ಸಮ್ಮೇಳನವೂ – ಗೋಪಾಲ ಮಾವನೂ

ಮನ್ನೆ ಮಂಗಳೂರು ಪುರಭವನಲ್ಲಿ ಲಯನ್ಸ್ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ಭಾರೀ ಗೌಜಿಲಿ ನೆಡದತ್ತು.
ಸಿಂಹಗಳ ನಡುವೆ ಕನ್ನಡದ ಕಲರವ ಹೇಳ್ತ  ಹೆಸರಿಲ್ಲಿ ಭಾರೀ ಪ್ರಚಾರದೊಟ್ಟಿಂಗೆ, ಖ್ಯಾತ ಹನಿಕವಿ, ಅಂಕಣಕಾರ,  ಎಚ್. ಡುಂಡೀರಾಜರ ಅಧ್ಯಕ್ಷತೆಲಿ ಜರಗಿತ್ತು.  ಉದ್ಘಾಟನೆ ಮಾಡ್ಳೆ ಡಾ.ವೀರೇಂದ್ರ ಹೆಗ್ಡೆ ಯವೇ ಬಂದಿದ್ದಿದ್ದವು.
ಭುವನೇಶ್ವರಿ ಹೆಗ್ಡೆ,  ಹರಿಕೃಷ್ಣ ಪುನರೂರು,  ಪ್ರದೀಪ್ ಕುಮಾರ ಕಲ್ಕೂರ, ಕರ್ನಾಟಕ ಬೇಂಕಿನ ಅಧ್ಯಕ್ಷ ಜಯರಾಂ ಭಟ್ ಎಲ್ಲೋರು ಸೇರಿ ಸಮ್ಮೇಳನ ಸಾರ್ಥಕ ಆತು.
ರಾಜಕೀಯದವು ಆರೂ ಅಲ್ಲಿ ಇದ್ದಿದ್ದವಿಲ್ಲೆ.  ಎಲ್ಲಾ ಪೇಪರಿಲ್ಲಿಯೂ ಸಮ್ಮೇಳನದ ಬಗ್ಗೆ ವರದಿ ಬೈಂದು. ಹಾಂಗಾಗಿ ಅದರ ಬಗ್ಗೆ ಎರಡ್ಣೆ ಹೇಳ್ತಿಲ್ಲೆ.
ನಿತ್ಯ ಜೀವನಲ್ಲಿ ನಾಟಕ/ಯಕ್ಷಗಾನ ಬೀರುವ ಪ್ರಭಾವ, ಮಾಧ್ಯಮದ ಕೊಡುಗೆ, ಜನಜೀವನದ ಮೇಲೆ ಕಥೆ ಕಾವ್ಯ ಕಾದಂಬರಿಗಳ ಪ್ರಭಾವ, ಮಾತೃ ಭಾಷೆ ಬಳಕೆಲಿ ವಿದ್ಯಾರ್ಥಿ-ಶಿಕ್ಷಕರ ಪಾತ್ರ, ಕಚೇರಿ/ಮನೆಯಲ್ಲಿ ಕನ್ನಡದ ಬಳಕೆ ಮೊದಲಾದ ಹಲವು ವಿಷಯಂಗಳ ಬಗ್ಗೆ ಚಿಂತನೆ ನೆಡದತ್ತು.
ಕನ್ನಡವ ಉಳಿಸಲೆ,  ಬೆಳೆಸಲೆ, ನಮ್ಮ ಮನೆ, ಮಕ್ಕಳಿಂದಲೇ ಸುರು ಆಯೆಕು ಹೇಳಿ ಎಲ್ಲೋರು ಅಭಿಪ್ರಾಯ ಪಟ್ಟವು.

ಆಪ್ತ ಸಲಹೆ ನಾಟಕದ ಲ್ಯಾಪ್ ಟಾಪ್ ಶಾಸ್ತ್ರಿ, ನಿರೂಪಕಿ ನೀರಾ ಹಾಗೂ ಅಜ್ಜಿ

ವೀರೆಂದ್ರ ಹೆಗ್ಡೆ ಮಾತಾಡುತ್ತ,  ಇಂಗ್ಲೀಷು ಕಲಿವೊ, ಕನ್ನಡಲ್ಲೆ ವ್ಯವಹಾರ ಮಾಡುವೊ, ನವಗೆ ಇಂಗ್ಲೀಷು ಸಂಸ್ಕೃತಿ ಬೇಡ ಹೇಳಿದವು.
ಧರ್ಮಸ್ಥಳಲ್ಲಿ ಪ್ರತಿ ವರ್ಶವೂ ಸೀರೆ ವ್ಯಾಪಾರ ಮಾಡ್ತ  ಒಂದು ತಮಿಳ ಮುದಲಿಯಾರ್ ತಾನು ಕನ್ನಡ ಕಲಿಯದ್ದೆ, ಅಲ್ಲ್ಯಾಣ ಕೆಲಸದವಕ್ಕೆ, ಅಂಗಡಿಯವಕ್ಕೆ ತಮಿಳು ಕಲಿಶಿದ ಪ್ರಸಂಗವ ಸೊಗಸಾಗಿ ವಿವರುಸಿದವು.
ಅಧ್ಯಕ್ಷ ಡುಂಡಿರಾಜ್ ತುಂಬಾ ಲಾಯಕಿಲ್ಲಿ ಮಾತಾಡಿದವು. ಸಮ್ಮೇಳನಂಗಳಲ್ಲಿ ಹೊಸತನ ಇರೆಕು.
ಬರಹಂಗಳಲ್ಲಿ ಕೂಡ ಹೊಸತನ ಇದ್ದರೆ,  ಜೆನಂಗೊ ಅದರ ಸಹಜವಾಗಿ ಇಷ್ಟ ಪಡುತ್ತವು. (ನಮ್ಮ ಒಪ್ಪಣ್ಣನ ಬೈಲಿಲ್ಲಿ ತುಂಬಾ ಜೆನ ಒಪ್ಪಣ್ಣಂಗೊ ಇದೇ ರೀತಿ ಬರೆತ್ತವು ).
ಮಧ್ಯ ಮಧ್ಯ,  ನಿರೂಪಕರು ಡುಂಡಿರಾಜನ ಮಿನಿ ಕವನಂಗಳ ಪ್ರಸ್ತುತ ಪಡಿಸೆಂಡು ಇತ್ತಿದ್ದವು.  ಹಾಂಗಾಗಿ ಒಳ್ಳೆ ರಂಜನೆಯು ಇತ್ತು.

ಎಡೆಲಿ ನಮ್ಮವೇ ಆದ ಮಂಗಳ ಮ್ಯಾಜಿಕ್ ವರ್ಲ್ಡ್, ರಾಜೇಶ್ ಮಳಿ ಮಗಳು, ನಾಲ್ಕು ವರ್ಶದ ಪೋರಿ, ಅಪೂರ್ವ ಮಳಿಯ ಮಾಜಿಕ್, ಬಾಲ ಕಲಾವಿದೆ ಆಯನಾ ವಿ ರಮಣ್ ಭರತ ನಾಟ್ಯ, ಹಾಂಗೂ ಪ್ರತಿಭಾ ಪ್ರದರ್ಶನ,  ಮಂಟಪ ಪ್ರಭಾಕರ ಉಪಾಧ್ಯಾಯರ ಅದ್ಭುತವಾದ  ಏಕವ್ಯಕ್ತಿ ಯಕ್ಷಗಾನ  ಎಲ್ಲವೂ ಲಾಯಾಕಾಗಿತ್ತು.  ಒಟ್ಟಾರೆ,  ಕಲೆ ಸಾಹಿತ್ಯ ಆರಾಧಕರಿಂಗೆ ರಸಗವಳ.

ಸಮಾರೋಪ ಕಾರ್ಯಕ್ರಮಕ್ಕೆ ಆಳ್ವಾಸ್ ಪ್ರತಿಷ್ಟಾನದ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷ ಆಗಿ, ನಾಟಕಕಾರ ಡಾ.ನಾ.ದಾಮೋದರ ಶೆಟ್ಟಿ ಎಲ್ಲೋರು ಬಯಿಂದವು.
ಕದ್ರಿ ಹಿಲ್ಸ್ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ನಮ್ಮವೇ ಆದ ಎನ್.ಟಿ.ರಾಜಾ,   ಈ ಸಮ್ಮೇಳನದ ಸಂಚಾಲಕ, ಅರೆಹೊಳೆ ಸದಾಶಿವ ರಾವ್ ಅವರ ನೇತೃತ್ವಲ್ಲಿ ಅಚ್ಚುಕಟ್ಟಾಗಿ ನೆಡದತ್ತು ಸಮ್ಮ್ಜೇಳನ.

ಕಡೆಂಗೆ ಎಂಗಳ ಕಾರ್ಪೊರೇಶನ್ ಬ್ಯಾಂಕಿನ “ಸಿರಿಗಂಧ ಕನ್ನಡ ಬಳಗದ ಮನೋರಂಜನಾ ಕಾರ್ಯಕ್ರಮ.
ಎಲ್ಲೋರ ಒಟ್ಟು ಸೇರುಸಿ ಬೇಕಾದ ಏರ್ಪಾಡು ಮಾಡಿ,  ನಿರ್ದೇಶನ ಮಾಡಿ,  ಅದರೊಟ್ಟಿಂಗೆ ಕಾರ್ಯಕ್ರಮ ನಿರೂಪಣೆ  ಮಾಡಿ, ನಾಟಕಲ್ಲಿ ಪಾತ್ರವನ್ನೂ ಮಾಡಿದವ ನಮ್ಮವನೇ ಆದ ಈ ಗೋಪಾಲಕೃಷ್ಣ ಬೊಳುಂಬು, ನಿಂಗಳ ಬೊಳುಂಬು ಮಾವ.
ಡುಂಡಿರಾಜನ ಹಾಸ್ಯ ನಾಟಕ “ಆಪ್ತ ಸಲಹೆ”(ಟಿವಿ ಕಾರ್ಯಕ್ರಮವ ವಿಡಂಬನೆ ಮಾಡಿದ ನಾಟಕ),  ಜಾನಪದ ನೃತ್ಯ,   ಮಕ್ಕಳ ಪ್ರೀತಿಯ  ಅಂತರಾಷ್ಟ್ರೀಯ ಖ್ಯಾತಿಯ  ಮಿ.ಬೀನ್(ನಮ್ಮವನೇ ಪ್ರಕಾಶ ಹೇಳ್ತವ ಮಾಡಿದ),  ಸೂಪರ್ ಡೈರೆಕ್ಟರ್ ಹೇಳ್ತ ಇನೊಂದು ಪ್ರಹಸನ, ಕಡೆಂಗೆ ಒಳ್ಳೆ ರೈಸಿದ ಲಂಚಾವತಾರವ ಎತ್ತಿತೋರಿಸಿ,  ಹಣದ ವಿವಿಧ ಅವತಾರವ ತೋರುಸಿಕೊಟ್ಟ  ಎನ್ನ ಕಲ್ಪನೆಯ, ನಿರ್ದೇಶನದ  ಕಿರುಪ್ರಹಸನ ” ಭಾಗ್ಯದ ಲಕ್ಷ್ಮಿ ಬಾರಮ್ಮ”.

ಎಲ್ಲೋರು ಒಳ್ಳೆ ಹೊಗಳಿದವು.  ಸುಮ್ಮನೆಯೋ, ನಿಜವಾಗಿಯೋ ಹೇಳಿ ಗೊಂತಿಲ್ಲೆ. ಬಂದವೇ ಹೇಳೆಕಷ್ಟೆ.  ಅಂತೂ ಸೀಮಿತ ಅವಧಿಲಿ,  ಕಡಮ್ಮೆ ಖರ್ಚಿಲ್ಲಿ,  ಇದ್ದದೇ ವೇದಿಕೆಲಿ,  ರಸ ಭಂಗ ಆಗದ್ದ ಹಾಂಗೆ ಕಾರ್ಯಕ್ರಮ ನಡೆಸಿಕೊಟ್ಟೆಯೊ.
ಆನು ಒಂದು ಅಜ್ಜಿಯ ರೂಪಲ್ಲಿ ಅದರದ್ದೇ ಸ್ಟೈಲಿಲ್ಲಿ  ಕಾರ್ಯಕ್ರಮವ ನಿರೂಪಣೆ ಮಾಡಿದೆ (ಅಜ್ಜಿಗೆ ಮಕ್ಕಳ, ದೊಡ್ಡವರ ಎಲ್ಲರ ಬೈದು ಮಾತಾಡುತ್ತ ಹಕ್ಕು ಇದ್ದನೆ, ಹಾಂಗೆ ಮಾತಾಡ್ಳೆ ಲಾಯಕ್ ಆವುತ್ತು).
ನಾಟಕಲ್ಲಿ ವಿಧವೆ ಅಜ್ಜಿ ಆಗಿ ಬಂದೆ, ಕಡೆಂಗೆ ಭಾಗ್ಯದ ಲಕ್ಷ್ಮಿ ಬಾರಮ್ಮಲ್ಲಿ ಸೂತ್ರಧಾರ ಆಗಿ ದಾರ ಹಿಡುದೆ.

ಎಂಗಳ ಕಾರ್ಯಕ್ರಮದ ಪಟಂಗಳ ಕೆಲವು ಹಾಕಿದ್ದೆ.
ನಿಂಗೊಗೆಲ್ಲ ಸಮ್ಮೇಳನಕ್ಕೆ  ಬಪ್ಪಲೆ ಆಯಿದೆಲ್ಲೆ ಹೇಳ್ತ ಬೇಜಾರು ಎನಗೆ ಇದ್ದು.  ಮತ್ತೆ ಎಂತ ಮಾಡ್ತದು ?  ಮಕ್ಕಳೆ, ಇಂಗ್ಳೀಷು ಕಲಿರಿ, ಒಟ್ಟಿಂಗೆ ನಮ್ಮ ಕನ್ನಡ, ನಮ್ಮ ಭಾಷೆ, ಸಂಸ್ಕೃತಿ ಎಲ್ಲವನ್ನೂ ಕಲಿರಿ ಆತೋ ? ಪ್ರೀತಿ ಇರಳಿ.

ವಿ.ಸೂ : ನಿಂಗೊಗೆಲ್ಲಾ ಆಸಕ್ತಿ ಇದ್ದರೆ, ಇನ್ನಷ್ಟು ಪಟಂಗಳ ನಾಳಂಗೆ ಹಾಕುತ್ತೆ.

ಗೋಪಾಲ ಮಾವ.

ಬೊಳುಂಬು ಮಾವ°

   

You may also like...

15 Responses

  1. ಬೊಳುಂಬು ಮಾವನ ನಾಟಕ ಎನಗೂ ನೋಡೆಕ್ಕಿದಾ…… ಬೆಂಗಳೂರಲ್ಲಿ ಮಾಡುವ ಅಂದಾಜಿದ್ದಾ ? ಎಂದಾದರೊಂದು ದಿನ ಒಪ್ಪಣ್ಣ ಬೈಲಿನವರ ಸಮಾವೇಶ ಮಾಡಿರೆ. ಅಲ್ಲಿ ನೋಡುವ ಅವಕಾಶ ಸಿಕ್ಕುತ್ತಾ ನೋಡುವಾ……

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *