ಆಕಾಶವಾಣಿ – ವಾರ್ತೆಗಳು. ಓದುತ್ತಿರುವವರು..

November 5, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೋಯ್!

ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು ಜೇ ಬಾಲಚಂದ್ರಾ..
ಆಕಾಶವಾಣಿ, ಪ್ರದೇಶ ಸಮಾಚಾರ. ಓದುತ್ತಿರುವವರು ಮಧ್ವರಾಜ್..
ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶ್ರೂಯಂತಾಂ. ಪ್ರವಾಚಕಃ ಬಲದೇವಾನಂದ ಸಾಗರಃ

ಈಗೀಗ ರಜ ರೇಡ್ಯ ಕೇಳ್ತದು ಕಮ್ಮಿ ಆದರೂ, ಮದಲಿಂಗೆ ಹೆಚ್ಚಿನೋರುದೇ ವಾರ್ತೆ- ಪ್ರದೇಶಸಮಾಚಾರ ಕೇಳಿಯೇ ದೊಡ್ಡ ಆದ್ದು. ಅಲ್ಲದಾ?
ಈಗಳೂ ರೇಡ್ಯ ಕೇಳೆಕ್ಕು ಹೇಳಿ ಆವುತ್ತಾ?
ಇದಾ, ಇಂಟರ್ನಟ್ಟಿಲೇ ಸಿಕ್ಕುತ್ತು:

ಹಳೇರೇಡ್ಯ ಇದ್ದರೆ ತಿರುಗುಸಿ ನೋಡಿ ಆತೋ.. :-)

ವಾರ್ತೆ:
ವಾರ್ತೆ -ಹೇಳಿರೆ ದೆಹಲಿಯ ಕೇಂದ್ರಸ್ಥಾನಂದ ರಚನೆ ಆಗಿ ಮೂಡಿ ಬಪ್ಪ ಕಾರ್ಯಕ್ರಮ.
ಎಲ್ಲಾ ಭಾಶೆಗಳಲ್ಲಿಯೂ ಈ ವಾರ್ತೆ ಪ್ರಸಾರ ಆವುತ್ತು.
ಏಳೂ-ಮೂವತ್ತೈದರ ವಾರ್ತೆ ತಪ್ಪುಸಿರೆ ಆ ದಿನ ಎಂತದೋ ಕಳಕ್ಕೊಂಡ ಭಾವನೆ ಬಕ್ಕು ಮದಲಾಣೋರಿಂಗೆ.

ವಾರ್ತೆ – ಧ್ವನಿ ರೂಪ:
ಇದಾ, ಎಲ್ಲಾ ವಾರ್ತೆಗಳನ್ನೂ ಇಲ್ಲಿ ನೇಲುಸುತ್ತವಿದಾ:

http://newsonair.com/nsd_schedule.asp

ಬೇಕಾದ್ದರ ಕಂಪ್ಯೂಟರಿಂಗೆ ಇಳುಸಿಗೊಂಡು, ಬೇಕಪ್ಪಗ ಕೇಳುಲಕ್ಕು.

ವಾರ್ತೆ – ಬರಹ ರೂಪ:
ನಮ್ಮ ಹತ್ತರೆ ಕೇಳುಲೆ ಸಮಗಟ್ಟು ವ್ಯವಸ್ಥೆ ಇಲ್ಲೆಯೋ, ಚಿಂತೆ ಇಲ್ಲೆ.
ಇದೇ ವಾರ್ತೆ ಬರಹರೂಪಲ್ಲಿಯೂ ಸಿಕ್ಕುತ್ತು. ಪೀಡೀಯಪ್ಪಿನ ಓದುತ್ತ ಸೋಪ್ಟುವೇರು ಹಾಕಿಂಡ್ರೆ ಮುಗಾತು.

http://newsonair.com/Text-nsd-Bulletins-schedule.asp

ಪ್ರದೇಶ ಸಮಾಚಾರ:
ವಾರ್ತೆ ಆತು, ಇನ್ನು ಸ್ಥಳೀಯ ಶುದ್ದಿಗೊ ಇಪ್ಪ ಪ್ರದೇಶಸಮಾಚಾರ ಆಗೆಡದೋ.
ಅದುದೇ ಇದ್ದು.
ಇದಾ, ಈ ಪುಟಲ್ಲಿ ಎಲ್ಲಾ ಊರಿನ ಪ್ರದೇಶ ಸಮಾಚಾರಂಗಳೂ ಸಿಕ್ಕುತ್ತು:

http://newsonair.com/Regional-Audio-Bulletins-News-schedule.asp

ನಿಂಗಳ ಪೈಕಿಯೋರಿಂಗೆ ಈ ಸಂಕೊಲೆ ಕೊಟ್ಟು, ಅವಕ್ಕುದೇ ಒಂದರಿ ಬಾಲ್ಯ ನೆಂಪು ಮಾಡುಸಿಕೊಡಿ ಆತೋ?! :-)

~*~*~

ಆಕಾಶವಾಣಿ - ವಾರ್ತೆಗಳು. ಓದುತ್ತಿರುವವರು.., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಳ್ಳೆ ಮಾಹಿತಿ.
  ಪೇಟೆಲಿಪ್ಪವು, ರೇಡಿಯೋಲ್ಲಿ ವಾರ್ತೆ ಕೇಳುವವು ತುಂಬಾ ಕಮ್ಮಿ ಜೆನಂಗೊ ಇಕ್ಕಷ್ಟೆ.
  ಹಳ್ಳಿಲಿ ಈಗಳೂ ರೇಡಿಯೋಲ್ಲಿ ಕೇಳುವವು ಇದ್ದವು.
  ಎಫ್.ಎಂ ಬಂದ ನಂತ್ರ ರೇಡಿಯೋ ಕೇಳುವವು ಇದ್ದವು, ಆದರೆ ವಾರ್ತೆಗೆ ಬೇಕಾಗಿ ಅಲ್ಲ.

  [Reply]

  VA:F [1.9.22_1171]
  Rating: 0 (from 0 votes)
 2. Ganesh bhat

  Aagina kaalada radio keluva majaane bere……..
  Eega koti rupaayi kottaroo aa anubhava sikkuttille……..:-)

  [Reply]

  VA:F [1.9.22_1171]
  Rating: 0 (from 0 votes)
 3. ಇದು ಒಳ್ಳೆ ಉಪಯೋಗ ಅಪ್ಪಲೇಖನ (ಕಾಟಂಕೋಟಿ?) ಹಳೇದರ ನೆಂಪು ಮಾಡಿ ಕೊಟ್ಟಂಗಾತು. ಹಾಂಗೇ reference ಸಿಕ್ಕಿದಾಂಗಾತು. ಧನ್ಯವಾದಂಗೊ. ಸೀಎಚ್ಚೆಸ್ಸ್.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಬೇಡ ಬೇಡ ಹೇಳಿ ಒಂದೊಂದರಿ ಕಂಡತ್ತು ಕಂಡ್ರೂ , ಕೆಲವು… ಅಲ್ಲಾ , ಹಲವು ಸರ್ತಿ ಆ ಹಳೆ ಸಂಗತಿಗಳೇ ಸ್ವಾರಸ್ಯ, ಹಿತ , ಲಾಯಕ ಅಪ್ಪದು ಅಪ್ಪೋ. (ಆರೋ ಹೇಳಿದ್ದವಡಾ ಹೊಸ ಪ್ರಿಯತಮೆಗಿಂತ ಹಳೆ ಹೆಂಡತೀನೇ ವಾಸಿ!!)

  ಎಂತಾರು, ಎಲ್ಲಿಂದಲೋ ಹುಡ್ಕಿ ಕೂದು ಸಂಗ್ರಹಿಸಿ ಶುದ್ದಿ ಮಾಡಿ ಬೈಲಿಲಿ ಹಂಚಿದ್ದಕ್ಕೆ ‘ಧನ್ಯವಾದ’ ಹೇಳಿ ಹೇಳದ್ದೆ ಕಳಿಯ ಹೇಳಿತ್ತು ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಧನ್ಯವಾದ೦ಗೊ..
  ಹಳೇ ಕಾಲಲ್ಲಿ ರೇಡಿಯೋ-ಕ್ಕೆ ಒಳ್ಳೇ ಪ್ರಾಧಾನ್ಯ ಇದ್ದತ್ತು. ಆನು ಸಣ್ಣಾಗಿಪ್ಪಗ ಶಾಲೆಗೆ ಹೋಪಲೆ ಸಮಯ ಕೂಡ ಲೆಕ್ಕ ಹಾಕಿ೦ಡಿತ್ತಿದ್ದು ರೇಡಿಯೋ ಕೇಳಿಯೇ. ಉದಿಯಪ್ಪಗ ೬-೪೫ ರ ಪ್ರಾದೇಶಿಕ ವಾರ್ತೆಗೊ, ೬-೫೫ ರ ಸ೦ಸ್ಕೃತ ವಾರ್ತೆಗೊ, ೮ ಗ೦ಟೆಗೆ ಡೆಲ್ಲಿ ಸ್ಟೇಶನಿನ ಸಹಪ್ರಸಾರಲ್ಲಿ ಬತ್ತ ಇ೦ಗ್ಲೀಷು ಮತ್ತು ಹಿ೦ದಿ ವಾರ್ತೆಗೊ, ಕಸ್ತಲೆಪ್ಪಗ ೮ ಘ೦ಟೆಯ ಯುವವಾಣಿ, ೮-೪೫ರ ಹಿ೦ದಿ ವಾರ್ತೆಗೊ, ೯ ಘ೦ಟೆಯ ಇ೦ಗ್ಲೀಷು ವಾರ್ತೆಗೊ, ೯-೩೦ಕ್ಕೆ ಬುಧವಾರ ಮ೦ಗ್ಳೂರೊ ಆಕಾಶವಾಣಿ೦ದ ಬ೦ದ೦ಡಿತ್ತಿದ್ದ ಯಕ್ಶಗಾನ ತಾಳಮದ್ದಳೆ, ಧಾರವಾಡ ನಿಲಯದ ನಾಟಕ೦ಗೊ, ಡೆಲ್ಲಿ / ತಮಿಳು ಸ್ಟೇಷನುಗಳಿ೦ದ ಬ೦ದ೦ಡಿತ್ತಿದ್ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ೦ಗೊ.. ರೇಡಿಯೋ ಸಿಲೋನ್ (ಶ್ರೀಲ೦ಕಾ) ಪ್ರಸಾರ ಮಾಡಿ೦ಡಿತ್ತಿದ್ದ ದಕ್ಷಿಣ ಭಾರತೀಯ ಭಾಷಾ ಕಾರ್ಯಕ್ರಮ೦ಗೊ.. ಬಿ ಬಿ ಸಿ ವಾರ್ತೆಗೊ.. ಎಲ್ಲ ನೆ೦ಪಾತು..
  ಇದು ಮಾ೦ತ್ರ ಅಲ್ಲದ್ದೆ ಮೊದಲು ಈಗಾಣಷ್ಟು ಟಿ ವಿ ಎಲ್ಲ ಇಲ್ಲದ್ದೆ ಇಪ್ಪ ಸಮಯಲ್ಲಿ ಕೇಳಿ೦ಡಿತ್ತಿದ್ದ ಕ್ರಿಕೆಟ್ ಆಟ, ಮೈಸೂರು ದಸರಾ, ಶಬರಿಮಲೆಯ ಮಕರಜ್ಯೋತಿ ಉತ್ಸವದ ವೀಕ್ಷಕ ವಿವರಣೆ ಎಲ್ಲ ಮನಸ್ಸಿಲ್ಲಿ ಹಾದು ಹೋತು.
  ಒಪ್ಪ೦ಗೊ..

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನಬೆಟ್ಟಣ್ಣ

  ಭಾರೀ ಲಾಯ್ಕದ ಶುದ್ದಿ.
  ವಾರ್ತೆಗಾಪ್ಪಗ ಎಲ್ಲಿದ್ದರೂ ಓಡಿಗೊಂಡು ಬಂದುಗೊಂಡಿದ್ದದು ನೆನಪಾತು.
  ವಾರ್ತೆ ಓದುವವರೊಟ್ಟಿಂಗೆ ನವಗೂ ಓದಲೇ ಖುಶೀ ಆವ್ತು.

  [Reply]

  VN:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  skgkbhat

  ರೇಡಿಯೊ ವಾರ್ತೆ ಎನಗೆ ಈಗಲೂ ಇಷ್ಟ. ದಿನಾ ಕೇಳುತ್ತೆ.ಮೊದಲು ರಂಗ ರಾವ್ [ಕನ್ನಡ],ರಾಮಚಂದ್ರನ್[ಮಲಯಾಳ], ಸ್ಫೂರ್ತಿ ಸಿನ್ಹಾ[ಆಂಗ್ಲ],ಕೃಷ್ಣ ಕುಮಾರ್ ಭಾರ್ಗವ್[ಹಿಂದಿ],ಮಂಗಲಾ ಕೌಠೇಕರ[ಸಂಸ್ಕೃತ] ಓದುವ ವಾರ್ತೆ ಕೇಳುದೇ ಒಂದು ಕುಷಿ.ಚುನಾವಣಾ ವಾರ್ತೆ ನಾಗಮಣಿ ಎಸ್.ರಾವ್,ರಾಮಚಂದ್ರನ್ ಓದಿರೆ ಎಂತವಂಗೂ ಅರ್ಥ ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)
 8. ಬೋಸ ಬಾವ
  ಬೋಸ ಬಾವ

  ಅಪ್ಪಪ್ಪು..
  ವಾರುತೆ ರೇಡ್ಯಲ್ಲಿ ಆನುದೆ ಕೇಳಿಯೊ೦ಡು ಇತ್ತೆ…

  ” ಸ೦ಪತಿ ವಾರ್ಥಾ ಶೂಯ೦ತಾ೦, ಮಮ…” ಹೇಳಿ

  [Reply]

  VN:F [1.9.22_1171]
  Rating: 0 (from 0 votes)
 9. ಮುಣ್ಚಿಕಾನ ಭಾವ

  ಒಳ್ಳೆಯ ಶುದ್ದಿ. ರೇಡ್ಯದ ಸಂಕೊಲೆ ಕೊಟ್ಟದ್ದಕ್ಕೆ ಶುದ್ದಿಕಾರಂಗೆ ಧನ್ಯವಾದಂಗೊ :)
  ಮತ್ತೆ ಬೈಲಿನವಕ್ಕೆ ಎಲ್ಲಾ ದೇಶದ ಎಲ್ಲಾ ರೀತಿಯ ಸಾವಿರಕ್ಕಿಂತಲೂ ಹೆಚ್ಚಿನ ರೇಡ್ಯಂಗಳ ಕೇಳಕ್ಕಾರೆ “RadioZilla” ಹೇಳುವ ಸೋಫ್ಟುವೇಯರು ಇದ್ದು. ಅದರ ಡೌನ್ ಲೋಡು ಮಾಡುಲೆ ಇಪ್ಪ ಸಂಕೊಲೆ ಇಲ್ಲಿದ್ದು.
  http://www.theradiozilla.com/download.html

  [Reply]

  VA:F [1.9.22_1171]
  Rating: 0 (from 0 votes)
 10. ಮುಳಿಯ ಭಾವ
  ರಘು ಮುಳಿಯ

  ”ಸವಿನೆನಪುಗಳು ಬೇಕು ಸವಿಯಲೀ ಬದುಕು” ಹೇಳೊದು ನೆ೦ಪಾತು.
  ಕಸ್ತಲೆಗೆ ೬;೪೦ರ ಪ್ರದೇಶಸಮಾಚಾರ ಕಳುದು ಕೃಷಿರ೦ಗಲ್ಲಿ ಬ೦ದುಗೊ೦ಡಿದ್ದ “ತ್ಯಾ೦ಪನ ಮಾಹಿತಿ”ಯ ಕೆ.ಆರ್.ರೈಯ ಸ್ವರ ಮನಸ್ಸಿನ ಒಳ ಅಲೆಅಲೆಯಾಗಿ ಬಪ್ಪಲೆ ಶುರು ಆತು!!
  ಕಸ್ತಲೆಗೆ ಏಳೂವರೆ ಹೊಡವಗ ಪೇಟೆಧಾರಣೆ,ಅದು ಕಳುದು ಕನ್ನಡ ವಾರ್ತೆ ಇದು ದಿನನಿತ್ಯ ತಪ್ಪದ್ದೆ ಕೇಳಿಗೊ೦ಡಿದ್ದದು ಎಲ್ಲಾ ಒ೦ದರಿ ಕಣ್ಣ ಮು೦ದೆ ಆ೦ಜಿತ್ತಿದಾ.
  ೧೯೮೩ ರ ವಿಶ್ವಕಪ್ ಕ್ರಿಕೆಟಿಲಿ ರಿಚರ್ಡನ ಕ್ಯಾಚ್ ಹಿಡುದು ಔಟ್ ಮಾಡಿದ ಕಪಿಲದೇವನ ಅದ್ಭುತ ಆಟ,ಅ೦ದು ಭಾರತ ಗೆದ್ದದರ ಇರುಳು ಕೇಳಿ ಕೊಶಿಪಟ್ಟದೂ ನೆ೦ಪಾವುತ್ತ್ತು.
  ಧನ್ಯವಾದ ಈ ಚೊಕ್ಕದ ಶುದ್ದಿಗೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣವೇಣಿಯಕ್ಕ°ಅಡ್ಕತ್ತಿಮಾರುಮಾವ°ವಿದ್ವಾನಣ್ಣಕೊಳಚ್ಚಿಪ್ಪು ಬಾವಮುಳಿಯ ಭಾವಪುತ್ತೂರಿನ ಪುಟ್ಟಕ್ಕಸುವರ್ಣಿನೀ ಕೊಣಲೆಶುದ್ದಿಕ್ಕಾರ°ಪುಣಚ ಡಾಕ್ಟ್ರುಗಣೇಶ ಮಾವ°ನೆಗೆಗಾರ°ವಾಣಿ ಚಿಕ್ಕಮ್ಮಅಜ್ಜಕಾನ ಭಾವಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿದೊಡ್ಡಭಾವವೆಂಕಟ್ ಕೋಟೂರುಮಾಲಕ್ಕ°ಕೇಜಿಮಾವ°ಕೆದೂರು ಡಾಕ್ಟ್ರುಬಾವ°ಬಟ್ಟಮಾವ°ವಸಂತರಾಜ್ ಹಳೆಮನೆಜಯಗೌರಿ ಅಕ್ಕ°ಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ