14-ಸೆಪ್ಟೆಂಬರ್-2013: ಒಪ್ಪಣ್ಣನ ಬೈಲಿನ ಶ್ರೀ ಗುರುಭೇಟಿ – ಸಚಿತ್ರ ವರದಿ

September 14, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೆಪ್ಟೆಂಬರ್ ೧೪ಕ್ಕೆ ಒಪ್ಪಣ್ಣ ಬಳಗದವೆಲ್ಲ ಮಾಣಿ ಮಠಲ್ಲಿ ಶ್ರೀ ಗುರುಗಳೊಟ್ಟಿಂಗೆ ಆತ್ಮೀಯವಾಗಿ ಭೇಟಿ ಅಪ್ಪದು ಹೇಳಿ ನಿಶ್ಚೈಸಿದ್ದು, ಆ ದಿನಕ್ಕೆ ಎಲ್ಲೋರು ಕಾದು ಕೂದೊಂಡಿದ್ದಿದ್ದು ನಿಂಗೊಗೆಲ್ಲ ಗೊಂತಿದ್ದು.

ಉದಿಯಪ್ಪಗಳೆ ಶರ್ಮಪ್ಪಚ್ಚಿ ದಂಪತಿಗೊ  ಬೈಲ ಪ್ರತಿಷ್ಠಾನದ ವತಿಂದ ಪಾದಪೂಜೆಯ ನೆರವೇರಿಸಿದವು.
ಬೈಲ ನೆಂಟ್ರುಗೊ ಎಲ್ಲಾ ಒಬ್ಬೊಬ್ಬನೇ ಬಂದು ಸೇರಿದವು.
ಒಪ್ಪಣ್ಣನ ಬೈಲಿನವು ಎಲ್ಲೋರುದೆ ಮೂರು ಗಂಟೆಗೆ ಹಾಜರು.
ಗುರುಗಳ ಭೇಟಿ ನಾಲ್ಕು ಗಂಟೆಗೆ ಹೇಳಿ ಕೆಲವು ಜೆನ ಅವರವರ ಆಫೀಸು ಕೆಲಸವ ಮುಗುಶಿಕ್ಕಿಯೇ ಬಂದವು.
ಹೊಸನಗರ ಹೊಡೇಣವರ ಭಿಕ್ಷೆ ಇದ್ದರಿಂದಾಗಿ, ಗುರಿಕ್ಕಾರಕ್ಕಳೊಟ್ಟಿಂಗೆ ಸಮಾಲೋಚನೆ, ಮಂತ್ರಾಕ್ಷತೆ ಎಲ್ಲ ಕಳುದಪ್ಪಗ ಗಂಟೆ ಐದೂವರೆ ಆತು.
ಮಾಣಿ ಮಠಲ್ಲಿ ಉಪ್ಪರಿಗೆಲಿ ಶ್ರೀ ಗುರುಗಳ ಭೇಟಿ ಹೇಳಿ ತೀರ್ಮಾನ ಆಗಿತ್ತು.

ಅಲ್ಲಿಗೆ ಹೋಗಿ ಅಪ್ಪಗ ಕೆಲವು ಜೆನ ಈಗಾಗ್ಲೇ ಸೇರಿ ಆಗಿತ್ತು. ಒಬ್ಬೊಬ್ಬನೇ ಬಂದು ಸೇರಿ ಅಪ್ಪಗ ಭರ್ತಿ ನಲುವತ್ತು ಜೆನ.
ಗುರುಗೊ ಬಪ್ಪಲೆ ರಜಾ ಹೊತ್ತು ಇದ್ದು, ನಾವೀಗ ಅತ್ಲಾಗಿತ್ಲಾಗಿ ಪರಿಚಯ ಮಾಡ್ಯೊಂಬೊ ಹೇಳಿ ಪರಿಚಯ ಸುರುಮಾಡಿಗೊಂಡವು.
ಮಾಷ್ಟ್ರು ಮಾವ, ಶರ್ಮಪ್ಪಚ್ಚಿ ದಂಪತಿಗೊ, ಒಪ್ಪಣ್ಣ, ಚುಬ್ಬಣ್ಣ, ಸುಭಗ, ಅಜ್ಜಕಾನ ಭಾವ, ಶ್ರೀ‌ಅಕ್ಕ, ಡೈಮಂಡು ಭಾವ, ನೆಗೆಚಿತ್ರ ಶಾಮಣ್ಣ, ಗೋಪಾಲಣ್ಣ ದಂಪತಿಗೊ, ಪವನಜ ಮಾವ, ಹಳೆಮನೆ ಅಣ್ಣ ತಮ್ಮಂದ್ರು, ಕುಂಟಾಂಗಿಲ ಭಾವ, ಆಚಕರೆ ಮಾಣಿ, ವಿದ್ಯಕ್ಕ, ಬೊಳುಂಬು ಭಾವ, ಬೆಟ್ಟುಕಜೆ ಮಾಣಿ, ವಿಟ್ಳ ಕಿಟ್ಟಣ್ಣ, ಕುಂಟಾಂಗಿಲ ಭಾವ, ಮಂಗ್ಳೂರ ಮಾಣಿ, ಕುಕ್ಕಿಲ ದಂಪತಿಗೊ, ವಿಜಯತ್ತೆ, ಶೇಪು ಭಾವ, ದೀಪಿಅಕ್ಕ, ಬೈಲಿನ ರುಚಿರುಚಿ ಅಡುಗೆ ಪ್ರವೀಣೆ ವೇಣಿ ಅಕ್ಕ – ಎಲ್ಲೋರು ಅಲ್ಲಿ ಸೇರಿದ್ದವು.
ಕಳುದ ವರ್ಷ ಬೆಂಗಳೂರಿನ ಚಾತುರ್ಮಸ್ಯದ ಸಮೆಲಿ ಕೆಲವು ಜೆನಂಗಳ ಕಾಂಬಲೆ ಸಿಕ್ಕಿತ್ತು.
ಬೈಲಿಲ್ಲಿ ಫೊಟೋಲ್ಲಿ ಕಾಂಬ ಮೋರೆಯ ಇಲ್ಲಿ ಮುಖತಾ ಕಂಡು ಪರಿಚಯ ಆಗಿ ಅಪ್ಪಗ ಎಲ್ಲೋರಿಂಗು ಕೊಶಿ ಆತು.
ಎಲ್ಲಾ ಪಟ್ಟಾಂಗವೇ ಪಟ್ಟಾಂಗ!

ಪರಿಚಯ ಆಗೆಂಡಿಪ್ಪಗ ಗುರುಗೊ ಬಂದೇ ಬಿಟ್ಟವು.
ಮಾಷ್ಟ್ರು ಮಾವ ಶ್ರೀ ಗುರುಗಳಿಂಗೆ ತುಳಸೀ ಮಾಲೆ ಹಾಕಿದವು.
ಶರ್ಮಪ್ಪಚ್ಚಿ, ಒಪ್ಪಣ್ಣ ಸುಭಗಣ್ಣ ಎಲ್ಲ ಒಟ್ಟು ಸೇರಿ ಫಲ ವಸ್ತುಗಳ ಸಮರ್ಪಿಸಿದವು.
ಮತ್ತೆ, ಗುರಿಕ್ಕಾರ್ರು ಒಪ್ಪಣ್ಣನ ಹಾಂಗೆ ನಿಂದೊಂಡು, ನಮ್ಮ ಬೈಲಿನ ಬಗ್ಗೆ, ಒಪ್ಪಣ್ಣ ಪ್ರತಿಷ್ಠಾನದ ಬಗ್ಗೆ ಚುಟುಕಾಗಿ ಪೀಟಿಕೆ ಮಡಗಿದವು. ಇಪ್ಪತ್ತೇಳು ನಕ್ಷತ್ರದ ಹಾಂಗೆ ಇಪ್ಪತ್ತೇಳು ವೈವಿಧ್ಯಮಯ ಚಟುವಟಿಕೆಗಳ ಪ್ರತಿಷ್ಠಾನ ನೆಡೆಶುತ್ತಾ ಇದ್ದು, ಇದು ಶ್ರೀ ಮಠದ ವಿವಿಧ ಯೋಜನೆಗೆ ಪೂರಕವಾಗಿ ಇದ್ದು. ಇದೀಗ ಒಪ್ಪಣ್ಣ ಬಳಗದವೆಲ್ಲ ಒಟ್ಟಿಂಗೆ ಎರಡ್ನೇ ಸರ್ತಿ ಶ್ರೀ ಗುರುಗಳ ಭೇಟಿ ಆವ್ತಾ ಇದ್ದವು. ಬೈಲು ಶುರುವಾದ ಹೊತ್ತಿಂದ ಅದರ ಮೆಚ್ಚಿ, ಶುದ್ದಿಗವಕ್ಕೆ ಒಪ್ಪ ಕೊಟ್ಟೊಂಡು, ಆಶೀರ್ವದಿಸುತ್ತ ಇದ್ದವು ಶ್ರೀ ಗುರುಗೊ. ಅದರ ಬೆಳವಣಿಗೆಗೆ ಗುರುಗಳ ಆಶೀರ್ವಾದ, ಅವರ ಪ್ರೋತ್ಸಾಹ ಏವತ್ತುದೆ ಇದ್ದು ಹೇಳಿ ಹೇಳಿದ ಒಪ್ಪಣ್ಣ.
ಬೈಲಿಲ್ಲಿ ಬಪ್ಪ ಸಾರಡಿ ತೋಡು, ಕಾಂಬು ಅಜ್ಜಿ, ಬಂಡಾಡಿ ಅಜ್ಜಿ ಎಲ್ಲೋರನ್ನುದೆ ಗುರುಗೊ ನೆಂಪು ಮಾಡ್ಯೊಂಡವು.
ಪುರುಸೊತ್ತು ಸಿಕ್ಕಿಯಪ್ಪಗ ಓದಲೆ ಅನುಕೂಲ ಆವ್ತ ಹಾಂಗೆ, ಬೈಲಿಲ್ಲಿ ಬಂದ ಕೆಲವು ಶುದ್ದಿಗಳ ಶ್ರೀಅಕ್ಕ ಪ್ರಿಂಟು ತೆಗದು ಪುಸ್ತಕದ ರೂಪಲ್ಲಿ ಮಾಡಿ ಗುರುಗವಕ್ಕೆ ಸಮರ್ಪಿಸಿದವು.

ಹವ್ಯಕ ಭಾಷೆ ಹೇಳಿರೆ ಸಮೃದ್ಧ ಭಾಷೆ. ಅದರಲ್ಲಿಪ್ಪ ಧ್ವನಿ, ಮಾಧುರ್ಯ, ಸಂಸ್ಕೃತ ಬಿಟ್ಟರೆ ಬೇರೆ ಏವ ಭಾಷೆಲಿಯೂ ಇಲ್ಲೆ ಹೇಳಿ ಗುರುಗೊ ಹೇಳಿದವು.
ಎಲ್ಲೋರಿಂಗು ಆಸಕ್ತಿ ಹುಟ್ಟುಸುವ ಹಾಂಗೆ ವೆಬ್ ಸೈಟಿಲ್ಲಿ ಹೊಸತನಲ್ಲಿ ಶ್ರೀ ಮಠದ ಪರಿಚಯ ಮಾಡೆಕು, ಇದಕ್ಕೆ ಒಪ್ಪಣ್ಣ ಬಳಗದ ಸಹಕಾರ ಬೇಕು ಹೇಳಿ ಗುರುಗೊ ಹೇಳಿದವು.
ಶ್ರೀ ಮಠಂದ ನೆಡೆತ್ತಾ ಇಪ್ಪ ರಾಮಕಥೆಯ ಬಗ್ಗೆ ಎಲ್ಲೋರುದೆ ಮೆಚ್ಚುಗೆ ತೋರುಸುತ್ತಾ ಇದ್ದವು, ಇದರಿಂದ ಸಮಾಜಕ್ಕೇ ಒಳ್ಳೆತ ಬೆಲೆ – ಹೆಮ್ಮೆ ಬಯಿಂದು ಹೇಳಿ ಎಲ್ಲೋರುದೆ ಹೇಳಿದವು.
ದೀಪಿಕಕ್ಕ, ರಾಮಕಥೆಲಿ, ಹಾಡುಗಳ ಹಾಡ್ತ ಬಗ್ಗೆ ಗುರುಗೊ ನೆಗೆ ಮಾಡ್ಯೊಂಡು, ಮೆಚ್ಚುಗೆಯ ಮಾತಾಡಿದವು.
ರಾಮಕಥೆಲಿ ಪ್ರಮುಖ ಜವಾಬ್ದಾರಿಯ ತೆಕ್ಕೊಳ್ತಾ ಇಪ್ಪ ಶ್ರೀಯುತ ಗಜಾನನ ಶರ್ಮಾ ಅವು, ಬೈಲಿನ ಮಿಲನಲ್ಲಿ ಭಾಗವಹಿಸಿದ್ದು, ಬೈಲಿನ ಬಗ್ಗೆ ತಿಳ್ಕೊಂಡದು ಎಲ್ಲೋರಿಂಗೂ ಕೊಶಿ ಆಗಿತ್ತು.

ಶ್ರೀ ಅಕ್ಕ ತಯಾರು ಮಾಡಿದ ಹನುಮಂತನ ಚಿತ್ರದ ಒಂದು ದೊಡ್ಡ ಗ್ಲಾಸ್ ಪೈಂಟಿಂಗಿನ ಶ್ರೀ ಮಠಕ್ಕೆ ಸಮರ್ಪಿಸಿದವು.
ಕಡೆಂಗೆ ದೀಪಿಕಕ್ಕ ಮಧುರ ಕಂಠಲ್ಲಿ, ಬೈಲಿನ ಆಶಯ ಗೀತೆಯ ಚೆಂದಕೆ ಹಾಡಿತ್ತು.

ಬೈಲಿನವೆಲ್ಲ ಗುರುಗಳ ಒಟ್ಟಿಂಗೆ ನಿಂದೊಂಡು, ಒಂದು ಗ್ರೂಪ್ ಫೊಟೋ ತೆಗವಲುದೆ ಅನುವು ಮಾಡಿ ಕೊಟ್ಟದು ಕೊಶೀ ಆತು.
ವಿಜಯ ಚಾತುರ್ಮಾಸ್ಯಲ್ಲಿ ಒಪ್ಪಣ್ಣ ಬೈಲಿನವೆಲ್ಲೋರು ಒಟ್ಟುಸೇರಿ ಶ್ರೀ ಗುರುಗಳ ಆಶೀರ್ವಾದಂಗಳ ತೆಕ್ಕೊಂಡು ಅವರೊಟ್ಟಿಂಗೆ ಕಳುದ ಒಂದೂವರೆ ಗಂಟೆ ಅಲ್ಲಿ ಸೇರಿದವರ ಮನಸ್ಸಿಲ್ಲಿ ಏವತ್ತೂ ಒಳಿಗು.

ಹರೇರಾಮ

ಹಳೆಮನೆ ತಮ್ಮ, ಚುಬ್ಬಣ್ಣ ತೆಗದ ಕೆಲವು ಪಟಂಗೊ ಇಲ್ಲಿದ್ದು:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಬೋದಾಳ
  ಬೋದಾಳ

  ಆನುದೇ ಬರೆಕ್ಕೂ ಹೇದು ಹೆರಟದು. ಆದರೆ ಅಟ್ಟ ಹತ್ತುಲಪ್ಪಾಗ ಪುಚ್ಚೆ ಅಡ್ಡ ಬಂತು. ಚೆಲಾ… ಎಂತ ಮಾಡುದು ಹೇದು ಆಚಕರೆ ಮಾಣಿಯ ಕಳುಗಿದೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಅಡ್ಕತ್ತಿಮಾರುಮಾವ°ಜಯಶ್ರೀ ನೀರಮೂಲೆಮಾಷ್ಟ್ರುಮಾವ°ವಸಂತರಾಜ್ ಹಳೆಮನೆಶುದ್ದಿಕ್ಕಾರ°ಜಯಗೌರಿ ಅಕ್ಕ°ಬೋಸ ಬಾವಒಪ್ಪಕ್ಕಡಾಗುಟ್ರಕ್ಕ°ನೀರ್ಕಜೆ ಮಹೇಶಅಜ್ಜಕಾನ ಭಾವಪೆರ್ಲದಣ್ಣಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿಮಾಲಕ್ಕ°ಸುವರ್ಣಿನೀ ಕೊಣಲೆಅಕ್ಷರ°ಎರುಂಬು ಅಪ್ಪಚ್ಚಿಪುತ್ತೂರುಬಾವಹಳೆಮನೆ ಅಣ್ಣಪೆಂಗಣ್ಣ°ಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ