Oppanna.com

ಆನೆಯಿಲ್ಲದ್ದ ಪೂರಂ…!

ಬರದೋರು :   ದೊಡ್ಡಭಾವ°    on   09/10/2010    19 ಒಪ್ಪಂಗೊ

ಕೇರಳದ ತ್ರಿಶ್ಶೂರು ವಡಕ್ಕುನಾಥನ ಸನ್ನಿಧಾನಲ್ಲಿ ವರ್ಷವೂ ಅಪ್ಪ ಭರ್ಜರಿ ಗೌಜಿಯ ತ್ರಿಶ್ಶೂರು ಪೂರಂ ಬಗ್ಗೆ ನಾವು ಈ ಹಿಂದೆಯೇ ಮಾತಾಡಿದ್ದು.
ಈ ಸರ್ತಿ ಎಪ್ರಿಲ್ ೨೪ ಕ್ಕೆ ಆಗಿದ್ದ ಈ ಮಹಾಪೂರಂ ಗೌಜಿ ನೋಡ್ಳೆ ಬೈಲಿಂದ ಎನ್ನ ಹಾಂಗಿಪ್ಪವು ಹೋದ ಸುದ್ದಿ ಓದಿದ ನೆಂಪು ಇಕ್ಕು ನಿಂಗೊಗೆ…

https://oppanna.com/shuddi/vah-pooram

ಕೇರಳಲ್ಲಿ ಯೇವತ್ತೂ ಹರತಾಳ, ಬಂದ್, ಗಲಾಟೆ ಹೇಳಿ ತಮಾಷೆ ಮಾಡ್ತವು ಇದ್ದವು ಸುಮಾರು ಜೆನಂಗೊ ಈಗಳೂ..
ಆದರೆ ಕರ್ನಾಟಕದವರ ಹಾಂಗೆ ಬರೇ ಕುರೆ, ಡರ್ಟಿ ಪೊಲಿಟಿಕ್ಸ್ ಮಾಡ್ತವಿಲ್ಲೆ ತೋರ್ತು ಇಲ್ಲಿ.
ಹಾಂಗೆ ಪ್ರತೀ ಊರುದೇ ಒಂದೊಂದು ನಾಣ್ಯದ ಹಾಂಗೆ ಅಲ್ಲದೋ… ಎರಡೆರಡು ಮೋರೆ.

ಇರಳಿ, ಕೇರಳದವು ಒಳ್ಳೆಯವು ಹೇಳುದು ಎನ್ನ ಉದ್ದೇಶ ಅಲ್ಲ.
ಹೊಸ ಹೊಸ ಪ್ರತಿಭಟನೆಯ ಮಾರ್ಗಂಗಳ ಕಂಡು ಹುಡ್ಕುಲೆ ಅವ್ವು ಉಷಾರಿ ಹೇಳುದು ಸತ್ಯವೇ ಆಯಿಕ್ಕು ತೋರಿತ್ತು ಈ ಶುದ್ದಿ ಸಿಕ್ಕಿಯಪ್ಪಗ…

ಕೇರಳದ ಕಡೇಂಗೆ ಇಡೀ ಜನರ ಆಕರ್ಷಿಸುವ ತ್ರಿಶ್ಶೂರು ಪೂರಂ ಇದ್ದಲ್ಲದೋ, ಅದರಲ್ಲಿ ಆನೆಯೇ ಪ್ರಧಾನ.
ಆದರೆ ಈಗ ಹೊಸ ‘ಎಲಿಫೆಂಟು ಟಾಸ್ಕ್ ಫೋರ್ಸ್’ ಹೇಳಿಗೊಂಡು ನಮ್ಮ ಮೇನಕಾ ಗಾಂಧಿಯ ಜಾತಿಯವು ಅಲ್ಲಿಗೆ ಬಯಿಂದವು, ಆನೆಯ ಬೊಡುಶಿ ಪೂರಂ ಮಾಡ್ಸು ಬೇಡ ಹೇಳಿ ಅಭಿಪ್ರಾಯ ಹಂಚುಲೆ ಸುರು ಮಾಡಿದ್ದವು.
ಈ ಶುದ್ದಿ ಕೇಳಿ ತ್ರಿಶ್ಶೂರಿನ ಜವ್ವನಿಗರಿಂಗೆ ಎಳಗಿತ್ತು.
ಕೇರಳ ರಾಜ್ಯ ಆಯನ ಸಹಯೋಗ ಸಮಿತಿಯ ಬ್ಯಾನರು ಕಟ್ಟಿಗೊಂಡು ಆನೆ ಇಲ್ಲದ್ದೆ ಪೂರಂ ಬೇಡ ಹೇಳಿ ಒಂದು ಪ್ರತಿಭಟನೆ ಮಾಡಿದವು ಮೊನ್ನೆ ಸೋಮವಾರ.
ಅದರ ಪಟ ಇಲ್ಲಿ ತಂದು ನೇಲುಸಿದ್ದೆ, ಆನೆಯಿಲ್ಲದ್ದ ಪೂರಂ ಹೇಂಗಿಕ್ಕು ಹೇಳಿ ಒಂದರಿ ನೋಡಿಕ್ಕಿ…

ನಿಂಗಳ,
~
ದೊಡ್ಡಭಾವ

19 thoughts on “ಆನೆಯಿಲ್ಲದ್ದ ಪೂರಂ…!

  1. enna computer problemminda English font upayogisutte.Raghuvina padya keli baari koshi aatu.eegaana Karnatakava kaambaaga haratalavo karataalavo engo ningalinda savira paalu punyavantaru. hingidda rajakiya ondu dinakku keralalli nedeya.obbobban Antoni hangippa saatwikaru enduu keralalli olkondiddavu.khanditha Karunakarana haangiddavuu eddavu.Yadiyuurappana haange sikkida avakaashava haalu madiyonda Rajakaaraniye elle helakku.Modi haange helta ee manushyange adara neralina hinde kuudaa hopa yoogyate elle.oppangalottinge

  2. ಒಳ್ಳೆ ಸಮಾಚಾರ,ಧನ್ಯವಾದ ಭಾವ,
    ಮನೇಕಾ ಗಾಂಧಿ ಹೇಳೋದು ಸರಿಯೇ ಅಲ್ಲದೋ?ವೀರಪ್ಪನ್ ನ ಹಾಂಗೆ ಸಪಾಯಿ ಮಾಡಿ ಬೇಕಾರೆ,ಜೀವ೦ತ ಬೊಡುಷಿ ಚಿತ್ರಹಿ೦ಸೆ ಮಾಡೆಡಿ.ಹೆಂಗೆ??

    ಕೇರಳದ ಹರತಾಳ ಒಳುದವರ ತಾಳ
    ಊರಳಿದರೆಂತ ಭಿನ್ನರದೊಂದು ಕೋಲ
    ಊರಿಂದ ಊರಿಂಗೆ ಸುತ್ತಿ ಹೊಸ ಮೇಳ
    ಜೋರಿಲಿ ಜಡಿಯೆಕ್ಕು ಕೈಗಿವರ ಕೋಳ

  3. {….ಕರ್ನಾಟಕದವರ ಹಾಂಗೆ ಬರೇ ಕುರೆ}
    ಇದು ಎ೦ತ್ತ ಅರ್ಥಾ??? ಕರ್ನಾಟಕಲಿ ಇಪ್ಪವು ಎಲ್ಲ ಕುರೆ ಹೇಳಿಯ?? ಉಮ್ಮಪ್ಪ.. ಯೆನ್ಸೊ ಏನೊ….!!!
    ಎನಗೊ೦ತಿಲ್ಲೆ… 😀 😛

    1. ಏ ಬೋಸಜ್ಜ !! ನಿಂಗಳ ಪಟಲ್ಲಿ ನೋಡಿರೆ ನಿಂಗೋಗೆ ಗೊಂತಾವುತ್ತಿಲ್ಲೆಯ ನಿಂಗೋ ಕಾಮ್ಬಲೆ ಬರೇ ಕುರೆ ಹೇಳಿ !!!
      ಎಡಿಗಾರೆ ಒಂದರಿ ಚೆಂದಕ್ಕೆ ಮಿಂದು ಒಪ್ಪ ಆಗಿ ಬನ್ನಿ ನೋಡೋ

      1. ಹಾ…!! ರಾಜಾರಾಮ ಭವ.. ಅನು ದಿನಾ ಹೊಳೆಲಿ ಮಿ೦ದು ಜಪ ಮಾಡ್ತೆ ಆತೊ…!!! ಮತ್ತೆ ಹೊಳೆ ರಜಾ ಕಲ೦ಕು…!!! ಮಳೆ ಅಲ್ಲದೊ ಹೇಳಿ…!!

        1. ಆಹಾ,
          ಪ್ರಭಾತೇ ಬೋಚ ದರ್ಶನಂ,ಎಲ್ಲಿ ತಲೆಮರೆಸಿತ್ತಿದ್ದೆ ಭಾವಾ ,ಭಿನ್ನರ ಒಟ್ಟಿ೦ಗೆ ಗೋವೆಲಿ ತಲೆ ಆಂಜಿಗೊಂಡಿತ್ತು ಹೇಳಿ ಆರೋ ಹೇಳಿದವು..

          1. ಮುಳಿ ಅಣ್ಣಗೆ ನಮಸ್ಕಾರ… 😀
            ಮೊನ್ನೆ ಮಳೆಗೆ ಹೊಳೆಲಿ ಮಿ೦ದು…. ರಜಾ ಉಶಾರಿ ಇತ್ತಿದಿಲ್ಲೆ….. ಇಗ ತಕ್ಕಮಟ್ಟಿಗೆ ಸರಿಯಾದೆ…:D 😛

        2. {ಅನು ದಿನಾ ಹೊಳೆಲಿ ಮಿ೦ದು}
          ಅದಕ್ಕೇ ನೀರು ಕಲಂಕಿದ್ದು ಬೋಸಣ್ಣೋ..!! 😉
          ತ್ರಿಶೂರಿನ ಆನೆಗೊ ಮಿಂದ ಹಾಂಗೆ ಮೀತ್ತೆ ಆಯಿಕ್ಕು ನೀನು!

    2. ಈಗಾಣ ರಾಜಕೀಯ ನೋಡಿರೆ “ಕುರೆ” ಮಾತ್ರ ಅಲ್ಲ “ಕುದುರೆ”ಗಳು ಕೂಡಾ.

      1. ಶರ್ಮಪ್ಪಚ್ಚಿ… ಈ ಕರ್ಮದ ರಾಜಕೀಯ ಎಲ್ಲ ನವಗರದ್ಯ ಅಪ್ಪಚಿ….!! ಅನು ಎ೦ತ ಇದ್ದರು.. ತೊಟಲಿ ಕೆಲಸ ಮಾಡುವೆ… ಗೊವಿ೦ಗೆ ಹುಲ್ಲು ಹಾಕುವೆ… ಸಗಣ ಹೆರ್ಕುವೆ ಅದರ ತಟ್ಟಿ ಬೆಶಿಲ್ಲಿ ಹಾಕಿ ಬೆರಟ್ಟೆ ಮಾಡುವೆ..!! ಮತ್ತೆ ಕೋಲೆ ಬಸವನ ಹಾ೦ಗೆ ತಿರುಗುವೆ..!!

  4. ಹಿಂದುಗಳ ಹಬ್ಬಕ್ಕೆ ಹೀಂಗಿಪ್ಪ ಕಾನೂನು ಎಲ್ಲಾ ಹಾಕಲೆ ಎಡಿಗು. ಇವಕ್ಕೆ ಎಡಿಗಾರೆ “ಬಕ್ರಿ” ಲೆಕ್ಕಲ್ಲಿ ಪ್ರಾಣಿಗಳ ಕೊಲ್ಲುವುದರ ನಿಲ್ಸಲಿ ನೋಡೋ.
    ಆನೆಗಳ ಸರಿಯಾಗಿ ಸಾಂಕಿ ಹೇಳ್ಲೆ ಅಕ್ಕಲ್ಲದ್ದೆ, ಅದರ ಜಾತ್ರೆಲಿ ಉಪಯೋಗ್ಸಲೇ ಆಗ ಹೇಳುವದು ಎಷ್ಟು ಸರಿ? ಕಷ್ಟದ ಕೆಲಸಂಗೊಕ್ಕೆ ಆನೆಗಳ ಉಪಯೋಗ ಮಾಡ್ತವಿಲ್ಲೆಯಾ?
    ಕೇರಳದ ಬಂದ್ ಗಳ ಬಗ್ಗೆ ಹೇಳಿ ಪ್ರಯೋಜನ ಇಲ್ಲೆ. ಯಾವಾಗ ನೋಡಿರೂ ಒಂದಲ್ಲ ಒಂದು ಕಾರಣಕ್ಕೆ ಹರತಾಳ. ಮಂಗಳೂರಿಂದ ಬಸ್ಸಿಲ್ಲಿ ಹೆರಟರೆ ಕುಂಬ್ಳೆಗೆ ಎತ್ತುಗು ಹೇಳ್ತ ಧೈರ್ಯ ಇಲ್ಲೆ. ಎತ್ತಿದರೂ ವಾಪಾಸು ಬಪ್ಪಲೆ ಬಸ್ ಸಿಕ್ಕಿಗು ಹೇಳ್ತ ಗ್ಯಾರಂಟಿ ಅಂತೂ ಇಲ್ಲೆ. ಇದು ಸ್ವಂತ ಅನುಭವ.
    ಶರ್ಮಪ್ಪಚ್ಚಿ

    1. IT IS 100% CORRECT. ONE CANNOT GO IN KERALA BELIEVING THE JOURNEY BY BUS. KASARAGOD BECAME WORST, STANDS TOP
      THE EDUCATION IN KERALA IS ALSO LIKE THE BUS JOURNEY. SSLC PASSED STUDENT CANNOT WRITE AND READ ENGLISH! ALSO, SOME GOVT. CIRCULARS.( GOD ONLY KNOWS THE MEANING .IT HAS NO “HEAD”)

      1. ತಲೆ ಇಲ್ಲೆಯೋ?
        GOD’s OWN COUNTRY ಅಲ್ಲದೋ ಭಾವ, ನೋಟೀಸು ಅರ್ಥ ಆಯೆಕ್ಕಾರೆ ದೇವರು ಇಂಗ್ಲಿಷು ಕಲ್ತಿರೆಕ್ಕು,ಕೇರಳಲ್ಲಿಯೇ !!

        1. {…GOD’s OWN COUNTRY}
          ಓಹೊ… ಅ೦ಬಗ ಮುಕ್ಕೊಟಿ ದೇವಾದಿ ದೇವತೆಗೊ ಕೇರಳಲ್ಲಿ ಇಪ್ಪದೊ??? 😀 😛

          1. ಸಂಶಯವೇ ಇಲ್ಲೇ ಭಾವಾ, ದೊಡ್ದಭಾವ ಹೇಳಿದ್ದವಿಲ್ಲೆಯೋ ಕೇರಳಲ್ಲಿ ಯೇವತ್ತೂ ಹರತಾಳ.
            ಹರ ಹರಾ ಹೇಳಿ ವಾರಕ್ಕೆ ಮೂರು ದಿನ ತಾಳ ಹಾಕಿ ಭಜನೆ ಮಾಡುತ್ತವು ಈ ದೇವತೆಗೋ.

      2. ಭಾವಯ್ಯ ಬರದ್ದು ಲಾಯಿಕ ಆಯಿದು. ನಮ್ಮ ಭಾಷೆಲಿ ಹೇಳಿರೆ ಚೆಂದ ಅಲ್ಲದಾ? ಹಾಂಗೆ ಬರವಲೆ ಪ್ರಯತ್ನ ಮಾಡಿರೆ ಒಳ್ಳೆದು.
        ಕನ್ನಡ ತತ್ರಾಂಶ ಬೇಕಾರೆ baraha 9.0 ಇನ್ಟರ್ ನೆಟ್ಟಿಲ್ಲಿ ಸಿಕ್ಕುತ್ತು.(ಉಚಿತ ತತ್ರಾಂಶ) ಇಂಗ್ಲೀಶ್ ಬರದ ಹಾಂಗೇ ಬರದರೆ ಆತು.
        IT HAS NO “HEAD” ಬೀಲ ಇರ್ತಾಯಿಕ್ಕು ಅಲ್ಲದಾ ಭಾವ?

  5. ನಿಜವಾಗಿಯೂ ಪ್ರತಿಬಟಿಸೆಕ್ಕಾದ ವಿಶಯವೆ..ಅನಗೊಕ್ಕೆ ದಿನಗಟ್ಟಲೆ ಆಹಾರ ಕೊಡದ್ದೆ ಕೆಲಸ ಮಾಡುಸುತ್ತವು..ಕೆಲವು ಸರ್ತ್ತಿ ಹಶು ತಡೆಯದ್ದೆ ಅವಾಂತರಂಗಳೂ ಆದಿದ್ದು…ಕೇರಳದ ರಾಜಕೀಯದ ಬಗ್ಗೆ ಮಾತಾಡದ್ದೆ ಇಪ್ಪದು ಒಳ್ಲೆದು ಅದರಿಂದ ಕರ್ನಾಟಕವೇ ವಾಸಿ…ಅಲ್ಲಿ ಕೇವಲ ಬೈಕೊಳ್ಳುತ್ತವು…ಇಲ್ಲಿ ಕೊಲ್ಲುತ್ತವು..ವಾರಕ್ಕೊಂದು ಬಂದ್ ಆಗಲೆ ಬೇಕು…

  6. ತ್ರಿಶೂರ್ ಪೂರ೦ ನೋಡಿದವಕ್ಕೆ ಮಾ೦ತ್ರ ಗೊ೦ತಕ್ಕಷ್ಟೆ ಆ ವೈಭವ.ಬೆಡಿ ಕೊಡೆ ಪಗರ್ಚೆಯ ಆನಗೊ ಅದ್ಬುತ.ಸ೦ಶಯವೇ ಇಲ್ಲೆ ಇದಿಲ್ಲದ್ರೆ ಪೂರ೦ ನೋಡ್ಲೆ ಜೆನ ಬಕ್ಕೋ ಹೆಳಿಯೆ ಸ೦ಶಯ.ದೊಡ್ಡ ಭಾವ೦ ತ್ರಿಶ್ಹೂರ್ ಬೆಡಿಯಷ್ಟೇ ದೊಡ್ಡ ಬೆಡಿ ಹಾಕಿದ್ದ೦.ಒಪ್ಪ೦ಗಳೊಟ್ಟಿ೦ಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×