Oppanna.com

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿವಿಜೇತೆ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ.

ಬರದೋರು :   ವಿಜಯತ್ತೆ    on   11/11/2015    7 ಒಪ್ಪಂಗೊ

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ – ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಹಾಮಂಡಲ ಸಹಯೋಗಲ್ಲಿ ಪ್ರತಿವರ್ಷ ನಡದು ಬಪ್ಪ ಸಣ್ಣ ಕಥಾಸ್ಪರ್ಧೆಲಿ ಈ ಸರ್ತಿಯಾಣ ಪ್ರಶಸ್ತಿ, ಚೆಕ್ಕೆಮನೆ ಶ್ರೀಮತಿ ಪ್ರಸನ್ನಾ ಬರದ ‘ದಾರಿದೀಪ‘ ಕತೆಗೆ ಬಯಿಂದು. ಇವು ಶ್ರೀಮಾನ್ ವೆಂಕಟಕೃಷ್ಣ ಚೆಕ್ಕೆಮನೆಯವರ ಸಹಧರ್ಮಿಣಿ. ಈ ತಂಗಗೆ ಈ ಹಿಂದಾಣ ವರ್ಷಲ್ಲಿ ಒಂದರಿ ದ್ವಿತೀಯ ಇನ್ನೊಂದರಿ ತೃತೀಯ ಬಹುಮಾನ ಸಿಕ್ಕಿದ್ದು. “ಸಣ್ಣದಿಪ್ಪಗಂದಲೇ ಕವನ ಕೆಲವು ಬರದಿತ್ತಿದ್ದೆ. ಆದರೆ ಕತೆ,ಪ್ರಬಂಧ,ಲೇಖನಂಗೊ ಬರವಲೆ ಸುರುಮಾಡಿದ್ದು ಕೊಡಗಿನ ಗೌರಮ್ಮ ಕತಾಸ್ಪರ್ದೆಗೆ ಪ್ರವೇಶ ಮಾಡಿದ ಮತ್ತೆ”. ಹೇಳುವ ಈ ತಂಗೆ, ಈಗೀಗ ಹಲವಾರು ಪತ್ರಿಕೆಗೊಕ್ಕೆ ಬರದು ಪಳಗಿದ್ದು. ನಮ್ಮ ಒಪ್ಪಣ್ಣ ಬಯಲಿನ “ವಿಷುವಿಶೇಷ ಸ್ಪರ್ದೆಗೂ ಬರದು ಆಚವಾರಿ ಎರಡ್ನೇ ಬಹುಮಾನ ಬಯಿಂದು. ಪ್ರಸನ್ನನ ಮಗ ವಿನಯಶಂಕರನೂ ಕತೆ ಬರವ ಹವ್ಯಾಸ ಬೆಳೆಸಿಗೊಂಡಿದ್ದು, ಒಪ್ಪಣ್ಣ ಬಯಲಿಲ್ಲಿ ಅವನ ಕತೆ ಒಂದರಿ ಓದಿದ ನೆಂಪು. ಪ್ರಸನ್ನನ ‘ಇನಿದನಿ’ ಹೇಳ್ತ ಕವನ ಸಂಕಲನ ಕರ್ನಾಟಕ ಸರಕಾರ ಪುಸ್ತಕ ಪ್ರಾಧಿಕಾರಂದ ಪ್ರಕಟ ಆಯಿದು.
‘ನನ್ನ ಕೃಷಿ’ ಹೇಳ್ವ ಇವರ ಕವನ ಕೇರಳಸರಕಾರದ ಕನ್ನಡ ಮಾದ್ಯಮ ಎರಡ್ನೇ ಕ್ಲಾಸಿನ ಪುಸ್ತಕಕ್ಕೆ ಆಯ್ಕೆ ಆಯಿದು.

ಪ್ರಸನ್ನಾ-ವೆಂಕಟಕೃಷ್ಣಂಗೆ ಅಭಿನಂದನೆ.

ದ್ವಿತೀಯ:- ಶ್ರೀಮತಿ ಅದಿತಿ ಎಮ್.ಎನ್. ಬರದ ‘ತಮಸೋಮಾ ಜ್ಯೋತಿರ್ಗಮಯ’ ಕತೆಗೆ ಎರಡನೇಬಹುಮಾನ ಸಿಕ್ಕಿದ್ದು. ಇವು ಮೂಲತಃ ದಕ್ಷಿಣಕನ್ನಡದವು. ಒಂಭತ್ತು ವರ್ಷ ಸಾಪ್ಟ್ ವೇರ್ ಇಂಜಿನಿಯರಾಗಿ ಕೆಲಸಮಾಡಿಕ್ಕಿ ಈಗ ಮಹಾರಾಷ್ಟ್ರದ ಪುಣೆಲಿ ವಾಸ. ಕನ್ನಡ ಕಥನಕವನ ಬಳಗ ಬಿಡುಗಡೆ ಮಾಡಲಿಪ್ಪ ಕಥಾಸಂಕಲನಕ್ಕೆ ಇವರ ಕಥೆ ಆಯ್ಕೆ ಆಯಿದು. ಒಪ್ಪಣ್ಣ ಬಯಲಿಲ್ಲಿ ಛಂದೋಬದ್ದ ಪದ್ಯ ಬರವ ಈ ತಂಗೆಯ ಕತೆ, ಪ್ರಬಂಧ ತುಷಾರ,ಉದಯವಾಣಿಲಿ ಪ್ರಕಟ ಆಯಿದು.

ತೃತೀಯಃ- ಡಾ|| ಅಜಿತಾ ಶರ್ಮ ಬರದ ‘ಗುರುವಂದನೆ’ ಕತೆಗೆ ಮೂರನೇ ಬಹುಮಾನ ಬಯಿಂದು. ಪಾಂಡಿಚೇರಿ ಮೆಡಿಕಲ್ ಕಾಲೇಜಿಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುವ ಇವು ಡಾ|| ರಾಮಪ್ರಕಾಶರ ಸಹಧರ್ಮಿಣಿ. ಇವು ಕಾಸರಗೋಡು ನೀರ್ಚಾಲಿನ ಹತ್ತರಾಣ ದೇವಸ್ಯ ಕುಟುಂಬದ ಡಾ|| ಡಿ.ಎಸ್ ಶರ್ಮ ಹಾಂಗೂ ಸೌಮ್ಯ ಶರ್ಮ ಈ ದಂಪತಿಗಳ ಮಗಳು. ಈ ತಂಗೆ ಉದಯೋನ್ಮುಖ ಬರಹಗಾರ್ತಿಯಾಗಿ, ಕೊಡಗಿನ ಗೌರಮ್ಮ ಕಥಾಸ್ಪರ್ದೆಲಿಯೂ ಭಾಗವಹಿಸಿದ್ದು ಸಂತೋಷಾತು.

ಮೌಲ್ಯ ಮಾಪನ ಮಾಡಿದ ಮಹನೀಯರುಗೊ ಕ್ರಮವಾಗಿ:

  • ಶ್ರೀಮಾನ್ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮುಖ್ಯೋಪಾಧ್ಯಾಯರು, ಶ್ರೀಭಾರತೀ ವಿದ್ಯಾಪೀಠ ಬದಿಯಡ್ಕ.
  • ಇನ್ನಿಬ್ರು ಕೊಡಗಿನ ಗೌರಮ್ಮಪ್ರಶಸ್ತಿ ವಿಜೇತರೂ ಹೆಸರಾಂತ ಸಾಹಿತಿಗಳೂ, ಕತೆಗಾರ್ತಿಯರೂ ಆದ ಶ್ರೀಮತಿ ಜಯಾಯಾಜಿ ಶಿರಾಲಿ, ಹಾಂಗೂ ಶ್ರೀಮತಿ ಸವಿತಾ ಅಡ್ವಾಯಿ [ನಮ್ಮ ಸವಿತಕ್ಕ].
    ಈ ಮೂರೂ ಜೆನಕ್ಕೆ ಧನ್ಯವಾದ ಹೇಳ್ತಾ ವಿಜೇತೆಯರೆಲ್ಲರಿಂಗೂ ಅಭಿನಂದನೆಗಳ ಹೇಳ್ತಾ ಶುಭ ಹಾರೈಸುತ್ತೆ.

ದ್ವಿತೀಯ ತೃತೀಯ ಬಹುಮಾನಿತರು ಮುಂದೆಯೂ ಈ ವೇದಿಕೆಗೆ ಬರವಲಕ್ಕು.ಬರೆಯಿ, ಪ್ರಶಸ್ತಿ ಗಳಿಸಿ, ಹೇಳ್ತಾ ಕತೆ ಬರದು ಭಾಗವಹಿಸಿದೊವು [ಪ್ರಥಮ ಬಿಟ್ಟು] ಮುಂದೆ ಪ್ರಯತ್ನ ಮಾಡ್ಳೇ ಬೇಕು.

ಪ್ರಶಸ್ತಿ ಪ್ರದಾನ:
ಈ ಪ್ರಶಸ್ತಿ ಕೊಡುವ ಕಾರ್ಯಕ್ರಮವ ಬೆಂಗಳೂರು ಗಿರಿನಗರಲ್ಲಿ ಮಾಡುವ ಅಂದಾಜಿ. ಇದೀಗ ಈ ಸ್ಪರ್ದೆಗೆ ೨೦ನೇ ವರ್ಷ.
ಹತ್ತು ವರ್ಷಲ್ಲಿ ‘ಹತ್ತೆಸಳು’ ಹೇಳುವ ಶಿರೋನಾಮೆಲಿ (೨೦೦೫) ರಲ್ಲಿ ಹತ್ತು ವರ್ಷದ ಪ್ರಶಸ್ತಿ ವಿಜೇತ ಕತೆಗಳ ಸಂಕಲನ ಮಾಡಿದ್ದು ಗೊಂತಿದ್ದನ್ನೆ.
ಇದೀಗ ಮತ್ತೆ ಹತ್ತು ಕತಗಳ ಸೇರ್‍ಸಿ ಪುಸ್ತಕ ಮಾಡಿ, ನಮ್ಮ ಪರಮ ಪೂಜ್ಯ ಶ್ರೀ ಗುರುಗಳಿಂದಲೇ ಬಿಡುಗಡೆ, ಪ್ರಶಸ್ತಿ ಪ್ರದಾನ ಮಾಡ್ಳೆ ನಿವೇದನೆ ಮಾಡಿಗೊಂಬ ಯೋಜನೆ ಹಾಕಿದ್ದು ನಾವು.
ದಿನ ನಿಗದಿ ಆಯಿದಿಲ್ಲೆ. ಆದ ಕೂಡ್ಳೇ ಹೇಳ್ತೆ.
ಈ ಕಾರ್ಯಕ್ರಮಕ್ಕೆ ಒಪ್ಪಣ್ಣ ಬಯಲಿನ ಅಣ್ಣ-ತಮ್ಮಂದ್ರು, ಕತೆ ಬರದ ಅಕ್ಕ-ತಂಗೆಕ್ಕೊ ಬೇರೆ ಅತ್ತಿಗೆಕ್ಕೊ, ಹೆರಿಯೋರು, ಎಲ್ಲೋರೂ ಸೇರೆಕ್ಕೂಳಿ ಕೇಳಿಗೊಳ್ತೆ.

ಆತ್ಮೀಯತೆಲಿ,
~
ವಿಜಯತ್ತೆ
ಸಂಚಾಲಕಿ – ಕೊಡಗಿನ ಗೌರಮ್ಮ ಕಥಾಸ್ಪರ್ದೆ.

7 thoughts on “2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿವಿಜೇತೆ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ.

  1. ಪ್ರಶಸ್ತಿಗೊಕ್ಕೆ ಪಾತ್ರರಾದವಕ್ಕೆ ಅಭಿನಂದನೆ .

  2. ಪ್ರಶಸ್ತಿ ಪಡದವಕ್ಕು, ಸಂಘ ಟಕರಿಂಗು ಎಲ್ಲರಿಂಗೂ ಶುಭಾಶಯಗಳು

  3. ವಿಜೇತರೆಲ್ಲೋರಿಂಗು ಅಭಿನ೦ದನೆಗೊ.ಹಾ೦ಗೇ ಪುಸ್ತಕ ಪ್ರಕಟಣೆ ,ಬಿಡುಗಡೆ ಸಮಾರ೦ಭವು ಚೆ೦ದಕ್ಕೆ ನೆರವೇರಲಿ ಹೇಳಿ ಆ ದೇವರ ಹತ್ತರೆ ಬೇಡಿಗೊಳ್ತೆ .ಎಲ್ಲೋರಿಂಗೂ ದೀಪಾವಳಿಯ ಶುಭಾಶಯ೦ಗೊ .

  4. Prakash Ilanthilaಕೊಡಗಿನ ಗೌರಮ್ಮ ಪುರಸಾ್ಕರ ಪಡೆದ ಪ್ರಸನಾ್ನ ವಿ.ಚೆಕ್ಕೆಮನೆ, ಶ್ರೀಮತಿ ಅದಿತಿ, ಡಾ.ಅಜಿತಾ ಶರ್ಮ ಅವಕ್ಕೆ ತುಂಬು ಮನದ ಅಭಿನಂದನೆಗೊ. ಈ ಸಾಧನೆ ಹಿಂದೆ ಅವರ ಪರಿಶ್ರಮ ಇದ್ದು , ಅವರ ಸಾಮಾಜಿಕ ಚಿಂತನೆ ಇದ್ದು, ಅದು ಕಥಾರೂಪಲ್ಲಿ ವ್ಯಕ್ತವಾಯಿದು. ಶ್ರೀಗುರುದೇವರ ಕರುಣೆಯಿದು. ಒಳ್ಳೆದಾಗಲಿ…

  5. ಪ್ರಶಸ್ತಿ ವಿಜೇತೆ ಪ್ರಸನ್ನಾ ಚೆಕ್ಕೆ ಮನೆ ಹಾಂಗೂ ದ್ವಿತೀಯ ತೃತೀಯ ಬಹುಮಾನ ಪಡೆದ ಶ್ರೀಮತಿ ಅದಿತಿ ಮತ್ತೆ ಡಾ|| ಅಜಿತಾ ಶರ್ಮ ಇವಕ್ಕೆ ಅಭಿನಂದನೆಗೋ. ಸಾಹಿತ್ಯ ಕ್ಷೇತ್ರಲ್ಲಿ ಇವರ ಸಾಧನೆ ಹೀಂಗೇ ಮುಂದುವರಿಯಲಿ.

  6. ಪ್ರಸನ್ನಾ ಚೆಕ್ಕೆಮನೆ , ಅದಿತಿ ಎಂ.ಏನ್. ,ಡಾ|| ಅಜಿತಾ ಶರ್ಮ – ಮೂರೂ ಜನಕ್ಕೂ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×