ಎಲ್ಲ ಹಿಂದುಗೊ ಒಂದಾದರೆ ಆರೂ ಹಿಂದೆ ಒಳಿಯವು..!

January 23, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮನ್ನೆ, ಮಳಿ ಉಪ್ನಾನದ ಮರದಿನ ಪುತ್ತೂರಿಂಗೆ ಹೋಗಿಬಂದೆ.
ಹೋದ್ಸು ಸ್ಟೇಟುಬಸ್ಸಿಲಿ, ಬಂದದು ನೇರಳೆಬಾವನ ಬೈಕ್ಕಿಲಿ. ನೇರಳೆಭಾವಂಗೆ ಮರದಿನ ಊರಿಂಗೆ ಬಾರದ್ದೆ ಕಳೀಯ ಹೇದು ನವಗೂ ಗೊಂತಿತ್ತು. ಹಾಂಗಾಗಿಯೇ ಎಂಗೊ ಜೆತೆ ಆಗಿಂಡು ಬಪ್ಪಲೆ ಅನುಕ್ಕೂಲ ಆತು.
ಸುಮಾರು ವಿಷಯಂಗೊ ಮಾತಾಡ್ಳೆ ಸಿಕ್ಕಿತ್ತು ಹೇಳುಸ್ಸು ಬಸ್ಸಿನ ಮೂವತ್ತಾರು ರುಪಾಯಿ ಒಳುದತ್ತು ಹೇಳುತ್ತದರಿಂದಲೂ ಮುಖ್ಯ ವಿಚಾರ ಇದಾ.

ನೇರಳೆ ಭಾವ° ಹೇದರೆ ನಿಂಗೊಗೆ ಗೊಂತಿಕ್ಕು. ನಮ್ಮ ಕುಂಟಾಂಗಿಲ ಭಾವನಿಂದಲೇ ಅಣ್ಣ. ಕೆಂಪಣ್ಣಂಗಳ ಊರಿಲಿ ಹುಟ್ಟಿ, ಪಚ್ಚೆಗಳ ಊರಿಲಿ ಬೆಳದು, ಈಗ ಕೇಸರಿ ಊರಿಲಿ ನೆಲೆ ಆಯಿದವು. ರಾಮಜ್ಜನ ಕೋಲೇಜಿಲಿ ಉದ್ಯೋಗಸ್ಥರಾದರೂ, ಮನೆಲಿ ಲೂಟಿಮಾಣಿಯ ನೋಡಿಗೊಂಬದೇ ಅದರಿಂದ ದೊಡ್ಡ ಉದ್ಯೋಗ – ಹೇದು ಒಂದೊಂದರಿ ನೆಗೆಮಾಡ್ಳಿದ್ದು. ದೊಡ್ಡಜ್ಜನ ನೆರಳಿಲೇ ಬೆಳದ ಕಾರಣ ದೊಡ್ಡಜ್ಜಂಗೆ ಅರಡಿತ್ತ ಹತ್ತೂ ಹಲವು ವಿಷಯಂಗೊ – ನೋಡಿ ಅನುಭವ ಇದ್ದು ಹೇಳ್ತರಲ್ಲಿ ತಪ್ಪಿಲ್ಲೆ. ಮನೆ ನೆಡೆಶುದರಿಂದ ಹಿಡುದು ಮನೆಲಿ ತುಪ್ಪ ಕಾಸುದರ ಒರೆಂಗೆ ಎಲ್ಲವುದೇ ಅರಡಿಗು. ಹತ್ತೂ ಹಲವು ಜೆನರ ಸಂಪರ್ಕವೂ ಇಪ್ಪ ಕಾರಣ ಬೆಶಿ ಬೆಶಿ ಒರ್ತಮಾನಂಗಳೂ ಗೊಂತಿರ್ತು ಹೇಳುವೊ°.

ಎನ್ನ ಒಂದರಿಯಾಣ ಕೆಲಸ ಎಲ್ಲ ಮುಗುದು ಕಾದುಗೊಂಡು ಇತ್ತಿದ್ದೆ. ಬೊಳುವಾರಿನ ತಿರ್ಗಾಸಿಲಿ ಬಂದು ಬೈಕ್ಕು ರಪ್ಪನೆ ನಿಲ್ಲುಸುವಾಗ – ಓ ಮನ್ನೆ ರಾಮಜ್ಜನ ಕೋಲೇಜಿನ ಸ್ವರ್ಣಮಹೋಲ್ಸ(ತ್ಸ)ವ ನೆಡದ ಗೌಜಿಯ ಓಡಾಟಲ್ಲಿ ರಜಾ ಬಚ್ಚಿದ ಹಾಂಗೆ ಕಂಡತ್ತಪ್ಪ.

ಅದಿರಳಿ.

ಬೊಳುವಾರಿಂದ ಬೈಲಕರೆ ಒರೆಂಗೂ – ಒಂದಲ್ಲ ಒಂದು ವಿಷಯಂಗೊ ಮಾತಾಡಿಗೊಂಡೇ ಹೋದ್ಸು ಎಂಗೊ. ಎಲ್ಲಾ ಸಂಗತಿಗಳೂ ಬಂತು. ರಾಮಜ್ಜನ ಕೋಲೇಜಿನ ಈಗಾಣ ಶುದ್ದಿ, ಕುಂಬ್ಳೆಜ್ಜನ ಒರಿಶಾಂತದ ಶುದ್ದಿ, ಕಣಿಯಾರಾಯನದ ಶುದ್ದಿ, ಕುಂಟಾಂಗಿಲ ಭಾವಂಗೆ ಬೆಂಗ್ಳೂರಿಲಿ ಪದಕ್ಕ ಸಿಕ್ಕದ ಶುದ್ದಿ, ಚೆನ್ನೈಭಾವಂಗೆ ಹೊಸಕೊಯಿಲು ಅಡಕ್ಕೆ ಕಳುಸಿಕೊಟ್ಟ ಶುದ್ದಿ, ಸುಭಗಭಾವ ಕುಣಿಯ ತಿಂಬದರ ಬಿಡುವ ಶುದ್ದಿ, – ಎಲ್ಲವುದೇ.
ಕುಣಿಯ ಬಿಟ್ಟಾತೋ, ಬಿಡೆಕ್ಕಷ್ಟೆಯೋ ಗೊಂತಿಲ್ಲೆ. ಅದಿರಳಿ.
ಇದೆಲ್ಲದಕ್ಕಿಂತ ಹೆಚ್ಚು ಸಮಯ ಹಿಡುದ ಮಾತುಕತೆ – ಹೇದರೆ, ಪುತ್ತೂರಿನ ಹಿಂದೂ ಸಂಗಮದ ಶುದ್ದಿ. ಎಂತರ ಆ ಕಾರ್ಯಕ್ರಮ? ಅದರ ಹಿಂದೆ ಇಪ್ಪ ಉದ್ದೇಶ ಎಂತರ? ಎಲ್ಲವನ್ನುದೇ ಒಂದರಿ ನೆಂಪುಮಾಡಿಗೊಂಡೆಯೊ°.

~

ಹಿಂದೂ ಹೇದರೆ ಒಂದು ಧರ್ಮಂದಲೂ, ಜೀವನ ಪದ್ಧತಿ – ಹೇಳ್ಸರ ನಾವು ಹಲವೂ ಸರ್ತಿ ನೆಂಪುಮಾಡಿಗೊಂಡಿದು. ಭಾರತ ದೇಶದ ಆ ಕೊಡಿಂದ ಈ ಕೊಡಿಯಂಗೆ ಹೇಂಗೆ ನೋಡಿರೂ, ಒಂದಲ್ಲಾ ಒಂದು ಹೋಲಿಕೆ, ಸಾಮ್ಯತೆಗೊ ಇದ್ದೇ ಇರ್ತು. ಅಶ್ವತ್ಥಕಟ್ಟೆಗೆ ಸುತ್ತ ಬಪ್ಪದೋ, ಅಬ್ಬೆಪ್ಪಂಗೆ ನಮಸ್ಕಾರ ಮಾಡುದೋ, ಉಂಬೆಗೆ ಕೈ ಮುಗಿವದೋ, ಅಲ್ಲ ಹೋಮ ಮಾಡುದೋ, ಅಲ್ಲ ಕುಂಕುಮ ಬೊಟ್ಟು ಹಾಕುಸ್ಸೋ – ಹೀಂಗೆ ಎಂತಾರು ಒಂದು ಹಿಂದುತ್ವದ ಸೂಚನೆಗೊ ಕಂಡೇ ಕಾಣ್ತು. ಇದೆಲ್ಲವೂ ಮೂಲ ಒಂದೇ ದಿಕ್ಕಂದ, ಅಲ್ಲದ್ದರೆ ಒಂದೇ ಕೇಂದ್ರಬಿಂದುವಿಂದ ಹೆರಟಿಕ್ಕು – ಅದುವೇ ಹಿಂದು – ಹೇಳುಸ್ಸು ಸುಮಾರು ಜೆನ ನಂಬಿಗೊಂಡ ಸಂಗತಿ.
ಹಾಂಗಾಗಿಯೇ, ನಾವೆಲ್ಲರೂ ಹಿಂದುಗಳೇ, ನಮ್ಮ ಮೂಲ ಒಂದೇ ಹೇಳ್ವ ಭಾವನೆಯ ಭಾರತೀಯರು ಮಡಿಕ್ಕೊಂಡವು.
ನಮ್ಮ ಊರಿನ ನೋಡಿದ ಅರಬ್ಬಿಗೊ ಇದರ “ಹಿಂದುಸ್ಥಾನ” ಹೇಳಿಯೂ ಹೆಸರು ಮಡಗಿದವು!

ಆದರೆ, ಈಗ ಎಂತಾಯಿದು? ಹಿಂದೂ – ಹೇದರೆ ಅದೊಂದು ಧರ್ಮ. ಹಲವು ಜಾತಿಗೊ ಅದರ ಒಳ ಇದ್ದು. ಇವೆಲ್ಲವೂ ಓಟು ಹಾಕುತ್ತ ಮಿಷನುಗೊ. ಆದರೆ ಈ ಮಿಷನಿಲಿ ಎಲ್ಲೋರುದೇ ಒಂದೇ ಜಾಗೆಗೆ ಓಟು ಹಾಕುತ್ತವಿಲ್ಲೆ. ಇದರಿಂದ ಬ್ಯಾರಿ ಅಥವಾ ಪುರ್ಬು ಹೇಳ್ತ ಧರ್ಮದ ಮಿಷನುಗೊ ಒಳ್ಳೆದು, ಅವ್ವಾದರೆ ಎಲ್ಲಾ ಜೆನಂಗಳೂ ಒಟ್ಟಾಗಿ ಓಟು ಹಾಕುತ್ತವು. ಹಾಂಗಾಗಿ ಹಿಂದೂ ಹೇಳ್ತ ಜಾತಿಯ ಗುಮನ ಮಾಡದ್ದರೂ ಸಾರ ಇಲ್ಲೆ. ಇಡೀ ಹಿಂದೂ ಜಾತಿಯ ಒಟ್ಟಾಗಿ ನಗಣ್ಯ ಮಾಡುದರ ಬದಲು, ಅದರ ಒಳಾಣ ಜಾತಿಗಳ ತುಂಡುಸಿ, ಆಚ ಧರ್ಮದ್ದರ ಒಟ್ಟಿಂಗೆ ಹೇಂಗಾರು ಸೇರ್ಸಿರೆ, ಅದು ಒಳ್ಳೆದು! ಅಷ್ಟಪ್ಪಗ ಹಿಂದೂ ಹೇಳ್ತ ಗುಂಪಿಲಿ ಒಳಿತ್ತವು ಕಡಮ್ಮೆ ಜೆನ ಆಗಿರ್ತು. ಹಾಂಗೆ ಕಡಮ್ಮೆ ಆದಷ್ಟೂ ಓಟಿಂಗೆ ಒಳ್ಳೆದು.

ಒಂದು ವೇಳೆ ತಾನು ಹಿಂದೂ – ಹೇದು ಆರಾರು ಹೇಳಿರೆ, ಮುಗಾತು ಕತೆ. ಅವ° “ಮತೀಯ ವಾದಿ, ಅವ ಕೇಸರೀ ಭಯೋತ್ಪಾದಕ, ಅವ ಮೂಲಭೂತವಾದಿ”. ಅದೇ ಆಚವ° ತಾನು ಬ್ಯಾರಿ – ಹೇದರೆ ಅದು “ಅಲ್ಪಸಂಖ್ಯಾತರ ಅಭಿವ್ಯಕ್ತಿ ಸ್ವಾತಂತ್ರ್ಯ”. ಒಬ್ಬ ಹಿಂದೂ ಆಗಿಪ್ಪವ ಆಚವನ ಬೈದರೆ ಜೈಲಿಂಗೇ ಹೋಯೆಕ್ಕಷ್ಟೇ. ಆಚೋರು ಇವನ ಬೈದರೆ ದೊಡ್ಡ ಸಂಗತಿ ಆವುತ್ತಿಲ್ಲೆ. ಹೀಂಗಿರ್ತ ಹಲವೂ ಮಾಲುವಿಕೆಗೊ ಇದ್ದು ನಮ್ಮ ದೇಶದ ತಕ್ಕಡಿಲಿ.

ಇದೆಲ್ಲ ಸುರು ಆದ್ಸು ಯೇವತ್ತು? ಬ್ರಿಟಿಷರ ಕಾಲಂದಲೇ ಸುರು ಆಯಿದು – ಹೇಳ್ತವು ಮಗುಮಾವ°. ಅವು ಎಂತ ಬೇಕಾರೂ ಮಾಡ್ಳಿ, ನಮ್ಮ ಸ್ವತಂತ್ರ ಭಾರತಲ್ಲಿ ಸರಿ ಆತೋ? ಇಲ್ಲೆ!
ಅದೇ ಸಂಪ್ರದಾಯ ಮುಂದುವರುತ್ತು! ಅಲ್ಲ, ಇನ್ನೂ ಜಾಸ್ತಿ ಆತು.
ನೆಹರೂ ಮತ್ತವರ ಕುಟುಂಬದ ರಾಜಕಾರಣಲ್ಲಿ ಮೊನ್ನೆ ಮೊನ್ನೆ ವರೆಂಗೂ ಈ ಸಂಪ್ರದಾಯ ಮುಂದುವರುತ್ತು.

ಒಂದು ಸಂವತ್ಸರಚಕ್ರ ಒಂದು ಸುತ್ತು ತಿರುಗುವ ಹೊತ್ತಿಂಗೆ – ಹಿಂದೂ ಹೇದರೆ ಅದೊಂದು ಶಾಪ, ಅದೊಂದು ಹೇಳುಲಾಗದ್ದ ಶಬ್ದ – ಹೇಳ್ತ ಮಟ್ಟಕ್ಕೆ ತಂದು ನಿಲ್ಲುಸಿದ್ದವು ಭಾರತದ ರಾಜಕಾರಣಿಗೊ.
ದೇಶದ ಸರ್ಕಾರೀ ಸೌಕರ್ಯಂಗೊ ಸಿಕ್ಕೇಕಾರೆ ಇದೊಂದು ಶಬ್ದ ಹೇಳುಲಾಗ. ಬೇರೆ ಯೇವದೇ ಮತದವು ಆದರೂ ಅಕ್ಕು. ಒಳುದೋರಿಂಗೆ ಅವರವರ ಧರ್ಮಸ್ವಾತಂತ್ರ್ಯ ಇದ್ದು, ಹಿಂದೂ ಹೇದರೆ ಅವು ಬಹುಸಂಖ್ಯಾತರು ಆದ ಕಾರಣ ಅವರ ಸ್ವಾತಂತ್ರ್ಯ ಹರಣ ಆದರೂ ಸಮಸ್ಯೆ ಇಲ್ಲೆ – ಇತ್ಯಾದಿ ಹಲವೂ ಸಂಗತಿಗೊ ನಮ್ಮ ಸರ್ಕಾರೀ ವಲಯಲ್ಲಿ ಬೆಳದು ಬಯಿಂದು.

ಎಂತ ಮಾಡುಸ್ಸು, ಇದಕ್ಕೆ ರಾಜಕೀಯ ಪ್ರೇರಿತ ಪ್ರೋತ್ಸಾಹ ಬೇರೆ!

~
ಆದರೆ, ಇದರೆಲ್ಲದರ ಮನಗಂಡ ಕೆಲವು ಚಿಂತಕರು, ಮುತ್ಸದ್ದಿಗೊ ಒಟ್ಟು ಸೇರಿಗೊಂಡವು. ಯೇವದೇ ರಾಜಕೀಯ ಹಿತಾಸಕ್ತಿ ಇಲ್ಲದ್ದೆ, ಕೇವಲ “ಹಿಂದುತ್ವಕ್ಕೆ ಮನ್ನಣೆ” ಹೇಳ್ತ ಏಕೈಕ ಸದುದ್ದೇಶಂದ “ವಿಶ್ವ ಹಿಂದೂ ಪರಿಷದ್” – ಹೇಳ್ತ ಮಹಾನ್ ಶಕ್ತಿಯ ಹುಟ್ಟು ಹಾಕಿದವು. ವಿಶ್ವದ ಎಲ್ಲಾ ದೇಶದ, ಎಲ್ಲಾ ಊರುಗಳಲ್ಲಿ ನೆಲೆ ಆಗಿಪ್ಪ ಹಿಂದೂ ಜೀವನಶೈಲಿಯ ಅಳವಡುಸಿಗೊಂಡ ಹಿಂದೂ ಮಕ್ಕಳ ಹಿತ ಕಾಪಾಡುವ ಉದ್ದೇಶಂದ, ಅವರ ಸರ್ವಾಭ್ಯುದಯಕ್ಕಾಗಿ ಈ ಪರಿಷತ್ತು. ಹಾಂಗಾಗಿಯೇ ಇದರ ಹೆಸರು ವಿಶ್ವ ಹಿಂದೂ ಪರಿಷತ್ತು.

ನಮ್ಮ ದೇಶಲ್ಲೇ ಇದರ ಮೂಲ ಸ್ಥಾನ. ಅಷ್ಟಪ್ಪಗ ಹುಟ್ಟಿ, ಅದಾಗಲೇ ಜವ್ವನಲ್ಲಿ ಇದ್ದಿದ್ದ “ರಾಷ್ಟ್ರೀಯ ಸ್ವಯಂಸೇವಕ ಸಂಘ” ಇದರ ಉಗಮದ ಉಸ್ತುವಾರಿಲಿ ಇದ್ದತ್ತು.
ಇದು ಸುರು ಆಗಿ ಈ ಒರಿಶಕ್ಕೆ ಐವತ್ತು ಒರಿಶ ಆತು – ಹೇಳ್ತದು ಅದರ ಹಿರಿಮೆ.
ಅಲ್ಲಿಂದ ಇಂದಿನ ವರೆಗೂ ಇದು ಹಿಂದೂ ಉತ್ಥಾನಕ್ಕಾಗಿ ದುಡಿತ್ತಾ ಇದ್ದು.
ಈಗ ಅಂತಾರಾಷ್ಟ್ರೀಯ ಮಟ್ಟಲ್ಲಿ ಬೆಳದು ವಿಶ್ವದ ಮೂಲೆ ಮೂಲೆಲಿ ಇದರ ವ್ಯಾಪ್ತಿ ವಿಸ್ತಾರ ಆವುತ್ತಾ ಇದ್ದು.

~

ಸಮಾಜದ ಮಧ್ಯ ಮಧ್ಯಲ್ಲಿ ಹಿಂದೂ ಸಮಾಜೋತ್ಸವಂಗೊ, ಹಿಂದೂ ಸಂಗಮಂಗೊ ಮಾಡಿ – ಆಯಾ ಊರಿಲಿ ಇಪ್ಪ ಹಿಂದೂ ಶೆಗ್ತಿಯ ಒಟ್ಟುಸೇರ್ಸುದು, ಆ ಮೂಲಕ ಸುತ್ತಮುತ್ತ ನೆಡೆತ್ತಾ ಇಪ್ಪ ತೊಂದರೆಗೊಕ್ಕೆ ಎಚ್ಚರ ಕೊಡುದೇ ಈ ಸಂಗಮದ ಉದ್ದೇಶ.
ಆ ಪ್ರಕಾರ ಮೊನ್ನೇಣ ಒಂದು ಕಾರ್ಯಕ್ರಮ ನಮ್ಮ ಊರಿಲಿ, ನಮ್ಮ ಪುತ್ತೂರಿಲಿಯೂ ನೆಡದತ್ತು.
ಅದುವೇ ಹಿಂದೂ ಸಂಗಮ. ನೇರಳೆ ಭಾವ ಮಾತಾಡುವಾಗ ಹೇಳಿದ್ದೇ ಆ ಸಂಗತಿಯ.

ವಿಶ್ವ ಹಿಂದೂ ಪರಿಷತ್ತಿನ ಶ್ರೀಮುದ್ರೆ - ಆಲದ ಮರದ ವ್ಯಾಪ್ತಿಯೂ, ಧೃಡತೆಯೂ.
ವಿಶ್ವ ಹಿಂದೂ ಪರಿಷತ್ತಿನ ಶ್ರೀಮುದ್ರೆ – ಆಲದ ಮರದ ವ್ಯಾಪ್ತಿಯೂ, ಧೃಡತೆಯೂ.

~

ನಮ್ಮ ಊರಿಲಿ ಸಮಾಜ ಘಾತುಕ ಶೆಗ್ತಿ ತುಂಬಾ ತುಂಬಾ ಬೆಳೆತ್ತಾ ಇದ್ದು, ನವಗೆ ಗೊಂತಿಪ್ಪದೇ.
ಭಟ್ಟಕ್ಕಳ ಜಾಗೆ ಹೋಗಿ ಭಟ್ಕಳ ಬಂದ ಬಗ್ಗೆ ನಾವು ಕಳುದ ವಾರವೇ ಮಾತಾಡಿದ್ದು. ದೇಶದ ಎಲ್ಲಿ ಬೋಂಬು ಹೊಟ್ಟಿರೂ ಭಟ್ಕಳಕ್ಕೆ ಒಂದು ಪೋಲೀಸು ಜೀಪು ಬಂದೇಬತ್ತು – ಹೇಳುವಷ್ಟೂ ನಿಘಂಟಾಯಿದು ಈಗ.

ಭಾರತ ಮಾಂತ್ರ ಅಲ್ಲದ್ದೆ, ಇರಾಕು, ತಾಲಿಬಾನು, ಪಾತಕಿಸ್ಥಾನ – ಇತ್ಯಾದಿ ಬೇರೆಬೇರೆ ದೇಶಕ್ಕೆ ಅವರ ವ್ಯಾಪ್ತಿ ಹರಡಿದ್ದು. ಆ ಪ್ರಕಾರಲ್ಲಿ ಭಟ್ಕಳದ ಭೂತಂಗೊ ಇನ್ನು ನಮ್ಮ ಊರಿಲಿ ಹರಡುಸ್ಸು ಬೇಡ, ನಮ್ಮ ಊರಿಂಗೆ ಸೌಮ್ಯ, ಶಾಂತವಾಗಿ ಇಪ್ಪ ಜೀವನವ ಹಾಳುಮಾಡುಸ್ಸು ಬೇಡ – ಹೇದು ನಾವೆಲ್ಲ ಆಶೆಪಡ್ತು. ಆದರೆ, ಬರೇ ಆಶೆ ಸಾಕೋ? ಸಾಲ, – ಎಂತದನ್ನೂ ಎದುರುಸುವೆ ಹೇಳ್ತ ಬಲವಾದ ಸಂಘಟನೆ, ಆ ಧೈರ್ಯ ಇದ್ದರೆ, ಯೇವದೂ ಬತ್ತಿಲ್ಲೆ. ಅಲ್ಲದ್ದರೆ ಭಟ್ಕಳದ ಭೂತ ನಿಧಾನವಾಗಿ ನಮ್ಮ ಊರಿಂಗೂ ಬಕ್ಕು.

ಹಾಂಗಾಗಿಯೇ, ನಮ್ಮ ಊರಿಲಿ ಭೂತಪ್ರೇತಪಿಶಾಚಿಗೆ ಜಾಗೆ ಇಲ್ಲೆ – ಹೇದು ತೋರ್ಸಲೆ ಹಿಂದೂ ಸಮಾಜ ಇಡೀ ಒಟ್ಟಾದ್ಸು.
ಅಂತಾರಾಷ್ಟ್ರೀಯ ಮಟ್ಟದ ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟೀಯ ಅಧ್ಯಕ್ಷರಾದ ಪ್ರವೀಣ್ ತೊಗಾಡಿಯಾ – ಇವುದೇ ಬಯಿಂದವು. ಅವರ ಭಾಷಣ ಹೇದರೆ ಅತ್ಯದ್ಭುತ ಇರ್ತಾಡ.
ವ್ಯಕ್ತಿಗತವಾಗಿ ಅವು ಕೇನ್ಸರು ಗುಣ ಮಾಡುವ ಡಾಗುಟ್ರು ಆದರೂ, ಕಾರ್ಯಚಟುವಟಿಕೆಲಿ ಸಮಾಜದ ಕೇನ್ಸರನ್ನೂ ನಿವಾರಣೆ ಮಾಡ್ಳೆ ನೋಡ್ತಾ ಇದ್ದವಾಡ.
ಹಾಂಗೆ, ಆ ಡಾಗುಟ್ರು ಬಂದವು.
ಅಷ್ಟು ದೂರದ ಡಾಗುಟ್ರು ಬಪ್ಪಗ ನಮ್ಮ ಊರಿನ ಡಾಗುಟ್ರು ಬಾರದ್ದೆ ಇಕ್ಕೋ – ಹಾಂಗೆ ನಮ್ಮ ಕಲ್ಲಡ್ಕ ಡಾಗುಟ್ರುದೇ ಬಂದಿತ್ತವು.
ಕಲ್ಲಡ್ಕದೋರ ತುಳು ಭಾಷಣ, ತೊಗಾಡಿಯಾನ ಹಿಂದಿ ಭಾಷಣ – ಇದೆರಡು ಕೇಳಿ ಅಪ್ಪಗ ಸೇರಿದ ಸಾವಿರಾರು ಹಿಂದುಗೊಕ್ಕೆ ಹೃದಯಲ್ಲಿ ಹುಲಿ ಕೆರಳಿ ನಿಂದದು ಲೊಟ್ಟೆ ಅಲ್ಲ.

~

ಆಗಲಿ, ಇದೆಲ್ಲ ನಮ್ಮ ಸಂಘಟನೆಯ ಜಾಸ್ತಿ ಮಾಡ್ಳೆ ಇಪ್ಪಂಥಾದ್ದು. ಕಾಲಕಾಲಕ್ಕೆ ನಮ್ಮ ಏಕತ್ವವ ತೋರ್ಸಿ, ನಾವೆಲ್ಲಾ ಒಂದು – ಹೇಳ್ತ ಸೂಚನೆಯ ನಮ್ಮ ಸಮಾಜಕ್ಕೆ ಕೊಟ್ಟುಗೊಂಡು ಇರೆಕ್ಕು.
ಹಾಂಗಾರೆ ಮಾಂತ್ರ ನಮ್ಮ ಸಮಾಜಲ್ಲಿ ಏಕತೆ ಸಾಧ್ಯ.
ಎಲ್ಲೋರುದೇ ಒಂದು – ಹೇದರೆ ಮತ್ತೆ ಮೇಲು ಕೀಳು ಇಲ್ಲೆನ್ನೇ. ಮೇಲು – ಕೀಳು ಇಲ್ಲದ್ದೇಹೋದರೆ ಮತ್ತೆ ಒಬ್ಬ ಹಿಂದೆ ಒಳಿವಲೇ ಇಲ್ಲೆನ್ನೆ.
ಅದಕ್ಕೇ ಆಗ ಹೇಯಿದ್ದು – ಎಲ್ಲೋರುದೇ ಒಂದಾದರೆ, ಮತ್ತೆ ಆರುದೇ ಹಿಂದೆ ಅಪ್ಪಲೆ ಇಲ್ಲೆ – ಹೇದು.

~

ನಾವು ಎಲ್ಲೋರುದೇ ಹಿಂದುಗೊ. ಚೆಂದಲ್ಲಿ ಇಪ್ಪೊ. ಒಂದಾಗಿ ಇಪ್ಪೊ°.
ನಮ್ಮ ಇಡೀ ಸಮಾಜ ಒಟ್ಟಾಗಿ ಬೆಳವೊ°.
ಹಾಂಗಾದರೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಊರ ಹಳ್ಳಿಗೊ ಭಟ್ಕಳದ ಹಾಂಗಿಪ್ಪ ಭೂತಕೊಂಪೆ ಅಪ್ಪದರ ನಾವೇ ತಡವಲಕ್ಕು. ಅಲ್ಲದೋ?

~

ಒಂದೊಪ್ಪ: ಹಿಂದುಳುದ ಹಿಂದುಗಳ ಮುಂದೆ ತಪ್ಪಲೆ ಹಿಂದುಗಳೇ ಮುಂದೆಬರೆಕ್ಕು

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಚೆನ್ನೈ ಬಾವ°

    ಹಿಂದುವಾಗಿ ಹುಟ್ಟಿ ಹಿಂದೂಸ್ತಾನಲ್ಲಿ ಅಹಿಂದುಗಳೊಟ್ಟಿಂಗೆ ಬದುಕ್ಯೊಂಡಿಪ್ಪಗ ಹಿಂದುತ್ವವ ಏವ ನಾಚಿಕೆಯೂ ಇಲ್ಲದ್ದೆ ಬಿಡೆಕ್ಕಾದ ದುರ್ದೈವ ಕೆಲವು ಜೆನಂಗೊಕ್ಕೆ ಆಗಿ ಹೋತನ್ನೇ ಹೇಳ್ಸು ಬಹು ಬೇಜಾರದ ಸಂಗತಿ. ಅಹಿಂದು ದೇಶಲ್ಲಿ ಹಿಂದುತ್ವಕ್ಕೆ ಎಷ್ಟು ಬೆಲೆ ಕೊಡ್ತವು ಹೇಳ್ಸರ ರಜ ಕೂಡ ಅಲೋಚನೆ ಮಾಡದ್ದೆ ದೇಶಾಭಿವೃದ್ಧಿ ಹೇಳ್ತ ವೇಷ ಹಾಕ್ಯೊಂಡು ಮೆರತ್ತವಕ್ಕೆ ವಿಶ್ವ ಹಿಂದುಗಳ ಜೈ ಹಿಂದ್ ಘೋಷಣೆ ಕೃಷ್ಣಾರ್ಜುನರ ಶಂಖನಾದದ ಹಾಂಗೆ ಹೃದಯ ಬಿರಿವಂತಾಗಲಿ ನಾವೆಂದೂ ಹೇಳ್ತ ಒಪ್ಪ.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಅಜ್ಜಕಾನ ಭಾವಚೆನ್ನಬೆಟ್ಟಣ್ಣವೇಣೂರಣ್ಣಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಅಕ್ಷರ°ಶೇಡಿಗುಮ್ಮೆ ಪುಳ್ಳಿಕಾವಿನಮೂಲೆ ಮಾಣಿಕೇಜಿಮಾವ°ಕಳಾಯಿ ಗೀತತ್ತೆಬೊಳುಂಬು ಮಾವ°ಜಯಶ್ರೀ ನೀರಮೂಲೆಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಉಡುಪುಮೂಲೆ ಅಪ್ಪಚ್ಚಿಮಾಲಕ್ಕ°ವೇಣಿಯಕ್ಕ°ದೀಪಿಕಾಪವನಜಮಾವಜಯಗೌರಿ ಅಕ್ಕ°ದೊಡ್ಮನೆ ಭಾವದೊಡ್ಡಭಾವಡೈಮಂಡು ಭಾವಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ