ಬಪ್ಪದು ತಪ್ಪುಗೋ….?

October 9, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಾತಜ್ಜಿಯ ಮಗನ ಮಗಳು ಶಾರದೆ ಗೊಂತಿಲ್ಲೆಯಾ…. ಅದುದೆ ಆನುದೆ ಭಾರಿ ಚೆಙಾಯಿಗೊ.ಒಂದನೇ ಕ್ಲಾಸ್ಸಿಂದ ಹಿಡುದು ಡಿಗ್ರಿ ಮುಗಿವ ವರೆಗೂ ಒಟ್ಟಿಂಗೇ ಆಡಿ ಬೆಳದ್ದು .
ಗುಡ್ಡೆ ಗುಡ್ಡೆ ತಿರುಗಿ ಕುಂಟಾಲ ಹಣ್ಣು, ಮುಳ್ಳು ಹಣ್ಣು, ಕೇಪುಳ ಹಣ್ಣು ತಿಂದೊಂಡು ಶಾಲೆಗೆ ತಡವಾಗಿ ಹೋಗಿ ಕ್ಲಾಸ್ಸಿಂದ ಹೆರ ನಿಂದದು ಎಲ್ಲವೂ ಒಟ್ಟಿಂಗೆ.
ಲಡಾಯಿ ಕುಟ್ಟಿ ರಜ ಕಳಿವಗ ರಾಜಿ ಮಾಡ್ಯೊಂಡು ಇನ್ನು ಕೋಪ ಮಾಡ್ಳೇ ಆಗ ಹೇಳಿ ತೀರ್ಮಾನ ಮಾಡಿ ಅರ್ಧ ಗಂಟೆಲೇ ಇನ್ನೊಂದರಿ ಕೋಪ ಮಾಡಿದರೂ ಒಬ್ಬನ ಬಿಟ್ಟು ಒಬ್ಬ ಇಲ್ಲೆ ಹೇಳ್ತ ಹಾಂಗೆ ಬೆಳದ ಎಂಗಳ ಆತ್ಮೀಯತೆಯ ವಿವರ್ಸುಲೆ ಶಬ್ದಂಗ ಇದ್ದೋ….?
ಮದುವೆ ಆದ ಮೇಲೂ ಆಗಾಗ ಅಲ್ಲಿ ಇಲ್ಲಿ ಕಂಡೊಂಡು , ಎಡಿಯದ್ದರೆ ಫೋನಿಲಿ ಕಂಡೊಂಡು ಇದ್ದೆಯ°.
ಶಾರದೆ ತುಂಬಿದ ಬಸರಿ. ಡಾಕುಟ್ರು ಆಗಸ್ಟ್ 19ಕ್ಕೆ ಹೆರಿಗೆಗೆ ದಿನ ಹೇಳಿದ್ದವಡ.
ಅವು ಹೇದ ದಿನಕ್ಕೇ ಆವುತ್ತು ಹೇದು ಹೇಳಲೆ ಏಡಿಗೋ…? ಅದೇನಿದ್ದರೂ ದೈವ ಸಂಕಲ್ಪ ಅಲ್ಲದೋ…?
ಮೈಕೈ ತುಂಬ್ಯೊಂಡು ಆರೋಗ್ಯಲ್ಲಿ ಇದ್ದು. ತಿಂಗಳು ತಿಂಗಳು ಮಾಡೆಕ್ಕಾದ ಚೆಕಪ್ ಎಲ್ಲ ಮಾಡ್ಸಿ ಆಯ್ದು. ಎಲ್ಲ ನೋರ್ಮಲ್ ಹೇದು ಡಾಕುಟ್ರು ಹೇದವು.
ಇನ್ನು ದಿನ ತುಂಬಿಯಪ್ಪಗ ಸಂಶಯ ಬಂದ (ಬೇನೆ ಶುರುವಾದರೆ) ಕೂಡ್ಳೆ ಬನ್ನಿ ಹೇದು ಹೇದವು . ಅದರ ಗೆಂಡನೂ ಡಾಕುಟ್ರು ಹಾಂಗಾಗಿ ಎಂತ ಗಾಬರಿ ಇಲ್ಲೆ.
ಡಾಕುಟ್ರು ಹೇದ ದಿನಕ್ಕಿಂತ ರಜ ಮದಲೆ ಹೇದರೆ ಆಗಸ್ಟ್ 15ಕ್ಕೆ ಆದರೆ ವಿಶೇಷ ಆತನ್ನೇ. ಇಡೀ ದೇಶವೇ ಸಂಭ್ರಮ ಪಡ್ತ ದಿನ ಅಲ್ಲದಾ ಹೇದು ಆಲೋಚನೆ ಮಾಡ್ಯೊಂಡು ಇತ್ತಿದ್ದೆಯ°.
ಎರಡು ದಿನಕ್ಕೊಂದರಿ ಫೋನ್ ಮಾಡಿ ಮಾತಾಡ್ಯೊಂಡು ಇತ್ತೋಳು ದಿನಕ್ಕೆರಡು ಸರ್ತಿ ಮಾಡ್ಳೆ ಸುರು ಮಾಡಿದೆ.
15ಕ್ಕೆ ಹೊತ್ತೋಪಗ ಒಂದರಿ ಸಣ್ಣಕೆ ಬೇನೆ ಸುರು ಆತಡ. ಬಾವ° (ಶಾರದೆ ಗೆಂಡ°) ಚೆಕಪ್ ಮಾಡಿ ಇದು ಗೇಸು ತುಂಬಿ ಆದ್ದದು ಹೇದು ಜೀರಕ್ಕಿ ಕಷಾಯ ಕುಡಿಶಿದನಡ.
ಬಸರಿಯಕ್ಕೊಗೆ ಒಂದೊಂದರಿ ಹುಸಿ ಬೇನೆ ಬಪ್ಪ ಕ್ರಮ ಇದ್ದಡ. ಹಾಂಗಾಗಿ ಗಾಬರಿ ಆಯಿದಿಲ್ಲೆ.

15 ಕಳುದು 16 ನೇ ತಾರೀಕುದೆ ಕಳುದತ್ತು .ಎಂತ ಸುದ್ದಿ ಇಲ್ಲೆ.
ಮರದಿನ 17ಕ್ಕೆ ಅಮಾವಾಸ್ಯೆಯೂ, ಸಂಕ್ರಮಣವೂ.
ದೇವರೇ ಹೇಂಗಾದರೂ ಈ ದಿನ ಒಂದು ಕಳುಕ್ಕೊಳ್ಳಲಿ ಹೇದು ಹೊಡಾಡುಗ ಮನಸ್ಸಿಲೇ ಪ್ರಾರ್ಥನೆ ಮಾಡ್ಯೊಂಡೆ.
ಆದರೆ ನಾವೊಂದು ಬಗೆದರೆ ದೈವವೊಂದು ಬಗೆತ್ತು ಹೇಳ್ತ ಹಾಂಗೆ ಆ ದಿನ ಇಂದು ಎಲ್ಲ ದಿನದ ಹಾಗೆ ಇಲ್ಲೆ ಹೇದು ಅಪ್ಪಲೆ ಶುರು ಆತಡ.
ಸಣ್ಣಕೆ ಬೇನೆ ಇದ್ದರೂ ಹುಸಿ ಬೇನೆ ಆದಿಕ್ಕು ಹೇದು ಗೋಶ್ಪಾರಿ ಮಾಡಿತ್ತು.
ಆದರೆ ಮಧ್ಯಾಹ್ನ ಊಟ ಕಳುದಪ್ಪಗ ಇನ್ನು ತಡವಲೆ ಎಡಿಯ ಹೇದು ಬಾವನ ಹತ್ತರೆ ‘ಬೇನೆ ಶುರು ಆಯಿದನ್ನೆ’ ಹೇದು ಹೇದತ್ತಡ .
ಬಾವ ನೋಡಿ ಮಗುವಿನ ಚಲನೆ ಶುರು ಆಯಿದು ಹೇದು ಕೂಡ್ಳೆ ಬೇಕಾದ ತಯಾರಿ ಮಾಡ್ಯೊಂಡು ಆಸುಪತ್ರೆಗೆ ಕರಕ್ಕೊಂಡು ಹೋದನಡ.
ಅಷ್ಟೆಲ್ಲ ಅಪ್ಪಗ ಹೊತ್ತೋಪಗ 5ಗಂಟೆ ಆಯಿದು. ಹೋವುತ್ತ ದಾರಿಲೇ ಎನಗೆ ಫೋನು ಮಾಡಿ ಶುದ್ದಿ ಹೇದವು.

ಮನೆ ಹತ್ರಾಣ ಬಟ್ಯ ಅದರ ಮಗ ಎಂತ ಕೆಟ್ಟ ಕೆಲಸ ಮಾಡಿರೂ ‘ಅಮಾಸೆಗ್ ಪುಟ್ಟಿನಾಯೆ’ ಹೇದು ಬೈವದು ಕೇಳಿದ ಎನಗೆ ಅಮಾಸೆ ಒಳ್ಳೆ ದಿನ ಅಲ್ಲ ಹೇದು ಗೊಂತಿದ್ದು.
ಆದರೆ ಹುಟ್ಟು ಸಾವು ನಮ್ಮ ಕೈಲಿ ಇಲ್ಲೆನ್ನೇ…
ಅಮಾವಾಸ್ಯೆ ಎಷ್ಟು ಘಳಿಗೆ ಇದ್ದು ನೋಡಿ ಹೇಳಿ ಹೇದು ಯಜಮಾನ್ರ ಹತ್ತರೆ ಕೇಟೆ.
ಇಂದು ಇರುಳು 10.30ಕಳುದರೆ ಅಮಾವಾಸ್ಯೆ ಮುಗಿತ್ತು ಹೇದು ಹೇದವು. ಈಗ ಇನ್ನೂ 5.30ಆತಷ್ಟೆ.
ಎಂತ ಆವುತ್ತೋ ಏನೋ ಹೇದು ತಲೆಬೆಶಿ ಮಾಡ್ಯೊಂಡು ಅಮಾಸೆಗೆ ಹುಟ್ಟಿದರೆ ಎಂತ ದೋಷಂಗ ಇದ್ದು ಹೇಳಿ ಹೇಳ್ತಿರಾ ಹೇದು ಕೇಳಿದೆ.
ಎಷ್ಟಾದರೂ ಒಂದೇ ಜೀವ ಎರಡು ದೇಹ ಹೇಳ್ತ ಹಾಗೆ ಇದ್ದೋರಲ್ಲದಾ…?
‘ಇಡೀ ಅಮಾಸೆ ಕಾಲಘಟ್ಟವ ಎಂಟು ಭಾಗ ಮಾಡಿ ಅದರಲ್ಲಿ ಸುರುವಾಣ ಒಂದು ಅಂಶಕ್ಕೆ ಸಿನಿವಾಲೀ ಹೇದೂ, ನಂತ್ರಾಣ ಐದಂಶಂಗೊಕ್ಕೆ ದರ್ಶ ಹೇದೂ , ಕಡೆಯ ಎರಡಂಶಂಗೊಕ್ಕೆ ಕುಹೂ ಹೇದೂ ಹೆಸರು. ಸಿನಿವಾಲೀ ಸಮಯಲ್ಲಿ ಹೆರಿಗೆ ಆದರೆ ಸಂಪತ್ತು ನಾಶ ಆವುತ್ತು; ದರ್ಶಲ್ಲಿ ಹೆರಿಗೆ ಆದರೆ ಅಪ್ಪ, ಅಮ್ಮಂಗೆ ದಾರಿದ್ರ್ಯ ಬತ್ತು; ಕುಹೂ ಸಮಯಲ್ಲಿ ಆದರೆ ತುಂಬ ಅನರ್ಥಂಗ ಆವುತ್ತು ಹೇದು ಹಿರಿಯರು ಹೇಳಿದ್ದವು. ದೋಷಂಗ ಇದ್ದು ಹೇಳುದು ಎಷ್ಟು ಸತ್ಯವೋ ಅದಕ್ಕೆ ಪರಿಹಾರವೂ ಇದ್ದು ಹೇಳುದು ಅಷ್ಟೇ ಸತ್ಯ ! ಹಿಂದಾಣೋರು ಅದಕ್ಕೆ ಪರಿಹಾರವೂ ಸೂಚಿಸಿದ್ದವು. ಸಿನಿವಾಲೀ ಶಾಂತಿ ಅಥವಾ ದರ್ಶ ಶಾಂತಿ ಅಥವಾ ಕುಹೂ ಶಾಂತಿ ಮಾಡ್ಸೆಕ್ಕು. ಅದರೊಟ್ಟಿಂಗೆ ಗೋಪ್ರಸವ ಶಾಂತಿ ಮಾಡ್ಸಿದರೆ ಎಲ್ಲ ದೋಷಂಗಳೂ ಪರಿಹಾರ ಆಗಿ ಆಯುರಾರೋಗ್ಯ ಅಭಿವೃದ್ಧಿ ಆವುತ್ತು ಹೇದು ಪ್ರಮಾಣ ಇದ್ದು’ ಹೇದು ಎನ್ನ ಯಜಮಾನ್ರು ಹೇಳಿದವು.

ಆಸುಪತ್ರೆಗೆ ಹೋಗಿಯಪ್ಪಗ ಡಾಕುಟ್ರು ಚೆಕಪ್ ಮಾಡಿ ‘ಮಗುವಿನ ಚಲನೆ ಶುರು ಆಯ್ದು. ಸಹಜವಾಗಿಯೇ ಹೆರಿಗೆ ಅಕ್ಕು ಏನೂ ಗಾಬರಿ ಬೇಡ. ಆದರೆ…!!!!!!!!’ ಹೇದವು.
ಡಾಕುಟ್ರು ಅಷ್ಟು ಹೇದಪ್ಪಗ ಬಾವಂಗೆ ಗಾಬರಿ ಆಗಿ ‘ಎಂತ ಡಾಕ್ಟ್ರೇ ಹೇಳಿ’ ಹೇದನಡ.
‘ ಈಗ ಅಮಾವಾಸ್ಯೆ. ಹಾಂಗಾಗಿ ಹೆರಿಗೆ ಮುಂದೆ ಹಾಕೆಕ್ಕಾದರೆ ಒಂದು ಇಂಜೆಕ್ಶನ್ ಇದ್ದು. ಅದು ಕೊಟ್ಟರೆ ಹೆರಿಗೆ ಅಪ್ಪದು ಮುಂದೆ ಹೋವುತ್ತು.
ಆದರೆ ಎಷ್ಟು ಹೊತ್ತು ಹೇದು ಹೇಳುಲೆ ಎಡಿಯ. 6 ಗಂಟೆ, 12 ಗಂಟೆ, 18ಗಂಟೆ ಎಲ್ಲ ಮುಂದೆ ಹೋದ್ದು ಇದ್ದು. ಅಷ್ಟು ಹೊತ್ತೂ ಬೇನೆ ತಿನ್ನೆಕ್ಕಕ್ಕು.
ಹಾಂಗೆ ಮಾಡಿರೆ ಕೆಲವು ಸರ್ತಿ ನೋರ್ಮಲ್ ಆಗದ್ದೆ ಆಪರೇಷನ್ ಮಾಡೆಕ್ಕಾದ ಸಂದರ್ಭ ಬಂದದೂ ಇದ್ದು. ನಿರ್ಧಾರ ನಿಂಗೊಗೆ ಬಿಟ್ಟದು
‘ ಹೇದು ಡಾಕುಟ್ರು ಹೇದವಡ.
ಬಾವನೂ ಡಾಕುಟ್ರೇ ಆದ ಕಾರಣ ಸಹಜವಾಗಿ ಅಪ್ಪದರ ತಡೆ ಹಿಡುದರೆ ಅಪ್ಪ ಸಮಸ್ಯೆಗಳ ಬಗ್ಗೆ ಸರಿಯಾಗಿ ಗೊಂತಿದ್ದು .
ಅವನ ಗೊಂತಿಲಿ ಆರೋ ಹೀಂಗೆ ಒಬ್ರು ಮಾಡ್ಸಿ ಕೊನೆಗೆ ಶಿಶುವಿನ ಜೀವಕ್ಕೆ ಅಪಾಯ ಆಯ್ದಡ. ಶಿಶು ಮಾಂತ್ರ ಅಲ್ಲ ಅಮ್ಮನ ಜೀವಕ್ಕೂ ಅಪಾಯವೇ ಅಲ್ಲದಾ…?
ಹಾಂಗಾಗಿ ‘ ಯೋಚನೆ ಮಾಡ್ತ ಪ್ರಶ್ನೆಯೇ ಇಲ್ಲೆ ಸಹಜವಾಗಿ ಹೆರಿಗೆ ಆಗಲಿ . ಬೇರೆ ಎಂತ ಮಾಡ್ಸು ಬೇಡ’ ಹೇದನಡ. 6.30 ಅಪ್ಪಗ ಶಾರದೆಗೆ ಸುಲಭಲ್ಲಿ(?) ಸಹಜವಾಗಿ ಹೆರಿಗೆ ಆತು.

ಕದ್ದು ತಂದ ಪಟ

ಮಾಣಿ ಬಾಬೆ ಹುಟ್ಟಿದ°. ಅಮ್ಮ , ಮಗ ಆರೋಗ್ಯಲ್ಲಿ ಇದ್ದವು.
ಎನ್ನ ಜೀವದ ಗೆಳತಿಗೆ ಮಗ ಹುಟ್ಟಿದ ಸಂಭ್ರಮಲ್ಲಿ ಮರದಿನವೇ ಆಸ್ಪತ್ರೆಗೆ ಹೋದೆಯ°. ನೋಡಿಕ್ಕಿ ಬಂದಾತು.
ಏನೆಲ್ಲ ಪರಿಹಾರಂಗ ಆಯೆಕ್ಕು ಹೇದು ನೋಡಿ ಅದರೆಲ್ಲ ಸಮಯಕ್ಕೆ ಸರಿಯಾಗಿ ಮಾಡ್ಸುದು ಹೇದು ನಿಘಂಟೂ ಆತು. ಆದರೂ ಎನ್ನ ಮನಸ್ಸಿನೊಳ ಒಂದು ಹುಳು ಕೆರೆತ್ತಾ ಇದ್ದತ್ತು.

ಮನ್ನೆ ಒಂದು ದಿನ ಗುರುಗಳ ಬೈಲು ‘ಹರೇರಾಮ’ ನೋಡಿದೆ. ಕುತೂಹಲ ಹೆಚ್ಚಾತು. ಓದಿದೆ…… ಓದುಗ ಮನಸ್ಸಿನ ಚಿಂತೆ ಕಡಮ್ಮೆ ಆತು. ಹಾಂಗೇ ನೋಡ್ಯೊಂಡು ಇಪ್ಪಗ ಆಗಸ್ಟ್ 17 ಕ್ಕೆ ಗುರುಗ ಮಾಡಿದ ಪ್ರವಚನ ಕಂಡತ್ತು .
ಆ ದಿನವೇ ಅಲ್ಲದಾ ಎನ್ನ ಶಾರದೆಗೆ ಮಾಣಿ ಹುಟ್ಟಿದ್ದು. ಆ ದಿನದ ಬಗ್ಗೆ ಗುರುಗ ಎಂತ ಹೇಳಿದ್ದವು ಹೇದು ತಿಳ್ಕೊಂಬ ಕುತೂಹಲ ಹೆಚ್ಚಾತು.
ಪ್ರವಚನ ಕೇಳಿದೆ. ರಾಮ ಸ್ಮರಣೆ ಮಾಡಿ ಸುರುವಾದ ನುಡಿ ಮುತ್ತುಗ ‘ಇಂದು ಅಮಾವಾಸ್ಯೆಯೂ, ಸಂಕ್ರಮಣವೂ. ಇಂದು ಯಾವುದೇ ಶುಭ ಕಾರ್ಯಂಗಳ ಮಾಡ್ತವಿಲ್ಲೆ. ಹಾಂಗೇಳಿ ಇಂದು ಅಶುಭ ಅಲ್ಲ.
ತಮಿಳುನಾಡಿನವಕ್ಕೆ ಈ ದಿನ ತುಂಬ ಒಳ್ಳೆ ದಿನ. ಕೇರಳಲ್ಲೂ ಈ ದಿನ ಕಳುದಪ್ಪಗ ಹೊಸ ವರ್ಷದ ಆರಂಭ.
ಇಂದು ಪರ್ವ ಕಾಲ. ಬೇರೆ ಯಾವ ಕೆಲಸವನ್ನೂ ಮಾಡದ್ದೆ ದೇವರ ಧ್ಯಾನ ಮಾಡೆಕ್ಕಾದ ಸಮಯ. ಪ್ರಾಪಂಚಿಕ ವ್ಯವಹಾರಂಗಳ ಬಿಟ್ಟು ಅಲೌಕಿಕ ವಿಚಾರಂಗಳ ಚಿಂತನೆ ಮಾಡೆಕ್ಕಾದ ದಿನ.
ಅಮಾವಾಸ್ಯೆ ಹೇದರೆ ಕತ್ತಲು. ಹೆರ ಬೆಳಕಿಲ್ಲದ್ದಪ್ಪಗ ಒಳ ಬೆಳಕಿನ ಹುಡುಕೆಕ್ಕು. ಜ್ಞಾನದ ದೀಪ ಹಚ್ಚೆಕ್ಕು, ಧ್ಯಾನದ ತನ್ಮಯತೆಯ ದೀಪ ಹಚ್ಚೆಕ್ಕು.
ಅಮಾವಾಸ್ಯೆ ಹೇದರೆ ಸೂರ್ಯನೂ ಚಂದ್ರನೂ ಹತ್ತರೆ ಬಪ್ಪ ದಿನ , ಒಂದೇ ಗೆರೆಲಿ ನಿಂಬ ದಿನ. ಅದರ ಅರ್ಥ ಮನಸ್ಸೂ, ಅತ್ಮವೂ ಹತ್ತರೆ , ಒಂದೇ ರೇಖೆಲಿ ಇರೆಕ್ಕು ಹೇದು.
ಸಂಕ್ರಮಣ ಹೇದರೆ ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಹೋವುತ್ತ ದಿನ . ಇಂದು ಸೂರ್ಯ ಕರ್ಕ ರಾಶಿಂದ ಸಿಂಹ ರಾಶಿಗೆ ಹೋವುತ್ತ°.
ಸೂರ್ಯನೇ ಬದಲಾವಣೆ ಪಡೆತ್ತ° ಹೇದ ಮೇಲೆ ನಾವೂ ಬದಲಾಯೆಕ್ಕು. ಬದುಕುವ ರೀತಿ ಬದಲಾಯೆಕ್ಕು, ಮನಸ್ಸು ಬದಲಾಯೆಕ್ಕು. ಬಿಡುಗಡೆಗೆ ಪ್ರಯತ್ನ ಪಡೆಕ್ಕು.
ಇಂದು ಕತ್ತಲೆಯ ಪರಮಾವಧಿ. ನಾಳೆಂದ ವೃದ್ಧಿ ಹೇಳ್ತ ಸೂಚನೆಯೇ ಅಮಾವಾಸ್ಯೆ ಅಲ್ಲದಾ…. ಕತ್ತಲೆಂದ ಮುಕ್ತಿ ; ಸಂಕಟಂದ ಮುಕ್ತಿ.
ಹುಣ್ಣಮೆ ಹೇದರೆ ಬೇಜಾರ ಮಾಡೆಕ್ಕು. ಎಂತಗೆ ಹೇದರೆ ಮರದಿನಂದ ಕತ್ತಲೆ ವೃದ್ಧಿ ಆವುತ್ತು.
ಈ ವರ್ಷ ಅಧಿಕ ಮಾಸ ಇಪ್ಪ ಕಾರಣ ಎಲ್ಲದರಲ್ಲೂ ಆಧಿಕ್ಯವೇ ಕಾಣುತ್ತು.
ಹಾಂಗಾಗಿ ಅಮಾವಾಸ್ಯೆ ಹೇದು ನಿರಾಶೆ ಬೇಡ . ‘
ಗುರುಗಳ ಬಾಯಿಂದ ಹರುದು ಬಂದ ಅಮೃತಧಾರೆ ಎನ್ನ ಕಿವಿಗೆ ಬಿದ್ದಪ್ಪಗ ಎನ್ನ ಮನಸ್ಸಿಲಿ ಇದ್ದ ಎಲ್ಲ ಅಜ್ಞಾನವೂ ದೂರ ಆತು.
ಗುರುಗ ಹೇಳಿದ ಮಾತಿಂಗೆ ಹೋಲಿಸಿ ನೋಡಿದೆ. ಅಮ್ಮನ ಹೊಟ್ಟೆಯ ಒಳಂದ ಶಿಶು ಹೆರಾಣ ಬೆಳಕಿನ ನೋಡ್ಳೆ ಬಂದದಲ್ಲದಾ..? ಅಲ್ಲದ್ದೆ ಆ ಶಿಶುವಿಲೂ ಒಂದು ಬದಲಾವಣೆ ಕಾಂಬ ಹಂತ. ಅಪ್ಪದೆಲ್ಲ ಒಳ್ಳೆದಕ್ಕೆ ಹೇದು ಗ್ರೇಶಿದರೆ ಮನಸ್ಸಿಂಗೆ ಸಮಾಧಾನ ಸಿಕ್ಕುತ್ತು ಅಲ್ಲದಾ….?

ಸಹಜವಾಗಿ ಅಪ್ಪ ಹೆರಿಗೆಯ ನಿಲ್ಲಿಸಿದರೆ ಬ್ರಹ್ಮ ಬರದ ಹಣೆ ಬರಹವನ್ನೇ ಬದಲಾಯ್ಸುಲೆ ಎಡಿಗೋ…?
ಭವಿಷ್ಯಲ್ಲಿ ಅಪ್ಪದರ ತಪ್ಪುಸುಲೆ ಎಡಿಗೋ…?
ಒಂದು ವೇಳೆ ಹೆರಿಗೆಯ ಸಮಯವನ್ನೇ ಮುಂದೆ ಹಾಕಿರೆ ಬೇರೆ ಎಂತೆಲ್ಲ ಅನಾಹುತಂಗ ಅಕ್ಕು ಹೇದು ಮದಲೇ ಹೇಳುಲೆ ಎಡಿಗೋ…?
ಎಷ್ಟೋ ಜೆನ ಸಮಯ ನೋಡಿ ಹೆರಿಗೆ ಮಾಡ್ಸುತ್ತವು . ಸಹಜವಾಗಿ ಅಪ್ಪದರ ಕೃತಕವಾಗಿ ಮಾಡ್ಸುತ್ತವು. ಹುಟ್ಟಿದ ಸಮಯದ ಮೇಲೆ ಶಿಶುವಿನ ಜಾತಕ ನಿರ್ಣಯ ಅಪ್ಪದು .
ಹುಟ್ಟುವ ಸಮಯವ ನಾವು ನಿರ್ಣಯ ಮಾಡ್ತರೆ ಆ ಶಿಶುವಿನ ಹಣೆಬರಹ ಬರವವ್ವು ಆರು………?
ಅಂಬಗ ಪರಿಹಾರ ಹೋಮ ಮಾಡ್ಸಿದರೆ ಅಪ್ಪದರ ತಪ್ಪುಸುಲೆ ಎಡಿಗೋ ಹೇದು ಕೆಲವು ಜನರ ಚೋದ್ಯವೂ ಇಕ್ಕು. ಕಾರಣ ಇಲ್ಲದ್ದೆ ಹೆರಿಯವ್ವು ಎಂತದೂ ಹೇಳವು. ಅವರ ಅನುಭವದ ಮಾತುಗಳೇ ನವಗೆ ದಾರಿದೀಪ ಅಲ್ಲದಾ…? ಪರಿಹಾರ ಮಾಡ್ಸಿದರೆ ದೊಡ್ಡ ಅಪಾಯ ಬಪ್ಪದು ಸಣ್ಣದರಲ್ಲಿ ಹೋಕು.

ಅಂಬಗ ಬಪ್ಪದು ತಪ್ಪುಗೋ…..? ನಿಂಗ ಎಂತ ಹೇಳ್ತಿ…..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಅನುಪಮಾ, ನಿನ್ನ ಲೇಖನ “ಬಪ್ಪದು ತಪ್ಪುಗೊ…….?”ಓದಿದೆ. ಒ೦ದು ಸನ್ನಿವೇಶವ ತೆಕ್ಕೊ೦ಡು ಅದರ ಅರ್ಥವತ್ತಾಗಿ ಬರದ ರೀತಿ ಚೆ೦ದಕೆ ಮೂಡಿ ಬಯಿ೦ದು. ಸಾಮನ್ಯವಾಗಿ ಜೆನ ಮಾನಸಲ್ಲಿ ಇ೦ಥ ಪರಿಸ್ಥಿತಿಯ ಹೇ೦ಗೆ ನಿಭಾಯಿಸುವದು ಹೇದು ಬೇಜಾರು ಮಾಡ್ಯೊ೦ಬವೇ ಹೆಚ್ಚು. ವಿದ್ಯಾವ೦ತ ವರ್ಗದವು ಸಮೇತ ಸಮಾಜಲ್ಲಿ ಪಾಚಿಗಟ್ಟಿದ ಇ೦ಥ ನ೦ಬಿಕಗೆ ಬಲಿಪಶುವಾದ ಉದಾಹರಣಗೊ ಇದ್ದು. ಅ೦ಥವಕ್ಕೆಲ್ಲ ನಿನ್ನ ಈ ಲೇಖನ ಒಳ್ಳೆಯ ಹಾದಿ ಹಿಡುಶುವಾ೦ಗಿದ್ದು. ನೀನು ಬರದ ಶೈಲಿ ಹಾ೦ಗೂ ನಿರೂಪಣಾ ವಿಧಾನ ಬಾರೀ ಲಾಯಕಾಗಿ ಮೂಡಿ ಬಯಿ೦ದು. ಬಿಡದ್ದೆ ಮು೦ದುವರ್ಸು. ” ಬೆಳೆಯ ಸಿರಿ ಮೊಳಕೆಯಲ್ಲಿ. ” ಹೇಳುವದು ಅನುಭವದ ಸತ್ಯ. ನಿನ್ನ ಸಾಧನಗೆ ಒಳ್ಳೆ ಭವಿಷ್ಯ ಇದ್ದು ಹೇಳ್ವದ೦ತೂ ನಿಜ. wish you All the Best.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಬೆಳೆಯ ಸಿರಿ ಮೊಳಕೆಯಲ್ಲಿ ಹೇದು ಇದ್ದರೂ ಅದಕ್ಕೆ ಸರಿಯಾಗಿ ನೀರು , ಗೊಬ್ಬರ ಹಾಕುಲೆ ಜೆನ ಇಲ್ಲದ್ದರೆ ಸೆಸಿ ಬೆಳಗೋ…..?

  ನಿಂಗಳ ಮಾರ್ಗದರ್ಶನಲ್ಲಿ ಆನು ಬೆಳೆತ್ತಾ ಇದ್ದೆ. ಎನಗೆ ಸಲಹೆ ಕೊಟ್ಟು ಎನ್ನ ಬರವಣಿಗೆಯ ಬೆಳೆಶುದು ನಿಂಗಳೇ ಅಲ್ಲದಾ…….

  ಧನ್ಯ್ವಾದಂಗೊ…

  [Reply]

  ಕಾಂತಣ್ಣ

  ಕಾಂತಣ್ಣ Reply:

  ಈ ಲೇಖನ ಈ ಸಾರಿ ಹವ್ಯಕ ಪತ್ರಿಕೆಲಿ ಬಂಯ್ದು ಅಲ್ಲದ ?

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  [ಅಂಬಗ ಬಪ್ಪದು ತಪ್ಪುಗೋ…..? ನಿಂಗ ಎಂತ ಹೇಳ್ತಿ…..] – ಅಕ್ಕೋ… ಹೇಳ್ತದೆಂತರ.. ?! ಶುದ್ದಿ ಕುತೂಹಲವೂ ಸುಂದರವೂ ಲಾಯಕವೂ ಆಯ್ದು ಹೇಳಿ ಮದಾಲು ಹೇಳ್ತು. ಆ ದಪ್ಪಕೆ ಬರದ್ದು ವಿಶೇಷವೂ ಸ್ವಾರಸ್ಯವೂ ಕಂಡತ್ತು.

  ಮತ್ತೆ…. ಬಪ್ಪದು ತಪ್ಪುಗೋ…. – ಎಲ್ಲವೂ ಸಹಜವಾಗಿ ಇದ್ದರೇ ಚಂದ. ಅದರ ಬದಲ್ಸುಲೆ ಹೆರಡುಸ್ಸು ಬರೇ ಭ್ರಮೆ. ಆರೋ ಹೇಳಿದ್ದವಡಾ.. “ಯಾವ್ಯಾವ ಕಾಲಕ್ಕೆ ಯಾವ್ಯಾವುದು ಆಯೇಕೋ ಅದು ಆಗಿಯೇ ಆವ್ತು”. ಆದರೂ ಮಾನುಷ ಪ್ರಕೃತಿಗೆ ಜಾಗ್ರತೆ ಮಾಡಿಕೊಂಡಿರೇಕ್ಕಾದ್ದು ಸಹಜ ಧರ್ಮ, ಅದರಿಂದ ಮೇಗೆ ತಡವಲೆ ಹಾತೊರವದು ವ್ಯರ್ಥ ಪ್ರಯತ್ನ. ಅರ್ಟಿಫಿಶ್ಯಲ್ ದಣಿಯ ದಿನಕ್ಕೆ ಉಳಿಯನ್ನೇ.

  ಶುದ್ದಿಗೊಂದು ಮೆಚ್ಚುಗೆ ಹೇಳುತ್ತು – ‘ಚೆನ್ನೈವಾಣಿ’.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಚೆನ್ನೈ ಬಾವಂಗೆ ಧನ್ಯವಾದಂಗೊ…

  [Reply]

  VN:F [1.9.22_1171]
  Rating: 0 (from 0 votes)
 3. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಯಾದೃಶೀ ಭಾವನಾ ಅಸ್ತಿ ಸಿದ್ಧಿರ್ಭವತಿ ತಾದೃಶೀ…ಅನುಪಮಕ್ಕ ಲೇಖನ ಮನಮುಟ್ಟುವ ಹಾಂಗೆ ಬರದ್ದಿ..ಒಂದು ಒಪ್ಪ..

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ….ಅಣ್ಣಾ..

  [Reply]

  VN:F [1.9.22_1171]
  Rating: 0 (from 0 votes)
 4. ದೊಡ್ಮನೆ ಭಾವ

  ನ೦ಗಳ ಯೇವುದೇ ಸ೦ಪ್ರದಾಯ/ಪದ್ಧತಿ/ನ೦ಬಿಕೆ ಅವರವರಿಗೆ ಬಿಟ್ಟಿದ್ದು. ನ೦ಗಳ ಧರ್ಮ ಅಷ್ಟು ವಿಶಾಲವಾದ್ದು, ಎಲ್ಲರ ಭಾವನೆಗಳೀಗೂ ಇಲ್ಲಿ ಅವಕಾಶ ಇದ್ದು. ಆದ್ರೂ ಒ೦ದೇ ತರದ ಸ೦ಪ್ರದಾಯ ಪಾಲನೆ ರಾಶಿ ಜೆನ ಎ೦ತಕೆ ಮಾಡ್ತ ಅ೦ದ್ರೆ ಹೆಚ್ಚಿನ ಜೆನಕ್ಕೆ ಅದ್ರಿ೦ದ ಒಳ್ಳೇದಾಯ್ದು ಅದಕ್ಕೇ!
  ಈಗಿನವ೦ತೂ ತಮಗೆ ಉಪಯೋಗ ಇಲ್ಲದೇ ಎ೦ಥದನ್ನೂ ಮಾಡ್ತ್ವಿಲ್ಲೆ. ಮುಖ್ಯವಾಗಿ ನ೦ಗಳು ಎ೦ಥದ್ನ ನ೦ಬಿಕೊತ್ತವೋ ಅದು ಆಳವಾಗಿ ಮನಸ್ಸಿನ ಯೇವುದೋ ಮೂಲೆಲೆ ರೆಜಿಸ್ಟರ್ ಆವುತ್ತು. ನಮ್ಮ ಮು೦ದಿನ ಗುರಿಗಳಿಗೆ ಅದೇ ಮೂಲ ಬೀಜ ಆವುತ್ತು.

  ಈಗ ರಾಹುಕಾಲ/ಗುಳಿಕಾಲ ತೆಕ್ಕ೦ಡ್ರೆ, ಇವತ್ತಿನ ಜೆನ ಎಷ್ಟು ಘಳಿಗೆ ನೋಡ್ತೋ? ಹೊತ್ತು ನೋಡ್ದಲೆ ಹೊ೦ಟಾಗ ಅವರ ಕಾರ್ಯ ಯಶಸ್ವಿ ಆಗ್ತಿಲ್ಯಾ?….ಮು೦ದಿನ ಕೆಲಸ ಯಶ ಆದ್ರೆ ಒಳ್ಳೇ ಘಳಿಗೇಲಿ ಶುರು ಮಾಡಿದ್ದವು! ಕೆಟ್ಟದ್ದಾದರೆ ಆಘಳಿಗೆಯನ್ನ, ದೇವ್ರನ್ನ ಶಪಿಸೂದು! ಇದು ಎಷ್ಟು ಸರಿ? ಹ೦ಗಾಗಿ ನ೦ಗಳು ಯಾವ್ದನ್ನೂ ತಪ್ಪೂ ಅ೦ತಾಗಲಿ ಅಥ್ವಾ ಇದೇಸರಿ ಅ೦ತಾಗ್ಲೀ ಹೇಳುಕ್ಕೆ ಆವುತ್ತಿಲ್ಲೆ.
  ತುರ್ತು ಪರಿಸ್ಥಿಯಲ್ಲ೦ತೂ ಸ೦ಧರ್ಭೋಚಿತವಾಗಿ ನೆಡೆಕ್ಕೊ ಅ೦ತ ನಮ್ಮ ಧರ್ಮವೂ ಹೇಳುತ್ತು. ನ೦ಗಳ ಧರ್ಮ/ಪದ್ಧತಿ ವಿಚಾರನೆಲ್ಲಾ ಎಷ್ಟು ಜಾಣತನದಿ೦ದ ಮಾಡಿದ್ದವು ಅ೦ದ್ರೆ, ಅದರಿ೦ದ ಯಾರಿಗೂ ನೋವಾಗ್ತಿಲ್ಲೆ! ಒ೦ದುಕಡೆ ’ಹೀ೦ಗೇ ಮಾಡೆಕ್ಕು’ ಅ೦ತ ಹೇಳಿ ಕೊನೆಗೊ೦ಡು ಕಡೆ ಅಕಸ್ಮಾತ್ ಮಾಡೆಕ್ಕಾಗದಿದ್ರೆ …’ಪರಿಹಾರವಾಗಿ’ ಹೀ೦ಗೆ ಮಾಡ್ಳೆಕ್ಕು ಅ೦ತ ಹೇಳ್ತ.
  ಹಾ೦ಗಿದ್ದೂ ನ೦ಗಳ ಯಾವುದೇ ಸ೦ಪ್ರದಾಯ ಸೂಕ್ಷ್ಮ ವೈಜ್ಞಾನಿಕ ತಳಹದಿಯಿ೦ದ್ಲೇ ಮಾಡಿದ್ದವು. ಇದರ ಮೂಲ ಗುರಿ ಜೆನಕ್ಕೆ ಒಳ್ಳೇದಾಗಲಿ ಅ೦ತ ಅಷ್ಟೇ.

  ಅನುಪಮಕ್ಕ, ಎಷ್ಟು ಸೂಕ್ಶ್ಮ ವಿಚಾರವನ್ನ ಎಷ್ಟು ಸುದರವಾಗಿ ಲೇಖನ ಮ೦ಡಿಸಿದ್ದೆ, ಬರವಣಿಗೇಲಿ ರಾಶಿ ಹಿಡಿತ ಇದ್ದು, ಆಗಾಗ್ಗೆ ಇ೦ಥವು ಬರ್ತಾ ಇರಳಿ…ಧನ್ಯವಾದ.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಅಣ್ಣಾ… ನಿಂಗಳ ಒಪ್ಪಕ್ಕೆ ಒಂದು ಒಪ್ಪ… ಸರಿಯಾಗಿ ಹೇಳಿದ್ದಿ.

  [Reply]

  VN:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ಭಾರೀ ಲಾಯಿಕದ ವಿಷಯವ ತುಂಬಾ ಚಂದಕ್ಕೆ ಬರದ್ದೆ ಅನುಪಮಾ…
  ಸುರುವಿಂಗೆ ಮನಸ್ಸಿಂಗೆ ಬಂದ ಕಳವಳ, ಗುರುಗಳ ಪ್ರವಚನವ ಓದಿಯಪ್ಪಗ ಸಮಾಧಾನ ಆತು.
  ತುಂಬಾ ಲಾಯಿಕಕ್ಕೆ ಹೇಳಿದ್ದವು ಗುರುಗೊ.
  ಕಾರಣ ಇಲ್ಲದ್ದೆ ಹೆರಿಯೋವು ಎಂತದೂ ಹೇಳವು ಹೇಳುದು ತುಂಬಾ ಸತ್ಯ.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಸುಮನಕ್ಕಾ…. ಧನ್ಯವಾದಂಗೊ….

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಪ್ಪದರ ತಪ್ಪುಸೆಲೆಡಿಯ. ಧೈರ್ಯ ಇದ್ರೆ ಎಲ್ಲವೂ ಸರಿಯಾವ್ತು. ಒಳ್ಳೆ ಮನಸ್ಸು ಮುಖ್ಯ ಅಷ್ಟೆ. ಅನು ಬರದ ಶೈಲಿ ಲಾಯಕಿತ್ತು.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ…

  [Reply]

  VN:F [1.9.22_1171]
  Rating: 0 (from 0 votes)
 7. ಮಾನೀರ್ ಮಾಣಿ
  ಮಾನೀರ್ ಮಾಣಿ

  ಅನುಪಮಕ್ಕಾ ಮನಮುಟ್ಟುವ ಬರಹ. ಕೆಲವೊ೦ದು ಹ೦ತದಲ್ಲಿ ‘ಯೆ೦ತಾ ಆತಪಾ ಮು೦ದೆ’ ಹೇಳಿ ಭಾರೀ ಕುತೂಹಲದಿ೦ದ ಓದಿಸಿಕೊ೦ಡು ಹೋಯ್ದು ಶುದ್ದಿ. ಆ ಸಮಯದಲ್ಲಿ ನಿಮಗಾದ ತಳಮಳ, ಅದಕ್ಕೆ ನಿ೦ಗವೇ ಕ೦ಡುಕೊ೦ಡ ಪರಿಹಾರ ಎಲ್ಲವೂ ರಾಶೀ ಚೊಲೋ ಬ೦ಜು.
  ಧನಾತ್ಮಕ ವಿಚಾರಗಳು ಸದಾ ನಮ್ಮೊಡನಿರಲಿ. ನಿಮ್ಮ ಶುದ್ದಿಗೋ ಬತ್ತಾ ಇರಲಿ.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ… ಆಗುವುದೆಲ್ಲ ಒಳ್ಳೆಯದಕ್ಕೆ

  [Reply]

  VN:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕುತೂಹಲಲ್ಲಿ ಓದಿಸಿಗೊಂಡು ಹೋತು.
  ಮನಸ್ಸಿಲ್ಲಿ ಹೊಯ್ದಾಟ ಇಪ್ಪಗ ಗುರು ಹೆರಿಯರ ಮಾತುಗೊ ನವಗೆ ಧೈರ್ಯ ತಂದು ಕೊಡ್ತು ಮಾತ್ರ ಅಲ್ಲದ್ದೆ ಆತ್ಮ ವಿಶ್ವಾಸ ಹೆಚ್ಚು ಮಾಡುತ್ತು.
  ನಿರೂಪಣೆ ಲಾಯಿಕ ಆಯಿದು

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ…ಶರ್ಮಪ್ಪಚ್ಚಿ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಸರ್ಪಮಲೆ ಮಾವ°ಶ್ರೀಅಕ್ಕ°ಚುಬ್ಬಣ್ಣಗೋಪಾಲಣ್ಣಪುತ್ತೂರುಬಾವನೀರ್ಕಜೆ ಮಹೇಶಅನುಶ್ರೀ ಬಂಡಾಡಿಬೊಳುಂಬು ಮಾವ°ದೊಡ್ಡಭಾವಅನಿತಾ ನರೇಶ್, ಮಂಚಿಮಾಲಕ್ಕ°ದೊಡ್ಡಮಾವ°ಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಪವನಜಮಾವಶಾಂತತ್ತೆvreddhiಪುಣಚ ಡಾಕ್ಟ್ರುಕಳಾಯಿ ಗೀತತ್ತೆಶೇಡಿಗುಮ್ಮೆ ಪುಳ್ಳಿಸಂಪಾದಕ°ಕೆದೂರು ಡಾಕ್ಟ್ರುಬಾವ°ನೆಗೆಗಾರ°ಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ