Oppanna.com

ಡಾ.ಕೆ.ಜಿ ಭಟ್

ಬರದೋರು :   ಕೇಜಿಮಾವ°    on   03/07/2011    11 ಒಪ್ಪಂಗೊ

ಒಪ್ಪಣ್ಣನ ಬೈಲಿಲ್ಲಿ “ಒಪ್ಪಣ್ಣ” ಹೇಳ್ತ ಹೆಸರು ನೋಡುವಾಗಳೇ ಎನಗೆ ರಜಾ ಅಸಮಧಾನ ಆತು.ಆನು ಐವತ್ತು ವರ್ಷಂದ ಇತ್ಲಾಗಿ ಒಪ್ಪಣ್ಣ ಹೇಳಿ ನೆಂಪು ಮಾಡಿಯೊಂಬ ವ್ಯಕ್ತಿ ಇದ್ದ°
ಎನ್ನ ನೆಂಪಿಲ್ಲಿ ಆನು ಬೇರೆ ಯೇವ ಡಾಕ್ಟ್ರ ಹತ್ತರೆ ಹೋದ್ದೂ ಇಲ್ಲೆ.ಅಲ್ಲದ್ದರೆ ಅರುವತ್ತನೇ ದಶಕಲ್ಲಿ ಅಲ್ಲಿಯೋ ಇಲ್ಲಿಯೋ ಒಬ್ಬ° ಡಾಕ್ಟ್ರು.ಬಸ್ಸು,ಕಾರು ಇಲ್ಲದ್ದ ಕಾಲ.ಅಂಬಗ ಈಗಾಣ ಹಾಂಗೆ ಮೆಡಿಕಲ್ ಶೋಪುಗಳೋ,ನೆತ್ತರು ಪರೀಕ್ಷೆ ವ್ಯವಸ್ತೆಯೋ,ಎಕ್ಸರೆಯೋ ಇಲ್ಲದ್ದ ಕಾಲಲ್ಲಿ ಮನಗೆ ಬಂದು ಎಲ್ಲಾ ಮದ್ದುಗಳ ಪೆಟ್ಟಿಗೆಯನ್ನೇ ಒಟ್ಟಿಂಗೆ ತಂದು ಮದ್ದು ಕೊಟ್ಟಿಕ್ಕಿ ಖಂಡಿತ ಗುಣ ಅಕ್ಕು ಹೇಳ್ತ ಧೈರ್ಯ ಹೇಳಿ ಹೋಗಿಯೊಂಡಿದ್ದ, ಎನಗೆ “ಒಪ್ಪಣ್ಣ ಮಾವ°” ಹೇಳಿ ಗೊಂತಾದ ಸುರುವಾಣ ಜನ ಎಂಗಳ ಮಾವ° .ಹಾಂಗಾಗಿ ಒಪ್ಪಣ್ಣ ಹೇಳಿ ಇನ್ನೊಬ್ಬ° ಹೇಳಿಯೊಂಬಗ ರಜಾ ಅಸಮಧಾನ ಆದ್ದು.
ಬಹುಶಃ ದಾಕ್ಟ್ರಪ್ಪಲೇ ಹುಟ್ಟಿದ ಹಾಂಗಿಪ್ಪ ವ್ಯಕ್ತಿತ್ವ ಎಂಗಳ ಒಪ್ಪಣ್ಣ ಮಾವಂದು.
ಅವನ ಒಂದು ನೆಗೆ,ಒಂದು ಮಾತು ಸಾಕು ರೋಗ ಗುಣ ಅಪ್ಪಲೆ.
ನಮ್ಮ ಸುತ್ತು ಮುತ್ತಿಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ವೃತ್ತಿಲಿ ಇಪ್ಪ ಡಾಕ್ಟ್ರಕ್ಕಳ ಪೈಕಿಲಿ ಇವ° ಒಬ್ಬ°,(ಹಾಂಗೆ ಹೇಳಿ ಹೆಚ್ಚು ಜೆನ ಇಲ್ಲೆ)
ಉಪ್ಪಿನಂಗಡಿಲಿ ಕಳುದ ಐವತ್ತೊಂದು ವರ್ಷಂದ ನಿರಂತರವಾಗಿ ಕೆಲಸ ಮಾಡಿಯೊಂಡಿಪ್ಪವ°,ದಿನದ ಇಪ್ಪತ್ನಾಲ್ಕು ಘಂಟೆಯೂ ಸೇವೆಗೆ ತಯಾರಿಪ್ಪವ°,ಇಂದ್ರಾಣ ಕಾಲಲ್ಲಿ ಅಪ್ರೂಪವೇ.
ಮೊನ್ನೆ ಒಂದು ಎರಡು ತಿಂಗಳಾಯಿಕ್ಕು,ಒಂದು ರೋಗಿ ,ಅದಕ್ಕೆ ಕಾಲಿಲ್ಲಿ ಹುಣ್ಣಾಗಿ,ಹುಳುವಾಗಿತ್ತಡ,”ನಿಮ್ಮ ಮಾವ ಅಂತೆ,ಬೇಂಡೇಜ್ ಮಾಡಿ ಬಿಟ್ಟಿದ್ದಾರೆ,ಇನ್ನು ನಿಮ್ಮ ಹತ್ತ್ರ ಮದ್ದಿಗೆ ಹೋಗು ಅಂತ ಕಳ್ಸಿದ್ರು”ಹೇಳಿಯೊಂಡು ಬಂತು.ಒಬ್ಬ° ಎಪ್ಪತ್ತೈದು ವರ್ಷ ಆದ ಡಾಕ್ಟ್ರು ಅಷ್ಟು ಲಾಯ್ಕ ಕ್ಲೀನ್ ಮಾಡಿ ಬೇಂಡೇಜ್ ಮಾಡಿದ್ದು ನೋಡಿ “ಹಾಟ್ಸೋಫ಼್” ಹೇಳಿದೆ.ಅವಂಗೆ ಅದರ ಮಡೆಕ್ಕಾದ ಅಗತ್ಯ ಇತ್ತೇ ಇಲ್ಲೆ,ಆದರೆ ಒಪ್ಪಣ್ಣ ಮಾವಂಗೆ ಆರನ್ನೂ ತನಗೆ ಎಡಿಗಾರೆ ಇನ್ನೊಬ್ಬರ ಹತ್ತರೆ ಹೋಗಿ ಹೇಳಿ ಅಭ್ಯಾಸವೇ ಇಲ್ಲೆ.
ಅಷ್ಟೂ ಕೆಲಸದ ಮೇಲೆ ಪ್ರೀತಿ ಇಪ್ಪವರ ನೋಡ್ಳೆ ಸಿಕ್ಕುದು ಇಂದ್ರಾಣ ಕಾಲಲ್ಲಿ ಕಷ್ಟವೇ.
ಹೀಂಗಿದ್ದವು ಇಪ್ಪ ಕಾರಣ ಇಂದು ವೈದ್ಯಕೀಯ ವೃತ್ತಿಗೊಂದು ಮರ್ಯಾದಿ ಸಿಕ್ಕುತ್ತು.
ಹಾಂಗೆ ಹೇಳಿ ವ್ಯಾವಹಾರಿಕವಾಗಿ ಮುಗ್ಧ ಅಲ್ಲವೇ ಅಲ್ಲ.ಅವನ ಭಿನ್ನವಾಗಿ ಯೋಚನೆ ಮಾಡ್ತ ಉದಾಹರಣೆಗೊ ಎಷ್ಟೋ,ಮನ್ನೆ ಎಂಗಳ ಸುಬ್ಬಣ್ಣ ಭಾವನ ಮಗಳ ಮದುವಗೆ ಹೋಪ ವಿಷಯ ಬಪ್ಪಗ ಎನ್ನ ಹತ್ತರೆ ಹೇಳಿದ°,ನಾವು ಪುತ್ತೂರಿಂದ ಒಟ್ಟಿಂಗೆ ಹೋಪ°,ಡ್ರೈವ್ ಮಾಡ್ಳೆ ಉದಾಸನ ಆವುತ್ತು,ಎನಗೆ ಡ್ರೈವರ್ ಆದ ಹಾಂಗೂ ಆತು ಹೇಳಿ.ಹಾಂಗೆ ವಾಪಾಸು ಬಪ್ಪಗ ನಮ್ಮ ಬೈಲಿನ ಆಚ ಕರೆಯ ಮಾವನೂ ಇತ್ತಿದ್ದ,ಹಾಂಗೇ ಮಾತು ತಿರುಗಿ ಹಣ ಹೂಡಿಕೆಯ ವಿಷಯಕ್ಕೆ ಬಂತು.ಅಂಬಗ ಎನ್ನ ಕೇಳಿದ,”ಆನಿಲ್ಲದ್ದರೆ ನೀನು ಹೇಂಗೆ ಬತ್ತಿತೆ” ಹೇಳಿ.ಎನಗೆ ಎನ್ನ ಬಾಡಿಗೆ ಕಾರಿದ್ದಲ್ಲದೋ ಅದರಲ್ಲಿ ಬತ್ತಿತೆ ಹೇಳಿದ್ದಕ್ಕೆ ಅವನ ಸಲಹೆ-“ನೀನು ಇಂದು ನಿನ್ನ ಕಾರಿಂಗೆ ಕೊಡ್ತ ಬಾಡಿಗೆಯ ಶೇರಿಲ್ಲಿಯೋ ಬೇರೆಂತರಲ್ಲಿಯೋ ಹಾಕೆಕ್ಕು.ಅದಲ್ಲದ್ದೆ ಬೇರೆ ಪೈಸವ ಧೈರ್ಯ ಇಲ್ಲದ್ದ ಬಾಬಿಲ್ಲಿ ಹಾಕಲಾಗ!”.
ಇದು ಎಂಗಳ ಒಪ್ಪಣ್ಣ ಮಾವಂಗೇ ಬಪ್ಪ ಯೋಚನೆ.
ಹಾಂಗಾಗಿ ಯಾವದೇ ಸಮಸ್ಯೆ ಬಂದರೂ ನೆಂಪಪ್ಪ ವ್ಯಕ್ತಿಯೂ ಅಪ್ಪು.
ಎಪ್ಪತ್ತೈದು ವರ್ಷ ಹಿಂದೆ ಈಗ ಕೇರಳಲ್ಲಿಪ್ಪ ನೆಟ್ಟಣಿಗೆ ಹೇಳ್ತ ಹಳ್ಳಿಲಿ ಹುಟ್ಟಿ ಆ ಕಾಲಲ್ಲಿ ಮದ್ರಾಸಿಲ್ಲಿ ವೈದ್ಯಕೀಯ ಶಿಕ್ಷಣ ಮುಗಿಷಿ ಅರುವತ್ತನೇ ಇಸವಿಲಿ ಉಪ್ಪಿನಂಗಡಿಲಿ ವೃತ್ತಿ ಸುರು ಮಾಡಿದ ಡಾ.ಕೆ.ಜಿ.ಭಟ್ ಇವು ಕೈಪ್ಪಂಗಳ ಗೋಪಾಲ ಕೃಷ್ಣ,ಶಂಕರಿ ಅಮ್ಮನ ಮಗ°.
ಇವು ನೂರು ವರ್ಷ ಬಾಳಿ ಊರಿನೋರಿಂಗೆ ಧೈರ್ಯ ತುಂಬುವ ಕೆಲಸ ಮಾಡಿಯೊಂಡಿರಳಿ ಹೇಳಿ ಹಾರೈಕೆ.

ಕೇಜಿಮಾವ°
Latest posts by ಕೇಜಿಮಾವ° (see all)

11 thoughts on “ಡಾ.ಕೆ.ಜಿ ಭಟ್

  1. ಎನಗೆ ಮದುವೆ ಆಗಿ ೨೬ ವರ್ಷ ಆತು,ಅದು ಕೈಪ್ಪಂಗಳಂದ, ಈ ಡಾಕ್ಟ್ರ ಮನೆ ಹತ್ತರಂದಲೇ…. ಆದರೆ , ಈ ಡಾಕ್ಟರರ ಪರಿಚಯ ಸುಮಾರು ೪೬ ವರ್ಷಂದ …!! ಭಲೇ ಡಾಕ್ಟರು. ಶುದ್ದ ಹತ್ತಿಯ ಬೆಳಿ ಪ್ಯಾಂಟ್ ,ಶರ್ಟ್ ನಿತ್ಯ…, ..ಅಷ್ಟೇ ಸರಳ ವ್ಯಕ್ತಿತ್ವ…….ಸಾಧನೆಗಳಲ್ಲಿ , ಸಂಪಾದನೆಗಳಲ್ಲಿ ಸಂತೃಪ್ತಿ ಕಂಡ ಮಹಾ ಚೇತನ. ಇವರ ಕೀರ್ತಿ ನಮ್ಮ ಸಮಾಜ ಆಸ್ತಿ !!

  2. ನಮ್ಮ ಉಪ್ಪಿನಂಗಡಿಯ ‘ಭಟ್ಸ್ ನರ್ಸಿಂಗ್ ಹೋಮ್’ನ ಡಾ.ಕೆ.ಜಿ ಭಟ್ರ ಬಗ್ಗೆ ಓದಿ ಖುಷಿ ಆತು. ಅಂದು ಸುರುವಿಂಗೆ ನಿಂಗ ಬೈಲಿಂಗೆ ಬಂದಪ್ಪಗ ಎನಗೆ ಎಂಗಳ ಊರಿನ ಈ ಡಾಗುಟ್ರನ್ನೇ ನೆನಪ್ಪಾಗಿದ್ದತ್ತು. 🙂

    1. ಎಂಗೊ ಒಂದೇ ಹೆಸರಿನವು,ಒಂದೇ ವೃತ್ತಿಯವಾದ ಕಾರಣ ತುಂಬ ಜೆನ ಹಾಂಗೇ ತಿಳ್ಕೊಳ್ತವು.ಹಾಂಗಾರೂ ಎನಗೆ ಅವರ ಹೆಸರಿನ ಗಾಳಿ ಬಡಿಯಲಿ.

  3. ಡಾ.ಕೆ.ಜಿ.ಭಟ್, ಡಾ.ಕೆ.ಜಿ.ಭಟ್ ಅವರ ಬಗ್ಗೆ ಬರದ ಪರಿಚಯ ಲೇಖನ ಲಾಯಕಿತ್ತು. ಒಪ್ಪ ಅಣ್ಣ ಆಗಿದ್ದ ಆರನ್ನುದೆ ಒಪ್ಪಣ್ಣ ಹೇಳ್ಲಕ್ಕು. ಒಪ್ಪಣ್ಣ ಡಾಕ್ಟ್ರಿಂಗೆ ಅಭಿನಂದನೆಗೊ. ಹೀಂಗಿಪ್ಪ ಡಾಕ್ಟ್ರಕ್ಕೊ ನಮ್ಮ ಸಮಾಜಕ್ಕೆ ತುಂಬಾ ಜೆನ ಬೇಕಾಯಿದೀಗ.

  4. ವೈದ್ಯೊ ನಾರಾಯಣೊ ಹರಿಃ – ಈ ಮಾತು ಒಪ್ಪಣ್ಣ ಡಾಗ್ಟ್ರು ಹಾಂಗಿಪ್ಪವರ ನೋಡಿಯೇ ಚಾಲ್ತಿಗೆ ಬಂದದಾಯಿಕ್ಕು.!
    ಡಾಗ್ಟ್ರಿಂಗೆ ಅಭಿನಂದನೆಗೊ.

  5. ಸಮಾಜಕ್ಕೆ ಮಾದರಿಯಾಗಿಪ್ಪ ಈ ಹಿರಿಯ ವ್ಯಕ್ತಿಗಳ ಪರಿಚಯ ಮಾಡಿದ್ದಕ್ಕೆ ಧನ್ಯವಾದ ಮಾವಾ.

  6. ಅವರ ಪರಿಚಯ ಓದಿ ಸಂತೋಷ ಆತು.

  7. ಮದಾಲು, ಡಾ. ಒಪ್ಪಣ್ಣಜ್ಜಂಗೆ ಸಲಾಂ. ಉತ್ತಮನೋರ್ವನ ಪರಿಚಯಿಸಿದ್ದಕ್ಕೆ ಡಾ.ಕೇಜಿಮಾವಂಗೆ ಧನ್ಯವಾದ.

    ಇವರು ಅನುಕರುಣೀಯರು ಹೇಳಿ ನಮ್ಮ ಒಪ್ಪ. ಮದಾಲಾಣ ಕಾಲದವು ಡಾಕ್ಟರ್ ಹೇಳ್ವದಕ್ಕಿಂತ ವೈದ್ಯರು ಹೇಳುದೇ ಸರಿ. ವೈದ್ಯರು ಹೇಳುವಾಗ ಒಂದು ಪ್ರೀತಿ ಕೊಂಗಾಟ ಬತ್ತು. ಅವರತ್ರೆ ಇಪ್ಪಷ್ತು ಸಮಾಜ ಸೇವಾ ಮನೋಭಾವ ಡಾಕುಟ್ರುಗಳತ್ರೆ ಇಲ್ಲೆ (ಕಾರಣಂಗೊ ಏನೇ ಇರಲಿ) ಹೇಳಿ ಹೇಳಿರೆ ಹೆಚ್ಚಾವುತ್ತರೆ ವಿರಳ / ಕಮ್ಮಿ ಹೇಳಿ ಹೇಳಿರೆ ಹೆಚ್ಚಾಗ.

  8. ಒಪ್ಪಣ್ಣ ಡಾಕ್ಟರ್ ರ ಗುರುತು ಮಾಡಿಸಿಕೊಟ್ಟ ಕೇಜಿಮಾವಂಗೆ ವಂದನೆಗಳು.

    -ಪ. ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

  9. ರೋಗಿಯ ಮ್ಯಮುಟ್ಟುವ ಮೊದಲೇ ಪರೀಕ್ಶೆ ಪಟ್ಟಿ ಬರೆವ ಕಾಲಲ್ಲಿ ಇವರ ಹಾಂಗೆ ಇಪ್ಪವರ ನೋಡಿ ಹೊಸ ಡಾಕ್ತಕ್ಕೊ ಕಲಿವಲೆ ತುಂಬಾಇದ್ದು.
    ರುಪಾಯಿಯ ಮೋರೆನೋಡಿ ರೋಗಿಯ ಮರವಲಾಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×