Oppanna.com

ವಿಷುವಿನ ವಿಶೇಷಕ್ಕೆ ಸಾಹಿತ್ಯದ ಗಣಿ ಅರಳಲಿ..

ಬರದೋರು :   ಒಪ್ಪಣ್ಣ    on   10/04/2015    3 ಒಪ್ಪಂಗೊ

ಒರಿಶಕ್ಕೊಂದರಿ ಎಂತಾವುತ್ತು – ಹೇದು ಬೋಚಬಾವನತ್ರೆ ಕೇಳಿರೆ – ಒಂದೊರಿಶ ಆವುತ್ತು ಹೇದಷ್ಟೇ ಹೇಳುಗು. ಆದರೆ ಒಂದೊರಿಶಲ್ಲಿ ಹಲವೆಲ್ಲ ಬದಲಾವಣೆ ಆವುತ್ತು.
ಮುಳಿಯಭಾವನ ವಸಂತ ವಿಹಾರ ಒರಿಶಕ್ಕೊಂದರಿ ಬಪ್ಪದು; ಪಾರೆಅಜ್ಜಿಯ ನೇಮ ಒರಿಶಕ್ಕೊಂದರಿ ಬಪ್ಪದು; ದೇವಸ್ಥಾನದ ಆಯನಂಗೊ ಒರಿಶಕ್ಕೊಂದರಿ ಕಾಂಗು, ಕಾನಾವಣ್ಣನ ಬರ್ತುಡೇ ಲೆಕ್ಕದ ಗುಲಾಬಿಜಾಮು ಒರಿಶಕ್ಕೊಂದರಿ ಬೈಲಿನೋರಿಂಗೆ ಎಲ್ಲೋರಿಂಗೂ ಸಿಕ್ಕುಗು, ಮಾಷ್ಟ್ರುಮಾವನ ದೊಡ್ದಮಗ° ವಿಮಾನ ಹತ್ತುಗು, ಬೈಲಕರೆ ಇಂಗ್ರೋಜಿಲಿ ಈಷ್ಟರು ಮುಗಿತ್ತು; ಇದೆಲ್ಲವೂ ಒರಿಶಕ್ಕೊಂದರಿ ಬಪ್ಪ ಗವುಜಿಗೊ.

ಬಾನಲ್ಲಿ ಸೂರ್ಯದೇವರ ಸುತ್ತ ಭೂಮಿ ಒಂದು ಸುತ್ತ ಬಪ್ಪಗ ಒಂದೊರಿಶ ಅಪ್ಪದು. ಹನ್ನೆರಡು ತಿಂಗಳು ಹಿಡಿತ್ತು ಈ ಕಾರ್ಯಕ್ಕೆ. ಒಂದೊಂದು ತಿಂಗಳೂ ಮತ್ತಾಣ ರಾಶಿಗೆ ಹೋಪ ದಿನವ ಸಂಕ್ರಮಣ – ಹೇಳ್ತವು. ಕಾಂಬುಅಜ್ಜಿ ಶೆಂಕ್ರಾಂತಿ ಹೇದೊಂಡು ಇತ್ತಿದ್ದವು.
ಹನ್ನೆರಡಕ್ಕೆ ಹನ್ನೆರಡೂ ವಿಶೇಷವೇ ಆದರೂ, ಅದರ್ಲಿ ಮೇಷ ಸಂಕ್ರಮಣ ತುಂಬಾ ವಿಶೇಷ. ಏಕೇದರೆ, ಒರಿಶಾರಂಭದ ದಿನದ ಶೆಂಕ್ರಾಂತಿ ಅದು.

ವಿಶೇಷವಾದ ಈ ವಿಷು ಶೆಂಕ್ರಾಂತಿ ದಿನ ನಮ್ಮ ಮನೆಗಳಲ್ಲಿ ವಿಶೇಷ ಇರ್ತು; ಗೊಂತಿದ್ದಲ್ಲದೋ?
ಮನೆಲಿಪ್ಪ ಸುವಸ್ತುಗಳ, ಸ್ವರ್ಣ ಧಾನ್ಯಂಗಳ ಎಲ್ಲವನ್ನುದೇ ಮಣೆಮೇಲೆ ಹಾಸಿದ ಪಟ್ಟೆಮೇಗೆ ಹರಡಿ ಮಡಗಿ, ಎಜಮಾನನ ಸಹಿತ ಮನೆ ಎಲ್ಲೋರುದೇ ನೀಟಂಪ ಅಡ್ಡಬೀಳ್ತ ದಿನ ಅದು. ಆ ದಿನ ಎದ್ದ ಕೂಡ್ಳೇ ಈ ಸುವಸ್ತುಗಳ ನೋಡೇಕಡ. ಅದರ “ಕಣಿ” ಹೇಳುದು ನಮ್ಮೋರು.
ಹಾಂಗೆ ಎದ್ದ ಕೂಡ್ಳೇ ಕಣಿನೋಡುದು ಆ ದಿನ. ಕಳ್ಳುಕುಡ್ಕ° ಜಿನ್ನಪ್ಪು ನಿತ್ಯವೂ ಕಣಿ ನೋಡ್ತು, ಎದ್ದ ಕೂಡ್ಳೆಯೂ – ಬಿದ್ದ ಕೂಡ್ಳೆಯೂ. ಅದಿರಳಿ!

ವಿಷುವಿನ ದಿನಕ್ಕೆ ಬೈಲಿನ ಮನೆಗಳಲಿ ಗೌಜಿ ಇದ್ದು. ಅದರೊಟ್ಟಿಂಗೆ ವಿಶೇಷವಾಗಿ ನಮ್ಮ ಬೈಲಿಲಿಯೂ ಗೌಜಿ ಇದ್ದು; ಅಪ್ಪೋ! ಕಳುದ ಮೂರೊರಿಶಂದ ನಮ್ಮ ಬೈಲಿಲಿ ಪ್ರತಿ ವಿಷುವಿನ ಸಮೇಲಿ ಗೌಜಿ. ಎಲ್ಲೋರುದೇ ಕೊಶಿಯ ಅಂಬೆರ್ಪು. ಎಂತರ ಅದು?

ಅದುವೇ – ವಿಷು ವಿಶೇಷ ಸ್ಪರ್ಧೆ.

~

ಬೈಲಿನ ಅಸ್ತಿತ್ವ ಇಪ್ಪದೇ ಸರಸ್ವತೀ ಸೇವೆಲಿ.
ಪ್ರತಿ ನಿತ್ಯವೂ ಹೊಸ ಹೊಸ ಸಾಹಿತ್ಯದ ಒರತ್ತೆ ಬರೇಕು ಹೇದು ಈ ಬೈಲಿಲಿ ಹಲವು ಗೆದ್ದೆಗಳ ಬಿಟ್ಟಿದು ಅಪ್ಪೋ. ಅದರ್ಲಿ ಹಲವೂ ಜೆನಂಗೊ ಬಂದು ಕೃಷಿಲಿ ಸೇರಿ ಬೆಳೆಶುತ್ತಾ ಇಪ್ಪದು ನವಗೆಲ್ಲ ಅರಡಿವ ವಿಷಯವೇ.
“ಈ ಬೈಲು ಇಪ್ಪದು ಕಂಪ್ಯೂಟ್ರು ಇಪ್ಪೋರಿಂಗೆ ಮಾಂತ್ರವೋ?” ಹೇದು ಒಂದು ಪ್ರಶ್ನೆ ಜೆನಂಗೊಕ್ಕೆ ಬಪ್ಪದು ಸಾಮಾನ್ಯವೇ.
ಅದಕ್ಕಾಗಿಯೇ ನಮ್ಮ ಬೈಲಿನ ಭಾವಂದ್ರು ಒಟ್ಟು ಸೇರಿ ಚಿಂತನೆ ಮಾಡಿದ ಕಾರ್ಯ “ವಿಷು ವಿಶೇಷ ಸ್ಪರ್ಧೆ”.

ಸಮಾಜದ ಒಳ ಬರವಣಿಗೆ ಆಸಕ್ತಿ ಇಪ್ಪ ಹಲವು ಪ್ರತಿಭೆಗಳ ಗುರ್ತ ಮಾಡಿ, ಪ್ರೋತ್ಸಾಹ ಮಾಡಿ, ಸನ್ಮಾನ ಮಾಡ್ತ ಕಾರ್ಯಕ್ರಮವೇ ಈ ವಿಷು ವಿಶೇಷ ಸ್ಪರ್ಧೆ – ಹೇದು ಅದರ ಸಂಚಾಲಕರಾದ ನಮ್ಮ ದೊಡ್ಡಭಾವ° ಹೇಳ್ತವು. ಅದು ಹೇಂಗೆ – ಹೇದು ಪ್ರಶ್ನೆಕೇಳಿರೆ ವಿವರಲ್ಲಿ ಹೇಳುಗು.

ಈಗಾಣ ಕಾಲದ ಸಾಹಿತ್ಯಲ್ಲಿ ಅತಿ ಪ್ರಮುಖ ಪ್ರಾಕಾರ ಹೇದರೆ ಕಥೆ, ಕವನ, ಪ್ರಬಂಧ ಮತ್ತೆ ನೆಗೆಬರಹ.
ಯೇವದೋ ಒಂದು ಕಾಲ್ಪನಿಕ ಸನ್ನಿವೇಶವ ನಮ್ಮೆದುರು ಚಿತ್ರಿಸಿ ಅದರ್ಲಿ ಒಂದು ಕಥಾವಸ್ತುವಿನ ತುಂಬುಸಿ, ಯೇವದೋ ಒಂದು ಸಂದೇಶವ ಕೊಡ್ತ ನಮುನೆಯ ಸಾಹಿತ್ಯಂಗೊ ಕಥೆಯಾಗಿಯೂ,
ನಿರ್ದಿಷ್ಟವಾದ ಛಂದಸ್ಸೋ, ರಾಗವೋ, ತಾಳವೋ ಅಲ್ಲದ್ದರೆ ಕನಿಷ್ಠಪಕ್ಷ ಭಾವವೋ ಮಣ್ಣ ಇರ್ತದರ ಕವನವಾಗಿಯೂ,
ಗಂಭೀರ ಚಿಂತನೆಗಳ ವಿಷಯಂಗಳ ಅಷ್ಟೇ ಗಂಭೀರವಾಗಿ ಪ್ರಸ್ತುತಪಡುಸುವ ಪ್ರಬಂಧವಾಗಿಯೂ,
ಹಗುರ ಹಗುರದ ಸಂಗತಿಗಳ ಹಗುರವಾಗಿಯೇ ಬರದು ಮುಟ್ಟುಸುದರ ನೆಗೆಬರಹವಾಗಿಯೂ – ಕಾಣ್ತು ನಾವು.

ಈ ನಾನಾ ನಮುನೆಯ ಪ್ರಾಕಾರಂಗಳ ನಮ್ಮ ಊರಿನ ನಮ್ಮ ಬೈಲಿನ ನೆಂಟ್ರುಗಳ ಕೈಲಿ ಬರೆಶುತ್ತದು, ಬರವಲೆ ಪ್ರೋತ್ಸಾಹಿಸುತ್ತದು ನಮ್ಮ ವಿಷುವಿಶೇಷ ಸ್ಪರ್ಧೆಯ ಕ್ರಮ– ಹೇಳ್ತವು ದೊಡ್ಡಭಾವ°.
ಒಟ್ಟಿಲಿ, ಬರವ ಪ್ರತಿಭೆಗೊಕ್ಕೆ ಒಂದು ಅವಕಾಶ ಕೊಟ್ಟು, ಅವರ ಪ್ರೋತ್ಸಾಹಿಸಿ, ತನ್ಮೂಲಕ ಹವ್ಯಕ ಸಾಹಿತ್ಯದ ಸಮುದ್ರಕ್ಕೆ ಹಲವು ನದಿ ನೀರುಗಳ ಜೋಡುಸಿ ಬಿಡ್ತದು ನಮ್ಮ ಆಶಯ – ಹೇದು ದೊಡ್ಡಭಾವ° ಹೆಮ್ಮೆಲಿ ಹೇಳುಗು.

ನಮ್ಮ ಊರೊಳ ಹಲವು ಸಾಹಿತಿಗೊ ಇದ್ದವು. ಅದರ್ಲಿ ಕೆಲವು ಜೆನ ಒರಿಶಕ್ಕೊಂದೋ ಎರಡೋ ಸರ್ತಿ ಪೆನ್ನು ಹಿಡುದು ಬರೆತ್ತವಷ್ಟೆ. ಅಂತವಕ್ಕೆ ಅವಕಾಶ ಸಿಕ್ಕುತು ಹೇದು ಆದರೆ ಅಂಬಗಂಬಗ ಬರಗನ್ನೇ. ಒಬ್ಬಂಗೆ ಗಂಭೀರದ್ದು ಬರವಲೆ ಇಷ್ಟ, ಇನ್ನೊಬ್ಬಂಗೆ ಕುಶಾಲು ಬರವಲೆ ಇಷ್ಟ, ಮತ್ತೊಬ್ಬಂಗೆ ಪದ್ಯ ಬರವಲೆ ಇಷ್ಟ, ಇನ್ನೊಬ್ಬಂಗೆ ಕತೆ ಬರವಲೆ ಇಷ್ಟ – ಎಲ್ಲೋರಿಂಗೂ ಇಷ್ಟ ಆಗಲಿ ಹೇದು ಈ ನಾಲ್ಕು ಪ್ರಾಕಾರಂಗಳ ಮಡಗಿದ್ದು. ಇದರ ಒಟ್ಟಿಂಗೇ, ನಮ್ಮ ನೆರೆಕರೆಲಿ ಹಲವಾರು ಜೆನ ಕೆಮರದ ಅಣ್ಣಂದ್ರು ಇದ್ದವಪ್ಪೋ; ಅವರ ಕೆಮರಲ್ಲಿ ಬಂದ ಅತ್ಯುತ್ತಮ ಪಟಂಗಳ ಗುರ್ತಿಸಿ, ಅದಕ್ಕೊಂದು ಒಪ್ಪ ತಲೆಬರಹ ಕೊಡುಸಿ ಅದರನ್ನೂ ಗುರ್ತುಸುದು. ಹಾಂಗಾಗಿ, ಆಯಾ ಜೆನಂಗೊಕ್ಕೆ ಯೇವದು ಇಷ್ಟವೋ, ಅದರ ಬರದು ಕಳುಸುಲಕ್ಕನ್ನೇ’ದು – ತಾತ್ಪರ್ಯ – ಹೇದವು ದೊಡ್ಡಭಾವ°.

ಬಂದ ಸಾಹಿತ್ಯಂಗಳಲ್ಲಿ ಆಯಾ ಪ್ರಾಕಾರಕ್ಕೆ ಎರಡೆರಡು ಅತ್ಯುತ್ತಮವಾದ್ಸರ ಗುರ್ತ ಮಾಡ್ತದು ಇನ್ನೊಂದು ಕೆಲಸ.
ಆರು ಗುರ್ತ ಮಾಡೇಕಾದ್ಸು? ನಿರ್ಣಾಯಕರು ಆರಾಯೇಕು? ಮದಲೇ ಈ ಸಾಹಿತ್ಯ ಕೃಷಿಲಿ ತೊಡಗುಸಿಗೊಂಡೋರು, ಇದೆಲ್ಲವೂ ಅರಡಿತ್ತೋರು ಆ ಕೆಲಸ  ಮಾಡೇಕು. ಹಾಂಗಾಗಿ,  ಆ ಕೆಲಸಕ್ಕೆ ನಮ್ಮ ಬೈಲಿನೊಳಾಣ ಅನುಭವಿ ಕೈಗಳ ಹಿಡುದು ಜೋಡುಸಿ ಅವರ ಮೂಲಕ ಈ ಕೆಲಸಂಗಳ ಮಾಡ್ತ
ಕೋರಿಕೆಯ ಮಾಡಿದ್ದವಾಡ ದೊಡ್ಡಭಾವ°. ಆ ಲೆಕ್ಕಲ್ಲಿ ಅರ್ತಿಕಜೆ ಅಜ್ಜ°, ಮಾಡಾವು ಮಾವ°, ಭರಣ್ಯಮಾವ°, ಇತ್ಯಾದಿ ಹೆರಿತಲೆಗೊ ನಮ್ಮೊಟ್ಟಿಂಗೆ ಸೇರಿ ನಿರ್ಣಾಯಕರಾಗಿ ಸಹಕರುಸುತ್ತವಾಡ.

~
ಆ ಪ್ರಕಾರಲ್ಲಿ, ಈ ಒರಿಶ, ನಾಲ್ಕನೇ ವರ್ಷ – ನಾಲ್ಕನೇ ಒರಿಶದ ವಿಷು ವಿಶೇಷ ಸ್ಪರ್ಧೆ ನೆಡದ್ದು.
ಸುರೂವಾಣ ಸರ್ತಿಯಾಣದ್ದು ಆಚೊರಿಶ ನೆಡದತ್ತು. ಹತ್ತಾರು ಜೆನ ಅವರವರ ಸಾಹಿತ್ಯ ಕೃಷಿಗಳ ಕೊಟ್ಟು ಕಳುಸಿದವು. ಸಂಖ್ಯೆ ಕಮ್ಮಿ ಆದರೂ ಸಾಹಿತ್ಯದ ಗುಣಮಟ್ಟ ಮೇಗೆಯೇ ಇದ್ದತ್ತು –  ಹೇದವು ದೊಡ್ಡಭಾವ°. ಸುಮಾರು ಜೆನ ಹೆರಿಯೋರು ಅದರ ತಿದ್ದಿದವು, ಮೌಲ್ಯಮಾಪನ ಮಾಡಿದವು.
ಆ ಪ್ರಕಾರಲ್ಲಿ ಕಾನಾವು ಡಾಗುಟ್ರ ಮನೆಲಿ ಕಾನಾವಣ್ಣನ ಉಪ್ನಾನದ ಗೌಜಿಲಿ ಆ ಪ್ರಶಸ್ತಿಗಳ ಕೊಡಮಾಡುಸಿತ್ತು. ಹೆರಿಯೋರಾದ ಅರ್ತಿಕಜೆ ಅಜ್ಜ° ನಮ್ಮೊಟ್ಟಿಂಗೆ ಇದ್ದದು ಅತ್ಯಂತ ಹೆಮ್ಮೆಯೂ, ಗೌರವದ ವಿಷಯವೂ ಆಗಿದ್ದು.
ಕಾರ್ಯಕ್ರಮವ ಎದುರುಗೊಂಡದಕ್ಕೆ ಆ ಮನೆಯೋರಿಂಗೆ ಬೈಲು ಕೃತಜ್ಞರಾಗಿರ್ತು.

ಮತ್ತಾಣ ಒರಿಶದ ವಿಷುವಿಂಗಪ್ಪಗ ಹತ್ತಾರು ಇದ್ದದು ಮೊದಲಾಣ ಒರಿಶಂದ ಮತ್ತೂ ಹೆಚ್ಚಾತು.
ಒಳ್ಳೆ ಸಂಖ್ಯೆಯ ಒಳ್ಳೊಳ್ಳೆ ಸಾಹಿತ್ಯಂಗೊ ಹರುದು ಬಪ್ಪಲೆ ಸುರು ಆತು. ಪುತ್ತೂರಿನ ಜೈನಭವನಲ್ಲಿ ನಮ್ಮ ಬೈಲಿನ ಅಷ್ಟಾವಧಾನ ಕಾರ್ಯಕ್ರಮ ನೆಡದ್ಸು ಅಲ್ಲದೋ – ಆ ದಿನವೇ ವಿಷು ಸ್ಪರ್ಧೆಯ ಬಹುಮಾನ ವಿತರಣೆ ಮಾಡಿ ಆತು. ಹೆರಿಯೋರಾದ ಮಾಡಾವು ಮಾವ°, ಅರ್ತಿಕಜೆ ಅಜ್ಜ° ಇತ್ಯಾದಿ ನಮ್ಮೊಟ್ಟಿಂಗೆ ಇದ್ದಿದ್ದವು.

ಮತ್ತಾಣ ಒರಿಶ ಅದೇ ಜಾಗೆಲಿ ಕಾವ್ಯಗಾನ ಯಾನ ಕಾರ್ಯಕ್ರಮ ನೆಡದತ್ತು. ಆ ದಿನ ಚೆಂಬಳ್ತಿಮಾರು ಅಣ್ಣ, ಮಳಿ ಮಧುಭಾವ° –ಇತ್ಯಾದಿ ಹೆರಿಯೋರು, ಅನುಭವಿಗೊ, ಸಾಹಿತಿಗೊ ಬಂದು ಕಾರ್ಯಕ್ರಮವ ಚೆಂದಕಾಣ್ಸಿ ಕೊಟ್ಟಿದವು. ಹತ್ತಾರು ಸಾಹಿತಿಗೊ ಇದ್ದದು ನೂರಾರು ಸಾಹಿತಿಗೊ ಆತು. ಹಲವಾರು ಸಾಹಿತ್ಯಂಗೊ ಬೆಳದು ಬಂತು – ಹೇದು ದೊಡ್ಡಭಾವ° ನೆಂಪುಮಾಡಿಗೊಳ್ತವು.

ಈ ಒರಿಶ?

~

ಈ ಒರಿಶವೂ ವಿಷು ವಿಶೇಷ  ಸ್ಪರ್ಧೆಯ ಚೆಂದಕೆ ನೆಡೆಶಿದ್ದವು ನಮ್ಮ ದೊಡ್ಡಭಾವ°.helike 2
ದಶಂಬ್ರಲ್ಲೇ “ಈ ಸರ್ತಿಯಾಣ ವಿಷು ಸ್ಪರ್ಧೆಗೆ ಇಂತಾ ದಿನದ ಒಳ ಕಳುಸಿಕೊಡಿ” – ಹೇದು ಪೇಪರಿಲಿ ಕೊಟ್ಟವು. ಮತ್ತೆ ಹಲವಾರು ಜೆನಂಗಳ ಮುಖತಾ ಪ್ರೋತ್ಸಾಹಿಸಿ, ನೆಂಪುಮಾಡಿ, ಬರವಲೆ ಪ್ರೋತ್ಸಾಹಕೊಟ್ಟು, ಬರೆಶಿ, ಅತಿ ಹೆಚ್ಚಿನ ಸಾಹಿತ್ಯ ಸೃಷ್ಟಿಮಾಡುಸಿದವು.
ಮೊನ್ನೆ ಇತ್ಲಾಗಿ “ಜಡ್ಜಂಗಳ ಕಾಂಬಲೆ ಹೋವುತ್ತಾ ಇದ್ದೆ” – ಹೇದು ಹೇಳಿತ್ತಿದ್ದವು ಒಂದರಿ ನೀರ್ಚಾಲಿಲಿ ಸಿಕ್ಕಿಪ್ಪಗ. ಬಂದ ಸಾಹಿತ್ಯಂಗಳ ಕಟ್ಟವ ಹೆರಿಯ ಜಡ್ಜಂಗೊಕ್ಕೆ ಕೊಟ್ಟು, ಎಲ್ಲ ತಿದ್ದುಸುತ್ತ ಗೌಜಿಲಿ ಈಗ ಅಂಬೆರ್ಪಿಲಿ ಇದ್ದವು.

ನಾಳ್ತು ವಿಷುವಿನ ದಿನ ಅದರ ಫಲಿತಾಂಶವ ಬೈಲಿಲಿ ಹೇಳುಗು ಅವು. ಎಲ್ಲೋರುದೇ ಕಾವೊ°.

~

ಅದಾಗಿ, ಬಪ್ಪ ಆಯಿತ್ಯವಾರ – ಹತ್ತೊಂಭತ್ತನೇ ತಾರೀಕಿಂಗೆ – ನೀರ್ಚಾಲು ಮಹಾಜನ ಶಾಲೆಲಿ ಒಂದು ಕಾರ್ಯಕ್ರಮ.
ನಮ್ಮ ಬೈಲ ನೆಂಟ್ರ ಸಾರಥ್ಯ ಅದಕ್ಕೆ. ಆ ಕಾರ್ಯಕ್ರಮಲ್ಲಿ ಈ ವಿಷುವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮಾಡ್ಸು – ಹೇದು ದೊಡ್ಡಭಾವ° ಹೇಳಿದ್ದವು.

ಕಾರ್ಯಕ್ರಮದ ಸುರುವಿಂಗೆ ಸಂಗೀತ ಕಛೇರಿ, ಮತ್ತೆ ಯಕ್ಷಗಾನ – ಆಟವೂ ಇಪ್ಪ ಕಾರಣ ಮನೋರಂಜನೆಗೆ ಏನೂ ಕೊರತ್ತೆ ಬಾರ. ಕಾರ್ಯಕ್ರಮ ಆದ ಕೂಡ್ಳೇ ಚಾಯಕುಡಿವಲೆ ಇದ್ದು – ಎಲ್ಲೋರು ಬನ್ನಿ – ಹೇದು ಈಗ ಹೇಳಿಕೆ ಮಾಡ್ತಾ ಇದ್ದವು.

~

ಅಪ್ಪು, ನಾವುದೇ ಅದನ್ನೇ ಹೇಳ್ತಾ ಇದ್ದು. ನಾಳ್ತಾಣ ಕಾರ್ಯಕ್ರಮಕ್ಕೆ ಎಲ್ಲೋರುದೇ ಬನ್ನಿ. ಕಾರ್ಯಕ್ರಮವ ಚೆಂದಕಾಣ್ಸಿಕೊಡಿ.
ವಿಷುಸ್ಪರ್ಧೆಯ ಈ ಒರಿಶದ ವಿಜೇತರ ಅಭಿನಂದಿಸುವೊ°.
ಬಪ್ಪೊರಿಶ ನಿಂಗಳೂ ಬರವಲೆ ಪ್ರೋತ್ಸಾಹ ಪಡಕ್ಕೊಂಡು ಹೋಪಲಕ್ಕು.
ಎಲ್ಲ ಕಳುದು ಛಾಯ ಕುಡಿವಗ ರಜ್ಜ ಕುಶಾಲು ಮಾತಾಡಿ ನೆಗೆಯೂ ಮಾಡಿಗೊಂಬೊ°.

ಕಾರ್ಯಕ್ರಮಕ್ಕೆ ಎಲ್ಲೋರುದೇ ಬನ್ನಿ.
ಎಲ್ಲೋರುದೇ ತನುಮನಧನ ಸಕಾಯ ಮಾಡಿ ಕೈಜೋಡುಸೇಕು – ಹೇದು ಬೈಲ ಪರವಾಗಿ ಕೇಳಿಗೊಂಬದು.

~

ಒಂದೊಪ್ಪ: ಕೃಷಿಗೆ ನೀರು-ಗೊಬ್ಬರ-ಶ್ರಮ ಬೇಕು; ಸಾಹಿತ್ಯಕೃಷಿಗೆ ಜನ-ಮನ-ಒಗ್ಗಟ್ಟು ಬೇಕು.

3 thoughts on “ವಿಷುವಿನ ವಿಶೇಷಕ್ಕೆ ಸಾಹಿತ್ಯದ ಗಣಿ ಅರಳಲಿ..

  1. ಎಂಗಳ ನೀರ್ಚಾಲು ಶಾಲೆಲಿ ಅಪ್ಪ ಈ ಕಾರ್ಯಕ್ರಮ ಕ್ಕೆ ಶುಭ ಹಾರೈಕೆಗೋ .ಎಲ್ಲೋರನ್ನುದೇ ಅಲ್ಲಿ ಕಾಂಬಲಕ್ಕನ್ನೇ ಹೇಳ್ತ ಕೊಶಿ ಅದಾ ….

  2. ಹರೇ ರಾಮ. ಶುಭಮಸ್ತು. ವಿಷು ದಿನಕ್ಕೆ ಕಾಯ್ತಾ ಇದ್ದೆ. ಮತ್ತೆ ಆದಿತ್ಯವಾರ ಚಾಯ ಕುಡಿತ್ತ ಹೊತ್ತಿಲ್ಲಿ ಕಾಂಬೊ. ಎಲ್ಲೋರ ಸಹಕಾರಂದ ನಮ್ಮ ನೀರ್ಚಾಲ್ಲಿ ಅಪ್ಪ ಈ ಕಾರ್ಯಕ್ರಮ ವಿಜೃಂಭಣೆಂದ ಯಶಸ್ವಿಯಾಗಿ ನಡೆಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×