ಅಕ್ಷರನ ಶುದ್ದಿಗೊ ಬೈಲಿಲಿ ಅಕ್ಷಯ ಆಗಲಿ!

ಬೈಲಿಲಿ ಅಕ್ಷರ ಸಾಹಿತ್ಯದ ಕೃಷಿ ಒಳ್ಳೆತ ಮುಂದುವರಿತ್ತಾ ಇದ್ದು.
ನೆರೆಕರೆಗೆ ಜೆನಂಗೊ ಸೇರಿಗೊಂಡೇ ಹೋವುತ್ತಾ ಇದ್ದವು – ಬೈಲಿನ ಎಲ್ಲೋರಿಂಗೂ ಅದು ಕೊಶಿಯೇ!

ಈಗ ಇನ್ನೊಂದು ಕೊಶಿ, ನಮ್ಮ ಸುಳ್ಯದ ಮಾಣಿ ಅಕ್ಷರನ ಪರಿಚಯ ಮಾಡ್ತದು.
ಹ್ಮ್, ಅಪ್ಪು – ಈ ಮಾಣಿ ಅಕ್ಷರ. (ಬೈಲಿಂಗೆ ಅಕ್ಷರದಣ್ಣನ ಗೊಂತಿದ್ದು. ಅವುಬೇರೆ, ಇವು ಬೇರೆ!)
– ಅವರ ಶುದ್ದಿಗೊ ಅಕ್ಷಯ! ಅವುದೇ ಹಾಂಗೇ!!
ಒಂದು ದಿನ ಮನೆಲಿಕ್ಕು – ಸುಳ್ಯಲ್ಲಿ, ಮರದಿನ ಕಲಿತ್ತ ಕೋಲೇಜಿಪ್ಪ ಮೂಡಬಿದ್ರೆಲಿಕ್ಕು, ಮತ್ತಾಣದಿನ ಅಣ್ಣನ ರೂಮಿಪ್ಪ – ಬೆಂಗುಳೂರಿಲಿಕ್ಕು; ಪುರುಸೊತ್ತಾದರೆ ಇಡೀ ಬೈಲಿಂಗೇ ತಿರುಗಿಗೊಂಡು ಇಕ್ಕು; ಮುಳಿಯಭಾವನ ಹಾಂಗೆ!
ಮುಳಿಯಭಾವ ಹೇಳುವಗ ಯಕ್ಷಗಾನ ನೆಂಪಾತು – ಈ ಮಾಣಿಗೂ ಯಕ್ಷಗಾನದ್ದು ಬಯಂಕರ ಮರುಳು!
(ಅಲ್ಲ, ಯಕ್ಷಗಾನಕ್ಕೂ, ಲೋಕಸಂಚಾರಕ್ಕೂ ಏನಾರು ಸಮ್ಮಂದ ಇದ್ದೋ?!) 😉
ಸಣ್ಣ ಇಪ್ಪಗಳೇ ಯಕ್ಷಗಾನದ ಆಸಗ್ತಿ; ಮನೆ ವಾತಾವರಣವೂ ಅದಕ್ಕೆ ಹೊಂದಿಗೊಂಡತ್ತಿದಾ – ನಮ್ಮ ಅರ್ನಾಡಿಭಾವಂಗೆ ಅರಡಿಗು ಇವರ.

ಅಕ್ಷರ ಮಾಣಿ ಅರುಶಿನ ಅಂಗಿಲಿ ನೆಗೆಮಾಡುದು!

ಬರೇ ಕಲಿತ್ತದು ಮಾಂತ್ರ ಕಲಿವದಲ್ಲ, ಎಲ್ಲವನ್ನುದೇ ಕಲಿಯೇಕು ಹೇಳಿ ಇವರ ಮನೆಲಿ ಹೇಳಿಕೊಡುಗಡ.
ಸುಳ್ಯಲ್ಲಿ ಮನೆ. ಇವರ ಅಪ್ಪ ಸುಳ್ಯದ ಕುರುಂಜಿ ಕೋಲೇಜಿನ ಲೆಗುಚ್ಚರು! ಅಮ್ಮ ಅಲ್ಲೇ ಅತ್ಲಾಗಿಪ್ಪ ಸ್ನೇಹ ಶಾಲೆಯ ದೊಡ್ಡ ಟೀಚರು.
ಅಣ್ಣ ಬೆಂಗುಳೂರಿಲಿ, ಇಂಜಿನೀರು! ಇವ ಎರಡ್ಣೇ ಮಗ ಇದಾ, ಒಳ್ಳೆತ ಉಶಾರಿ, ಮದಲಿಂಗೇ.

ಸಣ್ಣ ಶಾಲೆಯ ಸುಳ್ಯಲ್ಲೇ ಕಲ್ತವು. ಮುಂದೆ, ದೊಡ್ಡದರ ಕಲಿವಲೆ ಹೇಳಿಗೊಂಡು ಮೂಡಬಿದ್ರೆಗೆ ಬಂದವು.
ಬಂದು ಬಂದು ನಮ್ಮ ಸುವರ್ಣಿನಿ ಅಕ್ಕನ ಮನೆಒತ್ತಕೆ ಬಿಡಾರಮಾಡಿಗೊಂಡು ಕೂದವಡ.
ನಾಕು ಜೆನ ಚೆಂಙಾಯಿ ಮಕ್ಕೊ ಒಟ್ಟಾಗಿ, ಕೋಲೇಜಿನ ಕನ್ನಡ ಮಾಷ್ಟ್ರನೂ ಸೇರಿಗೊಂಡು ಒಂದು ರೂಮು ಮಾಡಿಗೊಂಡು ಇದ್ದವಡ ಮೂಡಬಿದ್ರೆಲಿ.
ಸುವರ್ಣಿನಿ ಅಕ್ಕನ ನೆರೆಕರೆಲೇ ಇದ್ದ ಕಾರಣ, ಅಂಬಗಂಬಗ ಮಾತಾಡುದಿದ್ದು.
(ಸುವರ್ಣಿನಿ ಅಕ್ಕ ಅಲ್ಲಿ ಟೀಚರಲ್ಲದೋ; ಜಾಸ್ತಿ ಮಾತಾಡಿರೆ ಮತ್ತೆ ಮಾರ್ಕು ಸಿಕ್ಕ ಈ ಮಾಣಿಗೆ! ಹಾಂಗೆ – ಹದಾಕೆ ರಜ ರಜ ಮಾತಾಡುಗಷ್ಟೇ! 😉 )

ಸುವರ್ಣಿನಿಅಕ್ಕಂಗೆ ಈ ಮಾಣಿಯ ಆಸಗ್ತಿಗೊ ಎಲ್ಲ ಗೊಂತಾತು, ಮೆಲ್ಲಂಗೆ ನಮ್ಮ ಬೈಲಿನ ವಿಶಯವುದೇ ಹೇಳಿಕ್ಕಿದವು.
ಬರವಣಿಗೆ ಆಸಗ್ತಿ ಇದ್ದ ಈ ಮಾಣಿಯ ಬೈಲಿಂಗೆ ಬಪ್ಪ ಹಾಂಗೆ ಮಾಡಿದವು.
ಬೈಲಿಂಗೆ ಬಂದ ಮಾಣಿ ಈಗ ಅದೇ ಆತ್ಮೀಯತೆಲಿ ನೆರೆಕರೆಗೂ ಬಪ್ಪ ಹಾಂಗಾತು.

ಅಪ್ಪು, ಈಗ ಆ ಮಾಣಿ ಸುವರ್ಣಿನಿ ಅಕ್ಕಂಗೆ ಮಾಂತ್ರ ನೆರೆಕರೆ ಅಲ್ಲ, ಈ ಬೈಲಿನ ನೆರೆಕರೆಗೇ ಬತ್ತಾ ಇದ್ದವು!
ಬನ್ನಿ, ಅಕ್ಷರಮಾಣಿಗೆ ಬೈಲಿನ ಸ್ವಾಗತ ಹೇಳುವೊ°.
ಚೆಂದ ಚೆಂದದ ಶುದ್ದಿಗೊಕ್ಕೆ ಕಾದೊಂಡಿಪ್ಪ°.
ಅಕ್ಷರಾ.. ಸ್ವಾಗತಮ್..!!
~
ಒಪ್ಪಣ್ಣ

ಅಕ್ಷರನ ಶುದ್ದಿಗೊ ಅಕ್ಷಯವಾಗಿ ಸದ್ಯಲ್ಲೇ ಬತ್ತು.
ಕಾದೊಂಡಿರಿ.

ಅಕ್ಷರನ ಚೆಂಙಾಯಿಪುಟಂಗೊ:
ಮೋರೆಪುಟ: http://www.facebook.com/profile.php?id=564079658
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=1697714561154047598
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

12 Responses

 1. ಶ್ರೀದೇವಿ ವಿಶ್ವನಾಥ್ says:

  ಎಂಗಳ ನೆರೆಕರೆ ಸುಳ್ಯದ ಮಾಣಿ ಅಕ್ಷರಂಗೆ ಬೈಲಿಂಗೆ ಸ್ವಾಗತ..
  ಒಪ್ಪಣ್ಣ ತುಂಬಾ ಚೆಂದಲ್ಲಿ ಪರಿಚಯ ಮಾಡಿದ್ದ°..
  ಅಕ್ಷರನ ಮನೆಯೋರು ಎಲ್ಲೋರೂ ಸರಸ್ವತಿ ಸೇವೆಲಿ ತೊಡಗಿಸಿಗೊಂಡಿದವು. ಈಗ ಈ ಮಾಣಿಯೂ ಅಕ್ಷರ ಸೇವೆ ಮಾಡ್ತಾ ಇದ್ದ°.
  ಸುಳ್ಯದ ಸ್ನೇಹ ಶಾಲೆ ಒಬ್ಬ° ಒಳ್ಳೆಯ ಅಬ್ಬೆ, ಅಪ್ಪ° ಮಕ್ಕಳ ವಿದ್ಯಾಭ್ಯಾಸಕ್ಕೆ ತನ್ನ ಮಗುವಿಂಗೆ ಅಕ್ಕು ಹೇಳಿ ಮೊದಲು ಆಯ್ಕೆ ಮಾಡುವ ಹಾಂಗೆ ಇಪ್ಪ ಶಾಲೆ.
  ಅಕ್ಷರನ ಹೆತ್ತವರ ಪರಿಶ್ರಮಲ್ಲಿ ನಡೆತ್ತಾ ಇಪ್ಪ ಆ ಶಾಲೆ ಬೆಳಗಿದ ಹಾಂಗೆ ಬೈಲಿಲಿ ಅಕ್ಷರನೂ ಬೆಳಗಲಿ..
  ಅವನ ಹವ್ಯಕದ ಅಭಿಮಾನಕ್ಕೆ ನಾವು ಹೆಮ್ಮೆ ಪಡೆಕ್ಕು.. ಅವನಿಂದ ಒಳ್ಳೆ ಒಳ್ಳೆ ಶುದ್ದಿಗೋ ಬರಲಿ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *