Oppanna.com

ಅಪರೂಪದ ಉಪನಯನ

ಬರದೋರು :   ವಿಜಯತ್ತೆ    on   07/06/2013    8 ಒಪ್ಪಂಗೊ

ಅಪರೂಪದ ಉಪನಯನ

ನಮ್ಮ ಎಡನಾಡು ಬಯಲಿನ  (ದೊಡ್ಡಮಾಣಿ, ಕೃಷ್ಣಣ್ಣ-ಸಾವಿತ್ರಿ ಅತ್ತಿಗೆ)  ಮನೆಲಿ ೧೫-೫-೨೦೧೩ ಕ್ಕೆ ಚೆಂದಕ್ಕೊಂದು ಉಪನಯನ ಕಳಾತು.
“ವಟು’ ಅವರ ಪುಳ್ಳಿಯೇ.
ಅವರ  ಮಗ  ಶ್ಯಾಮರಾಜ-ಆಶಾ ದಂಪತಿ ಯರ ಪುತ್ರ ಕೃಷ್ಣಶೌರಿ  ಇದರಲ್ಲಿ ಎಂತ ವಿಶೇಷತೆ; ಏವ ಅಪರೂಪತೆ – ಇದ್ದು ಹೇಳಿ ಕಣ್ಣರಳಿಸೆಡಿ.
ಎನ ಕಂಡಾಂಗೆ ಹೇಳ್ತೆ.

ಇತ್ತೀಚೆಗೆ ಹಾಂಗಿಪ್ಪ ಉಪನಯನ ಕಂಡದು  ಹೋದವರ್ಶ ಕಾನಾವು ಶ್ರೀಯಕ್ಕನ ಮನೆಲಿ.
ಅವರ ಮಗಂಗೆ.  ಹಾಂ!  ಅದೇ ನಮುನೆ ಒಂದು  ಮದುವೆ  ಪುತ್ತೂರು  ಕುತ್ತಿಗದ್ದೆ  ಶ್ರೀದೇವಿದು.
ಇದೆರಡನ್ನೂ ಒಪ್ಪಣ್ಣ  ಬಯಲಿನ  ಓದುಗರಿಂಗೆ  ಒಪ್ಪುಸಿದ್ದೆ.

  1. ಮೊದಲನೆಯದಾಗಿ  ಮನೆಲೇ ಮಾದಿದ  ಜೆಂಬಾರ.
  2. ಸರಳವಾದ ಆಡಂಬರ ಇಲ್ಲದ್ದ  ಅಚ್ಹುಕಟ್ಟಾದ ಹೇಳಿಕೆ ಕಾಗದ. ಆದಷ್ಟು ವಟುವಿನ ಅಬ್ಬೆ-ಅಪ್ಪನೇ ಖುದ್ದಾಗಿ ಹೋಗಿ ಹೇಳಿಕೆ ಕೊಟ್ಟಿದವು.
  3. ಆತ್ಮೀಯತೆಲಿ,  ಪ್ರೀತಿಲಿ,  ಮನಃಪೂರ್ವಕವಾಗಿ  ಹರಸಿಕ್ಕಿ ಹೋಪಲೆ, ಹಿರಿ-ಕಿರಿಯರಾದಿಯಾಗಿ ಸೇರಿದ ಜೆನವೋ ೫೦೦ಕ್ಕೂ ಮಿಕ್ಕಿ!
  4. ವಿಧಿವತ್ತಾಗಿ ಮಾಡಿದ ಕಾರ್ಯಕ್ರಮ, ಮುನ್ನಾಣ ದಿನ ಮದ್ಯಾಹ್ನಕ್ಕೆ ನವಗ್ರಹ ಶಾಂತಿ,  ಹೋಮ  ವಗೈರೆ.  ಅತ್ತಾಳಕ್ಕೆ(ಇರುಳಿಂಗೆ) ಸತ್ಯನಾರಾಯಣ ಪೂಜೆ. ವೀಡಿಯೋದವು ಅತ್ತಾಳಕ್ಕೆ ಸಜ್ಜಾಗಿ ತೆಗದ್ದವು,  ಮೇಲಾರಕ್ಕೆ ಕೊರವಲೊ  ಉದ್ದಕ್ಕೆ  ಸಾಲು- ಸಾಲು  ಮೂರು ಸಾಲು ಜವ್ವನಿಗರು.
  5. ಉದಿಯಪ್ಪಗ ಕಾಲವೇಳ್ಯಲ್ಲೆ ವೇ|ಮೂ. ಮಹಾದೇವಭಟ್ರು ಬಂದು ಜೆನಿವಾರ ಜೆಪ ಇತ್ಯಾದಿ  ಕಾರ್ಯಂಗಳ   ಸುರುಮಾಡಿದ್ದವು.
    ಉದಿಯಪ್ಪಗ ೭ ಗಂಟಗೆಮುಹೂರ್ತಕ್ಕೆ ತಯಾರಿ ಆತು. ವಟುವಿಂಗೆ ಪಟ್ಟೆವಸ್ತ್ರ ಮುಸ್ಕು ಹಾಕಿ ಅವನ  ಹಿಂದೆ- ಮುಂದೆ ಅಬ್ಬೆ-ಅಪ್ಪನ ಕೂರ್ಸಿ ಹಿಡಿವಲೆ ಹೇಳಿದವು.
    ಸುತ್ತೂ ಋತ್ವಿಜರ ಕೂರ್ಸಿ, ದರ್ಬೆಕೊಚ್ಚಿಲ್ಲಿ ಸ್ಪರ್ಶಿಸಿ ಹಿಡಿವಲೆ. ಭಟ್ಟಮಾವನ ಮೇಲುಸ್ತುವಾರಿಲಿ ಸುರುವಾತು ಮಂತ್ರ. ಅದೇಹೊತ್ತಿಂಗೆ  ಸರಿಯಾಗಿ  ಒಳ್ಳೆ ಪ್ರಸಿದ್ಧಿಯಾದ  ಸೇಕ್ಸೊಫೋನ್ ವಾದ್ಯ ಕಾಸರಗೋಡು  ಶ್ರೀ ಉದಯ ಮತ್ತೆ ಅವರಹೆಂಡತಿ ಮಂಜೂಷಾ ಇವರಿಂದ.
  6. ತುಂಬಾ ಸೆಕೆ ಅಲ್ದಾ? ಚೆಂದದ ಚೆಪ್ಪರಲ್ಲಿ  ಮೂರ್ನಾಲ್ಕು  ಸ್ಟ್ಯಾಂಡು ಫ್ಯಾನ್  ಕೂಡಾ   ಹಾಕಿದ ಕಾರಣ ತಂಪು ಗಾಳಿಯೂ ಬೀಸಿ  ತಂಪು ಆಗಿಂಡಿತ್ತು ಚೆಪ್ಪರ.
  7. ಉಪನಯನ ಮುಹೂರ್ತ ಕಾರ್ಯಭಾಗ ಕಳುದ ಮತ್ತಾಣ ಕ್ರಿಯಾಭಾಗಂಗೊ  ಹೋಮವೋ, ವಟುವಿಂಗೆ ಭಿಕ್ಷೆಯೋ,  ದಂಟೂರ್ತವೋ    ಒಂದು ಕರೆಲಿ  ಆಗೆಂಡಿದ್ದ ಹಾಂಗೆ  ಸೆಕ್ಸೋಫೋನ್ ಹದಾಕೆ  ಉರುಗೆಂಡೇ ಇತ್ತಿದ್ದವು.ಒಸಗೆ ಅಪ್ಪಾನ್ನಾರ.

ಊಟವೂ ಭರ್ಜರಿ ಆತು.  ಮಕ್ಕೊಲ್ಲ ಭೋಜನಕಾಲೇ ಹಾಕಿದ್ದೇ ಹಾಕಿದ್ದು.ಕೊಶಿಲೀ
ಅಂತೂ ಈ ಒಂದು  ಉಪನಯನವೂ ಶ್ರೀಯಕ್ಕನ ಮಗನ  ಉಪನಯನದ ಹಾಂಗೆ  ಮನಸ್ಸಿಲ್ಲಿ ಹಸುರಾಗಿ  ಒಳಿವ ಹಾಂಗಾತು.

ವಿಶೇಷವಾಗಿ ವಟು ಶೌರಿಯೂ  ಮುನ್ನಾ  ದಿನಂದಲೇ ಬಂದವರೆಲ್ಲ ಸ್ವಾಗತ ಮಾಡಿ ಆಸರಿಂಗೆ ಕೊಡ್ತಾ ಇಪ್ಪದು ಕಂಡು ಬಹು ಕೊಶಿ ಆತು.
ನಮ್ಮ ಸಂಸ್ಕ್ರತಿ , ಸಂಸ್ಕಾರ, ಒಳಿಶಿ ಬೆಳೆಶೆಕ್ಕು  ಮಕ್ಕೊ ಕಲಿಯೆಕ್ಕು! ಎಂತ ಹೇಳ್ತಿ?

~~~***~~~

8 thoughts on “ಅಪರೂಪದ ಉಪನಯನ

  1. very pleasant item. prasanna mooDisuva vaarthe. oLLeyadu. haange maaDuvudarelle ippadu gammatthu, adaralliyE iruvudu majaa.

    very happy to read this item. ooralli ellaa chennaagi maaDutthaare hELi gonthaadare, Odidare doora oorugokke, doora deshango kke hOdavakkoo santhOsha. shubhavaagali. best wishes.

  2. ಲೇಖನ ಬರದ್ದಕ್ಕೆ ವಂದನೆಗೋ,ವಿಜಯಕ್ಕ … ಅಳಿಯಂಗೆ ಆಶೀರ್ವಾದ ಮಾಡಿದ ಎಲ್ಲೋರಿಂಗೂ ಧನ್ಯವಾದಂಗೊ .. 🙂

  3. ಸೇರಿದ ೫೦೦ ಜೆನ ಬ್ರಾಹ್ಮಣರನ್ನೂ ಚೆಪ್ಪರಲ್ಲಿ ಹಂತಿ ಹಾಕಿ ಸುಧರಿಕೆ (ಬಫೆ ಇಲ್ಲೆ) ಮಾಡ್ಲೆ ನೆರೆಕರೆವೂ ನೆಂಟರಿಷ್ಟರೂ ಸೇರಿದವಿದ. ಇದಕ್ಕೆಲ್ಲಾ ದೊಡ್ಡಮಾಣಿ ರವಿಯಮೇಲ್ತನಿಕೆಯ ಸುಧರಿಕೆಯೇ ಸಕ್ರಿಯವಾಗಿ ಕಂಡತ್ತು ಅಂತೂ ಎಡನ್ನಾಡವು ಸುಧರಿಕೆಲಿ ಸೈ

  4. ಹರೇ ರಾಮ, ಶ್ರೀಗುರುಗಳ ,ಗುರು ಹಿರಿಯರ ಆಶೀರ್ವಾದ೦ದ ಚೆ೦ದಕೆ ಆತು.ಎಲ್ಲೊರಿ೦ಗೂ ಧನ್ಯವಾದ೦ಗೊ…

  5. ಹಾ೦. ಒಂದು ವಿಷಯ ನೆಂಪಾತಿದ. ವಟುವಿನ ಹಾಂಗೂ ದೊಡ್ಡಮಾಣಿ ಮನೆಯವರತ್ರಾಣ ಅತೀವ ಅಕ್ಕರೆಂದ ಬೊಂಬಾಯಿಂದ ಶ್ರೀಮತಿ ಚಂದ್ರಪ್ರಭಾ ಮೇಡ೦(ಮುಜುಂಗಾವು ಕಾಲೇಜಿನ ಹಿಂದಾಣ ಪ್ರಿನ್ಸಿಪಾಲ್) ಬಂದು ಕಾರ್ಯಕ್ರಮಲ್ಲಿ ಭಾಗವಹಿಸಿಕ್ಕಿ ಹರಸಿಕ್ಕಿ ಹೋದ್ದು ಮತ್ತೊಂದು (ಅವಕ್ಕೀಗ ಎಪ್ಪತ್ತೆಂಟು ವರ್ಷ) ವಿಶೇಷ.

  6. ಹರೇರಾಮ, ವಟು ಶೌರಿಯ ಉಪನಯನದ ಲೆಕ್ಕಲ್ಲಿ ಅವ ಕಲಿತ್ತ ಶಾಲೆ (ಮುಜುಂಗಾವು)ಲಿಯೂ ಮೊನ್ನೆ ಪಾಯಸದೂಟ ,ಹೋಳಿಗೆ, ಪೋಡಿ, ಹಪ್ಪಳ,ವಗೈರೆ ಮಾದ್ಸಿ ಶ್ಯಾಮರಾಜನೂ-ಆಶಾ ದಂಪತಿಗೊ ಖುದ್ದಾಗಿ ಬಂದು ಬಡ್ಸಿ ಊಟ ಕೊಟ್ಟಿಕ್ಕಿ ಹೋಯಿದವು.ಶಾಲೆ ಮಕ್ಕೊಗೂ ಮಾತಾಶ್ರೀ ಗೊಕ್ಕೂ ಸಂತೋಷ ಆತು.

  7. ಶುದ್ದಿ ಓದಿ ವರ್ತಮಾನ ಕೇಳಿ ನವಗೂ ಕೊಶಿ ಆತಿದಾ. ಹರೇ ರಾಮ. ವಟುವಿಂಗೆ ಶುಭಾಶೀರ್ವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×