ಮಹೇಶಣ್ಣ೦ಗೆ ಬೈಲಿನ ಅಭಿನಂದನೆ

December 3, 2010 ರ 6:07 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಹೆಮ್ಮೆಯ ಮಹೇಶಣ್ಣ೦ಗೆ ಹುಟ್ಟೂರಿಲಿ ನಡೆದ ಸನ್ಮಾನ ನವಗೆಲ್ಲ ಅತಿ ಹರ್ಷ ತಂದ ವಿಷಯ. ಒಪ್ಪಣ್ಣನ ಬೈಲಿನ ಎಲ್ಲಾ ಬಂಧುಗಳ ಪರವಾಗಿ ಒಂದು ವಿಶಿಷ್ಟ ಅಭಿನಂದನೆ ಸಲ್ಲಿಸೆಕ್ಕು ಹೇಳಿ ಭಾರಿ ಆಶೆ ಆತದಾ,ಗಣೇಶ ಮಾವನ ಮಾರ್ಗದರುಶನವೂ ಸಿಕ್ಕಿತ್ತು

ನೆಟ್ಟ ನೋಟವೋ?

ಮೂರು ಹೆಜ್ಜೆಲಿ ಬಾಲ ರೂಪದಿ
ಮೂರು ಲೋಕಗಳಳೆದ ತೆರದಿ೦
ದಾರು ಸಾಧನೆ ತೋರಿ ನಿಂದಿದನೆಂದು ಹೇಳುವಿರಾ?
ಮೂರುತಿಯ ನಿಜ ಮಾರ್ಗದರುಶನ
ಕೀರುತಿಯ ಮಮತೆಯ ನಿದರ್ಶನ
ತೋರುತೀ ಸಂಸ್ಕೃತದ ಮಾಣಿಯ ಶ್ರೇಷ್ಠ ಸಂಸ್ಕೃತಿಲಿ

ಕೂಳಕೋಡ್ಲಿನ ಮನೆಯ ಗೌರವ
ವೇಳುವುದ ಕಂಡೆದ್ದು ಬೈಲಿಲಿ
ಮೇಳವಿಸಿತಿ೦ದತುಲ ಸಂತಸ ಬಂಧುಗೊಕ್ಕೆಲ್ಲಾ
ತಾಳುಮೆಯಲತ್ಯಧಿಕ ಶೋಧಿಸೆ
ಆಳದಲಿ ಅಧ್ಯಯನಕಾ ಕರು
ಣಾಳು ಶಗುತಿಯ ಕರುಣಿಸಲಿ ವರಸುತ ಮಹೇಶಂಗೆ

ಆ ಕಾರ್ಯಕ್ರಮದ ಪ್ರತ್ಯಕ್ಷದರ್ಶಿ ಅಲ್ಲದ್ದರೂ ,ನೋಡಿದ ಕೇಳಿದ ವರ್ತಮಾನ ಇದಾ ಇಲ್ಲಿ ಬರದೆ .

ಬದಿಯಡಕ ಶಾಲೆಯಲಿ ಹಿರಿಯರು
ಹೊದೆಶಿದವು ಶಾಲಿನ ಮಹೇಶ೦
ಗದ ನೆರೆದ ಸಭೆಯ ಜೆನ ನೋಡಿದರೆನಿತು ಬಣ್ಣಿಸಲಿ
ಉದಿಸಿದನೊ ಹುಣ್ಣಮೆಯ ಚಂದ್ರಮ
ಉದುರಿತದ ಸಂತಸದ ಕಂಬನಿ
ಉದರವದು ತಂಪಾತು ಜನುಮವನಿತ್ತ ಹಿರಿಯರದು

ಮೆಟ್ಟ ಕಳೆದರು ದೊಡ್ದಭಾವನು
ನೆಟ್ಟ ನೋಟದಿ ಕಿಶೋರಣ್ಣನು
ಕಟ್ಟಕಡೆ ಸಾಲಿನಲಿ ಕೂದಾದರ್ಶ ನುಸಿಬಡುದು
ಉಟ್ಟು ಹೊಸಸೀರೆಯನು ಅಕ್ಕನು
ಕೊಟ್ಟು ಕಿವಿಯ ಗಣೇಶ ಮಾವನು
ಪಟ್ಟದಲಿ ಮೆರೆದಾ ಮಹೇಶನ ನೋಡಿದವು ಮುದದಿ.

ಆನಂದಸಾಗರಲ್ಲಿ ತೇಲಿ ಮುಳುಗಿ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ಮೋಹನಣ್ಣ

  ಅಜ್ಜ ಕಾನ ಭಾವ೦ ಹೇಳಿದ್ದೇ ಸರಿ ಒಪ್ಪ ಕು೦ಞಿಯ ಸರಿ ಮಾಡ್ಲೆ ಕಾಸಿಯೇ ಕೊಡೇಕು.ಅಜ್ಜಕಾನ ಭಾವ ಆ ಕೆಲಸ ಮಾಡ್ಲೆ ಹೆದರೇಡ ಅಲ್ಲದ್ದೆ ಸರಿ ಆವುತ್ತ ಲಕ್ಷಣ ಕಾಣ್ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ°, ನಮ್ಮ ಬೈಲಿನ ವಾಮನನ ವಿಶ್ವರೂಪ ದರ್ಶನದ ಬಗ್ಗೆ ತುಂಬಾ ಚೆಂದಲ್ಲಿ ಬರದ್ದಿ.
  ಪದ್ಯಲ್ಲಿ ಒಂದರಿ ಪುನಾ ಕಾರ್ಯಕ್ರಮ ಕಣ್ಣ ಮುಂದೆ ಬಂತದಾ.. ಧನ್ಯವಾದಂಗ..
  ಡಾಮಹೇಶ° ಅವನ ಇನ್ನೊಂದು ಪಾದ ಮಡುಗುತ್ತಾ ಇಪ್ಪದು ಇಡೀ ಭೂಮಿಯ ವ್ಯಾಪಿಸಲಿ ಅಲ್ಲದಾ?
  ವಿಶ್ವ ವಿಜಯಿಯಾಗಲಿ..

  [Reply]

  VA:F [1.9.22_1171]
  Rating: +3 (from 3 votes)
 3. ಡಾಮಹೇಶಣ್ಣ

  :)
  ಬೈಲಿ೦ದ ಕಾರ್ಯಕ್ರಮಕ್ಕೆ ಬ೦ದವು ತು೦ಬಾ ಪ್ರಭಾವಕಾರಿಯಾಗಿ ವರ್ಣಿಸಿದ್ದವೊ ಹೇಳಿ ಕಾಣ್ತು. ಮುಳಿಯದಣ್ಣ ದೂರಲ್ಲಿ ಕೂದೊ೦ಡೇ ಇಷ್ಟು ಮನೋಹರವಾಗಿ ಬರೆಕಾದರೆ!! ಎಲ್ಲೋರಿ೦ಗಾದ ಸ೦ತೋಷದ ಭಾವನಾ ಭಾಮಿನಿಯ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದದರ ಹೇ೦ಗೆ ಬಣ್ಣಿಸಲಿ?
  ಎನ್ನ ಕಾರ್ಯಕ್ಕೆ ಮುದದಿ೦ದ ಮೆರುಗು ಕೊಟ್ಟು ಅದರ ಮು೦ದುವರುಸೆಕು ಹೇಳುವ ಭಾವನೆಯ ಬರುಸಿ ನಿ೦ಗೊ ಬಲ ನೀಡ್ತಾ ಇಪ್ಪದು ಎನಗೆ ಯೇವಗಳೂ ನೆ೦ಪಿರಲಿ. ನಿ೦ಗೊಗೆಲ್ಲ ಆನು ಚಿರಋಣಿಯಾಗಿರೆಕು.

  ಕೆಲವೊ೦ದು ಕೆಲಸದ ಎಡೆಲ್ಲಿ ಬೈಲಿ೦ಗೆ ಇಣುಕಿದರುದೆ ಮಾತಾಡ್ಲೆ ಸುಮಾರು ಬಾಕಿ ಇದ್ದು. ಪದ್ಯ ಪೂರ್ತಿ ಆಯೆಕಷ್ಟೆ, ಸುದ್ದಿ ಹೇಳೆಕಷ್ಟೆ….

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ದೊಡ್ಮನೆ ಭಾವಡಾಗುಟ್ರಕ್ಕ°vreddhiದೊಡ್ಡಭಾವದೇವಸ್ಯ ಮಾಣಿವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶಚೂರಿಬೈಲು ದೀಪಕ್ಕರಾಜಣ್ಣಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿದೀಪಿಕಾಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಅಕ್ಷರದಣ್ಣಬೋಸ ಬಾವಜಯಗೌರಿ ಅಕ್ಕ°ಸುವರ್ಣಿನೀ ಕೊಣಲೆಶರ್ಮಪ್ಪಚ್ಚಿಮಾಲಕ್ಕ°ನೆಗೆಗಾರ°ಕಳಾಯಿ ಗೀತತ್ತೆಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ