ಚಿನ್ನದಂಥಾ ಕೋಲೇಜಿಂಗೆ ಚಿನ್ನದ ಮಹೋತ್ಸವ..!

January 9, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೊಸ ಒರಿಶ ಬಂದ ಕೊಶಿ ಬೈಲಿಂಗೂ ಬಂದಿತ್ತು ಹೇದು ಮೊನ್ನೆಯೇ ಮಾತಾಡಿದ್ದು. ಒಂದು-ಎರಡು-ಮೂರು ಹೇದು ಹೇದು ಬೈಲಿಂಗೆ ಏಳನೇ ಒರಿಶ ಬಂದಿತ್ತು. ಮೊನ್ನೆ ಮೊನ್ನೆ ಹುಟ್ಟಿದ ಬೈಲು ಇಂದು ಇಷ್ಟೆತ್ತರ ಆತು ಹೇದು ಬೈಲಿನ ಭಾವಂದ್ರು ಕೊಶಿಪಟ್ಟವು.
ಎಲ್ಲವೂ ಚೆಂದಲ್ಲೇ ನೆಡಕ್ಕೊಂಡು ಇದ್ದು. ಅದೇ ಸಂದರ್ಭಲ್ಲಿ ಪುತ್ತೂರಿಂಗೆ ಹೋಗಿ ಬಂದ ಯೇನಂಕೂಡ್ಳಣ್ಣ ಒಂದು ಶುದ್ದಿ ಹೇಯಿದ° – “ಪುತ್ತೂರಿಲಿ ರಾಮಜ್ಜನ ಕೋಲೇಜಿಲಿ ಗವುಜಿ ನೆಡೆತ್ತಾ ಇದ್ದು” ಹೇದು. ಎಂತರ ಗೌಜಿ? ಕೇಟೆ.
ಅಷ್ಟಪ್ಪಾಗ ಗೊಂತಾತು, ರಾಮಜ್ಜನ ಕೋಲೇಜಿಂಗೆ ಐವತ್ತನೇ ಒರಿಶದ ಸಂಭ್ರಮ ಇದ್ದು, ಆ ಚಿನ್ನದ ಸಮಾರಂಭದ ಸಂಭ್ರಮ ಇಡೀ ಕೋಲೇಜಿನ ನಗರಕ್ಕೇ ಸುತ್ತಿದ್ದು – ಹೇದು. ಅಪ್ಪನ್ನೇ!

ಐದು ಆರು ಒರಿಶ ತುಂಬಿದ ಬೈಲಿನೋರೇ ಇಷ್ಟು ಕೊಶಿಲಿ ಇದ್ದು, ಅಂಬಗ ಐವತ್ತು ತುಂಬಿದ ಲೆಕ್ಕಲ್ಲಿ ಅದಕ್ಕೆ ಕಾರಣೀಭೂತರು ಎಷ್ಟು ಕೊಶಿಲಿ ಇಕ್ಕು ಅಲ್ಲದೋ?!
ಸ್ಥಾಪನೆಯ ಕಾಲಂದಲೇ ಒಟ್ಟಿಂಗಿದ್ದುಗೊಂಡು, ಇಡೀ ಕೋಲೇಜಿನ ಬೆನ್ನೆಲುಬು ಆಗಿ ನಿಂದ ರಾಮಜ್ಜಂಗೆ ಎಷ್ಟು ಕೊಶಿ ಅಕ್ಕು! ಅಲ್ಲದೋ?
ಇದೆಲ್ಲ ಗ್ರೇಶುವಾಗ, ಈ ವಾರ ಆ ಕೋಲೇಜಿನ ಬಗ್ಗೆಯೇ ಶುದ್ದಿ ಮಾತಾಡುವೊ° ಹೇದು ಕಂಡತ್ತು.

~

ಪಾರೆ ಮಗುಮಾವಂಗೆ ಹೈಸ್ಕೂಲು ಕಲ್ತಾಗಿದ್ದತ್ತು, ಬೈಲಕರೆ ಶಾಲೆಲಿ. ಅದರಿಂದ ಮುಂದೆ ಕಲಿಯೇಕಾರೆ ಸಮಗಟ್ಟು ಕೋಲೇಜುಗೊ ಇದ್ದತ್ತಿಲ್ಲೆ. ಕಾಸ್ರೋಡಿಲಿ ಇಲ್ಲೆ, ಕಣ್ಣೂರಿಂಗೆ ಹೋಪಲೆ ಅದು ಮಲೆಯಾಳಿಗಳ ಕೊಂಪೆ. ಈಚೊಡೆಲಿ ಕೊಡೆಯಾಲಕ್ಕೆ ಹೋಪಲೆ ದೂರ ಆತು. ಹತ್ತರಾಣ ಪುತ್ತೂರಿಲಿ?

ಪುತ್ತೂರಿಲಿ ಇದ್ದದು ಒಂದು ಕೋಲೇಜು – ಅದೂ ಪುರ್ಬುಗಳದ್ದು. ಪಾಠ, ಪ್ರವಚನ ಸಮಗಟ್ಟು ಆವುತ್ತಾ ಇದ್ದರೂ – ಪೀಸು ಕಂಡಾಬಟ್ಟೆ ಎಳೆತ್ತವು ಹೇದು ಒಂದು ಅವರ ಮೇಗೆ ಬೇಜಾರು ಇಡೀ ಲೋಕಕ್ಕೇ ಇದ್ದತ್ತು. ಆರಿಂಗೇ ಬೇಜಾರಿದ್ದರೂ, ಅವು ಕಡಮ್ಮೆ ಮಾಡಿದ್ದವಿಲ್ಲೆ – ಏಕೇದರೆ, ಅದೊಂದೇ ಕೋಲೇಜು ಪುತ್ತೂರಿಲಿ ಇದ್ದಿದ್ದ ಕೊಬ್ಬು. ಆರು ಎಂತದೇ ಹೇಳಲಿ, ಒಳ್ಳೆ ಕಲಿವಿಕೆ ಬೇಕಾದರೆ ನಮ್ಮಲ್ಲಿಗೆ ಬರ್ಲೇ ಬೇಕು – ಹೇಳ್ತ ಒಂದು ಜಂಭ. ಇದರಿಂದಾಗಿ, ಮಗುಮಾವನ ಹಾಂಗೆ ರಜಾ ಬಂಙಲ್ಲಿ ಇರ್ತ ಸುಮಾರು ಮಕ್ಕೊಗೆ ಉಪದ್ರ ಆಗಿಂಡು ಇದ್ದತ್ತು. ಮಗುಮಾವಂಗೆ ಹತ್ನೇ ಮುಗುದ್ದೇ ಮುಗುದ್ದು, ಕೋಲೇಜಿಂಗಪ್ಪಗ ಪುತ್ತೂರಿಲಿ ಒಂದು ಹೊಸ ಶುದ್ದಿ ಕೇಳಿತ್ತು – ನಮ್ಮವರದ್ದೇ ಒಂದು ಕೋಲೇಜು ಸುರು ಆವುತ್ತಾಡ – ಹೇದು.

ನಮ್ಮವರದ್ದೇ ಹೇದರೆ?

–      ಮಗುಮಾವನ ಹಾಂಗೆ ಬಡವರ ಉದ್ಧರುಸುವ, ಬಡವರ ನಾಡಿಮಿಡಿತ ಅರ್ಥ ಅಪ್ಪಂಥಾ

–      ಪಾಪದೋರಿಂಗೂ ಫೀಸು ಕಟ್ಳೆ ಎಡಿಗಾದ,

–      ನಮ್ಮ ದೇಶದ ಪ್ರಾಚೀನ ಪರಂಪರೆಗಳ ಗೌರವಿಸಿ, ಸನಾತನ ಸಂಸ್ಕಾರಂಗೊಕ್ಕೆ ಪ್ರೋತ್ಸಾಹ ಕೊಡುವ,

–      ಊರ ಜೆನರ ಅಭಿಪ್ರಾಯಂಗಳ ತುಂಬು ಹೃದಯಲ್ಲಿ ಸ್ವೀಕಾರ ಮಾಡ್ತ ಆಸಕ್ತಿ ಇಪ್ಪ

–      ಊರೋರನ್ನೂ ಸೇರ್ಸಿ ಬೆಳವ ಆಸಕ್ತಿ ಇಪ್ಪ

ನಮ್ಮವರದ್ದೇ ಆದ ಸಂಸ್ಥೆ.

ಈ ಸಂಸ್ಥೆಯ ಹುಟ್ಟು – ಅದೇ ಒಂದು ದೊಡ್ಡ ಶ್ರಮ. ಸುಲಭ ಇಲ್ಲೆಪ್ಪ, ಒಂದು ಊರಿಲಿ ಅದಾಗಲೇ ಒಳ್ಳೆ ಹೆಸರು ಪಡದ ಒಂದು ಕೋಲೇಜಿನ ಎದುರು ಇನ್ನೊಂದು ಕಟ್ಟಿ ನಿಲ್ಲುತ್ತೆ ಹೇದರೆ, ಅದಕ್ಕೊಂದು ನಿಷ್ಠೆ, ಶ್ರದ್ಧೆ ಬೇಕಾವುತ್ತು. ಆ ಅಂಶ ಇದ್ದತ್ತು ನಮ್ಮವರ ಬಳಗಲ್ಲಿ. ಪುತ್ತೂರು ಆಸುಪಾಸಿನ ಹಲವೂ ಹೆರಿತಲೆಗೊ ಎಲ್ಲೋರುದೇ ಒಟ್ಟುಸೇರಿ “ನಮ್ಮ ಕೋಲೇಜು ಆಯೇಕು” – ಹೇದು ತೀರ್ಮಾನ ಮಾಡಿಯೇ ಬಿಟ್ಟವು. ಆ ಕನಸಿನ ಪ್ರಸಾದವೇ ರಾಮಜ್ಜನ ಕೋಲೇಜು.

ಎತಾರ್ತಕ್ಕೆ ಈ ಕೋಲೇಜು ಕಟ್ಳೆ, ಬೆಳಗುಲೆ ರಾಮಜ್ಜನ ಹಾಂಗೇ ಹತ್ತಾರು ಅಜ್ಜಂದ್ರು ಹೋರಾಡಿದ್ದವು. ಆದರೆ, ದೀರ್ಘ ಕಾಲ ಸಂಚಾಲಕರಾಗಿ, ಹಿತೈಷಿಗಳಾಗಿ, ಅದೆಷ್ಟೋ ಸರ್ತಿ ತಾಂಗಿ ಬೆನ್ನೆಲುಬಾಗಿ ನಿಂದ ರಾಮಜ್ಜನಿಂದಾಗಿಯೇ ಈ ಕೋಲೇಜು ಗುರುತಿಸಿಗೊಳ್ತು ನಮ್ಮ ಬೈಲಿಲಿ. ಹಾಂಗಾಗಿ ಪಕ್ಕನೆ ರಾಮಜ್ಜನ ಕೋಲೇಜು – ಹೇದು ಹೋವುತ್ತು ಒಪ್ಪಣ್ಣಂಗೆ. ಅದಿರಳಿ.

~

ಅಂತೋ ಕೋಲೇಜು ಸುರು ಆವುತ್ತು. ಆ ಕೋಲೇಜಿಂಗೆ ಹೆಸರು ಎಂತರ ಮಡಗೆಕ್ಕು?

ಕೋಲೇಜಿಲಿ ಬಪ್ಪದು ಯುವಕರು. ಆ ಯುವ ಶೆಗ್ತಿಗೊಕ್ಕೆ ಆದರ್ಶಪ್ರಾಯರಾಗಿ ಇರ್ಸು ಆರು? ರಾಹುಲ್ ಗಾಂಧಿಯೋ? ಅಲ್ಲ ಸಚಿನ್ನೋ? ಅಲ್ಲ. ಅವೆಲ್ಲ ಅವರ ಸ್ವಂತಕ್ಕೋಸ್ಕರ ಮಾಡಿಗೊಂಬವು. ಆದರೆ, ದೇಶಕ್ಕೋಸ್ಕರ, ಭಾರತ ಮಾತೆಗೋಸ್ಕರ ಅದ್ಭುತ ತ್ಯಾಗ ಮಾಡಿ, ಯುವಕರ ಚೈತನ್ಯವ ಬಡುದು ಏಳುಸಿದ, ನಮ್ಮ ಸನಾತನತೆಲಿ ಜೀವ ಇದ್ದು ಹೇಳ್ಸರ ಪಾಶ್ಚಾತ್ಯರಿಂಗೆ ತೋರ್ಸಿಕೊಟ್ಟ ಸ್ವಾಮಿ ವಿವೇಕಾನಂದರೇ ಅಲ್ಲದೋ. ಹಾಂಗಾಗಿ ವಿವೇಕಾನಂದರ ಹೆಸರಿಲೇ ಆ ಕೋಲೇಜು ಸುರು ಆತು.

~

ಆರಂಭ ಸುಲಭಲ್ಲಿತ್ತೋ? ಇಲ್ಲೆ. ಪಾರೆ ಮಗುಮಾವ° ಈಗಳೂ ನೆಂಪುಮಾಡುಗು. ಅವು ಸುರೂವಾಣ ಒರಿಶದ ಕ್ಲಾಸಿಲಿ ಇದ್ದಿದ್ದ ಕಾರಣ ಆರಂಭದ ಕಷ್ಟನಷ್ಟಂಗೊ ಎಲ್ಲ ಅವಕ್ಕೆ ಅರಡಿಗು.
ಸಮಗಟ್ಟು ಕಟ್ಟೋಣ ಇಲ್ಲೆ, ಪಾಠಮಾಡ್ಳೆ ಮಾಷ್ಟ್ರಕ್ಕೊ ಇಲ್ಲೆ, ವೆವಸ್ತೆಗೊ ಇಲ್ಲೆ, ಹೋಲು-ಲೇಬು ಯೇವದೂ ಬೇಕಾದಾಂಗೆ ಇಲ್ಲೆ. ಇಪ್ಪದರ್ಲಿ ವೆವಸ್ತೆ ಮಾಡಿಗೊಂಬದು. ಇಪ್ಪಷ್ಟೇ ಮಾಡಿಗೊಂಬದು.
ಓ ಅಲ್ಲಿ ಪುತ್ತೂರು ಪೇಟೆಯ ಟೌನುಹೋಲಿನ ಹತ್ತರಾಣ ಕಟ್ಟೋಣಲ್ಲಿ ಸುರು ಆತು. ಇದೆಲ್ಲ ಆದರೂ – ಕಲಿವಿಕೆಗೆ ಏನೂ ಸಮಸ್ಯೆ ಅಪ್ಪಲಿಲ್ಲೆ. ಏಕೇದರೆ, ಮಾಷ್ಟ್ರಕ್ಕೊಗೆ, ಮಕ್ಕೊಗೆ ಮತ್ತೆ ಆಡಳ್ತೆಯೋರಿಂಗೆ – ಎಲ್ಲೋರಿಂಗೂ ಆಸಕ್ತಿ ಇದ್ದಿದ್ದ ಕಾರಣ.

ಮತ್ತೆ ಓ.. ಅಲ್ಲಿ ಕಲ್ಲೇಗದ ಹತ್ತರೆ ಹತ್ತೈವತ್ತು ಎಕ್ರೆ ಜಾಗೆ ಸಿಕ್ಕಿತ್ತು ಕೋಲೇಜಿಂಗೆ. ಅಂಬಗಾಣ ಸರ್ಕಾರ ಇದರ ಅನುಗ್ರಹಿಸಿ, ವಿದ್ಯಾದಾನ ಮುಂದರುಸುಲೆ ಅವಕಾಶ ಕೊಟ್ಟತ್ತಲ್ಲದೋ – ಅದೇ ದೊಡ್ಡ ಉಪಕಾರ. ಹಾಂಗಾಗಿ ವಿವೇಕಾನಂದ ಕೋಲೇಜು ಕಲ್ಲೇಗಕ್ಕೆ ಬಂತು.
ಅದೇ ಸಮೆಯಲ್ಲಿ ನೆಹರು ಅಜ್ಜ° ತೀರಿಗೊಂಡ ಕಾರಣ ಆ ಊರಿಂಗೆ “ನೆಹರು ನಗರ” ಹೇದು ಹೆಸರುದೇ ಮಡಗಿದವು. ಅದೇಕೆ ಹಾಂಗಾತು ಹೇಳ್ಸು ಇನ್ನೂ ಅರಡಿಯ.
ಅದು “ವಿವೇಕ ನಗರ” ಆಗಿದ್ದರೆ ಇನ್ನೂ ಚೆಂದ ಇತ್ತು – ಹೇದು ಎಷ್ಟೋ ಜೆನ ಮಾತಾಡ್ಸರ ಒಪ್ಪಣ್ಣ ಸ್ವತಃ ಕೇಳಿದ್ದಿದ್ದು. ಆದರೆ, ಈಗ ನೆಹರು ನಗರ ಆಯಿದು. ಅದೆಂತ ಹಾಂಗೆ ಹೇದು ನಮ್ಮ ರಾಮಜ್ಜನೇ ಹೇಳೇಕಟ್ಟೆ! ಈಗ ನೆಹರೂ ನಗರ ಹೋಗಿ ಬರೀ ನಗರ ಆಯಿದು ಜೆನಂಗಳ ಬಾಯಿಲಿ. ಅದಿರಳಿ.

ರಾಮಜ್ಜನ ಕೋಲೇಜಿನ ಕಾಗತ ಸಿಕ್ಕಿತ್ತೋ..? ಬನ್ನಿ ಆತೋ..
ರಾಮಜ್ಜನ ಕೋಲೇಜಿನ ಕಾಗತ ಸಿಕ್ಕಿತ್ತೋ..? ಬನ್ನಿ ಆತೋ..

ನೆಹರು ನಗರಲ್ಲಿ ವಿವೇಕಾನಂದ ಕೋಲೇಜು ಬೆಳಗಲೆ ಸುರು ಆತು. ಅಂಬಗಾಣ ಕಾಲದ ಮಟ್ಟಿಂಗೆ ನೆಹರು ನಗರ ಹೇದರೆ ಪುತ್ತೂರಿನ ಹೆರವಲಯ. ಹಾಂಗಾಗಿ, ಪೇಟೆಯೊಳ ಇದ್ದರೂ ಅದೊಂದು ಹಳ್ಳಿಯ ನಮುನೆ ಇದ್ದತ್ತು.
ವಾತಾವರಣವೂ ಹಾಂಗೇ ಇದ್ದತ್ತು. ಓದಲೆ ಬೇಕಾದ ಮೌನ, ಕಲಿಯಲೆ ಬೇಕಾದ ಆರ್ದ್ರತೆ ಎಲ್ಲವೂ ಆ ಪರಿಸರಲ್ಲಿ ಇದ್ದತ್ತು. ಬರೇ ಕೋಲೇಜು, ಲೇಬು ಮಾಂತ್ರ ಅಲ್ಲದ್ದೆ ಅಲ್ಲಿ ಹಟ್ಟಿ, ತರಕಾರಿ, ತೋಟ, ಹೂಗಿನ ಗೆಡು – ಎಲ್ಲವನ್ನೂ ಮಾಡಿದವು.
ಎಲ್ಲವೂ ಉನ್ನತ ಉತ್ಕೃಷ್ಟತೆಲಿ ಇದ್ದಿದ್ದ ಕಾರಣ ಜೆನಂಗೊ ಬಪ್ಪದು ಹೆಚ್ಚಾಗಿಂಡೇ ಹೋತು. ಹಾಂಗಾಗಿ ಕೋಲೇಜು ಬೆಳದತ್ತು.

~

ಕೋಲೇಜಿನ ಮಕ್ಕಳ ಸಂಖ್ಯೆ ಬೆಳದ ಹಾಂಗೇ, ಕೋಲೇಜುದೇ ಬೆಳದತ್ತು. ಹೊಸ ಹೊಸ ಕಟ್ಟೋಣಂಗೊ, ವೆವಸ್ತೆಗೊ, ದೂರದೂರಿನೋರಿಂಗೆ ನಿಂಬಲೆ ಹೋಷ್ಟೆಲುಗೊ, ಪಠ್ಯೇತರ ವಿಚಾರಂಗೊ, ಸೌಕರ್ಯಂಗೊ – ಎಲ್ಲವೂ ಆರಂಭ ಆತು. ನೋಡಿಂಡಿದ್ದ ಹಾಂಗೇ – ಇದೊಂದು ಪರಿಪೂರ್ಣ ಕೋಲೇಜು ಆಗಿ ಬೆಳದತ್ತು.

ಆ ಕೋಲೇಜಿನ ಬಗ್ಗೆ ಮಾತಾಡ್ತರೆ ಆ ಕೋಲೇಜಿನ ಒಬ್ಬರು ಪ್ರಿನ್ಸಿಪಾಲರ ಬಗ್ಗೆ ಮಾತಾಡದ್ದರೆ ಅಪೂರ್ಣ ಆವುತ್ತು – ಹೇದು ಮಗುಮಾವ° ಯೇವಗಳೂ ಹೇಳುಗು.
ಬೆಂಗ್ಳೂರಿನ ಸೂರ್ಯನಾರಾಯಣಪ್ಪ ಹೇಳ್ತ ಸನಾತನಿ, ಧರ್ಮನಿಷ್ಠ°, ದೈವಭಕ್ತ°, ರಾಷ್ಟ್ರಭಕ್ತ° ಪ್ರಿನ್ಸಿಪಾಲರು ಆ ಕೋಲೇಜಿನ ಆಂತರಿಕ ಶಿಸ್ತು, ಸಮೃದ್ಧಿಗೆ ಕಾರಣೀಭೂತರು ಹೇದರೆ ತಪ್ಪಲ್ಲ ಅಡ. ಪ್ರತಿ ಸೂಕ್ಷ್ಮ ವಿಷಯಕ್ಕೂ ವಿಶೇಷ ಗಮನ ಕೊಟ್ಟು, ಹಲವಾರು ಪಾಪದ ವಿದ್ಯಾರ್ಥಿಗೊಕ್ಕೆ ಅಶನಕ್ಕೆ ದಾರಿ ಆಗಿ, ಮಹಾನ್ ವಿದ್ಯಾದಾನಿಯಾಗಿ ನಮ್ಮ ಊರಿಲಿ ಬೆಳಗಿದ ಮಹನೀಯರು ಅವು. ದೂರದ ಬೆಂಗ್ಳೂರಿಂದ ಆ ಕಾಲಲ್ಲಿ ಪುತ್ತೂರಿನ ಹೊಸಾ ಕೋಲೇಜೊಂದರ ಗುರಿಕ್ಕಾರ್ತಿಕೆ ತೆಕ್ಕೊಂಬ ನಿರ್ಧಾರ ಅವರಿಂದಾಗಿ ಸರಸ್ವತಿಗೆ ಸಂದ ಸೇವೆ ನಿಜಕ್ಕೂ ಅನುಪಮ.
ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯಂತಾ ಕ್ಲಿಷ್ಟಕರ ಸನ್ನಿವೇಶಲ್ಲಿ, ರಾಮಜ್ಜನನ್ನೂ ಸೇರಿ ಹಲವಾರು ಆಡಳ್ತೆಮಂಡಲಿಯೋರು ಭೂಗತ ವಾಸ / ಜೈಲುವಾಸಲ್ಲಿ ಇಪ್ಪಗ ಸಮಗಟ್ಟು ಸಂಪರ್ಕ ಸಾಧನವೂ ಇಲ್ಲದ್ದ ಸಮೆಯಲ್ಲಿ ಕೋಲೇಜಿನ ಬೆನ್ನೆಲುಬಾಗಿ ನಿಂದು ಮುಂದರುಸಿದ ಮಹನೀಯರು ಅವು. ಅವರ ಸೇವೆಯ ರಾಮಜ್ಜ° ಈಗಳೂ ಗುರುತುಸುತ್ತವು.

ಅವು ಮಾಂತ್ರ ಅಲ್ಲ, ಇಂದಿನ ವರೇಂಗೆ ಬಂದ ಎಲ್ಲಾ ಪ್ರಿನ್ಸಿಪಾಲರೂ ನಮ್ಮ ಭಾರತೀಯತೆಯ ಶ್ರೇಷ್ಠತೆಯ ಎತ್ತಿ ಹಿಡಿತ್ತ ಮಹತ್ಕಾರ್ಯವನ್ನೇ ಮಾಡಿದ್ದವು. ಸ್ವಾತಂತ್ರ್ಯಾನಂತರದ ವಿಚಿತ್ರ ಭಾರತಲ್ಲಿ ಸಂಸ್ಕೃತಿಯ ಗಂಧಗಾಳಿ ಅರಡಿಯೇಕಾದರೆ ಹೀಂಗಿರ್ತ ಕೋಲೇಜಿಲೇ ಕಲಿಯೇಕಾದ ಅಗತ್ಯತೆಯ ಎಲ್ಲೊರುದೇ ಒಪ್ಪುತ್ತವು. ಉದಿಯಾದರೆ ವಂದೇ ಮಾತರಂ ಲಿ ಪ್ರಾರ್ಥನೆ ಆರಂಭ ಆಗಿ, ಚೌತಿ ಕಾಲಲ್ಲಿ ವಿಜೃಂಭಣೆಲಿ ಗೆಣವತಿ ದೇವರ ಹಬ್ಬ ಆಚರುಸಿ, ಮಕ್ಕೊಗೆ ವಿಶೇಷ ಅನುಭೂತಿ ಅನುಗ್ರಹಿಸುವ ಕೋಲೇಜು ಅದು. ಉತ್ತಮ ನಿರ್ವಹಣೆಯ ಮಾಷ್ಟ್ರಕ್ಕೊ ಯೋಗ್ಯ ರೀತಿಲಿ ಪಾಠ ಮಾಡಿ ಮಕ್ಕಳ ಅಭಿವೃದ್ಧಿ ಮಾಡುವ ಕೋಲೇಜು ಅದು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಲ್ಲಿ ಹಳೆವಿದ್ಯಾರ್ಥಿಗಳ ಹೊಂದಿ, ಎಷ್ಟೋ ಜೆನರ ಬಾಳಿಂಗೆ ದಾರಿದೀಪ ಆದ ಮಹತ್ ವಿದ್ಯಾಸಂಸ್ಥೆ ಅದು.

~

ಅದಕ್ಕೆ ಐವತ್ತು ಒರಿಶ ಆತು ಹೇದರೆ ಒಪ್ಪಣ್ಣಂಗೂ ಸೇರಿ ಬೈಲಿನ ಎಲ್ಲೋರಿಂಗೂ ಹೆಮ್ಮೆ.
ಮುಂದೆಯೂ ಇದೇ ರೀತಿ ವಿದ್ಯಾದಾನ ಮಾಡಿಗೊಂಡು, ಇನ್ನೂ ಸಾವಿರ ಸಾವಿರ ಯುವಕರ ಭವಿಷ್ಯತ್ತಿನ ರೂಪಿಸಲಿ.
ಎಲ್ಲೋರಿಂಗೂ ವಿವೇಕಾನಂದನ ತತ್ವಾದರ್ಶವ ಕೊಡ್ಳೆ ಅನುಗ್ರಹಿಸಲಿ.

ರಾಮಜ್ಜನ ಹಾಂಗಿಪ್ಪ ದೂರದರ್ಶಿತ್ವದೋರ ಕೆಲವು ಕೆಲಸಂಗೊ ನಮ್ಮಾಂಗಿರ್ತೋರು ಅನಂತ ಕಾಲದ ವರೆಂಗೂ ಅನುಭವಿಸುವ ಹಾಂಗಾತು.
ಐವತ್ತೊರಿಶವೂ ಸಮಾಜಕ್ಕೆ ಚಿನ್ನ ಕೊಟ್ಟ ಕೋಲೇಜು ಮುಂದೆ ವಜ್ರ ಕೊಡ್ಳೆ ಸುರುಮಾಡಲಿ.

 ಒಂದೊಪ್ಪ: ವಿದ್ಯಾರ್ಥಿಗೊಕ್ಕೆ ವಿದ್ಯೆ ಸಿಕ್ಕಲಿ, ವಿದ್ಯಾದಾನಿಗೊಕ್ಕೆ ಪುಣ್ಯ ಸಿಕ್ಕಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶ್ರೀಅಕ್ಕ°

  ಹರೇರಾಮ ಒಪ್ಪಣ್ಣೋ,

  ಜೆಂಬರದ ತೆರಕ್ಕಿಲಿ ಬೈಲ ಹೊಡೆಂಗೆ ಇಳಿವಲೆ ಕಷ್ಟ ಆಗಿ ಹೋತು! :-( ಎಲ್ಲಾ ನೆಂಟ್ರುಗಳಲ್ಲಿ ಒಂದೊಂದು ಜೆಂಬರ ತೆಗವಗ ನಾವು ಒಬ್ಬ ಎಲ್ಲದಕ್ಕೂ ಹೋಗಿ ಸುಧಾರ್ಸೆಕ್ಕನ್ನೆ!!
  ಬೈಲಿನ ಏಳನೇ ಒರಿಶದ ಸಂಭ್ರಮಕ್ಕೆ ಬೈಲಿಂಗೆ ಹೊಕ್ಕು ಹೋಯೆಕ್ಕು ಹೇದು ಗ್ರೇಶಿದ್ದು. ಅಂಬಗ ಬಾಕಿ ಆತಿದಾ.. ಹಾಂಗೆ ಈಗ ನಮ್ಮ ಪ್ರೀತಿಯ ರಾಮಜ್ಜನ ಕೋಲೇಜಿನ ಐವತ್ತನೇ ಒರಿಶದ ಕೊಶಿಲಿ ಒಂದು ಕೊಶಿ ಹಂಚುವ ಹೇದು ಆತು.

  ಬೈಲಿಂಗೆ ಒರಿಶ ಒರಿಶ ತುಂಬಿದ ಹಾಂಗೆ ಕೊಶಿ ಇಷ್ಟು ಹೆಚ್ಚಪ್ಪಗ ಅಷ್ಟು ದೊಡ್ಡ ಸಂಸ್ಥೆಯ ಕಟ್ಟಿ ಐವತ್ತಿರಿಶ ಅಪ್ಪಗ ಆ ಹೆರಿಜೀವಂಗೊಕ್ಕೆ ಎಷ್ಟು ಕೊಶಿ ಆಗೆಡ?! ಎನಗೂ ಕೊಶಿಯೇ! ನಮ್ಮ ಹತ್ತರೆಯೇ ಆ ಕೋಲೇಜು ಇಪ್ಪದಕ್ಕೂ, ಆ ಕೋಲೇಜಿನ ಆಡಳಿತ ಮಂಡಳಿಯ ಸದಸ್ಯೆ ಆಗಿಪ್ಪದಕ್ಕೂ, ಹೆರಿಜೆನಂಗಳ ಅನುಭವದ ಒಟ್ಟಿಂಗೆ ಸಂಸ್ಥೆಯ ಮುನ್ನಡೆಲಿ ಸಾಕ್ಷಿ ಅಪ್ಪದಕ್ಕೆ ಇಪ್ಪ ಕೊಶಿ ಅದು ಅಪೂರ್ವ.
  ಒಂದು ಸಂಸ್ಥೆ ಹುಟ್ಟೆಕ್ಕಾದರೇ ಹಲವು ಸಮಸ್ಯೆಗ ಬತ್ತು. ಆ ಕಾಲಕ್ಕೆ ಆ ಎಲ್ಲ ಸಮಸ್ಯೆಗಳ ದೂರ ಮಾಡಿಗೊಂಡು, ದೂರಂದ ಬಪ್ಪ ಮಕ್ಕೊಗೂ ವೆವಸ್ತೆ ಮಾಡಿಕೊಟ್ಟು, ಬೆಳವಲೆ ಬೇಕಾದ ಎಲ್ಲಾ ರೀತಿಯ ಮಾರ್ಗಂಗಳ ಮಾಡಿ ಒಂದು ಭದ್ರ ಅಡಿಪಾಯದ ಮೇಗೆ ಈ ಸಂಸ್ಥೆಯ ಬೆಳೆಶಿದ ಎಲ್ಲ ಹೆರಿಯರಿಂಗೆ ಮನಸಾ ವಂದನೆಗೊ. ಆ ಹೆರಿಯರೆಲ್ಲರ ಮಾರ್ಗದರ್ಶನ ಇನ್ನೂ ಇದ್ದುಗೊಂಡು ಈ ಸಂಸ್ಥೆ ಇನ್ನೂ ನೂರ್ಕಾಲ ಬಾಳಲಿ.. ನೀನು ಹೇಳಿದ ಹಾಂಗೆ ಇನ್ನು ಕೋಲೇಜು ವಜ್ರಂಗಳ ಸಮಾಜಕ್ಕೆ ಕೊಡಲಿ..
  ವಜ್ರಕಾಯ ಹೊಂದಿ, ವಜ್ರಪ್ರಭೆಲಿ ಬೆಳಗಲಿ..

  [ವಿದ್ಯಾರ್ಥಿಗೊಕ್ಕೆ ವಿದ್ಯೆ ಸಿಕ್ಕಲಿ, ವಿದ್ಯಾದಾನಿಗೊಕ್ಕೆ ಪುಣ್ಯ ಸಿಕ್ಕಲಿ.]
  ಒಂದೊಪ್ಪ ಲಾಯ್ಕಾಯಿದು. ವಿದ್ಯಾರ್ಥಿಗೊ ಸತ್ಪಥಲ್ಲಿ, ನಮ್ಮದೇ ಸಂಸ್ಕಾರಲ್ಲಿ ಬೆಳೆಯಲಿ.. ವಿದ್ಯಾದಾನಿಗೊಕ್ಕೆ ಆ ಪುಣ್ಯ ಎಲ್ಲ ಸಿಕ್ಕಿ ಅವರ ಜೀವನ ಪಾವನ ಆಗಲಿ..

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಅದೆಷ್ಟೋ ಸಾವಿರಾರು ಜೆನಂಗೊ ಅವರ ಆ ದಿನಂಗಳ ನೆಂಪುಮಾಡ್ಯೊಂಡಿಪ್ಪ ಸಂದರ್ಭಲ್ಲಿ ಬೈಲಿಲಿಯೂ ಈ ಶುದ್ದಿ ರಸವತ್ತಾಗಿಯೂ ಚಿಂತನೀಯವಾಗಿಯೂ ಮೂಡಿಬಂದರೊಟ್ಟಿಂಗೆ ಒಂದೊಪ್ಪಕ್ಕೆ ಅತಿಮೆಚ್ಚುಗೆ ಹಾಂಗೂ ನಾವೆಲ್ಲರೂ ಮನಸ್ಸಾರೆ ಅದನ್ನೇ ಹಾರೈಸುವೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಶಾಂತತ್ತೆಒಪ್ಪಕ್ಕಚುಬ್ಬಣ್ಣಸುಭಗಜಯಗೌರಿ ಅಕ್ಕ°ಹಳೆಮನೆ ಅಣ್ಣಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ಶ್ರೀಅಕ್ಕ°ದೊಡ್ಡಮಾವ°ವೇಣಿಯಕ್ಕ°ಗಣೇಶ ಮಾವ°ದೊಡ್ಡಭಾವಪ್ರಕಾಶಪ್ಪಚ್ಚಿಡಾಗುಟ್ರಕ್ಕ°ಸಂಪಾದಕ°ನೀರ್ಕಜೆ ಮಹೇಶಪುಣಚ ಡಾಕ್ಟ್ರುಕೊಳಚ್ಚಿಪ್ಪು ಬಾವಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ