15-ಅಗೋಸ್ತು-2015 : ಬೆಂಗ್ಳೂರಿಲಿ ಶ್ರೀಗುರುಪಾದುಕಾಪೂಜೆ, ಬೈಲಿನ ಮಿಲನ – ವರದಿ

ಹರೇರಾಮ,

ಕಳುದ ನಾಲ್ಕು ಒರಿಶ ನೆಡಕ್ಕೊಂಡು ಬಂದಂತೆ, ಈ ವರ್ಷವೂ ಬೈಲಿನ ಮಿಲನ ಕಾರ್ಯಕಮ ತುಂಬ ಚೆಂದಕೆ ನೆಡದ್ದು. ಬೆಂಗ್ಳೂರಿನ ಗಿರಿನಗರ ಮಠಲ್ಲಿ ನಮ್ಮ ಗುರುಗೊ ಕೈಗೊಂಡ ಚಾತುರ್ಮಾಸ್ಯ ವ್ರತದ 16ನೇ ದಿನ, ಹೇದರೆ – ೧೫ ಅಗೋಸ್ತು ೨೦೧೫ ನೇ ಶನಿವಾರ ನೆಡದತ್ತು. ಕಾರ್ಯಕ್ರಮದ ಸಂಕ್ಷೇಪ ವಿವರ ಇಲ್ಲಿದ್ದು.

ಮುನ್ನಾಣ ದಿನವೇ ಪೂಜಾಸಮಯಕ್ಕೆ ಅಜ್ಜಕಾನಬಾವ ಕಾಯಿಮಡುಗಿ ಬೈಲಿನ ಲೆಕ್ಕದ ಕಾರ್ಯಕ್ರಮದ ವಿಷಯ ಗುರುಗಳ ಹತ್ರೆ ನಿವೇದನೆ ಮಾಡಿತ್ತಿದ್ದು.
ಆ ದಿನ ಉದಿಯಪ್ಪಗ ಒಂಭತ್ತು ಗಂಟೆಗೆ ಶ್ರೀ ಕರಾರ್ಚಿತ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರರ ಪೂಜೆ ನೆರವೇರಿತ್ತು.
ಪೂಜೆ ಆಗಿ ಇತರೇ ಪಾದಪೂಜೆಗೊ ಕೆಲವು ನೆಡದು, ಬೈಲಿನ ನೆಂಟ್ರೆಲ್ಲ ಸೇರಿದ ಮತ್ತೆ ಬೈಲಿನ ಲೆಕ್ಕದ ಪಾದಪೂಜೆ ಸುರು ಆತು. ಶ್ರೀಮಠದ ಶಾಸ್ತ್ರಿಗಳಾದ ಶ್ರೀ ಅಗ್ನಿಹೋತ್ರಿಗಳ ನೇತೃತ್ವಲ್ಲಿ ನಮ್ಮ ಬೈಲಿನ ಹಿರಿಯ ಸದಸ್ಯರಾದ ಶ್ರೀ ಸುಭಗಣ್ಣ ದಂಪತಿಗೊ ಪಾದಪೂಜೆ ನೆರವೇರ್ಸಿದವು.
ಬೈಲಿನ ಸದಸ್ಯರೆಲ್ಲ ಪೂಜೆ ಅಪ್ಪಗ ಎದುರು ಕೂದು ಶ್ರದ್ಧೆಲಿ ಸೇರಿಗೊಂಡವು. ಅಭಿಷೇಕ ಮಾಡುವಾಗ ಸೇರಿಗೊಂಡವು.
ಬೈಲಿನ ಸಮಗ್ರ ಅಭಿವೃದ್ಧಿಗಾಗಿ ಸುಭಗಣ್ಣ ಎರಡು ಮಾತು ಹೇಳಿ ಪ್ರಾರ್ಥನೆ ಮಾಡಿಗೊಂಡವು. ಗುರಿಕ್ಕಾರ್ರು, ಮಾಷ್ಟ್ರುಮಾವ, ಟೀಕೆಮಾವ, ಶ್ರೀಅಕ್ಕ, ಮುಳಿಯಭಾವ, ಬೆಟ್ಟುಕಜೆ ಅಣ್ಣ-ಅತ್ತಿಗೆ, ಬೆಟ್ಟುಕಜೆ ತಮ್ಮ, ಹಳೆಮನೆ ತಮ್ಮ, ಕೈರಂಗಳ ದೊಡ್ಡಮ್ಮ, ಒಪ್ಪಕ್ಕ, ಚುಬ್ಬಣ್ಣ , ಪಿಕೆಜಿ ಭಾವ, ಅರ್ತ್ಯಡ್ಕ ಬಾಲಣ್ಣ – ಇತ್ಯಾದಿ ಎಲ್ಲೋರುದೇ ಹಸ್ತ ಮುಟ್ಟಿಗೊಂಡವು.

ಇದಾದ ತಕ್ಷಣ ಛಾತ್ರಚಾತುರ್ಮಾಸ್ಯದ ವೇದಿಕೆಲಿ ಶ್ರೀಗುರುಗೊ ಪೀಠಕ್ಕೆ ಬಂದವು.
ಬೈಲಿನ ಪಾದಪೂಜೆಯ ಲೆಕ್ಕದ ಪ್ರಸಾದ ಸ್ವೀಕಾರಕ್ಕೆ ವೇದಿಕೆಗೆ ಹೋಪಗಳೂ ಹಾಂಗೇ – ಬೈಲಿನ ಎಲ್ಲರೂ ಕೈ ಜೋಡ್ಸಿ ಶ್ರೀಪೀಠಕ್ಕೆ ಆರತಿ ಮಾಡಿದವು.
ಒಳ್ಳೆದಾಗಲಿ ಹೇದು ಹರಸಿ ಶ್ರೀಗುರುಗೊ ಹಾರೈಸಿದವು.
ಫಲಸಮರ್ಪಣೆಲಿ ವಿಶೇಷವಾಗಿ ಬೈಲಿಲಿ ಬೆಳದ ಸಾವಯವ ತರಕಾರಿಗಳ – ಊರಿಂದ ತಂದದರ – ಸಮರ್ಪಣೆ ಮಾಡಿದವು ಬೈಲಿನೋರು.

ಆಶೀರ್ವಚನಲ್ಲಿ – “ಬೈಲು ಹೇದರೆ ಗುರುಪೀಠಕ್ಕೇ ಪ್ರತಿಷ್ಠೆ. ಬೈಲು ಹವ್ಯಕ ಸಾಹಿತ್ಯಕ್ಕಾಗಿ ತುಂಬಾ ಕೆಲಸ ಮಾಡ್ತಾ ಇದ್ದು. ಈ ಸೇವೆ ಹೀಂಗೇ ಮುಂದುವರಿಯಲಿ” – ಹೇದು ಅನುಗ್ರಹಿಸಿದವು.
ಇದಾಗಿ ಪ್ರಸಾದ ಭೋಜನ ಆತು.

ಎಲ್ಲೋರಿಂಗೂ ಉಂಡಾಗಿ ಗೋಪುರಲ್ಲಿ ಬಂದು ಕಾಲುನೀಡಿ ಕೂದಪ್ಪಗ, ಅಲ್ಲಿಗೇ ಒಂದು ವೃತ್ತಲ್ಲಿ ಕೂದು ಬೈಲ ಪಟ್ಟಾಂಗ ನೆರವೇರಿತ್ತು.
ಪಟ್ಟಾಂಗಕ್ಕೆ ಬಂದ ಹೊಸಬ್ಬರ ಪರಿಚಯ ಮಾಡಿಗೊಂಡತ್ತು.
ಬೈಲಿಂದ ಇಷ್ಟನ್ನಾರ ಆದ ಕಾರ್ಯಂಗಳ ಬಗ್ಗೆ, ಮುಂದಾಣ ಕಾರ್ಯಯೋಜನೆಗಳ ಬಗ್ಗೆ, ಹೊಸ ಕೆಲಸಂಗಳ ಬಗ್ಗೆ ಮಾತಾಡಿಗೊಂಡತ್ತು.
ಮೀಟಿಂಗು ಮಾತಾಡಿದ ಮತ್ತೆ ಮಠಲ್ಲಿ ಶ್ರೀರಾಮನ ಎದುರು ನಿಂದುಗೊಂಡು ಒಂದು ಪಟ ತೆಗದತ್ತು. ಬೈಲಿನವೇ ಆದ ಹಿರಿಯರಾದ ವಿದ್ವಾನಣ್ಣನೂ, ಶ್ರೀ ಗುರುಕುಲದ ಶ್ರೀ ಆಚಾರ ಭಟ್ರೂ – ನಮ್ಮೊಟ್ಟಿಂಗೆ ಇತ್ತಿದ್ದವು. ಕುರುಂಬುಡೇಲು ವಿಶ್ವನಾಥ ಮಾವ, ಶ್ರೀಅಕ್ಕ, ಮಾಬಲಡ್ಕ ಭಾವ, ಪೀಕೇಜೀ ಗೋವಿಂದ ಭಾವ, ಟೀಕೆಮಾವ ದಂಪತಿಗೊ, ಮುಳಿಯ ಭಾವ ದಂಪತಿಗೊ, ಮಾಷ್ಟ್ರುಮಾವನ ಮಗಳು, ಸೊಸೆ – ಪುಳ್ಳಿ, ಜೆಡ್ಡು ರಾಧಕ್ಕ, ಬೆಟ್ಟುಕಜೆ ದಂಪತಿಗೊ, ಕೃಷ್ಣಾನಂದ ಮಾಣಿ, ಚುಬ್ಬಣ್ಣ ದಂಪತಿಗೊ – ಮತ್ತೂ ಹಲವು ಬಂಧುಗೊ, ಹಿತೈಷಿಗೊ ಉಪಸ್ಥಿತರಾಗಿತ್ತಿದ್ದವು.
“ಬೈಲಿಲಿ ಕಾಂಬೊ”- ಹೇಳಿಗೊಂಡು ಎಲ್ಲೋರುದೇ ನೆಗೆನೆಗೆ ಮೋರೆಲಿ ಪರಸ್ಪರ ಬೀಳ್ಕೊಟ್ಟತ್ತು.

ಹಲವಾರು ಜೆನಂಗೊ ಪಟ ತೆಗಕ್ಕೊಂಡು ಇತ್ತಿದ್ದವು. ವಿಶೇಷವಾಿ ಕೆಮರದಣ್ಣ ಹಳೆಮನೆತಮ್ಮದ್ದು ದೊಡ್ಡ ಕೆಮರವೂ, ಬೆಟ್ಟುಕಜೆ ಉದ್ದಮಾಣಿಯ ಉದ್ದಮೊಬೈಲುದೇ ತುಂಬ ಪಟಂಗಳ ತುಂಬುಸಿಗೊಂಡಿದು.
ಹೆರ್ಕಿದ ಕೆಲವು ಪಟಂಗೊ ಇಲ್ಲಿದ್ದು.

ಬೈಲಿನ ಕೆಲಸಂಗಳ ಒಟ್ಟಿಂಗೆ ಕೈಜೋಡುಸಿ.

ಹರೇರಾಮ.

 

ಶುದ್ದಿಕ್ಕಾರ°

   

You may also like...

11 Responses

  1. ರಘು ಮುಳಿಯ says:

    ಕಾರ್ಯಕ್ರಮ ಕೊಶಿ ಕೊಟ್ಟತ್ತು. ಬೈಲಿನ ಸಾಹಿತ್ಯ ಕೃಷಿ ಚೆಂದಕೆ ಬೆಳೆಯಲಿ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *