ಊಟ..ಏವದು ಸುಖ?

February 26, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರೇಲಿ ನಿ೦ದು ನೋಡಿಗೊ೦ಡಿತ್ತಿದ್ದ ನಾವೂ ಬೈಲಿ೦ಗೆ ಇಳುದಾತು.ಇಳುದ ಮತ್ತೆ ನೆ೦ಟ್ರ ಹತ್ತರೆ ಮಾತಾಡದ್ದರೆ ಹೇ೦ಗೆ?
ಎ೦ತ ಮಾತಾಡೊದು?

“ಬ್ರಾಹ್ಮಣೋ ಬಹುಜನ ಪ್ರಿಯಃ” ಹೇಳುವ ಮಾತಿನ ಇ೦ದು ಭೋಜನ ಪ್ರಿಯ ಹೇಳಿ ತಿರುಗಿಸಿದ್ದವನ್ನೆ.ಏನೇ ಆಗಲಿ,ಅನುಪ್ಪತ್ಯದ ಊಟ ನವಗಿಷ್ಟ.ಹಾ೦ಗಾಗಿ ಊಟದ ಶುದ್ದಿಯೇ ಮಾತಾಡುವ,ಆಗದೋ?
ನಮ್ಮ ಊರಿನ ಜೆ೦ಬ್ರ೦ಗಳಲ್ಲಿ ಊಟದ ಕ್ರಮಲ್ಲಿ ಬದಲಾವಣೆ ಬತ್ತಾ ಇದ್ದು. ಎಲ್ಲ ಪೇಟೆಯ ಗಾಳಿ ಬೀಸಿಯೋ,ಎ೦ತ ಕತೆಯೋ? ಅ೦ತೂ ಮೂರು ಹ೦ತಿ ಊಟ ಬಳುಸಿಗೊ೦ಡಿದ್ದ ಮನೆಗಳಲ್ಲಿ ಈಗ ಎರಡ್ನೇ ಹ೦ತಿಗೆ ಮನೆಯವ್ವು,ಅಡಿಗೆಯವ್ವು,ಸುರುವಾಣ ಹ೦ತಿಗೆ ಬಳುಸಿದವ್ವು ಮಾ೦ತ್ರ ಬಾಕಿ ಅಪ್ಪದು ಹೇಳಿ ಆಯಿದು.ಈಗಾಣ ಗಡಿಬಿಡಿಯ ಜೀವನಲ್ಲಿ ,ಎಲ್ಲೋರೂ ಓಡಿ ನೆಡಕ್ಕೊ೦ಡು ಉ೦ಬಲೆ ಅಭ್ಯಾಸ ಮಾಡಿ ಅಲ್ಲದೋ ಹೀ೦ಗಾದ್ದು?

ಮದಲೂ ಮೇಜು ಕುರುಶಿ ಮಡಿಕ್ಕೊ೦ಡು ಇತ್ತಿದ್ದವು,ಪ್ರಾಯದೋರಿ೦ಗೆ,ಕೂಪಲೆ ಏಳುಲೆ ಕಷ್ಟ ಅಪ್ಪೋರಿ೦ಗೆ ಊಟ ಹೇಳಿರೆ ಹಿ೦ಸೆ ಅಪ್ಪಲಾಗನ್ನೇ ಹೇಳಿಗೊ೦ಡು.ಆದರೆ ಈಗ ಊಟಕ್ಕೆ ಕೂಪಲೂ ಪುರುಸೊತ್ತಿಲ್ಲೆ.

ನಿಜವಾಗಿ ಯೇವದು ಸುಖ?
ಊಟ ಉಂಬದು ಹೇಂಗೆ ಒಳ್ಳೆದು?
ಪಂಕ್ತಿಲಿ ಉಂಬದಾ?
ಅಲ್ಲ ಬೈಪ್ಪಣೆಲಿಯೋ?
ಅಲ್ಲ, ಮೇಜು ಕುರುಷಿಲಿಯೋ?

ಎನಗಂತೂ ಹಂತಿಲಿ ಕೂದುಗೊಂಡು,ಎರಡೆರಡು ಸರ್ತಿ ಹಾಕಿಸಿಗೊ೦ಡು, ಲೊಟ್ಟೆ ಹೊಡಕ್ಕೊಂಡು, ಚೂರ್ಣಿಕೆ ಹೇಳಿಗೊ೦ಡು,ಮಾದೇವಾ….ಕ್ಕೆ ಸ್ವರ ಸೇರುಸಿಗೊ೦ದು ಉ೦ಬದು ಹೇಳಿರೆ,ಪ್ರಾಣ.ಹಾ೦ಗೆ ಉಂಡ್ರೆ ಉಂಡ ಹಾಂಗೆ ಅಪ್ಪದಪ್ಪ..

ನಿ೦ಗೊಗೆ?

ಊಟ..ಏವದು ಸುಖ?, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ಎನಗೂ ನಿಂಗಳಾನ್ಗೆ ಆವ್ತು. ಕೂದು ಉಣ್ಣೆಕು ಚೂರ್ಣಿಕೆಗೆ ದೆನಿ (ಬಾಯಿ ಹರಿಯೆಕು ) ಸೇರ್ಸೆಕು ಹೇಳಿ , ಆದರೆ, ಮಣಿಗೆಂಟು ಬೀಗುತ್ತು. ಬಳಸುಲೆ ಹೋಪ ಹೇಳಿರೆ ಕೈ ದರುಸುತ್ತು (ಅಭ್ಯಾಸ ಬಿಟ್ಟು) ಬಗ್ಗಿರೆ ಸೊಂಟ ಬೇನೆ ಆವ್ತು. ಹೋಯ್., ಅಟ್ಲೀಸ್ಟ್ , ಬಳುಸುತ್ತವರ ನೋಡಿಯೊಂಡಾರು ಪ್ರೋತ್ಸಾಹ ಕೊಡುವೋ. ನಿಂಗೊಗೆ ಬೆಶಿನೀರು ತಣ್ಣೀರು ಹಿಡ್ಕೊಂಬಲೆ ಎಡಿಗೋ ಭೂಪ!, ಹಪ್ಪಳ ಆನು ನೆಗ್ಗುವೆ!!

  ಮತ್ತೆ ಚೂರ್ಣಿಕೆ ಹೇಳ್ತರೆ ಭಟ್ಟ ಮಾವ ಹತ್ರೆ ಇಲ್ಲೆನ್ನೆ ಹೇಳಿ ನೋಡಿಗೊಳ್ಳಿ. ಅಂತೇ ಆರ್ಬಾಯಿ ಹಾಕೊದಲ್ಲಡಾ.,
  “ಭೋಜನ ಕಾಲೇ ನಮಃ ಪಾರ್ವತೀ ಪತಯೇ…” , ಭೋಜನಾ ಅಂತೇ ಗೋವಿಂದ ನಾಮ ಸಂಕೀರ್ತನಂ…”

  [Reply]

  ಭೂಪಣ್ಣ

  ಭೂಪ Reply:

  ಭಾವಯ್ಯ,
  ಒಪ್ಪ ಹಾಕಿದ್ದಕ್ಕೆ ಧನ್ಯವಾದ. ರಜ ಸೊ೦ಟ ಬೆನೆ ಆದರೂ ಹನ್ಥಿಗೆ ಬಳುಸುವ ಖುಶಿ ಬೆರೆಯೆ ಅಲ್ಲದಾ..
  ಮೊದಲಾಣ ದಿನ ಬಾಳೆ ಎಲೆ ರೆಡಿ ಮಾಡುದು, ಮೇಲಾರಕ್ಕೆ ಕೊರವದು, ಊಟಕ್ಕೆ ಹ೦ತಿ ಹಾಕುದು, ಬಳುಸುದು ಎಲ್ಲ ಎಶ್ಟು ಗೌಜಿ ಅಲ್ಲದಾ..
  ಹ೦ತಿಯ ನಡುವೆ ಯಜಮಾನ ಬ೦ದು ಮಾತಾಡುಸುದು, ಮನೆ ಹೆಮ್ಮಕ್ಕೊ ಹಾಲು ಮಜ್ಜಿಗೆ ಹಿದುಕ್ಕೊ೦ದು ಎಲ್ಲೂರತ್ತರೂ ಮಾತಾಡಿಸಿಗೊ೦ಡು ಮಕ್ಕೊಗೆ ಉಪಚಾರ ಮಾಡುದು, ನಿ೦ಗೊ ಹೇಲಳಿದ ಹಾ೦ಗೆ ಚೂರ್ಣಿಕೆ ಹಾಕುದು ಎಲ್ಲ ನಮ್ಮ ಸಮ್ಪ್ರದಾಯ೦ಗೊ. ಎಶ್ತು ಚೆ೦ದ ಅಲ್ಲದಾ..

  ಭೋಜನ ಕಾಲೇ ನಮಃ ಪಾರ್ವತೀ ಪತಯೇ…”

  [Reply]

  VN:F [1.9.22_1171]
  Rating: 0 (from 0 votes)
  ಭೂಪಣ್ಣ

  ಭೂಪ Reply:

  ಚೆನ್ನೈ ಭಾವಯ..
  ಓಪ್ಪ ಹಾಕಿದ್ದಕ್ಕೆ ಧನ್ಯವಾದ.

  ಹ೦ತಿ ಊಟ ವೆ ಒಳ್ಲೆದು ಅಲ್ಲದಾ…
  ಹ೦ತಿ ಲಿ ಉ೦ಡರೆ ಆರೊಗ್ಯಕ್ಕೂ ಒಲ್ಲೆದು ಅಡ್ದ.

  [Reply]

  VN:F [1.9.22_1171]
  Rating: 0 (from 0 votes)
 2. ಬೋಸ ಬಾವ
  ಬೋಸ...

  {….ಎರಡೆರಡು ಸರ್ತಿ ಹಾಕಿಸಿಗೊ೦ಡು,}
  ಅಪ್ಪಪ್ಪು… ಎನಗೆ ಕೂಡ ಹಾ೦ಗೆ ಏ…
  ನಾಲ್ಕು ಹೋಳಿಗೆ ಹೊಡೆಯದ್ದೆ ಅಕ್ಕೊ??
  ಕಡೇ೦ಗೆ ನಮ್ಮ ರಘು ಭಾವನ ಪದ್ಯ ಕೇಳಿ.. ಹರ ಹರ ಮಾದೇವ.. ಹೇಳಿರೇ ಲಾಯಕೆ… ಅಲ್ಲದೋ??

  [Reply]

  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕಾನ Reply:

  {ನಾಲ್ಕು ಹೋಳಿಗೆ ಹೊಡೆಯದ್ದೆ ಅಕ್ಕೊ??}
  ಬೈಪ್ಪಣೆಲಿ ಉಂಡರೆ ಅಶನಂದ ಮೊದಲೇ ಹೋಳಿಗೆ ಹೊಡವಲೆ ಅಕ್ಕು ಬೋಸ ಬಾವ… :-)
  {ಹರ ಹರ ಮಾದೇವ.. ಹೇಳಿರೇ ಲಾಯಕೆ… }
  ಹರ ಹರ ಮಾದೇವ ಹೇಳಕ್ಕಾರೆ ಹಂತಿಲೇ ಕೂರೆಕ್ಕು ಹೇಳಿ ಇಲ್ಲೆ… 😉

  [Reply]

  VA:F [1.9.22_1171]
  Rating: +1 (from 1 vote)
  ಭೂಪಣ್ಣ

  ಭೂಪ Reply:

  ಭಾವಯ್ಯ..
  ಓಪ್ಪ ಹಾಕಿದ್ದಕ್ಕೆ ಧನ್ಯವಾದ.

  ಈ ಒಪ್ಪ೦ಗಳ ನೊಡಿ ಅಪ್ಪಗ ಎನಗೆ ಕಾಣುತ್ಥು, ನಾವು ಈ ಒಪ್ಪಣ್ನ ಬಳಗದೊರು ಎಲ್ಲ ಸೆರಿ ಒ೦ದು ಅನುಪಥ್ಯ ತೆಗದರೆ ಹೆ೦ಗೆ..??? ಎ೦ಥ ಹೇಳುತ್ತಿ ಇದಕ್ಕೆ…

  [Reply]

  VN:F [1.9.22_1171]
  Rating: 0 (from 0 votes)

  Ms. praveena kulkarni Reply:

  Dear Sir,

  I was just searching abt food. and i found your topic very interesting. though i couldnt understand 100% of ur language, but really enjoyed reading.

  yes, i also like eating with everyone down on the floor with laughter.

  I am an Anchor for Cookery show “Aha Entha Ruchi” on Chandana TV every Sunday 3 o clk. this type of matters interests me.

  Mrs.Praveena Kulkarni

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಭೂಪ೦ಗೆ ಬೈಲಿ೦ಗೆ ಆತ್ಮೀಯ ಸ್ವಾಗತ.
  ನಮ್ಮ ಊಟದ ಕ್ರಮ೦ಗಳ ಚೊಕ್ಕಕ್ಕೆ ಬರದ್ದಿ.ಈಗ ಬೈಪ್ಪಣೆ ಊಟದ್ದೇ ಗೌಜಿ ಅಲ್ಲದೋ,ಊರಿಲಿಯೂ.
  ಎನಗೆ ಹ೦ತಿಲಿ ಕೂದು ಉ೦ಡರೇ ಸಮಾಧಾನ ಅಪ್ಪದು ಭಾವ.ಆ ಸಾಲಿಲಿ ನಿ೦ದು ನಿರಾಶ್ರಿತರ ಹಾ೦ಗೆ ಬಟ್ತಲು ಒಡ್ಡುಲೆ ಸಮ ಆವುತ್ತಿಲ್ಲೆ.ಹಾ೦ಗಾಗಿ,ಎಡಿಗಾದಷ್ಟೂ ಹ೦ತಿಗೇ ಸೇರಿಗೊ೦ಬದಿದಾ.

  [Reply]

  VA:F [1.9.22_1171]
  Rating: +1 (from 1 vote)
 4. ಕಾಂತಣ್ಣ

  ನಂದೂ ಹಾಂಗೇಯಾ ಭಾವಾ, ಎನಗಂತೂ ಹಂತಿಲಿ ಕೂದುಗೊಂಡು,ಎರಡೆರಡು ಸರ್ತಿ ಹಾಕಿಸಿಗೊ೦ಡು, ಲೊಟ್ಟೆ ಹೊಡಕ್ಕೊಂಡು, ಚೂರ್ಣಿಕೆ ಹೇಳಿಗೊ೦ಡು,ಮಾದೇವಾ….ಕ್ಕೆ ಸ್ವರ ಸೇರುಸಿಗೊ೦ದು ಉ೦ಬದು ಹೇಳಿರೆ,ಪ್ರಾಣ.ಹಾ೦ಗೆ ಉಂಡ್ರೆ ಉಂಡ ಹಾಂಗೆ ಅಪ್ಪದಪ್ಪ..

  ಅಲಂಕಾರಪ್ರಿಯೋ ವಿಷ್ಣುಃ ಅಭಿಶೇಕಪ್ರಿಯಃ ಶಿವಃ |
  ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಭೋಜನಪ್ರಿಯಃ ||

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಕಾಂತಣ್ಣ., ಈ ಶ್ಲೋಕಕ್ಕೆ ಆಧುನಿಕ ವ್ಯಾಖ್ಯಾನ ಮಾಡಿಗೊಂಡು ಅರ್ಥೈಸೆಕೊ.

  ಶಾಸ್ತ್ರೀಯ ವಿಶ್ಲೇಷಣೆ ಇಲ್ಲಿಗೆ ಸಮ ಬಾರನ್ನೇ!!

  [Reply]

  VA:F [1.9.22_1171]
  Rating: +1 (from 1 vote)
  ಭೂಪಣ್ಣ

  ಭೂಪ Reply:

  ಭಾವಯ್ಯ..
  ಓಪ್ಪ ಹಾಕಿದ್ದಕ್ಕೆ ಧನ್ಯವಾದ.

  ನಮ್ಮ ಹ೦ತಿ ಯ ಊಟದ ಕ್ರಮ೦ಗೊ ಹಾಗೂ ಬಳುಸುವ ಸರದಿ ಕ್ರಮ೦ಗೊ ಎಲ್ಲ ಎಶ್ತು ವೈಜ್ನಾನಿಕ ಅಲ್ಲದಾ.. ತುಪ್ಪ೦ದ ಶುರು ಆಗಿ ಮಜ್ಜಿಗೆಲಿ ಮುಗಿವ ಊಟ ನಮ್ಮ ಶರೀರಕ್ಕೆ ಬೇಕಾದ ಎಲ್ಲ ಪೌಶ್ತಿಕಾ೦ಶಗಳನ್ನೂ ಕೊದುತ್ಥು.

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಭೂಪಂಗೆ ಸ್ವಾಗತ.
  ಬ್ರಾಹ್ಮಣೋ ಭೋಜನಪ್ರಿಯಃ ಹೇಳುವದಕ್ಕೆ ಅರ್ಥ ಎಂತ ಹೇಳಿರೆ, ಬ್ರಾಹ್ಮಣ ಹೆಚ್ಚು ಎಂತ ಅಪೇಕ್ಷ್ಜೆ ಪಡ್ತಾ ಇಲ್ಲೆ. ಒಂದು ಒಳ್ಳೆ ಭೋಜನ ಕೊಟ್ಟರೆ ಅದರಲ್ಲೇ ತೃಪ್ತಿ ಪಡುತ್ತ ಹೇಳಿ
  ಬಹು ಜನ ಪ್ರಿಯ ಕೂಡಾ ಅಪ್ಪು

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ದಕ್ಷಿಣಿ???? ಯತ್ಕಿಂಚಿತ್?!!

  [Reply]

  VN:F [1.9.22_1171]
  Rating: +2 (from 2 votes)
  ಭೂಪಣ್ಣ

  ಭೂಪ Reply:

  ಧನ್ಯವಾದ ಅಪ್ಪಚ್ಚಿ…

  ಎಶ್ತು ಸರಿಯಾಗಿ ಹೇಳಿದಿ… ಭ್ರಾಹ್ಮಣರು ಎಶ್ತು ಶಾ೦ತಪ್ರಿಯರು, ಎಶ್ಟು ಸಾತ್ವಿಕರು ಹೇಳಿ ಇಡೀ ಜನಾ೦ಗಕ್ಕೆ ಗೊ೦ತಾಯೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 6. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಹಂತಿಲಿ ಕೂದು ಕುಶಾಲು ಮಾತಾಡಿಗೊಂಡು ಕುಶೀಲಿ ಕ್ರಮಪ್ರಕಾರ ಉಂಬದೇ ಸುಖ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಲೆ ಬಗ್ಗಿಸಿ ಮಾತಾಡ್ತಾ ಉಣ್ಣುತ್ತ ಇಪ್ಪ ಈ ಹೆಮ್ಮಕ್ಕಳ ಹಂತಿಗೆ ಬಡುಸೋದು ಕಷ್ಟ ಹೇಳ್ತವನ್ನೇ ಕೆಲವು ಜೆನ. (ಜೆವ್ವನಿಗರು ಅಲ್ಲ ಆತೋ). ಬೇಕು ಬೇಡ ಹೇಳೋದಕ್ಕೆ ಒಂದೇ ಕೈ ಭಾಷೆಡ . ಅಪ್ಪೋ?!! . ರಿವರ್ಸ್ ಗೇರ್ ಕೂಡ ಪ್ರಯೋಗಿಸೆಕ್ಕಾವ್ತಡ!!!

  [Reply]

  VN:F [1.9.22_1171]
  Rating: +1 (from 1 vote)
 7. ಮುಣ್ಚಿಕಾನ ಭಾವ

  ಹಂತಿಲಿ ಕೂದು ಉಂಬದೇ ಒಂದು ಗಮ್ಮತ್ತು. ಎನಗೆ ತುಂಬಾ ಇಷ್ಟ. ಆದರೆ ಈಗ ಕಂಪ್ಯೂಟರು ಯುಗ ಇದಾ… ಹಾಂಗಾಂಗಿ ಹೆಚ್ಚಿನವಕ್ಕೆ ಸರಿಯಾಗಿ ನಿಂದೊಂಡು ಉಂಬಲೇ ಪುರ್ಸೊತ್ತಿಲ್ಲೆ… :-)

  [Reply]

  VA:F [1.9.22_1171]
  Rating: 0 (from 0 votes)
 8. ಹಳೆಮನೆ ಅಣ್ಣ

  ಅನುಪ್ಪತ್ಯದ ಊಟ ಹಂತಿಲಿ ಕೂದು ಉಂಬದೇ ಸುಖ. ಅದರಲ್ಲಿ ಎರಡು ಮಾತಿಲ್ಲೆ. ಎಂಗೊಗೆ ಪಟ ತೆಗೆತ್ತವಕ್ಕೆ ಏವಾಗಲೂ ಊಟ ನೆನಪಪ್ಪದೇ ೨.೩೦, ೩ ಗಂಟೆ ಅಪ್ಪಗ. ಅಷ್ಟಪ್ಪಗ ಒಂದಾರಿ ಹೇಂಗಾದರೂ ಉಂಡಿಕ್ಕಿ ಬಪ್ಪೊ° ಹೇಳಿ ಓಡುದು ಬಫೆ ಊಟಕ್ಕೆ. ಅದು ಅನುಕೂಲಶಾಸ್ತ್ರ. ಈಗಾಣವಕ್ಕೆಲ್ಲ ಅದುವೇ ಅನುಕೂಲ. ಮಧ್ಯಾನ ೧ ಗಂಟೆಗೆ ಬರೇಕು, ಉಂಡಿಕ್ಕಿ ನೆಡೇಕು. ಮನೆ ಎಜಮಾನನತ್ರೆ ಮಾತಾಡ್ಸಲೆ ಕೂಡ ಪುರ್ಸೊತ್ತಿಲ್ಲೆ. (ಪಾಪ, ಅವಂಗೂ ಪುರ್ಸೊತ್ತಿರ್ತ್ತಿಲ್ಲೆ…!) ಎಲ್ಲಾ ಕಡೇಲಿ ಆವುತ್ತಾ ಇಪ್ಪದು. ಸತ್ಯ ಹೇಳಿದ್ದ° ಹೇಳಿ ಎನ್ನ ಬೈದಿಕ್ಕೆಡಿ ಮತ್ತೆ.

  [Reply]

  ಭೂಪಣ್ಣ

  ಭೂಪ Reply:

  ಹರೀಶಣ್ಣ
  ಎನಗೆ ಪತ ತೆಗವೊರು ಕ೦ಡರೆ ಉಮ್ಬಗ ಹೆದರಿಕೆ ಆವುತ್ಥು ಮಾರಯರೆ…
  ಸರೀ ಉ೦ಬಲೆ ಎದಿತ್ಥಿಲ್ಲೆನ್ನೆ… ಹಿಹಿಹಿಹಿ

  [Reply]

  VN:F [1.9.22_1171]
  Rating: 0 (from 0 votes)
 9. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಸುರುವಾಣ ಹ್ಂತಿಗೆ ಬಳಿಸಿ, ಒಮ್ದು ಗ್ಲಾಸು ಮಜ್ಜಿಗೆ ನೀರು ಕುಡುದು(ಅಪೆಟೈಸರು) ಎರಡ್ನೆ ಹಂತಿಲಿ ಕೂದು ಹೊಟ್ಟೆ ತುಂಬ ಉಂಡಿಕ್ಕಿ ಕೊಟ್ಟ ದಕ್ಷಿಣೆಯ ಕಿಸೆಗೆ ಹಾಕಿ ಎದ್ದರೆಯೆ ಉಂಬ ಖುಶಿ. ಬೈಪ್ಪಣೆಲಿ ಇದೆಲ್ಲ ಎಲ್ಲಿಂದ…

  [Reply]

  ಭೂಪಣ್ಣ

  ಭೂಪ Reply:

  ಕುಮಾರಣ್ಣ..
  ಹ೦ಥಿಲಿ ಬಳುಸಿ ಅಪ್ಪಗ ಮನೆ ಯಜಮಾನನ ಮೊರೆಲಿ ಒನ್ದು ಅಭಿಮಾನದ ನೆಗೆ ನೊದಿ ಅಪ್ಪಗ ಎಲ್ಲಾ ಬಚ್ಚೆಲುದೆ ಹೊವುತ್ಥು. ಅಲ್ಲದಾ..

  ಹ೦ತಿ ಊಟವೆ ಒಳ್ಲೆದು ಅಲ್ಲದಾ….

  [Reply]

  ತುಪ್ಪೆಕ್ಕಲ್ಲ ತಮ್ಮ

  ತುಪ್ಪೆಕ್ಕಲ್ಲ ತಮ್ಮ Reply:

  ಅಪ್ಪು ಹಂತಿಲಿ ಕೂದು ಅಂಗಿತೆಗದು ಶಾಲುಹೊದಕ್ಕೊಂಡು ಉಂಬಸುಖ ಬೇರೆ ಇಲ್ಲೆ

  [Reply]

  VA:F [1.9.22_1171]
  Rating: 0 (from 0 votes)
 10. ಚೆನ್ನೈ ಬಾವ°
  ಚೆನ್ನೈ ಭಾವ.

  ಭೂಪನ ಸ್ಟೈಲೇ ಲಾಯ್ಕ ಆಯ್ದಪ್ಪ.ನಿಂಗೊ ಹೇಳಿದಾಂಗೆ ನೋಡ್ಲಾದರೂ ಗಮ್ಮತಿದ್ದು. ಎಂತಾರು ಬ್ರಾಹ್ಮರ ಊಟಕ್ಕೇ ಸ್ಪೆಷಲ್ ಗತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ನೆಗೆಗಾರ°ಡೈಮಂಡು ಭಾವಪುತ್ತೂರುಬಾವಚೆನ್ನಬೆಟ್ಟಣ್ಣಗಣೇಶ ಮಾವ°ಅಜ್ಜಕಾನ ಭಾವಅನು ಉಡುಪುಮೂಲೆಪುಣಚ ಡಾಕ್ಟ್ರುದೊಡ್ಮನೆ ಭಾವದೊಡ್ಡಭಾವರಾಜಣ್ಣಬಟ್ಟಮಾವ°ಒಪ್ಪಕ್ಕಶಾ...ರೀಹಳೆಮನೆ ಅಣ್ಣಪೆರ್ಲದಣ್ಣಪಟಿಕಲ್ಲಪ್ಪಚ್ಚಿಕೇಜಿಮಾವ°ವೇಣಿಯಕ್ಕ°ಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ