ಸೂರಂಬೈಲಿಲ್ಲಿ ಕಲೋತ್ಸವ, ಬನ್ನಿ…

ಒಪ್ಪಣ್ಣನ ಬೈಲಿನ ಒತ್ತಕೆ ಇಪ್ಪ ಗುಡ್ಡೆ ಏರಿರೆ ಸೂರಂಬೈಲಿಂಗೆ ಎತ್ತುತ್ತು.
ಹಾಂಗಾಗಿ ಒಪ್ಪಣ್ಣನ ಶುದ್ದಿ ಕೇಳಿದವಕ್ಕೆ ಎಲ್ಲ ಸೂರಂಬೈಲು ತುಂಬ ಪರಿಚಯ ಇಪ್ಪ ಊರು. ಅಲ್ಲದೋ…
ಸೂರಂಬೈಲು ಹೇದರೆ ಈಗ ಮದಲಾಣ ಹಾಂಗೆ ಅಲ್ಲ. ತುಂಬ ಬದಲಾಯಿದು.
ಹಾಂಗೆ ಹೇಳ್ತರೆ ತುಂಬ ಮದಲಿಂಗೇ ಅಲ್ಲಿ ಪೋಸ್ಟಾಫೀಸು ಇದ್ದು, ಸ್ಟೋರು ಇದ್ದು, ಸರ್ಕಾರಿ ಶಾಲೆ, ಬೇಂಕು, ವಿಲೇಜು ಆಫೀಸು, ವಿಶ್ವನಾಥನ ಭಂಡಾರಿ ಕೊಟ್ಟಗೆ, ಆನಂದ ನಾಯಕನ ಅಂಗುಡಿ, ಶಾಂತಣ್ಣ ಟೈಲರು, ಭಜನಾ ಮಂದಿರ, ರಾಮಣ್ಣನ ಹೋಟೆಲು… ಹೀಂಗೆ ಅಗತ್ಯದ ಸಂಗತಿಗೊ ಎಲ್ಲ ಮದಲಿಂಗೇ ಇದ್ದತ್ತು.
ಆದರೆ, ಈ ತಲೆಮಾರು ಕಂಡ ಹಾಂಗೆ ಸೂರಂಬೈಲು ತುಂಬ ಉದ್ಧಾರ ಆಯಿದು.
ದೊಡ್ಡಮಾವ° ಹೆಡುಮಾಷ್ಟ್ರು ಆಗಿ ಇಪ್ಪತ್ತು ವರ್ಷ ಅಲ್ಲಿ ಸೇವೆ ಸಲ್ಲುಸಿದ್ದವು. ಅಂಬಗ ಬೈಲಿನ ಮಕ್ಕೊ ಎಲ್ಲ ಅದೇ ಶಾಲಗೆ ಹೋಕು. ನಾವುದೇ, ಅದೇ ಶಾಲೆಯ ಬೆಂಚು ಬೆಷಿ ಮಾಡಿದ್ದು.
ದೊಡ್ಡಮಾವ° ರಿಟೇರು ಆದವು, ಕಾಕತಾಳೀಯವೋ ಎಂತ್ಸೋ…
 
ಕನ್ನಡದ ಮಕ್ಕೊ ಕಮ್ಮಿ ಅಪ್ಪಲೆ ಸುರು ಆದವು. ಮಲಯಾಳ ತುಂಬಿತ್ತು.
ಶಾಲೆ ಪೂರ ಬ್ಯಾರಿ ಮಕ್ಕೊ ತುಂಬಿದವು. ಬ್ರಾಮ್ಮರ ಮಕ್ಕೊ ಬೇರೆ ಶಾಲೆ ಹುಡ್ಕಿಯೋಂಡು ಹೋದವು.
 
ಶಾಲಗೆ,
ಅದೂ ಇದೂ ಹೇಳಿಂಡು ಫಂಡು ತುಂಬ ಬಂತು. ದೊಡ್ಡದೊಡ್ಡ ಕಟ್ಟೋಣಂಗೊ ಎದ್ದತ್ತು. ಮೈದಾನು ಸಮಗಟ್ಟಾತು.
ಕೆಂಪು ಬಣ್ಣದ ಮಾಸ್ಟ್ರಕ್ಕೊ ಬಂದವು. ಎಲ್ಲ ಕೊಡಿ ಹಿಡಿತ್ತ ಹಾಂಗಿಪ್ಪವು.
ಆದರೆ, ಮಕ್ಕೊ ಮಾಂತ್ರ ಇಲ್ಲದ್ದೇ ಶಾಲೆ ಸೊರಗುಲೆ ಸುರು ಆತು.
 
ಸೂರಂಬೈಲಿನ ಕರೇಲಿ ಇಪ್ಪ ‘ಹಿಲ್ಲು ಟೋಪು’ ಹೇಳ್ತ ಜಾಗೆ ಕಂಡತ್ತು ಮಮ್ಮದ್ ಕೋಯಂಗೆ.
ನಮ್ಮ ಎಯ್ಯೂರು ಭಾವನ ಮಗ ಅದೇ ಶಾಲಗೆ ಹೋಪಲೆ ಸುರು ಮಾಡಿತ್ತಿದ್ದ. ಅಂಬಗ ಅಲ್ಲಿ ತುಂಬ ನುಸಿ ಉಪದ್ರ ಇದ್ದು ಹೇಳಿ ಬೈಲಿಲ್ಲಿ ಕೆಲವು ಜೆನ ಎಲ್ಲ ತಲೆಬೆಶಿ ಮಾಡಿಂಡು ಇತ್ತಿದ್ದವು. ಶಾಲೆ ದೊಡ್ಡದು ಆಗಿ ಆಗಿ ಈಗ ಹನ್ನೆರಡು ಕ್ಲಾಸಿಂಗೆ ವರೇಗೆ ಅಲ್ಲಿ ಮಕ್ಕೊ ಇದ್ದವು.
ಎಲ್ಲ ಇಂಬ್ಲೀಷು ಮೀಡಿಯಂ ಕಲಿತ್ತ ಮಕ್ಕೊ.
 
ನಮ್ಮ ಸರ್ಕಾರಿ ಶಾಲೆಯ ಎದುರೇ ಖಾಲಿ ಜಾಗೆ ಇದ್ದತ್ತು. ಅದರ ತೆಕ್ಕೊಂಡ ಒಂದು ಬ್ಯಾರಿ ತೆಂಕು ಮೋರೆ ಮಾಡಿ ಒಂದು ದೊಡ್ಡ ಪ್ಲೈವುಡ್ ಫ್ಯಾಕ್ಟರಿ ಕಟ್ಟುಸಿತ್ತು. ಒಂದೈದು ವರ್ಷ ರೈಸಿತ್ತು. ಮತ್ತೆ ಲೋಸು ಅಪ್ಪಲೆ ಸುರು ಆತು. ಮಿಲ್ಲು ಹಡ್ಳು ಬಿದ್ದತ್ತು. ಈಗ ಅದರ ಕರೇಲಿ ಒಂದು ರಸ್ಕು ಮಾಡ್ತ ಬೇಕರಿ ಫ್ಯಾಕ್ಟರಿ ಮಾಂತ್ರ ಇಪ್ಪದು. ಅಷ್ಟು ದೊಡ್ಡ ಫ್ಯಾಕ್ಟರಿ ಇಷ್ಟು ಸಣ್ಣ ಅಪ್ಪಲೆ ತೆಂಕು ಮೋರೆ ಮಾಡಿ ಬಿಳ್ಡಿಂಗು ಕಟ್ಟುಸಿದ್ಸೇ ಕಾರಣ ಹೇಳಿದ ಮದನಗುಳಿ ಭಾವ°.
 
ಸೂರಂಬೈಲಿಲ್ಲಿ ಬಸ್ಸು ಇಳುದು ನೆಡಕ್ಕಂಡು ಹೋದರೆ ಮುಜುಂಗೆರೆ. ಅಲ್ಲಿ ದೇವಸ್ಥಾನ ಇದ್ದು, ನಮ್ಮ ಗುರುಗೊ ಕಟ್ಟುಸಿದ ಶಾಲೆ, ಕಣ್ಣಿನ ಆಸ್ಪತ್ರೆ, ಸಾಧಾರಣ ಆಸ್ಪತ್ರೆ… ಹೀಂಗೆ ಮುಜುಂಗೆರೆಯೂ ಈಗ ಬೆಳದ್ದು.
ಹೋಪ ಬಪ್ಪ ದಾರಿ ಕರೇಲಿ ಪೂರಾ ಸೈಟುಗೊ ತುಂಬಿದ್ದು. ತುಂಬಾ ಮನೆಗಳೂ, ಅದಕ್ಕೆ ತಕ್ಕ ಅಂಗುಡಿಗಳೂ, ಮೀನು ಕಚ್ಚಿ ಎಳೆತ್ತ ಹೋಟೆಲೂ,.. ಎಲ್ಲವೂ ಆಯಿದು ಸೂರಂಬೈಲಿಲ್ಲಿ.
 
ಆದರೂ ಹೀಂಗಿಪ್ಪ ಕಾರ್ಯಕ್ರಮ ಮಾಡ್ಳೆ ಬೇಕಾದಷ್ಟು ಚೈತನ್ಯ ಸೂರಂಬೈಲಿಂಗೆ ಇಲ್ಲೆ ಹೇಳಿ ಆನು ಗ್ರೇಶಿಂಡು ಇತ್ತಿದ್ದೆ.
ಎಂತ ಹೇಳ್ತಿ, ರೂಪಾಯಿ ಆರು ಲಕ್ಷ ಜೆಮೆ ಮಾಡಿ, ಕಾರ್ಯಕ್ರಮ ಮಾಡ್ಸು ಹೇಳಿರೆ ಸಣ್ಣ ಸಂಗತಿಯೋ…?!

ಕೆಂಪು ಬಣ್ಣ ಮೆತ್ತಿದ ಹೇಳಿಕೆ ಕಾಕತ...

ಆದರೆ,
ಈಗ ಸೂರಂಬೈಲು ರೈಸುತ್ತು.
ಮನ್ನೆ ೩ನೇ ತಾರೀಕಿಂಗೆ ಶಾಲೆಲಿ ಕೊಡಿ ಏರಿದ್ದು.
ಇಂದು ಉದೆಕಾಲ ಮಾರ್ಗದ ಕರೇಲಿ ಪೂರ್ತಿ ಮಕ್ಕೊ ತುಂಬಿದ್ದವು.
ಕುಂಬ್ಳೆ ಸೀಮೆಯ ೮೬ ಶಾಲೆಂದ ಸುಮಾರು ಎರಡೂವರೆ ಸಾವಿರ ಮಕ್ಕೊ ಬಂದು ಇಂದು ಒಂಭತ್ತು ಸ್ಟೇಜಿಲ್ಲಿ ನೆಡೆತ್ತ ಕಲೋತ್ಸವ ಸ್ಪರ್ಧೆಲಿ ಭಾಗವಹಿಸುತ್ತಾ ಇದ್ದವು.
ಸ್ಪರ್ಧೆಗೊ ಎಲ್ಲ ಹಗಲು ಮಾಂತ್ರ, ಆದರೂ ಕೆಲಾವು ಸರ್ತಿ ಮುಗಿವಗ ಒಂಭತ್ತು ಗಂಟೆ ಆವ್ಸು ಇದ್ದು. ಕಳುದ ವರ್ಷ ಅಡೂರಿಲ್ಲಿ ಹಾಂಗೆ ತಡವಾದ್ಸು ನೆಂಪಾವ್ತು ಎನಗೆ.
ಪ್ಲೈವುಡ್ಡು ಮಿಲ್ಲಿನ ಒಳದಿಕೆ ಈಗ ಖಾಲಿ, ಹಾಂಗಾಗಿ ಅಲ್ಲಿಯೇ ಊಟದ ವೆವಸ್ಥೆ ಮಾಡಿದ್ಸು.
ಗುಂಡ್ಯಡ್ಕ ಭಾವ° ಆ ಕಮಿಟಿಗೆ ಕನ್ವೀನರು. ಹಾಂಗಾಗಿ ಬಂದವಕ್ಕೆ ಎಲ್ಲ ಪಾಯಸದ ಊಟ ಇದ್ದು.
ಅಖೇರಿಯಾಣ ದಿನ ಬಂದವಕ್ಕೆ ಪೂರ್ತಿ ಭರ್ಜರಿ ಊಟ ಕೊಡ್ಳೆ ಇದ್ದಡ.
ಹೇಳಿದಾಂಗೆ ನಮ್ಮ ಸಾರಡಿ ಮಾವನ ಲೆಕ್ಕಲ್ಲಿ ನಾಳೆ ನೂರು ಲೀಟರು ಹಾಲು ಕಲೋತ್ಸವಲ್ಲಿ ಹರಿವಲೆ ಇದ್ದಡ.
ಹೇಂಗೂ ಸೂರಂಬೈಲಿಲ್ಲಿ ಈಗ ಹಾಲಿನ ಡಿಪ್ಪೊವೂ ಇದ್ದಾನೆ…

ಯಾವ ಯಾವ ಸ್ಟೇಜಿಲ್ಲಿ ಎಂತೆಂತ ಇದ್ದು ಹೇಳಿ ಇದರ ನೋಡಿರೆ ಗೊಂತಕ್ಕು

ಸಾರಡಿಗೆ ಇಳಿತ್ತ ಮಾರ್ಗದ ಕರೇಲಿ ಒಂದು ಸ್ಟೇಜು ಇದ್ದು.
ದೊಡ್ಡಜ್ಜನ ಮನೆ ಪುಳ್ಳಿಗೆ ಹೋವ್ತರೆ…
ಮಹೇಶ ನಾಯಕನ ಅಂಗುಡಿಯ ಎದುರೇ ಒಂದು ಸ್ಟೇಜು ಇದ್ದು. ನಾಡ್ದು ಅಲ್ಲಿ ನೀರ್ಚಾಲು ಶಾಲೆ ಮಕ್ಕಳ ‘ತಾರಕಾಸುರ ವಧೆ’ ಯಕ್ಷಗಾನವೂ ಇದ್ದಡ.
ಇನ್ನೂ ಸುಮಾರು ಶಾಲೆಯವು ಯಕ್ಷಗಾನ ಸ್ಪರ್ಧಗೆ ಗೆಜ್ಜೆ ಕಟ್ಟುತ್ತವು ಹೇಳಿ ಸುದ್ದಿ.
 
ಉಪದ್ರ ಮಾಡ್ತ ಬ್ಯಾರಿಗಳ ಅರಬಿಕ್ಕು ಕಲೋತ್ಸವದ ಒಟ್ಟಿಂಗೆ ನಮ್ಮ ಮಕ್ಕಳ ಸಂಸ್ಕೃತ ಸ್ಪರ್ಧೆಗಳನ್ನೂ ಸೇರುಸಿ ಇಪ್ಪ ಎಲ್ಲಾ ಸ್ಪರ್ಧೆಗೊ ಮಮ್ಮದು ಕೋಯನ ಶಾಲೆ ಹತ್ತರೆ ಅಪ್ಪದು.
ಮೇಕಪ್ಪು ಮಾಡಿಂಡು ಕೊಣಿತ್ತ ಸ್ಪರ್ಧೆಗೊ ಪೂರ ಇಂದು ನಾಕು ಗಂಟಗೆ ಸುರು ಆವ್ತು. ಅದೆಲ್ಲ ನಮ್ಮ ಬೈಲಿನ ಮಕ್ಕಳ ಸರ್ಕಾರಿ ಶಾಲೆಲಿ ಅಪ್ಪದು.
ತಿರುವಾದಿರ, ನಾಟಕ, ಒಪ್ಪನ, ದಪ್ಪುಮುಟ್ಟು, ಕಥಕ್ಕಳಿ, ಪೂರಕ್ಕಳಿ, ಸಂಘ ನೃತ್ತಂ, ಪದ್ಯಂ ಚೊಲ್ಲಲು…
ಹೀಂಗಿರ್ಸರ ಎಲ್ಲ ನೋಡ್ಲಕ್ಕು ನವ°.
 

ಎಷ್ಟು ಹೊತ್ತಿಂಗೆ ಹೇಳಿ ಗೊಂತಾಗ...!

ರೆಜಾ ಪುರುಸೊತ್ತು ಮಾಡಿಂಡು ಬನ್ನಿ,
ಎಡಿಗಾರೆ… ನೋಡುವೊ°
 
ಹೇಳಿಕೆ ಕಾಕತ ನೇಲುಸಿದ್ದೆ.
ಯಾವ ಯಾವ ಸ್ಟೇಜಿಲ್ಲಿ ಯಾವ ಯಾವ ಕಾರ್ಯಕ್ರಮ ಇದ್ದು ಹೇಳ್ತ ವಿವರವೂ ಇದ್ದು.

ಎರಡ್ನೇ ಪುಟ

ದೊಡ್ಡಭಾವ

   

You may also like...

8 Responses

 1. ರಘುಮುಳಿಯ says:

  ದೊಡ್ದಭಾವ,ಶುದ್ದಿ ತಿಳಿಸಿದ್ದಕ್ಕೆ ಧನ್ಯವಾದ.
  ಇಂದ್ರಾಣ ಕಾಲಲ್ಲಿ ಒಂಭತ್ತು ವೇದಿಕೆಗಳಲ್ಲಿ ಏಕಕಾಲಕ್ಕೆ ಇಷ್ಟು ಸಾಂಪ್ರದಾಯಿಕ ಕಲೆಗಳ ಅನಾವರಣ,ಪ್ರದರ್ಶನ ಮಾಡುತ್ತಾ ಇಪ್ಪ ಸಂಘಟಕರಿಂಗೆ ನಮಸ್ಕಾರ. ಅಂದಾಜು,೨೦೦೦ ಮಕ್ಕೋ ಭಾಗವಹಿಸುತ್ತವು ಹೇಳಿ ಓದಿ ಅಪ್ಪಗ ಕೊಶಿ ಆತು.

 2. ಕೇಳಿ ಖುಷಿ ಆತು. ಎಲ್ಲೋರಿಂಗು ಅಭಿನಂದನೆ…

 3. ಶರ್ಮಪ್ಪಚ್ಚಿ says:

  ಸೂರಂಬೈಲಿನ ಹಾಂಗಿಪ್ಪ ಸಣ್ಣ ಊರಿಲ್ಲಿ ದೊಡ್ಡ ಮಟ್ಟಿನ ಕಾರ್ಯಕ್ರಮ.
  ಕೇಳಿ ಕೊಶೀ ಆತು. ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ

 4. ಶ್ರೀದೇವಿ ವಿಶ್ವನಾಥ್ says:

  ದೊಡ್ಡ ಭಾವ°.., ಕಾರ್ಯಕ್ರಮದ ಆಮಂತ್ರಣದ ಒಟ್ಟಿನ್ಗೆ ಇಡೀ ಜಾಗೆಯ ಪರಿಚಯ ಮಾಡಿದ್ದು ತುಂಬಾ ಲಾಯ್ಕಾಯಿದು. ಎಲ್ಲ ವಿವರಂಗಳ ಚೆಂದಲ್ಲಿ ಹೇಳಿದ್ದಿ..
  ಕೇರಳಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೊಕ್ಕೆ ತುಂಬಾ ಅವಕಾಶಂಗ ಇದ್ದು.. ಅದರಲ್ಲಿ ಭಾಗವಹಿಸುವ ಮಕ್ಕಳೂ ಒಳ್ಳೆ ಪ್ರತಿಭಾವಂತರೇ ಆಗಿರ್ತವು ಅಲ್ಲದಾ?
  ಹಶು, ಆಸರು ತಡಕ್ಕೊಂಡು ಮಕ್ಕೊ ಅಲ್ಲಿ ಕಾರ್ಯಕ್ರಮಂಗಳ ಕೊಡೆಕ್ಕಾವುತ್ತಲ್ಲದಾ ಕೆಲವು ಸರ್ತಿ.. ಸೂರಂಬೈಲಿಲಿ ಹಾಂಗಾಗ ಬಹುಶ..!!! ಊಟಕ್ಕೆ ಲಾಯ್ಕಲ್ಲಿ ವ್ಯವಸ್ತೆ ಅಕ್ಕು ಅಲ್ಲದಾ?
  ಕಳುದ ವರ್ಷದ ಕಲೋತ್ಸವಕ್ಕಾ..,ಕಲಾತಿಲಕಕ್ಕಾ ಕಲ್ಲಿಕೋಟೆಲಿ ಸ್ಪರ್ಧೆ ಆದ್ದದು? ಅಲ್ಲಿ ಜನಂಗಳ ಎಡೆಲಿ ಒಂದು ಸಣ್ಣ ಕೂಸು ಜೆನಂಗೊಕ್ಕೆ ಕಡ್ಲೆ ಮಾರಿಗೊಂಡಿದ್ದದರ ಬಗ್ಗೆ ಏಷಿಯಾ ನೆಟ್ ಲಿ ತೋರ್ಸಿ.., ಆ ಹುಡುಗಿಯ ಬಗ್ಗೆ ವಿಚಾರ್ಸಿ, ಅದು ಶಾಲೆ ಬಿಟ್ಟಾದ ಮೇಲೆ ಹೊತ್ತಪ್ಪಗ, ಕಲಿವಲೆ ಬೇಕಾಗಿ ಕಡ್ಲೆ ಮಾರಿ ಸಂಪಾದನೆ ಮಾಡುದು ಹೇಳಿ ಗೊಂತಾಗಿ ಅದಕ್ಕೆ ಕಲಿವಲೆ ಸಹಾಯ ಮಾಡಿದ್ದವಲ್ಲದಾ? ಟಿ. ವಿ ಲಿ ನೋಡಿ ಗೊಂತೆನಗೆ!!
  ನಮ್ಮ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಅದರ ಜೆನಂಗಳ ಎದುರು ಪ್ರದರ್ಶನಕ್ಕೆ ವೇದಿಕೆ ಬೇಕಲ್ಲದಾ? ಅದಕ್ಕೆ ಸರಿಯಾದ ವ್ಯವಸ್ತೆಗ ನಮ್ಮಲ್ಲಿ ಇಲ್ಲೆ.. ಹಾಂಗೆ ನಮ್ಮ ಪ್ರತಿಭೆಗ ನವಗೆ ಗೊಂತಿಲ್ಲದ್ದೆ ಹೋವುತ್ತು..
  ನಮ್ಮಲ್ಲಿಯೂ ಹೀಂಗಿಪ್ಪ ಕಾರ್ಯಕ್ರಮಂಗ ಚೆಂದಲ್ಲಿ ನಡದು, ನಮ್ಮ ಮಕ್ಕಳೂ ಅವರ ಪ್ರತಿಭೆಯ ತೋರ್ಸುವ ಹಾಂಗೆ ಆಗಲಿ..
  ಮಕ್ಕಳ ಉತ್ಸಾಹ ಹೆಚ್ಚುವ ಹಾಂಗಿಪ್ಪ ಕಾರ್ಯಕ್ರಮಂಗ ನಡೆಯಲಿ…
  ಅವರ ಪ್ರತಿಭೆ ಪ್ರತಿಷ್ಠೆಗಾಗಿ ನಡೆಯದ್ದೆ.. ನಿಜ ಪ್ರತಿಭೆ ಮೆರೆಯಲಿ..
  ಮಕ್ಕಳ ಮನಸ್ಸು ಹೂಗಿನ ಹಾಂಗೆ ನಿಧಾನಕ್ಕೆ ಮುಗ್ಧತೆಲಿ ಅರಳಲಿ..

 5. ಮಕ್ಕಳ ಪ್ರತಿಭೆಯ ಅರಳುಸುವ ಈ ಕಾರ್ಯಕ್ರಮಕ್ಕೆ ಶುಭವಾಗಲಿ, ಮಕ್ಕೊಗೆ ನಮ್ಮ ಶುಭಾಶಯ೦ಗೊ, ಇದರ ಸಫಲ ಮಾಡುವ ದೊಡ್ಡಭಾವನ ಹಾ೦ಗಿಪ್ಪ ಶಿಕ್ಷಕರಿ೦ಗೂ ನಮ್ಮ ಅಭಿನ೦ದನೆಗೊ.

  ಮೊದಲು ಯುವಜನೋತ್ಸವ ಮತ್ತು ಸ೦ಸ್ಕೃತೋತ್ಸವ ಹೇಳಿ ಇದ್ದದರನ್ನೇ ಈಗ ಕಲೋತ್ಸವ ಹೇಳಿ ಹೇಳುವದು ಅಲ್ಲದ? ಚೆ೦ದದ ಹೆಸರು.
  ಅದು ಒ೦ದು ದಿನ ಉದಿಯಪ್ಪಗ ಶುರು ಆಗಿ ಇರುಳಿಡೀ ಆಗಿ ಮರುದಿನ ಉದಿಯಪ್ಪಗ ಮುಗಿಕ್ಕೊ೦ಡು ಇತ್ತಿದ್ದೊ ಹೇಳಿ ಕಾಣ್ತು. ಈಗ ಹಾ೦ಗಾರೆ ಮೂರ್ನಾಲ್ಕು ದಿನದ್ದು!!

  ಎ೦ಗೊ ಹತ್ತನೇ ಕ್ಲಾಸಿಲ್ಲಿಪ್ಪಗ ಎ೦ಗಳ ನೀರ್ಚಾಲು ಮಹಾಜನ ಶಾಲೆಲ್ಲಿ ಆದ ಉತ್ಸವ ನೆ೦ಪಾವುತ್ತು. ವೋಲೆ೦ಟೀರು ಆಗಿ ಗಮ್ಮತ್ತು ಮಾಡಿದ್ದು, ಸ೦ಸ್ಕೃತೋತ್ಸವಲ್ಲಿ ಶಾಲೆಗೆ ಶೀಳ್ಡು ಬ೦ದ ಕೊಶಿಲ್ಲಿ ಜಾಥಾ ಹೋದ್ದು ಎಲ್ಲ ನೆ೦ಪಾವುತ್ತು. ಪೆರ್ವದ ಗಣೇಶಣ್ಣ೦ಗೆ ಮರದು ಹೋಗಿರ. ಪ್ರತಿ ವರ್ಶದ ಸ್ಕೂಲ್ ಡೇ ಲ್ಲಿ ಇರುಳಾಣ ಜಗಜಗಿಸುವ ಕಾರ್ಯಕ್ರಮ ಆಗದ್ದೆ (ಕಾಟುಗ ಉಪ್ಪದ್ರ ಮಾಡ್ತವು ಹೇಳಿ ಹೆದರಿ) ಸುಮಾರು ವರ್ಷ ಆಗಿಪ್ಪಗ ಹೀ೦ಗಿಪ್ಪ ಒ೦ದು ಗೌಜಿ (ಸುಮಾರು ಸ್ಟೇಜಿಲ್ಲಿ ನಾಟಕ, ಡೇನ್ಸು, ಯಕ್ಶಗಾನ) ಎ೦ಗಳ ಶಾಲೆಲ್ಲಿ ಆದಪ್ಪಗ ಕೊಶಿ ಆದ್ದದು!!

  • ಗಣೇಶ ಪೆರ್ವ says:

   ಏಯ್, ಮರದ್ದಿಲ್ಲೆಪ್ಪಾ.. ಹೇ೦ಗೆ ಮರವದು? ಆ ದಿನ೦ಗೊ ಇನ್ನು ತಿರುಗಿ ಸಿಕ್ಕಲಿದ್ದಾ? ‘ಜಾಗರೂಕೋ ಭವ’ ನಿ೦ಗೊಗೂ ಮರದಿರ ಅಲ್ಲದೊ? 🙂

 6. ಒಳ್ಳೆ ಕಾರ್ಯಕ್ರಮದ ಬಗ್ಯೆ ಒಳ್ಳೆ ವಿವರಣೆ.ಇನ್ನು ಹಳೆ ಕಾಲಲ್ಲಿ ಹಾ೦ಗಿತ್ತು ಹಿ೦ಗಿತ್ತು ಹೇಳಿ ಪ್ರಯೋಜನ ಇಲ್ಲೆ.ಅ೦ದು ಇಷ್ಟು ಮಕ್ಕಳೂ ಇತ್ತಿದ್ದವಿಲ್ಲೆ ಇಷ್ಟು ಪು೦ಡಟಿಕೆಯವರ ಹೆದರಿಕೆಯೂ ಇತ್ತಿಲ್ಲೆ ಎಲ್ಲಿಯಾರು ಗಲಾಟೆ ಮಾಡ್ತವರ ಕ೦ಡ್ರೆ ಊರಿನ ಒಳುದವೇ ಜಾತಿ ನೀತಿ ನೋಡದ್ದೆ ಅವರ ಸರಿ ಮಾಡಿಯೊ೦ಡಿತ್ತಿದ್ದವು.ಇರಳಿ ಅ೦ದಿಗೆ ಅದೇ ಸುಖ ಇ೦ದಿಗೆ ಇದೇ ಸುಖ.ಅ೦ತೂ ಒಳ್ಳೆ ವಿವರಣಗೆ ಒ೦ದು ಒಳ್ಳೆ ಒಪ್ಪ.ಒಪ್ಪ೦ಗಳೊಟ್ಟಿ೦ಗೆ

 7. ಗೋಪಾಲ ಮಾವ says:

  ಸೂರಂಬೈಲಿನ ಸ್ಥಳ ಪರಿಚಯದ ಒಟ್ಟಿಂಗೆ ಕಲೋತ್ಸವದ ಹೇಳಿಕೆ ನೋಡಿದೆ. ಕಲೋತ್ಸವ ಒಳ್ಳೆ ಭರ್ಜರಿ ಆಗಿ ನಡದತ್ತಾಯ್ಕು. ಮತ್ತೆ ನಮ್ಮ ಯಕ್ಷಗಾನಕ್ಕೆ ಬಹುಮಾನವೂ ಸಿಕ್ಕಿಕ್ಕು. ಒಳ್ಳೆ ಪರಿಚಯ ಮಾಡಿ ಕೊಟ್ಟ ಲೇಖನ. ಸೂರಂಬೈಲಿನ ಅಡ್ಕಲ್ಲಿ ಸೂರ್ಯಾಸ್ತಮಾನದ ದೃಶ್ಯ ನಿಜವಾಗಿಯೂ ಚೆಂದ ಕಾಣುತ್ತು. ಹಾಂಗಾಗಿ ಸೂರಂಬೈಲು ಹೇಳ್ತ ಹೆಸರು ಬಂದದಾಯ್ಕು. ಈಗ ತುಂಬಾ ಕೋಟೆಗೊ, ಮಾಪಳೆ ಶಾಲೆ ಕಟ್ಟಡ ಎಲ್ಲ ಬಂದು ಸೂರ್ಯಂಗೆ ಅಡ್ಡ ಆವುತ್ತು. ದೊಡ್ಡ ಮಾವ ಇದ್ದಿದ್ದ ಕನ್ನಡದ ಶಾಲೆ ಮಲೆಯಾಳಿ ಶಾಲೆ ಆಗಿ ಬದಲಾವಣೆ ಆವ್ತ ಇಪ್ಪದು ಕೇಳಿ ಬೇಜಾರು ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *