ಹೊಸತ್ತರ ಒಪ್ಪಿಗೊಂಬದು

June 11, 2014 ರ 9:14 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೊಸತ್ತರ ಒಪ್ಪಿಗೊಂಬದು

ಶೀಯನಾಯುವ ಬಲವ ಜಯವ ಬೇಡಿರ್ದೊಡಂ ।
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ॥
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು ।
ಶ್ರೇಯಸ್ಸು ಧೀಮಹಿಮೆ – ಮಂಕುತಿಮ್ಮ

ಸುಮಾರು ಮದಲು ಓದಿದ ಒಂದು ಕಥೆ ನೆಂಪಾವುತ್ತು. ಒಬ್ಬ° ಮಾಣಿ ಹಳ್ಳಿಂದ ಪೇಟೆಗೆ ಕೆಲಸಕ್ಕೆ ಹೇದು ಬತ್ತ°. ಅವವ ಕೆಲಸಂದ ಖುಶಿಯಾಗಿ, ಮಾಣಿಯ, ಯೆಜಮಾನ ದೊಡ್ಡಪೇಟೆ ತೋರುಸಲೆ ಕರಕ್ಕೊಂಡು ಹೋವುತ್ತ°. ಅಲ್ಲಿ ಆ ಮಾಣಿ ಆಕಾಶದಷ್ಟು ಎತ್ತರದ ಕಟ್ಟೋಣಂಗೊ, ದೊಡ್ಡ ದೊಡ್ಡ ವಾಹನಂಗೊ ( ಅವನ ಕಣ್ಣಿಲ್ಲಿ ಜೆನಂಗೊ ಒಳ ಇಪ್ಪ ಹಾಂಗೇ ಅತ್ತಿತ್ತೆ ಹೋಪ ಮನಗೊ), ಅಗಾಲದ ದಾರಿಗೊ ಎಲ್ಲ ನೋಡ್ತ°. ಪೇಟೆಂದ ಹಳ್ಳಿಗೆ ಬಂದ ಮೇಲೆ ಇದೆಲ್ಲ ಅವ° ಊರಿನವಕ್ಕೆ ವಿವರುಸುತ್ತ°. ಊರಿನವ್ವು ಒಂದಾರಿ ಇವನ ತಣ್ಣಂಗೆ ನೋಡಿ ಎದ್ದು ಹೋವುತ್ತವು. ಮತ್ತಂದ ಅವನ ’ಲೊಟ್ಟೆಮಾಣಿ’ ಹೇದು ದಿನಿಗೇಳುಲೆ ಸುರು ಮಾಡ್ತವು, ಎಲ್ಲಿವರೆಗೆ ಹೇದರೆ ಅವ° ಸಾವ ಕಾಲಕ್ಕೆ ಆ ಮಾಣಿಯ ನಿಜವಾದ ಹೆಸರು ಎಲ್ಲೋರಿಂಗೂ ಮರದು ಹೋತಾಡ.
ಮತ್ತೊಂದರಿ ಇನ್ನೊಬ್ಬಂಗೆ ಅದೇ ಆ ದೊಡ್ಡ ಪೇಟೆಗೆ ಹೋಯೆಕಾಗಿ ಬಂತು. ಈ ಹೊಸ ಮಾಣಿ ಸುಮಾರು ಹೊಸ ವಿಷಯಂಗಳ ಅಲ್ಲಿ ನೋಡಿ ಆಶ್ಚರ್ಯ ಪಡ್ತ°. ಹಳ್ಳಿಗೆ ಹೋದಮೇಲೆ ಅವಂಗೆ ’ಲೊಟ್ಟೆಮಾಣಿ’ಯ ವಿಷಯಲ್ಲಿ ಪಾಪ ಹೇದು ಕಾಣುತ್ತು, ಆದರೆ ಸತ್ಯ ಹೇಳಿರೆ ಎಂತಕ್ಕು ಹೇಳಿಯೂ ಅಂದಾಜಿ ಆವುತ್ತು. ಹಾಂಗಾಗಿ ಅವ° ಪೇಟೆಯ ಶುದ್ದಿ ಹೇಳುವಾಗ ನದಿಯ ದಂಡೆಲಿ ಮನೆಕಟ್ಟಿದ್ದ ಶುದ್ದಿ, ಪೇಟೆಯ ಕಾಡಿಲ್ಲಿ ಹುಲಿ ಹಿಡುದ ಶುದ್ದಿ… ಹೀಂಗೆ ಸುಮಾರು ಶುದ್ದಿ ಹೇಳ್ತ°. ಈಗ ಊರಿನವರ ಕಣ್ಣಿಂಗೆ ಹೊಸ ಮಾಣಿ ಹುಶಾರಿ ಒಪ್ಪಣ್ಣ. ಅವನ ನೆರೆಕರೆಯೋರೆಲ್ಲ ಅವಂಗೆ ತುಂಬ ಮರ್ಯಾದಿ ಕೊಡ್ತವು.

ಸತ್ಯದ ದಾರಿಲಿ ಸುಮಾರು ಕಲ್ಲು ಮುಳ್ಳು ಇರ್ತು. ಸಾಕ್ರೆಟಿಸ್ಸಿಂಗೆ ವಿಷ ಕೊಟ್ಟವು, ಯೇಸುವಿನ ಶಿಲುಬೆಗೆ ಹಾಕಿದವು, ಕುಮಾರಿಲ ಭಟ್ಟರ ಸುಟ್ಟವು. ನಮ್ಮೊಳ ಇಪ್ಪ ಏವದೋ ಒಂದು ವಿಷಯ ನಮ್ಮ ಹೊಸತ್ತರ ಒಪ್ಪಿಗೊಂಬಲೆ ಬಿಡ್ತಿಲ್ಲೆ. ಮನೆಯ ಮೂಲೆಲಿ ಹಳೇ ಸಾಮಾನುಗೊ ಇದ್ದ ಹಾಂಗೇ, ಮನಸ್ಸಿನ ಮೂಲೆಲಿಯೂ ಬದಲದ್ದೇ ಹಳತ್ತಾದ ಉಪಯೋಗಕ್ಕಿಲ್ಲದ್ದ ನಂಬಿಕೆಗೊ ಸುಮಾರಿರ್ತು.

ಆ ಹಳ್ಳಿ ಜೆನಂಗೊಕ್ಕೆ ’ಲೊಟ್ಟೆಮಾಣಿ’ಯ ನಂಬದ್ದೇ ಇಪ್ಪದಕ್ಕೆ ಕಾರಣ ಇತ್ತು. ಅವ್ವು ಬದುಕ್ಕಿ ಬಂದ ರೀತಿಗೆ ಹೊಸ ವಿಷಯವ ಕಲ್ಪನೆ ಮಾಡ್ಳೇ ಅವಕ್ಕೆ ಎಡಿಗಾಯಿದಿಲ್ಲೆ. ಪ್ರತೀ ಹತ್ತು ದೈಹಿಕವಾಗಿ ಉದಾಸನದವಕ್ಕೆ, ಹತ್ತು ಸಾವಿರದಷ್ಟು ಮನಸಿಕವಾಗಿ ಉದಾಸನದವ್ವು ಇರ್ತವಡ – ಬದಲುವ ಆಲೋಚನೆ ಮಾಡ್ಳೇ ಎಡಿಯದ್ದವು. ಹೆದರಿಕೆಯ ಮೂಲಸ್ಥಾನ ಅದುವೇ. ಮುಚ್ಚಿ ಹೋದ ಮನಸ್ಸು.

ಹೊಸತ್ತಕ್ಕೆ ಬಿಡುಸಿಮಡಿಗಿದ ಮನಸ್ಸು ವರ ಹೇಳುವ ಭಾವಲ್ಲಿಯೇ ವಿಶ್ವಾಮಿತ್ರರು ’ಧಿಯೋ ಯೋ ನಃ ಪ್ರಚೋದಯಾತ್’ ಹೇಳಿದ್ದಾದಿಕ್ಕೋ? ನಾವೆಲ್ಲೋರೂ ಹಾಂಗೆ ಭಾವಿಸಿಯರೆ, ಬದುಕು ಎಷ್ಟು ಚೆಂದ ಅಕ್ಕು! ಅಲ್ಲದಾ?

~~~***~~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ‘ಸತ್ಯದ ದಾರಿಲಿ ಸುಮಾರು ಕಲ್ಲು ಮುಳ್ಳು ಇರ್ತು.”ಮೂರೂ ಕಾಲಕ್ಕೆ ಒಪ್ಪುವ ಮಾತು ,ಸತ್ಯದ ದಾರೀಲಿ ಹೊಪೋರಿಂಗೆ ಎಲ್ಲರಿಂಗೂ ಇದರ ಕಟು ಅನುಭವ ಆವುತ್ತು ,ಒಳ್ಳೆಯ ಚಿಂತನೆಯ ಕೊಟ್ಟದಕ್ಕೆ ಧನ್ಯವಾದಂಗ

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಧನ್ಯವಾದಂಗ ಲಕ್ಷ್ಮಿ ಅತ್ತೆ :)
  ಸತ್ಯದ ದಾರಿ ಎಷ್ಟೇ ಕಷ್ಟ ಆದರೂ, ಧರ್ಮ ನಮ್ಮೊಟ್ಟಿಂಗೆ ಇದ್ದು ಹೇಳುದೇ ಧೈರ್ಯ ಅಲ್ಲದಾ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಎರುಂಬು ಅಪ್ಪಚ್ಚಿಮಾಲಕ್ಕ°ಚುಬ್ಬಣ್ಣಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆದೇವಸ್ಯ ಮಾಣಿಹಳೆಮನೆ ಅಣ್ಣದೊಡ್ಡಭಾವಡಾಗುಟ್ರಕ್ಕ°ವೇಣೂರಣ್ಣವಿದ್ವಾನಣ್ಣಅನಿತಾ ನರೇಶ್, ಮಂಚಿಬಟ್ಟಮಾವ°ಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಶ್ಯಾಮಣ್ಣಪುಟ್ಟಬಾವ°ಚೂರಿಬೈಲು ದೀಪಕ್ಕಸಂಪಾದಕ°ಅಕ್ಷರದಣ್ಣಪುತ್ತೂರಿನ ಪುಟ್ಟಕ್ಕವಾಣಿ ಚಿಕ್ಕಮ್ಮಅಕ್ಷರ°vreddhiಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ