Oppanna.com

ಅವಿಲಿನ ಹಾಂಗೇ – ಒಂದು ಪ್ರಯೋಗ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   10/04/2012    10 ಒಪ್ಪಂಗೊ

ಅಮ್ಮನ ಕಾಲಿಲಿ
ತಮ್ಮನು ಮನುಗಿರೆ
ಸುಮ್ಮನೆ ತೊಂದರೆ ಕೊಡುಲಾಗ
ಸುಮ್ಮನೆ ಹೋಪಗ
ತಮ್ಮನು ಮನುಗಿದ
ಅಮ್ಮನ ಕಾಲಿನ ದಾಂಟ್ಲಾಗ

ಇದು ಹಳಬ್ಬರ ಮಾತು

ಪಟದ ಮೇಲೊಂದು ಪದ
ಹಟದಿ ಬರವಲೆ ಕೂದು
ಕಿಟಕಿ ಬಾಗಿಲ ರಾತ್ರಿ ಹಾಕಿ ದಿಲ್ಲೇ
ಹಟವ ಸಾಧನೆ ಮಾಡಿ
ಕಿಟಕಿ ಕರೆ ನೋಡುವಗ
ಪಟಪಟನೆ ರೆಕ್ಕೆ ಬಡುದು ನುಸಿ ಹೋತೂ

ತಿರುಗಿ ನೋಡಿ ಪೂರ ದೇಹ
ತೊರುಸಿ ಕೆಂಪು ಬಣ್ಣ ಬಂದು
ಕೊರದು ಬೇಯಿಸಲುದೆಯೆಡಿಯ ತೊಂಡೆ ಹಣ್ಣಿದೂ
ಮರದು ಹೋತು ಮರದ ದಳಿಯ
ಕೊರಗಿಯಿನ್ನು ಎಂತ ಮಾಡ್ಸು
ಒರಗಿ ಎರಡು ಗೊರಕೆ ಹೊಡದರೆ ನುಸಿ ಓಡುಗೂ

ಮೇಲಾಣ ಮೂರುದೇ ಬೇರೆ ಬೇರೆ ಹೇಂಗಾಯಿದು…….? ನೋಡಿ ಹೇಳಿಕ್ಕಿ

10 thoughts on “ಅವಿಲಿನ ಹಾಂಗೇ – ಒಂದು ಪ್ರಯೋಗ

  1. ಶರಲಿ ಬೈಲಿನ ಬಂಧಿ ಮಾಡುಲೆ
    ಶುರುವು ಮಾಡಿದ ಮೂರೆ ವಾರಲಿ
    ವರುಷದಾರ೦ಭ ಮೊದಲವಿಲು ಬಡಿಸಿದ ಶೇಭಾವ |
    ಬರಲಿ ನಿತ್ಯವು ಹಲವು ಕವನಾ
    ತರಲಿ ರಸಿಕರ ಮನಕೆ ಹರುಷವ
    ವರುಷದಾರ೦ಭ ದಿನ ವಿಷುವಿನ ಶುಭದ ಹಾರೈಕೆಗೋ ||

  2. ಚೊಕ್ಕ ಆತು ಭೀಮನ ಬೆಂದಿ!

  3. ಒಂದು ಬೇಳೆಚೆಕ್ಕೆ ಬೆಂದಿ, ಇನ್ನೊಂದು ಅವಿಲು.
    ಲಾಯಿಕ ಆಯಿದು

  4. ಶರ ಕುಸುಮ ಭೋಗಗಳ ಬಾಗವ
    ಕೊರದು ಸೇರುಸಿ ಮಾಡಿದವಿಲಿನ
    ಪರದೆಯೊಳ ಕಂಡೊಗ್ಗರಣೆ ಹಾಕಿತ್ತು ಭಾಮಿನಿಯು|
    ತಿರುಗಿಸಿ ತೊಳಸಿ ಸೌಟು ಹಾಕಿಸ-
    ವಿರುಚಿ ನೋಡಿ ವಿಸಂಧಿ ದೋಷವು
    ಸರಿಯ ಪರವಾಗಿಲ್ಲೆ ಹೇಳುತಲೊಪ್ಪ ಕೊಟ್ಟತ್ತು||

    ‘ಸೌ’ ಗುರು ಹೇಳಿ ಲೆಕ್ಕ ಹಾಕಿದ್ದೆ… ಸರಿಯ?

    1. ಸೌ,ಸೈ,ಸಂ,ಸಃ – ಎಲ್ಲವನ್ನೂ ಗುರು ಹೇಳಿ ಲೆಕ್ಕ ಹಾಕುದು.
      ನಿಂಗಳ ಭಾಮಿನಿ ಲಾಯಿಕಿದ್ದು.

  5. ಪಷ್ಟ್ಕಾಸು ಅವಿಲು. ಒಳ್ಳೆ ‘ರುಚಿ’ಕಟ್ಟಾಯಿದು

  6. ಕೊರದು ಬೇಯಿಸಲುದೆಯೆಡಿಯದ್ದ ತೊಂಡೆ ಹಣ್ಣು ಲಾಯಕ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×