ಹರಿಯೊಲ್ಮೆ ಅಜ್ಜಿ

September 5, 2014 ರ 9:22 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರಿಯೊಲ್ಮೆ ದೊಡ್ದಬ್ಬೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಮನೆತನದ ‘ಹರಿಯೊಲ್ಮೆ ‘ನಿವಾಸಿ ಗೌರೀ ಅಮ್ಮ ಸೋಮವಾರ (ತಾರೀಖು ೨೫-೦೮-೨೦೧೪) ಇರುಳು ಸುಮಾರು ೮. ೧೫ರ ಹೊತ್ತಿಂಗೆ ದೈವಾಧೀನರಾಯಿದವು. ಮೃತರಿಂಗೆ ೮೫ ವರ್ಷ ಪ್ರಾಯ ಆಗಿದ್ದತ್ತು. ಅವು ಮೂರು ಜನ ಮಗಂದ್ರನ್ನೂ,ಒಂದು ಮಗಳನ್ನೂ,ಸೊಸೆಯಕ್ಕೊ,ಕುಟುಂಬಸ್ಥರು,ನಂಟರು,ಇಷ್ಟರು ಹೇಳಿ ದೊಡ್ಡ ಬಳಗವನ್ನೇ ಬಿಟ್ಟು ಹೋದ ಎಲ್ಲೋರ ದೊಡ್ಡ ಅಬ್ಬೆ ಈ ಹರಿಯೊಲ್ಮೆ ದೊಡ್ದಬ್ಬೆ. ಸಣ್ಣ ಮಕ್ಕೊಗೆ ಎಲ್ಲಾ ಹರಿಯೊಲ್ಮೆ ಅಜ್ಜಿ. ಶ್ರೀ ಗುರುಗ ಈ ಮನೇಲಿ ಭಿಕ್ಷಾ ಸೇವೆ ಸುಮಾರು ಹತ್ತು ವರ್ಷದ ಹಿಂದೆ ಸ್ವೀಕರಿಸಿ ಶಿಷ್ಯ ಸಂದೋಹಕ್ಕೆ ಆಶೀರ್ವಾದ ಮಾಡಿದ ಈ ಹರಿಯೊಲ್ಮೆಲಿ ನಿತ್ಯವೂ ಹರಿಯ ಒಲುಮೆ ಇರಲಿ ಹೇಳಿ ಅಶೀರ್ವಚನಲ್ಲಿ ಹೇಳಿತ್ತಿದ್ದವು. ಇಂತಹ ಮನೆ ಬೆಳಗಿದ ಗೌರೀ ಅಮ್ಮನ ಆತ್ಮಕ್ಕೆ ಚಿರ ಶಾಂತಿಯ ಆ ಪರಮಾತ್ಮ ಕರುಣಿಸಲಿ ಹೇಳಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಪ್ರಾರ್ಥನೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. Sumana Bhat Sankahithlu

    ಎನ್ನ ಪ್ರೀತಿಯ ಈ ಅಜ್ಜಿ ಇನ್ನಿಲ್ಲೇ ಹೇಳುವ ವಿಷಯ ಗೊಂತಾದ ಕೂಡ್ಲೆ ತುಂಬಾ ಬೇಜಾರ ಆಯಿದು. ಈಗಲೂ ಆವ್ತಾ ಇದ್ದು. ದಿನಾಗಿಲೂ ಊರಿಂಗೆ Phone ಮಾಡಿ ಅಪ್ಪನ ಮನೇಲಿ ಬಾಕಿ

    ಎಲ್ಲಾರು ಎಂತ ಮಾಡ್ತಾ ಇದ್ದವು ಹೇಳಿ ಸುದ್ದಿ ಕೇಳುವಾಗ ಬಾಯಿ ತಪ್ಪಿ ಅಜ್ಜಿ ಎಂತ ಮಾಡ್ತವು ಹೇಳಿ ಕೇಳುಲೆ ಹೆರಡ್ತೆ. ಸಣ್ಣ ಇಪ್ಪಾಗಿಂದ ಈ ಅಜ್ಜಿಯ ಜೊತೆ ಎನ್ನ ಒಡನಾಟ ತುಂಬಾ ಹೆಚ್ಚು. ಎಂಗೊ

    ಪುತ್ತೂರು ಬಿಡಾರಲ್ಲಿ ವಾಸ ಸುರು ಮಾಡಿದ ಮೇಲೆ ಅಜ್ಜ-ಅಜ್ಜಿ ಹರಿಯೊಲ್ಮೆಗೆ ಹೋಗಿ ೨ ದಿನಂದ ಹೆಚ್ಚು ನಿಂದ ಕೂಡ್ಲೆ ಅಸಕ್ಕ ಹಿಡುದು ಬೇಗ ಬಪ್ಪಲೆ ಹೇಳಿಯೊಂಡಿತ್ತಿದ್ದೆ. ಮದುವೆ ಆಗಿ ಇಲ್ಲಿ ಬಂದ

    ಮೇಲೆದೆ ಪ್ರತೀ ವರ್ಷ ಊರಿಂಗೆ ಹೋದಿಪ್ಪಗ ಅಜ್ಜಿಯ ಕಾಂಬಲೆ ಹೋಯಿದೆ. ಇನ್ನಾಣ ಸರ್ತಿ ಹೋಪಗ ಎಲ್ಲ ವಿಷಯ ವಿವರವಾಗಿ ಕೇಳುಲೆ/ ಎನಗೆ ಹೇಳುಲೆ ಈ ಅಜ್ಜಿ ಇಲ್ಲೆನ್ನೇ? ಹೇಳಿ ಬೇಜಾರ.

    ಅಜ್ಜಿಯ ಬಗ್ಗೆ ಒಪ್ಪಣ್ಣ ಲ್ಲಿ ಬಕ್ಕು ಹೇಳಿ ಅಪ್ಪ-ಅಬ್ಬೆ ಹೇಳುವಾಗಲೇ ಎನಗೆ ಅಜ್ಜಿಯ ಇದೇ Photo ಇಕ್ಕು ಗ್ರೇಶಿತ್ತಿದ್ದೆ ದೊಡ್ಡ ಚಿಕ್ಕಮ್ಮಾ… ಅಜ್ಜ ಅಜ್ಜಿಯ ಒಟ್ಟಿಂಗೆ ಆಡಿದ ಆಟಂಗೊ, ಅವರ ಹತ್ರೆ

    ಕೂದು ಕತೆ ಕೇಳಿಯೊಂಡಿದ್ದದು, ಅಪ್ಪ-ಅಬ್ಬೆ, ಅಪ್ಪಚ್ಚಿಯಕ್ಕೋ, ಚಿಕ್ಕಮ್ಮಂದ್ರು, ತಂಗೆಕ್ಕೊ, ತಮ್ಮಂದ್ರೊಟ್ಟಿಂಗೆ ಅಜ್ಜ-ಅಜ್ಜಿಯ ಹಳೆ ನೆಂಪಿನ ಸುದ್ಧಿ ಕೇಳಿದ್ದು, ಮದುವೆ ಆದ ಮೇಲೆ ಯಜಮಾನ್ರು,

    ಮಕ್ಕಳ ಒಟ್ಟಿಂಗೆ ಅಪ್ಪನ ಮನೆಗೆ ಹೋಗಿ ಎಲ್ಲೋರ ಒಟ್ಟಿಂಗೆ ಕೂದು ಮಾತಾಡಿದ್ದು ಎಲ್ಲ ಒಂದೊಂದೇ ನೆಂಪಾವ್ತು. ಊರಿಂದ ದೂರಲ್ಲಿ ಇಲ್ಲಿಪ್ಪಗ ಊರಿನವರ ನೆಂಪು ಯಾವಾಗಲೂ ಆವ್ತು. ಈಗ ಇನ್ನೂ

    ಹೆಚ್ಚು ಆವ್ತು.
    ಅಪ್ಪು, ನಮ್ಮೆಲ್ಲರ ಪ್ರೀತಿಯ ಈ ಅಜ್ಜಿಯ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಉತ್ತಮ ಗುಣಂಗಳ ನೆಂಪುಗಳೆ ನಮ್ಮ ಮನಸ್ಸಿನ ಸಮಾಧಾನ ಮಾಡುಗು ಮತ್ತೆ ನಮಗೆ ಮಾರ್ಗದರ್ಶನವೂ ಆಗಲಿ.

    [Reply]

    Sumana Bhat Sankahithlu Reply:

    ಎನ್ನ ಪ್ರೀತಿಯ ಈ ಅಜ್ಜಿ ಇನ್ನಿಲ್ಲೇ ಹೇಳುವ ವಿಷಯ ಗೊಂತಾದ ಕೂಡ್ಲೆ ತುಂಬಾ ಬೇಜಾರ ಆಯಿದು. ಈಗಲೂ ಆವ್ತಾ ಇದ್ದು. ದಿನಾಗಿಲೂ ಊರಿಂಗೆ Phone ಮಾಡಿ ಅಪ್ಪನ ಮನೇಲಿ ಬಾಕಿ ಎಲ್ಲಾರು ಎಂತ ಮಾಡ್ತಾ ಇದ್ದವು ಹೇಳಿ ಸುದ್ದಿ ಕೇಳುವಾಗ ಬಾಯಿ ತಪ್ಪಿ ಅಜ್ಜಿ ಎಂತ ಮಾಡ್ತವು ಹೇಳಿ ಕೇಳುಲೆ ಹೆರಡ್ತೆ. ಸಣ್ಣ ಇಪ್ಪಾಗಿಂದ ಈ ಅಜ್ಜಿಯ ಜೊತೆ ಎನ್ನ ಒಡನಾಟ ತುಂಬಾ ಹೆಚ್ಚು. ಎಂಗೊ ಪುತ್ತೂರು ಬಿಡಾರಲ್ಲಿ ವಾಸ ಸುರು ಮಾಡಿದ ಮೇಲೆ ಅಜ್ಜ-ಅಜ್ಜಿ ಹರಿಯೊಲ್ಮೆಗೆ ಹೋಗಿ ೨ ದಿನಂದ ಹೆಚ್ಚು ನಿಂದ ಕೂಡ್ಲೆ ಅಸಕ್ಕ ಹಿಡುದು ಬೇಗ ಬಪ್ಪಲೆ ಹೇಳಿಯೊಂಡಿತ್ತಿದ್ದೆ. ಮದುವೆ ಆಗಿ ಇಲ್ಲಿ ಬಂದ ಮೇಲೆದೆ ಪ್ರತೀ ವರ್ಷ ಊರಿಂಗೆ ಹೋದಿಪ್ಪಗ ಅಜ್ಜಿಯ ಕಾಂಬಲೆ ಹೋಯಿದೆ. ಇನ್ನಾಣ ಸರ್ತಿ ಹೋಪಗ ಎಲ್ಲ ವಿಷಯ ವಿವರವಾಗಿ ಕೇಳುಲೆ/ ಎನಗೆ ಹೇಳುಲೆ ಈ ಅಜ್ಜಿ ಇಲ್ಲೆನ್ನೇ? ಹೇಳಿ ಬೇಜಾರ. ಅಜ್ಜಿಯ ಬಗ್ಗೆ ಒಪ್ಪಣ್ಣ ಲ್ಲಿ ಬಕ್ಕು ಹೇಳಿ ಅಪ್ಪ-ಅಬ್ಬೆ ಹೇಳುವಾಗಲೇ ಎನಗೆ ಅಜ್ಜಿಯ ಇದೇ Photo ಇಕ್ಕು ಗ್ರೇಶಿತ್ತಿದ್ದೆ ದೊಡ್ಡ ಚಿಕ್ಕಮ್ಮಾ… ಅಜ್ಜ ಅಜ್ಜಿಯ ಒಟ್ಟಿಂಗೆ ಆಡಿದ ಆಟಂಗೊ, ಅವರ ಹತ್ರೆ ಕೂದು ಕತೆ ಕೇಳಿಯೊಂಡಿದ್ದದು, ಅಪ್ಪ-ಅಬ್ಬೆ, ಅಪ್ಪಚ್ಚಿಯಕ್ಕೋ, ಚಿಕ್ಕಮ್ಮಂದ್ರು, ತಂಗೆಕ್ಕೊ, ತಮ್ಮಂದ್ರೊಟ್ಟಿಂಗೆ ಅಜ್ಜ-ಅಜ್ಜಿಯ ಹಳೆ ನೆಂಪಿನ ಸುದ್ಧಿ ಕೇಳಿದ್ದು, ಮದುವೆ ಆದ ಮೇಲೆ ಯಜಮಾನ್ರು, ಮಕ್ಕಳ ಒಟ್ಟಿಂಗೆ ಅಪ್ಪನ ಮನೆಗೆ ಹೋಗಿ ಎಲ್ಲೋರ ಒಟ್ಟಿಂಗೆ ಕೂದು ಮಾತಾಡಿದ್ದು ಎಲ್ಲ ಒಂದೊಂದೇ ನೆಂಪಾವ್ತು. ಊರಿಂದ ದೂರಲ್ಲಿ ಇಲ್ಲಿಪ್ಪಗ ಊರಿನವರ ನೆಂಪು ಯಾವಾಗಲೂ ಆವ್ತು. ಈಗ ಇನ್ನೂ ಹೆಚ್ಚು ಆವ್ತು.
    ಅಪ್ಪು, ನಮ್ಮೆಲ್ಲರ ಪ್ರೀತಿಯ ಈ ಅಜ್ಜಿಯ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಉತ್ತಮ ಗುಣಂಗಳ ನೆಂಪುಗಳೆ ನಮ್ಮ ಮನಸ್ಸಿನ ಸಮಾಧಾನ ಮಾಡುಗು ಮತ್ತೆ ನಮಗೆ ಮಾರ್ಗದರ್ಶನವೂ ಆಗಲಿ.

    [Reply]

    Sumana Bhat Sankahithlu Reply:

    ಸುರುವಿಂಗೆ ಬರದ್ದು ಸರಿಯಾತಿಲ್ಲೇ ಹೇಳಿ ವಾಪಾಸ್ reply ಲಿ ಮೇಲೆ ಬರದ್ದನ್ನೇ ಸರಿ ಮಾಡಿ ಬರದೆ. ಹಾಂಗೆ ೨ ಸರ್ತಿ ಬಂತು ಒಪ್ಪ. ಕ್ಷಮಿಸಿ.

    [Reply]

    VA:F [1.9.22_1171]
    Rating: 0 (from 0 votes)
  2. ಯಮ್.ಕೆ.

    ಅದಮ್ಯ ಉತ್ಸಾಹಿ, ಪದಕ್ಕೆ ಸಮಾನಾಗಿ ಬಾಳಿ, ತೀರ್ಥ ಅಮವಾಸ್ಯೆ ಇರುಳು ಹೆರಟದು ಕೇಳಿ ,ಒ೦ದು ರೀತಿ ಮಬ್ಬು ಕವಿದಾ೦ಗೆ ಆಯಿದು…………

    [Reply]

    ವಾಣಿ ಚಿಕ್ಕಮ್ಮ

    ವಾಣಿ ಚಿಕ್ಕಮ್ಮ Reply:

    ಒಪ್ಪಂಗೊಕ್ಕೆ ಧನ್ಯವಾದಂಗೋ!!!!

    [Reply]

    VN:F [1.9.22_1171]
    Rating: 0 (from 0 votes)
  3. ಮುಳಿಯ ಭಾವ
    ರಘು ಮುಳಿಯ

    ಅಗಲಿದ ಆತ್ಮಕ್ಕೆ ಶೃದ್ಧಾ೦ಜಲಿ.

    [Reply]

    VA:F [1.9.22_1171]
    Rating: 0 (from 0 votes)
  4. ಪವನಜಮಾವ

    ಈ ಅಜ್ಜಿ ಎನ್ನ ಸೋದರಮಾವನ ಹೆಂಡತಿ ಅಂದ್ರೆ ಎನಿಗೆ ಅತ್ತೆ. ಆನು ಹರಿಯೊಲ್ಮೆ ದೊಡ್ಡತ್ತೆಮ್ಮ ಹೇಳಿಯೇ ಹೇಳಿಕೊಂಡಿತ್ತದ್ದು. ಅವು ನಿಜವಾಗಿಯೂ ಅಮ್ಮನ ಹಾಂಗೆ. ಎನಿಗೆ ಸರಿಯಾಗಿ ಇನ್ನೂ ನೆನಪಿಪ್ಪ ಒಂದು ಉದಾಹರಣೆ ಕೊಡ್ತೆ:

    ಆನು ಮುಂಬಯಿಯ ಭಾಭಾ ಪರಮಾಣೂ ಸಂಶೋಧನಾ ಕೇಂದ್ರಲ್ಲಿ ೧೯೮೧ರಲ್ಲಿ ವಿಜ್ಞಾನಿಯಾಗಿ ಸೇರಿತ್ತಿದ್ದೆ. ಒಂದು ವರ್ಷ್ದ ನಂತ್ರ ಊರಿಗೆ ಬಂದಾಗ ಎಲ್ಲರ ಮನೆಗಕ್ಕೂ ಹೋಗಿತ್ತಿದ್ದೆ. ಹೆಚ್ಚಿನವು ಕೇಳಿದ್‌ದು ಅಲ್ಲಿಂದ, ಅಂದ್ರೆ ಬೊಂಬಾಯಿಂದ ಎಂತ ತೈಂದೆ ಹೇಳಿ. ಆಗಿನ ಕಾಲ ಈಗಿನ ಕಾಲದ ಹಾಂಗಲ್ಲ. ಒಂದು ಟೇಪ್‌ರೆಕಾರ್ಡರ್ ತಂದ್ರೇ ಅದೇ ದೊಡ್ಡ ಸುದ್ದಿ. ಹರಿಯೊಲ್ಮೆಗೆ ಹೋದಾಗ ದೊಡ್ಡತ್ತೆಮ್ಮ ಕೇಳಿದ್ದು ಒಂದೇ ವಿಷಯ -“ಅಲ್ಲಿ ಊಟ ತಿಂಡಿ ಹೇಂಗಿದ್ದು? ಊಟ ಹಿಡಿತ್ತಾ?” ಇದುನಿಜವಾಗಿ ಅಮ್ಮ ಕೇಳುವ ಮಾತು. ಇದು ಮಾತ್ರ ಎನಿಗೆ ಎಂದಿಗೂ ಮರಿವಾಂಗಿಲ್ಲೆ

    [Reply]

    Sumana Bhat Sankahithlu Reply:

    ಪವನಜ ಮಾವ, ಅಪ್ಪು ಅಜ್ಜಿ ಹೀಂಗೆ ಕೇಳುಗಷ್ಟೆ. ಎನಗುದೆ ನೆಂಪು ಬತ್ತು, ಊರಿಂಗೆ ಹೋದಪ್ಪಗ ಹೀಂಗಿಪ್ಪ ಪ್ರಶ್ನೆಗಳ ಎನ್ನ ಹತ್ರುದೆ ಕೇಳುಗು ಅಜ್ಜಿ. ತುಂಬಾ ಪ್ರೀತಿ ಮಾಡುಗು.

    [Reply]

    VA:F [1.9.22_1171]
    Rating: 0 (from 0 votes)
    ವಾಣಿ ಚಿಕ್ಕಮ್ಮ

    ವಾಣಿ ಚಿಕ್ಕಮ್ಮ Reply:

    ಒಪ್ಪಂಗೊಕ್ಕೆ ಧನ್ಯವಾದಂಗೋ!!!! ನಿನ್ನ ಯೋಚನೆ ಸರಿ. ನಿಜವಾದ ಅನ್ವರ್ಥ ನಾಮ

    [Reply]

    VN:F [1.9.22_1171]
    Rating: 0 (from 0 votes)
  5. ಎನಗು ಹಾಂಗೆ aavthu ದೊಡ್ಡಕ್ಕ,,ಲಾಸ್ಟ್ ಗೆ ajjiya ನೋಡ್ಲೆ ಸಿಕ್ಕಿದ್ದು ಸಮಾಧಾನ ಆತು..ಇಂದು ಮಾಸಿಕ ಅಲ್ದಾ….

    [Reply]

    VA:F [1.9.22_1171]
    Rating: 0 (from 0 votes)
  6. vijalakshmi s. bhat, mysore

    ಅಜ್ಜಿ ಆತ್ಮಕ್ಕೆ ಶಾಂತಿ ಕೋರಿ ಭಗವಂತನಲ್ಲಿ ಪ್ರಾರ್ಥನೆ. ಎನ್ನ ಅಮ್ಮ ವಿಷಯ ಹೇಳಿಯಪ್ಪಗ ಖಡಾವಟ್ಟೆ ಬೇಜಾರು ಆತು. ಸಣ್ಣಾದಿಪ್ಪಗ ಪಾಲ್ತೋಡಿಂದ ರಜೆಲಿ ಗುಡ್ಡೆ ಹತ್ತಿ ಇಳುದು ಹರಿಯೋಲ್ಮೆ ಗೆ ಹೋಪದು ಬಾರಿ ಖುಷಿ ಕೊಡುಗು. ಈಗ ನೆನಪುಮಾತ್ರ. ಅಜ್ಜಿಯ ಇಟ್ಟಿಂಗೆ ಇಟ್ಟಿದ್ದ ಮಕ್ಕೋಗೆ ಪುಌಯಕ್ಕೋಗೆ ಮನಸ್ಸಿಂಗೆ ದುಖ ತಡಕ್ಕೊಂಬ ಶಕ್ತಿಯ ಶ್ರೀ ಹರಿ ಕೊಡಲಿ ಹೇಳುದೆ ಎಂಗಳ ಆಶಯ.
    -ವಿಜಯ , ಮೈಸೂರು

    [Reply]

    ವಾಣಿ ಚಿಕ್ಕಮ್ಮ

    ವಾಣಿ ಚಿಕ್ಕಮ್ಮ Reply:

    ಒಪ್ಪಂಗೊಕ್ಕೆ ಧನ್ಯವಾದಂಗೋ!!!!

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ದೇವಸ್ಯ ಮಾಣಿಬಂಡಾಡಿ ಅಜ್ಜಿಮಂಗ್ಳೂರ ಮಾಣಿಚೆನ್ನೈ ಬಾವ°ಹಳೆಮನೆ ಅಣ್ಣಶಾ...ರೀಕಳಾಯಿ ಗೀತತ್ತೆಬಟ್ಟಮಾವ°ಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿಪೆಂಗಣ್ಣ°vreddhiಜಯಶ್ರೀ ನೀರಮೂಲೆವೆಂಕಟ್ ಕೋಟೂರುಪೆರ್ಲದಣ್ಣಶಾಂತತ್ತೆಅಕ್ಷರ°ಶ್ರೀಅಕ್ಕ°ದೊಡ್ಡಭಾವವೇಣೂರಣ್ಣಶೇಡಿಗುಮ್ಮೆ ಪುಳ್ಳಿಬೋಸ ಬಾವಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ