14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ

14-ಮೇ-2016ರಂದು ಸುಳ್ಯದ ಶಿವಕೃಪಾ ಕಲಾಮಂದಿರಲ್ಲಿ ನೆಡದ – ಬಾಳಿಲ ಪ್ರಶಸ್ತಿ ಪ್ರದಾನ, ವಿಷುವಿಶೇಷ ಸ್ಪರ್ಧಾ ಬಹುಮಾನ ವಿತರಣೆ, ಪುಸ್ತಕ ಪ್ರಕಾಶನ, ವೇದವಿದ್ಯಾನಿಧಿ & ವಿದ್ಯಾನಿಧಿ ವಿತರಣೆ, ಲಲಿತಕಲೆ – ಕಾರ್ಯಕ್ರಮದ ಸಚಿತ್ರ ವರದಿ.
ವರದಿ: ಡೈಮಂಡು ಭಾವ.
ಫೋಟೋಕೃಪೆ: ಬೊಳುಂಬು ಮಾವ° & ಹಳೆಮನೆ ತಮ್ಮ.
ಕಾರ್ಯಕ್ರಮದ ಯಶಸ್ಸಿಂಗೆ ಭಾಗಿಯಾದ ಬೈಲ ಎಲ್ಲ ಬಂಧುಗೊಕ್ಕೆ ಕೃತಜ್ಞತೆಗೊ.
~
ಗುರಿಕ್ಕಾರ°

ಸುಳ್ಯ:
ಎಲ್ಲ ಭಾಷೆಯ ಬಗ್ಗೆ ಪ್ರೀತಿ ಇರೆಕು; ಆದರೆ, ನಮ್ಮ ಅಬ್ಬೆ ಭಾಷೆಯೇ ನವಗೆ ಮೊದಲಾಯೇಕು” ಹೇಳಿ ಮದುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಹೇಳಿದವು. ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಕೊಡಮಾಡುತ್ತಾ ಇಪ್ಪ ಬಾಳಿಲ ಪರಮೇಶ್ವರ ಭಟ್ಟ ಪ್ರಶಸ್ತಿ ಸ್ವೀಕರುಸಿ ಮಾತನಾಡಿದ ಅವ್ವು ‘ಹವ್ಯಕರಲ್ಲೂ ಇಂಗ್ಲೀಷ್‌ ವ್ಯಾಮೋಹ ಜೋರಿದ್ದು. ನಮ್ಮ ಭಾಷೆ ಮಾತಾಡುವ ಮಕ್ಕಳ ಬೈವ್ವ ಅಬ್ಬೆ–ಅಪ್ಪನ ಆನು ಕಂಡಿದೆ. ನಮ್ಮ ಭಾಷೆ ಬೆಳಸುತ್ತರೂ, ಉಳುಸುತ್ತರೂ ಅದು ನಾವೇ’ ಎಂದು ಅಭಿಪ್ರಾಯ ಪಟ್ಟವು.
‘ನಮ್ಮ ತಲೇಲಿ ಆಲೋಚನೆ ಬಪ್ಪದು ಮದಾಲಿಂಗೆ ಅಬ್ಬೆ ಭಾಷೆಲೇ. ಬೇರೆ ಬೇರೆ ಭಾಷೆಲಿ ಪುಸ್ತಕ ಬರದ ಹವ್ಯಕರು ಸುಮಾರು ಜೆನ ಇದ್ದವು. ಆದರೆ, ಅವ್ವಾರು ಹವ್ಯಕ ಭಾಷೆಲಿ ಬರದ್ದವಿಲ್ಲೆ. ಆದರೆ, ಹವ್ಯಕೇತರರು ಹವ್ಯಕ ಭಾಷೆಲಿ ಬರದ್ದವು. ಮಾರಪ್ಪ ಶೆಟ್ಟರು ಒಂದು ನಾಟಕ್ಕವೇ ಬರದ್ದವು’ ಹೇಳಿ ಅವ್ವು ಹೇಳಿದವು.
ಹವ್ಯಕ ಭಾಷೆಲಿ ಬರದರೆ ಆರು ಓದುತ್ತವು ಹೇಳ್ತ ಅಭಿಪ್ರಾಯ ಕೆಲವರಲ್ಲಿ  ಇದ್ದು. ಆರು ಓದುತ್ತವಿಲ್ಲೆ ಹೇಳ್ವದು ಸುಮ್ಮನೆ ಒಳ್ಳೆ ಕೃತಿಗೊ ಬಂದರೆ ಓದಿಯೇ ಓದುತ್ತವು’ ಹೇಳಿ ವಿವರಿಸಿದವು.
‘ಹವ್ಯಕ ಭಾಷೆಲಿ ಪುಸ್ತಕ ಪ್ರಕಟಣೆ ಮಾಡ್ಳೆ ಕಷ್ಟ ಇದ್ದು. ಹವ್ಯಕ ಪತ್ರಿಕೆ, ಹವ್ಯಕ ವಾರ್ತೆ ಹೇಳ್ತ ಪತ್ರಿಕೆಗೊ ಬತ್ತಾ ಇದ್ದು. ಆದರೆ, ಇವ್ವು ನಮ್ಮ ಭಾಷೆಲಿ ಇಲ್ಲೆ. ಕನಿಷ್ಠ ಪಕ್ಷ ಈಗ ಹವ್ಯಕ ಭಾಷೆ ಬ್ಲಾಗ್ ಮೂಲಕವಾಗಿ ಅಂತರ್ಜಾಲಲ್ಲಿ ಇಪ್ಪದು ಸಂತೋಷ’ ಹೇಳಿ ಒಪ್ಪಣ್ಣ.ಕಾಮ್‌ನ ಪ್ರಸ್ತಾಪ ಮಾಡಿದವು.

ಮುಖ್ಯ ಅತಿಥಿ ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಮಾತಾಡಿ, ಸಣ್ಣಾದಿಪ್ಪಗಿಂದಲೂ ಹವ್ಯಕರು, ಹವ್ಯಕ ಸಂಸ್ಕೃತಿಯ ಒಡನಾಟವ ಸ್ಮರಿಸಿದವು.
ತೂಗು ಸೇತುವೆಗಳ ಸರದಾರ ಹೇಳಿ ಹೆಸರು ಮಾಡಿದ ಗಿರೀಶ್‌ ಭಾರದ್ವಾಜ್‌ ಮಾತಾಡಿ, ‘ಪ್ರತಿಯೊಂದು ಜಾತಿ, ಭಾಷೆಗೂ ವಿಶೇಷ ಸಾಂಸ್ಕೃತಿಕ ಪರಂಪರೆ ಇದ್ದು. ಅದರ ಗುರುತಿಸಿ, ಬೆಳೆಸುವ ಅಗತ್ಯ ಇದ್ದು’ ಹೇಳಿ ಪ್ರತಿಪಾದಿಸಿದವು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಮಾಜಿಕ ಧುರೀಣ ಆನೆಕಾರ್‌ ಗಣಪಯ್ಯ ಮಾತಾಡಿ, ಒಪ್ಪಣ್ಣ ಬೈಲಿನ ಪ್ರಯತ್ನವ ಶ್ಲಾಘಿಸಿದವು.
‘ಸಂಸ್ಕೃತಿ, ಸಂಸ್ಕೃತಿ ಮೂಲಕ ಭಾಷೆ, ಆ ಭಾಷೆಯ ಮೂಲಕ ಸಮಾಜವ ಕ್ರೋಢೀಕರಿಸುವ ಕೆಲಸ ಆಯೇಕು. ಹವ್ಯಕ ಭಾಷೆ, ಸಂಸ್ಕೃತಿಯ ಬಗ್ಗೆ ಸಮುದಾಯಲ್ಲಿ ಜಾಗೃತಿ ಮೂಡಿಸುವ ಕೆಲಸವ ಒಪ್ಪಣ್ಣ ಪ್ರತಿಷ್ಠಾನ ಮಾಡುತ್ತಾ ಇಪ್ಪದು ಕೊಶಿ ಕೊಡುವ ವಿಚಾರ. ಈ ಪ್ರತಿಷ್ಠಾನ ಇನ್ನಷ್ಟು ಶೈಕ್ಷಣಿಕವಾಗಿ ಬೆಳೆಯಕ್ಕು’ ಹೇಳಿ ಹಾರೈಸಿದವು.
‘ಒಂದು ಹಂತಲ್ಲಿ ಬ್ಲಾಗ್‌, ವಾಟ್ಸ್‌ಆ್ಯಪ್‌ ಮೂಲಕ ಎಲ್ಲೊರಿಂಗೂ ತಲುಪಲೆ ಸಾಧ್ಯವಿಲ್ಲೆ. ಹಾಂಗಾಗಿ ಪ್ರತಿಷ್ಠಾನ ಹೆಚ್ಚು ಹೆಚ್ಚು ಪುಸ್ತಕ ಪ್ರಕಟಣೆಗೆ ಒಲವು ತೊರುಸೆಕ್ಕು’ ಹೇಳಿ ಸಲಹೆ ನೀಡಿದವು.
ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್‌ ಎಳ್ಯಡ್ಕ, ಬೈಲಿನ ಮಾಷ್ಟ್ರು ಮಾವ ಪ್ರಸ್ತಾವಿಕವಾಗಿ ಮಾತನಾಡಿವು.
ಪ್ರತಿಷ್ಠಾನದ ಅಧ್ಯಕ್ಷ, ಬೈಲಿನ ಶರ್ಮಪ್ಪಚ್ಚಿ ಸ್ವಾಗತಿಸಿದವು. ತೆಕ್ಕುಂಜೆ ಕುಮಾರ ಮಾವ ಧನ್ಯವಾದ ಹೇಳಿದವು. ಸುಭಗ ಭಾವ ಕಾರ್ಯಕ್ರಮ ನಿರೂಪಣೆ ಮಾಡಿದವು.
ಪ್ರೊ.ವಿ.ಬಿ ಅರ್ತಿಕಜೆ ಅಜ್ಜ, ಪ್ರೊ.ಹರಿನಾರಾಯಣ ಮಾಡಾವು ಮಾವ, ಸ್ಪರ್ಧಾ ವಿಜೇತರು, ಕಲಾಸಕ್ತ ಬಂಧುಗೊ ನೂರಾರು ಜನ ಸೇರಿತ್ತಿದ್ದವು.

ಬಹುಮಾನ ವಿತರಣೆ: ಪ್ರತಿಷ್ಠಾನ ನಡೆಸಿದ ಈ ವರ್ಷದ ವಿಷು ವಿಶೇಷ ಸ್ಪರ್ಧೆಯ ವಿಜೇತರಿಂಗೆ ಇದೇ ಸಂದರ್ಭಲ್ಲಿ ಬಹುಮಾನ ವಿತರಣೆ ನೆರವೇರಿತ್ತು.
“ಪ್ರತಿಸೃಷ್ಟಿ ಕೃತಿ ಲೋಕಾರ್ಪಣೆ:ಡಾ. ಹರಿಕೃಷ್ಣ ಭರಣ್ಯರು ಬರದ ಕಾದಂಬರಿ “ಪ್ರತಿಸೃಷ್ಟಿ” ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತ್ತು.
ಕುರುಕ್ಷೇತ್ರಕ್ಕೊಂದು ಆಯೋಗ:  ದೇರಾಜೆ ಸೀತಾರಾಮಯ್ಯ ಇವ್ವು ಬರೆದ ‘ಕುರುಕ್ಷೇತ್ರಕ್ಕೊಂದು ಆಯೋಗ’ ಕೃತಿ ಆಧರಿಸಿದ ವಿಶಿಷ್ಟ ಯಕ್ಷ–ನಾಟಕವ ಕದ್ರಿ ನವನೀತ ಶೆಟ್ಟಿ ಬಳಗ ಆಕರ್ಷಕವಾಗಿ ಪ್ರಸ್ತುತ ಪಡಿಸಿದ್ದು, ಎಲ್ಲೋರ ಮೆಚ್ಚುಗೆಗೆ ಪಾತ್ರ ಆತು.

ಫೋಟೋ:
(Courtesy: gopalbolumbu@gmail.com & vasantharaj.h@gmail.com)

ಶುದ್ದಿಕ್ಕಾರ°

   

You may also like...

4 Responses

 1. ಡೈಮಂಡು ಭಾವ° says:

  ಇದು ಪಷ್ಟಾಯಿದು…. ಒಳ್ಳೆ ಕಾರ್ಯಕ್ರಮ

 2. ಬೊಳುಂಬು ಗೋಪಾಲ ಮಾವ says:

  ಕಾರ್ಯಕ್ರಮ ಚೆಂದಕೆ ಕಳುದತ್ತು. ಡೈಮಂಡು ಭಾವಯ್ಯನ ವರದಿ ತುಂಬಾ ಲಾಯಾಕಾತು. ಸಭೆಯ ಪಟವ ಕಡೆಂಗೆ ಹಾಕಿದ್ದದು ಸರಿಯಾಗಿದ್ದು. ಕಾರ್ಯಕ್ರಮಕ್ಕೆ ಬಾರದ್ದವಕ್ಕೆ ನಿಜವಾಗಿಯೂ ಒಂದು ಒಳ್ಳೆ ಕಾರ್ಯಕ್ರಮ ತಪ್ಪಿದ್ದರಲ್ಲಿ ಸಂಶಯ ಇಲ್ಲೆ.

 3. S.K.Gopalakrishna Bhat says:

  ಕಾರ್ಯಕ್ರಮ ಲಾಯಕ ಆಯಿದು. ಜನ ಆದದ್ದು ಸಾಲ .ಹತ್ತರಾಣವು ಬಂದದು ಕಮ್ಮಿ. ಸುಳ್ಯ ಹೊಡೆಲಿ ಪ್ರಚಾರ ಆಯಿದಿಲ್ಲೇ ಹೇಳಿ ಕಾಣುತ್ತು .

 4. ರಘು ಮುಳಿಯ says:

  ಸಚಿತ್ರ ವರದಿಗೆ ಧನ್ಯವಾದ . ಬೈಲಿನ ಬಂಧುಗೋ ಇನ್ನೂ ಹೆಚ್ಚಿನ ಸ೦ಖ್ಯೆಲಿ ಬಂದಿದ್ದರೆ ಒಂದು ಉತ್ತಮ ಕಾರ್ಯಕ್ರಮವ ಒಟ್ಟಿ೦ಗೆ ಸೇರಿ ನೋಡುಲಾವುತ್ತಿತ್ತು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *