Oppanna.com

ಹರಿಯೊಲ್ಮೆ ಅಜ್ಜಿ

ಬರದೋರು :   ವಾಣಿ ಚಿಕ್ಕಮ್ಮ    on   05/09/2014    12 ಒಪ್ಪಂಗೊ

ವಾಣಿ ಚಿಕ್ಕಮ್ಮ
Latest posts by ವಾಣಿ ಚಿಕ್ಕಮ್ಮ (see all)

ಹರಿಯೊಲ್ಮೆ ದೊಡ್ದಬ್ಬೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಮನೆತನದ ‘ಹರಿಯೊಲ್ಮೆ ‘ನಿವಾಸಿ ಗೌರೀ ಅಮ್ಮ ಸೋಮವಾರ (ತಾರೀಖು ೨೫-೦೮-೨೦೧೪) ಇರುಳು ಸುಮಾರು ೮. ೧೫ರ ಹೊತ್ತಿಂಗೆ ದೈವಾಧೀನರಾಯಿದವು. ಮೃತರಿಂಗೆ ೮೫ ವರ್ಷ ಪ್ರಾಯ ಆಗಿದ್ದತ್ತು. ಅವು ಮೂರು ಜನ ಮಗಂದ್ರನ್ನೂ,ಒಂದು ಮಗಳನ್ನೂ,ಸೊಸೆಯಕ್ಕೊ,ಕುಟುಂಬಸ್ಥರು,ನಂಟರು,ಇಷ್ಟರು ಹೇಳಿ ದೊಡ್ಡ ಬಳಗವನ್ನೇ ಬಿಟ್ಟು ಹೋದ ಎಲ್ಲೋರ ದೊಡ್ಡ ಅಬ್ಬೆ ಈ ಹರಿಯೊಲ್ಮೆ ದೊಡ್ದಬ್ಬೆ. ಸಣ್ಣ ಮಕ್ಕೊಗೆ ಎಲ್ಲಾ ಹರಿಯೊಲ್ಮೆ ಅಜ್ಜಿ. ಶ್ರೀ ಗುರುಗ ಈ ಮನೇಲಿ ಭಿಕ್ಷಾ ಸೇವೆ ಸುಮಾರು ಹತ್ತು ವರ್ಷದ ಹಿಂದೆ ಸ್ವೀಕರಿಸಿ ಶಿಷ್ಯ ಸಂದೋಹಕ್ಕೆ ಆಶೀರ್ವಾದ ಮಾಡಿದ ಈ ಹರಿಯೊಲ್ಮೆಲಿ ನಿತ್ಯವೂ ಹರಿಯ ಒಲುಮೆ ಇರಲಿ ಹೇಳಿ ಅಶೀರ್ವಚನಲ್ಲಿ ಹೇಳಿತ್ತಿದ್ದವು. ಇಂತಹ ಮನೆ ಬೆಳಗಿದ ಗೌರೀ ಅಮ್ಮನ ಆತ್ಮಕ್ಕೆ ಚಿರ ಶಾಂತಿಯ ಆ ಪರಮಾತ್ಮ ಕರುಣಿಸಲಿ ಹೇಳಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಪ್ರಾರ್ಥನೆ.

12 thoughts on “ಹರಿಯೊಲ್ಮೆ ಅಜ್ಜಿ

  1. ಅಜ್ಜಿ ಆತ್ಮಕ್ಕೆ ಶಾಂತಿ ಕೋರಿ ಭಗವಂತನಲ್ಲಿ ಪ್ರಾರ್ಥನೆ. ಎನ್ನ ಅಮ್ಮ ವಿಷಯ ಹೇಳಿಯಪ್ಪಗ ಖಡಾವಟ್ಟೆ ಬೇಜಾರು ಆತು. ಸಣ್ಣಾದಿಪ್ಪಗ ಪಾಲ್ತೋಡಿಂದ ರಜೆಲಿ ಗುಡ್ಡೆ ಹತ್ತಿ ಇಳುದು ಹರಿಯೋಲ್ಮೆ ಗೆ ಹೋಪದು ಬಾರಿ ಖುಷಿ ಕೊಡುಗು. ಈಗ ನೆನಪುಮಾತ್ರ. ಅಜ್ಜಿಯ ಇಟ್ಟಿಂಗೆ ಇಟ್ಟಿದ್ದ ಮಕ್ಕೋಗೆ ಪುಌಯಕ್ಕೋಗೆ ಮನಸ್ಸಿಂಗೆ ದುಖ ತಡಕ್ಕೊಂಬ ಶಕ್ತಿಯ ಶ್ರೀ ಹರಿ ಕೊಡಲಿ ಹೇಳುದೆ ಎಂಗಳ ಆಶಯ.
    -ವಿಜಯ , ಮೈಸೂರು

  2. ಎನಗು ಹಾಂಗೆ aavthu ದೊಡ್ಡಕ್ಕ,,ಲಾಸ್ಟ್ ಗೆ ajjiya ನೋಡ್ಲೆ ಸಿಕ್ಕಿದ್ದು ಸಮಾಧಾನ ಆತು..ಇಂದು ಮಾಸಿಕ ಅಲ್ದಾ….

  3. ಈ ಅಜ್ಜಿ ಎನ್ನ ಸೋದರಮಾವನ ಹೆಂಡತಿ ಅಂದ್ರೆ ಎನಿಗೆ ಅತ್ತೆ. ಆನು ಹರಿಯೊಲ್ಮೆ ದೊಡ್ಡತ್ತೆಮ್ಮ ಹೇಳಿಯೇ ಹೇಳಿಕೊಂಡಿತ್ತದ್ದು. ಅವು ನಿಜವಾಗಿಯೂ ಅಮ್ಮನ ಹಾಂಗೆ. ಎನಿಗೆ ಸರಿಯಾಗಿ ಇನ್ನೂ ನೆನಪಿಪ್ಪ ಒಂದು ಉದಾಹರಣೆ ಕೊಡ್ತೆ:

    ಆನು ಮುಂಬಯಿಯ ಭಾಭಾ ಪರಮಾಣೂ ಸಂಶೋಧನಾ ಕೇಂದ್ರಲ್ಲಿ ೧೯೮೧ರಲ್ಲಿ ವಿಜ್ಞಾನಿಯಾಗಿ ಸೇರಿತ್ತಿದ್ದೆ. ಒಂದು ವರ್ಷ್ದ ನಂತ್ರ ಊರಿಗೆ ಬಂದಾಗ ಎಲ್ಲರ ಮನೆಗಕ್ಕೂ ಹೋಗಿತ್ತಿದ್ದೆ. ಹೆಚ್ಚಿನವು ಕೇಳಿದ್‌ದು ಅಲ್ಲಿಂದ, ಅಂದ್ರೆ ಬೊಂಬಾಯಿಂದ ಎಂತ ತೈಂದೆ ಹೇಳಿ. ಆಗಿನ ಕಾಲ ಈಗಿನ ಕಾಲದ ಹಾಂಗಲ್ಲ. ಒಂದು ಟೇಪ್‌ರೆಕಾರ್ಡರ್ ತಂದ್ರೇ ಅದೇ ದೊಡ್ಡ ಸುದ್ದಿ. ಹರಿಯೊಲ್ಮೆಗೆ ಹೋದಾಗ ದೊಡ್ಡತ್ತೆಮ್ಮ ಕೇಳಿದ್ದು ಒಂದೇ ವಿಷಯ -“ಅಲ್ಲಿ ಊಟ ತಿಂಡಿ ಹೇಂಗಿದ್ದು? ಊಟ ಹಿಡಿತ್ತಾ?” ಇದುನಿಜವಾಗಿ ಅಮ್ಮ ಕೇಳುವ ಮಾತು. ಇದು ಮಾತ್ರ ಎನಿಗೆ ಎಂದಿಗೂ ಮರಿವಾಂಗಿಲ್ಲೆ

    1. ಪವನಜ ಮಾವ, ಅಪ್ಪು ಅಜ್ಜಿ ಹೀಂಗೆ ಕೇಳುಗಷ್ಟೆ. ಎನಗುದೆ ನೆಂಪು ಬತ್ತು, ಊರಿಂಗೆ ಹೋದಪ್ಪಗ ಹೀಂಗಿಪ್ಪ ಪ್ರಶ್ನೆಗಳ ಎನ್ನ ಹತ್ರುದೆ ಕೇಳುಗು ಅಜ್ಜಿ. ತುಂಬಾ ಪ್ರೀತಿ ಮಾಡುಗು.

  4. ಅದಮ್ಯ ಉತ್ಸಾಹಿ, ಪದಕ್ಕೆ ಸಮಾನಾಗಿ ಬಾಳಿ, ತೀರ್ಥ ಅಮವಾಸ್ಯೆ ಇರುಳು ಹೆರಟದು ಕೇಳಿ ,ಒ೦ದು ರೀತಿ ಮಬ್ಬು ಕವಿದಾ೦ಗೆ ಆಯಿದು…………

  5. ಎನ್ನ ಪ್ರೀತಿಯ ಈ ಅಜ್ಜಿ ಇನ್ನಿಲ್ಲೇ ಹೇಳುವ ವಿಷಯ ಗೊಂತಾದ ಕೂಡ್ಲೆ ತುಂಬಾ ಬೇಜಾರ ಆಯಿದು. ಈಗಲೂ ಆವ್ತಾ ಇದ್ದು. ದಿನಾಗಿಲೂ ಊರಿಂಗೆ Phone ಮಾಡಿ ಅಪ್ಪನ ಮನೇಲಿ ಬಾಕಿ

    ಎಲ್ಲಾರು ಎಂತ ಮಾಡ್ತಾ ಇದ್ದವು ಹೇಳಿ ಸುದ್ದಿ ಕೇಳುವಾಗ ಬಾಯಿ ತಪ್ಪಿ ಅಜ್ಜಿ ಎಂತ ಮಾಡ್ತವು ಹೇಳಿ ಕೇಳುಲೆ ಹೆರಡ್ತೆ. ಸಣ್ಣ ಇಪ್ಪಾಗಿಂದ ಈ ಅಜ್ಜಿಯ ಜೊತೆ ಎನ್ನ ಒಡನಾಟ ತುಂಬಾ ಹೆಚ್ಚು. ಎಂಗೊ

    ಪುತ್ತೂರು ಬಿಡಾರಲ್ಲಿ ವಾಸ ಸುರು ಮಾಡಿದ ಮೇಲೆ ಅಜ್ಜ-ಅಜ್ಜಿ ಹರಿಯೊಲ್ಮೆಗೆ ಹೋಗಿ ೨ ದಿನಂದ ಹೆಚ್ಚು ನಿಂದ ಕೂಡ್ಲೆ ಅಸಕ್ಕ ಹಿಡುದು ಬೇಗ ಬಪ್ಪಲೆ ಹೇಳಿಯೊಂಡಿತ್ತಿದ್ದೆ. ಮದುವೆ ಆಗಿ ಇಲ್ಲಿ ಬಂದ

    ಮೇಲೆದೆ ಪ್ರತೀ ವರ್ಷ ಊರಿಂಗೆ ಹೋದಿಪ್ಪಗ ಅಜ್ಜಿಯ ಕಾಂಬಲೆ ಹೋಯಿದೆ. ಇನ್ನಾಣ ಸರ್ತಿ ಹೋಪಗ ಎಲ್ಲ ವಿಷಯ ವಿವರವಾಗಿ ಕೇಳುಲೆ/ ಎನಗೆ ಹೇಳುಲೆ ಈ ಅಜ್ಜಿ ಇಲ್ಲೆನ್ನೇ? ಹೇಳಿ ಬೇಜಾರ.

    ಅಜ್ಜಿಯ ಬಗ್ಗೆ ಒಪ್ಪಣ್ಣ ಲ್ಲಿ ಬಕ್ಕು ಹೇಳಿ ಅಪ್ಪ-ಅಬ್ಬೆ ಹೇಳುವಾಗಲೇ ಎನಗೆ ಅಜ್ಜಿಯ ಇದೇ Photo ಇಕ್ಕು ಗ್ರೇಶಿತ್ತಿದ್ದೆ ದೊಡ್ಡ ಚಿಕ್ಕಮ್ಮಾ… ಅಜ್ಜ ಅಜ್ಜಿಯ ಒಟ್ಟಿಂಗೆ ಆಡಿದ ಆಟಂಗೊ, ಅವರ ಹತ್ರೆ

    ಕೂದು ಕತೆ ಕೇಳಿಯೊಂಡಿದ್ದದು, ಅಪ್ಪ-ಅಬ್ಬೆ, ಅಪ್ಪಚ್ಚಿಯಕ್ಕೋ, ಚಿಕ್ಕಮ್ಮಂದ್ರು, ತಂಗೆಕ್ಕೊ, ತಮ್ಮಂದ್ರೊಟ್ಟಿಂಗೆ ಅಜ್ಜ-ಅಜ್ಜಿಯ ಹಳೆ ನೆಂಪಿನ ಸುದ್ಧಿ ಕೇಳಿದ್ದು, ಮದುವೆ ಆದ ಮೇಲೆ ಯಜಮಾನ್ರು,

    ಮಕ್ಕಳ ಒಟ್ಟಿಂಗೆ ಅಪ್ಪನ ಮನೆಗೆ ಹೋಗಿ ಎಲ್ಲೋರ ಒಟ್ಟಿಂಗೆ ಕೂದು ಮಾತಾಡಿದ್ದು ಎಲ್ಲ ಒಂದೊಂದೇ ನೆಂಪಾವ್ತು. ಊರಿಂದ ದೂರಲ್ಲಿ ಇಲ್ಲಿಪ್ಪಗ ಊರಿನವರ ನೆಂಪು ಯಾವಾಗಲೂ ಆವ್ತು. ಈಗ ಇನ್ನೂ

    ಹೆಚ್ಚು ಆವ್ತು.
    ಅಪ್ಪು, ನಮ್ಮೆಲ್ಲರ ಪ್ರೀತಿಯ ಈ ಅಜ್ಜಿಯ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಉತ್ತಮ ಗುಣಂಗಳ ನೆಂಪುಗಳೆ ನಮ್ಮ ಮನಸ್ಸಿನ ಸಮಾಧಾನ ಮಾಡುಗು ಮತ್ತೆ ನಮಗೆ ಮಾರ್ಗದರ್ಶನವೂ ಆಗಲಿ.

    1. ಎನ್ನ ಪ್ರೀತಿಯ ಈ ಅಜ್ಜಿ ಇನ್ನಿಲ್ಲೇ ಹೇಳುವ ವಿಷಯ ಗೊಂತಾದ ಕೂಡ್ಲೆ ತುಂಬಾ ಬೇಜಾರ ಆಯಿದು. ಈಗಲೂ ಆವ್ತಾ ಇದ್ದು. ದಿನಾಗಿಲೂ ಊರಿಂಗೆ Phone ಮಾಡಿ ಅಪ್ಪನ ಮನೇಲಿ ಬಾಕಿ ಎಲ್ಲಾರು ಎಂತ ಮಾಡ್ತಾ ಇದ್ದವು ಹೇಳಿ ಸುದ್ದಿ ಕೇಳುವಾಗ ಬಾಯಿ ತಪ್ಪಿ ಅಜ್ಜಿ ಎಂತ ಮಾಡ್ತವು ಹೇಳಿ ಕೇಳುಲೆ ಹೆರಡ್ತೆ. ಸಣ್ಣ ಇಪ್ಪಾಗಿಂದ ಈ ಅಜ್ಜಿಯ ಜೊತೆ ಎನ್ನ ಒಡನಾಟ ತುಂಬಾ ಹೆಚ್ಚು. ಎಂಗೊ ಪುತ್ತೂರು ಬಿಡಾರಲ್ಲಿ ವಾಸ ಸುರು ಮಾಡಿದ ಮೇಲೆ ಅಜ್ಜ-ಅಜ್ಜಿ ಹರಿಯೊಲ್ಮೆಗೆ ಹೋಗಿ ೨ ದಿನಂದ ಹೆಚ್ಚು ನಿಂದ ಕೂಡ್ಲೆ ಅಸಕ್ಕ ಹಿಡುದು ಬೇಗ ಬಪ್ಪಲೆ ಹೇಳಿಯೊಂಡಿತ್ತಿದ್ದೆ. ಮದುವೆ ಆಗಿ ಇಲ್ಲಿ ಬಂದ ಮೇಲೆದೆ ಪ್ರತೀ ವರ್ಷ ಊರಿಂಗೆ ಹೋದಿಪ್ಪಗ ಅಜ್ಜಿಯ ಕಾಂಬಲೆ ಹೋಯಿದೆ. ಇನ್ನಾಣ ಸರ್ತಿ ಹೋಪಗ ಎಲ್ಲ ವಿಷಯ ವಿವರವಾಗಿ ಕೇಳುಲೆ/ ಎನಗೆ ಹೇಳುಲೆ ಈ ಅಜ್ಜಿ ಇಲ್ಲೆನ್ನೇ? ಹೇಳಿ ಬೇಜಾರ. ಅಜ್ಜಿಯ ಬಗ್ಗೆ ಒಪ್ಪಣ್ಣ ಲ್ಲಿ ಬಕ್ಕು ಹೇಳಿ ಅಪ್ಪ-ಅಬ್ಬೆ ಹೇಳುವಾಗಲೇ ಎನಗೆ ಅಜ್ಜಿಯ ಇದೇ Photo ಇಕ್ಕು ಗ್ರೇಶಿತ್ತಿದ್ದೆ ದೊಡ್ಡ ಚಿಕ್ಕಮ್ಮಾ… ಅಜ್ಜ ಅಜ್ಜಿಯ ಒಟ್ಟಿಂಗೆ ಆಡಿದ ಆಟಂಗೊ, ಅವರ ಹತ್ರೆ ಕೂದು ಕತೆ ಕೇಳಿಯೊಂಡಿದ್ದದು, ಅಪ್ಪ-ಅಬ್ಬೆ, ಅಪ್ಪಚ್ಚಿಯಕ್ಕೋ, ಚಿಕ್ಕಮ್ಮಂದ್ರು, ತಂಗೆಕ್ಕೊ, ತಮ್ಮಂದ್ರೊಟ್ಟಿಂಗೆ ಅಜ್ಜ-ಅಜ್ಜಿಯ ಹಳೆ ನೆಂಪಿನ ಸುದ್ಧಿ ಕೇಳಿದ್ದು, ಮದುವೆ ಆದ ಮೇಲೆ ಯಜಮಾನ್ರು, ಮಕ್ಕಳ ಒಟ್ಟಿಂಗೆ ಅಪ್ಪನ ಮನೆಗೆ ಹೋಗಿ ಎಲ್ಲೋರ ಒಟ್ಟಿಂಗೆ ಕೂದು ಮಾತಾಡಿದ್ದು ಎಲ್ಲ ಒಂದೊಂದೇ ನೆಂಪಾವ್ತು. ಊರಿಂದ ದೂರಲ್ಲಿ ಇಲ್ಲಿಪ್ಪಗ ಊರಿನವರ ನೆಂಪು ಯಾವಾಗಲೂ ಆವ್ತು. ಈಗ ಇನ್ನೂ ಹೆಚ್ಚು ಆವ್ತು.
      ಅಪ್ಪು, ನಮ್ಮೆಲ್ಲರ ಪ್ರೀತಿಯ ಈ ಅಜ್ಜಿಯ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ. ಅವರ ಉತ್ತಮ ಗುಣಂಗಳ ನೆಂಪುಗಳೆ ನಮ್ಮ ಮನಸ್ಸಿನ ಸಮಾಧಾನ ಮಾಡುಗು ಮತ್ತೆ ನಮಗೆ ಮಾರ್ಗದರ್ಶನವೂ ಆಗಲಿ.

      1. ಸುರುವಿಂಗೆ ಬರದ್ದು ಸರಿಯಾತಿಲ್ಲೇ ಹೇಳಿ ವಾಪಾಸ್ reply ಲಿ ಮೇಲೆ ಬರದ್ದನ್ನೇ ಸರಿ ಮಾಡಿ ಬರದೆ. ಹಾಂಗೆ ೨ ಸರ್ತಿ ಬಂತು ಒಪ್ಪ. ಕ್ಷಮಿಸಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×