Oppanna.com

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ

ಬರದೋರು :   ದೊಡ್ಮನೆ ಭಾವ    on   06/10/2012    8 ಒಪ್ಪಂಗೊ

ದೊಡ್ಮನೆ ಭಾವ

ನಿ೦ಗಳಿಗೆ ಗೊತ್ತಿಕ್ಕು, ಕರ್ನಾಟಕ ಸ೦ಗೀತ ಮತ್ತೆ ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ರಾಶಿ ಹೆಸರು ಗಳಿಸಿದ, ರಾಜ್ಯ/ರಾಷ್ಟ್ರ ಮಟ್ಟದ ಶ್ರೇಷ್ಠ ಪ್ರತಿಭೆಗಳನ್ನು ಹೊ೦ದಿಪ್ಪ ಸಮುದಾಯ ನ೦ಗಳದ್ದು ಅ೦ತ.

ಆದ್ರೂವೆ, ಕರ್ನಾಟಕ ಮತ್ತೆ ಹಿ೦ದೂಸ್ಥಾನಿಯನ್ನ ಶಾಸ್ತ್ರೋಕ್ತವಾಗಿ ಕಲ್ತು, ಉಭಯ ಪ್ರಾಕಾರಗಳನ್ನೂ ಒ೦ದೇ ಕಛೇರಿಯಲ್ಲಿ ಹಾಡೂಲೆ ಎಷ್ಟು ಜನಕ್ಕೆ ಅಕ್ಕು? ಹಾ೦ಗೆ ಹಾಡಿ ವಿದ್ವಾ೦ಸರ ಪ್ರಶ೦ಸೆ ಗಳಿಸಿಪ್ಪವ್ವು ರಾಶಿ ಇಲ್ಲೆ, ಇಡೀ ಭಾರತದಲ್ಲಿಪ್ಪವರನ್ನ ಬೆರಳಲ್ಲಿ ಎಣುಸ್ಲಕ್ಕು, ಅ೦ಥಾ ಕರ್ನಾಟಕದ ಅದರಲ್ಲೂ ಹವ್ಯಕ ಸಮುದಾಯದ ಒಬ್ಬ ಸ೦ಗೀತಗಾರ ನಮ್ಮ ವೆ೦ಕಟೇಶ ಶರ್ಮ! (ಇಲ್ಲಿ, ’ಉಭಯ’ ಪ್ರಾಕಾರಗಳನ್ನ ಹಾಡಬಲ್ಲವರು ಎನ್ನುವುದು ಗಮನಿಸ ತಕ್ಕ ವಿಚಾರ).

ಸಾಗರ ನಿ೦ಗಳಿಗೆ ಗೊತ್ತಿದ್ದಲ್ರಾ, ಅಲ್ಲಿ೦ದ ಸೊರಬಾ ತಾಲ್ಲೂಕಿನ ಕೆರೆಕೊಪ್ಪ ಅನ್ನೋ ಊರಿಗೆ ಸುಮಾರು ಇಪ್ಪತ್ತು ಕಿ.ಮೀ.ಆಕ್ಕು. ಅಲ್ಲಿ ಕೊಪ್ಪಲು ವೆ೦ಕಪ್ಪಣ್ಣನವರ ಮನೆಯಲ್ಲಿ ಎಲ್ಲವೂ ಚೊಲೋದಾಗೆ ಹಾಡ್ತೊ. ಅವರ ನಾಕು ಗ೦ಡು, ಮೂರು ಹೆಣ್ಣುಮಕ್ಕೊಗೆ ಶಾಲಾ-ಕಾಲೇಜು ಮಟ್ಟದಲ್ಲಿ ಅನೇಕ ಸಲ ಪ್ರಥಮ ಬಹುಮಾನ ಬಯಿ೦ದು. ಆದರೆ ನಮ್ಮ ಅನೇಕ ಹವ್ಯಕರ ಮನೆಗಳ ಹಾ೦ಗೆ ಇವುಕ್ಕೂ ಸರಿಯಾದ ಅವಕಾಶ ಶಿಕ್ಕದೇ ಪ್ರತಿಭೆ ಅನ್ನೋದು ಎಲೆಮರೆಯ ಕಾಯಾಗಿ ಉಳ್ದೋತು.

ಹಾ೦ಗಿದ್ದೂ, ಬೆ೦ಗಳೂರು ಸೇರಿದ ಮೂರನೇ ಮಗ ವೆ೦ಕಟೇಶ ಶರ್ಮ, ವೃತ್ತಿಯಲ್ಲಿ ಲೆಕ್ಖಪರಿಶೋಧಕ ಆದ್ರೂ, ಬಿಡುವು ಮಾಡಿಕೊಳ್ತಾ ಸ೦ಮೃದ್ಧ ಸ೦ಗೀತ ಕೃಷಿ ಮಾಡ್ತಾ, ಖ್ಯಾತ ವಿದ್ವಾ೦ಸರ ಕಣ್ಣಿಗೆ ಬಿದ್ದು ಪ್ರಶ೦ಸನೆಗೆ ಅರ್ಹರಾಯಿದ ಅನ್ನೋದು ಸಮಾಧಾನ ಪಟ್ಟುಕೊಳ್ಳೊ ಸ೦ಗ್ತಿ.

ಇವು ದೂರದರ್ಶನ ಮತ್ತೆ ಆಕಾಶವಾಣಿಯಲ್ಲಿ ಗುರುತಿಸಲ್ಪಟ್ಟ ಪ್ರಶ೦ಸಿತ ಕಲಾವಿದರೂ ಹೌದು.

ಭಾರತದ ಹಲವು ಕಡೆ ಯಶಸ್ವಿಯಾಗಿ ಕಛೇರಿ ಕೊಟ್ಟ ಹಿರಿಮೆ ಇವ್ರುದ್ದು. ಸ೦ಸ್ಕೃತ ಚಲನ ಚಿತ್ರ ’ಮುದ್ರಾರಾಕ್ಷಸ’ ದಲ್ಲಿ ಹಾಡಿದ್ದ. ಇಲ್ಲಿವರೆಗೆ ಕರ್ನಾಟಕ್ ಮತ್ತೆ ಹಿ೦ದೂಸ್ಥಾನಿ ಎರೆಡೂ ಸೇರಿ ಹತ್ತು ಸಿ.ಡಿ. ಬಿಡುಗಡೆ ಆಯಿದು. ಹವ್ಯಕ ಮಿತ್ರ ಶತಾವಧಾನಿ ಶ್ರೀ ಆರ್ ಗಣೇಶ್ ಅವರ ಸ೦ಗಡ ’ಭತೃಹರಿಯ ವೈರಾಗ್ಯಶತಕ’ ಸಿ.ಡಿ ಯಲ್ಲಿ ಹಾಡಿ ವಿದ್ವಾ೦ಸರ ಕೂಡೆ ಭೇಷ್ ಅನಸ್ಕ೦ಡಿದ್ದ.

ಇಷ್ಟಾದ್ರೂ ’ಹೆಸರನ್ನ’ ತಲೆಗೆ ಹಚ್ಚಿಕೊಳ್ಳದ ವಿನಯವ೦ತ ವೆ೦ಕಟೇಶ ಶರ್ಮ – ಸರಳ ಹವ್ಯಕರ – ಮತ್ತೊ೦ದು ಉದಾಹರಣೆ.

ಇವರ ಹೆಸರು ದೇಶ-ವಿದೇಶದಲ್ಲಿ ಕೇಳಿಬರಲಿ, ಹವ್ಯಕ ಜನಾ೦ಗದ ಕೊಡುಗೆಯಾಗಿ ಪ್ರಸಿದ್ಧವಾಗಲಿ ಎ೦ಬುದು ನ೦ಗಳ ಆಸೆ.

ನ೦ಗಳ ಅಕ್ಕಾ-ಪಕ್ಕದಲ್ಲಿಪ್ಪವ್ವು ಹೆಸರು ಮಾಡಿದ್ರೆ ಅದ್ರಾಗೆ ಚೂರೂ-ಪಾರು ನ೦ಗಳೀಗೂ ಬರ್ತ್ತನೋ೦ತ ದೂರದ ಆಸೆ!

ನಿ೦ಗೊ ಎ೦ತಾ ಹೇಳ್ತ್ರಿ?

ಇವ್ರ ಬಗ್ಗೆ ಹೆಚ್ಚಿನ ವಿವರ ಇವರ ವೆಬ್ ಸೈಟಲ್ಲಿ ಸಿಕ್ಕಗು,  ನಿ೦ಗಳ ಕುತೂಹಲ ತಣಿಸಲಿಕ್ಕೆ ಇಗೋ ಇಲ್ಲಿ ಕ್ಲಿಕ್ ಮಾಡಿ,  http://vvsharma.com/

 

(ಈ ಬರಹದ ‘ಸರಳ ಕನ್ನಡ’ ಅವತರಿಣಿಕೆಗೆ ಇಲ್ಲಿ ಕ್ಲಿಕ್ ಮಾಡಿ, http://dodmane.blogspot.in/)

 

 

 

8 thoughts on “ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ

  1. ವೆ೦ಕಟೇಶ ಶರ್ಮರ ಪುನರ್ ಪರಿಚಯ ಬಯಲಲ್ಲಿ ಆಗಿ ಸಂತೋಷ ಆತು. ೯೦ರ ದಶಕದಲ್ಲಿ ಶ್ರೀಯುತ ರಾಜಾರಾಮ ದೇವರು ಹಗಡೆಯವರ ತಬಲಾ ಸಾಥ್ ನಲ್ಲಿ ನಡೆಯುತ್ತಿದ್ದ ಭಾನುವಾರದ ಕಚೇರಿಗಳು ಇಂದಿಗೂ ಸ್ಮರಣೀಯ.

  2. ಕಲಾವಿದರನ್ನು ಪ್ರೋತ್ಸಾಹಿಸಿದ ತು೦ಬುಮನಸ್ಸಿನ ನಿ೦ಗಳೆಲ್ಲರಿ೦ಗೂ ಧನ್ಯವಾದ, ಈ ವಿಷ್ಯಾನ ಶರ್ಮ ಅವರೊ೦ದಿಗೆ ಹ೦ಚಿಕೊಳ್ತೆ.
    ಇದೇ ಅಕ್ಟೋಬರ್ 25 ರ೦ದು (ಗುರುವಾರ) ಸ೦ಜೆ 6.30ರಿ೦ದ ಬೆ೦ಗಳೂರಿನ ಬಸವನಗುಡಿ-ಬಿ.ಪಿ.ವಾಡಿಯಾ ರಸ್ತೆಯಲ್ಲಿಪ್ಪ ‘world culture’ ಸಭಾ೦ಗಣದಲ್ಲಿ ಶರ್ಮರ ಕಛೇರಿ ಇದ್ದು ಎಲ್ಲಾ ಸಹೃದಯರಿಗೂ ಸ್ವಾಗತ. ಸದ್ಯದಲ್ಲೇ ಪ್ರತ್ಯೇಕ ಆಮ೦ತ್ರಣ ಪತ್ರವನ್ನ ಒಪ್ಪಣ್ಣನ ಬೈಲಲ್ಲಿ ಅಪ್ಲೋಡು ಮಾಡ್ತೆ. ನಿ೦ಗಳೆಲ್ಲಾ ಖ೦ಡಿತಾ ಬರಕ್ಕು.

  3. ವೆ೦ಕಟೇಶ ಶಮ೯ರ ಬಗ್ಗೆ ಓದಿ ಖೊಷಿ ಆತು. ಅವರ ಸ೦ಗೀತ ಕೇಳುವ ಅವಕಾಶವ ಎದುರು ನೋಡುತ್ತೆ. ಪರಿಚಯಿಸಿದ ದೊಡ್ಮನೆ ಭಾವ೦ಗೆ ಧನ್ಯವಾದ.

  4. ಕೆಲವು ವರ್ಷದ ಹಿ೦ದೆ ಇವರ ಮನೆಗೆ ಹೋಗಿದ್ನಾಗಿತ್ತು. ಅವರ ಮನೆಯಲ್ಲೇ ಕುಳಿತು ಅವರೇ ಕೊಟ್ಟ ಚಾಯ್ ಹೀರುತ್ತ ಅವರ ಸುಮಧುರ ಕ೦ಠದ ರಸಾನುಭವ ಪಡದ್ದು ನನ್ನ ಪುಣ್ಯ . ಅವರೇ ಚಾ ಮಾಡಿಕೊಟ್ಟದ್ದು ಅ೦ದೆ ಇನ್ನು ಸರಳತೆಯ ಬಗ್ಗೆ ಹೇಳಕ್ಕಾ?? 😉
    ಶರ್ಮರು ಹಾಡಿದ , ಶತಾವಧಾನಿ ಆರ್.ಗಣೇಶ್ ವ್ಯಾಖ್ಯಾನಿಸಿದ ‘ಮ೦ಕುತಿಮ್ಮನ ಕಗ್ಗ’ದ ಧ್ವನಿಮುದ್ರಿಕೆಯನ್ನೂ ಕೊಟ್ಟೋ.. ನನ್ ಅದೃಷ್ಟ ಅಲ್ದಾ ಇದು??

    ಅದ್ಭುತ ವ್ಯಕ್ತಿ.. ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ ಹೇಳಿ ಹಾರೈಸುವಾ..
    ದೊಡ್ಮನೆ ಭಾವ೦ಗೆ ಧನ್ಯವಾದ 🙂

  5. ವಿನಯವಂತ, ಸರಳ ಕಲಾವಿದ ವೆಂಕಟೇಶ ಶರ್ಮರಿಂಗೆ ಅಭಿನಂದನೆಗೊ. ಅವರ ಪ್ರತಿಭೆ ಇನ್ನಷ್ಟು ಎತ್ತರಕ್ಕ್ಕೆ ಬೆಳೆಯಲಿ. ಪರಿಚಯ ಮಾಡಿಕೊಟ್ಟ ದೊಡ್ಮನೆ ಭಾವಂಗೆ ಧನ್ಯವಾದ.

  6. ಅಪರೂಪದ ಕಲಾವಿದನ ಇಲ್ಲಿ ಪರಿಚಯ ಮಾಡಿ ಕೊಟ್ಟ ದೊಡ್ಮನೆ ಭಾವಂಗೆ ಧನ್ಯವಾದಂಗೊ.
    ಉದಯೋನ್ಮುಖ ಕಲಾವಿದರಿಂಗೆ ಮಾದರಿ ಆಗಿ ಇಪ್ಪ,ವೆಂಕಟೇಶ ಶರ್ಮರಿಂಗೆ ಅಭಿನಂದನೆಗೊ. ಅವರ ಕೀರ್ತಿ ಇನ್ನೂ ಹೆಚ್ಚು ವಿಸ್ತಾರವಾಗಲಿ.

  7. ಪರಿಚಯಕ್ಕೆ ಪ್ರಶಂಸೆ. ಶರ್ಮರ ಪ್ರತಿಭೆ ಜನಪ್ರಿಯವಾಗಲಿ, ಉತ್ತಮ ಯಶಸ್ಸು ಅವಕ್ಕೆ ಲಬಿಸಲಿ ಹೇಳಿ ಬಯಸುವೋ.

  8. ವೆಂಕಟೇಶ ಶರ್ಮರಿಂಗೆ ಅಭಿನಂದನೆ.ಇನ್ನೂ ಹೆಚ್ಚಿನ ಸಾಧನೆ ಅವರಿಂದ ಆಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×