ಭಲೇ ಬಾಚ

October 10, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜಂಬ್ರದ ಮುನ್ನಾಣದಿನ ಮೇಲಾರಕ್ಕೆ ಕೊರವದು ಹೇಳುತ್ತ ಕಾರ್ಯಕ್ರಮಕ್ಕೆ ಮನೆಯೋನ ನೆರೆಕರೆಯೋರು, ಗ್ರಾಮದವು, ಸಂಬಂಧಿಕರು ಬಂದು ಸುಧಾರರ್ಸುತ್ತವು.
ಈ ಏರ್ಪಾಡು ಬಾಳೆಲೆ ಸಜ್ಜು ಮಾಡುವುದರಂದ ಹಿಡುದು ಮೇಲಾರಕ್ಕೆ ಕೊರವಲ್ಲಿಯೊರೇಗೆ ಹೋವುತ್ತು. ಈ ಮೇಲಾರಕ್ಕೆ ಕೊರವದರ ಸಂಪೂರ್ಣ ಉಸ್ತುವಾರಿ ಬಾಚಂಗೆ. ಬಾಚ0   ಹೆಚ್ಚಾಗಿ ಜವ್ವನಿಗರೇ ಇರ್ತವು.

ಬಾಳೆಲೆ ಅಜಪ್ಪುದರದಂದ ಮೊದಲು ನಾಳೆಯಾಣ ಕಾರ್ಯಕ್ರಮಕ್ಕೆ ಎಷ್ಟಕ್ಕೆ ಅಟ್ಟಣೆ ಹೇಳಿ ಮನೆ ಯಜಮಾನನತ್ತರೆ ಕೇಳಿಗೊಳ್ಳೆಕ್ಕು. ಉದಿಯಪ್ಪಗ ಕಾಪಿಗೆ ಎಂತರ ಹೇಳಿಯೂ ಕೇಳೆಕ್ಕು. ಅದಕ್ಕೆ ಬೇಕಪ್ಪಷ್ಟು ಬಾಳೆಲೆ ಸಜ್ಜು ಮಾಡೆಕ್ಕು. ಕಟ್ಟಂದ ಕೊಡಿಬಾಳೆ ಬೇರೆ ಮಾಡಿ, ಕಂಡಾಬಟ್ಟೆ ದೊಡ್ಡದನ್ನೂ, ಬರೇ ಸಣ್ಣ ಬಾಳೆಲೆಗಳ ಬೇರೆ ಮಡಿಗೆಕ್ಕು. ಅದು ಉದಿಯಪ್ಪಗಾಣ ಕಾಪಿಗೆ.  ಒಳುದ ಲಾಯಿಕ ಬಾಳೆಯ ಕೊಡಿ ಹಿಡುದು ಒಂದೇಲೆಕ್ಕ ತುಂಡು ಮಾಡಿ 25ರ ಕಟ್ಟು ಮಾಡೆಕ್ಕು. ಕಾಪಿಗೆ ಮಡಿಗಿದ ಕೀತು ಬಾಳೆಲೆಯ  ಹೆಮ್ಮಕ್ಕ ಚೆಂಡಿಹರ್ಕಿಲಿ ಉದ್ದೆಕ್ಕು. ಉದ್ದಿದಾಂಗೆ ಅದರ ಕವುಂಚಿ ಮೊಗಚ್ಚಿ ಅಟ್ಟಿವೇಯಿಶೆಕ್ಕು. ವೈದಿಕರಿಂಗೆ ಬೇಕಾದ ಬಾಳೆಯ ಅಜಪ್ಪಿ ಒಂದು ಬೇರೆ ಅಟ್ಟಿ ಮಡಿಗೆಕ್ಕು. ಬಾಳೆಲೆ ಸಜ್ಜು ಮಾಡುವವಕ್ಕೆ ಪೀಶಕತ್ತಿ ಕೊಡುದು, ಬಾಳೆಬಳ್ಳಿ ಮಾಡಿ ಕೊಡುದು, ಎಷ್ಟು ಕಟ್ಟುಗ ಆತು ಹೇಳಿ ಲೆಕ್ಕ ಮಾಡುದು ಬಾಚನ ಕೆಲಸ.

ನಾಳೆಯಾಣ ಕಾರ್ಯಕ್ರಮಕ್ಕೆ ತಾಳ್ಳು, ಕೊದಿಲು, ಮೇಲಾರ ಇತ್ಯಾದಿಗಳ ಪಟ್ಟಿ ಮನೆಯ ಯಜಮಾನನ ಹತ್ತರೆ ಕೇಳುಗೊಳ್ಳೆಕ್ಕು. ಎಲ್ಲಾ ತರಕಾರಿಗಳ ತೊಳದು ಕುರುವೆಲಿ ತುಂಬುಸೆಕ್ಕು. ಅಡಿಗ್ಯೋರತ್ತರೆ ಯಾವ್ಯಾವದಕ್ಕೆ ಎಷ್ಟೆಷ್ಟು ಹೇಳಿ ಪಾತ್ರ ಅಂದಾಜಿ ಕೇಳಿಗೊಳ್ಳೆಕ್ಕು.

ಇರುಳು ಉಂಡಾದಮೇಲೆ ಉದ್ದಕ್ಕೆ ಎರಡೂ ಹೊಡೆಲಿ ಹಸೆ ಹಾಕಿ ಕೊರವೋರ ಕೂರ್ಸಿ ಅವಕ್ಕೆ ಮಣೆದೆ, ಒಂದು ಹಾಳೆಯನ್ನುದೆ, ಮತ್ತೆ ಬೇಕಾದವಕ್ಕೆ ಪೀಶಕತ್ತಿಯನ್ನೂ ಕೊಡೆಕ್ಕು. ಸಾಲಿನ ಕೊಡೀಲಿ ಅಡ್ಡಕ್ಕೆ ಮೆಟ್ಟುಕತ್ತಿ ಹಾಕೆಕ್ಕು. ತಾಳ್ಳಿನ ತರಕಾರಿ ಸುರುವಿಂಗೆ ಎಲ್ಲೋರಿಂಗೂ ಕೊಡೆಕ್ಕು. ಅವಿಲು ಇದ್ದರೆ ಒಂದು ನಾಲ್ಕು ಜನಕ್ಕೆ ಅವಿಲಿಂಗೆ ಕೊರವ ನೆಟ್ಟಿಕಾಯಿಗಳ ಕೊಡೆಕ್ಕು. ಕೊರೆತ್ತಾ ಇದ್ದಹಾಂಗೆ ತುಂಬಿದ ಹಾಳೆಂದ ಕೊರದ್ದರ ತೆಗದು ಅಂದಾಜಿ ಪಾತ್ರಕ್ಕೆ ಸೊರುಗೆಕ್ಕು. ಕೊರವೋನತ್ತರೆ ತರಕಾರಿ ಖಾಲಿ ಆದಾಂಗೆ ಭರ್ತಿ ಮಾಡೆಕ್ಕು. ತಾಳ್ಳಿಂದು ಆದಮೇಲೆ ಕೊದಿಲಿಂದು, ಅದಾದಮೇಲೆ ಮೇಲಾರದ್ದು ಕೊರೆಶೆಕ್ಕು. ಇದರೊಟ್ಟಿಂಗೇ ಸೌತೆ, ಕುಂಬ್ಳ ಇತ್ಯಾದಿಗ ಇದ್ದರೆ ಮೆಟ್ಟುಕತ್ತಿಯೋರತ್ತರೆ ಕೊಟ್ಟು ಗಡಿ ಮಾಡಿ ತಿರುಳು ತೆಗೆಶೆಕ್ಕು. ಜೀಗುಜ್ಜೆ, ಮುಂಡಿ,ಕೇನೆಗೆಂಡೆಗಳ ಚೋಲಿ ತೆಗದು ಗಡಿ ಮಾಡುದುದೇ ಮೆಟ್ಟುಕತ್ತಿಯೋರು. ಮಾಡಿದ ಗಡಿಗಳ ಕೊರವೋರಿಂಗೆ ಕೊಡೆಕ್ಕು. ಮತ್ತೆ ಅಕೇರಿಗೆ ಮೆಣಸ್ಕಾಯಿಗೆ, ಉಪ್ಪಿನಕಾಯಿಗೆ ಸೌತೆ ಇತ್ಯಾದಿಗಳ ಕೊರೆಶೆಕ್ಕು.

ಬಾಗ ದೊಡ್ಡ ಆದರೆ ಸಣ್ಣ ಮಾಡ್ಲೆ, ಸಣ್ಣ ಆದ್ದರ ದೊಡ್ಡ ಮಾಡ್ಲೆ ಹೇಳುದು ಬಾಚನ ಜವಾಬ್ದಾರಿ. ಚೋಲಿ ತೆಗದು ಕೊರವದರ, ಕೊರದು ನೀರಿಂಗೆ ಹಾಕುವ ನೆಟ್ಟಿಕಾಯಿಗಳ ನೋಡಿಗೊಳ್ಳೆಕ್ಕು. ಕೊರವಲೆ ಸುರುವಾದ ಮೇಲೆ ಕೊರವೋರತ್ತರೆ ತರಕಾರಿ ಖಾಲಿ ಅಪ್ಪಲೆ ಬಿಡ್ಲೆಡಿಯ. ಎಂತಕ್ಕೆ ಹೇಳಿರೆ ಒಂದರಿ ಕೊರವಲ್ಲಿಂದ ಎದ್ದು ಕೈ ತೊಳದರೆ ಮತ್ತೆ ತಿರುಗ ಕೂರ್ತವಿಲ್ಲೆ. ಮುಗುಕ್ಕೋಂಡು ಬಂದ ಹಾಂಗೆ ಅಡಿಗೆಯೋರ ದಿನಿಗೇಳಿ ಕೊರದ ಅಂದಾಜಿ ಸರಿ ಇದ್ದಾ ಹೇಳಿ ತೋರ್ಸೆಕ್ಕು. ಮತ್ತೆ ಶುಕ್ರುಂಡೆ, ಲಾಡು ಇತ್ಯಾದಿಗಳ ಕಟ್ಟುಲೆ ಇದ್ದರೆ ಅದಕ್ಕೆ ವ್ಯವಸ್ಥೆ ಮಾಡೆಕ್ಕು. ಮರದಿನ ಟೊಮೆಟ, ಚೆಕ್ಕರ್ಪೆ ಹಸಿಮೆಣಸು ಕೊರವಲೆ ಇರ್ತು.

ಕಾರ್ಯಕ್ರಮ ಸುಧಾರ್ಸುಲೆ ಬಾಚ ಬೇಕೆ. ಹಾಂಗ್ಹೇಳಿ ಮೇಲಾರಕ್ಕೆ ಕೊರವಲೆ ಗೊಂತಿಲ್ಲದ್ದೋರು ಬಾಚ° ಅಪ್ಪಲೆ ರಜ್ಜ ಬಂಙ ಇದ್ದು.

ಭಲೇ ಬಾಚ°!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಇದಾ ಭಾವ.. ಬಾಚನತ್ರೆ ಕೊರೆತ್ತೋರಿಂಗೆ ಒಂದರಿ ಚಾ ಕಾಪಿ ತರುಸಲೆ ನೆಂಪುಮಾಡಿಕ್ಕಿ.

  ಅಪ್ಪು.. ಕೊರವಲೆ ಅರಡಿಯದೋನು ಬಾಚ° ಅಪ್ಪಲೆಡಿಯ, ಕೊರೆತ್ತೋರು ಒಂದು ಗೌಜಿ ಮಾಡಿಕ್ಕುಗು ಕೊರಕ್ಕೊಂಡು ಅವನ ರೇಗುಸಿಯೊಂಡು ಅಪ್ಪೋ!. ಎಂತಾರು ಬೋಚಂಗೆ ಆತಿಲ್ಲೆ ಬಾಚನ ಕೆಲಸ.

  ಭಟ್ರ ಮಗ° ಭಟ್ಟ, ಗುರಿಕ್ಕಾರ್ರ ಮಗ ಗುರಿಕ್ಕಾರ° ಆದರೆ ಬಾಚನ ಮಗ ಬಾಚ° ಹೇಳಿ ಇಲ್ಲೆ ಅಪ್ಪೊ!!

  ಭಾವ.. ಬನ್ನಿ ಹೇಳಿತ್ತು. ಶುದ್ದಿ ಪಷ್ಟಾಯ್ದು. ಇನ್ನಾಣದ್ದು ಸುರುಮಾಡಿ.

  [Reply]

  VA:F [1.9.22_1171]
  Rating: +2 (from 2 votes)
 2. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಬೆಂದಿಗೆ ಕೊರವ ಕೆಲಸದ ಸಂಪೂರ್ಣ ಜವಾಬ್ದಾರಿ ಬಾಚನ ಕೈಲಿ ಇಪ್ಪ ಕಾರಣ ಅವ “ಬಾಚ” ಅಲ್ಲ, ಬೋಸ, ಹೇಳಿರೆ BOSS !!
  ಶುದ್ದಿ ಲಾಯಕಾಯಿದು.

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಈ ಸಮೆಲಿ ಒಪ್ಪಣ್ಣ ಬರದ ಶುದ್ದಿಗಳಲ್ಲಿ ಹಳೆ ಶುದ್ದಿ ಒಂದು ನೆಂಪಾತು “ಬೆಂಗಳೂರಿನ ಬೆಳಿಮಾಣಿ ಬೆಂದಿಗೆ ಕೊರವಗ ಬಾಚ ಆದ”. (೨೧.೦೫.೨೦೧೦) ಓದದ್ದವು ಖಂಡಿತಾ ಓದೆಕು. ಲಾಯಕಿದ್ದು.

  [Reply]

  VA:F [1.9.22_1171]
  Rating: +1 (from 1 vote)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  “ಅತ್ತಾಳ”ದ ದಿನ ಬೆಂದಿಗೆ ಕೊರವಾಗ ತೊಂಡೆ,ಬಾಳೆಕಾಯಿ ಬಂದರೆ ಅದರ ಮೇಣ ಕೈಗೂ ಪೀಶಕತ್ತಿಗೂ ಆವುತ್ತನ್ನೆ ಅದರ ಕ್ಲೀನು ಮಾಡುತ್ಸು ಆರ ಕೆಲಸ ?ಗೊಂತಿಲ್ಲದ್ದರೆ ಅವ ಬೋಚ ಆವುತ್ತ ಅಲ್ಲದೋ ಭಾವ (ಹುಳಿ ಮಜ್ಜಿಗೆಲಿ ತೊಳೆಕು, ತೆಂಗಿನೆಣ್ಣೆ/,ಚಿಮಿಣಿ ಎಣ್ಣೆ ಹಾಕಿ ಬಾಳೆ ಕೀತಿಲಿ ಸಮಕ್ಕೆ ತಿಕ್ಕೆಕ್ಕು,ಸೌತೆ ತಿರುಳಿಲಿಯೂ ಲಾಯಕ ಆವುತ್ತು..

  ಬೆಂದಿಗೆ ಕೊರವಗ ಎಡೆ ಹೊತ್ತಿಲಿ ಒಂದು ಚಾ ಕೊಡ್ಲೆ ಮರದತ್ತಾ? ಇಲ್ಲದ್ರೆ ಕೊರತ್ತೋರು ಸುಮ್ಮನೆ ಕೂರವು ಮಿನಿಯಾ….

  [Reply]

  VN:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಯಬ್ಬಾ ಬಾಚಂಗೆ ಅಷ್ಟೆಲ್ಲಾ ಕೆಲಸದ ಜವಾಬ್ದಾರಿ ಇದ್ದಲ್ಲದಾ?
  ಆನು ಬಾಚ ಹೇಳಿರೆ ಕೊರದ ಬಾಗಂಗಳ ಸಂಗ್ರಹಿಸಿ ದೊಡ್ಡ ಪಾತ್ರಕ್ಕೆ ಹಾಕುದು ಅಷ್ಟೇ ಹೇಳಿ ಗ್ರೇಶಿದ್ದು.
  ಲಾಯಿಕಾಯಿದು ಬರದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶುದ್ದಿ ಲಾಯಿಕ ಆಯಿದು.
  ಅಕೇರಿಗೆ ಮೆಣಸು ಕೊರವಲೆ ಜೆನ ಇಲ್ಲದ್ರೆ ಬಾಚನೇ ಕೊರೆಕಕ್ಕೋ?

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಾಚ ಬಲಶಾಲಿ ಆಗಿ ಇದ್ದರೆ ಕಾರ್ಯ ಸುಸೂತ್ರ.ಮೊದಲು ಪುಳ್ಕೂರು ಬಾಚ ಹೇಳಿ ಒಬ್ಬ ಜಟ್ಟಿ ಇದ್ದಿದ್ದನಾಡ.[ಬೇಕಲ ರಾಮನಾಯಕರ ಕತೆ].ಅವನ ನೆಂಪಿಲಿ ನಮ್ಮ ಸುಧರಿಕೆ ಮುಖ್ಯಸ್ಥಂಗೆ ಬಾಚ ಹೇಳಿ ಹೆಸರು ಕೊಟ್ಟವೋ?ಬಾಚಿಕೊಂಡು ಪಾತ್ರೆಗೆ ಹಾಕುದು ಮಾತ್ರ ಬಾಚನ ಕೆಲಸ ಅಲ್ಲ; ಬಾಚನೇ ಬಾಗ ಕೊರವ ರಂಗದ ಭಾಗವತ!ಭಾರೀ ಲಾಯ್ಕ ವಿವರಣೆ.

  [Reply]

  VA:F [1.9.22_1171]
  Rating: +1 (from 1 vote)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಭಲೆ..ಭಲೆ.. ಬಾಚನ ಬಗ್ಗೆ ಒಳ್ಳೆ ಮಾಹಿತಿ.
  ಇನ್ನಣ ಶುದ್ದಿ ಗಳೂ ಬೇಗ ಬರಲಿ ಹೇಳಿಗೊಂಡು ಬೈಲಿಂಗೆ ಸುಸ್ವಾಗತಂ.

  [Reply]

  VN:F [1.9.22_1171]
  Rating: 0 (from 0 votes)
 8. ಗಣೇಶ ಪೆರ್ವ
  ಗಣೇಶ ಪೆರ್ವ

  ಶುದ್ದಿ ಪಷ್ತಾಯಿದು… ಒಪ್ಪ೦ಗೊ.

  [Reply]

  VA:F [1.9.22_1171]
  Rating: 0 (from 0 votes)
 9. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಬಾಚನ ಶುದ್ದಿ ಪಷ್ತಾಯ್ದು..ಬರಲಿ ಹೀಂಗೆ ಶುದ್ದಿಗ..ದೇವಿಗೆ ಸ್ವಾಗತ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಪೆರ್ಲದಣ್ಣಮುಳಿಯ ಭಾವಪ್ರಕಾಶಪ್ಪಚ್ಚಿಗಣೇಶ ಮಾವ°ಮಾಲಕ್ಕ°ಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿಕೊಳಚ್ಚಿಪ್ಪು ಬಾವಶಾ...ರೀಅನುಶ್ರೀ ಬಂಡಾಡಿಅಕ್ಷರ°ಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣಅಜ್ಜಕಾನ ಭಾವಬೋಸ ಬಾವಚೆನ್ನೈ ಬಾವ°ಶೀಲಾಲಕ್ಷ್ಮೀ ಕಾಸರಗೋಡುಪುತ್ತೂರಿನ ಪುಟ್ಟಕ್ಕಅಕ್ಷರದಣ್ಣಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ