Oppanna.com

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು

ಬರದೋರು :   ಹಳೆಮನೆ ಮುರಲಿ    on   29/12/2013    4 ಒಪ್ಪಂಗೊ

ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ  ಸಲ್ಲುಸಲಕ್ಕು

ಸಿ.ಪಿ.ಸಿ.ಆರ್.ಐ. ಅಥವಾ ಅಗ್ರಿ-ಹೋರ್ಟಿಕಲ್ಚರ್ ಡಿಪಾರ್ಟ್ಮೆಂಟ್, ಕೇರಳ ಅಥವಾ ಕರ್ನಾಟಕ ಅಥವಾ ಸೆಂಟ್ರಲ್ ಗವರ್ಮೆಂಟಿನ ಈ ವಿಭಾಗಂಗೊ ಅಡಕ್ಕೆಯ ಬ್ಯಾನ್ ಮಾಡುವ ವಿಚಾರಕ್ಕೆ ತಲೆ ಹಾಕಿದ್ದೇ ಇಲ್ಲೆ, ಇನ್ನು ಕೂಡಾ ಕೃಷಿಕರ ಪರವಾಗಿಯೇ ಸಮರ್ಥನಗೆ ನಿಲ್ಲುತ್ತು. ಈ ವರ್ಷವುದೇ ಬಿತ್ತಿನ ಆಡಕ್ಕೆ, ಅಡಕ್ಕೆ ಸೆಸಿಯ ಉತ್ಪಾದನೆ ಎಲ್ಲಾ ನೆಡೆತ್ತಾ ಇದ್ದು.
ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋ ನರ್ಸರಿಗೆ 4 ಸ್ಟಾರ್ ಗ್ರೇಡ್ ಸಿಕ್ಕಿಪ್ಪ ವಿಚಾರ ಬೈಲಿನವಕ್ಕೆ ಮೊದಲೇ ಹಂಚಿಕೊಂಡಿತ್ತಿದ್ದೆ.
ಜೆಂಬಾರಂಗಳಲ್ಲಿ ಮತ್ತೆ ಕಾಂಬಲೆ ಸಿಕ್ಕುವಗ ಪರಿಚಯದೋರು ಇಂಟರ್ಸೆ ಮಂಗಳ, ಕೊಕ್ಕೋ ಹೈಬ್ರಿಡ್ ಮತ್ತೆ ತೆಂಗಿನ ಸೆಸಿಯ ಬಗ್ಗೆ ವಿವರ ಕೇಳ್ತವು.
ಅದೇ ವಿಚಾರಂಗೊ ಬೈಲಿನವಕ್ಕೂ ನೆಂಟ್ರಿಸ್ಟ್ರಿಂಗೂ ಉಪಯೋಗ ಆಗಲಿ ಹೇಳಿ ಇಲ್ಲಿ ಕೆಲವು ವಿಚಾರ ಬರದ್ದೆ.
ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್ ನಗರ್, ಮಧುರಮಂಗಳ, ನಲ್ಬಾರಿ, ಜಾತಿಯ ಅಡಕ್ಕೆ ಬೀಜಂಗಳೂ, ಹಾಂಗೆಯೇ ಹೈಬ್ರಿಡ್ ಗಿಡ್ಡ ತಳಿಗಳುದೇ ಇದ್ದು.
ಗಿಡ್ಡ ತಳಿಯ ಬೀಜ ಸಿಕ್ಕುತ್ತಿಲ್ಲೆ, ಅದರ ತೊಟ್ಟೆಯ ಸೆಸಿಗೊ ಮಳೆಗಾಲಲ್ಲಿ ಸಿಕ್ಕುಗು.
ಎರಡು ಬಗೆಯ ಗಿಡ್ಡ ಹೈಬ್ರಿಡ್ ಇದ್ದು. ವಿ.ಟಿ.ಎಲ್.ಎ.ಎಚ್-1 ಮತ್ತೆ ವಿ.ಟಿ.ಎಲ್.ಎ.ಎಚ್-2.
ಹೆಚ್ಚಿನ ಶಿಫಾರಸು ಇಂಟರ್ಸೆ ಮಂಗಳ, ಮೋಹಿತ್ ನಗರ್ ಮತ್ತೆ ಮಧುರ ಮಂಗಳಕ್ಕೇ ಮಾಡುವದು.
ಊರ ಅಡಕ್ಕೆಯ ಬೀಜವೂ ಸಿಕ್ಕುತ್ತು.
ಬಿತ್ತಿನ ಅಡಕ್ಕೆ/ ಸೆಸಿ ಬೇಕಾದವು ವಿಟ್ಲ ಸಿ.ಪಿ.ಸಿ.ಆರ್. ಐ. ಗೆ ಅಪೇಕ್ಷೆ ಹಾಕ್ಲಕ್ಕು.
ಪ್ರಭಾರಿ ವಿಜ್ಞಾನಿಗೆ ಅಪೇಕ್ಷೆ ಹಾಕಿರೆ ಸಾಕು. ಸ್ವಂತ ಕೈಲಿ ಬರದ ಅಪೇಕ್ಷೆ ಸಾಕು.

ಮುಖ್ಯಸ್ಥರು, ಸಿ.ಪಿ.ಸಿ.ಆರ್. ಐ. ಸ್ಥಾನೀಯ ಕೇಂದ್ರ,
ವಿಟ್ಲ, ದ.ಕ, ಕರ್ನಾಟಕ – 574 243
ಫೋನ್: 08255 – 239238/ 239222,
ಈ-ಮೇಲ್: cpcrivtl@gmail.com
ಸಿ.ಪಿ.ಸಿ.ಆರ್. ಐ. ಸಂಶೋಧನಾ ಕೇಂದ್ರ,
ಕಿದು, ಬಿಳಿನೆಲೆ, ನೆಟ್ಟಣ ಪೋಸ್ಟ್,
ಪುತ್ತೂರು ತಾಲೂಕು, ದ.ಕ.
ಕರ್ನಾಟಕ

(ಉಪ್ಪಿನಂಗಡಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಪ ದಾರಿಲಿ) ಕೂಡಾ ಈ ಅಡಕ್ಕೆಯ ತಳಿಗೊ ಸಿಕ್ಕುತ್ತು.
ಬೀಜದ ಸಂಗ್ರಹಣಗೆ ಹೋಪಗ ಅಲ್ಲಿಯೇ ದರ ಪಾವತಿ ಮಾಡ್ಲಕ್ಕು. ಈ ಎರಡು ಕಡೆಂದಲೂ ಕೊಕ್ಕೋ ಬೀಜ, ಸೆಸಿ ಕೂಡಾ ಸಿಕ್ಕುತ್ತು.
ಫೋನ್: 08251 262355/262221,
ಈ-ಮೇಲ್: cpcrirckidu@gmail.com
ತೆಂಗಿನ ಸೆಸಿ ಬೇಕಾದವು ಬಿಳಿನೆಲಗೆ ಅಥವಾ ಕಾಸರಗೋಡು ಹೆಡ್ಡಾಫೀಸಿಂಗೆ ಅಪೇಕ್ಷೆ ಹಾಕ್ಲಕ್ಕು. ಕಾಸರಗೋಡಿಲ್ಲಿ ಕೆಂದಾಳಿ (ಸಿ.ಓ.ಡಿ), ಕೇರ ಚಂದ್ರ, ಚಂದ್ರ ಸಂಕರ, ಚಂದ್ರ ಕಲ್ಪ, ಕಲ್ಪ ಪ್ರತಿಭ, ಕಲ್ಪ ಧೇನು, ಮುಂತಾದ ತೆಂಗಿನ ಸೆಸಿಗಳೂ ಸಿಕ್ಕುತ್ತು.
CPCRI ಕಾಸರಗೋಡಿನ ವಿಳಾಸ:

ನಿರ್ದೇಶಕರು,
ಸಿ.ಪಿ.ಸಿ.ಆರ್. ಐ.,
ಕೂಡ್ಲು ಪೋಸ್ಟ್,
ಕಾಸರಗೋಡು,
ಕೇರಳ – 671124
ಫೋನ್: 04994 232895/232894,
ಈ-ಮೇಲ್: cpcri@nic.in
ಸಿ.ಪಿ.ಸಿ.ಆರ್.ಐ. ಯ ವೆಬ್ ಸೈಟ್:  www.cpcri.gov.in
ಅಧಿಕೃತವಾಗಿ ತೆಂಗು, ಅಡಕೆ, ಕೊಕ್ಕೋ ತಳಿ ಉತ್ಪಾದನೆ ಮಾಂತ್ರ ಸಿ.ಪಿ.ಸಿ.ಆರ್.ಐ.ಲಿ ಇಪ್ಪದು.
ಬೇರೆ ತರಕಾರಿ, ಹಣ್ಣು ಹಂಪಲು ಬೀಜ ಮತ್ತೆ ಸೆಸಿಗೊಕ್ಕೆ ಹಾರ್ಟಿಕಲ್ಚರ್ ಡಿಪಾರ್ಟ್ಮೆಂಟಿನೋರ ಸಂಪರ್ಕ ಮಾಡಿ.

~~~~
ಅವಕಾಶಂಗಳ ಎಲ್ಲ ಸದುಪಯೋಗಕ್ಕಾಗಿ ಆಶಿಸುವ,
ಹಳೆಮನೆ ಮುರಳೀಕೃಷ್ಣ
H. Muralikrishna
Technical Information Officer
PME Cell
Central Plantation Crops Research Institute
Kudlu PO, Kasaragod – 671 124
Phone: 04994 232895 extn 255
232893, 232894, 233090
Mobile: 09447439503
home e-mail: hmkrishna@bsnl.in

4 thoughts on “ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು

  1. ಈ ವರ್ಷ ತೆಂಗಿನ ಸೆಸಿಗೆ ಹೆಚ್ಚು ಡಿಮಾಂಡ್ ಇದ್ದು. ಅಪೇಕ್ಷೆ ಹಾಕುಲೆ ತಡವಾದರೆ, ಒಳ್ಳೆ ಸೆಸಿ ಸಿಕ್ಕದ್ದೆ ಇಪ್ಪ ಸಂದರ್ಭ ಬಕ್ಕು.

    1. ಬೈಲಿಂಗೆ ಮದಲೇ ತಿಳುಶಿಕೊಟ್ಟದು ಒಳ್ಳೆದಾತು, ಮುರಳಿ ಅಣ್ಣ.
      ಅಗತ್ಯ ಇಪ್ಪವು ಅಂಬೆರ್ಪಿಲಿ ಮುಂದುವರಿಯೇಕು – ಹೇದು ನಮ್ಮ ಕೋರಿಕೆ.

      1. ಮಳೆಗಾಲ ಸುರು ಆದ ಮೇಲೆ ಸಾಮಾನ್ಯವಾಗಿ ಕೃಷಿಕರು ಬತ್ತವು ಗೆಡು ಕೇಳಿಕೊಂಡು. ಅಷ್ಟಪ್ಪಗ ಒಳ್ಲೆದಿಪ್ಪ ವೆರೈಟಿಗಳೂ, ಗೆಡುಗಳೂ ಬುಕ್ ಆಗಿರ್ತು. ಹಾಂಗಾಗಿ ಬೈಲಿಲ್ಲಿಪ್ಪವಕ್ಕೆ ಅಲ್ಲದ್ರೂ ಅವರ ನೆರೆಕರೆಯವಕ್ಕೆ ಈ ವಿಚಾರ ಹಂಚಿಕೊಂಬದರಿಂದ ನಮ್ಮವಕ್ಕೆ ಅವಕಾಶ ಮತ್ತೆ ಉಪಯೋಗ ಅಕ್ಕು.

  2. ಹರೇರಾಮ, ಸಕಾಲಿಕ ಸೂಚನೆ ಭಾವಯ್ಯ. ಅಂದ್ರಾಣ ಹಾಂಗೆ ಕಾಸರಗೋಡಿಲ್ಲಿ ಹೆಮ್ಮಕ್ಕೊಗೆ ಎಂತಾರು ಚಟುವಟಿಕೆ ಇದ್ದರೆ ಹೇಳಿದರೆ ಒಳ್ಲೆದು ಸಂದರ್ಭ ಸರಿಯಾದರೆ ಭಾಗವಹಿಸಲಕ್ಕನ್ನೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×