Oppanna.com

26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ”

ಬರದೋರು :   ದೊಡ್ಡಭಾವ°    on   26/06/2015    2 ಒಪ್ಪಂಗೊ

26-ಜೂನ್, 2015, ಮುಜುಂಗಾವು – ಕಾಸರಗೋಡು:
ವಿದ್ಯಾರ್ಥಿಗೊ ಪರಸ್ಪರ ಹೊಂದಾಣಿಕೆಲಿ ಕಲ್ತು ಬೆಳೇಕು. ಈ ಹಂತಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಂಗೆ ಒಲವು ಮೂಡುದು ವಿದ್ಯಾರ್ಥಿಗೊಕ್ಕೆ ಜೀವನದ ಪಾಠವ ಹೇಳಿಕೊಡ್ತು. ಜೀವನಲ್ಲಿ ಶಿಸ್ತು ರೂಢಿಅಪ್ಪಲೆ ವಿದ್ಯಾರ್ಥಿ ದೆಸೆಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಮುಜುಂಗಾವಿಲಿ ಕಲಿತ್ತ ಎಲ್ಲ ಮಕ್ಕೊಗೂ ಸಮಾಜಂದ ಉತ್ತಮ ಸಹಕಾರ ಸಿಕ್ಕಲಿ. ಈ ನಿಟ್ಟಿಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಕೈಗೊಂಬ ಸಮಾಜಮುಖೀ ಕಾರ್ಯಕ್ರಮಂಗೊ ಇತರೇ ಸಂಘಟನೆಗೊಕ್ಕೆ ಪ್ರೇರಣೆಯಾಗಲಿ – ಹೇದು ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶೇಡಿಗುಮ್ಮೆ ರಮೇಶ್ವರ ಭಟ್ ಇಂದು ಹೇಳಿದವು. ಶ್ರೀ ಭಾರತೀ ವಿದ್ಯಾಪೀಠಲ್ಲಿ ವಿದ್ಯಾರ್ಥಿಗೊಕ್ಕೆ ಕೊಡಮಾಡಿದ ವಿದ್ಯಾನಿಧಿಯ ಸಮರ್ಪಣೆ ಮತ್ತು ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಗೊ ಆಗಿ ಮಾತಾಡಿದವು.

ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿಗಳಾದ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿತ್ತಿದ್ದವು. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ – ಶ್ರೀಕೃಷ್ಣ ಶರ್ಮ ಹಳೆಮನೆ, ಗ್ರಾಮೋತ್ಥಾನ ಫೌಂಡೇಶನ್ ಮೇಲ್ವಿಚಾರಕ ಚಂದ್ರಶೇಖರ್, ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶಾಂಬಾವಾ – ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶಾಮಣ್ಣ – ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ ಉಪಸ್ಥಿತಿ ಇತ್ತಿದ್ದವು. ಗ್ರಾಮೋತ್ಥಾನ ಫೌಂಡೇಶನ್ ವತಿಂದ ನೆಡದ ಬೇಸಿಗೆ ಕಂಪ್ಯೂಟರ್ ತರಬೇತಿಯ ಪ್ರಶಸ್ತಿಪತ್ರವನ್ನುದೇ ಇದೇ ಸಂದರ್ಭಲ್ಲಿ ವಿತರಿಸಿತ್ತು. ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದವು. ವಿದ್ಯಾರ್ಥಿಗಳಾದ ಅನನ್ಯ.ಎಂ ಸ್ವಾಗತಿಸಿ ಸುಹಾಸ್ ಬಿ.ಆರ್ ವಂದಿಸಿದವು. ಜಯಶ್ರೀ ಎಂ.ಸಿ ಕಾರ್ಯಕ್ರಮ ನಿರೂಪಿಸಿದವು.

ಬೈಲಿಂದ ಕೊಡಮಾಡಿದ ಈ ವಿದ್ಯಾನಿಧಿಯ ಪ್ರಾಯೋಜಕತ್ವವ ಶೇಡಿಗುಮ್ಮೆ ಶ್ರೀಮತಿ ಕಮಲಾ ಗೋವಿಂದ ಭಟ್ ಇವು ವಹಿಸಿಗೊಂಡಿತ್ತಿದ್ದವು.

2 thoughts on “26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ”

  1. ತುಂಬ ಒಳ್ಳೆಯ ಕೆಲಸ. ಪ್ರತಿಷ್ಠಾನಕ್ಕೆ ಅಭಿನಂದನೆಗೋ

  2. ಶ್ಲಾಘನೀಯ ಕೆಲಸ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×