Oppanna.com

ಹಸುರು ಕಾರ್ಡ್

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   17/10/2012    5 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಒಂದು ದೇಶಲ್ಲಿ ಹೊಸತಾಗಿ ವಾಸ ಮಾಡುಲೆ ಒಪ್ಪೆಕ್ಕಾರೆ ಆ ಸರಕಾರದ ಒಪ್ಪಿಗೆ ಬೇಕಾವುತ್ತು.
ಸರಕಾರದ ಒಪ್ಪಿಗೆ ಸಿಕ್ಕೆಕ್ಕಾದರೂ ಒಂದೊಂದು ದೇಶದ ಕ್ರಮ ಬೇರೆ ಬೇರೆ ಇರುತ್ತು. ಅರ್ಜಿ ಹಾಕುವಗಳೇ ಅವಕ್ಕೆ ಕೆಲವು ದಾಖಲೆಗಳ ಕೊಡೆಕ್ಕಾವುತ್ತು.
ಅವಕ್ಕೆ ಬೇಕಾಗಿಪ್ಪ ದಾಖಲಗೊ ಅವಕ್ಕೆ ಬೇಕಾದ ಹಾಂಗೆ ಇದ್ದರೆ ಅಲ್ಲಿಯಾಣ ಮುಖ್ಯ ಕಚೇರಿಂದ ಒಪ್ಪಿಗೆ ಮತ್ತೆ ಒಟ್ಟಿಂಗೆ ಒಂದು ಹಸುರು ಬಣ್ಣದ ಕಾರ್ಡೂ ಕೊಡುತ್ತವು.

ಮತ್ತೆ ಆ ದೇಶಕ್ಕೆ ಬಪ್ಪಲೆ ಅವು ಕೊಟ್ಟ ಕಾರ್ಡಿನ ತೋರುಸಿದರೆ ವಿಮಾನ ನಿಲ್ದಾಣಲ್ಲಿ ಒಳ ಬಿಡುತ್ತವು.
ದೇಶದ ಒಳದಿಕ್ಕೇ ಇದ್ದರೆ ಪರವಾಗಿಲ್ಲೆ. ಐದು ವರ್ಷ ಕಳುದು ಆ ದೇಶದ ನಾಗರಿಕನಾಗಿ ಮಾಡುತ್ತವು. ಒಂದು ದೇಶಕ್ಕೆ ಹೊಸತಾಗಿ ಬರೆಕ್ಕಾರೆ ವಿಸಾ ಹೇಳಿರೆ ಅವರ ಒಪ್ಪಿಗೆ ಬೇಕು.
ಅದಕ್ಕೂ ನಾವು ಅರ್ಜಿ ಹಾಕಿದರೆ ಒಂದೋ ತಾತ್ಕಾಲಿಕ,  ಹೇಳಿದರೆ ಅದಕ್ಕೆ ಅವಧಿ ಒಂದರಿ ಒಳಬಂದರೆ, ಆರು ತಿಂಗಳು ಆ ದೇಶಲ್ಲಿ ಇಪ್ಪಲಕ್ಕು. ಮತ್ತೆ ಮುಂದುವರುಸುತ್ತರೆ ಪುನಃ ಅರ್ಜಿ ಹಾಕಿ ಕೇಳಿಗೊಂಡರೆ ಸರಿಯಾದ ಕಾರಣ ಇದ್ದರೆ ಒಪ್ಪುತ್ತವು. ಹೆಚ್ಚಾದರೆ ಒಂದು ವರ್ಷಂದ ಒಳ ದೇಶ ಬಿಟ್ಟು ಹೋಯೆಕ್ಕು. ಒಂದರಿ ಕೊಡುವಗ ಹತ್ತು ವರ್ಷದ ವರೆಗೂ ಕೊಡುವದಿದ್ದು. ನಮ್ಮ ಅಪೇಕ್ಷೆ ಹೇಂಗಿದ್ದೋ ಅದಕ್ಕನುಸರುಸಿ ಹೆಚ್ಚು ಕಮ್ಮಿ ಮಾಡುತ್ತವು. ಅಲ್ಲಿ ಕೆಲಸ ಮಾಡೆಕ್ಕಾದರೆ ಬೇರೆ ಕೆಲಸ ಮಾಡುಲೂ ಒಪ್ಪಿಗೆಯಾಗಿ ವರ್ಕ್ ಪರ್ಮಿಟ್ ಪಡಕ್ಕೊಳ್ಳೆಕ್ಕು. ವರ್ಕ್ ಪರ್ಮಿಟ್ ಇಲ್ಲದ್ದೋರಿಂಗೆ ಕೆಲಸ ಮಾಡುಲೆಡಿಯ.ಆರೂ ಕೆಲಸ ಕೊಡವು. ನಮ್ಮ ದೇಶಕ್ಕೆ ಬೇರೆ ದೇಶಂದ ಬಪ್ಪೋರೂ ಹೀಂಗೇ ಮಾಡೆಕ್ಕು.

ಎಂಗಳ ಮಕ್ಕೊ ಅಮೇರಿಕಲ್ಲಿ ಕೆಲಸಲ್ಲಿದ್ದವು. ಮೂರು ಜನರಲ್ಲಿ ಇಬ್ರು ೨೦೦೦ ಸಾವಿರನೇ ಇಸವಿಂದ ಮದಲೇ ಇದ್ದವು. ಒಬ್ಬ ೨೦೦೭ರಲ್ಲಿ ಕೆನಡಕ್ಕೆ ಹೋಗಿ ಅಲ್ಲಿ ಕೆಲಸ ಮಾದುತ್ತ. ೨೦೦೩ರಲ್ಲಿ ಎಂಗಳನ್ನೂ ಬಪ್ಪಲೇ ಹೇಳಿದ್ದಕ್ಕೆ ಪಾಸ್ ಪೋರ್ಟ್  ಮಾಡಿಸಿಕ್ಕಿ ವಿಸಕ್ಕೆ ಅರ್ಜಿ ಕೊಟ್ಟದಕ್ಕೆ ೨೦೧೩ರ ವರೆಗೆ ವಿಸ ಕೊಟ್ಟವು. ಹಾಂಗೆ ಎರಡು ತಿಂಗಳಿಂಗೆ ಬಂದಿತ್ತಿದ್ದೆಯೋ. ಈಗ ಮೂರು ಜನವೂ ಇಲ್ಲಿಪ್ಪ ಕಾರಣ ವಿಸಾ ಮುಂದುವರುಸುಲೆ ಒಪ್ಪವು ಹೇಳಿ ಮಕ್ಕೊ ಇನ್ನು ಇಲ್ಲಿಯಾಣ ಗ್ರೀನ್ ಕಾರ್ಡಿಂಗೇ ಅರ್ಜಿ ಹಾಕುವದು ಹೇಳಿ ಯೋಚನೆ ಮಾಡಿದವು. ಎನ್ನ ಎಪ್ಪತ್ತನೆಯ ಶಾಂತಿಗೆ ಮೂರು ಜನರನ್ನೂ ಬಪ್ಪಲೆ ಹೇಳಿದ ಕಾರನ ಬಂದಿತ್ತಿದ್ದವು. ಊರಿಂಗೆ ಬಂದೋರಿಂಗೆ ಈ ಅಭಿಪ್ರಾಯ ಬಂದಿತ್ತು. ಹೇಂಗೂ ಮಕ್ಕೊ ಪುಳ್ಯಕ್ಕೊ ಎಲ್ಲ ಇಲ್ಲೇ ಇಪ್ಪ ಕಾರಣ ಎಂಗೊ ಮಾಂತ್ರ ಊರಿಲ್ಲಿ ಇಪ್ಪಲೆ ಸರಿ ಆವುತ್ತಿಲ್ಲೆ. ಊರಿಲ್ಲಿದ್ದರೆ ನಂಟ್ರು ಇಷ್ಟರ ಸಂಪರ್ಕ ಮಾಂತ್ರ ಇಕ್ಕಷ್ಟೆ! ಪುಳ್ಯಕ್ಕೊಗೆ ಇವ ನಿನ್ನ ಅಜ್ಜ ಹೇಳಿ ಗುರ್ತ ಮಾಡೆಕ್ಕಾಗಿ ಬಂದರೆ ಕಷ್ಟ ಅಲ್ಲದೋ? ಮಕ್ಕಳೂ ಹೇಳಿದವು; ಈ ಸರ್ತಿ ಬಂದಿಪ್ಪಗ ಗ್ರೀನ್ ಕಾರ್ಡಿಂಗೆ ಅರ್ಜಿ ಹಾಕೆಕ್ಕು ಹೇಳಿ. ಮತ್ತೆ ಮಕ್ಕೊಗೆ ಅಮೇರಿಕಾಲ್ಲೆ ಇಪ್ಪಲೇ ಮನಸ್ಸಾದರೆ ಎಂಗೊ ಅಲ್ಲಿ ಊರಿಲ್ಲಿ ಇದ್ದು ಎಂತ ಪ್ರಯೋಜನ? ಮಕ್ಕೊ ಪುಳ್ಯಕ್ಕೊ ಇಪ್ಪಲ್ಲೇ ಇಪ್ಪಲಕ್ಕು ಹೇಳುವ ನಿರ್ಧಾರಕ್ಕೆ ಬಂದೂ ಆತು.

ಕಳುದ ಜೂನಿಲ್ಲಿ ಅಮೇರಿಕಕ್ಕೆ ಎಂಗೊ ಬಪ್ಪಲೆ ವಿಮಾನದ ಟಿಕೆಟ್ ಮಾಡಿ ಕಳುಸಿಯೂ ಕೊಟ್ಟವು. ಬಪ್ಪಗ ಎಂಗಳ ಬರ್ತ್ ಸರ್ಟಿಫಿಕೇಟ್  ತರೆಕ್ಕು ಹೇಳಿತ್ತಿದ್ದವು.
ಮತ್ತೆ ಎನ್ನ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕದ್ದದಕ್ಕೆ, ಬೇರೆ ಆರದ್ದಾದರೂ ಅಫಿದಾವಿತ್ ಬೇಕು ಹೇಳಿತ್ತಿದ್ದವು. ಹಾಂಗೆ ಅಫಿದಾವಿತ್ ಕೊಡೆಕ್ಕಾರೆ ಎನ್ನಂದ ಹೆಚ್ಚು ಪ್ರಾಯದೋವು ಆಯೆಕ್ಕನ್ನೆ. ಹಾಂಗೆ ಅದಕ್ಕೆ ಎನ್ನಂದ ಹಿರಿಪ್ರಾಯದೋರ ಹುಡುಕ್ಕಿ ಅವರ ಅಫಿದಾವಿತ್ ಕೂಡಾ ತಂದಿತ್ತಿದ್ದೆಯೊ. ಆದರೆ ಎನ್ನ ಯಜಮಾಂತಿಯ ಬರ್ತ್ ಸರ್ಟಿಫಿಕೇಟ್ ಪಂಚಾಯತಿಲ್ಲಿ ಸಿಕ್ಕಿದ್ದಕ್ಕೂ ಶಾಲೆಯ ಸರ್ಟಿಫಿಕೇಟಿಲ್ಲಿ ಇದ್ದದಕ್ಕೂ ವ್ಯತ್ಯಾಸ ಕಂಡತ್ತು. ಪಂಚಾಯತಿಂದರ ನೋಡಿರೆ ಶಾಲೆದು ತಪ್ಪಾವುತ್ತು. ಮಾಂತ್ರ ಅಲ್ಲ, ಮದಲು ಪಾಸ್ ಪೋರ್ಟ್ ಮಾಡುವಗ ಕೊಟ್ಟದು ಶಾಲೆ ಸರ್ಟಫಿಕೇಟ್ ನೋಡಿಯೇ ಆಗಿತ್ತು. ಪಾಸ್ ಪೋರ್ಟ್ ನಕಲು ಕೊಡುವಗ ಪಂಚಾಯತ್ ಸರ್ಟಿಫಿಕೇಟ್ ಸರಿ ಆವುತ್ತಿಲ್ಲೆ. ಎಂತ ಮಾಡುವದು ಹೇಳಿ, ದೊಡ್ಡ ತಲೆಬೆಶಿ ಅತು ಮಕ್ಕೊಗೆ. ಒಂದರಿ ಮದಲು ಕೊಟ್ಟದು ತಪ್ಪಿಹೋಯಿದು ಹೇಳಿ ಮಾಡ್ಯೊಂಡು ಪಂಚಾಯತಿಂದರನ್ನೆ ಕೊಡುವದು ಹೇಳುವ ತೀರ್ಮಾನಕ್ಕೂ ಬಂದವು. ಆದರೆ ಪಾಸ್ ಪೋರ್ಟಿಂದರ ವ್ಯತ್ಯಾಸ ಮಾಡುಲೆಡಿಯ . ಈ ಸರ್ತಿ ಒಂದೂ ಸರಿ ಆವುತ್ತಿಲ್ಲೆ, ಎಂತ ಮಾಡುವದಪ್ಪ ಹೇಳಿ ಯೋಚನೆ ಮಾಡ್ಯೊಂಡು ಒಂದರಿ ಸುಮ್ಮನೆ ಕೂದವು.

ಆನು ಸುಮ್ಮನೆ ಕೂಯಿದಿಲ್ಲೆ. ತುಂಬ ಯೋಚನೆ ಮಾಡಿ ಎನ್ನ ಅಳಿಯ ಕುಂಬ್ಳೆಲ್ಲಿಪ್ಪೋನಿಂಗೆ ಫೋನ್ ಮಾಡಿ ದಿನಿಗೇಳಿ ಕುಂಬ್ಳ ಪಂಚಾಯತಿಂಗೆ  ಗೌರಮ್ಮನ ಬರ್ತ್ ಸರ್ಟಿಫಿಕೇಟ್ ಬೇಕು ಹೇಳಿ ಒಂದು ಅರ್ಜಿ ಕೊಡುಲೆ ಹೇಳಿದೆ. ಮೋಸ ಮಾಡುವದು ಹೇಳಿ ಗೊಂತಿದ್ದರೂ ಮಾಡದ್ದೆ ನಿವೃತ್ತಿ ಇಲ್ಲೆ! ನಿಜಕ್ಕೂ ಮತ್ತೊಂದು ಪಂಚಾಯತಿಲ್ಲಿ ಹೆಸರು ಕೊಟ್ಟ ಕಾರಣ ಅಲ್ಲಿಂದ ಹಾಂಗಿಪ್ಪ ಹೆಸರಿನೋರ ಇಲ್ಲಿಯಾಣ ರಿಜಿಸ್ತ್ರಿಲ್ಲಿ ಕಾಣುತ್ತಿಲ್ಲೆ, ಹೇಳಿ ನೋನ್ ಅವೈಲೇಬ್ಲ್ ಸರ್ಟಿಫಿಕೇಟ್ ಕೊಟ್ಟವು. ಅದುವೇ ಎನಗೆ ಬೇಕಾದ್ದು. ಗೌರಮ್ಮ ಹುಟ್ಟುವಗ ಇದ್ದ ಮನೆ ಒಂದು ಪಂಚಾಯತಿಲ್ಲಿ ಇತ್ತು. ಅಲ್ಲಿಯೇ ಹೆಸರು ಕೊಟ್ಟದಕ್ಕೆ ಆ ರಿಜಿಸ್ತ್ರಿಲ್ಲಿ ಹೆಸರು, ಜನನ ತಾರೀಕು ಇದ್ದು ಹೇಳಿ ಕೊಟ್ಟಿತ್ತಿದ್ದವು. ಈಗ ಕೇಳಿದ್ದು ಮತ್ತೊಂದು ಪಂಚಾಯತಿಲ್ಲಿ. ನಿಜಕ್ಕದರೆ ಆನೂ ಹುಟ್ಟಿದ್ದು ಪೈವಳಿಕೆ ಪಂಚಾಯತ್ ಪ್ರದೇಶಲ್ಲಿ ಹೇಳಿ  ಎನ್ನ ಅಪ್ಪ ಹೇಳಿದ ನೆಂಪು. ಇನ್ನು ಅಲ್ಲೆಲ್ಲೆ ಹೋಗಿ ಕಷ್ಟ ಬಪ್ಪದಕ್ಕೆ ಪುತ್ತಿಗೆಲ್ಲೇ ಕೇಳಿ “ಇಲ್ಲೆ” ಹೇಳುಸುಗೊಂಡಿದೆ.  ಅವರ ಹತ್ತರೆ ಹೆಸರು ಸಿಕ್ಕನ್ನೆ. ಹಾಂಗೆ ಇಲ್ಲಿ ಈ ಹೆಸರು ಇಲ್ಲೆ ಹೇಳಿ ಕೊಟ್ಟವು. ಮಂಗಳೂರಿಲ್ಲಿಪ್ಪ ಎನ್ನ ಗೆಳೆಯನ ಹತ್ತರೆ  ಗೌರಮ್ಮನ ಡೇಟ್ ಓಫ್ ಬರ್ತ್ ಶಾಲೆ ಲೆಕ್ಕಲ್ಲಿಪ್ಪದೇ ಸರಿ ಹೇಳಿ ಅಫಿದಾವಿತ್ ಮಾಡುಸಿ ಕಳುಸುಲೆ ಹೇಳಿದೆ. ಸರ್ಟಿಫಿಕೇಟಿನ ದೃಢಪಡುಸಿ ಕೊಡೆಕ್ಕು ಹೇಳಿ ಒಬ್ಬ ಗೊಂತಿಪ್ಪ ನೋಟರಿ ಹತ್ತರೆ ಫೋನ್ ಮಾಡಿ ಹೇಳಿದೆ.ಅವು ಹಾಂಗೆ ಮಾಡಿಕೊಟ್ಟವು. ಅಂತೂ ಗೌರಮ್ಮನ ಜನನ ತಾರೀಕು ಶಾಲೆ ರೆಕೋರ್ಡಿಲ್ಲಿಪ್ಪದು ಸರಿ ಹೇಳುವದಕ್ಕೆ ದಾಖಲೆ ಸಿಕ್ಕಿದ ಹಾಂಗೆ ಆತು.

ಮತ್ತೆ ಮದುವೆ ಸರ್ಟಿಫಿಕೇಟ್ ಕೇಳಿದವು. ಅಮೇರಿಕಲ್ಲಿ ಕೂದುಗೊಂಡೆ ಅಲ್ಲಿಯಾಣ ಸಬ್ ರಿಜಿಸ್ತ್ರನ ಹತ್ತರೆ ಹೇಳಿ ಮದುವೆ ರಿಜಿಸ್ತ್ರಿ ಆಯಿದಿಲ್ಲೆ ಹೇಳಿಯೂ ದಾಖಲೆ ಸಿಕ್ಕಿತ್ತು. ಮತ್ತೆ ಅದಕ್ಕೂ ಇಬ್ರ ಅಫಿದಾವಿತ್. ಗೌರಮ್ಮ ಮತ್ತು ಸುಬ್ಬಣ್ಣ ಭಟ್ಟರ ಮದುವೆ ಆದ್ದು ನಿಜ ಎಂಗಳೂ ಮದುವೆಗೆ ಹೋಯಿದೆಯೋ ಹೇಳಿ ಇಬ್ರ ಅಫಿದಾವಿತ್ ಮತ್ತು ನೋಟರಿಯ ದೃಢ ಪತ್ರ ಎಲ್ಲ ಆತು.
ಇಷ್ಟೆಲ್ಲ ಸರ್ಟಿಫಿಕೇಟ್ ಗಳ ಅಮೇರಿಕಲ್ಲಿ ಕೂದುಗೊಂಡೇ ಮಾಡುಸಿ ಹಸುರು ಕಾರ್ಡಿಂಗೆ ಅರ್ಜಿ ಮಾಡುಲೆ ಒಬ್ಬ ವಕೀಲ ಇದ್ದರೆ ಒಳ್ಳೆದು ಹೇಳಿ ಯೋಚನೆ ಬಂತು. ಇಬ್ರ ಅರ್ಜಿ ತಯಾರು ಮಾಡಿಕೊಡೆಕ್ಕಾದರೆ  ೨೦೦೦ ಡಾಲರ್ ಫೀಸ್ ಕೊಡೆಕ್ಕು ಹೇಳಿ ಒಬ್ಬ ಕನ್ನಡಿಗನೇ ಆದ ವಕೀಲ ಹೇಳಿದ.
ಮತ್ತೆ ಮೆಡಿಕಲ್ ಚೆಕ್ ಉಪ್ ಮಾಡಿ ವರದಿ ಬೇಕು ಹೇಳಿದ. ದಾಕು ಹಾಕಿದ್ದಕ್ಕೆ ಸರ್ಟಿಫಿಕೇಟ್ ಕೇಳಿದ. ಹಾಂಗೆ ಎನ್ನ ಸಣ್ಣ ಮಗನ ಮೇಲ್ವಿಳಾಸಲ್ಲಿ ಅರ್ಜಿ ಕೊಟ್ಟ ಕಾರಣ ಎಲ್ಲೋಡಿಕ್ಕಂಗೂ ಕರಕ್ಕೊಂಡು ಹೋಗಿ ಬೇಕಾದ ದಾಖಲೆಗಳ ಜಮೆ ಮಾಡಿ ಕೊಡುವ ಕೆಲಸ  ವಕೀಲ ಊರಿನೋನೇ ಅಲ್ಲದೋ ಹೇಳಿ ಒಪ್ಪಿ ಅವನತ್ರೆ ಅರ್ಜಿ, ಮತ್ತೆ ದಾಖಲೆ ಎಲ್ಲ ಕೊಟ್ಟಾತು.ಅರ್ಜಿ ಕಳುಸಿ, ಎರಡು ವಾರಲ್ಲಿ ನಿಂಗಳ ಫಿಂಗರ್ ಪ್ರಿಂಟ್ ಬೇಕು. ಅದರ ಓಫೀಸಿಂಗೆ ಬಂದು ಕೊಟ್ಟಿಕ್ಕಿ ಹೋಗಿ ಹೇಳಿ ಕಾಗದ ಬಂತು. ಓಫೀಸಿಂಗೆ ಹೋಗಿ ಬೆರಳಚ್ಚಿನ ಕೊಟ್ಟೂ ಆತು. ಆದರೆ ಮತ್ತೆರಡು ವಾರಲ್ಲಿ ಸುಬ್ಬಣ್ಣ ಭಟ್ಟನ ಬೆರಳಚ್ಚು ಸರಿ ಬಯಿಂದಿಲ್ಲೆ. ಇನ್ನೊಂದರಿ ಬಂದು ಕೊಡೆಕ್ಕು ಹೇಳಿದವು. ಇನ್ನು ನಾಲ್ಕೈದು ತಿಂಗಳಿಲ್ಲ ಸಂದರ್ಶನಕ್ಕೆ ಕರೆ ಬಕ್ಕು ಹೇಳಿ ವಕೀಲ ಹೇಳಿತ್ತಿದ್ದ.
ಎಂಗೊ ಶುರುವಿಂಗೆ ಆರು ತಿಂಗಳಿಲ್ಲಿ ವಾಪಾಸು ಊರಿಂಗೆ ಹೋಪ ಯೋಚನೆಲ್ಲಿ ದಶಂಬರ ಹದಿನೈದಕ್ಕೆ ಹೋಯೆಕ್ಕಾಗಿತ್ತು

ಸಂದರ್ಶನಕ್ಕೆ ಮತ್ತೆ ಬರೆಕ್ಕಾದರೆ ತೊಂದರೆ ಅಕ್ಕು ಹೇಳಿ ಮಕ್ಕೊ ಟಿಕೇಟಿನ ದಿನ ಮುಂದೆ ಹಾಕಿ ಜೂನಿಂಗಪ್ಪಗ ಖಂಡಿತ ಗ್ರೀನ್ ಕಾರ್ಡ್ ಸಿಕ್ಕುಗು,ಕಾರ್ಡ್ ತೆಕ್ಕೊಂಡೆ ಹೋಪಲಕ್ಕು ಹೇಳಿ ದೊಡ್ಡ ಮಗನ ಮನಗೆ ದೇಟ್ರೋಯಿಟಿಂಗೆ ಹೋದೆಯೊ. ಅಲ್ಲಿ ಅಂಬಗ ಸೊಸೆ ಬಸರಿಯಾಗಿದ್ದೋಳು ಒಂದು ಕೂಸಿಂಗೆ ಜನ್ಮ ಕೊಟ್ಟದು, ಎಂಗೊಗೆ ಇನ್ನೊಂದು ಪುಳ್ಳಿಯ ನೋಡುಲಾತು. ಈಗ ನಾಲ್ಕು ಪುಳ್ಯಕ್ಕೊ. ಅಲ್ಲಿಂದ ಟೊರೊಂಟೋಲ್ಲಿಪ್ಪ ಎರಡನೆಯ ಮಗನ ಮನೆಗೆ ಹೋದೆಯೊ. ಒಂದು ತಿಂಗಳಪ್ಪಗ ಸಣ್ಣ ಮಗನ ಫೋನ್. ಕೂಡ್ಳೇ ಅಲ್ಲಿಗೆ ಎಂಗೊ ಬರೆಕ್ಕಾವುತ್ತು. ಅಬ್ಬೆ-ಮಗನ ಡಿ ಯನ್ ಎ ವರದಿ ಬೇಕಡೊ ಅವಕ್ಕೆ ಹೇಳಿ ವಕೀಲ ಹೇಳಿದ್ದ ಕೂಡ್ಳೇ ಬಂದರೆ ಮತ್ತೆ ಎರಡು ತಿಂಗಳಿಲ್ಲಿ ಕಾರ್ಡ್ ಸಿಕ್ಕುಗಡೊ ಹೇಳಿದ ಮಗ.
ಹಾಂಗೆ ಅಲ್ಲಿಂದ ಬಸ್ಸಿಲ್ಲಿ ಫಿಲಡೆಲ್ಫಿಯಕ್ಕೆ ಬಂದೆಯೊ. ಮರದಿನವೇ ಡ್ ಯನ್ ಎ ಟೆಸ್ಟ್ ಮಾಡುವಲ್ಲಿಗೆ ಹೋದೆಯೋ. ಹೋಪಲೆ ಕಾರಿಂಗೆ ಮೂರು ಗಂಟೆ ದಾರಿ. ಅದೇ ಊರಿಲ್ಲಿ ಮಗನ ಗೆಳೆಯ ಒಬ್ಬ ಇದ್ದ. ರಾತ್ರಿ ಅಲ್ಲಿ ನಿಂದು ಉದೀಯಪ್ಪಗ  ಓಫೀಸಿಂಗೆ ಹೋಗಿ ಪರೀಕ್ಷೆ ಮಾಡಿದವು. ಅಲ್ಲಿಂದ ಮತ್ತೆ ಬೇರೊಂದು ಮನಗೆ ಬಂದೆಯೊ. ಮರದಿನ ಅಲ್ಲೇ ಹತ್ತರೆ ಹವ್ಯಕ ಕೂಟ ಇತ್ತು ಅದರನ್ನೂ ಮುಗಿಶಿಕ್ಕಿ ಸಣ್ಣ ಮಗನ ಮನೆಗೆ ಬಂದಾತು. ಒಂದು ತಿಂಗಳೊಳದಿಕ್ಕೆ ವರದಿ ಸಿಕ್ಕುಗು ಹೇಳಿತ್ತಿದ್ದವು. ಮತ್ತೆ ಅರ್ಜಿಗೆ ಪೂರಕವಾಗಿ ಎಂಗಳದ್ದೋ,ಮಂದೋ ಮದುವೆ ಕಾಗದ ಇದ್ದರೆ ಒಳ್ಲೆದು ಹೇಳಿ ಅದರ ಒಬ್ಬ ನೋಟರಿ ಹತ್ತರೆ ದೃಢಪಡುಸುಲೆ ಹೇಳಿ ಮನೆಂದ ಒಂದು ಮೈಲು ದೂರದ ಓಫೀಸಿಂಗೆ ಹೋದೆಯೊ, ಆನೂ ಮಗನುದೇ.ಹೋಗಿ ದಸ್ಕತು ಹಾಕುಸಿ ಹೆರ ಬಂದಪ್ಪಗ ಅಲ್ಲಿ ಬಿಸಿ ಗಾಳಿಯ ಬುಗ್ಗೆ( ಹೋಟ್ ಎಯರ್ ಬಲೂನ್) ಹಾರುವುದರಲ್ಲಿತ್ತು. ಮಗಂಗೆ ಅದರ ಫಟ ತೆಗೆಯೆಕ್ಕು ಹೇಳಿ ಆತು.ಈ ಕಾಗತಗಳ ಎಲ್ಲ ಕೈಲ್ಲಿದ್ದದರ ಕಾರಿ ಟೋಪಿಲ್ಲಿ ಮಡಗಿ ಫಟ ತೆಗೆದ .ಇನ್ನು ಹೋಪೊ ಹೇಳಿ ಹೆರಟೆಯೊ.ರಜ ಮುಂದೆ ಬಪ್ಪಗ ಫಕ್ಕನೆ ಮಗಂಗೆ ಕಾಗತಂಗಳ ನೆಂಪಾಗಿ ನೋಡಿದರೆ ಒಂದೂ ಇತ್ತಿಲ್ಲೆ. ಎಲ್ಲಿ ಹೋತಪ್ಪ ಹೇಳಿ ನೆಂಪು ಮಾಡುವಗ ಫಟ ತೆಗವಗ ಕಾರಿನ ಮೇಲೆ ಮಡಗಿದ್ದು ನೆಂಪಾತು. ಸಿಕ್ಕಿದರೆ ಎನ್ನಜ್ಜಿ ಪುಣ್ಯ ಹೇಳ್ಯೊಂಡು ತಿರುಗಿ ಹೋದೆಯೊ. ರಜ ರಜ ಮಳೆಯೂ ಬಂದೊಂಡಿತ್ತು. ದಾರಿಲ್ಲೇ ಎಲ್ಲೋ ಬಿದ್ದಿರೆಕ್ಕು ಹೇಳಿ ನೋಡ್ಯೊಂದು ಹೋಪಗ ಎಂಗಳ ಪುಣ್ಯಂದ ಎಂಗೊ ಬಂದ ದಾರಿಯ ಹೊಡೆಲ್ಲಿ ಕಾಗತಂಗೊ ಎಲ್ಲ ದೂರ ದೂರ ಬಿದ್ದೊಂಡಿಪ್ಪದು ಕಂಡತ್ತು.ಎನ್ನ ಪಾಸ್ ಪೋರ್ಟ್ ಕೂಡಾ ಇತ್ತು ಒಟ್ಟಿಂಗೆ ಪುಣ್ಯಕ್ಕೆ ಎಲ್ಲ ಸಿಕ್ಕಿತ್ತು. ತೆಕ್ಕೊಂಡು ಸೀದಾ ಮನಗೆ ಬಂದೆಯೊ. ಅಂತೂ ಬೇಕದ ದಾಖಲೆಯ ಎಲ್ಲ ವಕೀಲನತ್ರೆ ಕೊಟ್ಟು ಅತು.
ಮತ್ತೆ ಒಂದು ತಿಂಗಳಿಲ್ಲಿ ಎನ್ನ ಬೆರಳಚ್ಚು ಸರಿ ಕಾಣದ್ದ ಕಾರಣ ಕ್ರಿಮಿನಲ್ ವೆರಿಫಿಕೇಶನ್ ವರದಿ ತರುಸಿ ಕೊಡೆಕ್ಕು ಹೇಳಿ ಅತು. ಒಟ್ಟಿಂಗೆ ಮಕ್ಕಳ ಅಬ್ಬಗೆ ಎಲ್ಲ ಸರಿಯಾಯಿದು ಹೇಳಿ ಎರಡು ದಿನಲ್ಲಿ ಹಸುರು ಕಾರ್ಡು ಬಂದೂ ಆತು. ಅಂತೂ ವಕೀಲಂಗೆ ಮತ್ತೆಯೂ ಪೈಸೆ ಕೊಡೆಕ್ಕಾತು. ಮಾತಾಡಿದರೆ ಪೈಸೆ ಕೇಳುತ್ತವಡೊ ಇಲ್ಲಿ. ಮತ್ತೆ ನ್ಯೂಯೊರ್ಕಿನ ಎಂಬೇಸಿಗೆ ಅರ್ಜಿ ಕೊಟ್ಟಾತು ವರದಿ ತರುಸುಲೆ ಎಲ್ಲ ವಕೀಲ ಹೇಳಿದ ಹಾಂಗೆ ತರುಸಿ ಕೊಟ್ಟರೆ. ಇದಲ್ಲ ಆ ಪ್ರದೇಶದ ಕೋರ್ಟಿಂದ ವರದಿ ಬೇಕು ಹೇಳಿದವು. ಇಲ್ಲಿಯೂ ವಕೀಲ ಪೈಸೆ ಲೆಕ್ಕ ಹಾಕಿದ್ದಷ್ಟೆ ಅಲ್ಲದ್ದೆ ಅವ ಹೇಳಿದ್ದು ಸರಿ ಆತಿಲ್ಲೆ. ಮಕ್ಕಳದ್ದು ಎಂಗಳದ್ದು ಟೆನ್ಶನ್ ಕೇಳೆಡ,ಹೇಳೆಡ. ಎಂತಕೆ ಬೇಕಾತು ಈ ಮರುಳುತನ. ಹಸುರು ಕಾರ್ಡೂ ಬೇಕಾತಿಲ್ಲೆ ಸುಮ್ಮನೆ ಹತ್ತು ಹದಿನೈದು ಸಾವಿರ ಡಾಲರ್ ಮಕ್ಕೊಗೆ ದಂಡ ಮಾಡಿದ ಹಾಂಗೆ ಆತು ಸಣ್ಣ ಮಗ ಪಾಪ! ಇದಕ್ಕಾಗಿ ತುಂಬ ಒದ್ದಾಡಿದ್ದ. ಅವಂಗೆ ಮಾತಾಡುವಗ ಕೋಪ ಬಂದೊಂಡಿತ್ತು. ದೇವರು ಮಡಗಿದ ಹಾಂಗೆ ಆವುತ್ತು ಹೇಳಿ ಕೋರ್ಟಿಂಗೆ ಹೋಗಿ ಕೇಳಿದ್ದಕ್ಕೆ ಕೇಳಿದ ಕೂಡಲೇ ಕೊಟ್ಟವು. ನಮ್ಮ ದೇಶಲ್ಲಿ ಆಗಿದ್ದರೆ ಇಂದು ಅರ್ಜಿ ಕೊಟ್ಟಿಕ್ಕಿ ಹೋಗಿ ಒಂದು ವರ ಬಿಟ್ಟು ಬನ್ನಿ ಹುಡುಕ್ಕಿ ಮಡಗುತ್ತೆಯೊ ಹೇಳಿಯೋ ಮತ್ತುದೆ ಬೇಗ ಕೊಡೆಕ್ಕಾರೆ ಪೈಸೆ ಕೊಡೆಕ್ಕಾತು ಆಮಟ್ಟಿಂಗೆ ಇಲ್ಯಾಣೋವು ಪ್ರಾಮಾಣಿಕರು. ಬೇರೊಬ್ಬನ ಒದ್ದಾಟ ಅವಕ್ಕೆ ಗೊಂತಿದ್ದು. ಈ ವಿಶಯದಲ್ಲಿ ನಮ್ಮ ದೇಶದೋರೇ ಹುಶಾರು. ಅಲ್ಲಿಂದಲೂ ಪೋಲಿಸ್ ವೆರಿಫಿಕೇಶನ್ ತರುಸೆಕ್ಕು ಹೇಳಿ ವಕೀಲ ಹೇಳಿತ್ತಿದ್ದ. ಹಾಂಗೆ ಅಮೇರಿಕಂದಲೇ ಒಂದು ಅರ್ಜಿ ತಯಾರು ಮಾಡಿ ಎನ್ನ ಗೆಳೆಯಂಗೆ ಸ್ಕೇನ್ ಮಾಡಿ ಕಳುಸಿ ಆತು. ಅವ ಅದರ ಕೊಡುವಗ ಈ ಮನುಷ್ಯ ಅದೇ ಮನೆಲ್ಲಿಪ್ಪದು ಹೇಳುವದಕ್ಕೆ ವಿಳಾಸ ಸರಿ ಹೇಳುವದರ ಗೊಂತು ಮಾಡುಲೆ ರುಜುವಾತು ಬೇಕು ಹೇಳಿ ಡಿ ಸಿ ಓಫೀಸಿಲ್ಲಿ ಹೇಳಿದವಡ. ಆನು ಅಮೇರಿಕಲ್ಲಿಪ್ಪದು. ಮಾಂತ್ರ ಅಲ್ಲ ಆನು ದೇಶ ಬಿಡುವಗ ಇದ್ದ ಮನೆ ವಿಳಾಸ ಸರಿ ಹೇಳುಲೆ ದಾಖಲೆಗೊ ಇಲ್ಲೆ. ಅದಕ್ಕೆ ಅವನೇ ಬೇರೊಂದು ಅರ್ಜಿ ತಯಾರು ಮಾಡಿ ಹಳೆಮನೆಯ ವಿಳಾಸಕೊಟ್ಟು ನೋಡಿದನಡ. ಸರಿ ಸ್ಥಳೀಯ ಸ್ಟೇಶನಿಂಗೆ ತನಿಖೆಗೆ ಹೋತುಅರ್ಜಿ. ಅವರ ಭೇಟಿ ಮಾಡಿ ನಿಂಗೊಗೆ ಇಷ್ಟು ಪೈಸೆ ಕೊಡುತ್ತೆ. ಒಂದರಿ ವರದಿ ಮಾಡಿ ಕಳಿಸಿ ಹೇಳಿದನಡ. ಮರದಿನವೇ ಅವರ ಕರಕ್ಕೊಂಡು ಬಂದು ಹೊಸ ಮನೆ, ಹಳೆಮನೆ ತೋರುಸಿ ಅಪ್ಪಗ ಈಗಾಣ ವಾಸಸ್ಥಳ ಇದುವೇ ಹೇಳಿ ಈ ವಠಾರಲ್ಲಿಪ್ಪ ಎರಡು ಮನೆಯೋರ ಕರಕ್ಕೊಂಡು ಬಾ. ಅವರ ಸ್ಟೇಟ್ಮೆಂಟ್ ತೆಕ್ಕೊಡು ವರದಿಯ ಮೇಲೆ ಕಳುಸುತ್ತೆಯೋ ಹೇಳಿ ಮದಲೇ ಕೇಳಿದ್ದ ಪೈಸೆಯ ತೆಕ್ಕೊಂಡು ವರದಿ ಡಿ ಸಿ ಆಫೀಸಿಂಗೆ ಹೋತು. ಅಲ್ಲಿಂದ ಇವ ಹತ್ತು ವರ್ಷಂದ ಇಲ್ಲಿಯೇ ಇದ್ದ ಇವನ ಮೇಲೆ ಯಾವುದೇ ಕ್ರಿಮಿನಲ್ ರೆಕೋರ್ಡ್ ಇಲ್ಲೆ ಹೇಳಿ ವರದಿಯದೃಢಪಡುಸಿ ಇಲ್ಲಿಗೆ ಕಳುಸಿದವು. ಇಲ್ಲಿ ಆನು ಹೇಳುಲೆ ಇಪ್ಪದು ಮಂಗಳೂರಿಂಗೆ ಆನು ಬಂದು ಏಳು ವರ್ಷ ವೇ ಆಯಿದಷ್ಟೆ ಆದರೂ ಪೈಸೆ ಮೂರು ವರ್ಷದ ದೃಢಪತ್ರಿಕೆ ಕೊಟ್ಟಿದು. ಇದು ನಮ್ಮ ದೇಶದ ಪ್ರಾಮಾಣಿಕತೆ. ಅಮೇರಿಕದ ಸ್ಟೇಶನಿಂಗೆ ಹೋಗಿ ಕೇಳಿದ್ದಕ್ಕೆ ಅರ್ಜಿ ತೆಗೆದು ಮಡುಗಿದೋರು, ಮತ್ತೆ ಆನು ಇಪ್ಪ ಜಾಗೆ ಅವರ ವ್ಯಾಪ್ತಿಯದಲ್ಲ ಹೇಳಿ ಗೊಂತಾಗಿ ಅರ್ಜಿಯ ಸೀದಾ ಮತ್ತೊಂದು ಸ್ಟೇಶನಿಂಗೆ ಕಳುಸಿದ್ದಲ್ಲದೆ, ವಿವರವ ಫೋನ್ ಮಾಡಿ ಮಗಸ್ಂಗೆ ಹೇಳಿತ್ತಿದ್ದವಡ. ಮತ್ತೊಂದು ಸ್ಟೇಶನಿನೋವು ಒಂದು ಬೇರೆ ಅರ್ಜಿ ಫೋರಂ ಕಳುಸಿ ದಸ್ಕತ್ ಮಾಡುಲೆ ಹೇಳಿಅದರ ಸ್ಟೇಶನಿನ ಬೋಕ್ಸಿಲ್ಲಿ ಹಾಕುಲೆ ಹೇಳಿತ್ತಿದ್ದವು. ಎರಡು ದಿನಲ್ಲಿ ಇವನ ಮೇಲೆ ಯಾವ ಕ್ರಿಮಿನಲ ದಾಖಲಗೊ ಇಲ್ಲೆ ಹೇಳಿ ದೃಢಪತ್ರವ ಕಳಿಸಿತ್ತಿದ್ದವು. ಯಾವ ಪೋಲಿಸ್ ಒಳ್ಳೆದು ಹೇಳುವದು ಗೊಂತಾತನ್ನೆ!  ವಕ್ಕೀಲಂಗೆ ಮತ್ತೆ ನಾನ್ನೂರು ಡಾಲರ್ ಕೊಟ್ಟು ವರದಿ ಕಳುಸಲೆ ಹೇಳಿತ್ತು. ಮತ್ತೊಂದು ವರ ಅದರ ಮಡಿಕ್ಕೊಂಡು ಹೇಂಗೋ ವಕೀಲ ಕಳುಸಿದ. ಆದರೆ ಓಫೀಸಿನೋವು ಸಿಕ್ಕಿ ಒಂದು ವಾರಲ್ಲಿ ಸಿಕ್ಕಿದ್ದು ಹೇಳಿ ಇಂಟರ್ನೆಟಿಲ್ಲಿ ಹೇಳಿತ್ತಿದ್ದವು. ಮತ್ತೆರಡು ವಾರಲ್ಲಿ ಹಸುರು ಕಾರ್ಡ್ ಎನಗೂ ಸಿಕ್ಕಿತ್ತು.

ಹೀಂಗೆ ಹಸುರು ಕಾರ್ಡಿಂಗೆ ಬೇಕಾಗಿ ಮತ್ತೂ ಒಂದು ತಿಂಗಳಷ್ಟು ಎಂಗಳ ವಿಮಾನದ ಟಿಕೆಟ್ ಮುಂದೆ ಹಾಕುಲೆ ಒಪ್ಪಿದ ಕಾರಣ ಎಂಗೊಗೆ ಅದೊಂದು ಲಾಭವೇ ಆತು. ಅಲ್ಲದ್ದರೆ ಬೇರೆಯೇ ಟಿಕೆಟ್ ತೆಕ್ಕೊಳ್ಳೆಕ್ಕಾತು.ದೈವ ಸಂಕಲ್ಪವೇ ಹೀಂಗಿತ್ತೋ? ಅಥವ ಇದರೆಡೆಲ್ಲಿ ಬಸರಿ ಅಗಿದ್ದ ಸಣ್ನ ಸೊಸೆಯೂ ಒಬ್ಬ ಮಾಣಿಗೆ ಜನ್ಮ ಕೊಟ್ಟಿತ್ತು.ಹೆತ್ತು ಹತ್ತು ದಿನಲ್ಲಿ ಹಸುರು ಕಾರ್ಡ್ ಬಂದಿತ್ತು. ಹೀಂಗೆ ಕಾರ್ಡ್ ಸಿಕ್ಕುಲೆ ತಡ ಆದಕಾರಣ ಆದ ನಷ್ಟ ಕಷ್ಟದ ಎಡೆಲ್ಲಿ ಸಂತೋಷ ವಿಚಾರಎ ಇನ್ನೊಬ್ಬ ಪುಳ್ಳಿಯ ನೋಡುಲೆಡಿಗಾದ್ದು. ಅಥವಾ ಅವನ ನೋಡುವ ಭಾಗ್ಯವೇ ಹೀಂಗೆ ಕಾರ್ಡ್ ಸಿಕ್ಕುಲೆ ತಡವಾದ್ದೋ ಹೇಳುಲೆಡಿಯ! ಎಲ್ಲ ದೈವ ಸಂಕಲ್ಪ ಇದ್ದ ಹಾಂಗೇ ಅಪ್ಪದು. ೨೯ನೇ ತಾರಿಕು ಆದಿತ್ಯವಾರ ಊರಿಂಗೆ ಹೋಪಗ ಸಂತೋಷಲ್ಲಿ ಹೋಪ ಹಾಂಗೆ ಆತು. ಎರಡು ಪುಳ್ಯಕ್ಕ ನೋಡುವುದರೊಟ್ಟಿಂಗೆ ಇಲ್ಲಿ ಬಂದು ಈಗಿಪ್ಪ ಐದು ಜನ ಪುಳಕ್ಕಳೊಟ್ಟಿಂಗೆ ದಿನ ಕಳಿವಲೆಡೆಯಾದ್ದು ಎಂಗಳ ಪುಣ್ಯವೋ ಪುಳ್ಯಕ್ಕಳ ಪುಣ್ಯವೋ ದೇವರಿಂಗೇ ಗೊಂತು.
ಅಂತೂ ಅಮೇರಿಕಲ್ಲಿ ಮಕ್ಕಳೊಟ್ಟಿಂಗಇಪ್ಪಲೆ ಹಸುರು ಕಾರ್ಡ್ ಸಿಕ್ಕಿ ತುಂಬ ಸಂತೋಷ ಆತು.

5 thoughts on “ಹಸುರು ಕಾರ್ಡ್

  1. ಸುಬ್ಬಣ್ಣ ಮಾವಾ, ಶುದ್ದಿಗೆ ಒಪ್ಪ೦ಗೊ.
    ವಿಸಾ ನಿಯಮ೦ಗೊ, ಹಾ೦ಗೆಯೇ ರೆಸಿಡೆನ್ಸಿ ಪರ್ಮಿಟ್ ನಿಯಮ೦ಗೊ ದೇಶ೦ದ ದೇಶಕ್ಕೆ ಬೇರೆಯಾಗಿರ್ತು. ಅಮೇರಿಕಲ್ಲಿ ಹಸುರು ಕಾರ್ಡು ಸಿಕ್ಕುತ್ತ ಹಾ೦ಗೆ, ಅರಬ್ ರಾಜ್ಯ೦ಗಳಲ್ಲಿ ಸಿಕ್ಕ. ಎಷ್ಟು ವರ್ಶ ಕೆಲಸ ಮಾಡಿರೂ ಸ್ಥಿರವಾಗಿ ವಾಸ ಮಾಡ್ಲೆ ರೆಸಿಡೆನ್ಸಿ ಪರ್ಮಿಟ್ ಸಿಕ್ಕ. ಹಾ೦ಗೆಯೇ ಸೌದಿ ಅರೇಬ್ಯಲ್ಲಿ ಪ್ರವಾಸಿ ವಿಸಾ ಅಥವಾ ಸ೦ದರ್ಶಕ ವಿಸಾ ಸಿಕ್ಕ.

  2. ಯಪ್ಪೋ !! ತಲೆಹರಟೆ !!!

    ನಿಜ ಶುದ್ದಿಯ ಬೈಲಿಲಿ ಹಂಚಿದ್ದಕ್ಕೆ ಧನ್ಯವಾದಂಗೊ.

    ಸಂತೃಪ್ತಿ ನೆಮ್ಮದಿ ಆರೋಗ್ಯ ನಿಂಗಳ ಕುಟುಂಬಕ್ಕೆ ದೇವರಲ್ಲಿ ಕರುಣಿಸಲಿ ಹೇಳಿ ಬೈಲಪರವಾಗಿ ಕೇಳಿಕೊಳ್ಳುತ್ತು ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×