Oppanna.com

ಸಾಂಸ್ಕೃತಿಕ ವಿಶ್ವಕ್ಕೆ ಸುದರ್ಶನ ಚಕ್ರವೇ ರಕ್ಷೆ ನೀಡಲಿ..

ಬರದೋರು :   ಒಪ್ಪಣ್ಣ    on   11/03/2016    2 ಒಪ್ಪಂಗೊ

ನಮ್ಮ ಪ್ರಾಚೀನ ವಿದ್ಯೆಗಳಲ್ಲಿ ಒಂದಾದ ಪ್ರಾಣಾಯಾಮವ ಈಗಾಣ ಪ್ರಪಂಚಕ್ಕೆ ಪರಿಚಯಿಸಿದ ಶ್ರೀಶ್ರೀ ರವಿಶಂಕರ ಗುರೂಜಿ ಲೋಕಪ್ರಸಿದ್ಧ.
’ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ಕಟ್ಟಿ ಅದರ್ಲಿ ಸುದರ್ಶನ ಕ್ರಿಯಾ ಯೋಗ- ಹೇದು ಒಂದು ಕಾರ್ಯಕ್ರಮವನ್ನೇ ರೂಪಿಸಿ, ಬದುಕುವ ಕಲೆ – ಹೇಳ್ತ ಪುನರುತ್ಥಾನ ತರಗತಿ ಆರಂಭ ಆತಾಡ.
ಕಳುದ ಮೂವತ್ತೈದು ಒರಿಶಂದ ಎಷ್ಟೋ ಲಕ್ಷ ಜೆನಂಗೊ ಈ ಕಾರ್ಯಕ್ರಮದ ಉಪಕಾರ ಪಡಕ್ಕೊಂಡಿದವು.
ಇಂದಿಂಗೂ ದೇಶ ದೇಶಲ್ಲಿ ಹಲವೂ ಜೆನಂಗೊ ಈ ಕಾರ್ಯಕ್ರಮಲ್ಲಿ ಭಾಗವ್ವಹಿಸಿ ನೆಮ್ಮದಿ ಕಂಡುಗೊಂಡು ಇದ್ದವು.
ಬೈಂಕ್ರೋಡು ಮಾವಂಗೆ ಈ ಬಗ್ಗೆ ಇನ್ನೂ ಹೆಚ್ಚಿನ ನಿಖರ ಮಾಹಿತಿ ಅರಡಿಗು – ಏಕೇದರೆ, ಅವು ಈಗಲ್ಲ, ಎಷ್ಟೋ ಒರಿಶದ ಮೊದಲೇ ಈ ತರಗತಿ ತೆಕ್ಕೊಂಡು, ಅದರಿಂದ ಮತ್ತೆ ನೂರಾರು ಜೆನಕ್ಕೆ ಆ ತರಗತಿ ಮಾಡುಸಿ ಕೊಟ್ಟಿದವಾಡ.
ಅದರ ಪ್ರಯೋಜನ ನೇರವಾಗಿ ಪಡಕ್ಕೊಂಡವರಲ್ಲಿ ಅವುದೇ ಒಬ್ಬರು.
ಬೈಂಕ್ರೋಡು ಮಾವ ನಿನ್ನೆ ಸೂರಂಬೈಲಿಲಿ ಸಿಕ್ಕಿ ಮಾತಾಡಿದವು. ಅಷ್ಟಪ್ಪಗ ಒಂದು ವಿಷಯ ಬಂತು.
ಎಂತದದು?
~
ಮಾರ್ಚು ಹನ್ನೊಂದು ಹನ್ನೆರಡು ಹದಿಮೂರನೇ ದಿನಂಗೊ – ವಿಶ್ವ ಸಾಂಸ್ಕೃತಿಕ ಉತ್ಸವ – ಹೇದು ಒಂದು ದೊಡಾ ಕಾರ್ಯಕ್ರಮ ಮಾಡ್ತಾ ಇದ್ದವಾಡ.

ಅದೆಂತ ನಿನ್ನೆ ಮೊನ್ನೆ ಏರ್ಪಾಡು ಮಾಡಿದ ಆಲೋಚನೆ ಅಲ್ಲ, ನಾಕೈದು ಒರಿಶ ಹಿಂದೆಯೇ ಆ ಕಾರ್ಯಕ್ರಮಕ್ಕೆ ವೆವಸ್ತೆ ಸುರು ಮಾಡಿದ್ದವಾಡ.
ಕಾರ್ಯಕ್ರಮಕ್ಕೆ ಒಟ್ಟು ೧೦೦೦ ಎಕ್ರೆ ಜಾಗೆ ವೈಶಾಲ್ಯ ಬೇಕಾವುತ್ತು,
ದೆಹಲಿಲಿ ಇಷ್ಟು ಜಾಗೆ ಎಲ್ಲಿಯಾಣದ್ದು ಅಕ್ಕು?
ಅದಕ್ಕೆಂತ ತಲೆಬೆಶಿ! ಯಮುನೆಯ ಕರೆಲಿ ಮಾಡುವೊ.
ಅಲ್ಲಿ ಕುರೆ ಇಲ್ಲೆಯೋ?
ಅದಕ್ಕೆಂತ ತಲೆಬೆಶಿ, ನಾವೇ ಕುರೆ ಪೂರ ತೆಗವ.

ಮೊದಲಾಗಿ ಹೀಂಗಿರ್ತ ಕಾರ್ಯಕ್ರಮಕ್ಕೆ ಒಪ್ಪಿಗೆಯ ಸರಕಾರದ ಹೊಡೆಂದ ತೆಕ್ಕೊಂಡವಾಡ.
ಎನ್ನ ದೆಹಲಿ, ಎನ್ನ ಯಮುನೆ – ಹೇಳ್ತ ಅಭಿಯಾನ ಆರಂಭಿಸಿದವಾಡ,
ಆ ಮೂಲಕ ಯಮುನೆ ಒಳಿಶಿ, ಶುದ್ಧ ಮಾಡಿ – ಹೇದು ಜೆನರಿಂಗೆ ಪ್ರೇರೇಪಿಸಿದವಾಡ,
ಯಮುನೆ ಕರೆಲಿದ್ದಿದ್ದ ಲೋಡು ಲೋಡು ಕುರೆಯ ತೆಗದು ಶುಭ್ರ ಮಾಡಿದಾವಾಡ,
ಸುಮಾರು ಐದು ಸಾವಿರ ಜೆನ ಕಾರ್ಯಕರ್ತರು ನಿತ್ಯವೂ ದುಡುದ್ದವಾಡ..
ಆ ನಮುನೆ ಇತ್ತು ಅದರ ತಯಾರಿ!
ಎಲ್ಲ ಆಗಿ ನಾಳೆ ಕಾರ್ಯಕ್ರಮ!

೧೦೦೦ ಎಕ್ರೆ ಜಾಗೆಲಿ ಒಟ್ಟು ಕಾರ್ಯಕ್ರಮ, ಅದರ್ಲಿ ಏಳೆಕರೆ ಜಾಗೆಯ ಬರೇ ವೇದಿಕೆ!
ಸುಮಾರು ನೂರೈವತ್ತು ದೇಶಂದ ಒಟ್ಟು ಮೂವತ್ತೈದು ಸಾವಿರ ಕಲಾವಿದರು ಭಾಗವಹಿಸುತ್ತವಾಡ.
ಅಷ್ಟು ಕಲಾವಿದರೇ ಬಾಗವಹಿಸಿರೆ ಇನ್ನು ಒಟ್ಟು ಜೆನರ ಉಪಸ್ಥಿತಿ ಎಷ್ಟಿಕ್ಕು? – ಅಂದಾಜಿ ಮೂವತ್ತೈದು ಲಕ್ಷ.
ಎಷ್ಟೋ ಕೋಟಿಗಟ್ಳೆ ಕರ್ಚಿನ ಚೆಂದದ ಕಾರ್ಯಕ್ರಮ ಇದು.
ನಭೂತೋ!
ಸಂಗೀತ ಸುಧೆ ಯಮುನೆಯ ಕರೆಲಿ ಧಾರೆ ಧಾರೆಯಾಗಿ ಹರಿಗು. ದೆಹಲಿಯೇ ವೃಂದಾವನ ಅಕ್ಕು. ಅಲ್ದೋ?

ವಾವ್ – ಲೋಕವೇ ನಮ್ಮ ಹೊಡೆಂಗೆ ತಿರುಗಿ ನೋಡ್ತ ಕಾರ್ಯಕ್ರಮ – ಹೇದು ನಾವು ಕೊಶಿ ಪಡೆಕ್ಕು.

ಕೊಶಿ ಪಡೆಕ್ಕು ಅಪ್ಪು, ಆದರೆ – ಎಲ್ಲೋರುದೇ ಹಾಂಗೆಯೋ!?
ಉಪದ್ರ ಮಾಡ್ತೋರುದೇ ಇದ್ದವು. ಛೇ – ಹೇದವು ಬೈಂಕ್ರೋಡು ಮಾವ.

ಎಂತಾತು!? – ಕೇಟೆ.
~
ಯಮುನಾ ನದಿಯ ಕರೆಲಿ ಕಾರ್ಯಕ್ರಮ ಮಾಡ್ತರಿಂದಾಗಿ ಎಂಗಳ ಯಮುನಾ ನದಿ ಕುರೆ ಆವುತ್ತೂ – ಹೇದು ಕೆಲವು ಜೆನ ಕೂಗುಲೆ ಸುರುಮಾಡಿದವಾಡ.
ಕೂಗುಲೆ ಈಗೀಗ ಕಣ್ಣೀರು ಬರೆಕ್ಕು ಹೇಳಿ ಇಲ್ಲೆ, ಕೆಮರ ಬಂದರೆ ಸಾಕು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ – ಹೇದು ಒಂದು ಸಂಸ್ಥೆ ೨೦೧೦ರಲ್ಲಿ ಹುಟ್ಟಿದ್ದಾಡ, ಸೊನೆ ಗಾಂಧಿ ಸಮೆಯಲ್ಲಿ.
ದೇಶಲ್ಲಿ ಹಸಿರು ಒಳಿಯೇಕು – ಹೇಳ್ತದು ಆ ಸಂಸ್ಥೆಯ ಕೆಲಸ ಆಡ.
ಅಪ್ಪಪ್ಪು, ಈಗ ಮಾರ್ಗದ ಕರೆಲಿ ಪಚ್ಚೆಬಾವುಟ ಒಳುದ್ದು ಸುಮಾರು – ಹೇದೆ.
ಅದಲ್ಲದೋ – ಹಸುರು ಹೇದರೆ ಮರದ ಹಸುರು – ಹೇದು ನೆಗೆಮಾಡಿದವು.

ನ್ಯಾಯಾಧಿಕರಣ ಸಂಸ್ಥೆ ಈಗ ಆ ಕಾರ್ಯಕ್ರಮಕ್ಕೆ ಅಡ್ಡಕಾಲು ಮಡಗುತ್ತಾ ಇದ್ದಾಡ!
ಅರೆ!

ಹಾಂಗಾರೆ, ಇದೇ ಸಂಸ್ಥೆಯ ಸ್ವಯಂಸೇವಕರು ಅಂದು ಯಮುನೆಯ ಕೊಳಕ್ಕು ತೆಗವಾಗ ಅಡ್ಡಗಾಲು ಮಡಗೆಕ್ಕಾತನ್ನೆ – ಯಮುನೆಲಿಪ್ಪ ಹಸುರು (ಪಾಚಿ) ತೆಗದ್ದಕ್ಕೆ,
ಅತವಾ, ಯಮುನೆಯ ದಡ ಎಲ್ಲ ಒಪ್ಪ ಮಾಡಿದ್ದಕ್ಕೆ,
ಅತವಾ ಮನೆ ಮನೆಗೆ ಹೋಗಿ ಯಮುನೆಗೆ ಕಸವು ಬಿಡೆಡಿ – ಹೇದು ಕೇಳಿಗೊಂಡದಕ್ಕೆ,
ಅತವಾ ಯಮುನೆಯ ಸೌಂದರ್ಯ, ಶುಚಿತ್ವ ಹೆಚ್ಚಿಸಿದ್ದಕ್ಕೆ!
ಇಲ್ಲೆ, ಅಂಬಗ ಈ ಸಂಥೆ ಎಲ್ಲಿತ್ತೋ ಆರಿಂಗೂ ಗೊಂತಿಲ್ಲೆ.
ಸುರುವಿಂಗೆ ೧೨೦ ಕೋಟಿ ದಂಡ ಹೇದು ಪತ್ರಿಕೆ ಹೇಳಿಕೆ ಕೊಟ್ಟು, ಕೊನೆಗೆ – ಇಲ್ಲೆ ಐದು ಕೋಟಿ ದಂಡ ಕೊಡಿ ಸಾಕು – ಹೇದು ಚೌಕಾಶಿ ಮಾಡ್ತಲ್ಲಿಗೆ ಎತ್ತಿತ್ತಾಡ!
ಈ ಕಾರ್ಯಕ್ರಮ್ದ ರೂಪುರೇಷೆ ಹುಟ್ಟಿದ ಮತ್ತೆಯೇ ಆ ಸಂಸ್ಥೆಯೂ ಹುಟ್ಟಿದ್ದದು,
ಬೇರೆ ಏವ ಕಾರ್ಯಕ್ರಮಕ್ಕೂ ಒಂದು ಉಪದ್ರ ಇಲ್ಲೆ, ಅಷ್ಟಪ್ಪಗ ಅದರ ಉದ್ದೇಶ ಎಂತ್ಸರ ಹೇದು ಸಂಶಯ ಬತ್ತು – ಹೇಯಿದವು ಮಾವ.~
~
ಹಸಿರು ಒಳಿಶುವಲ್ಲಿ ಒಳಿಶಲಿ, ಸಮುದ್ರ ತಟವ ಶುದ್ಧ ಮಾಡಿ ಅವರಷ್ಟಕ್ಕೇ ಕಾರ್ಯಕ್ರಮ ಮಾಡುವವರ ಮೇಗೆ ಅಲ್ಲ,
ಕಾನೂನು ರೀತಿಲಿ ಎಲ್ಲವೂ ಮಾಡ್ಳೆ ಹೆರಟ್ರೆ ಹೀಂಗಿರ್ತ ಕೊಕ್ಕೆಗೊ ಸುರು ಆವುತ್ತು ನಮ್ಮ ದೇಶಲ್ಲಿ – ಹೇದು ಬೈಂಕ್ರೋಡು ಮಾವ.
ಅವು ಅವರ ಅಕ್ಕನ ಮನೆಗೆ ಬಂದಿದ್ದೋರು, ಈಗ ಒಪಾಸು ಹೆರಟದು.
ಅವರ ಬಸ್ಸು ಬಂತು, ಅವು ಹೆರಟವು. ಆದರೆ ಒಪ್ಪಣ್ಣಂಗೆ ಅವು ಹೇಳಿದ್ದೇ ತಲೆಲಿ ತಿರುಗೆಂಡು ಇದ್ದತ್ತು.
~

ದೇಶ ವಿದೇಶಲ್ಲಿ ಭಾರತೀಯ ಸತ್ವವ ಸಾರುವ ಇವರ ಕಾರ್ಯಕ್ರಮವ ಈಗ ಹಾಳು ಮಾಡ್ಳೆ ಎಲ್ಲಿಲ್ಲದ್ದ ಉತ್ಸಾಹ.
ಅಂದು ಬೆಂಗ್ಳೂರಿಂಗೆ ಅಮೇರಿಕದ ಪಾದ್ರಿ ಬಂದು ಮತಾಂತರ ಮಾಡುವಾಗ ಇಡೀ ವಾಯುಸೇನೆಯ ನೆಲವನ್ನೇ ಬಿಟ್ಟುಕೊಟ್ಟಿದವು,
ಅಷ್ಟಪ್ಪಗ ಇಲ್ಲದ್ದ ಕಾಳಜಿ ಈಗ ಬತ್ತಿಲ್ಲೆಯೋ ಇವಕ್ಕೆ?
ಧರ್ಮ, ಸಿದ್ಧಾಂತಂಗಳ ಮೀರಿ ಸಂಗೀತಕ್ಕಾಗಿ ಸೇರುವ ಕಾರ್ಯಕ್ರಮ ಆದರೂ – ರಾಜಕೀಯ ಮುಗಿತ್ತಿಲ್ಲೆ ನಮ್ಮ ದೇಶಲ್ಲಿ ಹೇದು ಬೈಂಕ್ರೋಡು ಮಾವ ಹೇಳಿದ್ದು ಅಪ್ಪನ್ನೇ ಕಂಡತ್ತು.
~
ಎಲ್ಲ ವಿಘ್ನಂಗೊ ಮುಗುದು, ಕಾರ್ಯಕ್ರಮ ಚೆಂದಕ್ಕೆ ನೆಡೆಯಲಿ – ಹೇಳ್ತದೇ ಒಪ್ಪಣ್ಣನ ಆಶಯ.

~
ಒಂದೊಪ್ಪ: ಯಮುನೆಯ ವೃಂದಾವನ ಮಾಡುವಗ ಉಪದ್ರ ಮಾಡುವ ಕಂಸಂಗೆ ಸುದರ್ಶನ ಚಕ್ರವೇ ಬರೆಕಷ್ಟೆಯೋ?

2 thoughts on “ಸಾಂಸ್ಕೃತಿಕ ವಿಶ್ವಕ್ಕೆ ಸುದರ್ಶನ ಚಕ್ರವೇ ರಕ್ಷೆ ನೀಡಲಿ..

  1. ಎಲ್ಲದರಲ್ಲುದೆ ರಾಜಕೀಯ. ಐದು ಕೋಟಿ ಅಲ್ಲ, ಐದು ರೂಪಾಯಿಯು ಕೊಡ್ಳಾಗ. ಬಾಂಕು ಕೊಡ್ತದಾದರೆ ಎಂಗಳೇ ಪೈಸೆ ಕೊಡ್ತೆಯೊ ಹೇಳಿ ಹೇಳುಗೊ ?

  2. ಒಳ್ಳೆದಾಯಿದು. ಕಾರ್ಯಕ್ರಮ ನಡೆತ್ತ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×