ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ

    ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷವೂ ನೆಡೆಶೆಂಡು ಬತ್ತಾ ಇಪ್ಪ ಯಕ್ಷಗಾನ ಕಾರ್ಯಕ್ರಮ ಮಂಗಳೂರು ಪುರಭವನಲ್ಲಿ ನಿನ್ನೆ ಜರಗಿತ್ತು. ಈ ಸರ್ತಿ ಹವ್ಯಕ ಸಭೆ, ಖ್ಯಾತ ಮದ್ದಳೆಗಾರರೂ, ಹಿಮ್ಮೇಳದ ಗುರುಗಳೂ ಆಗಿಪ್ಪ ಶ್ರೀಯುತ ಸುಬ್ರಹ್ಮಣ್ಯ ಭಟ್ ಮಾಂಬಾಡಿಯವರ ಸನ್ಮಾನ ಮಾಡಿತ್ತು. ಯಕ್ಷಗಾನ ಕಲಾ ರಸಿಕರ ರಂಜಿಸಲೆ ಬೇಕಾಗಿ ಯಕ್ಷಗಾನ ಬಯಲಾಟ “ನರಕಾಸುರ ಮೋಕ್ಷ”, “ಶ್ರೀ ರಾಮದರ್ಶನ” ವುದೆ ಭರ್ಜರಿಲಿ ನೆಡದತ್ತು.
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗೊ, ನಿಡುವಜೆ ಪುರುಷೋತ್ತಮ ಭಟ್, ದಿವಾಣ ಶಂಕರ ಭಟ್, ಕುದ್ರೆಕೂಡ್ಳು ರಾಮಮೂರ್ತಿ, ಕಲ್ಮಡ್ಕ ಶಂಕರ ಭಟ್ ಹಿಮ್ಮೇಳಲ್ಲಿ ಇದ್ದಿದ್ದವು.

     ಸುರುವಿಂಗೆ ನರಕಾಸುರ ಮೋಕ್ಷ ಪ್ರಸಂಗ ರೈಸಿತ್ತು. ನರಕಾಸುರನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮೆರದವು. ಶ್ರೀಕೃಷ್ಣನಾಗಿ ವಾಟೆಪಡ್ಪು ವಿಷ್ಣುಶರ್ಮ, ಸತ್ಯಭಾಮೆಯಾಗಿ ಈಶ್ವರಪ್ರಸಾದ್ ಧರ್ಮಸ್ಥಳ, ದೇವೇಂದ್ರನಾಗಿ ಶ್ರೀಕೃಷ್ಣ ದೇವಕಾನ, ನಾರದನಾಗಿ ಮಾಂಬಾಡಿ ವೇಣುಗೋಪಾಲ ಭಟ್, ಪೀಠಾಸುರನಾಗಿ ವಿದ್ಯಾ ವಿ ಭಟ್, ದುರ್ಜಯಾಸುರನಾಗಿ ಅಜ್ಜಕಾನ ಪುರುಷೋತ್ತಮ ಭಟ್, ಮುರಾಸುರನಾಗಿ ನೆಲಾಡಿ ರವಿ ಭಟ್, ದೇವದೂತನಾಗಿ ಪದ್ಯಾಣ ಕುಮಾರ ಸುಬ್ರಹ್ಮಣ್ಯ, ದೇವೇಂದ್ರನ ಸಹಚರರಾಗಿ ಪುಳ್ಳರುಗೊ, ಅನರ್ಘ್ಯರತ್ನ, ಅನಂತ, ಪೃಥ್ವೀಚಂದ್ರ, ವೈದೇಹಿ ಅಭಿಯಿಸಿದವು.

ಸಭಾ ಕಾರ್ಯಕ್ರಮಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಮಂಗಳೂರು ವಲಯ ಪ್ರಬಂಧಕ ಶ್ರೀಯುತ ಡಿ.ಎಂ. ಮುಜುಂದಾರ್ ಅವು ಮುಖ್ಯ ಅತಿಥಿಯಾಗಿದ್ದಿದ್ದವು. ಮರುವಳ ನಾರಾಯಣ ಭಟ್ ಸ್ವಾಗತ ಮಾಡಿರೆ, ಶ್ರೀಕೃಷ್ಣ ನೀರಮೂಲೆ ಸನ್ಮಾನಿತರ ಪರಿಚಯಿಸಿ ಅಭಿನಂದಿಸಿದವು. ಮೆದು ತಿರುಮಲೇಶ್ವರ ಭಟ್ ಸನ್ಮಾನ ಪತ್ರ ಓದಿದವು. ಸನ್ಮಾನ ಸ್ವೀಕರುಸಿದ ಶ್ರೀಯುತ ಸುಬ್ರಹ್ಮಣ್ಯ ಭಟ್ ಮಾಂಬಾಡಿ ಚುಟುಕಾಗಿ ಮಾತಾಡಿ, ಸನ್ಮಾನಕ್ಕೆ ಕೃತಜ್ಞತೆಗಳ ಹೇಳಿದವು.  ಮುಖ್ಯ ಅತಿಥಿ  ಶ್ರೀ  ಡಿ.ಎಂ. ಮುಜುಂದಾರ್ , ಹವ್ಯಕ ಸಭೆಯ ಶ್ಲಾಘಿಸಿ, ಹೀಂಗಿಪ್ಪ ಕಲೆಯ ಸನ್ಮಾನಿಸುತ್ತ ಸಂಪ್ರದಾಯವ ಮುಂದುವರುಸೆಂಡು ಹೋಯೆಕು ಹೇಳಿದವು. ಸಭಾಧ್ಯಕ್ಷ, ಶ್ರೀ ಉಳ್ಳೋಡಿ ಗೋಪಾಲಕೃಷ್ಣ ಭಟ್ ಅಧ್ಯಕ್ಷ್ಶರ ನೆಲೆಲಿ ಮಾತಾಡಿ, ಯಕ್ಷಗಾನ ಪ್ರಖ್ಯಾತ ಕಲೆ ಹೇಳುತ್ತರಿಂದಲೂ ಹೆಚ್ಚಾಗಿ, ಅದೊಂದು ಸಂಸ್ಕೃತಿ ಶಿಕ್ಷಣ ಮಾಧ್ಯಮವಾಗಿ ಬೆಳದ್ದು. ಈ ಯಕ್ಷಗಾನ ಕಲೆಂದಾಗಿ ನಮ್ಮ ಸಂಸ್ಕೃತಿ ಇನ್ನುದೆ ಉಳುಕ್ಕೊಂಡು ಬಯಿಂದು. ಉದಾಹರಣಗೆ, ಹಿರಿಯರ ಗೌರವಿಸೆಕು ಹೇಳ್ತ ಹಾಂಗಿಪ್ಪ ಹಲವಾರು ತತ್ವಂಗಳ ಮಕ್ಕಳಲ್ಲಿ ಬೆಳೆಸುವಲ್ಲಿ ಇದು ಸಹಕರಿಸುತ್ತು. ಹವ್ಯಕ ಸಮಾಜ, ಹಿಂಗಿಪ್ಪ ಯಕ್ಷಗಾನ ಕಲೆಯ ಬೆಳಸುವಲ್ಲಿ ಉತ್ತೇಜನ, ಪ್ರೋತ್ಸಾಹ ಕೊಡ್ತಾ ಇದ್ದು. ಯಕ್ಷಗಾನ ರಂಗದ ಗೌರವಾನ್ವಿತರಾದ ಕಲಾವಿದರ ಗೌರವಿಸಿ ಹವ್ಯಕ ಸಭೆ ಇಂದು ಅದರ ಗೌರವವ ಹೆಚ್ಚುಸೆಂಡಿದು. ಹಲವಾರು ಸಂಸ್ಥೆಗೊಇಂತಾ ಕಾರ್ಯಕ್ರಮಂಗವಕ್ಕೆ ಪ್ರಾಯೋಜಕತ್ವ ಕೊಟ್ಟು ಸಹಕರಿಸುತ್ತಾ ಇಪ್ಪದಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿದವು. ಶ್ರೀ ಡಿ.ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಶ್ರೀ ವೇಣುಗೋಪಾಲ ಮಾಂಬಾಡಿ ವಂದಿಸಿದವು.

ಸಭೆ ಕಳುದಿಕ್ಕಿ “ಶ್ರೀರಾಮ ದರ್ಶನ” ಪ್ರಸಂಗ ನೆಡದತ್ತು. ಶ್ರೀರಾಮಂಗೆ ತ್ರೇತಾಯುಗಲ್ಲಿ ಸಹಕರುಸಿದ ಅವರ ಭಕ್ತರಾದ, ಅಶ್ವಿನಿದೇವತೆಗಳ ಪುತ್ರರಾದ ಮೈಂದ-ದ್ವಿವಿದ ಹೇಳುವ ಕಪಿವೀರದ್ವಯರು ದ್ವಾಪರಯುಗಲ್ಲಿ ಶ್ರೀರಾಮನ ಕಾಣ್ತ ಸನ್ನಿವೇಶ, ಇದರ ಮೂಲಕ ಹಾಂಕಾರಲ್ಲಿ ಮೆರಕ್ಕೊಂಡಿದ್ದಿದ್ದ, ಬಲರಾಮ, ಗರುಡರಿಂಗೆ, ಶ್ರೀಕೃಷ್ಣ ಬುದ್ದಿಕಲುಶುವ ಪ್ರಸಂಗ ಒಳ್ಳೆ ರೈಸಿತ್ತು. ನರಕಾಸುರನ ಪತ್ನಿ, ಸಿಂಹಮುಖಿ, ನರಕಾಸುರನ ಕೊಂದ ಕೃಷ್ಣನ ಮೇಲೆ ಕೋಪಲ್ಲಿಪ್ಪಗ ಮೈಂದ-ದ್ವಿವಿದರು ಅದಕ್ಕೆ ಸಿಕ್ಕುತ್ತವು. ಕೃಷ್ಣನ ಕೊಲ್ಲಲೆವಿಧವೆ ಸಿಂಹಮುಖಿ ಅವರ ಕಳುಸುತ್ತು. ಆ ಕಪಿಗೊ, ದ್ವಾರಕೆಗೆ ಬಂದು ಅಲ್ಲ್ಯಾಣ ತೋಟವ ಹಾಳು ಮಾಡುವಗ ಉದ್ಯಾನಪಾಲಕರು ಈ ವಿಷಯವ ಕೃಷ್ಣಂಗೆ ತಿಳುಸುತ್ತವು. ಕೃಷ್ಣ ಗರುಡನ ಕಳುಸುತ್ತ. ಗರುಡ ಸೋತಿಕ್ಕಿ ಬಂದಪ್ಪಗ, ಬಲರಾಮ ಹೋವ್ತ. ಅವನುದೆ ಆ ಮಂಗಂಗಳ ಕೈಲಿ ಸೋತಿಕ್ಕಿ ಬಂದು ಮರ್ಯಾದೆ ಕಳಕ್ಕೊಳ್ತ. ಕಡೆಂಗೆ, ಕೃಷ್ಣ, ಆ ಭಕ್ತ ಕಪಿದ್ವಯರಿಂಗೆ ಶ್ರೀರಾಮನ ಹಾಂಗೆ ಕಂಡು ಬತ್ತ.

     ಮೈಂದನಾಗಿ ಗುಂಡಿಮಜಲು ಗೋಪಾಲಭಟ್ಟ, ದ್ವಿವಿದನಾಗಿ ಸಬ್ಬಣ ಕೋಡಿ ರಾಮಭಟ್ ರೈಸಿದವು. ಸಿಂಹಮುಖಿಯಾಗಿ ಈಶ್ವರ ಭಟ್ ಧರ್ಮಸ್ಥಳ, ಶ್ರೀಕೃಷ್ಣನಾಗಿ ಸೇರಾಜೆ ಗೋಪಾಲಕೃಷ್ಣ ಭಟ್, ಬಲರಾಮನಾಗಿ ಸೂರಿಕುಮೇರಿ ಗೋವಿಂದ ಭಟ್, ಗರುಡನಾಗಿ ಹರಿನಾರಾಯಣ ಎಡನೀರು, ವನಪಾಲಕರಾಗಿ ಪದ್ಯಾಣ ಕುಮಾರ ಸುಬ್ರಹ್ಮಣ್ಯ ಹಾಂಗು ಮಾಣಿಪ್ಪಾಡಿ ರಾಮಚಂದ್ರ ಭಟ್ ಭಾಗವಹಿಸಿ, ಶ್ರೀರಾಮದರ್ಶನ ಎಲ್ಲೋರಿಂಗುದೆ ಚೆಂದಕೆ ಆತು. ಎಲ್ಲೋರ ಮಾತುಗಳಲ್ಲಿ ಶ್ರೀರಾಮಕಥೆ ಅಂಬಗಂಬಗ ಹರುದುಬಂತು.

    ಮಂಗಳೂರು  ಹವ್ಯಕ ಸಭಾದ  ಈ ಕಾರ್ಯಕ್ರಮ ಎಲ್ಲೋರಿಂಗೂ ಕೊಶಿ ಕೊಟ್ಟತ್ತು.

 

 

ಬೊಳುಂಬು ಮಾವ°

   

You may also like...

9 Responses

 1. ಎಂಗ ಕೊಡೆಯಾಲ್ಲಿ ಇಪ್ಪಗ ಮಂಗಳೂರು ಹವ್ಯಕ ಸಭೆಯ ಎಲ್ಲ ಕಾರ್ಯಕ್ರಮಂಗೊಕ್ಕೂ ಆನು ಹೋಯಿಕೊಂಡು ಇತ್ತಿದೆ. ಕೊಡೆಯಾಲ ಬಿಟ್ಟು ಬೆಂಗಳೂರು ಸೇರಿ ೮ ವರ್ಷ ಆತು .ಆದರೆ ಅಲ್ಲಿನ ನೆನಪು ಸದಾ ಹಸಿರಾಗೇ ಇದ್ದು .ಎಂಗ ೧೯೯೬ ರಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಹೇಳುವ ಆನೇ ಬರದ ನಾಟಕವ ರಾಜೇಶ್ವರಿ ಅಕ್ಕ, ಪುಷ್ಪಕ್ಕ ಖಂಡಿಗೆ ,ವಸಂತ ಲಕ್ಷ್ಮೀ ಅಕ್ಕ ,ರಾಜಿ ಬಾಲಕೃಷ್ಣ ,ಆನು ಸೇರಿ ಅಭಿನಯಿಸಿ ಸೈ ಹೇಳಿ ರೈಸಿದ್ದು ,ಸ್ತ್ರೀ ಸಂವೇದನೆ ಕುರಿತು ನಂತೂರಿಲಿ ಹವ್ಯಕ ಸಭೇಲಿ ಭಾಷಣ ಮಾಡಿದ್ದು ಎಲ್ಲವು ಇನ್ನು ಕಣ್ಣಿಂಗೆ ಕಟ್ಟಿದ ಹಾಂಗೆ ಇದ್ದು .ಅಲ್ಲಿಯಣ ಸುದ್ದಿ ಓದಿ ಭಾರಿ ಕೊಷಿ ಆತು .ಸಚಿತ್ರ ಸುದ್ದಿಗೆ ಧನ್ಯವಾದಂಗ ಬೊಳುಂಬು ಮಾವ

  • ಬೊಳುಂಬು ಗೋಪಾಲ says:

   ಹವ್ಯಕ ಸಭೆಲಿ ನೆಡದ ಸುಬ್ಬಿ ಇಂಗ್ಲೀಷ್ ಕಲ್ತ ನಾಟಕವ ಆನೂ ನೋಡಿದ್ದೆ. ತುಂಬಾ ಲಾಯಕಾಗಿತ್ತು.
   ಸ್ತ್ರೀ ಸಂವೇದನೆ ಬಗ್ಗೆ ಭಾಷಣ ಮಾಡ್ಳೆ ನಿಂಗಳ ದಿನಿಗೇಳಲೆ ಬಂದದು ಇದೇ ಬೊಳುಂಬು ಮಾವ ಹೇಳಿ ಹೇಳುವದು ಎನಗೆ ಹೆಮ್ಮೆಯ ಸಂಗತಿ ! ಅಂದ್ರಾಣ ಭಾಷಣವುದೆ ಒಳ್ಳೆ ತಟ್ಟಿತ್ತು. ಎಲ್ಲವನ್ನೂ ಮತ್ತೊಂದರಿ ನೆಂಪು ಅಪ್ಪ ಹಾಂಗೆ ಮಾಡಿದ ಲಕ್ಷ್ಮಿ ಅಕ್ಕಂಗೆ ಧನ್ಯವಾದಂಗೊ. ಬೈಲಿಲ್ಲಿ ನಿಂಗಳ ಶುದ್ದಿಗೊ/ಲೇಖನಂಗೊ ಬತ್ತಾ ಇಪ್ಪದು ತುಂಬಾ ಸಂತೋಷ. ಬೈಲಿಂಗೆ ನಿಂಗಳ ವಿಚಾರಪೂರ್ಣ ಲೇಖನಂಗೊ ಬತ್ತಾ ಇರಳಿ. ಸುಬ್ಬಿ ಇಂಗ್ಳೀಷ್ ಕಲ್ತ ನಾಟಕವುದೆ ನಿಂಗಳ ಹತ್ರೆ ಇದ್ದರೆ ಹಾಕುತ್ತಿರೊ ಹೇಂಗೆ ?

   • ನಮಸ್ತೆ ಅಣ್ಣ ,ಎನಗೆ ನಿಂಗಳ ಫೋಟೋ ನೋಡಿ ಗುರುತು ಹಿಡಿವಲೆ ಎಡ್ತಿದಿಲ್ಲೆ,ಕ್ಷಮೆ ಇರಲಿ ,ನಿಂಗ ಹೇಳಿ ನೆನಪು ಮಾಡಿಕ್ಕೊಂಡದು ಓದಿ ತುಂಬಾ ಕೊಷಿ ಆತು ,ನಿಂಗ ಅಂದು ಬಹುಶ ೨೦೦೫ ಮಾರ್ಚ್ ತಿಂಗಳಿನ ಕಾರ್ಯಕ್ರಮಕ್ಕೆ ಎನ್ನ ಅತಿಥಿಯಾಗಿ ಬಪ್ಪಲೆ ಅತ್ಮೀಯತೆಂದ ದೆನಿಗೇಳಿದ್ದು,ನಿಂಗ ಎಲ್ಲೊರು ನೀಡಿದ ಬೆಂಬಲ ಸಹಕಾರ ಎಲ್ಲದಕ್ಕೂ ಆನು ಕೃತಜ್ಞೆ .
    ಎಂಗ ಹೆಮ್ಮಕ್ಕ ಅಭಿನಯಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕವ ನಿಂಗ ನೋಡಿ ನೆನಪಿಲಿ ಮಡುಗಿದ್ದಿ ಹೇಳಿ ಭಾರಿ ಸಂತೋಷ ಆತು .೧೯೯೬ ರಲ್ಲಿ ಹವ್ಯಕ ಸಭೇಲಿ ಆ ನಾಟಕ ಪ್ರದರ್ಶನ ನಡದ ಕಾರಣ ಎನ್ನ ಆ ಸುಬ್ಬಿ ಇಂಗ್ಲಿಷ್ ಕಲ್ತದು ಹೇಳುವ ಹವಿಗನ್ನಡ ನಾಟಕ ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ ಹೇಳುವ ದಾಖಲೆಯ ಪಡದ್ದು.ಇದರ ಹವ್ಯಕ ಅಧ್ಯಯನ ಕೇಂದ್ರದ ನಾರಾಯಣ ಶಾನುಭಾಗರು ಸ್ಪಷ್ಟ ಪಡಿಸಿದವು .
    ಈ ನಾಟಕದ ಕುರಿತಾಗಿ ಹವ್ಯಕ ಪತ್ರಿಕೆಲಿ ಬಂದ ವರದಿ ನೋಡಿ ಇದುವೇ ಮಹಿಳೆ ಬರದ ಮೊದಲ ಹವ್ಯಕ ನಾಟಕ ಇದು ಹೇಳಿ ಗಮನಿಸಿ ರಾಜ ಗೋಪಾಲಣ್ಣ ಕನ್ಯಾನ ಮೂಲಕ ಎನ್ನ ಸಂಪರ್ಕಿಸಿ ಎನ್ನ ನಾಟಕದ ಪ್ರತಿಯ ಪ್ರಕಟಿಸುಲೇ ತೆಕ್ಕ್ಕೊಂಡು ಹೋಗಿತ್ತಿದವು .ಆನು ಆ ಹೊತ್ತಿಂಗೆ ಅಪ್ಪಗ ಕೊಡೆಯಾಲ ಬಿಟ್ಟು ಬೆಂಗಳೂರು ಎತ್ತಿತ್ತಿದೆ .ಜೊತೆಗೆ ಎನ್ನ ನಿಜವಾದ ಹೆಸರು ಲಕ್ಷ್ಕ್ಷೀ ವಾರಾಣಸಿ (ಲಕ್ಷ್ಮ್ಮೀ ವಿ )ಹಾಂಗಾಗಿ ಲಕ್ಷ್ಮೀ ಜಿ ಪ್ರಸಾದ ಆರು ಹೇಳಿ ಹುಡುಕುಲೆ ಭಾರೀ ಬಂಗ ಆಯಿದು ಹೇಳಿ ರಾಜ ಗೋಪಾಲಣ್ಣ ಹೇಳಿದವು
    ಇಷ್ಟೆಲ್ಲ ಆಗಿಯೂ ಆ ನಾಟಕ ಇತ್ತೀಚಿಗೆ ಪ್ರಕಟವಾದ ಕೆ ಪಿ ರಾಜಗೋಪಾಲ ಕನ್ಯಾನ ,ನಾರಾಯಣ ಶಾನುಭಾಗ (ಹವ್ಯಕ ಅಧ್ಯಯನ ಕೇಂದ್ರದ ಸಹಯೋಗ )ದೊಂದಿಗೆ ನಾರಾಯಣ ಕಂಗಿಲರ ಸಂಪಾದನೆಲಿ ಬಂದ ಹವ್ಯಕ ನಾಟಕ ಸಂಪುಟ ಲ್ಲಿ ಸೇರಿದ್ದಿಲ್ಲೆ , ಪ್ರಕಟ ಆಯಿದಿಲ್ಲೆ !
    ಪ್ರಕಟ ಆಗದ್ದ ಬಗ್ಗೆ ಎನಗೇನೂ ಬೇಜಾರಿಲ್ಲೆ ,ಆದರೆ ಅದಕ್ಕೆ ಸಂಪಾದಕ ನಾರಾಯಣ ಕಂಗಿಲ ಕೊಟ್ಟ ಕಾರಣ ಮಾತ್ರ ರಜ್ಜ ಬೇಜಾರು ಉಂಟು ಮಾಡಿತ್ತು .ಹವ್ಯಕ ಸಭೇಲಿ ಪ್ರದರ್ಶನಗೊಂಡು ಸೈ ಎನಿಸಿದ ಆ ನಾಟಕಕ್ಕೆ ಸಾಹಿತ್ಯಿಕ ಮೌಲ್ಯ ಇಲ್ಲೆಡ. (ಆ ನಾಟಕಕ್ಕೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆಲಿ ಬಹುಮಾನ ಕೂಡಾ ಬೈಂದು!)
    ಆನು ಆ ನಾಟಕವ ಪ್ರಕಟ ಮಾಡಿ ಹೇಳಿ ದುಂಬಾಲು ಬಿದ್ದಿದ್ದರೆ,ಈ ನಾಟಕವ ೩-೪ ಜನ ನಾಟಕ ವಿಮರ್ಶಕರಿನ್ಗೆ ತೋರ್ಸಿ ಅವು ಹಾಂಗೆ ಅಭಿಪ್ರಾಯ ಕೊಟ್ಟಿದ್ದರೆ ಒಪ್ಪಿಕೊಂಬಲೆ ಆವುತ್ತಿತ್ತೋ ಏನೋ !ಸಾಹಿತ್ಯಿಕ ಮೌಲ್ಯ ಇದ್ದ ಇಲ್ಲೆಯೋ ಗೊಂತಿಲ್ಲೇ ಎನಗೆ ,ಆದರೆ ಆ ನಾಟಕಕ್ಕೆ ನಮ್ಮ ಭಾಷೆಯೇ ಚಂದ ಹೇಳುವ ಸಾಮಾಜಿಕಮೌಲ್ಯ ,ಮಹಿಳೆ ಬರದ ಮೊದಲ ಹವಿಗನ್ನಡ ನಾಟಕ ಹೇಳುವ ಚಾರಿತ್ರಿಕ ಮೌಲ್ಯ ಅಂತು ಇತ್ತೇ ಇತ್ತು !
    ತಪ್ಪು ಎಲ್ಲರ ಕೈನ್ದಲೂ ಆವುತ್ತು, ಆದರೆ ಅದರ ಒಪ್ಪಿಗೊಳ್ಳದ್ದೆ, ಹುಡುಕಿಗೊಂಡು ಬಂದು ಪ್ರಕಟ ಮಾಡುಲೆ ಹೇಳಿ ತೆಕ್ಕ್ಕೊಂಡು ಹೋಗಿ, ಆ ನಾಟಕ ಕ್ಕೆ ಮೌಲ್ಯ ಇಲ್ಲೇ ಹೇಳಿ ಅವಹೇಳನ ಮಾಡಿದ್ದು ಎನಗೆ ರಜ್ಜ ಬೇಜಾರಾಗಿತ್ತು .ಆದರೆ ನಾರಾಯಣ ಶಾನುಭಾಗರು” ಎಂಗಳ ಕಡೆಂದ ತಪ್ಪಾಯಿದು ಈಗ ಆ ನಾಟಕ ಪ್ರಿಂಟ್ ಆಗಿ ಆಯಿದು.ಎಂಗ ಅದರ ಹವ್ಯಕ ಪತ್ರಿಕೆಲಿ ಹಾಕುತ್ತೆಯ ಹೇಳಿದವು”ಅವರ ಸೌಜನ್ಯತೆ ದೊಡ್ದತನಕ್ಕೆ ಆನು ತಲೆ ಬಾಗಿದ್ದೆ.
    ಏನೇ ಆದರೂ ಎಂಗಳ ಆ ನಾಟಕವ ನೋಡಿ ನೆನಪು ಮಡುಗಿ ಲಾಯಕಾಗಿತ್ತು ಹೇಳಿ ಪ್ರೋತ್ಸಾಹಿದ ನಿಂಗೊಗೆ ಆನು ಆಭಾರಿಯಾಗಿದ್ದೆ ,ಆನಿಂದು ತುಸು ಆದರೂ ಸಾಧನೆ ಮಾಡುಲೆ ಮಂಗಳೂರು ಹವ್ಯಕ ಸಭೆ ಅಂದು ಎನಗೆ ಸಂಸ್ಕೃತ ಎಂ ಎ ಲಿ ಮೊದಲ ರಾಂಕ್ ಬಂದಿಪ್ಪಗ ಅಭಿನಂದಿಸಿದ್ದು ,ನಾಟಕ ಪ್ರದರ್ಶಿಸಿ ಅಪ್ಪಗ ಎನ್ನ ಪ್ರೋತ್ಸಾಹಿಸಿದ್ದು ,ಮುಂದೆ ಭಾಷಣಕ್ಕೆ ದೆನಿಗೇಳಿ ಎನ್ನ ಗುರುತಿಸಿ ಬೆಂಬಲಿಸಿದ್ದುದು ಕೂಡ ಕಾರಣ ಹೇಳುದರ ಆನು ಮರವಲೇ ಸಾಧ್ಯ ಇಲ್ಲೆ
    ನಿಂಗ ಸೂಚಿಸಿದ ಹಾಂಗೆ ಸಾಧ್ಯವಾದರೆ ಆನು ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕವ ಒಪ್ಪಣ್ಣನ ಬೈಲಿಲಿ ಹಾಕುತ್ತೆ .ಪ್ರತಿ ಇದ್ದು ಎನ್ನ ಹತ್ತರೆ
    ಧನ್ಯವಾದಂಗ

 2. ಹರೇ ರಾಮ ಬೊಳುಂಬು ಮಾವ. ಹವ್ಯಕ ಸಭೆಲಿ ಹೀಂಗೊದು ಕಾರ್ಯಕ್ರಮ ನಡದತ್ತು ಹೇದು ಉತ್ತಮ ವರ್ತಮಾನ ತಿಳಿಶಿದ್ದಿ, ಧನ್ಯವಾದಂಗೊ. ಪಟ ಲಾಯಕ ಬೈಂದು.

  • ಬೊಳುಂಬು ಗೋಪಾಲ says:

   ಭಾವಯ್ಯ, ಎಂತೆಂತೋ ಕೆಲಸಂಗೊ ಆಗಿ ಬೈಲಿಂಗೆ ಆನು ರಜಾ ದೂರ ಆಯಿದನೋ ಹೇಳುವ ಸಂಶಯ ಎನಗೇ ಬಂದಿತ್ತೊಂದರಿ. ನಿಂಗಳ ಒಪ್ಪ ನೋಡಿ ಕೊಶಿ ಆತು, ಇಲ್ಲೆ ಆನು ಬೈಲಿಲ್ಲೇ ಇದ್ದೆ ಹೇಳಿ ಆತು.

 3. ಆಟ ನೋಡಿದಾಂಗೇ ಆತು ಬೊಳುಂಬು ಮಾವನ ಶುದ್ದಿ ಓದಿಯಪ್ಪಗ…ಹರೇ ರಾಮಾ..

  • ಬೊಳುಂಬು ಗೋಪಾಲ says:

   ಪ್ರಕಾಶಣ್ಣ, ಎರಡು ಸರ್ತಿ ಕರೆಂಟು ಹೋದರೂ ನಿಂಗಳ ದಯಂದ ಆಟದ ಶುದ್ದಿ ಬರವಲೆ ತೊಂದರೆ ಆಯಿದಿಲ್ಲೆ ! ಬೆಣಂಚು ಇತ್ತಲ್ಲದೊ ? ಒಪ್ಪಕ್ಕೆ ಧನ್ಯವಾದಂಗೊ.

 4. ಶ್ರೀಧರ says:

  ಬೊಳುಂಬು ಗೋಪಾಲ ಬಾವ, ಆಟ ಕಳಿದ ಮೇಲೆ ಹೇಳಿದ ಶುದ್ದಿ ಲಾಯ್ಕೈದು.. ಮೊದಲೇ ಒಂದು ಸುದ್ದಿ, ಕಾಗದ ಬೈಲಿಲ್ಲಿ ಹಾಕಿರೆ, ಅನುದೇ ಬತ್ತಿತೆ 🙁

 5. ಪಾರ್ವತಿ ಮರಕಿಣಿ says:

  ಲಾಯ್ಕದ ಸುದ್ದಿಗೆ ಒಂದೊಪ್ಪ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *