ಬೇಳ ಇಂಗ್ರೋಜಿಲಿ ಬೆಡಿಯ ಗೌಜಿ

February 10, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಳ ಇಂಗ್ರೋಜಿಲಿ ಬೆಡಿಯ ಗೌಜಿ!

ಅವು ಅದರನ್ನೂ ಅಚ್ಚು ತೆಗದ್ದವು!

ಬೇಳ ಇಂಗ್ರೋಜಿ ಹೇದರೆ ಕೆಲವು ಜೆನಂಗೊಕ್ಕೆ ಗೊಂತಾಗ, ಬೇಳ ಶೊಕಮಾತಾ ದೇವಾಲಯ ಹೇಳೆಕ್ಕಕ್ಕು.
೧೮೮೦ರ ಆಸುಪಾಸಿಲ್ಲಿ ಅವರ ಹಿರಿಯ ಧಾರ್ಮಿಕ ಅಧಿಕಾರಿಗೊ ಮೊದಾಲು ಸೀತಾಂಗೋಳಿ ಹತ್ರಾಣ ಕುದ್ರೆಪ್ಪಾಡಿಲಿ ಸಣ್ಣಕೆ ಇಂಗ್ರೋಜಿ ಹೇಳಿ ಸುರುಮಾಡಿದ್ಸಡ. ಈಗ ಅಲ್ಲಿ ಎಂತ ಇಲ್ಲೆ.  ೧೮೯೩ ಅಪ್ಪಗ ಆ ಇಂಗ್ರೋಜಿಯ ಅಲ್ಲಿಂದ ಬೇಳದ ಮಾರ್ಗದ ಕರೆಯಾಣ ಈ ಜಾಗೆಗೆ ತಂದ್ಸಡ. ನೂರಿಪ್ಪತ್ತೈದು ವರ್ಷ ಕಳುದ್ಸರ ಗೌಜಿಲಿ ಆಚರಣೆ ಮಾಡಿತ್ತಿದ್ದವು. ಈಗ ಎಲ್ಲ ಹೊಸತ್ತಾಯಿದು. ನಮ್ಮ ಕೆದೂರು ಡಾಕ್ಟ್ರು ಹೇಳುವ ಹಾಂಗೆ ಮೊದಾಲು ಅವ್ವು ಮಾಡಿದ್ಸು ಒಂದು ಶಾಲೆ, ಇನ್ನೊಂದು ಆಸ್ಪತ್ರೆ. ಅವು ಅಲ್ಲಿ ಕೊಡ್ಸು ಹೋಮಿಯೋಪತಿ ಮದ್ದು ಆದಕಾರಣ ದೂರದ ಊರಿಂದ ನಮ್ಮೋರೂ ಅಲ್ಲಿಗೆ ಹೋಕು. ಊರಿಲ್ಲಿ ಅಗತ್ಯ ಇಪ್ಪ ಕೆಲಸ ನೋಡಿಂಡು ಮೊದಾಲು ಸುರು ಮಾಡಿದ್ದವು. ಮೊನ್ನೆ ಆದಿತ್ಯವಾರ ಸೀತಾಂಗೋಳಿಂದ ಬೇಳಕ್ಕೆ ವರೆಗೆ ಹೊರೆಕಾಣಿಕೆ ಮೆರವಣಿಗೆ ಮಾಡಿದ್ದವು.
ಜಾತ್ರೆ ನಿನ್ನೆ ಸುರು ಆದ್ಸು, ನಾಳೆ ಮುಗಿಸ್ಸು.

Bela ingroji
ಶೋಕ ಮಾತಾ ಇಂಗ್ರೋಜಿ - ಬೇಳ

ನಮ್ಮ ಕುಂಬ್ಳೆ ಬೆಡಿ ವಿಶೇಷ ಇಪ್ಪದು ಅದರ ಹೊಟ್ಟುಸುತ್ತ ಕ್ರಮಲ್ಲಿ ಹೇಳಿ ನಿಂಗೊಗೆಲ್ಲ ಗೊಂತಿಪ್ಪ ವಿಷಯವೇ.

ಅಲ್ಲದ್ರೆ ನಮ್ಮ ತಲೆಂಗಳ ಭಾವ ಹೇಳ್ತ ಹಾಂಗೆ ಪಾಲಕ್ಕುನ್ನು ಬೆಡಿ(ನಾಳ್ದು ೨೦ಕ್ಕೆ) ಯೇ ಗೌಜಿ ಅಕ್ಕು. ರೂಪಾಯಿ ಲೆಕ್ಕಲ್ಲಿ ಹೇಳ್ಸಾದರೆ ಪಾಲಕ್ಕುನ್ನು ಭರಣಿ ಉತ್ಸವಲ್ಲಿ ಕುಂಬ್ಳೆಂದ ಹೆಚ್ಚು ಕ್ರಯದ ಬೆಡಿ ಹೊಟ್ಟುಸುತ್ತವಡ. ಅಲ್ಲೇ ಕರೆಲಿಪ್ಪ ರೈಲು ಮಾರ್ಗಲ್ಲಿ ಕೂದೊಂಡು ಗೌಜಿ ನೋಡಿಂಡು ಇದ್ದ ಮನುಷ್ಯ ಕಳುದ ವರ್ಷ ರೈಲು ಬಂದ್ಸೇ ಗೊಂತಾಗದ್ದೆ ಅಡೀಂಗೆ ಬಿದ್ದು ಸತ್ತು ಹೋದ್ಸು ಪೇಪರಿಲ್ಲಿ ಎಲ್ಲ ಬಂದ ವಿಷಯ. ಅಲ್ಲಿ ಬೆಡಿ ಗೌಜಿ ಇರ್ತು, ಆದರೆ ಹೊಟ್ಟುಸ್ಸಕ್ಕೊಂದು ಕ್ರಮ ಇಲ್ಲೆ ಹೇಳಿ ಆನು ಯಾವಾಗಳೂ ಹೇಳ್ತ ಕ್ರಮ ಇದ್ದು.
ಕುಂಬ್ಳೆ ಬೆಡಿ ಆದರೆ ಹಾಂಗಲ್ಲ, ದೇವರು ಬಂದು ಕಟ್ಟೆಲಿ ಕೂದ ಮತ್ತೆ ಬೆಡಿ ಮಮ್ಮದೆ ಬಂದು ಅಲ್ಲಿಂದ ಕಿಚ್ಚು ತೆಕ್ಕೊಂಡು ಹೋಕು. ಮತ್ತೆ ಒಂದು ದೊಡ್ಡ ಬೆಡಿ, ಅದು ಒರಗಿದ ಮಕ್ಕಳ ಎಲ್ಲ ಏಳ್ಸಲೆ! ಸಣ್ಣ ಸಣ್ಣ ರೋಕೇಟು, ಬೆಡಿಗಳ ಎಲ್ಲ ಹೊಟ್ಟುಸಿಕ್ಕಿ, ಬಾನಲ್ಲಿ ಕೊಣಿತ್ತ ಬೆಡಿಗಳ ಎಲ್ಲ ಬಿಟ್ಟಿಕ್ಕಿ ಅಖೇರಿಗೆ ಕಂಬೆಡಿ! ಕಂಬೆಡಿ ಹೊಟ್ಟಿತ್ತು ಹೇಳಿ ಆದರೆ, ಮತ್ತಾಣ ತಿರುಗುಸಿ ಕಟ್ಟಿದ ದುರುಸು ನೋಡ್ಳೆ ಆರೂ ನಿಲ್ಲವು. ಬೆಡಿ ಮುಗಾತು ಹೇಳ್ತ ಕ್ರಮವೇ ಇಲ್ಲೆ, ಜನಂಗೊ ಪೂರಾ ಅಷ್ಟೊತ್ತಿಂಗೆ ಅವರವರ ಮನಗೆ ಎತ್ತಿಕ್ಕುಗು! ಅರ್ಜೆಂಟಿನವು ಕೆಲವು ಜನ ಕಂಬೆಡಿ ಹೊಟ್ಲೆ ಸುರುವಾದಪ್ಪಗ ಬೈಕ್ಕು ತೊಳುದು ಸ್ಟಾರ್ಟು ಮಾಡ್ಳೆ ಸುರು ಮಾಡುಗು, ಅದಕ್ಕೆ ಹಿಡುದ ಚಳಿ ಬಿಡುಸಲೆ! ಅಷ್ಟೂ ನಿಘಂಟು. ಹಾಂಗಾಗಿ ಕುಂಬ್ಳೆ ಬೆಡಿಗೆ ಒಂದು ಲಯ ಇದ್ದು, ಪಾಲಕ್ಕುನ್ನು ಬೆಡಿಯ ಹಾಂಗೆ ಏಕತಾನತೆ ಇಲ್ಲೆ.

ಶೋಕ ಮಾತಾ ಇಂಗ್ರೋಜಿ - ಬೇಳ
ಶೋಕ ಮಾತಾ ಇಂಗ್ರೋಜಯ ಬೆಡಿ ನೋಡ್ಳೆ ಜೆನಂಗೊ ನಿಂದದು

ಪೆರ್ಲದ ಹತ್ರಾಣ ಇಡಿಯಡ್ಕಲ್ಲಿ ಜಾತ್ರೆ, ಒತ್ತೆಕೋಲ ಹೇಳಿಂಡು ಮೊನ್ನೆ ಫೆಬ್ರವರಿ ನಾಲ್ಕಕ್ಕೆ ಹೋಗಿತ್ತಿದ್ದೆಯೊ°. ಮೇಲೇರಿಗೆ ಕಿಚ್ಚು ಕೊಟ್ಟು, ಬೆಳ್ಚಪ್ಪಾಡಕ್ಕೊ ಎಲ್ಲ ದರುಸಿ, ವಿಷ್ಣುಮೂರ್ತಿಯ ಕುಳಿಚ್ಚಾಟ್ಟ ಕಳುದು ಇರುಳು ಬಪ್ಪಗ ಎರಡೂವರೆ ಘಂಟೆ ಆಯಿದು. ಅಲ್ಲಿಯೂ ಬೆಡಿ ಇದ್ದತ್ತು, ನೆಂಪಪ್ಪಗ ಆ ಮನುಷ್ಯ ಒಂದೊಂದಕ್ಕೆ ಕಿಚ್ಚು ಕೊಟ್ಟೊಂಡು ಇತ್ತು. ನಮ್ಮ ಕುಂಬ್ಳೆ ಬೆಡಿಯ ಹಾಂಗೆ ಅದಕ್ಕೊಂದು ಕ್ರಮ ಇತ್ತಿಲ್ಲೆ, ಹಾಂಗಾಗಿ ‘ಬೆಡಿ ನೋಡ್ಳೆ ನಿಂಬೊ° ಉದಿವರೆಗೆ’ ಹೇಳಿ ತೋರಿದ್ದಿಲ್ಲೆ!

ನಿನ್ನೆ ನಮ್ಮ ಬೇಳದ ಮಾರ್ಗದ ಕರೆಲಿ ಇಪ್ಪ ಇಂಗ್ರೋಜಿಲಿ ಬೆಡಿ ಇದಾ, ಗೌಜಿ ನೋಡೆಕ್ಕು ಹೇಳಿಂಡೇ ಅಲ್ಲಿಗೆ ಹೋದ್ಸು.
ಆರಾರೂ ಬತ್ತಿರೋ, ಹೇಳಿ ಎಲ್ಲೋರಿಂಗೂ ಸಮೋಸ (ಸರಳ ಮೊಬೈಲು ಸಂದೇಶ) ಕಳುಸಿತ್ತಿದ್ದೆ. ಹೋಪೊ° ಹೇಳಿದ್ದಕ್ಕೆಲ್ಲ ನಮ್ಮ ಸೀತಾಂಗೋಳಿ ಮಹೇಶಣ್ಣ ‘ಹ್ಞೂಂ…’ ಕುಟ್ಟುತ್ತ ಕಾರಣ ಆನು ಬಚಾವು! ಅಲ್ಲದ್ರೆ ಜಾತ್ರೆ ಅಡ್ಕಲ್ಲಿ ಆನು ಒಬ್ಬನೇ ಆಗಿ ಹೋಪನೋ ಹೇಳಿ ಒಂದು ಸಂಶಯ!

ಕೆಲವು ಜನಂಗೊ ಬೇಳದ ಬಾಯಮ್ಮಂಗೊ ಬೆಡಿ ಹೊಟ್ಟುಸುಸ್ಸರ ನೋಡ್ಳೆ ಹೋಪದೊ ಹೇಳಿ ತಮಾಷೆ ಮಾಡಿದವು, ಆನು ಅದರ ಎಲ್ಲ ಗಣ್ಯ ಮಾಡ್ತವ° ಅಲ್ಲ. ನಾವು ಹೋಗದ್ದೆ, ನೋಡದ್ದೆ, ತಿಳಿಯದ್ದೆ ಅವರ ಬಗ್ಗೆ ಅಭಿಪ್ರಾಯ ಹೇಳಲೆಡಿಗಾ? ಎಂಟು ಗಂಟೆಗೆ ಬೆಡಿ ಹೇಳಿ ಕಾಗತಲ್ಲಿ ಹಾಕಿತ್ತಿದ್ದವು. ಹೊಸ ಬೆಡಿ ಆದ ಕಾರಣ ಹೊತ್ತಿಂಗೆ ಸರಿಯಾಗಿ ಹೋಪೊ° ಹೇಳಿ ತೋರಿತ್ತು. ಅಲ್ಲಿಗೆ ಎತ್ತಿಯಪ್ಪಗ ‘ಹಲೆಲೂಯಾ..’, ಭಕ್ತರ ರೋಗಗಳನ್ನೆಲ್ಲ ಪರಿಹರಿಸಿಕೊಡು, ತೊಂದರೆ ಆಗದ್ದ ಹಾಂಗೆ ಮಾಡು ಹೇಳಿಯೊಂಡು ಅಲ್ಲಿ ಅರ್ಥ ಅಪ್ಪ ಭಾಷೆಲಿ ಪ್ರಾರ್ಥನೆ ಮಾಡಿಂಡಿತ್ತಿದ್ದವು. ಬಹುಷ, ಮತಾಂತರ ಮಾಡ್ಳೆ ಅನುಕೂಲ ಆದ ಒಂದು ಅಂಶ ಅವ್ವು ನಮ್ಮ ಕನ್ನಡಲ್ಲಿ ಹೀಂಗೆ ಪ್ರಾರ್ಥನೆ ಮಾಡ್ಸು ಆಯಿಕ್ಕು! ನಮ್ಮ ಖಂಡಿಗೆ ಅಜ್ಜನ ಸಂಸ್ಕೃತದ ಹಾಂಗೆ ಬ್ರಾಹ್ಮಣ್ಯದ ಗಂಧಗಾಳಿ ಗೊಂತಿಲ್ಲದ್ದ ನೀರ್ಕಜೆ ಮಾವಂಗೋ, ಬಾಕಿ ಜವ್ವನಿಗರಿಂಗೋ ಅರ್ಥ ಆಗದ್ದ ಭಾಷೆ ಅಲ್ಲನ್ನೆ!

ನೀರ್ಕಜೆ ಮಾವನ ಇಲ್ಲಿಗೆ ತಂದ್ಸು ಎಂತಕೆ ಗೊಂತಾತಾ…
ಮತಾಂತರದ ಬಗ್ಗೆ ಒಪ್ಪಣ್ಣ ಸುರು ಮಾಡಿದ ಚರ್ಚೆಲಿ ವಿಷಯ ನಮ್ಮಲ್ಲಿ ‘ಅದು’ ಹೇಳ್ತ ಪ್ರಯೋಗ ಮಾಡ್ಳೆ ಅಕ್ಕೋ ಆಗದೋ ಹೇಳ್ತ ಕಡೆಂಗೆ ತಿರುಗಿತ್ತು. ಆಗ ಹೇಳಿಯೊಂಬಲೆ ಅವ್ವು ಕೊಟ್ಟ ಕಾರಣ ನಾವು ಆರು ಈಗ ಬ್ರಾಹ್ಮಣ್ಯ ಒಳುಶಿಯೊಂಡಿದು, ನಮ್ಮಲ್ಲಿ ಹೆಚ್ಚಿನವು ಮಾಂಸ ತಿಂತವಿಲ್ಯೋ… ಹೇಳಿ ಕೇಳ್ತ ಗೌಜಿಲಿ ಅವ್ವು ನಾವು ಬ್ರಾಹ್ಮಣ್ಯದ ಗಂಧಗಾಳಿ ಗೊಂತಿಲ್ಲದ್ದ ಹೆಚ್ಚು ಕಮ್ಮಿ ಎನ್ನ ಹಾಂಗಿಪ್ಪೋರು ಹೇಳಿಯೇ ಬರದ್ದವು. ಎನಗೆ ಆಗದ್ದೆ ಇರ್ಸು ಇದು. ಸಂಘದ ಹಿನ್ನೆಲೆ ಇಪ್ಪವಕ್ಕೆ ಈ ಮಾತುಗೊ ಎಲ್ಲ ಮಾಮೂಲು, ಏವಾಗಳೂ ಹೇಳುಗು. ಅವರ ಒಟ್ಟಿಂಗೆ ನಾವು ಉಣ್ಣೆಕ್ಕಡ, ಅಲ್ಲದ್ರೆ ಅವಕ್ಕೆ ಒಳ್ಳೆ ಕ್ರಮ ಗೊಂತಾವುಸ್ಸು ಹೇಂಗೆ ಹೇಳುಗು. ಆನು ಹೇಳುವದು ಅದರ ಅನುಷ್ಟಾನಲ್ಲಿ ಬಪ್ಪ ಸಮಸ್ಯೆಗಳ ಬಗ್ಗೆ, ಹೆರಾಣವೂ, ನಾವೂ ಸಮಾನ ಆಯೇಕು ಹೇಳಿ ಆದರೆ, ನಾವು ಕೆಳಮಟ್ಟಕ್ಕೆ ಇಳುದು, ಬ್ರಾಹ್ಮಣ್ಯವ ಕಳಕ್ಕೊಂಡು ಅವರ ಒಟ್ಟಿಂಗೆ ಹಂತಿಲಿ ಉಣ್ಣೇಕಾದ್ಸಲ್ಲ. ಎಡಿಗಾರೆ ಅವರ ನಮ್ಮ ಹಾಂಗೆ ಮೇಲ್ಮಟ್ಟಕ್ಕೆ ತಪ್ಪ ಪ್ರಯತ್ನ ಮಾಡುವೊ°. ಅಂತೂ ಎನಗೆ ಬ್ರಾಹ್ಮಣ್ಯ ಗೊಂತಿಲ್ಲೆ (ಇಲ್ಲದ್ರೂ) ಹೇಳಿ ಬಹಿರಂಗವಾಗಿ ಹೇಳಿಗೊಂಬದೇ ಸರಿಯಲ್ಲ ಹೇಳುದು ಎನ್ನ ಅಭಿಪ್ರಾಯ. ನವಗೆ ಬ್ರಾಹ್ಮಣ್ಯ ಗೊಂತಿಲ್ಲದ್ರೆ, ಕಲ್ತೊಂಬ ಎಲ್ಲ ಅವಕಾಶ ಇದ್ದು, ಕಲ್ತುಗೊಂಬ°.

ಜೆನ ತುಂಬ ಸೇರಿದ್ದವು, ಕಿಳಿಂಗಾರು ಭಟ್ಟ ಮಾವನ ಮನೆ ಅಲ್ಲೇ ಹತ್ತರೆ, ಅವ್ವುದೇ ಬಯಿಂದವು, ಹಾಂಗಾಗಿ ಎಂಗಳೊಟ್ಟಿಂಗೆ ಜೆನ ಸೇರಿಗೊಂಡತ್ತನ್ನೆ ಹೇಳಿ ಸಮಾಧಾನ ಆಗಿಯೊಂಡತ್ತು!

ಶೋಕ ಮಾತಾ ಇಂಗ್ರೋಜಯ ಬೆಡಿ
ಶೋಕ ಮಾತಾ ಇಂಗ್ರೋಜಯ ಬೆಡಿ - ಆಕಾಶಲ್ಲಿ ಅರಳುದು!

ಬೇಳ ಶಾಲೆಯ ಮಾಸ್ಟ್ರು ರಾಜು, ಪಂಚಾಯತು ಪ್ರೆಸಿಡೆಂಟು ಥೋಮಸ್ ಮೈಕ್ಕ ಹಿಡುಕ್ಕೊಂಡು ಮಾತಾಡಿಗೊಂಡಿತ್ತಿದ್ದವು. ಇಬ್ರೂ ಗುರ್ತದವು ಆದಕಾರಣ ಉಪಚಾರಕ್ಕೆ ಎಲ್ಲ ತೊಂದರೆ ಬಯಿಂದಿಲ್ಲೆ. ಪ್ರಾರ್ಥನೆ ಕಳುದ ಕೂಡ್ಳೆ, ಈಗ ಬೆಡಿಸೇವೆ ಸುರು ಹೇಳಿತ್ತು ಪಾದ್ರಿ, ಅಷ್ಟೆ! ಆಚಕರೆಲಿ ಹೊಟ್ಳೆ ಸುರು ಆತು. ಚೆಂದಕೆ ಹೊಟ್ಟುಸಿದ್ದವು, ನಮ್ಮ ಕುಂಬ್ಳೆ ಬೆಡಿಯ ಅದೇ ಕ್ರಮಲ್ಲಿ! ಕಂಬೆಡಿ ಹೊಟ್ಟಿಯಪ್ಪದ್ದೆ ಹೆರಟೆಯೊ°, ಮಾರ್ಗದ ಕರೆಲಿ ಜನಂಗೊ ಕಾದಂಡು ಇತ್ತಿದ್ದವು. ಲಾಸ್ಟು ಬಸ್ಸು ಇನ್ನೂ ಬರೆಕಷ್ಟೆ!

ಆರತ್ರಾರೂ ‘ಕುಂಬ್ಳೆ ಬೆಡಿಗೆ ಹೋಯಿದಿರೋ’ ಕೇಳಿ ನೋಡಿ. ‘ಆರು ಮಾರಾಯಾ°, ಅದಕ್ಕೆಲ್ಲ ಒರಕ್ಕು ಕೆಡ್ಸು’ ಹೇಳಿ ಹೇಳದ್ದೆ ಇರವು!
ಎನಗಪ್ಪದು, ಒಂದು ವರ್ಷ ಕುಂಬಳೆ ದೇವರು ಹೀಂಗೇ ಕಸ್ತಲೆ ಆದ ಕೂಡ್ಳೆ ಬೆಡಿ ಹೊಟ್ಟುಸುತ್ತರೆ ನಮ್ಮ ಬೈಲಿಂದ ಎಲ್ಲೋರೂ ನೋಡ್ಳೆ ಹೊಕೋ, ಅಲ್ಲಾ ಅದಕ್ಕೂ ಇನ್ನೇನಾರೂ ನೆವನ ಹೇಳುಗೊ?!

ಬೇಳ ಇಂಗ್ರೋಜಿಲಿ ಬೆಡಿಯ ಗೌಜಿ, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆಲಾ. ಈ ದೊಡ್ಡಭಾವ ಯಾವ ಜಾತ್ರೆಯನ್ನೂ ಬಿಡ್ತ ಇಲ್ಲೆನ್ನೆ. ಮೊನ್ನೆ ಕುಂಬಳೆ ಜಾತ್ರೆ, ಇಡ್ಯಡ್ಕ ಜಾತ್ರೆ ಎಲ್ಲ ಆತು. ಬೇಳದ ಇಂಗ್ರೇಜಿಗೂ ಹೋಗಿ ಬೆಡಿ ಹೊಟ್ಟಿಸಿ ಆತಡ. ಇನ್ನೂ ಇದ್ದು. ಮಧೂರು ಜಾತ್ರೆಯೂ ಪುತ್ತೂರು ಜಾತ್ರೆಯೂ ಒಂದೇ ದಿನ ಬತ್ತನ್ನೆ? ಎಂತ ಮಾಡುದು? ಇನ್ನು ಊರಿಲ್ಲಿ ಅಲ್ಲಲ್ಲಿ ಉರೂಸು ಅಪ್ಪಲಿದ್ದು. ಅದಕ್ಕೂ ಹೋಪಲಿದ್ದೋ? (ಬ್ಯಾರ್ತಿಗಳ ಬೆಡಿ ನೋಡಲೆ)

  ಕುಶಾಲು ಮಾಡಿದ್ದು ಆತಾ? ಕಾರ್ಯ ಮಾಡಿಕ್ಕೆಡಿ.

  [Reply]

  VA:F [1.9.22_1171]
  Rating: 0 (from 0 votes)
 2. ದೊಡ್ಡಭಾವ

  ಉರೂಸು ಒಂದು ಬಗೆ ನವಗೆ ಆವ್ತಿಲ್ಲೆ ಭಾವಾ, ಏಕೆ ಹೇಳಿ ಗೊಂತಿಲ್ಲೆ. ನಿಂಗಳ ಊರಿಲ್ಲಿ ಬ್ಯಾರ್ತಿಗೊ ಒಂದಾರೂ ಮೋರೆ ತೋರ್ಸುವ ಕ್ರಮ ಇದ್ದಾ..?

  [Reply]

  VA:F [1.9.22_1171]
  Rating: 0 (from 0 votes)
 3. prakasha holla

  bedi suddi kandavatte aydu bhava, hosa thantra illadre devara hathira jana barthille antha fadri madrigu gonthaydu !

  [Reply]

  VA:F [1.9.22_1171]
  Rating: 0 (from 0 votes)
 4. ದೊಡ್ಡಭಾವ

  ಇಂದು ಪುನಾ ಪುರ್ಬುಗಳ ಬೆಡಿ, ಬೇಳ ಶೋಕಮಾತೆಯ ಜಾತ್ರೆ ಮೊನ್ನೆಯೇ ಸುರು ಆಯಿದು, ಮಾರ್ಗದ ಕರೇಲಿ ಇಡೀ ಅಲಂಕಾರ ಮಾಡಿದ್ದವು. ಇಂದು ಕಸ್ತಲೆಗೆ ಏಳೂವರೆ ಗಂಟೆಗೆ ಪುನಾ ಸಿಡಿಮದ್ದು ಪ್ರದರ್ಶನ ಇದ್ದಡ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ಸಮೋಸ’ ಕಳ್ಸಿದ್ದೀರೋ? ಉಮ್ಮಾ , ಎನಗೆ ಬಯಿಂದಿಲ್ಲೇ.

  ‘…ಬ್ರಾಹ್ಮಣ್ಯದ ಗಂಧಗಾಳಿ..’ ಇದಕ್ಕೆ ಎನ್ನದೊಂದು ಓಟು ಇದ್ದು ಭಾವ.

  ಆ ಗುಡಿ ಹಾಕ್ಯೊಂಡು….. ಅಲ್ಲಿಗೆ ಬೇಡ ಭಾವ ಈಗಂಗೆ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಏ ಭಾವಾ,ಈ ಶುದ್ದಿ ಓದಿತ್ತಿದ್ದಿಲ್ಲೆ ಇದಾ.. ಹಳತ್ತಿ೦ಗೆ ಮಡಗಿದ್ದದರ್ಲಿ ಅಜಪ್ಪುಲೆ ಬಾಕಿ ಇದ್ದು ಹೇಳಿ ಆತು.
  ಬೆಡಿ ಸುಮಾರು ಹೊಟ್ಟಿದ್ದು ಹಾ೦ಗಾರೆ !.

  [Reply]

  VA:F [1.9.22_1171]
  Rating: 0 (from 0 votes)
 6. ಭೂಪಣ್ಣ
  ಭೂಪ

  ಅಣ್ನೊ..
  ಎ೦ಥದೇ ಹೇಳಿ. ಜಾಥ್ರೆಗೆ ಹೋಪ ಗೌಜಿಯೆ ಬೇರೆ. ಎನಗಿನ್ನೂ ನೆನಪ್ಪಿದ್ದು. ಸಣ್ನ ಆದಿಪ್ಪಗ ವಿಟ್ಲ ಜಾಥ್ರೆಗೆ ಅಜ್ಜನೊತ್ತಿ೦ಗೆ ಹೊಪದು, ರಥ ಎಲವದು, ಸ೦ತೆ ತಿರುಗುದು, ಅಹಾ ಗೌಜಿಯೊ ಗೌಜಿ…
  ಈ ಸರ್ಥಿ ಪುತ್ಥೂರು ಜಾಥ್ರೆ ಬಿದುಲಿಲ್ಲೆ ಹೇಳಿ ಗ್ರೇಶಿದ್ದೆ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುಉಡುಪುಮೂಲೆ ಅಪ್ಪಚ್ಚಿಗಣೇಶ ಮಾವ°ಶ್ರೀಅಕ್ಕ°ಶರ್ಮಪ್ಪಚ್ಚಿಶಾ...ರೀಶ್ಯಾಮಣ್ಣಪೆಂಗಣ್ಣ°ಅನು ಉಡುಪುಮೂಲೆಕೇಜಿಮಾವ°ದೊಡ್ಡಭಾವಚೆನ್ನೈ ಬಾವ°ಮಾಷ್ಟ್ರುಮಾವ°ಪವನಜಮಾವಸುಭಗಸುವರ್ಣಿನೀ ಕೊಣಲೆವಿನಯ ಶಂಕರ, ಚೆಕ್ಕೆಮನೆಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ಚೂರಿಬೈಲು ದೀಪಕ್ಕಕಜೆವಸಂತ°ಶಾಂತತ್ತೆಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ