Oppanna.com

ಭಾರತೀ ಕಾಲೇಜಿಲ್ಲಿ ವೇದ ವಿದ್ಯಾ ಡಿಪ್ಲೋಮಾ ಕೋರ್ಸು ಶುರು

ಬರದೋರು :   ಬೊಳುಂಬು ಮಾವ°    on   05/08/2012    7 ಒಪ್ಪಂಗೊ

ಬೊಳುಂಬು ಮಾವ°

ಕೊಡೆಯಾಲದ ನಂತೂರಿನ ಶ್ರೀ ಭಾರತೀ ಕಾಲೇಜಿಲ್ಲಿ ಇಂದು, ಶ್ರಾವಣ ಶುಕ್ಲ ತೃತೀಯದಂದು, ಶ್ರೀ ವೇದ ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಆಶ್ರಯಲ್ಲಿ ವೇದವಿದ್ಯಾ ಡಿಪ್ಲೋಮಾ ಕೋರ್ಸಿನ ಪ್ರಥಮ ಬ್ಯಾಚಿನ ಉದ್ಘಾಟನಾ ಕಾರ್ಯಕ್ರಮ ನೆಡದತ್ತು. ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿಗೊ ಆದ ಶ್ರೀ ಭೀಮೇಶ್ವರ ಜೋಷಿಯವು ಇದರ ದೀಪ ಬೆಳಗಿ ಉದ್ಘಾಟನೆ ಮಾಡಿದವು.

ಭಾರತ ಆಧ್ಯಾತ್ಮಕವಾದ ಸಂಪತ್ತಿಲ್ಲಿ ಸಾರ್ವಭೌಮತ್ವವ ಸಾಧಿಸಿದ್ದು.  ಪುರಾತನವಾದ ಬಹಳ ಮೌಲ್ಯವಿಪ್ಪ ವೇದ  ಉಪನಿಷತ್ತು ಪುರಾಣಂಗಳ ಜನ ಸಾಮಾನ್ಯರಿಂಗೆ ತಲಪಿಸುವ ಕಾರ್ಯಕ್ರಮ ಇದೀಗ ನೆಡೆತ್ತ ಇದ್ದು.  ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಅಬ್ಬೆ.  ಆ ಭಾಷೆಯ ಮುಖಾಂತರವಾಗಿ ವೇದೋಪನಿಷ್ತ್ತುಗಳ ಅರ್ಥವ ತಿಳ್ಕೊಳೆಕು ಹೇಳ್ತದು ಈ ತರಗತಿಯ ಉದ್ದೇಶ.  ಶಾಂತಿ ನೆಮ್ಮದಿಗೆ ಬೇಕಾಗಿ ಭಾರತೀಯ ಸಂಸ್ಕೃತಿಯ ನಾವು ತಿಳ್ಕೊಳೆಕು.   ನಮ್ಮ ಸಂಸ್ಕೃತಿಯ, ಭಾಷೆಯ ಜೀವಂತವಾಗಿ ಒಳುಸಲೆ ಬದ್ಧರಪ್ಪಲೆ  ಬೇಕಾಗಿ ಇದು ನೆಡೆತ್ತಾ ಇದ್ದು.  ಶ್ರದ್ಧೆ, ನಿಷ್ಟೆ, ಪ್ರಾಮಾಣಿಕವಾಗಿ ಸಾಧನೆ ಮಾಡಿರೆ ಮಾಂತ್ರ ವೇದ ವಿದ್ಯೆ ಪಠಣ ಸಾರ್ಥಕ ಅಕ್ಕು.  ಭಾರತದ ಭವ್ಯ ಪರಂಪರೆಯ ನಾವು ಒಳುಸಿ ಕೊಳ್ಳೆಕು.  ಇದು ನಮ್ಮಿಂದಲೆ ಶುರು ಆಯೆಕು.  ಶ್ರೀ ಸಂಸ್ಥಾನದ ಅಪೇಕ್ಷೆ ಈ ಮೂಲಕ ಯಶಸ್ಸು ಕಾಣಲಿ ಹೇಳಿ ಶ್ರೀ ಜೋಷಿ ಉದ್ಘಾಟನೆ ಮಾಡಿ ಶುಭವ ಹಾರೈಸಿದವು.

ಕಾರ್ಯಕ್ರಮದ ಆರಂಭಲ್ಲಿ ಭಾರತೀ ಕಾಲೇಜಿನ ವಿದ್ಯಾರ್ಥಿ, ಶ್ರೀ ಉಮಾ ಮಹೇಶ್ವರ ವೇದಘೋಷ ಮಾಡಿದವು.  ಕಾಲೇಜಿನ ಪ್ರಾಧ್ಯಾಪಕಿ  ಶ್ರೀಮತಿ ಭಾರತೀ ನೀಲಕಂಠ ಪ್ರಾರ್ಥನೆಯ ಮಾಡಿದವು.   ಕಾಲೇಜಿನ ಸಂಚಾಲಕ, ಶ್ರಿ ವೈ ವಿ ಭಟ್ ಸ್ವಾಗತಿಸಿದವು. ಡಾ.ಈಶ್ವರ ಪ್ರಕಾಶ್ ಇಡೀ ಕಾರ್ಯಕ್ರಮವ ನಿರೂಪಿಸಿದವು.  ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲ, ಡಾ.ಜಿ.ಎನ್.ಭಟ್ ಪ್ರಾಸ್ತಾವಿಕವಾಗಿ ಮಾತಾಡಿ ಈ ಡಿಪ್ಲೋಮಾ ಕೋರ್ಸಿನ ಬಗ್ಗೆ ತಿಳುಸಿದವು.  ಪೇಟೆಲಿ ತುಂಬಾ ಜೆನಕ್ಕೆ ನಮ್ಮ ಸಂಸ್ಕೃತಿ, ವೇದಂಗಳ ತಿಳ್ಕೊಂಬಲೆ ಆಸಕ್ತಿ ಇದ್ದರೂ ಅಧ್ಯಯನಕ್ಕೆ  ಅವಕಾಶ ಸಿಕ್ಕುತ್ತಿಲ್ಲೆ.  ಮಂತ್ರಂಗಳ ಉಚ್ಛಾರ, ಅದರ ಅರ್ಥಂಗಳ ಬಗ್ಗೆ,  ಧರ್ಮಶಾಸ್ತ್ರಂಗಳ ಬಗ್ಗೆ ತಿಳುಸಿ ಕೊಡ್ತ ಒಂದು ವ್ಯವಸ್ಥೆ ಇಲ್ಲಿದ್ದು. ಹೇಳಿ ಹೇಳಿದವು.   ಆರು ತಿಂಗಳ ಅವಧಿಲಿ,  ತಿಂಗಳಿಂಗೆ ೩ ಶನಿವಾರ ಮಧ್ಯಾಹ್ನ ಮೇಲೆ, ೩ ಆದಿತ್ಯವಾರ ಇಡೀ ದಿನ ತರಗತಿಗೊ ನೆಡೆತ್ತು ಒಟ್ಟು ೧೩೦ ಗಂಟೆ ಕ್ಲಾಸುಗೊ ಇದ್ದು.  ಎಲ್ಲೋರಿಂಗು ಇದರಲ್ಲಿ ಭಾಗವಹಿಸಲೆ ಅಕ್ಕು ಹೇಳಿ ಹೇಳಿದವು. ಇದರಲ್ಲಿ ಮಂತ್ರಾರ್ಥ,  ಪ್ರಸ್ಥಾನತ್ರಯಂಗಳ ಪರಿಚಯ, ವೇದ ಸಾಹಿತ್ಯ, ಸಂಸ್ಕತಿ, ಮಂತ್ರ ಪಠಣ, ಪುರಾಣ, ಪರಂಪರೆ, ರಾಮಾಯಣ, ಮಹಾಭಾರತದ ಬಗ್ಗೆ  ವಿಚಾರಗೋಷ್ಟಿಗೊ, ಎಲ್ಲವೂ ನೆಡೆತ್ತು ಹೇಳಿ ಅವು ಹೇಳಿದವು.

ಭಾರತೀ ಕಾಲೇಜಿನ ಆಶ್ರಯಲ್ಲಿ ಅಷ್ಟಮಿ ಲೆಕ್ಕಲ್ಲಿ ನೆಡದ ಮಕ್ಕೊಗೆ ನೆಡದ ಗೀತಾ ಕಂಠಪಾಠ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗಳುಸಿದ ನಗರದ ವಿವಿಧ ಶಾಲೆ/ಕಾಲೇಜುಗಳ ಮಕ್ಕೊಗೆ ಬಹುಮಾನವಿತರಣೆಯುದೆ ಈ ಸಂದರ್ಭಲ್ಲಿ ನೆಡದತ್ತು.   ಡಾ. ಮರುವಳ ನಾರಾಯಣ ಭಟ್ ಕಡೇಂಗೆ  ವಂದಿಸಿದವು.

 

7 thoughts on “ಭಾರತೀ ಕಾಲೇಜಿಲ್ಲಿ ವೇದ ವಿದ್ಯಾ ಡಿಪ್ಲೋಮಾ ಕೋರ್ಸು ಶುರು

  1. ಈ course ಗೆ ಯಶಸ್ಸು ಸಿಕ್ಕಲಿ,
    ಶುಭಹಾರೈಕೆ 🙂

  2. bahaLa oLLeya kelasa. Odi thumbaa khushi aathu. keep it up. all the best. heenge ithara kaDegaLalloo naDeyali. saNNavakkoo, yuvakaringoo, doDDavakkoo, mahiLeyaringoo, kalivale interest ikku. kalishi, kalivale prOthsaaha koDi, sandarbhangaLa kalpisi koDi. elloringoo oLLeyadakku.

    1. We are planning this for all. During summer holidays we are planning for youngsters. The present batch has more than 30 learners who are all above 25 ,except two young students. Now there is a request from other centres like Bangalore, Mysore, Davanagere to conduct such programmes . If local leaders take interest we are happy to get associated. With very small resources we are unable to stretch beyond Mangalore.

  3. ಒಳ್ಳೆ ಕಾರ್ಯ.. ಮು೦ದುವರಿಯಲಿ… ಹರೇ ರಾಮ

  4. ಹರೇ ರಾಮ । ಶುದ್ದಿಗೆ ಧನ್ಯವಾದ । ಯಶಸ್ಸಾಗಿ ಬೆಳಗಲಿ ಹೇಳಿ ಆಶಿಸುವೊ°

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×