಲ್ಲೋರ ಆಶ್ಚರ್ಯದ ವಿಚಾರ ಆಗಿತ್ತಿದ್ದು.
~
ಬೈಲಿಲಿ ಎಲ್ಲೋರುದೇ ಸೇರಿದ್ದರ ಬಗ್ಗೆ ಶರ್ಮಪ್ಪಚ್ಚಿ ವಿವರವಾಗಿ ಶುದ್ದಿ ಹೇಳಿದ್ದವಿದಾ! (ಸಂಕೊಲೆ)
~
ಅದಿರಳಿ, ನೆರೆಕರೆಯೋರೆಲ್ಲ ಚೆಂದಕೆ ಮಾತಾಡಿ ಹೊತ್ತಪ್ಪಗ ಹೆರಟಾತು.
ದೊಡ್ಡಬಾವ ಮುಟ್ಟಾಳೆ ಮಡಗಿ ಬೈಕ್ಕು ಹತ್ತುವಗಳೇ ಅಂದಾಜಿ ಆಯಿದು – ಇಷ್ಟು ಅಂಬೆರ್ಪಿಲಿ ಹೋಯೇಕಾರೆ ಎಂತದೋ ಒಯಿವಾಟು ಇಕ್ಕು ಹೇಳಿಗೊಂಡು. ಆ ದಿನ ಇರುಳು ಸಮೋಸ ಬಂದಪ್ಪಗ ನಿಘಂಟಾತು, ಪೇಪರು ತಿದ್ದಲೆ ಕಟ್ಟ ಕಟ್ಟ ಬಾಕಿ ಆಯಿದಾಡ.
ಬೇಗ ಬೇಗ ತಿದ್ದೇಕು – ಎಂತಕೆ ಹೇಳಿರೆ, ಓಟಿ ಬೂತಿಂಗೆ ಅಧ್ವರ್ಯು ಆಗಿ ಒಳ ಕೂಬಲೆ ಇದ್ದತ್ತಡ.
ಓಟು ಹಾಕಿದ ಕಪ್ಪು ಗುಡಿಯೊಳದಿಕಾಣ ಬೆಳಿ ಕೈಗೊಕ್ಕೆ ಕಪ್ಪು ಬಣ್ಣ ಮೆತ್ತಲಿತ್ತಡ, ಮೊನ್ನೆಂದಲೇ ಕೊಶಿಲಿತ್ತಿದ್ದ°. 😉
ಅದೇನೇ ಇರಳಿ – ದೊಡ್ಡಕ್ಕ° ನೋಡಿಗೊಂಗು! 🙂

ಎಲ್ಲೋರ ಕತೆಯೂ ಹಾಂಗೇ, ಒಯಿವಾಟಿಂದ ಮೇಗೆ ಒಯಿವಾಟುಗೊ, ಪುರುಸೊತ್ತೇ ಇಲ್ಲೆ!
ಈ ಪುರುಸೊತ್ತಿಲ್ಲದ್ದ ಎಡಕ್ಕಿಲಿ ಅಂಬೆರ್ಪು ಇನ್ನೂ ಜಾಸ್ತಿ ಮಾಡ್ಳೆ ಬಂದ ಗವುಜಿ ಯೇವದು?
ಅದುವೇ ವಿಷು!
~
ಆಕಾಶದ ಹನ್ನೆರಡು ರಾಶಿಯೊಳದಿಕ್ಕಂಗೆ ಸೂರ್ಯ ಬಂದಪ್ಪಗ ಶೆಂಕ್ರಾಂತಿ ಉಂಟಾವುತ್ತು.
ಒಂದು ಶೆಂಕ್ರಾಂತಿಂದ ಇನ್ನೊಂದು ಶೆಂಕ್ರಾಂತಿಯ ಒರೆಂಗೆ ಒಂದು ಸೌರ ತಿಂಗಳು. ಆ ತಿಂಗಳಿಂಗೆ ಆಯಾ ರಾಶಿಯ ಹೆಸರು..
– ಇದರ ಎಲ್ಲ – ಮಕರ ಶೆಂಕ್ರಾಂತಿ ದಿನ ಮಾಷ್ಟ್ರುಮಾವ ಹೇಳಿತ್ತಿದ್ದದರ ನಾವು ಅದಾಗಲೇ ಒಂದರಿ ಮಾತಾಡಿದ್ದು. ಅಲ್ಲದೋ?
ಹೇಳಿದ್ದನ್ನೇ ಹೇಳಿರೆ ಹಳೆಮನೆಅಣ್ಣಂಗೆ ಮಾಂತ್ರ ಅಲ್ಲ, ಆರಿಂಗಾರೂ ಆವಳಿಗೆ ಬಕ್ಕು! 😉

ಅದಿರಳಿ, ಸೌರಮಾನ ಲೆಕ್ಕಲ್ಲಿ ಒರಿಶ ಸುರು ಅಪ್ಪದು ಮೇಷಲ್ಲಿ. ಹೇಳಿತ್ತುಕಂಡ್ರೆ, ಮೇಷ ಶೆಂಕ್ರಾಂತಿಲಿ.
ಮೇಷ ಶೆಂಕ್ರಾಂತಿಯ ದಿನ ಆರಂಭ ಆವುತ್ತ ಹೊಸ ಒರಿಶಕ್ಕೆ ನಮ್ಮ ಊರಿಲಿ “ವಿಷು” ಹೇಳ್ತದು ವಾಡಿಕೆ.
ಅನಾದಿ ಕಾಲಂದಲೂ ಈ “ವಿಷು”ವನ್ನೇ ಹೊಸ ಒರಿಶ ಆಗಿ ಆಚರಣೆ ಮಾಡ್ತದು ನೆಡಕ್ಕೊಂಡು ಬಯಿಂದು.
ಈ ಒರಿಶದ ಈ ಆಚರಣೆ ಇಂದು!

ಅಪ್ಪು, ಇಂದು ವಿಷು…! ನಿನ್ನೆ ವಿಷು ಶೆಂಕ್ರಾಂತಿ. ಇಂದು ಅದರ ಮರದಿನ – ವಿಷು ಕಣಿ!!
ವಿಷುವಿನ ದಿನ ವಿಷುವಿನ ಶುದ್ದಿ ಅಲ್ಲದ್ದೆ ಬೇರೆ ಎಂತರ ಮಾತಾಡ್ತದು – ಅಲ್ಲದೋ? ಇಂದು ವಿಷುವಿನ ಬಗ್ಗೆಯೇ ಮಾತಾಡುವೊ.

ಮದಲೊಂದು ಕಾಲಲ್ಲಿ, ಈ ದಿನಕ್ಕೆ ಭೂಮಧ್ಯರೇಖೆಗೆ (ಸಮಭಾಜಕ ವೃತ್ತಕ್ಕೆ) ಬಂದುಗಂಡು ಇತ್ತಿದ್ದನಾಡ.
ಈ ವೃತ್ತಕ್ಕೆ ವಿಷುವದ್-ವೃತ್ತ ಹೇಳಿಯೂ ಹೇಳ್ತವಡ.
ಹಾಂಗಾಗಿ ಹಬ್ಬಕ್ಕೆ “ವಿಷು” ಹೇಳಿ ಹೆಸರು ಬಂದದು – ಹೇಳಿದವು ಮಾಷ್ಟ್ರುಮಾವ°.
ಸಾವಿರಾರೊರಿಶ ಮದಲೆ ಸರಿ ಬಂದುಗೊಂಡು ಇತ್ತು, ಆದರೆ ಈಗ ಸರಿ ಬಾರ – ಹೇಳಿಯೂ ಹೇಳಿದವು. (ವಿಶ್ವ ವಿಕಸನ ಶಾಸ್ತ್ರಂದಾಗಿ ಮದಲಾಣ ಲೆಕ್ಕಾಚಾರಂಗೊ ರಜ ರಜ ವಿತ್ಯಾಸ ಕಾಂಬಲೆ ಸುರು ಆಯಿದಾಡ)
ಅದೇನೇ ಇರಳಿ, ನಾವಂತೂ ವಿಷುವಿಂಗೆ ವಿಷು ಹೇಳಿಯೇ ಹೇಳ್ತದು.
~

ಬೆಶಿಲಿನ ವಿಷುವಿನ ಬೆಳಿನೆಗೆಲಿ ಸ್ವಾಗತ ಮಾಡ್ತ ಬಿಲ್ವಪತ್ರೆ!

ಬೆಶಿಲು ಜೋರಿದ್ದು. ಸೆಖೆಯುದೇ.
ಸಣ್ಣ ಸಣ್ಣ ಮಳೆಗಳೂ ಬಪ್ಪದಿದ್ದು. ಸರ್ವತ್ರ ಅಲ್ಲ, ಸ್ಥಳೀಯ.
ಈ ಉರಿ ವಾತಾವರಣಲ್ಲಿಯೂ ಮರಂಗೊ ಹೆದರಿದ್ದವಿಲ್ಲೆ; ಒಂದರಿಯಾಣ ಹಳೆ ಎಲೆಗಳ ಉದುರುಸಿ ಈಗಷ್ಟೇ ಹೊಸ ಎಳತ್ತೆಳತ್ತು ಎಲೆಗಳ ಹೊಂದಿಗೊಂಡಿದು..
– ಹೊಸ ಕ್ಳಾಸಿಂಗೆ ಹೊಸ ಅಂಗಿಚಡ್ಡಿ ಹೊಲುಶಿದ ವಿನುವಿನ ಹಾಂಗೆ!
ಇನ್ನೊಂದೊರಿಶಕ್ಕೆ ಇದೇ ಎಲೆಗಳೇ ಆಧಾರ.
ಹೊಸ ಎಲೆಗೊ ಹಳತ್ತರ ಗುಣವನ್ನೇ ಹೊಂದಿಗೊಂಡಿದು.
ಹಳೆ ಎಲಗೊ ಎಂತ ಕಾರ್ಯ ಮಾಡಿಗೊಂಡಿತ್ತಿದ್ದವೋ – ಅವುಗಳನ್ನೇ ಮುಂದುವರುಸುತ್ತ ಆಶಯಲ್ಲಿ.
ಹಳೆ ಎಲೆಗಳೂ ಹಾಂಗೇ, ಈ ಮರದ ಬುಡಲ್ಲೇ ಬಿದ್ದುಗೊಂಡಿದವು. ಅಲ್ಲೇ ಇದ್ದೊಂಡು ಮರಕ್ಕೆ ಆಹಾರವಾಗಿ ಪುನಾ ಪುಣ್ಯ ಕಟ್ಟಿಗೊಳ್ತವು.
ಹಳತ್ತರ ನೆಂಪಿಲಿ, ಹಳಬ್ಬರ ಉಪಕಾರಂದ, ಹೊಸ ಒರಿಶ, ಹೊಸ ಎಲೆಗಳ ಮೂಲಕ ಬೆಳುಗುತ್ತ ಮಹಾ ವಿಶ್ವಾಸ ಆ ಮರಕ್ಕೆ!
~

ಮರ ಮಾಂತ್ರ ಅಲ್ಲ, ಇಡೀ ಪ್ರಕೃತಿಯೇ ಹಾಂಗೆ. ಒರಿಶಾರಂಭಲ್ಲಿ ಚಿಗುರಿ ನಿಲ್ಲುತ್ತು.
ಪ್ರಕೃತಿಲಿರ್ತ ಮನುಶ್ಶರೂ ಹಾಂಗೇ..
ಮದಲಿಂಗೆ ಗೆದ್ದೆಬೇಸಾಯ ಮಾಡಿಗೊಂಡಿದ್ದೋರು – ಒಂದರಿಯಾಣ ಕಾರ್ಯ ಎಲ್ಲ ಆಗಿ ಮುಂದಾಣ ಮಳೆಗಾಲದ ತಯಾರಿಯ ಅಂಬೆರ್ಪಿಲಿ ಇಕ್ಕು.
ಆ ಒರಿಶದ ಜೀವನದ ಲೆಕ್ಕಾಚಾರಂಗೊ ಆರಂಭ ಅಪ್ಪದೇ ಅಂಬಗ..
ಆ ಒರಿಶ ಮಳೆ ಹೇಂಗೆ ಬಕ್ಕು  – ನೋಡಿಗೊಂಡೇ ಆ ಒರಿಶದ ಒಯಿವಾಟುಗಳ ನಿರ್ಧಾರ.
ಮಳೆ ಲಾಯಿಕಂಗೆ ಬಂದರೆ ಕೃಷಿ – ಬದುಕ್ಕು, ಎಲ್ಲದಕ್ಕೂ ಆರಂಭ ಲಾಯಿಕಲ್ಲಿ ನೆಡಗು! ಮಳೆ ಕೈಕೊಟ್ಟರೆ ಆ ಒರಿಶದ ಜೀವನಾಂಶ ಅಂಬಗಳೇ ತಿಳಿಗು.
ಈ ಒರಿಶಕ್ಕೂ ಒಳ್ಳೆದನ್ನೇ ಕರುಣಿಸಿಕೊಡು ಹೇಳ್ತದರ ಪ್ರಕೃತಿಮಾತೆಯ ಹತ್ತರೆ ಕೇಳುಲೆ ಅಧಿಕೃತವಾಗಿ ಇಪ್ಪ ಆರಂಭದ ದಿನ ಅಲ್ಲದೋ, ಹಾಂಗೆ ವಿಶೇಷವಾಗಿ “ಕಣಿ” ಮಡಗಿಯೇ ಹೇಳ್ತವು.
ಕಣಿ? ಇದೆಂತ ಕೆಣಿ?
~

ವಿಷುವಿಂಗೆ ಸುವಸ್ತು ರೂಢಿಮಾಡುವಗ ಪಾತಿ ಅತ್ತೆ ಸಿಕ್ಕಿದವು - ಕೆಮರದ ಚುಬ್ಬಣ್ಣಂಗೆ

ವಿಷುಕಣಿಯ ವಿವರಣೆ ಹೇಳೇಕಾರೆ ತರವಾಡುಮನೆ ಶುದ್ದಿ ನೆಂಪಾಗಿಯೇ ಆವುತ್ತು ಒಪ್ಪಣ್ಣಂಗೆ.
ವಿಷುವಿನ ದಿನ ಉದಿಯಪ್ಪಗಳೇ ಎದ್ದು, ಪ್ರಕೃತಿಲಿ ಆ ಸಮೆಯಲ್ಲಿ ಸಿಕ್ಕುತ್ತ ಸುವಸ್ತುಗಳ ಜೋಡುಸಿಗೊಂಡು ಬಕ್ಕು ರಂಗಮಾವ°.
ಇಡಿ ತೆಂಗಿನಕಾಯಿ, ಅಡಕ್ಕೆ, ಗೆನಾ ಬೀಜದ ಹಣ್ಣೋ, ಪರಂಗಿಚೆಕ್ಕೆಯೋ, ಕೆಂಬುಡೆ, ಸೌತ್ತೆ, ತೊಂಡೆ-ಅಳತ್ತಂಡೆ ಇತ್ಯಾದಿ ತರಕಾರಿಯೋ – ಹೀಂಗೇನಾರು..
– ಎಲ್ಲವುದೇ ಫಲವಸ್ತುಗಳೇ ಇದಾ!
ಹೀಂಗೆ ಸಿಕ್ಕಿದ ಫಲವಸ್ತುಗಳ ಸೀತ ದೇವರೊಳಂಗೆ ತಕ್ಕು.

ದೇವರಕೋಣೆಯ ಮೂಡಗೋಡೆಯ ಹತ್ತರೆ, ಅಗಾಲದ ದೇವರ ಮಣಗೆ ಒಂದು ಒಸ್ತ್ರ ಹಾಸಿ – ಅದರ ಮೇಗೆ ಹಳೆಕಾಲದ –  ಮುಕ್ಕಾಲು-ಒಟ್ಟೆಮುಕ್ಕಾಲುಗೊ, ಬೆಳ್ಳಿ-ಚೆಂಬಿನ ಪಾವೆಲಿಗೊ, ಕವಡೆಗೊ, ಚಿನ್ನನೊಗಬಂಗಾರಂಗೊ, ಈಗಾಣ ನಮುನೆ ಪೈಶೆಗೊ – ಇದೆಲ್ಲವನ್ನೂ ಒರಿಶಂಪ್ರತಿ ಆಚರಣೆಯಂತೆ ಹರಗಿ ಮಡಗ್ಗು ರಂಗಮಾವ°.
ಪಾತಿಅತ್ತೆ ಹೊಸ ಹೂಗು ಕೊಯಿದು ತಂದು ಮಣೆಯ ಮೇಗೆ ಹರಗುಗು.
ಕಣ್ಣಾಟಿ, ಕುಂಕುಮ ಇತ್ಯಾದಿ ಮಂಗಳದ್ರವ್ಯಂಗಳ ಒಂದು ಹರಿವಾಣಲ್ಲಿ ಮಣೆಯ ಬಲತ್ತಿಂಗೆ ಮಡಗಿ ಜೋಡುಸುಗು.
ಇದೆರಡರಿಂದಲೂ ತೆಂಕಕ್ಕೆ ನಿತ್ಯದೀಪ ಹೊತ್ತುಸಿ ಮಡಗ್ಗು ಪಾತಿಅತ್ತೆ.
ರೂಢಿಮಾಡಿದ ಸುವಸ್ತು-ಫಲವಸ್ತುಗಳನ್ನೂ ಈ ಮಣೆಯ ಸುತ್ತುಮುತ್ತಾಗಿ ಮಡಗ್ಗು ರಂಗಮಾವ.
ಒಟ್ಟಾಗಿ ದೇವರೊಳ ಫಲವಸ್ತುಗಳೂ- ಸಂಪತ್ತೂ – ಎಲ್ಲವೂ ಸೇರಿಪ್ಪ ಒಂದು ಶ್ರೀಮಂತ ಲಕ್ಷಣವ ಹೊಂದಿರ್ತು.
(ಗೋಪಾಲಣ್ಣ ಭಾಮಿನಿಲಿ ಇದೇ ಶುದ್ದಿಯ ಹೇಳಿದ್ದಿದಾ: ಸಂಕೊಲೆ)

ಇಡೀ ಒರಿಶ ಹೀಂಗೇ ಸುಖ-ಶಾಂತಿ-ಸಂಪತ್ತು ಕೊಡು ದೇವರೇ- ಹೇಳಿ ಪ್ರಕೃತಿಮಾತೆಯ ಒಂದರಿ ಪ್ರಾರ್ಥನೆ ಮಾಡಿ ಕಣಿಯ ಕಣ್ತುಂಬ ನೋಡಿ ಅಡ್ಡಬೀಳುಗು.
ಒರಿಶ ಇಡೀ ಮಂಗಲಕರವಾಗಿ ಕಾಣೇಕಾರೆ, ಕಣಿಲಿ ಮಡಗಿದ ಮಂಗಲದ್ರವ್ಯಂಗಳ ಕಣ್ತುಂಬ ನೋಡೇಕು – ಹೇಳ್ತದು ಅವರ ತಲಾಂತರದ ನಂಬಿಕೆ.

ಅದಾಗಿ, ಒಂದು ಹೂಗುದೇ, ಒಂದು ಪಾವಲಿಯೂ ರಂಗಾಮಾವ ತೆಕ್ಕೊಂಡು, ಹೂಗಿನ ಕೆಮಿಎಡಕ್ಕಿಂಗೆ ಮಡಿಕ್ಕೊಂಗು.
ಪಾವಲಿಯ ರಜ್ಜ ಹೊತ್ತು ಕೈಲಿ ಹಿಡ್ಕೊಂಡು, ಮತ್ತೆ ಪುನಾ ಮಣೆಯ ಕರೆಲಿ ಮಡಗ್ಗು.
ಪ್ರೀತಿಯ ಪಾತಿಗೆ ಮಣೆಂದ ಒಂದು ಹೂಗಿನ ಒಟ್ಟಿಂಗೆ ಒಂದು ಬಂಗಾರವ ಕೊಡುಗು!
ಪಾತಿ ಅತ್ತೆ ರಂಗಮಾವನ ಕಾಲುಹಿಡುದು ಆಶೀರ್ವಾದ ಪಡಕ್ಕೊಂಗು, ಬಂಗಾರವ ಧರಿಸಿಗೊಂಡು, ಹೂಗಿನ ಜೊಟ್ಟಿಂಗೆ ಸಿಕ್ಕುಸಿಗೊಂಗು!

ಶಾಂಬಾವ ಏಳುಲಪ್ಪಗ ಇಷ್ಟೆಲ್ಲ ಆಗಿ ಕಳುದಿರ್ತು.
ಉರಿಬೆಣ್ಚಿಯ ಸೆಕೆತಡೆಯದ್ದೆ ಎದ್ದ ಶಾಂಬಾವ ಸೀತ ದೇವರಕೋಣೆಗೆ ಬತ್ತ°.
ಮಂಗಳಕರ ಕಣಿಯ ಕಂಡು ಅಡ್ಡಬಿದ್ದ ಶಾಂಬಾವ, ಮುಂದೆ ರಂಗಮಾವನ ಕಾಲುಹಿಡುದು, ಅವರ ಕೈಂದ ಒಂದು ಪಾವಲಿಯೂ, ಒಂದು ಹೂಗನ್ನೂ ಪಡಕ್ಕೊಳ್ತ°.
ಪಾತಿ ಅತ್ತೆಯ ಆಶೀರ್ವಾದ ತೆಕ್ಕೊಂಡ ಭಾವ ಕರೆಲಿ ಕೂದಂಡು ಹೂಗಿನ ಕೆಮಿಎಡಕ್ಕಿಲಿ ಮಡಿಕ್ಕೊಳ್ತ, ಪಾವಲಿಯ ಒಪಾಸು ಕಣಿಮಣೆಗೆ ಹಾಕುತ್ತ°.
~
ಇದೆಂತ ಒಯಿದಿಕ ಸಂಸ್ಕಾರಲ್ಲಿ ಬತ್ತಿಲ್ಲೆ ಹೇಳಿ ಆದ ಕಾರಣ, ಕಣಿನೋಡ್ಳೆ ಮಿಂದೇ ಕಳಿಯೇಕು ಹೇಳಿ ಏನೂ ಇಲ್ಲೆ ಇದಾ!
ಬೌಶ್ಷ ಇದೊಂದು – ದ್ರಾವಿಡ ಸಂಪ್ರದಾಯವೇ ಆಗಿರೇಕು – ಹೇಳ್ತದು ಮಾಷ್ಟ್ರುಮಾವನ ಅನಿಸಿಕೆ. ಅದಿರಳಿ.
~
ನಮ್ಮ ಬಟ್ಯಂಗೆ ಜೀವನ ಕಟ್ಟುಲೆ ಕಾರಣ ಆದ್ದದು ತರವಾಡು ಮನೆಯೇ!
ಬಟ್ಯನ ಅಪ್ಪ – ಓಡ್ಯಪ್ಪುಗೆ ಮದಲಿಂಗೆ ಉಂಬಲೆ ತತ್ವಾರ ಆಗಿಪ್ಪಾಗ, ತರವಾಡುಮನೆ ಶಂಬಜ್ಜ ಅವರ ಜಾಗೆಕರೆಲಿ ಒಂದು ಗುಡಿಚ್ಚೆಲು ಕಟ್ಳೆ ಅವಕಾಶ ಕೊಟ್ಟದಲ್ಲದೋ?
ಈಗ ಓಡಿಯಪ್ಪುದೇ ಇಲ್ಲೆ, ಕಾಂಬುಅಜ್ಜನೂ ಇಲ್ಲೆ. ಅದು ಬೇರೆ.
ಆದರೆ ಆ ನೆಂಪು ಬಟ್ಯಂಗೆ ಇದ್ದೇ ಇದ್ದು.
ಪ್ರತಿ ವಿಷುವಿಂಗೂ ತರವಾಡುಮನೆಗೆ ಬಕ್ಕು, ಫಲವಸ್ತುಗಳ ತೆಕ್ಕೊಂಡು.
ಸೀತ ಒಳಂಗೆ ಬಂದು, ತಂದ ಬಾಳೆಗೊನೆಯ ಕಣಿಯ ಎದುರು ಮಡಗಿ, ರಂಗಮಾವನ ಕೈಂದ ಹೂಗು – ಪಾವಲಿ – ಬೇರೆಂತಾರು ಫಲವಸ್ತುಗಳ ಪ್ರಸಾದರೂಪಲ್ಲಿ ತೆಕ್ಕೊಂಡು ಕೃತಾರ್ಥ ಅಕ್ಕು. ಹೊಸ ಒಸ್ತ್ರವೋ, ಅಂಗಿಚೀಟೋ – ಮಣ್ಣ ಕೊಟ್ರೂ ಕೊಡುಗು.
ಆ ದಿನ ಇಡ್ಳಿ-ರಸಾಯನ ನಿಘಂಟು. ಬಟ್ಯ ನಾಕಾದರೂ ಇಡ್ಳಿ ಹೊಡೆಯದ್ದರೆ ಸಮದಾನ ಆಗ, ರಂಗಮಾವಂಗೆ!
~
ಅದ, ಹೇಳಿಗೊಂಡು ಕೂದರೆ ಎಷ್ಟೂ ವಿಶಯಂಗೊ ಇದ್ದು.
ಮುಖ್ಯವಾಗಿ, ವಿಶುವಿನ ಆಶಯ ಎಂತ್ಸರ ಹೇಳಿತ್ತುಕಂಡ್ರೆ, ನಮ್ಮ ಒಳಿಶುತ್ತ ಭೂಮಿಗೆ, ಪ್ರಕೃತಿಗೆ ಕೃತಜ್ಞತೆ ಕೊಡ್ತದು.
ಹಾಂಗೆಯೇ, ಆ ಕೃತಾರ್ಥಲಿ ಪ್ರಕೃತಿಂದಲೇ ಸಿಕ್ಕಿದ ನೈಸರ್ಗಿಕ ಮಂಗಲವಸ್ತುಗೊ ಮಡಗಿ ಪ್ರಕೃತಿಗೆ ಹೊಡಾಡ್ತದು.
ಒಟ್ಟಿಂಗೇ, ಪ್ರಕೃತಿ-ಪುರುಷರ ಸಂಸರ್ಗಂದಾಗಿ ಸಿಕ್ಕುತ್ತ ’ಹಿರಿಯರ’ ಆಶೀರ್ವಾದ ತೆಕ್ಕೊಳ್ತದು.
– ಇದಿಷ್ಟು ವಿಷುವಿನ ವಿಶೇಷಂಗೊ.
~

ಅಜ್ಜಕಾನಬಾವಂಗೆ ಬಿಂಗಿಪುಟ್ಟ ಕಳುಸಿಕೊಟ್ಟ "ವಿಷು ವಿಷ್" ಕಾಗತ

ಲೋಕದ ಬೇರೆ ಯೇವ ಸಂಸ್ಕೃತಿಲಿಯೂ ಇಲ್ಲದ್ದ, ಹಳಬ್ಬರಿಂದ ಹೊಸಬ್ಬರಿಂಗೆ ನೇರವಾಗಿ ಪುಣ್ಯಪ್ರವಾಹ ಹರುದು ಬಪ್ಪ ಈ ವಿಧಾನ ನಮ್ಮದರ್ಲಿ ವಿಷುರೂಪಲ್ಲಿ ಇದ್ದು. ಒಳಿಶಿಗೊಳೆಕ್ಕಾದ್ದು ನಮ್ಮ ಕರ್ತವ್ಯ. ಅಲ್ಲದೋ?

ಈಗಾಣ ಆಧುನಿಕ ಅಂಬೆರ್ಪು ಜೀವನಲ್ಲಿ ಒಬ್ಬೊಬ್ಬ ಒಂದೊಂದು ಕೊಡಿಲಿ ಕೂದೊಂಡಿರ್ತು.
ವಿಷುವಿನ ದಿನ ಒಟ್ಟಿಂಗೇ ಸಿಕ್ಕೇಕು – ಹೇಳಿರೆ ಕಷ್ಟ. ಆದರೂ, ಸಾಧ್ಯವಾದ ಮಟ್ಟಿಂಗೆ, ಕುಟುಂಬ ಸಂಸಾರದ ಹೆರಿಯೋರ ಸಂಧಿಸಿ, ಒಂದರಿ ಅವರ ಕಾಲುಹಿಡುದು, ಸಂತೋಷದ ಆಶೀರ್ವಾದ ತೆಕ್ಕೊಂಡ್ರೆ ಎಷ್ಟು ಚೆಂದ!
ಇದರಿಂದ ಸಾಂಸಾರಿಕ ಭದ್ರತೆಯೂ ಜಾಸ್ತಿ ಆವುತ್ತು, ನೆಂಟರಿಷ್ಟರ ಬಾಂಧವ್ಯವೂ ಜಾಸ್ತಿ ಆವುತ್ತು.
ಅಲ್ಲದೋ?
ವಿಷುವಿನ ಕಾಲಲ್ಲಿ ಹೊಸ ಎಲೆಗಳ ಚಿಗುರುಸುವಗ ಹಳೆ ಎಲೆಗಳ ನೆಂಪು ಮಡಗುತ್ತು ಮರಂಗೊ! ನವಗೆಡಿಯದೋ?
ಆಧುನಿಕ ಜೀವನಲ್ಲಿ ವಿಷು ಮರವಲಾಗ – ಹೇಳ್ತದು ಬೈಲಿನ ಆಶಯ.
~
ಒಂದೊಪ್ಪ: ಹಳೇ ನೆಂಪಿಲಿ ಮುಂದೆ ಹೋದರೆ ಸೋಲಿಲ್ಲೆ! ಹಳತ್ತರ ಮರದು ಎಷ್ಟು ಮುಂದೆ ಎತ್ತಿರೂ ಗೆಲುವಿಲ್ಲೆ!

27 thoughts on “ಒರಿಶಾರಂಭದ ವಿಶೇಷವಾದ ‘ವಿಷುಕಣಿ’ಯ – ಆಶೀರ್ವಾದ..

  1. ಒಪ್ಪಣ್ಣ, ನಮ್ಮ ಹೊಸವರ್ಷ ವಿಷುವಿಂಗೆ ಬಂದ ನಿನ್ನ ಶುದ್ದಿ, ವಿಷುಕಣಿಯ ದಿನ ಕಣಿ ನೋಡಿದ ಹಾಂಗೆ ಆತು. ವರ್ಷ ಪೂರ್ತಿ ಒಳ್ಳೆದೇ ತಕ್ಕು ಹೇಳಿ ಗ್ರೇಶಿದ್ದೆ. ತುಂಬಾ ಲಾಯ್ಕಾಯಿದು ಮೆಟ್ಟಲು ಮೆಟ್ಟಲಾಗಿ ಕೊಟ್ಟ ವಿವರಣೆ.

    ನಮ್ಮ ಹಿರಿಯೋರು ಪ್ರಕೃತಿಯ ಎಷ್ಟು ಚೆಂದಕ್ಕೆ ಅರ್ತ ಮಾಡಿಗೊಂಡಿದವು ಹೇಳಿ ನಮ್ಮ ಆಚರಣೆಗಳಲ್ಲಿ ನವಗೆ ಗೊಂತಾವುತ್ತು ಅಲ್ಲದಾ? ಪ್ರಕೃತಿ ಹೊಸತಾಗಿ ಕಾಂಬಗ ನವಗೂ ಹೊಸ ವರ್ಷ. ಎಲ್ಲಾ ದಿಕ್ಕೆ ಹಸಿರು. ಮರಂಗ ಎಲ್ಲ ಹೂಗು, ಕಾಯಿ ಹಣ್ಣುಗಳಿಂದ ತುಂಬಿ ಸಮೃದ್ಧವಾಗಿಪ್ಪ ಕಾಲ. ಈ ಸಮೃದ್ಧಿಯ ನೋಡಿ ನಮ್ಮ ಮನಸ್ಸು ತುಂಬಿಗೊಂಡು ವರ್ಷ ಪೂರ್ತಿ ಸಮೃದ್ಧರಾಗಿಪ್ಪ ಆಶೀರ್ವಾದ ಮಾಡುವ ಕುಟುಂಬದ ಹಿರಿಯರು. ಎಲ್ಲರ ಆಶೀರ್ವಾದ ತೆಕ್ಕೊಂಡು ಒಳ್ಳೆ ದಾರಿಲಿ ನಡವ ಆಶಯಲ್ಲಿ ಕಿರಿಯರು. ನೀನು ಹೇಳಿದ ಹಾಂಗೆ ಲೋಕದ ಯೇವ ಸಂಸ್ಕೃತಿಲೂ ಇಲ್ಲದ್ದೆ ಇಪ್ಪ ಒಂದು ಬಾಂಧವ್ಯ ಹೆಚ್ಚುಸುವ ಸಂಪ್ರದಾಯ ನಮ್ಮದು. ಪ್ರಕೃತಿಯ ಮತ್ತೆ ಹಿರಿಯೋರ ಪೂರ್ಣ ಆಶೀರ್ವಾದ ಸಿಕ್ಕುತ್ತ ದಿನ!!

    ವರ್ಷಂಗ ಹೋದ ಹಾಂಗೆ ಕುಟುಂಬಂಗ ಬೆಳೆತ್ತು ಹಾಂಗೆ ಸಂಬಂಧಂಗಳೂ. ಮೂಲ ತರವಾಡು ಮನೆಗೆ ಹೋಗಿ ಹಿರಿಯೋರ ಕಾಲು ಹಿಡುದು ಆಶೀರ್ವಾದ ತೆಕ್ಕೊಂಡು ಬಪ್ಪಲೆ ಎಡಿಯದ್ದರೂ, ಹತ್ತರೆ ಇಪ್ಪ ಹಿರಿಯೋರ ಹತ್ತರೆ ಎಲ್ಲರ ಲೆಕ್ಕದ ಆಶೀರ್ವಾದ ತೆಕ್ಕೊಂಬಲಕ್ಕು ಅಲ್ಲದಾ?

    ಒಂದೊಪ್ಪ ಲಾಯ್ಕಾಯಿದು. ಹೊಸ ಸಂಬಂಧಂಗ ಬೆಳವಗ ಹಳತ್ತು ಮರವಲಾಗ ಹೇಳಿ ನೀನು ಹೇಳಿದ್ದು ಲಾಯ್ಕಾಯಿದು ಆತೋ!!!

    ಎಲ್ಲೋರಿಂಗುದೇ ಈ ವರ್ಷ ಶುಭ ತರಳಿ… ಒಪ್ಪಣ್ಣನ ಬೈಲುದೇ ಫಲವತ್ತಾಗಲಿ..

  2. ತುಂಬಾ ಲಾಯ್ಕಾದು ಬರದ್ದು.

    ನಮ್ಮ ಆಚರಣೆಗಳೇ ಹಾಂಗೆ ಅಲ್ಲಿ ವಿಧಿ-ವಿಧಾನಕ್ಕೆ ಮಹತ್ವ ಅಬ್ಬರಕ್ಕೆ ಅಲ್ಲ.

    ನಮ್ಮಲ್ಲಿ ಅಬ್ಬರದ ಆಚರಣೆ ಯಾವುದೆ ಹಬ್ಬಕ್ಕೆ ಇಲ್ಲೆ. ದೀಪಾವಳಿಗೆ ಹೆಚ್ಹು ಹೇಳಿರೆ ೪ ಪಟಾಕಿ ತಂದು ಹೊಟ್ಟುಸುಗು.

    ಸರಳವಾಗಿ ಚೆಂದಕೆ ನಡದರೆ ಸಾಕು.

    ಈ ಅಬ್ಬರದ ಯುಗಲ್ಲಿ ಎಲ್ಲಿ ಆ ಸರಳ-ಸುಂದರ ಆಚರಣೆ ಕಳದು ಹೊಕೊ ಹೇಳಿ ಕಳವಳ.

    ಹಬ್ಬಂಗಳ ಧಾರ್ಮಿಕತೆಗೆ ಹೆಚ್ಹು ಮಹತ್ವ ಕೊಡೆಕ್ಕು.

    1. ನಂದನಣ್ಣೋ..
      ಒಪ್ಪ ಒಪ್ಪಕ್ಕೆ ಒಪ್ಪಂಗೊ.
      ಆಚರಣೆಗೊ ಕಳದು ಹೋಗದ್ದ ಹಾಂಗೆ ಮತ್ತೆ ಮತ್ತೆ ಆಚರುಸುವ.
      ಯೇವ ರೀತಿಲಿ ನಮ್ಮ ಒರೆಂಗೆ ಎತ್ತಿದ್ದೋ – ಅದೇ ರೀತಿ ನಮ್ಮಂದ ಮುಂದಾಣೋರಿಂಗೆ ಎತ್ತಿರೆ, ಆಚರಣೆಗೊ ಒಳಿಗು.
      ಅಲ್ಲದೋ?
      ಹರೇರಾಮ..

  3. ಒಪ್ಪಣ್ಣಾ,,ಶುದ್ಧಿ ಲಾಯಿಕ ಆಯಿದು.ವರ್ಷಕ್ಕೆ ಒಂದರಿ ಆಚರಣೆ ಮಾಡುವ ವಿಷು ಕಣಿ ಹೇರಿಯೋರ ಆಶೀರ್ವಾದ ಅನುಗ್ರಹ ಅಪ್ಪಲೆ ಒಂದು ಅವಕಾಶ.ಸಂನಕಿಪ್ಪಗ ಯಾವ ರೀತಿ ಆಚರಣೆ ಮಾಡಿಯೊಂಡು ಇತ್ತು ಹೇಳುದು ಈ ಶುದ್ದಿ ಓದಿ ಅಪ್ಪಗ ನೆಂಪು ಆತು.ಆದರೂ ಈಗ ಆ ಸಂಪ್ರದಾಯ ಪೂರ್ತಿ ಅಳುದು ಹೋಯಿದಿಲ್ಲೆ..ಇನ್ನು ಮುಂದಕ್ಕೆ ನಮ್ಮ ಸಂಪ್ರದಾಯ ಹೀಂಗಿಪ್ಪ ಹಬ್ಬಂಗಳ ಆಚರಣೆ ಮಾಡುದರ ಮೂಲಕ ನಮ್ಮ ನಂತರದ ಪೀಳಿಗೆಗೆ ಹಬ್ಬದ ಮಹತ್ವವ ತಿಳಿಶುವ ಕಾರ್ಯವ ಮಾಡುವ.ಒಳ್ಳೆ ಶುದ್ಧಿಗೆ ಧನ್ಯವಾದ…

    1. ಗಣೇಶಮಾವಾ..
      {ಸಂಪ್ರದಾಯ ಪೂರ್ತಿ ಅಳುದು ಹೋಯಿದಿಲ್ಲೆ. }
      ಮಾವಾ, ಪೂರ್ತಿ ಅಳುದು ಹೋಯಿದಿಲ್ಲೆ ಹೇಳ್ತ ಒಂದು ಆಶಾದಾಯಕ ಮಾತು ಹೇಳಿದಿರಲ್ಲದೋ? ಅದುವೇ ಮನಸ್ಸು ತುಂಬಿ ಬಂತು.

      ವಿಷುವಿನ ಲೆಕ್ಕಲ್ಲಿ ಇಲ್ಲಿಂದಲೇ ಹೊಡಾಡ್ತೆ, ಗಣೇಶಮಾವಾ..

  4. ಧನ್ಯವಾದಂಗೊ ಒಪ್ಪಣ್ಣ… ಶರ್ಮಪ್ಪಚ್ಚಿ ಹಳೇ ನೆಂಪುಗೊ..ರೀವೈಂಡ್ ಆತು..ನಿಂಗಳ ಒಪ್ಪಂದ

  5. ವಿಷುವಿನ ವಿಷಯಂಗಳ ಹೇಳಿದ್ದು ಲಾಯಕ್ಕಯಿದು……..ಎಲ್ಲರಿಂಗು ವಿಷಉವಿನ ಶುಭಾಶಯಂಗ..ಹಿರಿಯರ ಆಶೀರ್ವಾದ ಎನಗೆ ಇರಲಿ…..

  6. ಒಪ್ಪಣ್ಣಾ,
    ತರವಾಡು ಮನೆ ವಿಷು ಆಚರಣೆ ವಿವರಂಗೊ ತುಂಬಾ ಚೆಂದಕೆ ಹೇಳಿದ್ದೆ. ನೆಂಪು ಸುಮಾರು ೪೦ ವರ್ಷದಷ್ಟು ಹಿಂದಂಗೆ ಓಡಿತ್ತು.
    ಈ ಸಂಕ್ರಾಂತಿ ಸಮಯಲ್ಲಿ ಎಲ್ಲಾ ಫಲ ವಸ್ತುಗೊ ಸಿಕುವ ಸಮಯ. ಎಡಿಗಾಷ್ಟು ಸಂಗ್ರಹಿಸಿ ಕಣಿ ಮಡಿಗ್ಗು.ಉದಿಯಪ್ಪಗ ಬೆಣಚ್ಚು ಬಿಡುವನ್ನೆ ಮೊದಲೇ ಮಕ್ಕಳ ಏಳುಸುಗು. ಕಣಿ ನೋಡಿ ಹೆರಿಯವರ ಅಶೀರ್ವಾದ ತೆಕ್ಕೊಂಡೇ ಬಾಕಿ ಕೆಲಸಂಗೊ. ಪುಳ್ಯಕ್ಕಳ ಕೈಗೆ ನಾಣ್ಯ ಕೊಡುಗು ಅಜ್ಜ. ಆ ದಿನ ಹೆರಾಣವಕ್ಕೆ ಪೈಸೆ ಕೊಡ್ತ ಕ್ರಮ ಇಲ್ಲೆ.
    ಅಪ್ಪನ ಮನೆ ಹತ್ರೆ ಇಪ್ಪ ಹೆಮ್ಮಕ್ಕೊ, ಮಕ್ಕಳನ್ನೂ ಕೂಡಿಂಡು ಹೋಗಿ ಅಬ್ಬೆ ಅಪ್ಪನ ಕಾಲು ಹಿಡುದಿಕ್ಕಿ ಬಕ್ಕು.
    ವರ್ಷದ ಸುರುವಾಣ ದಿನ ಸುವಸ್ತುಗಳ ನೋಡಿ ಕೆಲಸಂಗಳ ಸುರು ಮಾಡಿರೆ, ವರ್ಷ ಇಡೀ ಒಳ್ಳೆದೇ ಅಕ್ಕು ಹೇಳ್ತ ನಂಬಿಕೆ.
    ವಿಷು ಕಣಿ ದಿನ, ಮಗ್ಗದ ಕಿಟ್ಣ, ಅದು ನೇಯ್ದ ಬೈರಾಸೋ ಇಲ್ಲದ್ರೆ ದೊಡ್ಡ ಚೌಕವೋ ತಂದು ಹೊಸ್ತಿಲ್ಲಿ ಮಡುಗಿ ಅಜ್ಜನ ಕಾಲು ಹಿಡಿಗು.
    ನಿತ್ಯಾ ಕೆಲಸಕ್ಕೆ ಬಂದೊಂಡಿತ್ತಿದ್ದ ಅಂದು ಬ್ಯಾರಿ, ಮಮ್ಮದೆ ಬ್ಯಾರಿ, ಅವು ನೆಟ್ಟು ಬೆಳೆಶಿದ ಯೇವುದಾದರೂ ನೆಟ್ಟಿಕಾಯಿ ತಂದು ಮಡುಗ್ಗು.
    ಬೀಜದ ಕಾಡಿನ ಗೇಣಿಗೆ ತೆಕ್ಕೊಂಡ ಬಡುವ ಬ್ಯಾರಿ ಸಂಕ್ರಾಂತಿಯಂದು ಚೋರೆಯ ಕೊರದು ಬೀಜ ಬೊಂಡು ತಂದು ಕೊಡುಗು. ವಿಷುವಿನಂದು ಬೀಜದ ಗೇಣಿ ಹೇಳಿ ಬೀಜವನ್ನೇ ತಂದು ಕೊಡುಗು.
    ಭೂತ ಕಟ್ಟುತ್ತ ಚನಿಯ, ಒಂದು ಒಲಿ ಹಸೆ ತಂದು ” ಇದ್ದೆಗು ಅಡ್ಡ ಬೂರಿಯೆ” ಹೇಳುಗು.
    ಕಣಿ ತಂದು ಮಡುಗಿದವಕ್ಕೆ, ಕಡೆ ಕೊಡಿ ಕಟ್ಟಿ ಬಾಳೆಲಿ ಎರದ ಕೊಟ್ಟಿಗೆಯ ಅಜ್ಜಿ ತಂದು ಕೊಟ್ಟರೆ, ಅಜ್ಜ ಎರಡು ತೆಂಗಿನ ಕಾಯಿಯ ಕೊಡುಗು.
    ಮನೆಲಿ ಅಂದು ಉದಿಯಪ್ಪಂಗೆ ಕೊಟ್ಟಿಗೆ, ಕಾಯಿಹಾಲು, ಮಧ್ಯಾಹ್ನಕ್ಕೆ ಬೀಜದ ಬೊಂಡಿನ ಪಾಯಸ ಗ್ಯಾರಂಟಿ.
    ಈಗ ಇದಲ್ಲಿ ಹೆಚ್ಚಿನದ್ದು ನೆನಪು ಮಾತ್ರ.
    ಒಂದೊಪ್ಪ ಲಾಯಿಕ ಆಯಿದು

    1. ಅಪ್ಪಚ್ಚೀ..
      ಹಳೇ ವಿಷುವಿನ ನೆಂಪುಮಾಡ್ತ ಒಪ್ಪಣ್ಣನ ಪ್ರಯತ್ನವ ಇನ್ನೂ ಸುಲಬ ಮಾಡಿದಿ ನಿಂಗೊ.
      ಮಗ್ಗದ ಕಿಟ್ಟನಿಂದ ಹಿಡುದು ಅಂದುಬ್ಯಾರಿಯ ಒರೆಂಗೆ ಎಲ್ಲೋರುದೇ ಬಂದು ಹೇಂಗೆ ವಿಷುವಿಂಗೆ ಸೇರಿಗೊಂಡು, ಮುಂದುವರುಸಿಗೊಂಡು ಹೋದ ಬಗೆಯ ಚೆಂದಕೆ ವಿವರುಸಿದ್ದಿ.
      ತುಂಬಾ ಕೊಶಿ ಆತು.

      ಅಪ್ಪಚ್ಚೀಚಿಕ್ಕಮ್ಮಂದ್ರ ಇಲ್ಲಿಂದಲೇ ಹೊಡಾಡ್ತೆ..
      ಹರೇರಾಮ

  7. ಬೈಲಿಲಿ, ವಿಷು ಕಣಿಯ ಅಷ್ಹೀರ್ವಾದಂಗಳ ಮಾಡಿದ ಹಿರಿಯರಿಂದ ಸ್ವೀಕರಿಸಿಗೊಂಡು , ಒಳುದ ಎಲ್ಲೋರಿಂಗು ಶುಭಾಶಯಂಗಳ ಸಲ್ಲುಸುತ್ತಾ ಇದ್ದೆ.
    ವಿಷು ಕಣಿಯ ವಿಷಯ ಓದಿಗೊಂದು ಹೋದ ಹಾಂಗೆ ಸಣ್ಣದಿಪ್ಪಗ ಆಚರಿಸಿಗೊಂಡು ಇದ್ದ ವಿಷು ಕಣಿ ನೆನಪ್ಪಿಲಿ ಅಲೆ ಅಲೆ ಆಗಿ ಬಂದು ಹೋತು. ಎಂಗಳಲ್ಲಿ ಆಚರಿಸದ್ದ ಕೆಲವು ವಿಷಯನ್ಗಳನ್ನು ತಿಳ್ಕೊಮ್ಬಲಾತು . ಒಂದು ಒಪ್ಪ – ಒಪ್ಪ .

    1. ಭಾಗ್ಯತ್ತೆ..
      ಶುದ್ದಿ ಓದಿ ಒಪ್ಪ-ಆಶೀರ್ವಾದ ಕೊಟ್ಟದು ಕೊಶಿ ಆತು.
      ಎಂತ ಮಾಡುತ್ಸು, ಕೆಲವು ಹಳೆ ನೆಂಪಾಗಿ ಒಳುದು ಮುಗುದೇ ಹೋವುತ್ತು, ಆದರೆ ಬೈಲಿಲಿ ಅದರ ನೆಂಪಾಯೇಕು ಹೇಳ್ತದು ನಮ್ಮೆಲ್ಲರ ಹಾರಯಿಕೆ.

      ಬೈಲಿಂಗೆ ಬತ್ತಾ ಇರಿ, ಶುದ್ದಿಗೊಕ್ಕೆ ಒಪ್ಪ ಕೊಟ್ಟೋಂಡಿರಿ..
      ಹರೇರಾಮ

  8. ಒಳ್ಳೇ ಶುದ್ದಿಗೆ ಒಪ್ಪ೦ಗೊ ಒಪ್ಪಣ್ಣಾ..
    ಈ ಸರ್ತಿ ಆನುದೆ ಎನ್ನ ಒಟ್ಟಿ೦ಗೆ ಇರ್ತ ಸಹವರ್ತಿಗಳುದೆ ಸೇರ್ಯೊ೦ಡು ಸಣ್ಣ ಮಟ್ಟಿ೦ಗೆ ವಿಷು ಆಚರಿಸಿದೆಯೊ.. ಕಣಿಗೆ ಬೇಕಾದ ಎಲ್ಲಾ ವಸ್ತುಗಳುದೆ ಸಿಕ್ಕಿದ್ದಿಲ್ಲೆ.. ಆದರುದೆ ಸಿಕ್ಕುತ್ತ ಮ೦ಗಳ ವಸ್ತುಗಳ ಮಡುಗಿ ಕಣಿ ನೋಡಿ ಆಯಿದು. “ಕೈನೀಟ್ಟ೦” ಕೊಡ್ಳುದೆ, ಕಾಲು ಹಿಡಿಸಿಗೊ೦ಬಲುದೆ ಮನೆ ಹಿರಿಯ೦ಗೆ ಅಲ್ಲದೊ ಅಧಿಕಾರ ಇಪ್ಪದು? ಇಲ್ಲಿ ಸದ್ಯಕ್ಕೆ ಬಾಕಿ ಇಪ್ಪವು ಎಲ್ಲ ಎನ್ನ೦ದ ಸಣ್ಣವುದೆ, ಬ್ರಾಹ್ಮಣ ವರ್ಗಲ್ಲಿ ಆನು ಮಾ೦ತ್ರವುದೆ ಆದ ಕಾರಣ, ಜೀವನಲ್ಲಿ ಮೊದಲ ಸರ್ತಿ ಆನುದೆ “ಕೈನೀಟ್ಟ೦” ಕೊಟ್ಟೆ, ಕಾಲು ಹಿಡಿಸಿಗೊ೦ಡೆ!!! 🙂

    1. ವಾಹ್! ಅತ್ಯದ್ಭುತ!!
      ನಿಂಗೊ ಇಪ್ಪ ವ್ಯಾಪ್ತಿ-ಪರಿಮಿತಿಲಿ ಸಾಧ್ಯ ಆದ ಹಾಂಗೆ ವಿಷುವಿನ ಆಚರಣೆ ಮಾಡಿಗೊಂಡದು ಕೇಳಿ ಮನಸ್ಸು ತುಂಬಿ ಬಂತು.
      ಒಳ್ಳೆದಾಗಲಿ.
      ಆನು ಇಲ್ಲಿಂದಲೇ ಹೊಡಾಡ್ತೆ. ಕೈನೀಟ್ಟಂ ಇನ್ನಾಣ ಸರ್ತಿ ಸಿಕ್ಕಿಪ್ಪಗ ಕೊಟ್ರೆ ಸಾಕು! ಅಂಬೆರ್ಪಿಲ್ಲೆ!! 😉

      1. ಯ್ಯೋ.. ಒಪ್ಪಣ್ಣಾ…. ಅದ್ಭುತ ಅತ್ಯದ್ಭುತ ಎ೦ತ ಇಲ್ಲೆಪ್ಪಾ.. ನಮ್ಮ ಗೌಜಿಗೊ ಎ೦ತ ಇದ್ದರುದೆ ನಾವು ಬಿಡ್ತ ಕ್ರಮ ಇಲ್ಲೆ, ಎಡಿಗಾದ ಹಾ೦ಗೆ ಮಾಡುವದೇ.. ಮನಸ್ಸು ಮಾ೦ತ್ರ ಅಲ್ಲದೊ ಎಲ್ಲದಕ್ಕಿ೦ತ ಮೊದಾಲು ಬೇಕಾದ್ದದು? ಬಾಕಿ ಎಲ್ಲ ತನ್ನಿ೦ತಾನೆ ಬತ್ತು..

        (ಒಳ್ಳೆದಾಗಲಿ).. ಹೃದಯ ತು೦ಬಿ ಬ೦ತು, ಹತ್ತು ಜನ ಹೀ೦ಗೆ ಹಾರೈಸಿರೆ ಸಾಲದೊ.. ಮತ್ತೆ೦ತ ಬೇಕು ಹೇಳಿ..

  9. ವಿಷುಕಣಿಯ ಸಂದರ್ಭಲ್ಲಿ ಹಿರಿಯರ ಕಾಲಿಂಗೆ ಅಡ್ಡ ಬಿದ್ದು, ಅವರಿಂದ ಆಶೀರ್ವಾದ ತೆಕ್ಕೊಳ್ತಾ ಇದ್ದೆ. ಎಲ್ಲೋರಿಂಗೂ ಶುಭಾಶಯಂಗೊ. ವಿಷು ಕಣಿಯ ಬಗ್ಗೆ ವಿಷದವಾಗಿ ಬರದ ಒಪ್ಪಣ್ಣಂಗೆ ವಿಷುವಿನ ವಿಶಸ್ ತಿಳುಸುತ್ತಾ ಇದ್ದೆ. ಈ ಸರ್ತಿ ಮಾಸ್ಟ್ರುಮಾವನ ಸಣ್ಣ ಮಗಂಗೆ ವೈವಾಹಿಕ ಜೀವನಕ್ಕೆ ಬಂದ ಮೇಲಾಣ ಸುರುವಾಣ ವಿಷು ಅಲ್ಲದೊ ? ದೊಡ್ಡಜ್ಜನ ಮನೆಲಿ ಗಡದ್ದು ಸಮ್ಮಾನ ಇದ್ದೋ ಹೇಳಿ ಸಂಶಯ. ಆರೋ ಬೈಲಿಲ್ಲಿ ಮಾತಾಡಿದ ಹಾಂಗೆ ಆತು. ಹೊಸ ವರ್ಷಲ್ಲಿ ಹೊಸ ಜೋಡಿಗೊ ಕೊಶಿಯ ಹೊಸ ಶುದ್ದಿಯ ಬೇಗ ತರಲಿ. ಎಂಗಳುದೆ ಪೇಟೆಲಿ, ಎಂಗೊಗೆ ಎಡಿಗಾದ ಹಾಂಗೆ, ಕಣಿ ಮಡಗಿ ಕಣ್ತುಂಬ ನೋಡಿದೆಯೊ. ಎಳತ್ತು ಬೀಜದ ಪಾಯಸ ಮಾಡುವೊ ಹೇಳಿರೆ, ಚೋರೆ ತಂದು ಕೊಡುತ್ತ ಒಕ್ಕಲುಗೊ ಆರುದೆ ಇಲ್ಲೆ. ಗೋಡಂಬಿ ಪ್ಯಾಕೆಟ್ಟೆ ಪಾಯಸಕ್ಕೆ ಸೊರುಗೆಕಷ್ಟೆ. ಊರಿನ ವಿಷುಕಣಿಯ ಗಮ್ಮತ್ತು ಗ್ರೇಶಲೆ ಅನುವು ಮಾಡಿಕೊಟ್ಟ ಒಪ್ಪಣ್ಣಂಗೆ ಧನ್ಯವಾದ.

    1. ಬೊಳುಂಬುಮಾವಾ..
      ವಿಷು ಆಚರಣೆ ಮಾಡಿದ್ದು ತುಂಬಾ ಕೊಶಿ ಆತು!
      ಅತ್ತೆ-ಮಾವಂಗೆ ಇಲ್ಲಿಂದಲೇ ಹೊಡಾಡ್ತೆ. ಹರೇರಾಮ.
      ಹೇಳಿದಾಂಗೆ,
      ದೊಡ್ಡಜ್ಜನ ಮನೆಲಿ ಸಮ್ಮಾನ ಉಂಬ ಸಣ್ಣ ಚೋದ್ಯ ಆಯಿದಡ.
      ಒಂದು ಸವುಟು ಸುಭಗಣ್ಣನ ಲೆಕ್ಕಲ್ಲಿ, ಇನ್ನೊಂದು ಸವುಟು ದೊಡ್ಡಬಾವನ ಲೆಕ್ಕಲ್ಲಿ – ಹಾಂಗೆ ಎರಡೇ ಸವುಟು ಕಡ್ಳೆ ಸೀವು ಉಂಡದಡ. 😉

  10. ವಿಷು ಆಚರಣೆಯ ಮಹತ್ವ ತಿಳಿಸಿದ್ದು ಒಪ್ಪ ಆಯಿದು… ಒಪ್ಪಣ್ಣಂಗೆ ಮತ್ತೆ ಬೈಲಿನ ಎಲ್ಲರಿಂಗುದೇ ವಿಷು ಹಬ್ಬದ ಹೃತ್ಪೂರ್ವಕ ಶುಭಾಶಯಂಗೊ…
    {ಓಟು ಹಾಕಿದ ಕಪ್ಪು ಗುಡಿಯೊಳದಿಕಾಣ ಬೆಳಿ ಕೈಗೊಕ್ಕೆ ಕಪ್ಪು ಬಣ್ಣ ಮೆತ್ತಲಿತ್ತಡ…}
    ಇಲ್ಲಿ ಕೆಂಪು ಬಣ್ಣ 😉

    1. { ಇಲ್ಲಿ ಕೆಂಪು ಬಣ್ಣ }
      ಯೇವದು? ಗುಡಿಯ ಬಣ್ಣವೋ? ಕೈಯ ಬಣ್ಣವೋ? ಶಾಯಿಯ ಬಣ್ಣವೋ? 😉
      ಅದಿರಳಿ, ಯೇವ ಬಣ್ಣವೂ ಮೆತ್ತಲೆ ಸಿಕ್ಕಿದ್ದಿಲ್ಲೆ ಹೇಳಿ ದೊಡ್ಡಬಾವಂಗೆ ಬೇಜಾರು.
      ಅದೇ ಬೇಜಾರಿಲಿ ನಾಕು ದಿನಂದ ಬೈಲಿಂಗೆ ಸಮಗಟ್ಟು ಸಮೋಸ ಇಲ್ಲೆ! 😉

  11. ಲಾಯ್ಕಾಯ್ದು ಬರದ್ದು ಒಪ್ಪಣ್ಣ.

    ಎಂಗಳುದೆ ಈ ಅಂಬೆರ್ಪು ಜೀವನದ ಅಂಬೆರ್ಪು ಊರಿಲಿ ಕಣಿ ಮಡಿಗಿ ಭಕ್ತಿಂದ ಕಣ್ತುಂಬಾ ನೋಡಿದೆಯೋ.

    ಸಮಸ್ತರಿಂಗೂ ಶುಭಾಶಯಂಗ.

    ಹರೇ ರಾಮ

    1. ಹರೇರಾಮ ಚೆನ್ನಬೆಟ್ಟಣ್ಣೋ..
      ಬೆಂಗುಳೂರಿನ ಅಂಬೆರ್ಪಿನ ಎಡೆಲಿಯೂ ವಿಷುವಿನ ಆಚರಣೆ ಮಾಡಿದಿ ಹೇಳಿ ಗೊಂತಾಗಿ ತುಂಬಾ ಕೊಶಿ ಆತು.

      ಎಲ್ಲಿ ಹೋದರೂ ಸಂಪ್ರದಾಯ ಬಿಡದ್ದ ನಿಂಗಳ ಹಾಂಗಿದ್ದೋರು ಬೈಲಿಲಿ ಇಪ್ಪದೇ ಹೆಮ್ಮೆ!
      ಚೆನ್ನಬೆಟ್ಟಣ್ಣ-ಅತ್ತಿಗೆಗೆ ಇಲ್ಲಿಂದಲೇ ಹೊಡಾಡ್ತೆ, ಆತೋ?

  12. [ಗ್ರೇಶಿತ್ತಿದ್ದ ನೆಗೆಮಾಣಿ, ಹಾಂಗೆ ಅವನ ಬಿಟ್ಟಿಕ್ಕಿ ಹೋದ್ದು.] – ಮಾವಿನಣ್ಣು ಹೆರ್ಕಲಿದ್ದು ಹೇಳಿದ್ರೆ ಬತ್ತಿತ್ತ ನೋಡಿ. ಗೊರಟು ಚೀಪಿ ಇಡುಕ್ಕುವಾಗ ಒಪ್ಪಣ್ಣಾ ಈ ಗೊರಟಿನೊಟ್ಟಿನ್ಗೆ ಓಡು ಹೇಳ್ಳೆ.

    [ಬೈಲಿಲಿ ಎಲ್ಲೋರುದೇ ಸೇರಿದ್ದರ ಬಗ್ಗೆ ಶರ್ಮಪ್ಪಚ್ಚಿ ವಿವರವಾಗಿ ಶುದ್ದಿ ಹೇಳಿದ್ದವಿದಾ! (ಸಂಕೊಲೆ)] – ಸಂಕೋಲೆ ಪೀಂಕಿದ್ದೋದು. ಕೆಲ್ಸ ಮಾಡ್ತಿಲ್ಲೆ ಅದು.

    [ಓಟು ಹಾಕಿದ ಕಪ್ಪು ಗುಡಿಯೊಳದಿಕಾಣ ಬೆಳಿ ಕೈಗೊಕ್ಕೆ ಕಪ್ಪು ಬಣ್ಣ ಮೆತ್ತಲಿತ್ತಡ,.] – ಛೆ.! ಅದ್ಭುತ ವಿಚಾರ.

    [ ವಿಷುವದ್-ವೃತ್ತ ಹೇಳಿಯೂ ಹೇಳ್ತವಡ ] – ನವಗರಡಿಯದ್ದು ಇದೂ ಒಂದು ಇದ್ದು ಹೇಳಿ ಗೊಂತಾತಿಲ್ಲಿ .

    [ಸಣ್ಣ ಸಣ್ಣ ಮಳೆಗಳೂ ಬಪ್ಪದಿದ್ದು. ಸರ್ವತ್ರ ಅಲ್ಲ, ಸ್ಥಳೀಯ ] – ಈ ವಾರಿ ಕಣ್ಣೆದುರೇ ನಡದ್ದು ಈ ಘಟನೆ

    [ಒಟ್ಟಾಗಿ ದೇವರೊಳ ಫಲವಸ್ತುಗಳೂ- ಸಂಪತ್ತೂ – ಎಲ್ಲವೂ ಸೇರಿಪ್ಪ ಒಂದು ಶ್ರೀಮಂತ ಲಕ್ಷಣವ ಹೊಂದಿರ್ತು.]
    [ಹಳೇ ನೆಂಪಿಲಿ ಮುಂದೆ ಹೋದರೆ ಸೋಲಿಲ್ಲೆ! ಹಳತ್ತರ ಮರದು ಎಷ್ಟು ಮುಂದೆ ಎತ್ತಿರೂ ಗೆಲುವಿಲ್ಲೆ!]- ಸಣ್ಣಾಗಿಪ್ಪಗ ನಾ ಕಂಡ ವಿಷು ಸರಿಯಾಗಿ ನೆಂಪಾತು. ಇದೇ ಕ್ರಮಲ್ಲಿ ಆಚರಿಸಿಗೊಂಡಿತ್ತಿದ್ದವು ಹೇಳಿಗೊಂಡು ನಮ್ಮ ಒಪ್ಪ.

    ನರಸಣ್ಣ ಬಪ್ಪದು ಇದೇ ಸಮಯಲ್ಲಿಯೋ ? ಉಮ್ಮಾ ನೆಂಪಿಲ್ಲೆ.
    ಕೇರಳಲ್ಲಿ ಕೈ ನೀಟಾ ಇದ್ದಡಪ್ಪಾ. ಸ್ಥಳೀಯ ಸಂಪ್ರದಾಯ ಆಯ್ಕಲ್ಲದೋ.

    1. {ಕೇರಳಲ್ಲಿ ಕೈ ನೀಟಾ ಇದ್ದಡಪ್ಪಾ..}
      ಕೈ ನೀಟಾ ಅಲ್ಲ ಚೆನ್ನೈ ಭಾವ.
      “ಕೈನೀಟಂ” ಹೇಳ್ತವು.
      ವಿಷುವಿನ ದಿನ ಕೊಡುವ ಉಡುಗೊರೆಗೆ ಹಾಂಗೆ ಹೇಳುದು.
      ವಿಷುವಿನ ಶುಭಾಶಯಂಗೊ…

      1. ಅಕ್ಕು ಭಾವ. ಎನಗರಡಿಯ. ಎನ್ನ ಕೆಮಿಲಿ ತಪ್ಪಾಗಿ ಹೊಕ್ಕಿದ್ದಾಯ್ಕು. ಇನ್ನು ಹೇಳ್ವಾಗ ನಿಂಗೊ ಹೇಳಿದಾಂಗೇ ಹೇಳುದು ಆತೋ. ಅಲ್ಲದ್ರೂ ಪ್ರದೀಪ್ ಭಾವೋ , ಹಲವು ಶಬ್ದಂಗೊ ಕಾಲಕ್ರಮಲ್ಲಿ ರೂಪಾಂತರ ಆದಾಂಗೆ (ಮದವೂರು ಅಲ್ಲದೋ ಮಧೂರು ಆದ್ದು) , ಹಲವು ಆಂಗ್ಲ ಶಬ್ದ ಕನ್ನಡಲ್ಲಿ ಉಚ್ಚರಿಸುವಾಗ ಬೇರೇ ನಮೂನೆ ಆವ್ತಾಂಗೆ ಇದರನ್ನೂ ಹಾಂಗೆ ತೆಕ್ಕೊಳ್ಳಾಗದಪ್ಪೋ

        1. ಚೆನ್ನೈಭಾವಾ..
          ಸುರೂವಾಣ ಒಪ್ಪಕ್ಕೊಂದು ಪ್ರೀತಿಯ ಒಪ್ಪ!
          ಕೈನೀಟಮ್ಮಿನ ಶುದ್ದಿ ತೆಗದ್ದು ಪಷ್ಟಾಯಿದು.
          ಕಾಲು ಹಿಡುದ ಕೂಡ್ಳೇ “ಅಡ್ಡನಿಂದು ನೀಟ ಕೇಳುದು” ಒಂದು ಪಿಟ್ಕಾಯನ, ಅಷ್ಟೇ!
          ಇದು ಕೇರಳದ ನಾಯಿಮ್ಮಾರಂಗಳಲ್ಲಿ ಸುರು ಆದ ಒಯಿವಾಟೋ – ಎಂತದೋ – ಹೇಳಿ ಮಾಷ್ಟ್ರುಮಾವ ಸಂಶಯ ಮಾಡಿಗೊಂಡವು. ಅಂತೂ, ಅದೊಂದು ಸ್ಥಳೀಯ ಚರಣೆ ಅಡ.

          ಮುಣ್ಚಿಕಾನದ ಪ್ರದೀಪಣ್ಣಂಗೆ ಒಪ್ಪಂಗೊ – ನೀಟಕೆ ಬರದ್ದರ ಅಡ್ಡಗೆರೆ ಹಾಕಿ ಸರಿ ಮಾಡಿದ್ದಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×