ದಿಲ್ಲಿ ಯಾತ್ರೆ

ಮನ್ನೆ ಹತ್ತು -ಹದ್ನೈದು ದಿನಂಗಳ ಹಿಂದೆ ಆನು ಡೆಲ್ಲಿಗೆ ಹೋಯೆಕಾಗಿ ಬಂತು.  ಅದರ ಬಗ್ಗೆ ರಜ್ಜ ಮಾತಾಡುವೊ ಹೇಳಿ ಆಯಿದು.
ಈ ನಮ್ಮ ದೇಶದ ಒಂದು ವಿಶೇಷ ನೋಡಿ, ಒಂದು ಊರಿಂಗೆ ಒಂದೊಂದು ಭಾಷೆಲಿ ಒಂದೊಂದು ನಮುನೆಯ ಹೆಸರು.
ನಮ್ಮ ಕೊಡೆಯಾಲಕ್ಕೆ ಎಷ್ಟು ಹೆಸರು! ಹಾಂಗೆ ಈ ಡಿಲ್ಲಿಗುದೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗೊ ಇದ್ದಲ್ಲದ? ಇರಳಿ,ಆ ವಿಷಯ ಇನ್ನೊಂದರಿ ಮಾತಾಡುವೊ.
ಆನು ಹೋಯೆಕ್ಕಾಗಿದ್ದದು ಒಂದು ಗೋರ್ಮೆಂಟ್ ಕಾರ್ಯಕ್ರಮ; ಅದು ಭಾಷೆಗೆ ಸಂಬಂಧಪಟ್ಟದೆ. ಆದರೆ, ಗೋರ್ಮೆಂಟ್ ಕಾರ್ಯಕ್ರಮ ಆದ ಕಾರಣ “ಗೋರ್ಮೆಂಟಾಲಿಟಿ” ಹೇಳಿ ಒಂದಿದ್ದನ್ನೆ, ಅದುಇಪ್ಪದು ಸಾಮಾನ್ಯ.
ಹಾಂಗಾಗಿ ೨೧ಕ್ಕೆ ಕಾರ್ಯಕ್ರಮ ಇದ್ದರೆ ೧೧ಕ್ಕೆ ಎನಗೆ ಅವರ ಕಾಗತ ಬಂತು. ರೈಲಿಂಗೆ ನಾವು ಸುಮಾರು ಮದಲೇ ಬುಕ್ಕೆಕ್ಕಾವುತ್ತಿದ ಸಮಯ ಅಪ್ಪಗ ಹೋದರೆ ಆವುತ್ತ? ಅಂತೂ ಆನು ಬುಕ್ಕುವಗ ಹೋಪಲೂ ಬಪ್ಪಲೂ ಕಾವ ಪಟ್ಟಿಲಿ ೯ -೧೦ ಹೀಂಗೆ ಸಿಕ್ಕಿತ್ತು(ವೈಟಿಂಗ್ ಲಿಸ್ಟ್).
ಸೀಟು ನಿಘಂಟು ಆಗದ್ರೆ ಹೋಪಲೆ ಇಲ್ಲೆ ಹೇಳಿ ಅಂದಾಜಿ ಮಾಡಿತ್ತಿದ್ದೆ, ಎಂತಕೆ ಹೇಳಿರೆ ವಿಮಾನಕ್ಕೆ ಕೇಳಿ ನೋಡಿ ಅಪ್ಪಗ ೬೦೦೦ ಸಾವಿರಂದ ಮೆಲೆ ಆವುತ್ತು ಹೇಳಿ ಆತು. ಅದರ ಕೈಂದ ಹಾಕಿ ಹೋಯೆಕ್ಕು ಹೇಳಿರೆ ರಜ ಬೇಜಾರ ಇದ!
ಅವು ಕೊಡುದು ರೈಲಿಂದು ಮಾತ್ರ. ೧೯ಕ್ಕೆ ಕೊಡೆಯಾಲಂದ ಉದಿಯಪ್ಪಗ ೬ ಗಂಟಗೆ ಹೆರಡುವ ರಾಜಧಾನಿ ಎಕ್ಸ್ ಪ್ರೆಸ್ ಟಿಕೇಟು ತೆಗದ್ದು ಆನು. ಅದು ತಿರ್ವನಂತಪುರಂದ ಬಪ್ಪ ರೈಲು.

೧೬ ತಾರೀಕಿಂಗೆವರೆಗುದೆ ಸೀಟು ನಿಘಂಟು ಆಗಿತ್ತಿಲ್ಲೆ. ಕಾವಪಟ್ಟಿಲಿ ನಾಕರವರೆಗೆ ಬಂದಿತ್ತು. ಮುನ್ನಾಣಿ ದಿನ ನೋಡುವಗ ಸೀಟು ನಿಘಂಟು ಆಗಿತ್ತು.

hora nota

ರೈಲು ಜೋರು ಹೋಗಿಯೋಂಡಿತ್ತು, ಪಟತೆಗವಲೆ ಎಡಿಗಾಯಿದಿಲ್ಲೆ!

೧೯ ತಾರೀಕಿಂಗೆ ಉದಿಯಪ್ಪಗ ಕಾಲು ಗಂಟೆ ಮದಲೇ ರೈಲು ಕಂಕನಾಡಿಗೆ ಬಂತು. ಎನ್ನ ಬೋಗಿ ಹತ್ತರೆ ಹೋಯೆಕ್ಕರೆ ಸುಮಾರು ನಡೇಕ್ಕಾಗಿ ಬಂತು. ಒಟ್ಟು ಸುಮಾರು ೪೫ ಸೀಟು ಇಪ್ಪ ಆ ಬೋಗಿಲಿ ನೊಡಿರೆ ೧೫-೧೬ ಜನ ಇತ್ತಿದ್ದವು.
ಅದು ವಾತಾನುಕೂಲಿತ ಎರಡು ಮಂಚದ್ದು. (ಎ.ಸಿ. ೨ ಟೈರ್ ) ಬೊಂಬಾಯಿ ಹತ್ರಾಣ ಪನ್ವೇಲಿಂಗೆ ವರೆಗೆ ಆನಿದ್ದ ಕೋಣೆಲಿ (ಕಂಪಾರ್ಟ್ ಮೆಂಟಿಲಿ) ಆನೊಬ್ಬನೇ ಇದ್ದದು. ಅಲ್ಲಿಂದ ಒಬ್ಬ ಬಂದ. ಅವ ಡೆಲ್ಲಿ ವರೆಗು ಇತ್ತಿದ್ದ. (ಅವನ ವಿಷಯ ಮತ್ತೆ ಹೇಳ್ತೆ).
ಇಷ್ಟು ಖಾಲಿ ಎಂತ ಹೇಳಿ ಎನಗೆ ಆಶ್ಚರ್ಯ. ಆನು ಇದ್ದ ಕಂಪಾರ್ಟ್ ಮೆಂಟಿಲಿ ಅಕೇರಿವರೆಗುದೆ ಎಂಗೊ ಇಬ್ರೇ ಇದ್ದದು. ಇಡೀ ಬೋಗಿಲಿ ೧೫-೧೬ ಜನಂದ ಹೆಚ್ಚು ದೆಲ್ಲಿವರೆಗೂ ಇತ್ತಿಲ್ಲೆ.
ಅಂಬಗ ಅಷ್ಟು ಜನ ಟಿಕೇಟು ರದ್ದು ಮಾಡುದು ಎಂತಕೆ? ಅದಕ್ಕೆ ಒಂದು ಕಾರಣ ಇದು ಆದಿಕ್ಕು; (ಇದು ಮಾಂತ್ರ ಹೇಳಿ ಅಲ್ಲ). ಗೊರ್ಮೆಂಟಿಂದ ಅಥವಾ ಆಫೀಸಿಂದ ಕೆಲವು ಜನಕ್ಕೆ ಟಿಕೇಟಿನ ಪೈಸೆ ರಿಫಂಡ್ ಆವುತ್ತಿದ.
ಅಂಥೋರು ೨ಟೈರ್ ಎ. ಸಿ. ಟಿಕೇಟು ತೆಗದು (ಜೆರಾಕ್ಸ್ ಮಾಡಿ) ಮಡಿಕ್ಕೊಂಡು ಮತ್ತೆ ರದ್ದು ಮಾಡಿ ಸಾಮಾನ್ಯ ಸ್ಲೀಪರ್ ಕ್ಲಾಸಿಲಿ ಹೋಪ ಬುದ್ಧಿವಂತಿಕೆ ಮಾಡ್ತವು. ಪೈಸೆ ಸುಮಾರು ಒಳಿತ್ತನ್ನೆ.!

ಎನಗೆ ಹೀಂಗೆ ರೈಲಿಲಿ ಖಾಲಿ ಇದ್ದಷ್ಟೂ ಖುಶಿ. ಎಂಥಕೆ ಹೇಳಿರೆ ಆರಾಮಲ್ಲಿ ಒರಗುಲಕ್ಕನ್ನೆ. ಹೇಂಗಾರುದೆ ಲಾಯಿಕ ತೊಳದ ಬೆಳಿ ಹೊದಕ್ಕೆ, ತಲೆಂಬಿನ ಗವಸಣಿಕೆ, ತೊಳೆಯದ್ದ ಆರಾರೋ ಹೊದದು ಬಿಟ್ಟ ರಗ್ಗೂ ಇದ್ದನ್ನೆ?
ಎನಗೆ ರಜ ಒರಕ್ಕು ಜಾಸ್ತಿ ಹೇಳಿ ಎನ್ನ ಗೊಂತಿಪ್ಪೋರೆಲ್ಲ ನೆಗೆ ಮಾಡ್ತವು. ಆನು ಬೇಕು ಹೇಳಿಯೇ ಹೆಚ್ಚು ಒರಗುದು ಹೇಳಿ ಅವರ ಅಂದಾಜಿ. ಅವಕ್ಕೆ ಒಂದು ವಿಷಯ ಗೊಂತಿಲ್ಲೆ; ಬಲಾತ್ಕಾರಲ್ಲಿ ಆರಿಂಗಾರು ಒರಕ್ಕು ಬಕ್ಕಾ? ಅದು ಬಂದರೆ ಮಾಂತ್ರ ನಾವು ಒರಗುಲೆ ಎಡಿಗಷ್ಟೆ.
ಆನು ನಾಲ್ಕೈದು ಪುಸ್ತಕಂಗಳ ತೆಕ್ಕೊಂಡಿತ್ತಿದ್ದೆ. ಒರಗದ್ದೆ ಇಪ್ಪಗ ಓದುಲೆ ಹೇಳಿ. ಹೋಗಿ ಬಪ್ಪನ್ನಾರವುದೆ ಅದರ್ಲಿ ಒಂದರನ್ನುದೆ ಓದಿ ಮುಗಿಶಿ ಆಯಿದಿಲ್ಲೆ ಹೇಳುವ ಗುಟ್ಟಿನ ಆರತ್ರೂ ಹೇಳಿದ್ದಿಲ್ಲೆ ಇಷ್ಟ್ರವರೆಗೆ. 😉

ಅಂತೂ ಆನು ಮನಿಕ್ಕೊಂಡು ಕೂದುಗೊಂಡು ಹೇಳಿಯೆಲ್ಲ ಹೊತ್ತೋಪಗ ೬ ಗಂಟಗೆ ಪನ್ವೇಲಿಂಗೆ ಎತ್ತಿತ್ತು. ಅದು ದೆಲ್ಲಿಯ ಸಿಬ್ಬಂದಿಗೊ ಇದ್ದ ರೈಲಾದ ಕಾರಣ ಅದರ್ಲಿ ಉದಿಯಪ್ಪಾಣ ತಿಂಡಿ ಊಟ ಎಲ್ಲ ಡೆಲ್ಲಿ ಕ್ರಮದ್ದೆ.
ರಾಜಧಾನಿ ರೈಲಿಲಿ ಊಟ ಕಾಪಿ ಎಲ್ಲ ದರ್ಮಕ್ಕೇ. ಟಿಕೇಟಿಲೇ ಅದರ ಪೈಸೆ ತೆಕ್ಕೊತ್ತವನ್ನೆ. ಉದಿಯಪ್ಪಗ ಬ್ರೆಡ್ಡುದೆ ಕಟ್ಲೆಟ್ಟುದೆ. ಉದಿಯಪ್ಪಗ ಆರೋ ಏಳೋ ಉದ್ದಿನ ದೋಸೆ, ಹದ್ನೈದೋ ಇಪ್ಪತ್ತೊ ಮಜ್ಜಿಗೆ ಸುಟ್ಟವು ತಿಂದು ಅಬ್ಯಾಸ ಆದ ನವಗೆ ಅವರ ಒಂದು ತುಂಡು ಬ್ರೆಡ್ಡು ಒಂದು ಕಟ್ಲೆಟ್ಟು ಎಲ್ಲಿಗೆ ನಾಟುತ್ತು?
ಆದರೆ ಹನ್ನೊಂದು ಗಂಟೆ ಅಪ್ಪಗ ಒಂದು ಜಂಪಿನ್ನೋ ಫ್ರೂಟಿಯೋ ಎರಡು ಮೂರು ಕಾರಕಡ್ಡಿ ಹಾಂಗಿದ್ದ ತುಂಡುದೆ ಅದಕ್ಕೆ ಸೋಸುದೆ ಕೊಟ್ಟವು. ಎಂತ ಕೊಟ್ರು ತಿನ್ನಲೇಬೇಕನ್ನೆ? ಇಲ್ಲದ್ರೆ ಪೈಸೆ ಕೊಟ್ಟದಕ್ಕೆ ನಷ್ಟ ಅಲ್ಲದೋ?
ಮನೆಲಿ ಆದರುದೆ ಹಾಂಗೆ ಅಲ್ಲದೋ ತಿಂದು ಹೊಟ್ಟೆ ಹಾಳಾದರುದೆ ತೊಂದರೆ ಇಲ್ಲೆ ಮಾಡಿದ್ದು ಒಳುದು ಹಾಳಪ್ಪಲಾಗ ಇದ! ನಾಯಿಗೆ ಹಾಕುಲಕ್ಕು ಹೇಳಿರೆ ನಾಯಿ ಎಲ್ಲಿದ್ದು ಈಗ ಪೇಟೆಲಿ?
ಅಂತೂ ಮದ್ಯಾನ ಊಟಕ್ಕೆ ವೆಜ್ಜೋ ನೋನ್ ವೆಜ್ಜೋ ಕೇಳಿದವು. ವೆಜ್ಜು ಹೇಳಿದೆ. ಗಸಿಯ ಹಾಂಗಿದ್ದದು ಒಂದು ಲಯಿಕ ಇತ್ತು. ಎರಡು ಚಪಾತಿ ಇತ್ತು. ಚಪಾತಿ ಮಾಡ್ಳೆ ಅವಕ್ಕೆ ಏನೂ ಅರಡಿತ್ತಿಲ್ಲೆ ಹೇಳಿ ಮಾಡಿದ್ದೆ ಆನು.
ಹೊತ್ತೋಪಗ ಪುನಾ ಕಾರಕಡ್ಡಿಯ ಹಾಂಗಿದ್ದ ಎಂತದೋ ಸ್ನ್ಯಾಕ್ಸ್ ಇತ್ತು. ಈರಾಜಧಾನಿ ರೈಲಿಲಿ ಚಾಯ್ ಚಾಯ್ ಹೇಳಿ ಬೊಬ್ಬೆ ಹಾಕಿಗೊಂಡು ಬಪ್ಪೋರ ರಗಳೆ ಒಂದು ಇಲ್ಲೆ. ಅವು ಚಾಯ ಕೊಡ್ತವಿಲ್ಲೆ.
ಬೆಶಿ ನೀರು ,ಒಂದೊಂದು ಸ್ಯಾಚೆ ಶಕ್ಕರೆ, ಚಾಯದ ಹೊಡಿ, ಹಾಲಿನ ಹೊಡಿ ಕೊಡುದು. ಚಾಯ ಲಾಯಿಕ ಇಲ್ಲೆ ಹೇಳಿ ಬಂಗಾಳದ ಮಮತತ್ತೆಯ ಬೈವಲಿಲ್ಲೆನ್ನೆ; ಚಾಯ ನಿಂಗಳೇ ಮಾಡಿದ್ದು ಹೇಳ್ಳಕ್ಕನ್ನೆ?

ಪನ್ವೇಲಿಲಿ ಮೋಹನ ಹೇಳುವ ಒಬ್ಬ ಹತ್ತಿ ಎನ್ನ ಶಯನಾಸನದ (ಬರ್ತ್) ಎದುರಾಣ ಶಯನಾಸನಲ್ಲಿ ಆಸೀನ ಆದ. ಹೆಸರು ಮತ್ತೆ ಗೊಂತಾದ್ದು ಹೇಳುವೊ. ಅವ ಶ್ರೀನಗರಕ್ಕೆ ಆರಿಂಗೋ ಟ್ರೈನಿಂಗು ಕೊಡ್ಳೆ ಹೋಪೋನು.
ಇರುಳಾಣ ಊಟಕ್ಕೆ ನೋನ್ ವೆಜ್ಜು ಹೇಳಿ ಅವ ಹೇಳಿದ. ಅವಂಗೆ ಒಳ್ಳೆತ ಮಾತಾಡೆಕ್ಕು. ಅವಂದು ಸ್ಮಾರ್ಟ್ ಕಾರ್ಡಿನ ಯಾವದೋ ಕಂಪೆನಿ. ಆ ಕಾರ್ಡಿನ ಬಗ್ಗೆ ಎನಗೆ ಸುಮಾರು ವಿಷಯಂಗೊ ಗೊಂತಾತು.
ಊಟ ಬಪ್ಪಂದ ಮದಲೇ ಎಂಗಳ ಬೋಗಿಯ ಸಹಾಯಕ ಬಂದು ಅವನತ್ರೆ ಎಂತದೋ ಗುಟ್ಟಿಲಿ ಕೇಳಿದ. ಎನಗೆ ಅಂದಾಜಿ ಆತು ಹೇಳುವೊ. “ದೋ ಟಿನ್ ಔರ್ ಏಕ್ ಬಾಟ್ಲ್ ” ಹೇಳಿ ಹೇಳಿದ ಎನ್ನ ಹೊಸ ದೋಸ್ತಿ.
ರಜ ಹೊತ್ತಪ್ಪಗ ಒಂದು ವಸ್ತ್ರಲ್ಲಿ ಮುಚ್ಚಿ ತಂದು ಕೊಟ್ಟ ಒಂದು ಟಿನ್ ಬೀರು. ಅಂಬಗ ಬಾಕಿದ್ದದು? ಅದು ಮತ್ತೆ ಎನಗೆ ಗೊಂತಾತು ಇದು ಮುಗುದಾಂಗೆ ಅದು ಬಪ್ಪದು ಎಂತಕೆ ಹೇಳಿರೆ ಚಿಲ್ಲ್ ಆಗಿ ಇರೆಕ್ಕನ್ನೆ?

“ಪ್ಲೀಸ್ ಗಿವ್ ಕಂಪೆನಿ ” ಹೇಳಿ ಹೇಳಿದ ಎನ್ನತ್ರೆ. ಎನಗೆ ಅಬ್ಯಾಸ ಇಲ್ಲೆ ಇದ. ಎನಗೆ ಬೇಡ ಹೇಳಿ ಹೇಳಿದೆ. ಎನಗೆ ವೆಜ್ಜು ಅವಂಗೆ ನೋನ್ ವೆಜ್ಜು ಊಟವೂ ಬಂತು ರಜ ಹೊತ್ತಪ್ಪಗ.
ಅಷ್ಟಪ್ಪಗ ಒಂದು ಟಿನ್ ಮುಗುದು ಎರಡ್ನೆ ಟಿನ್ ಕೂಡ ಬಂದಿತ್ತಿದ್ದು. ಎಂಟೂವರೆಂದ ಹತ್ತೂವರೆ ವರೆಗುದೆ ಅವನ ಊಟ, ಟಿನ್, ಬಾಟ್ಳಿ, ಮುಗಿವಲೆ ಬೇಕಾತು.
ಅಕೇರಿ ಅಕೇರಿ ಅಪ್ಪಗ ಅವನ ಒತ್ತಾಯ
ಜೋರು ಜೋರು ಆಗಿತ್ತಿದ್ದು. ಎನಗೆ ಅದರ ಅನುಭವ ಇಲ್ಲೆ ಹೇಳಿದೆ. ಇದು ಅನುಭವ ಪಡವಲೆ ಒಳ್ಳೆ ಅವಕಾಶ ಹೇಂಗೂ ಆರಿಂಗುದೆ ಗೊಂತಪ್ಪಲಿಲ್ಲೆ ಹೇಳಿ ಅವನ ವಾದ.
ಬದುಕಿಲಿ ಎಲ್ಲ ಅನುಭವವುದೆ ಬೇಕು ಹೇಳಿ ಅವನ ವಾದ. ” ಆನು ಬದ್ಕಿಲಿ ಎಂತ ಸಾಧಿಸದ್ರೂ ಎಷ್ಟೋ ಫ್ರೆಂಡುಗಳ ಪಡದ್ದೆ ” ಹೇಳಿದ ಅವ.

ಕುಡಿವೋರಿಂಗೆ ಫ್ರೆಂಡ್ ಶಿಪ್ ಅಪ್ಪದು ಮತ್ತೆ ಒಳಿವದು ಮತ್ತೆ ಬೆಳೆವದು ಬೇಗ ಹೇಳಿ ಎನಗು ಮದಲೇ ಅಂದಾಜಿ ಇತ್ತು.
ಅದಲ್ಲದ್ರೆ ಬೀಡಿ ಸಿಗ್ರೇಟು ಆದರೂ ಬೇಕು . ಎಂತ ಇಲ್ಲದ್ರೆ ಎಲೆ ತಿಂಬದೋ ಹೊಡಿ ಎಳವದೋ ಆದರೂ ಬೇಕು. ಒಟ್ಟಾರೆ ಹೇಳುದಾದರೆ ಇರುಳು ಕೂದು ಕುಡಿವ ಕಾರಣ ಜೀವ ಕೊಡುವ ಫ್ರೆಂಡುಗೊ ಎನಗೆ ಇದ್ದವು ಹೇಳುದು ಆ ಮೋಹನನ ತಾತ್ಪರ್ಯ.
ಎಲ್ಲದರ ಅನುಭವ ಬೇಕು ಹೇಳುದು ಮೇಲ್ನೋಟಕ್ಕೆ ಸರೀ ಕಾಣುತ್ತು. ಆದರೆ ಆನು ಹೇಳಿದೆ ” ಬದುಕಿಲಿ ಕುಡಿಯದ್ದೇ ಇಪ್ಪ ಮಾಂಸ ತಿನ್ನದ್ದೇ ಇಪ್ಪ ಅನುಭವವು ಅನುಭವವೇ ಅಲ್ಲದ” ಅವಂಗೆ ಅಪ್ಪು ಹೇಳಿ ಕಂಡತ್ತೋ ಗೊಂತಿಲ್ಲೆ.
ಪುನಾ ಎನ್ನತ್ರೆ “ನಿನ್ನ ಫುಲ್ ಹೆಸರು ಎಂತ” ಕೇಳಿದ. “ಗಿರೀಶ ಭಟ್ ” ಹೇಳಿದೆ. ಓ! ಯು ಆರ್ ಭಟ್, ಇಫ್ ಐ ನ್ಯೂ ದೇಟ್ ಐ ವುಡ್ ನಾಟ್ ಹೇವ್ ಓರ್ಡೆರ್ಡ್ ದಿಸ್ ಹೇಳಿ ಹೇಳಿ ಒಂದು ಹತ್ತು ಸರ್ತಿ ಸೋರಿ ಹೇಳಿದ.
ನೀನು ತಿನ್ನು ,ಕುಡಿ ಎನಗೆಂತ ತೊಂದರೆ ಇಲ್ಲೆ ಮಾರಾಯಾ ಹೇಳಿ ಹೇಳಿ ಎನಗೆ ಸಾಕಾಗಿ ಹೋತು. ಹಾಂಗಿದ್ದ ದೋಸ್ತಿ ಬಿಸ್ಕೂಟು ಕೊಟ್ಟಪ್ಪಗ ತಿನ್ನದ್ದೆ ಇಪ್ಪಲೆ ಆವುತ್ತ? (ಅಪರಿಚಿತರು ಕೊಟ್ಟದರ ತಿಂಬಲಾಗ ಹೇಳಿ ಎಷ್ಟು ಬೋರ್ಡ್ ಹಾಕಿದರೂ)

ಅಂತೂ ೧೯ಕ್ಕೆ ಉದಿಯಪ್ಪಗ ಹೇರಟೋನು ೨೦ಕ್ಕೆ ಮದ್ಯಾನ ೧-೩೦ಕ್ಕೆ ದೆಲ್ಲಿಯ ನಿಜಾಮುದ್ದೀನ್ ಸ್ಟೇಶನ್ನಿಲಿ ಇತ್ತಿದ್ದೆ.

ಬಾಕಿ ವಿಷಯ ಇನ್ನೊಂದರಿ ಮಾತಾಡುವೊ ಆಗದ?

ಅಜಕ್ಕಳ ಮಾಷ್ಟ್ರಣ್ಣ

   

You may also like...

5 Responses

 1. ಖಂಡಿತಾ, ಈ ಅಜಕ್ಕಳ ಮಾಷ್ಟಣ್ಣ ಇಷ್ಟು ದಿನ ಎತ್ಲಾಗಿ ಹೋಗಿತ್ತಿದ್ದವಪ್ಪಾ ಹೇಳಿ ಬೈಲಿಲ್ಲಿ ತಲೆಬಿಸಿ ಮಾಡ್ಯೊಂಡು ಇತ್ತಿದ್ದೆಯೊ°. ಈಗ ಸಿಕ್ಕಿದವು, ಓದಿ ಖೊಷಿ ಆತು…

 2. ಅಜ್ಜಕಾನ ರಾಮ says:

  ಸುದ್ದಿ ಲಾಯ್ಕ ಆಯಿದು.

  ಮಾಷ್ಟ್ರು ಭಾವ ನಿಂಗ ಮೊದಲೇ ಬಂಡಾಡಿ ಅಜ್ಜಿ ಹತ್ರೆ ಹೇಳಿದ್ದರೆ ನಾಕು ದಿನಕ್ಕಪ್ಪ ತಿಂಡಿ ಮಾಡಿ ಕೊಡ್ತಿತ್ತು. ಅಜ್ಜಿಗೆ ಎಂಟತ್ತು ದಿನ ಹಾಳಾಗದ್ದ ಹಾಂಗೆ ಇಪ್ಪ ತಿಂಡಿಗಳೂ ಗೊಂತಿದ್ದು. ಇನ್ನಾಣ ಸರ್ತಿ ಹೋಪಗ ಮರೆಯದ್ದೆ ಕೇಳಿ ಅಜ್ಜಿಯತ್ರೆ.

 3. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಲೇಖನ ಓದುವಾಗ ರೈಲಿನ ಒಳ ಕೂದೊಂಡು ಹೋದ ಹಾಂಗೇ ಆತು. ಪೈಸೆ ಒಳುಸಲೆ ಬೇಕಾಗಿ ಆರೋ ಮಾಡುವ ಕೆಣಿಂದಾಗಿ ಅಗತ್ಯ ಇಪ್ಪವ ಟಿಕೆಟ್ ಸಿಕ್ಕದ್ದೆ ಒದ್ದಾಡುವ ಪರಿಸ್ಥಿತಿ.

 4. ಛೇ ಮಾಷ್ಟ್ರಣ್ಣ,
  ಅಂತೇ ಕಾಲಿ ಕೈಲಿ ಹೋಪದಕ್ಕೆ ಒಂದು ಗೋಣಿ ಹಳೆಡಕ್ಕೆ ತೆಕ್ಕೊಂಬಲಾವುತಿತು!!
  ಅಲ್ಲಿ ಸೇಟಿನ ಅಂಗುಡಿಗಳಲ್ಲಿ ಒಳ್ಳೆತ ರೇಟಿದ್ದಡ – ಬೇಂಕಿನ ಪ್ರಸಾದಣ್ಣ ಹೇಳಿದ್ದು..

 5. mairavakilaru says:

  inno0dari maataaDitte. gotaatallada

Leave a Reply to ದೊಡ್ಡಭಾವ Cancel reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *