ಅಷ್ಟಮಿಯ ವಿಶೇಷ ಶುಭಾಶಯಂಗೊ..

ಹರೇರಾಮ..
ನಮ್ಮೋರಿಂಗೆ ಹಬ್ಬಕ್ಕೆಂತರ ಕಮ್ಮಿ! ಮೊನ್ನೆ ಮೊನ್ನೆ ಒಂದರಿ ಬೈಲಿಂಗೆ ಶುಭಾಶಯ ಹೇಳಿಕ್ಕಿ ಹೋದೆ, ಇಂದು ಪುನಾ ಬತ್ತಾ ಇದ್ದೆ.
ಒಳ್ಳೆದೇ!

ವಿಷ್ಣುವಿನ ದಶಾವತಾರಲ್ಲಿ ಒಂದು ಕೃಷ್ಣ!
ದ್ವಾಪರ ಯುಗಲ್ಲಿ ಕಂಸ°, ಕೌರವ° – ಇತ್ಯಾದಿಗಳಿಂದಾಗಿ ಅಧರ್ಮ ಜಾಸ್ತಿ ಆಗಿಪ್ಪಗ ಭಗವಾನ್ ಮಹಾವಿಷ್ಣು ಭೂಮಿಗೆ ಬಪ್ಪಲೆ ತೆಕ್ಕೊಂಡ ಅವತಾರವೇ ಕೃಷ್ಣ.

ಸುಂದರ ಪ್ರಶಾಂತ ಪರಿಸರಲ್ಲಿ ಗಂಭೀರ ಕೃಷ್ಣ..

ಒಬ್ಬ ದೇವರು! – ಅದೆಷ್ಟು ರೂಪಂಗೊ.
ಬೌಷ್ಷ ನಮ್ಮೋರ ಪೈಕಿ ಅತ್ಯಂತ ಹೆಚ್ಚು ರೂಪಲ್ಲಿ ಆರಾಧನೆ ಮಾಡುದು ಇದೇ ಕೃಷ್ಣಂಗೋ – ಹೇಳಿಗೊಂಡು.
ಅಮ್ಮನ ಕಣ್ಣುತಪ್ಪುಸಿ ಎತ್ತರಲ್ಲಿ ಮಡಗಿದ ಬೆಣ್ಣೆ ಕದ್ದು ತಿಂಬ ಮುದ್ದು ಮುದ್ದು ಕಿಟ್ಟಪ್ಪಚಾಮಿ ಹೇಳಿರೆ ಪೋಕ್ರಿ ಕೃಷ್ಣ.
ಬಾಲಲೀಲೆಗಳ ತೋರುಸಿ ಅಂಬಗಳೇ ದೈವತ್ವವ ತೋರುಸಿದ ಬಾಲಕೃಷ್ಣ..
ಬಲರಾಮನೊಟ್ಟಿಂಗೆ ಸೇರಿಗೊಂಡು ಕಂಸನ ಕೊಂದದು ಅದೇ ಎಳೆಜವ್ವನಿಗ° ಕೃಷ್ಣ..
ಗೋಪಿಕೆ ಕೂಸುಗಳೊಟ್ಟಿಂಗೆ ಚೆಂಙಾಯಿಪ್ಪಾಡು ಮಾಡಿಗೊಂಡು ಹಾರಿಗೊಂಡು ಇದ್ದದುದೇ ಕೃಷ್ಣನೇ!
ಮಹಾಭಾರತಲ್ಲಿ ಅರ್ಜುನಂಗೆ ಮಹಾತತ್ವ ಬೋಧಿಸಿದ್ದುದೇ ಇದೇ ಕೃಷ್ಣ..
ಸಾರಥಿಯಾಗಿ ಯುದ್ಧಪಾಂಡಿತ್ಯ ತೋರುಸಿದವಂದೇ ಕೃಷ್ಣನೇ..
ಗುರುವಾಯೂರಿಲಿ ಗಾಂಭೀರ್ಯಲ್ಲಿ ನಿಂದದುದೇ ನಮ್ಮೆಲ್ಲರ ಪ್ರೀತಿಯ ಕೃಷ್ಣ..
ಉಡುಪಿಲಿ ನಿಂದು ಕಿಟಿಕಿ ನೋಡುವ ಶುದ್ದಂಬಟ್ಟ° ಕೃಷ್ಣ..
ಇಸ್ಕೋನಿಲಿ ನಿಂದು ಪೈಶೆನೋಡುವ ಬೆಳಿಕಲ್ಲಿನ ಕೃಷ್ಣ..
– ಇನ್ನೂ ಅದೆಷ್ಟೋ ರೂಪಂಗೊ, ವ್ಯಕ್ತಿತ್ವಂಗೊ.
ಆರೇ, ಹೇಂಗೇ ಪೂಜೆ ಮಾಡಲಿ, ಹೋಪದೆಲ್ಲವೂ ಒಂದೇ ದಿಕ್ಕಂಗೆ. ಒಂದೇ ದೈವಕ್ಕೆ!

ಸರ್ವದೇವ ನಮಸ್ಕಾರಃ ಕೇಶವಂ ಪ್ರತಗಚ್ಛತಿ – ಹೇಳಿ ಬಟ್ಟಮಾವ° ಹೇಳುಗು.
ಎಲ್ಲಾ ದೇವರಿಂಗೆ ನಮಸ್ಕಾರ ಮಾಡಿರೇ ದೇವರಿಂಗೆ ಹೋವುತ್ತಡ, ಇನ್ನು ಎಲ್ಲಾ ಕೃಷ್ಣಂಗೆ ನಮಸ್ಕಾರ ಮಾಡಿರೆ ಅವಂಗೇ ಹೋಪದಲ್ಲದೋ!

ದ್ವಾಪರಯುಗಲ್ಲಿ ಇಂದಿರುಳು ಕೃಷ್ಣ ಹುಟ್ಟಿದ್ದಡ. ಆ ಕೊಶಿಯ ಲೋಕ ಇಡೀ ಆಚರಣೆ ಮಾಡ್ತವು.
ಒಂದೊಂದು ದಿಕ್ಕೆ ಒಂದೊಂದು ರೀತಿ. ನಮ್ಮ ಊರಿಲಿ ನಮ್ಮದೇ ರೀತಿ.
ಆಳುಗೊ ಮಾರ್ಗದ ಕರೆಲಿ ಕಾಯಿ ಕುಟ್ಟಗು. ಗಟ್ಟಿ ಕಾಯಿ ತೆಕ್ಕೊಂಡು ಹೋದವ ತುಂಬ ಒಡದ ಕಾಯಿಗಳ ತೆಕ್ಕೊಂಡು ಮನಗೆ ಬಕ್ಕು.
ಜವ್ವನಿಗರು ಜಾರುಕಂಬ ಏರುಗು. ಮಡ್ಡೋಯಿಲೋ, ಗ್ರೀಸೋ, ಎಣ್ಣೆಯೋ – ಎಂತಾರು ಕಿಟ್ಟಿದ ಕಂಬಕ್ಕೆ ಹತ್ತಿ ಅದರ ಮೇಗೆ ಮಡಗಿದ ಎಂತಾರು ಪಣವ ಬಿಚ್ಚೇಕು.
ಅಲ್ಲದ್ದರೆ ಮೊಸರುಕುಡಿಕೆಯೂ ಇಕ್ಕು.
ವಿಶೇಷ ಸಭಾ ಕಾರ್ಯಕ್ರಮಂಗಳೂ ಇಕ್ಕು.
ಮಕ್ಕಳ ವೇಶ ಸ್ಪರ್ಧೆ, ಹಾಡಿ ಕೊಣಿತ್ತ ಸ್ಪರ್ಧೆಗೊ ಇಕ್ಕು!

ಮನಗೆ ಬಂದರೆ ಬಟ್ಟಮಾವ ನಿತ್ಯ ಪೂಜೆಯ ಒಟ್ಟಿಂಗೆ ಒಂದು ರಜಾ ಬೆಣ್ಣೆ ನೇವೇದ್ಯವುದೇ, ಒಂದೆರಡು ವಿಷ್ಣುಕ್ರಾಂತಿ ಎಲೆಯುದೇ ಹಾಕಿ ನಮಸ್ಕಾರ ಮಾಡುಗು.
ಉತ್ತರಭಾರತಲ್ಲಿ ಇದರದ್ದು ವಿಶೇಷ ಆಚರಣೆ ಅಡ, ಚೌಕ್ಕಾರುಭಾವ ಹೇಳುಗು.

ಕೃಷ್ಣ ಜನ್ಮಾಷ್ಟಮಿ ಎಲ್ಲೋರಿಂಗೂ ಕೊಶಿ ತರಳಿ.
ನಮ್ಮೊಳ ಇಪ್ಪ ಕಂಸ ನಾಶ ಆಗಲಿ.
ಭಗವದ್ಗೀತೆಯ ತತ್ವಂಗೊ ನಮ್ಮೊಳ ಸೇರಲಿ.
ಬೈಲಿನೋರಿಂಗೆ ಒಳ್ಳೆದಾಗಲಿ.

ನಿಂಗಳ,

ಗುರಿಕ್ಕಾರ°

ಸೂ: ಕೃಷ್ಣನ ಇನ್ನೂ ಹೆಚ್ಚಿನ ಪಟಂಗೊ ಈ ಸಂಕೊಲೆಲಿ ನೇತರೆ ಸಿಕ್ಕುತ್ತಡ, ಪೆರ್ಲದ ಮಾಣಿ ಹೇಳಿದ° : (ಸಂಕೊಲೆ)

Admin | ಗುರಿಕ್ಕಾರ°

   

You may also like...

10 Responses

 1. ಡಾ.ಸೌಮ್ಯ ಪ್ರಶಾಂತ says:

  ಬೈಲಿನ ಎಲ್ಲರಿಂಗೂ ಅಷ್ಟಮಿಯ ಶುಭಾಶಯಂಗೊ… 🙂

 2. ಬೈಲಿನ ಎಲ್ಲೋರಿಂಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಂಗ …..”
  “ಜಗಗದೊಡೆಯ ಶ್ರೀಕೃಷ್ಣ ಸರ್ವರಿಂಗೂ ಸನ್ಮಂಗಲವ ಕರುಣಿಸಲಿ …”

 3. ಶ್ರೀದೇವಿ ವಿಶ್ವನಾಥ್ says:

  ಗುರಿಕ್ಕಾರ್ರ ಸಂದೇಶಲ್ಲಿ ಒಂದರಿ ಕಿಟ್ಟಪ್ಪ ಚಾಮಿಯ ವಿಶ್ವ(ಕೃಷ್ಣ)ರೂಪ ದರ್ಶನ ಆತದಾ..
  ನಮ್ಮೊಳ ಇಪ್ಪ ಕಂಸ ನಾಶ ಆಗಿ ಗೀತೆಯ ತತ್ವಂಗ ನಮ್ಮೊಳ ಸೇರಲಿ ಹೇಳಿ ಒಳ್ಳೆ ಸಂದೇಶ ಕೊಟ್ಟಿದಿ..
  ನಾವೆಲ್ಲರೂ ಪಾಲುಸೆಕ್ಕಾದ್ದದೆ.. ಕೃಷ್ಣ ಅವತಾರದ ಸಂದೇಶವೂ ಅದುವೇ ಅಲ್ಲದಾ?
  ಬೈಲಿಲಿ ಎಲ್ಲೋರಿಂಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಂಗ…
  ಎಲ್ಲಾ ರೂಪದ ಕೃಷ್ಣನೂ, ಎಲ್ಲಾ ರೀತಿಯ ಜೆನಂಗೊಕ್ಕೂ ಮಂಗಳ ತರಲಿ..
  ಎಲ್ಲೋರ ಮನೆಲಿಯೂ, ಮನಸ್ಸಿಲಿಯೂ ಕೃಷ್ಣ ನೆಲೆಸಲಿ….
  ಹರೇರಾಮ.

 4. ಗೋಪಾಲ ಮಾವ says:

  ಬೈಲಿನ ಮೇಲೆ ಬಲದ ಕೊಡಿಲಿ ಬೆಣ್ಣೆ ತಿಂಬ ಮುದ್ದು ಕೃಷ್ಣನ ಪಟ ಕಂಡು ಕೊಶಿ ಆತು. ಅಂಬಗ ಎಡದ ಹೊಡೆಲಿ ಎಂತರ ಅದು ? ಅಷ್ಟಮಿಗೆ ಸ್ಪೆಶಲ್ ಆಗಿ ಮಾಡಿದ ಕೊಟ್ಟಿಗೆಯೊ ?! ಬೈಲಿನ ಎಲ್ಲೋರಿಂಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಂಗೊ.

 5. raghumuliya says:

  ಬೈಲ ಬಂಧುಗೊಕ್ಕೆಲ್ಲಾ ಅಷ್ಟಮಿಯ ಶುಭಾಶಯ.ಬೈಲ ಪುಟ ನೋಡಿದ ಕೂಡಲೇ ಮನಸ್ಸು ಯಾವುದೋ ಲೋಕಕ್ಕೆ ಹೋತು ,ತಿರುಗಿ ಬಪ್ಪಗ ಈ ಪದ್ಯವೂ ಬಂತು..

  ನೋಡಿರೈ ಶ್ರೀ ಕಿಟ್ಟ ಚಾಮಿಯಾ ಚೆಂದ
  ಸೂಡಿದ್ದ° ನವಿಲಗರಿ ತಲೆಗೆ ಮುದದಿಂದ
  ಕೊಣಿಯುತ್ತ ಮೂಡೆ ಬೆಣ್ಣೆಯ ಹಿಡಿದು ಬಂದ°
  ತಣಿದತ್ತು ತನುಮನಸು ತುಂಬಿ ಆನಂದ

 6. ಗಣಪತಿ.ಭಟ್.ಬಿ says:

  ಎಲ್ಲರಿಂಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಂಗೋ

 7. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಗುರಿಕ್ಕಾರರ ಆಶಯ:
  “ನಮ್ಮೊಳ ಇಪ್ಪ ಕಂಸ ನಾಶ ಆಗಲಿ.
  ಭಗವದ್ಗೀತೆಯ ತತ್ವಂಗೊ ನಮ್ಮೊಳ ಸೇರಲಿ.”
  ಒಳ್ಳೆ ಸಂದೇಶ.
  ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ
  ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

 8. ಶ್ರೀಶಣ್ಣ says:

  ಗುರಿಕ್ಕಾರ್ರೇ,
  ಬ್ಲಾಗಿನ ಮೋರೆ ಪುಟಲ್ಲಿ- ಅಷ್ಟಮಿಯ ಕೊಟ್ಟಿಗೆ ಮತ್ತೆ ಮುದ್ದು ಕೃಷ್ಣ-ತುಂಬಾ ಚೆಂದ ಆಯಿದು.
  ಎಲರಿಂಗೂ ಶ್ರೀಕೃಷ್ಣ ಜಯಂತಿಯ ಶುಭಾಶಯಂಗೊ.

 9. ಬೈಲಿನ ಎಲ್ಲೋರಿಂಗುದೆ ಅಷ್ಟಮಿಯ ಶುಭಾಶಯಂಗೋ,, ಆನು ರಜ ತಡವಾಗಿ ಶುಭಾಶಯ ಹೇಳ್ತಾ ಇದ್ದೆ.. ವಿಮಾನದ ಚಕ್ರ ಪುನಾ ಪಂಚರಾತಿದಾ, ಹಾಂಗಾಗಿ ಸಮಸ್ಯೆ ಆದ್ದದು.. 😉

 10. uma d prasanna says:

  ಎಲ್ಲರಿಗೂ ಕೃಷ್ಣ ಜಯಂತಿಯ ಶುಭಾಶಯಗಳು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *