ನಮ್ಮ ಇಂದಿಂಗಾಗಿ ತನ್ನ ನಾಳೆಯ ತೆತ್ತವ..

ಶುದ್ದಿ ಹೇಳಿದ್ದು:
ಚೆನ್ನಬೆಟ್ಟತ್ತಿಗೆ

ಬೈಲಿನ ಎಲ್ಲೋರುದೇ ಸೇರಿ ಶುದ್ದಿಯ ಹೇಳ್ತದು ನಮ್ಮದು ಒಂದು ವಿಶೇಷ.
ಬೈಲಿನೋರ ಮನೆಯೋರುದೇ ಶುದ್ದಿ ಹೇಳ್ತದು ಮತ್ತೂ ವಿಶೇಷ.
ಈ ಶುದ್ದಿ ಸ್ವರ್ಗಂದಲೇ ಬಂದ ಅಶರೀರವಾಣಿ ಏನಲ್ಲ, ಬದಲಾಗಿ ನಮ್ಮ ಬೈಲಿನ ಚೆನ್ನಬೆಟ್ಟಣ್ಣನ ಯೆಜಮಾಂತಿ “ಚೆನ್ನಬೆಟ್ಟತ್ತಿಗೆ” ಪ್ರೀತಿಲಿ ಕಳುಸಿಕೊಟ್ಟ ಶುದ್ದಿ.
ಭಗತ್ ಸಿಂಗಿನ ಬಗ್ಗೆ ವಿಶೇಷ ಅಭಿಮಾನ ಅವಕ್ಕೆ. ಹಾಂಗಾಗಿ ಅವನ ಹುಟ್ಟುಹಬ್ಬದ ದಿನ ಬೈಲಿಂಗೋಸ್ಕರ ಬರದ ಶುದ್ದಿ, ನಮ್ಮೆಲ್ಲರಿಂಗಾಗಿ.

ಬನ್ನಿ, ಬೈಲಿನ ಹೊಸ ಜೆನಂಗಳ ಶುದ್ದಿಯ ಓದಿ, ಒಪ್ಪ ಕೊಡುವೊ°, ಶುದ್ದಿ ಹೇಳಿ ಹೇಳಿ, ಕ್ರಮೇಣ ಬೈಲಿಂಗೇ ಬಪ್ಪಲೆ ಪ್ರೋತ್ಸಾಹ ಮಾಡುವೊ°.

ಎಂತ ಹೇಳ್ತಿ?

~
ಗುರಿಕ್ಕಾರ°

ಇಂದ್ರಾಣ ದಿನದ ವಿಶೇಷ ಹೇಳಿದರೆ, ಭಾರತದ ಆಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ -ನ ಹುಟ್ಟುಹಬ್ಬ.

ತನ್ನ ಚಿರ ಯವ್ವನಲ್ಲಿ ತನ್ನ ಎಲ್ಲಾ ವೈಯಕ್ತಿಕ ಸುಖ-ಸಂತೋಷಂಗಳ ಕರೆಂಗೆ ಮಡುಗಿ, ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸ್ವಂತ ಜಿವನವನ್ನೇ ಮುಡಿಪಾಗಿ ಇಟ್ಟವ ಜನ್ಮದಿನ ಇಂದು.

27-10-1907 ರಂದು ಸರ್ದಾರ್ ಕೃಷ್ಣ ಸಿಂಗ್ ಮತ್ತೆ ವಿದ್ಯಾವತಿ ದಂಪತಿಗಳ ಪುಣ್ಯಗರ್ಭಲ್ಲಿ ಹುಟ್ಟಿದ.
ಇವ ಸಣ್ಣ ಇಪ್ಪಗಳೇ, ಅಂದರೆ 1919 ರಲ್ಲಿ ಜಲಿಯನ್ ವಲಾಬಾಗ್ ಗಟನೆಂದ ಮನನೊಂದು, ನಂತರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಗೊಂಡ.
ಕಮ್ಯುನಿಸಮ್, ಮಾರ್ಕ್ಸಿಸಮ್, ಮತ್ತೆ ಆರ್ಯಸಮಾಜದ ತತ್ವಂಗಳಿಂದ ಪ್ರಭಾವಿತ ಆದ ಅವ ಹಿಂದುಸ್ತಾನ್ ಸೋಷಿಯಲಿಷ್ಟ್ ರಿಪಬ್ಲಿಕನ್ ಎಸೋಷಿಯೇಶನ್ ನ ಸ್ತಾಪಿಸಿದ.

ಭಗತ್ ಸಿಂಗ್

ಆದರೆ, 23-11-1931 ರಂದು, ಲಾಲಾ ಲಜಪತ್ ರಾಯರ ಕೊಂದ ಪೋಲೀಸನ ಹತ್ಯೆಮಾಡಿದ್ದಕ್ಕೆ ಭಗತ್ ಸಿಂಗನ ಗಲ್ಲಿಂಗೆ ಏರುಸುತ್ತವು..
ಇವ ಬದುಕ್ಕಿದ್ದು ಕೇವಲ 23 ವರ್ಷ!
ಆದರೆ ಇವನ ಸಾಧನೆ? ಅದು ಅಪ್ರತಿಮ!!

ಇಂಥವಂಗೆ ಭಾರತಮಾತೆ ಜನ್ಮ ಕೊಟ್ಟಿದು ಹೇಳಿ ನಾವು ಹೆಮ್ಮೆ ಪಟ್ಟೊಳೆಕ್ಕು.
ಇನ್ನೊಂದು ಸಂಗತಿ ಹೇಳಿದರೆ, ನಾವು ಗಾಂಧಿಜಯಂತಿ, ನೆಹರು ದಿನಾಚಣೆ ಎಲ್ಲ ಭಾರೀ ವಿಜೃಂಭಣೆಂದ ಆಚರಿಸುತ್ತು..
ಆದರೆ ಭಗತ್ ಸಿಂಗ್ ಜನ್ಮದಿನ?
ನೆಂಪಿದ್ದಾ ಎಲ್ಲರಿಂಗೂ..??

ಯೋಚನೆಮಾಡೆಕ್ಕಾದ ವಿಶಯ..

ಚೆನ್ನಬೆಟ್ಟಣ್ಣ

   

You may also like...

14 Responses

  1. shivakumara says:

    ಇಂದು ನಮ್ಮ ರಾಜಕೀಯದವರ ಸ್ವಾರ್ಥ, ವಂಚನೆ, ದುರಾಢಳಿತ, ಹಿಂದುಗಳ ಅವಗಣನೆಯ ವಿರುದ್ದ ಕಾರ್ಯಾಚರಣೆ ನಡೆಸೆಕು.
    ನಾವೂ ನಮ್ಮ ಮಕ್ಕೊಗೆ ಹೇಳಿ ಕೊಡೆಕ್ಕಾದಷ್ಟು ವಿಶೇಷತನ ಹೊಂದಿದ ಈ ಪುಣ್ಯ ಭೂಮಿಲಿ ಹುಟ್ಟಿದ ನಾವೆಲ್ಲೋರೂ ಧನ್ಯರು
    9964851582 kaverisuddi@gmail.com

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *