ಸೆಖೆಯ ಕೊಡೆಯಾಲಲ್ಲಿ ಅರಳಿತ್ತು ಬೈಲ ವಿಷು ಕಾರ್ಯಕ್ರಮದ ತಂಪು..

April 21, 2017 ರ 12:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಮಾತಾಡಿದ ಹಾಂಗೆ, ಮೊನ್ನೆ ಕೊಡೆಯಾಲದ ಶ್ರೀ ಭಾರತೀ ಕೋಲೇಜಿಲಿ ಬೈಲಿನ ಕಾರ್ಯಕ್ರಮ ಚೆಂದಕೆ ಕಳಾತು.
ಉದಿಯಾಂದ ಇರುಳು ಒರೆಗೆ ಶಂಕರಶ್ರೀ ಸಭಾಂಗಣಲ್ಲಿ ಎಂತೆಲ್ಲ ಆತು – ಹೇದು ಒಂದರಿ ನೋಡುವನೋ?
~
ಪ್ರತಿ ಒರಿಷದಂತೆ ಈ ವರ್ಶವೂ ವಿಷು ಸ್ಪರ್ಧೆಗಳ ನೆಡೆಶಿತ್ತಿದ್ದು, ಗೊಂತಿದ್ದನ್ನೇ.
ಕಥೆ, ಕವನ, ಪ್ರಬಂಧ, ನೆಗೆ ಬರಹ – ನಾಲ್ಕು ವಿಭಾಗದ ಸ್ಪರ್ಧೆಗಳ ಮೊದಲೇ ನೆಡೆಶಿ, ಸ್ಪರ್ಧಾ ಫಲಿತಾಂಶವ ವಿಷುವಿನ ದಿನವೇ ಬೈಲಿಲಿ ಪ್ರಕಟ ಮಾಡಿತ್ತಿದ್ದು.
ಐದನೇದು ಆಶುಭಾಷಣವ ಕಾರ್ಯಕ್ರಮದ ದಿನವೇ ನೆಡೆಶುವ ಬಗ್ಗೆ ಮೊದಲೇ ಬೈಲಿಂಗೆ ತಿಳಿಶಿತ್ತಿದ್ದು.
~
ತಯಾರಿ:
ಶಂಕರಶ್ರೀ ಸಭಾಂಗಣಲ್ಲಿ ಉದಿಯಪ್ಪಗಳೇ ಏಳುಗಂಟೆಂದಲೇ ಬೈಲಿನ ಚಟುವಟಿಕೆಗೊ ಸುರು ಆಯಿದು. ಕೊಡೆಯಾಲಲ್ಲೇ ಇಪ್ಪ ಬೈಲ ಹಿರಿಯರಾದ ಬೊಳುಂಬುಮಾವನೂ, ಶರ್ಮಪ್ಪಚ್ಚಿಯೂ ಒಂದರಿ ಹೋಗಿ ಹಾಲು, ತರಕಾರಿ, ಊಟೋಪಚಾರದ ವಿಚಾರ ಅಡಿಗೆಯ ವ್ಯವಸ್ಥೆಗೆ ಮೇಲುಸ್ತುವಾರಿ ನೋಡಿದವು, ಸೂರ್ಯ ಮೇಗೆ ಬತ್ತ ಹಾಂಗೇ ಬೈಲಿನ ನೆಂಟ್ರುಗೊ ಸೇರ್ಲೆ ಸುರು ಮಾಡಿದವು. ಆಯೆಕ್ಕಾದ ಕೆಲಸ ನೋಡಿಗೊಂಡು ಸ್ವಯಂಸೇವೆ ಮಾಡಿದವು. ಊಟೋಪಚಾರ, ಬೇನರು ಕಟ್ಟುಲೆ, ನೀರು ತಪ್ಪಲೆ, ಮಜ್ಜಿಗೆ ನೀರು ಕುಡಿಶುಲೆ – ಇತ್ಯಾದಿ.
ಕೊಡೆಯಾಲದ ಬೈಲಬಂಧುಗಳೂ ಬಹುಸಂಖ್ಯೆಲಿ ಸೇರ್ಲೆ ಸುರು ಮಾಡಿದವು.
ಅರ್ತಿಕಜೆ ಅಜ್ಜ ಮರುವಳ ಮಾವ, ಹೊಸಮನೆ ಅಜ್ಜ, ಮಳಿಭಾವ, ವಿಜಯತ್ತೆ, ಉಡುಪಮೂಲೆ ಅಕ್ಕ, ಪಳ್ಳಮಾವ, ನಿಡುವಜೆ ಅಣ್ಣ, ಅರ್ತ್ಯಡ್ಕ ಮಾಣಿ – ಎಲ್ಲೋರುದೇ ಬಂದು ಸೇರಿದವು. ಪಡಾರು ಮಾವ ಸಕುಟುಂಬ ಸಮೇತರಾಗಿ ಬಂದವು.

ಆಶುಭಾಷಣ:
ಸರೀ ಸಮಯಕ್ಕೆ ಬೊಳುಂಬು ಮಾವ ಸಭಾ ನಿರ್ವಹಣೆ ಆರಂಭಿಸಿದವು. ಈಗ ಆಶುಭಾಷಣದ ವಿಷಯ ತೆಕ್ಕೊಳಿ, ಇಪ್ಪತ್ತು ನಿಮಿಷ ಕಳುದು ಭಾಷಣ ಮಾಡಿ – ಹೇದು ರೂಲ್ಸು ಹೇದವು.
ಒಬ್ಬೊಬ್ಬರೇ ಬಂದು ಆಶುಭಾಷಣ ವಿಷ್ಯ ತೆಕ್ಕೊಂಡವು, ಅವರಷ್ಟಕೇ ಕೂದು ಭಾಷಣದ ರೂಪುರೇಷೆ ಆಲೋಚನೆ ಮಾಡಿದವು.
ಮತ್ತೆ ಬೊಳುಂಬು ಮಾವ ಒಬ್ಬೊಬ್ಬರನ್ನೇ ಭಾಷಣಕ್ಕೆ ದಿನಿಗೆಳಿದವು. ತೀರ್ಪುಗಾರರಾಗಿ ಅರ್ತಿಕಜೆ ಅಜ್ಜ, ಉಳ್ಳೋಡಿ ಮಾವ, ತೆಕ್ಕುಂಜ ಮಾವ – ಪೇಪರು ಪೆನ್ನಿ ಹಿಡ್ಕೊಂಡು ನಿಂದವು. ಸಮಯ ನಿರ್ವಾಹಕರಾಗಿ ತಂಟ್ಯ ಭಾವ ಟೈಂಪೀಸು ಹಿಡ್ಕೊಂಡು ನಿಂದವು.
ಒಟ್ಟು ಸುಮಾರು ಒಂದೂಕಾಲು ಘಂಟೆ ಆಶುಭಾಷಣ ಸ್ಪರ್ಧೆ ನೆಡದತ್ತು. ಬೇರೆಬೇರೆ ಗಾದೆ ಮಾತುಗೊ, ನುಡಿಗಟ್ಟುಗೊ ಎಲ್ಲ ವಿಷಯ ಸಿಕ್ಕಿದ ಕಾರಣ ಎಲ್ಲೋರುದೇ ಚೆಂದಕೆ ಮಾತಾಡಿದವು.
ಮೂರು ಮೂರು ನಿಮಿಷದ ಚಿಕ್ಕ-ಚೊಕ್ಕ ಭಾಷಣಂಗೊ. ಒಂದೊಂದು ಊರಿನ ಹವ್ಯಕ ಭಾಷೆ. ಸಾಗರ, ಶಿರಸಿ, ವಿಟ್ಳ, ಕುಂಬ್ಳೆ, ಪಂಜ – ಬೇರೆ ಬೇರೆ ಊರಿನ ಹವ್ಯಕ ಸೊಗಡು ಅಲ್ಲಿ ಕೇಳಿತ್ತು.
ಬೈಲಿನ ಎಲ್ಲೋರಿಂಗೂ ಒಳ್ಳೆಯ ಅನುಭವ.
ಮರುವಳ ಮಾವಂಗೂ, ನಾಂದೋಡು ಅಕ್ಕಂಗೂ ಪ್ರೈಸು ಕೊಡ್ಳಕ್ಕು ಹೇದು ತೀರ್ಪುಗಾರರು ತಿಳುಶಿದವು.
~
ಸಭೆ:
ಇದಾಗಿ ಸಭಾ ಕಾರ್ಯಕ್ರಮ ಸುರು ಆತು. ಮೇಧಾ ಒಪ್ಪಕ್ಕ ಚೆಂದದ ಪ್ರಾರ್ಥನೆ ಮಾಡಿತ್ತು. ಶರ್ಮಪ್ಪಚ್ಚಿ ಸ್ವಾಗತ ಮಾಡಿದವು. ಮಾಷ್ಟ್ರುಮಾವ ಪ್ರಾಸ್ತಾವಿಕ ಮಾತಾಡಿದವು. ಕೊಡೆಯಾಲದ ಹವ್ಯಕ ಅಧ್ಯಕ್ಷರಾದ ಮಾಂಬಾಡಿ ವೇಣುಮಾವ ಅಧ್ಯಕ್ಷತೆ ವಹಿಸಿ ಸಭೆಗೆ ಕಳೆ ಮೂಡುಸಿದವು.ಸಾಹಿತ್ಯಲ್ಲಿ ಕೆಲಸ ಮಾಡಿದ ಪಡಾರು ಮಹಾಬಲೇಶ್ವರ ಮಾವ, ಬೆಂಗ್ಳೂರಿನ ಎಮ್.ಫೌಂಡೇಶನ್ ನ ಶ್ರೀ ರವಿಶಂಕರ್ ಉಪಸ್ಥಿತಿ ಇತ್ತಿದ್ದವು.

ವಿಷು ಸ್ಪರ್ಧೆ ಬಹುಮಾನ ವಿತರಣೆ:
ಒಪ್ಪಕ್ಕ ಅದಾಗಲೇ ಎಲ್ಲಾ ಪ್ರಶಸ್ತಿ ಪತ್ರವನ್ನೂ ತಯಾರು ಮಾಡಿ ತಂದು ಮಡಗಿತ್ತಿದ್ದು. ಐದು ವಿಭಾಗದ ಪ್ರಥಮ-ದ್ವಿತೀಯ, ಒಟ್ಟು ಹತ್ತು ಬಹುಮಾನ. ಸಭಾಧ್ಯಕ್ಷರೂ, ಅತಿಥಿಗಳೂ ಸೇರಿ ಎಲ್ಲ ವಿಜಯಿಗೊಕ್ಕೆ ಬಹುಮಾನ ವಿತರಣೆ ಮಾಡಿದವು. ಸುಭಗಣ್ಣನೂ, ದೊಡ್ಡಭಾವನೂ ಸೇರಿ ನಿರ್ವಹಣೆ ಮಾಡಿದವು.
~
ಪಡಾರು ಮಾವಂಗೆ ಬಾಳಿಲ ಪ್ರಶಸ್ತಿ:
ಸಾಹಿತ್ಯ ಕ್ಷೇತ್ರಲ್ಲಿ ತುಂಬ ಕೆಲಸ ಮಾಡಿದೋರ ಬೈಲು ಗುರ್ತಮಾಡುವ ಒಂದು ಕಾರ್ಯಕ್ರಮ ಇದ್ದು. ಅದು, ಇನ್ನೊಬ್ಬ ಸಾಹಿತಿಯ ಹೆಸರಿಲಿ. ಅಪ್ಪು, ಬಾಳಿಲ ಪರಮೇಶ್ವರ ಭಟ್ಟರು – ಧರ್ಮವಿಜಯ ಹೇಳ್ತ ಒಂದು ಮಹತ್ಕೃತಿಯ ಬರದು ಅಮರರಾಯಿದವು ಅಲ್ದೋ. ಛಂದೋಬದ್ಧ ಕೃತಿಯ ನವಗೆ ಕೊಟ್ಟಿದವು. ಅವರ ಆ ಅಮೋಘ ಕಾರ್ಯದ ನೆಂಪಿಂಗೆ ಅವರ ಹೆಸರಿಲೇ ನಮ್ಮ ಬೈಲು ಒಂದು ಪ್ರಶಸ್ತಿ ಆರಂಭಿಸಿದ್ದು. ಅದುವೇ “ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ”.
ಈ ಒರಿಶ ಆ ಪ್ರಶಸ್ತಿಯ ನಮ್ಮ ಹಿರಿಯರಾದ ಪಡಾರು ಮಹಾಬಲೇಶ್ವರ ಮಾವಂಗೆ ಕೊಡುವ ಬಗ್ಗೆ ಮಾತಾಡಿದ್ದತ್ತು. ಹಾಂಗೆ, ಸಕುಟುಂಬಸ್ಥರಾಗಿ ಬಂದ ಪಡಾರು ದಂಪತಿಗಳ ವೇದಿಕೆಲಿ ಕೂರ್ಸಿ, ಅವಕ್ಕೆ ಶಾಲು, ಮಾನ ಪತ್ರ, ಫಲತಾಂಬೂಲ ಮಡಗಿ, ವೇದಿಕೆಯ ಹಿರಿಯರೆಲ್ಲೋರುದೇ ನಿಂದು ಕೊಶಿಪಟ್ಟವು. ತೆಕ್ಕುಂಜ ಮಾವ ಮಾನಪತ್ರ ಓದಿ ಹೇಳಿದವು. ಪಡಾರು ಮಾವ ಬರದ ಒಂದು ಕೃತಿಯ ಮುಳಿಯ ಭಾವ ಇದೇ ಸಂದರ್ಭಲ್ಲಿ ಸಭೆಗೆ ಹಾಡಿದವು. ಅನಿವಾರ್ಯ ಕಾರಣಂದಾಗಿ ಅನುಪಸ್ಥಿತರಿದ್ದ ಬಾಳಿಲ ಕುಟುಂಬದೋರ ಬೈಲು ನೆಂಪು ಮಾಡಿಗೊಂಡಿದು.
~
ವೇದ ವಿದ್ಯಾನಿಧಿ:
ನಮ್ಮದು ವೈದಿಕ ಧರ್ಮ. ವೇದಲ್ಲೇ ಹುಟ್ಟಿದ್ದು ನಮ್ಮ ಸನಾತನ ಧರ್ಮ. ಹಾಂಗಾಗಿ ವೇದಕ್ಕೆ ಸಹಕಾರ ಕೊಡೆಕ್ಕು ಹೇಳ್ತದು ಬೈಲಿನ ಅಪೇಕ್ಷೆ. ಅದಕ್ಕಾಗಿ ಕೆಲವು ವೇದಪಾಠಶಾಲೆಗೊಕ್ಕೆ ಸಹಾಯ ಹಸ್ತ ಕೊಡ್ತ ಕಾರ್ಯವೇ “ವೇದವಿದ್ಯಾ ನಿಧಿ”. ಇದರ ಸಾಂಕೇತಿಕವಾಗಿ ಹಸ್ತಾಂತರ ಮಾಡಿತ್ತು. ನಮ್ಮ ಬೈಲಿನ ವೇದವಿದ್ಯಾ ಸಂಚಾಲಕರಾದ ಗಣೇಶಮಾವ ಇದರ ಸ್ವೀಕಾರಮಾಡಿದವು. ಸದ್ಯಲ್ಲೇ ಅವು ಸೂಕ್ತ ವೇದಪಾಠಶಾಲೆಗೆ ತಲುಪುಸುವ ವ್ಯವಸ್ಥೆ ಮಾಡುಗು.
~
ಬೈಲ ಗುರಿಕ್ಕಾರ್ರು ವಂದನಾರ್ಪಣೆ ಮಾಡಿದವು. ಸಭೆ ಚೆಂದಲ್ಲಿ ಕಳಾತು. ಎಲ್ಲೋರುದೇ ಹವ್ಯಕಲ್ಲೇ ಮಾತಾಡ್ತಾ ಇಪ್ಪದು ಸಭೆಗೆ ಇನ್ನಷ್ಟು ಕಳೆ ಬಂತು. ಗವುಜಿ ನೋಡ್ಳೆ ನೂರಾರು ಜೆನ ಇತ್ತಿದ್ದವು.
~
ಇದಾದ ಮತ್ತೆ ಸಣ್ಣಕೆ ಒಂದು ಉಪಾಹಾರ ಏರ್ಪಾಡು. ಉಪ್ಪಿಟ್ಟು, ಕ್ಷೀರ, ಮಿಕ್ಷರು, ಜೀರಿಗೆ ಕಶಾಯ, ಮಜ್ಜಿಗೆ ನೀರು – ಇತ್ಯಾದಿಗಳ ವಿಲೇವಾರಿಯ ಉಸ್ತುವಾರಿ ಮಳಿಭಾವ, ಒಪ್ಪಕ್ಕ, ತಂಟ್ಯಭಾವ, ಹಳೆಮನೆ ಅಕ್ಕ, ಬೊಳುಂಬು ಅತ್ತೆ – ಇತ್ಯಾದಿ ನೆಂಟ್ರು ಸೇರಿ ನಿರ್ವಹಿಸಿದವು. ಎಲ್ಲೋರುದೇ ಚೆಂದಲ್ಲಿ ಸ್ವೀಕರುಸಿ ಪುನಃ ಸಭೆಲಿ ಬಂದು ಕೂದವು. ಎಂತಗೆ? ಹವ್ಯಕ ತಾಳಮದ್ದಳೆಗೆ! ಅಪ್ಪು.
~
ರಾಮ ಪಟ್ಟಾಭಿಷೇಕ – ಹವ್ಯಕ ತಾಳಮದ್ದಳೆ:
ರಾಮಾಯಣದ ಕತೆ ಆರಿಂಗೆ ಗೊಂತಿಲ್ಲೆ! ಮಂಥರೆಯ ಮಾತು ಕೇಳಿ ಕೈಕೇಯಿ ಕೈಕ್ಕೆ ಆದ್ಸು, ದಶರಥ ಯೇವದೋ ಪ್ರಾಕಿಲಿ ಕೊಟ್ಟ ಒಂದು ವರವ ಕೈಕೆ ಸಮಯ ನೋಡಿ ಕೇಳಿದ್ದು. ರಾಮ ಕಾಡಿಂಗೆ ಹೋಪದು – ಇತ್ಯಾದಿ ಸಂದರ್ಭಂಗಳ ಸವಿಸ್ತಾರವಾಗಿ ತಿಳುಶುವ ಒಂದು ಪ್ರಸಂಗ ರಾಮ ಪಟ್ಟಾಭಿಷೇಕ. ರಮೇಶಣ್ಣನ ಹಿಮ್ಮೇಳ ತಂಡಲ್ಲಿ, ಮಾಂಬಾಡಿ ಮಾವ ಮುಮ್ಮೇಳ ತಂಡಲ್ಲಿ ಈ ಪ್ರಸಂಗ ಅತಿ ಚೆಂದಲ್ಲಿ ಮೂಡಿ ಬಂತು. ಎಲ್ಲಾ ಪಾತ್ರಂಗಳೂ ಅವರವರ ಸ್ವಗತ, ಅರ್ಥ ಎಲ್ಲವನ್ನೂ ತುಂಬಾ ಚೆಂದಲ್ಲಿ ಹೇಳಿ ನಿರ್ವಹಿಸಿದವು – ಶುದ್ಧ ಹವ್ಯಕ ಭಾಷೆಲಿ. ಅಪುರೂಪದ ಶಬ್ದಂಗಳ ಕೇಳುವಗ ಒಪ್ಪಣ್ಣಂಗೆ ತುಂಬಾ ಕೊಶಿ ಆಗಿಂಡಿದ್ದತ್ತು.
~

ಈ ಸರ್ತಿಯಾಣ ವಿಷು ಸ್ಪರ್ಧೆಯ ಆಯೋಜನೆಲಿ ವಿಶೇಷ ಜೆಬಾದಾರಿಕೆ ತೆಕ್ಕೊಂಡದು ನಮ್ಮ ಬೊಳುಂಬು ಮಾವ. ಪ್ರತಿಯೊಂದು ಸೂಕ್ಷ್ಮ ವಿಚಾರಂಗಳಲ್ಲು ಗಮನ ಕೊಟ್ಟು ಚೆಂದಕ್ಕೆ ನಿರ್ವಹಿಸಿದ್ದವು. ಹಾಂಗೇ, ಮುದ್ರಣ ವಿಚಾರಲ್ಲಿ ಗಮನವಹಿಸಿ ಶ್ರದ್ಧೇಲಿ ಮಾಡಿದ್ದು ನಮ್ಮ ಸುಭಗಣ್ಣ. ಇಬ್ರಿಂಗೂ ಒಪ್ಪಣ್ಣನ ವಿಶೇಷ ಧನ್ಯವಾದಂಗೊ. ಪ್ರತಿ ಆಯೋಜನೆಲಿಯೂ ನಮ್ಮ ಬೈಲಿನ ಅನುಭವ ಹೆಚ್ಚಾವುತ್ತಾ ಹೋವುತ್ತು.
ಒಟ್ಟಿಲಿ ಅನುಭವೀ ತಂಡ, ಪ್ರಬುದ್ಧ ಕೇಳುಗರು ಸೇರಿದ ತುಂಬ ಚೆಂದದ ಕಾರ್ಯಕ್ರಮ. ಲಾಯ್ಕಲ್ಲಿ ಮೂಡಿ ಬಂತು. ಹಲವೂ ಜೆನ ಬಯಿಂದವು, ಇನ್ನು ಸುಮಾರು ಜೆನ ದೂರಂದಲೇ ಸೇರಿಗೊಂಡವು. ಎಲ್ಲೋರುದೇ ಬೈಲಿನೋರೇ. ಈ ಕಾರ್ಯಕ್ರಮಕ್ಕೆ ಎಡಿಯದ್ದ ಲೆಕ್ಕಲ್ಲಿ ಇನ್ನಾಣ ಕಾರ್ಯಕ್ರಮಕ್ಕೆ ಬರೆಕ್ಕು, ಕಾರ್ಯಕ್ರಮಂಗಳ ಚೆಂದಕಾಣುಸಿ ಕೊಡೆಕ್ಕು – ಹೇಳ್ತದು ಬೈಲ ಒಪ್ಪಣ್ಣನ ಕಳಕಳಿಯ ಕೇಳಿಕೆ.
~
ಒಂದೊಪ್ಪ: ವಿಷು, ವಿಶೇಷ ಕಾರ್ಯಕ್ರಮ ಕಳಾತು; ಸಾಹಿತ್ಯದ ಚಿಗುರು ಇನ್ನೂ ಬೆಳೆಯಲಿ.

~
ಸೂ:
ಹಳೆಮನೆ ಅಣ್ಣ & ಯೇನಂಕೂಡ್ಳು ಅಣ್ಣ ಈ ಸಂದರ್ಭಂಗಳ ಕೆಮರಲ್ಲಿ ಸಂಗ್ರಹಿಸಿ ಮಡಿಕ್ಕೊಂಡಿದವು. ಅವು ತೆಗದ ಕೆಲವು ಪಟಂಗಳ ಇಲ್ಲಿ ನೇಲುಸುತ್ತೆ:
ಹಳೆಮನೆ ಅಣ್ಣಂಗೂ, ಯೇನಂಕೂಡ್ಳು ಅಣ್ಣಂಗೂ ಧನ್ಯವಾದಂಗೊ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ವಿಜಯತ್ತೆ

  ಬೈಲ ಕಾರ್ಯಕ್ರಮ ಚೆಂದಕೆ ಕಳುದ್ದು ಸಂತೋಷಾತು.ಸಾಹಿತ್ಯ ಚಿಗುರು ಇನ್ನೂ ಇನ್ನೂ ಬೆಳದು ಹೆಮ್ಮರವಾಗಿ ಎಲ್ಲಾಕಡೆ ಪಸರಿಸಲಿ. ಇದು ಬಹುಶಃ ಏಳನೇ ವರ್ಷ. ಅದು ಎಪ್ಪತ್ತು ದಾಂಟಿ ನೂರೇಳು ಆಗಲಿ. ಹರೇರಾಮ.

  [Reply]

  VN:F [1.9.22_1171]
  Rating: 0 (from 0 votes)
 2. ಅನು ಉಡುಪುಮೂಲೆ

  ಕಾರ್ಯಕ್ರಮ ಚೆಂದಕೆ ಕಳುದ್ದು. ಕಾರ್ಯಕ್ರಮಲ್ಲಿ ಭಾಗವಹಿಸುಲೆ ಎಡಿಯ ಹೇಳಿ ಜಾನ್ಸಿತ್ತಿದ್ದೆ. ಎನ್ನ ಸೋದರತ್ತೆ ಮಗ ಅರ್ತ್ಯಡ್ಕ ಕಿರಣ ಕರಕ್ಕೊಂಡು ಬಂದ ಕಾರಣ ಬಪ್ಪಲೆಡಿಗಾತು ಕೊಡೆಯಾಲದ ಸೆಖೆಲಿಯೂ ಮನಸ್ಸಿಂಗೆ ತಂಪಾತು. ಮಾತಾಡ್ಳೆ ಅರಡಿಯದ್ದರೂ ಆಶುಭಾಷಣ ಸ್ಪರ್ಧೆಲಿ ಎಂತೋ ಪರಂಚಿಕ್ಕಿ ಬಂದೆ. ಒಳ್ಳೆ ಅನುಭವ. ಮರವಲೆಡಿಯ.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಗೋಪಾಲ

  ಕಾರ್ಯಕ್ರಮದ ಚಿತ್ರ ಸಮೇತ ವರದಿ ತುಂಬಾ ಲಾಯಕಾಯಿದು. ಧನ್ಯವಾದಂಗೊ.
  ಇದು ಒಪ್ಪಣ್ಣದ ಏಳನೇ ವರ್ಷ ಅಲ್ಲ. ಒಂಭತ್ತನೇ ವರ್ಷ. ನಮ್ಮ ಬೈಲಿನ ಬೋರ್ಡು ಬದಲುಸೆಕಷ್ಟೆ.
  ಅನುಪಮಕ್ಕ ಮಾಡಿದ ಆಶುಭಾಷಣ ಪರಂಚ್ಶಿಕ್ಕಿ ಹೋದ ಹಾಂಗಿತ್ತಿಲ್ಲೆ. ತುಂಬ ಒಳ್ಳೆದಾಗಿತ್ತು. ೧೯ ಜನರಲ್ಲಿ ಹೆಚ್ಚಿನವುದೆ ಲಾಯಕ್ ಮಾತನಾಡಿದವು. ನಿರ್ಣಾಯಕರಿಂಗೆ ತುಂಬಾ ಕಷ್ಟ ಆಯಿಕ್ಕು ನಿರ್ಣಯ ಮಾಡ್ಳೆ. ಇನ್ನಾಣ ವರ್ಷ ಇನ್ನುದೆ ರೈಸಲಿ ಕಾರ್ಯಕ್ರಮ. ಬೈಲಿನ ಸಮಸ್ತರೂ ಸಭೆಲಿ ಸೇರಲಿ.

  [Reply]

  VA:F [1.9.22_1171]
  Rating: 0 (from 0 votes)
 4. ವೇಣು ಮಾಂಬಾಡಿ
  venugopal mambadi

  ಒಪ್ಪಣ್ಣ ವಿಷು ವಿಶೇಷ ಕಾರ್ಯಕ್ರಮಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ಆಗಿತ್ತು. ಎಲ್ಲಾ ಅಚ್ಚುಕಟ್ಟಾಗಿ ನೆರವೇರಿತ್ತು.ಹಿರಿಯ ತಲೆಗಳೊಟ್ಟಿಂಗೆ ವೇದಿಕೆ ಹಂಚಿಗೊಂಡದು ತುಂಬಾ ಸಂತೋಷವೇ. ಸಭಾ ಕಾರ್ಯಕ್ರಮ ರಾಜ ಹೆಚ್ಚು ಹೊತ್ತು ಯೆಳತ್ತೋ ಹೇಳಿ ಕಂಡತ್ತು (ಆನುದೆ ಅದರಲ್ಲಿ ಭಾಗಿ). ತಳಮದ್ದಳೆದೆ ತುಂಬಾ ಖುಷಿ ಕೊಟ್ಟಿದು.

  [Reply]

  VA:F [1.9.22_1171]
  Rating: 0 (from 0 votes)
 5. ವೇಣು ಮಾಂಬಾಡಿ
  venugopal mambadi

  ವಿಷು ಕಾರ್ಯಕ್ರಮಕ್ಕೆ ನಮ್ಮೋರ ಸ್ಪಂದನೆ ಕಮ್ಮಿ ಆತು. ಬೈಲಿನೋರು ಒಂದು ವಿಮರ್ಶೆ ಮಾಡ್ಲಕ್ಕು.ಎನಗೆ ಗೊಂತದಂಗೆ ಸಾಕಷ್ಟು ಪ್ರಚಾರ ಇತ್ತು, ಪ್ರೆಸ್ ರಿಲೀಸ್ ಬೈಂದು, ಹೇಳಿಕೆ ಕಾಗದ ಪೋಸ್ಟ್ ಆಯಿದು….ಆದರೆ ಜನ ಗ್ರೇಶಿದ್ದನಕಿಂತ ತುಂಬಾ ಕಮ್ಮಿ ಆತಲ್ದ…? ನಮ್ಮೋರಲ್ಲಿ ತಾಳಮದ್ದಳೆ ಬಗ್ಗೆ ಆಸಕ್ತಿ ಕಮ್ಮಿ ಆವುತ್ತಿಪ್ಪದು ಒಳ್ಳೆಯ ಬೆಳವಣಿಗೆ ಅಲ್ಲ.

  [Reply]

  VA:F [1.9.22_1171]
  Rating: 0 (from 0 votes)
 6. ರಮ್ಯ ಹಳೆಮನೆ

  ಅನಿವಾರ್ಯ ಕಾರಣದಿoದ ಬಪ್ಪಲೆಡಿಯದಿದ್ದರು ಕಾರ್ಯಕ್ರಮವ ಕಣ್ಣ ಯೆದುರು ನೋಡಿದ ಅನುಭವ ಆತು. ವರದಿ ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕಾರ್ಯಕ್ರಮ ಮುಗುದಪ್ಪಗ ಧನ್ಯತೆಯ ಭಾವ ಮೂಡಿತ್ತು.
  ಆದಿಕ್ಷಾಂತ ವರದಿ ಲಾಯಿಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 8. ಗೋಪಾಲಣ್ಣ
  S.K.Gopalakrishna Bhat

  ಆ ದಿನ ತುಂಬಾ ಕಾರ್ಯಕ್ರಮಂಗೊ ಇತ್ತಿದ್ದವು,ಸಾಲದ್ದಕ್ಕೆ ಮಾಣಿ ಮಠಲ್ಲಿ ಆದಿತ್ಯ ಹೃದಯ ಪಠಣ ಹೇಳಿ ಸುಮಾರು ಜನ ಹೋಯಿದವು ..ಹಾಂಗಾಗಿ ಜನ ಕಮ್ಮಿ ಆದ್ದದು.

  [Reply]

  VA:F [1.9.22_1171]
  Rating: 0 (from 0 votes)
 9. ಗೋಪಾಲಣ್ಣ
  S.K.Gopalakrishna Bhat

  ಕಾರ್ಯಕ್ರಮ ಚೆಂದ ಆಯಿದು.ತಾಳಮದ್ದಳೆ ಲಾಯಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಕೆದೂರು ಡಾಕ್ಟ್ರುಬಾವ°ದೊಡ್ಮನೆ ಭಾವಶಾಂತತ್ತೆಶಾ...ರೀನೀರ್ಕಜೆ ಮಹೇಶvreddhiಜಯಶ್ರೀ ನೀರಮೂಲೆಪುತ್ತೂರುಬಾವಶ್ಯಾಮಣ್ಣಪಟಿಕಲ್ಲಪ್ಪಚ್ಚಿಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಅಜ್ಜಕಾನ ಭಾವಅನುಶ್ರೀ ಬಂಡಾಡಿಪುಣಚ ಡಾಕ್ಟ್ರುಸುಭಗಚುಬ್ಬಣ್ಣಬೊಳುಂಬು ಮಾವ°ಶೇಡಿಗುಮ್ಮೆ ಪುಳ್ಳಿಸಂಪಾದಕ°ಸುವರ್ಣಿನೀ ಕೊಣಲೆಅನು ಉಡುಪುಮೂಲೆಅಡ್ಕತ್ತಿಮಾರುಮಾವ°ನೆಗೆಗಾರ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ