Oppanna.com

ಡಾಮಹೇಶಣ್ಣಂಗೆ ಅಭಿನಂದನೆ

ಬರದೋರು :   ದೊಡ್ಡಭಾವ°    on   30/11/2010    33 ಒಪ್ಪಂಗೊ

ಮೊನ್ನೆ ಆಯಿತ್ಯವಾರ ನಮ್ಮ ಬೈಲಿನ ಹೆಮ್ಮೆಯ ಮಹೇಶಣ್ಣಂಗೆ ಅಭಿನಂದನೆ, ಹುಟ್ಟೂರಿಲಿ.
ಡಾಕ್ಟ್ರೇಟು ಮಾಡಿದ್ದಕ್ಕೋಸ್ಕರ, ಊರ, ಪರಊರ ಹೆರಿಯೋರು ಬಂದು ಮಾಡಿದ ಒಂದು ಚೆಂದದ ಕಾರ್ಯಕ್ರಮ.
ಹೆಮ್ಮೆಯ ಮಾಣಿಯ ಬಗ್ಗೆ ಚೆಂದದ ಕಾರ್ಯಕ್ರಮ ಮಾಡಿದ್ದವು ನಮ್ಮೋರು – ಎಲ್ಲೋರಿಂಗೂ ಒಳ್ಳೆತ ಕೊಶಿ ಆತು.
ಬೈಲಿನ ಕೆಲವು ಜೆನ ಹೋಗಿ ಸೇರಿಗೊಂಡವು, ಕೆಲವು ಜೆನ ದೂರಂದಲೇ ಸೇರಿಗೊಂಡವು.

ಯೇನಂಕೂಡ್ಳಣ್ಣಂಗೆ ಪಟ ತೆಗವಲೆ ಅರಡಿಗು. ದೊಡ್ಡಬಾವಂಗೆ ಬರವಲೆ ಅರಡಿಗು.
ಆ ಕಾರ್ಯಕ್ರಮಕ್ಕೆ ಹೋದ ನಮ್ಮ ದೊಡ್ಡಭಾವ ಕಾರ್ಯಕ್ರಮದ ವರದಿ ಬರದು ಶುದ್ದಿ ಹೇಳಿದವು; ಯೇನಂಕೂಡ್ಳಣ್ಣ ಪಟ ತೆಗದು ಬೈಲಿಂಗೆ ತೋರುಸುತ್ತವು.
ಇಬ್ರೂ ಸೇರಿಗೊಂಡು ಕೂಡುಸಿ ಬೈಲಿಂಗೆ ತಿಳುಶುತ್ತ ಚೆಂದದ ಶುದ್ದಿ ನಿಂಗೊಗೆ ಇಲ್ಲಿದ್ದು.
ಓದಿ, ನಿಂಗೊಗೆ ಒಪ್ಪ ಕೊಡ್ಳೆ ಅರಡಿಗೋ ನೋಡಿ, ಆತೋ?
ಏ°?
~
ಒಪ್ಪಣ್ಣ
ಎನ್ನ ಮೆಟ್ಟು ಕಾಣೆ…
ಪಂಜಿಕಲ್ಲು ಗಡೀಲಿ ಒಂದು ಮೀಟಿಂಗು, ಮಧ್ಯಾಹ್ನ ಅಪ್ಪಗ ಅದರ ಮುಗುಶಿಕ್ಕಿ ಅಲ್ಲಿಂದ ಹೆರಟು ಪಳ್ಳತ್ತಡ್ಕಲ್ಲಿ ಒಂದು ಗೌಜಿ ಮದುವೆಗೆ ಹೋದೆ.
ಸರಿಯಾಗಿ ಉಂಬಲೂ ಪುರುಸೊತ್ತಿಲ್ಲೆ.
ಬೈಲಿನ ಡಾಮಹೇಶಣ್ಣನ ಅಭಿನಂದನೆ ಕಾರ್ಯಕ್ರಮಕ್ಕೆ ಹೆರಡ್ತ ತರಾತುರಿಲಿ ಬೀಸಬೀಸ ಉಂಡಿಕ್ಕಿ ಹೆರಟೆ,
ಆ ಗೌಜಿಲಿ ಎನ್ನ ಮೆಟ್ಟು ಕಾಣೆ.
ಮದುವೆಗೆ ಕೆಪ್ಪಣ್ಣ ಭಾವನೂ, ವೇಣೂರಣ್ಣನೂ ಬಂದಿತ್ತಿದ್ದವು, ಅವಕ್ಕೆ ಎನ್ನಂದಲೂ ಹೆಚ್ಚು ಪುರುಸೊತ್ತು ಇತ್ತಿಲ್ಲೆ.
ಹಾಂಗಾಗಿ ಮೆಟ್ಟು ಹುಡ್ಕುಲೆ ಎಡಿಗಾಯಿದಿಲ್ಲೆ.
ಇನ್ನು ಮೆಟ್ಟು ಹುಡ್ಕಿಂಡು ಕೂದರೆ ಆಗ, ಡಾಮಹೇಶಣ್ಣನ ಕಾರ್ಯಕ್ರಮ ತಪ್ಪುಸುವ ಪ್ರಶ್ನೆಯೇ ಇಲ್ಲೆ ಹೇಳಿಂಡು ಹೆರಟೆ.
ಅದು ಭಾರೀ ಒಳ್ಳೆದಾತು.
ಡಾಮಹೇಶಣ್ಣನ ಅಭಿನಂದನೆ ಕಾರ್ಯಕ್ರಮ ಅಷ್ಟೂ ಚೆಂದ ಆಗಿದ್ದತ್ತು.
ಮೆಟ್ಟು ಸಿಕ್ಕದ್ದರೆ ಹೋಗಲಿ, ಇನ್ನೊಂದು ತೆಗವಲಕ್ಕು.
ಡಾಮಹೇಶಣ್ಣನ ಊರವೆಲ್ಲ ಸೇರಿ ಗುರುತುಸುತ್ತ ಸುರುವಾಣ ಕಾರ್ಯಕ್ರಮ ಇನ್ನೊಂದರಿ ಸಿಕ್ಕ, ಅಲ್ಲದೋ…
ಹೊತ್ತಿಂಗೆ ಸರಿಯಾಗಿ ಎತ್ತಿದ ಕಾರಣ, ಒಳ್ಳೆ ಜಾಗೆ ನೋಡಿ ಕೂದುಗೊಂಬಲೆ ಎಡಿಗಾತು.
ನಾವು ಕಲ್ತ ಹಳೇ ಶಾಲೆ ಆದ ಕಾರಣ ಅಲ್ಲಿ ಇಲ್ಲಿ ನಿಂದಂಡು ಪಟ ತೆಗಕ್ಕೊಂಬಲೂ ಎಡಿಗಾತು ಹೇಳಿದ ಯೇನಂಕೂಡ್ಳು ಅಣ್ಣ°.
ಕಾರ್ಯಕ್ರಮ ಸುರೂವಿಂಗೆ ಪ್ರಾರ್ಥನೆ, ಯೇವದೋ ಕೂಸು ಹಾಡಿದ್ಸು ಹೇಳಿ ಗೊಂತಾತು.
ಜೆನ ನಮ್ಮ ನಿರೀಕ್ಷೆಂದ ಹೆಚ್ಚು ಸೇರಿರೆ, ಕೆಲವು ಸರ್ತಿ ಹಾಂಗೆಯೇ…
ನವಗೆ ಸ್ಟೇಜಿಲ್ಲಿ ಕೂದವರ ಸರೀ ಕಾಂಬಲೆ ಎಡಿತ್ತಿಲ್ಲೆ ಹೇಳಿ ತೋರಿತ್ತು.
ಹಾಂಗಾಗಿ ದೂರ ಕೂದೊಂಡಿದ್ದವ° ರೆಜಾ ಹತ್ತರಂಗೆ ಹೋದೆ.
ಬೈಲಿನೋರು ಬಂದರೆ ಆತಾನೆ… ಹೇಳಿಂಡು ನಾಕು ಕುರ್ಚಿಗೆ ಎನ್ನ ಶಾಲು ಹಾಕಿ ಮಡಿಕ್ಕೊಂಡೇ, ಗುರ್ತಕ್ಕೆ.
ಡಾ|ನಿಟಿಲಾಪುರ ಕೃಷ್ಣಮೂರ್ತಿ ಹೇದರೆ ಉಡುಪಿಯ ಜ್ಯೋತಿಷ್ಯ ವಿದ್ವಾಂಸ°.
ನಮ್ಮ ಡಾಮಹೇಶಣ್ಣನ ಎದುರೆ ಕೂರುಸಿಯೊಂಡು ಶಾಲು ಹೊದೆಸಿ ಸಂಮಾನ ಮಾಡಿದವು.
ಒಟ್ಟಿಂಗೆ ಅಭಿನಂದನೆ ಪತ್ರವೂ…
ಪುಣ್ಯಕ್ಕೆ ಓಡಿಗೊಂಡು ಬಂದ ಗಣೇಶಮಾವ°, ಬಲ್ನಾಡು ಮಾಣಿ, ಶ್ರೀ ಅಕ್ಕಂಗೆ ಈ ಸಂದರ್ಭ ಕಾಂಬಲೆ ಸಿಕ್ಕಿಗೊಂಡತ್ತು.
ಖೊಷಿ ಆತು…
ನೆಗೆಗಾರ ಬಂದಿದ್ದರೆ, ಎಂಡೋಸಲ್ಪಾನು ತಳುದ ಏಪುಲುವಿನ ಮೇಲೆ ಕಣ್ಣು ಮಡುಗುತ್ತೀತನೇನೋ…
ಎನಗೆ ಅದೆಲ್ಲ ಗೊಂತಾಯಿದಿಲ್ಲೆ.
ಅವರದ್ದೆಲ್ಲ ಆದ ಮೇಲೆ…
ಡಾಮಹೇಶಣ್ಣ ಮಾತಾಡಿದ°.
ಸಂಸ್ಕೃತಲ್ಲಿ ಸುರು ಮಾಡಿದ್ಸು ಕಂಡಪ್ಪಗ ನಮ್ಮ ಬಲ್ನಾಡು ಮಾಣಿಗೆ ಬೆಗರು ಬಿಚ್ಚಿತ್ತಡ.
ಅರ್ಥ ಆಗದ್ರೆ ಎಂತ ಮಾಡ್ಸು ಬೇಕೆ…?
ಪುಣ್ಯಕ್ಕೆ ರೆಜಾ ಕಳುದು ಕನ್ನಡಲ್ಲಿ ಭಾಷಣ ಸುರು ಆತು.
ಸಂಸ್ಕೃತದ ಪ್ರಭಾವ ಅವನ ಮೇಲೆ ತುಂಬ ಆದ ಹಾಂಗೆ ಕಂಡತ್ತು.
ತುಂಬಾ ಹೇಳಿದ್ದ°.
ಅದರ ಎಲ್ಲ ಅವ ಇನೊಂದರಿ ಇಲ್ಲಿ ಬರಗು ಹೇಳಿ ಗ್ರೇಶಿಯೊಂಬ.
ಅವ° ಮಾತಾಡುದು ಕೇಳಿ ಅಪ್ಪಗ ಮನಸ್ಸು ತುಂಬಿ ಬಂತು…
ಶ್ರೀ ಅಕ್ಕನತ್ರೆ ಇತ್ತಿದ್ದ ಮಾತು ರೆಕಾರ್ಡ್ ಮಾಡ್ತ ಮಿಷನೂ ತುಂಬಿತ್ತೋ ಏನೋ…
ಆನಂದ ಭಾಷ್ಪಲ್ಲಿ ಮಾತು ಬಾರದ್ದೆ ಅಪ್ಪದು ಹೇಳಿ ಇದ್ದಲ್ಲದೋ…
ಅವಂಗೂ ಒಂದರಿ ಹೀಂಗೇ ಆದ ಹಾಂಗೆ ಕಂಡತ್ತು.
ಹಾಂಗೆ ಅಪ್ಪದರ ಗದ್ಗದಿತ ಅಪ್ಪದು ಹೇಳುಗು ದೊಡ್ಡಮಾವ°.
ಮಹೇಶಣ್ಣನ ಮಾತು ಕೇಳಿದ ಮೇಲೆ ಮತ್ತೆ ಎಲ್ಲವೂ ಚೆಪ್ಪೆಯೇ…
ಪಾಪ, ನಿಟಿಲಾಪುರದ ಹಿರಿಯವು ಇದ್ದವಲ್ದೋ ಅವ್ವು, ಆನು ಶಿವರಾಮ ಕಾರಂತಂಗೇ ಬುದ್ಧಿ ಕಲುಶಿದ್ದೆ ಹೇಳಿ ಬಡಾಯಿ ಕೊಚ್ಚಿಗೊಳ್ಳುತ್ತ ಹಾಂಗೆ ಕಂಡತ್ತು.
ಮಹೇಶಣ್ಣಂಗೆ ಆದರೆ ಆ ಪ್ರಸಂಗವೇ ಬಯಿಂದಿಲ್ಲೆ.
ಅವನ ಸಾಧನೆಯ ರೆಜ್ಜ ಮಾಂತ್ರ ಊರ ಜೆನಂಗೊ ಅರ್ಥ ಮಾಡಿಗೊಂಡದು ಹೇಳಿ ತೋರಿತ್ತು ಎನಗೆ.
ಎಲ್ಲ ಮುಗುಶಿಕ್ಕಿ ಅಲ್ಲಿಂದ ‘ಆನಂದ ಸಾಗರ’ಕ್ಕೆ ಹೆರಟೆಯೊ°.
ಆದಷ್ಟು ಬೇಗ ಡಾಮಹೇಶಣ್ಣ ಸಂಮಾನಲ್ಲಿ ಭಾಗಿ ಅಪ್ಪ ಹಾಂಗೆ ಆಗಲಿ ಹೇಳಿ ಹಾರೈಸಿಯೊಂಡು…

ಯೇನಂಕೂಡ್ಳಣ್ಣ ತೆಗದ ಸುಂದರ ಪಟಂಗೊ ಇಲ್ಲಿದ್ದು:

ಚೆಂದದ ಪಟ ತೆಗದು ಕಳುಸಿಕೊಟ್ಟ ಯೇನಂಕೂಡ್ಳಣ್ಣಂಗೆ ನಮಸ್ಕಾರಂಗೊ.

33 thoughts on “ಡಾಮಹೇಶಣ್ಣಂಗೆ ಅಭಿನಂದನೆ

  1. ನಿ೦ಗಳ ಎಲ್ಲರ ಆನ೦ದಕ್ಕೆ ಎನ್ನ ವ೦ದನೆಗ.

    ಈ ಪ್ರೋತ್ಸಾಹದ ಕಾರ್ಯಕ್ರಮ ಆಯೆಕು ಹೇಳಿ ಶುರು ಹಚ್ಚಿದ ನಾರಾಯಣ ಶರ್ಮರು ಕಾರ್ಯಕ್ರಮ ಮುಗಿವಲ್ಲಿವರೆಗೆ ದಿನಾ ಚುಳ್ಳಿಕ್ಕಾನ ಕೃಷ್ಣಪ್ಪಚ್ಚಿಗೆ ಫೊನು ಮಾಡಿ ವ್ಯವಸ್ಥೆ ವಿಚಾರಿಸಿಯೊ೦ಡಿದ್ದಿದ್ದವಡ. ಆರೋ ಕೇಳಿದವಡ ‘ಅವರಿಗೆ ಮಹೇಶ ಏನಾಗ್ಬೇಕು? ಏನು ಸ೦ಬ೦ಧ?’ ಹೇಳಿ. ಚುಳ್ಳಿಕ್ಕಾನದವು ಹೇಳಿದವಡ ’ಅದು ಸ೦ಸ್ಕೃತಾಭಿಮಾನ’ ಹೇಳಿ! ನಾರಾಯಣ ಶರ್ಮರ ಹಾ೦ಗಿಪ್ಪ ಹಿರಿಯ ಹಿತೈಷಿಗೊ ಎನಗೆ ಆಶೀರ್ವಾದ ಮಾಡಿದ್ದು ಆನು ಸ೦ಸ್ಕೃತ ಹೇಳುವ ಒಳ್ಳೆ ವಿಷಯದ ಹತ್ತರೆ ಇದ್ದ ಕಾರಣವೇ ತಾನೆ! ಒಳ್ಳೆಯವರ ಹತ್ತರೆ ಮಾಡೆಕಾರೆ ಒಳ್ಳೆ ವಿಷಯ೦ಗಳ ಹತ್ತರೆ ಹೋದರೆ ಸಾಕದ!!
    ಚುಳ್ಳಿಕ್ಕಾನದ ಕೃಷ್ಣ ಭಟ್ರು, ಪಿಲಿ೦ಗುಳ ಕೃಷ್ಣ ಭಟ್ರು ಸೇರಿ ಸುಮಾರು ತಿರುಗಿ ಬೇರೆ ಬೇರೆ ಶಾಲೆಯವರ ಸೇರುಸಿ ಶರ್ಮರ ಆಶಯವ ಸಾಕಾರ ಮಾಡಿದವು, ತು೦ಬಾ ಶ್ರಮ ವಹಿಸಿದ್ದವು. (ಇವರ ಬೇರೆ ಸುಮಾರು ಸತ್ಕಾರ್ಯ ವೈವಿಧ್ಯ೦ಗಳ ಬಗ್ಗೆ ಹೇಳೆಕು ನಿ೦ಗೊಗೆ, ಬತ್ತೆ ಒ೦ದರಿ ಪುರುಸೊತ್ತಿಲ್ಲಿ). ಇವ್ವೆಲ್ಲ ಕಾರ್ಯಕ್ರಮಲ್ಲಿ ತಮ್ಮ ತಾವು ವೇದಿಕೆಗೆ ಹತ್ತಿಸಿಕೊಳ್ಳದ್ದೆ ಸಭೆಲ್ಲಿ ಕೂದೇ ಆಸ್ವಾದಿಸಿದ್ದವು!!

    ಒಟ್ಟಿಲ್ಲಿ ಎಲ್ಲೋರಿ೦ಗುದೆ ಕೊಶಿ ಆಯಿದು. 🙂 ಒಪ್ಪಣ್ಣ೦ಗೆ, ನಿ೦ಗೊಗೆಲ್ಲ ಆನು ತು೦ಬಾ ಕೃತಜ್ನ ಆಗಿರೆಕು.
    ಅಭಿನ೦ದನೆಯ ಸಾರ್ಥಕ ಮಾಡುವ ಜವಾಬ್ದಾರಿ ಎನ್ನ ಮೇಲೆ ಇದ್ದು ಹೇಳಿ ಅರ್ಥ ಆವ್ತಾ ಇದ್ದು.

  2. ಮಹೇಶಣ್ಣ ಅಭಿನಂದನೆಗೊ….
    ದೊಡ್ಡಬಾವ ವರದಿ ಲಾಯ್ಕಾ ಆಯಿದು ಹಾಂಗೆ ಏನಂಕೂಡ್ಳಣ್ಣನ ಪೋಟೊವುದೇ..ಪೆಂಗಣ್ಣ ಸುದ್ದಿ ಬರವ ಕ್ರಮ ಅವ° ಇತ್ತಿದಾಲ್ಲೆಯಾಳಿ ಕಾಣ್ತು ಇರಲಿ.. ದೊಡ್ಡ ಭಾವ ನಿಜವಾಗಿಯೂ ಆನು ಆ ಕಾರ್ಯಕ್ರಮವ ಮಿಸ್‌ ಮಾಡಿಕೊಂಡೆ….ಕಾರಣ ನಿಂಗೊಗೆ ಗೊಂತಿದ್ದು.. ಹೇಳಿದಾಂಗೆ ಅಕೇರಿಗೆ ಮುದ್ದು ಮಂದಿರಲ್ಲಿ ಅನಾಥ ಮೆಟ್ಟೊಂದು ಬಿದ್ದುಕೊಂಡು ಇತ್ತಿದು 🙂

  3. ಮಹೇಶಣ್ಣ ಅಭಿನಂದನೆಗೊ….
    ದೊಡ್ಡಬಾವ ವರದಿ ಲಾಯ್ಕಾ ಆಯಿದು ಹಾಂಗೆ ಏನಂಕೂಡ್ಳಣ್ಣನ ಪೋಟೊವುದೇ..ಪೆಂಗಣ್ಣ ಸುದ್ದಿ ಬರವ ಕ್ರಮ ಅವ° ಇತ್ತಿದಾಲ್ಲೆಯಾಳಿ ಕಾಣ್ತು ಇರಲಿ.. ದೊಡ್ಡ ಭಾವ ನಿಜವಾಗಿಯೂ ಆನು ಆ ಕಾರ್ಯಕ್ರಮವ ಮಿಸ್‌ ಮಾಡಿಕೊಂಡೆ….ಕಾರಣ ನಿಂಗೊಗೆ ಗೊಂತಿದ್ದು.. ಹೇಳಿದಾಂಗೆ ಅಕೇರಿಗೆ ಮುದ್ದು ಮಂದಿರಲ್ಲಿ ಅನಾಥ ಮೆಟ್ಟೊಂದು ಬಿದ್ದುಕೊಂಡು ಇತ್ತಿದು 🙂

  4. ದೊಡ್ಡ ಭಾವ ಮೆಟ್ಟು ಹೋದರೆ ಹೋಗಲಿ (ನಿನ್ನ ಮೆಟ್ಟು ಹೇಳಿ ಹೇಳಿದ್ದಲ್ಲ)ನೀನು ಯೇನೆ೦ಕೋಡ್ಲು ಮಾಣಿಯೂ ಸೇರಿ ಒಳ್ಳೆ ಒ೦ದು ಲೇಖನವೂ ಒಳ್ಳೆ ಪಟವೂ ಹಾಕಿದ್ದರಲ್ಲಿ ಬಯಲಿನೋರಿ೦ಗೆ ಮಹೇಶನ ಸನ್ಮಾನದ ಶುದ್ದಿ ಗೊ೦ತಾತದ.ಹಾ೦ಗಾಗಿ ಮೆಟ್ಟಿನ ಚಿ೦ತೆ ಬಿಟ್ಟಿಕ್ಕಿ.ಬಿ೦ಗಿ ಮಾಣಿಯ ಕಾಲಿಲ್ಲಿಯೋ ನಮ್ಮ ಬೋಸ ಭಾವನ ಕಾಲಿಲ್ಲೆಯೋ ತಪ್ಪಿ ಹೋಗಿ ಬಯಿ೦ದೋ ನೋಡಿಯೋಳಿ.ಒಪ್ಪ೦ಗಳೊಟ್ಟಿ೦ಗೆ.

  5. ಡಾಮಹೇಶಣ್ಣ ನ ಹುಟ್ಟೂರ ಸನ್ಮಾನಲ್ಲಿ ಭಾಗವಹಿಸಿದ್ದು ಎನಗೆ ತುಂಬಾ ಕೊಷಿ ಆತು…ಮನೆಯವರ ಸಂತೋಷ,ದೊಡ್ಡ ಭಾವನ ಬರವಣಿಗೆ,ಯೇನಂಕೂಡ್ಳ ಭಾವಂದು ಪಟಂಗ,ಪೆರ್ವದ ಗಣೇಶ ಭಾವಂದು ವಿದ್ಯಾರ್ಥಿ ಜೀವನದ ಅನುಭವಂಗ,ಶ್ರೀ ಅಕ್ಕನ ಪ್ರೋತ್ಸಾಹದ ಮಾತುಗ ಎಲ್ಲವೂ ತುಂಬಾ ಕೊಷಿ ಆತು.
    ಡಾಮಹೇಶಣ್ಣ,,, ಗುರುಗ,ದೇವರ,ಹೆರಿಯೋರ ಆಶೀರ್ವಾದ ಬಲಂದ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಂಸ್ಕೃತದ ಆತ್ಮವ ಉದ್ದೀಪನ ಮಾಡಿ ನಮ್ಮ ಸಮಾಜಲ್ಲಿ ಸನಾತನ ಸಂಸ್ಕೃತಿ ಮತ್ತೆ ಬೆಳಗಲಿ.
    ಎಲ್ಲೋರಿಂಗೂ ಧನ್ಯವಾದಂಗೋ…

  6. ಸುಂದರ ಪಟ ತೆಗದು, ಬೈಲಿಂಗೆ ಚೆಂದದ ಶುದ್ದಿಯ ಸಮಯಕ್ಕೆ ಕೊಟ್ಟ ದೊಡ್ದಭಾವಂಗೂ,ಯೇನಂಕೂಡ್ಳಣ್ಣಂಗೂ ಧನ್ಯವಾದ.
    ಕಾರ್ಯಕ್ರಮಲ್ಲಿ ಭಾಗವಹಿಸುವ ಯೋಗ ಎನಗಿತ್ತಿಲ್ಲೆ,ಆದರೆ ಈ ಸಚಿತ್ರ ವರದಿ ನೋಡಿ ಅಪ್ಪಗ ಮಹದಾನಂದ ಆತು. ನಮ್ಮ ನೆಡುಕೆ ಇಪ್ಪ ಮಹೇಶ° ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಹೇಳುವ ಮಾತಿನ ಮತ್ತೆ ನೆನಪ್ಪಿಸಿದ್ದ.(ಮೂರ್ತಿ ಅವನ ಅಣ್ಣ,ಕೀರ್ತಿ- ಅಕ್ಕ).ಮಹೇಶ°ನವಗೆ,ನಮ್ಮ ಮುಂದಿನ ಪೀಳಿಗೆಗೆ ಒಬ್ಬ ಮಾದರಿ ವ್ಯಕ್ತಿ ಆಗಿ ಮುಂದೆ ನೆಡೆತ್ತಾ° ಇದ್ದ°.ಅವಂಗೆ ಇನ್ನೂ ಹೆಚ್ಚಿನ ಸಾಧನೆಗಳ ಸಾಧಿಸುವ ಶಗುತಿ ದೇವರು ದಯಪಾಲಿಸಲಿ,ಇನ್ನೂ ಹೆಚ್ಚಿನ ಎತ್ತರಕ್ಕೆ ಏರಿ ವಿಶ್ವಮಾನವ ಆಗಲಿ.

  7. ಡಾ|ಮಹೇಶನ ಸಾಧನೆ ಇನ್ನೂ ಮುಂದುವರಿಯಲಿ. ಹುಟ್ಟೂರಿಲ್ಲಿ ಗುರುತಿಸಿದ ಹಾಂಗೇ ದೇಶ ವಿದೇಶಲ್ಲಿ ಗುರುತಿಸುವ ಹಾಂಗೆ ಬೆಳೆಯಲಿ.
    ಈಗಾಣ ಮಕ್ಕೊಗೆ ಸಂಸ್ಕೃತ ಕಲಿವಲೆ ಇವನ ಸಾಧನೆ ಸ್ಪೂರ್ತಿ ಕೊಡಲಿ.
    ಇನ್ನೂ ಹೆಚ್ಚು ಹೆಚ್ಚು ಜೆನಂಗೊ ಇದೇ ರೀತಿ ಸಾಧನೆ ಮಾಡಿ ಸಮಾಜಕ್ಕೂ, ದೇಶಕ್ಕೂ ಕೀರ್ತಿ ತರಲಿ.

  8. ಡಾ.ಮಹೇಶಣ್ಣನ ಅಭಿನಂದನಾ ಕಾರ್ಯಕ್ರಮದ ವರದಿಯ ದೊಡ್ಡ ಬಾವ ಲಾಯಕಿಲ್ಲಿ ಮಂಡಿಸಿದ್ದ. ಕಿಶೋರನ ಪಟಂಗಳು ಪೂರಕವಾಗಿ ಇದ್ದು. ಕಾರ್ಯಕ್ರಮವೂ ಲಾಯಕಾಗಿಕ್ಕು. ಮಹೇಶಣ್ಣನ ಸಾಧನೆಗಳ ನಿಜವಾಗಿ ಎಷ್ಟು ಹೊಗಳಿರು ಸಾಲ. ಹವ್ಯಕ ಸಮಾಜಕ್ಕೆ ಕೀರ್ತಿ ತಂದು ಕೊಟ್ಟ ಮಹೇಶಣ್ಣಂಗೆ ಅಭಿನಂದನೆಗೊ. ಸಭೆಯ ಬಗ್ಗ್ಗೆ, ಅದರಲ್ಲಿ ಭಾಗವಹಿಸಿದವು ಎಂತ ಹೇಳಿದವು ಹೇಳ್ತರ ಬಗ್ಗೆ ಇನ್ನೂ ವಿವರವಾಗಿ ಭಾವಯ್ಯ ಕೊಟ್ಟಿದ್ದಿದ್ದರೆ ಕಾರ್ಯಕ್ರಮಕ್ಕೆ ಬಪ್ಪಲೆ ಎಡಿಗಾಗದ್ದ ಎಂಗಳ ಹಾಂಗ್ರುತ್ತವಕ್ಕೆ ರಜಾ ಉಪಕಾರ ಆವುತ್ತಿತು.

    1. ಮಾವಾ,ಕ್ಷಮೆ ಇರಳಿ.ಔಪಚಾರಿಕ ನೆಲೆಗಟ್ಟಿನ ಕಾರ್ಯಕ್ರಮದ ವರದಿ ಬರವಷ್ಟು ಪುರುಸೊತ್ತು ಸಿಕ್ಕಿದ್ದಿಲ್ಲೆ,ಹೊಸಾ ಮೆಟ್ಟು ತೆಗವಲೆ ಹೋವ್ತ ಗೌಜಿಲಿ…!

      1. ಮೆಟ್ಟಿಜೋಡಿನ ಅಂಗುಡಿಗೆ ಹೋದಿರೋ?
        ’ಜೋಡಿಗೆ ಬಂದದ್ದು’ – ಹೇಳಿದರೆ ಕಷ್ಟ ಅಕ್ಕು! 😉
        ಮನೆಲಿ ದೊಡ್ಡಕ್ಕ ದೊಡ್ಡ ಲಟ್ಟಣಿಗೆ ಹಿಡಿಗು ಮತ್ತೆ!

        1. ನಗೆಭಾವ, ದೊಡ್ಡಭಾವ° ಹಾಂಗೆ ಹೇಳಿದ್ದಾ ಇಲ್ಲೆಡ, ಅಂಗಡಿಗೆ ಹೋಗಿ “ನನಗೆ ಮೆಟ್ಟುಬೇಕು” ಹೇಳಿದ್ದಡ .. 😉

          1. ಆದರ್ಶೋ…? ಹಾಂಗೆ ಕನ್ನಡಲ್ಲಿ ಹೇಳಿರೆ ಎಲ್ಲ ಅಂಗುಡಿ ಮನುಷ್ಯಂಗೆ ಅರ್ಥ ಅಪ್ಪ ಊರು ಅಲ್ಲಾನೆ ಇದು…!

          2. ಓ,ಅಲ್ಲಿ ಚೆರ್ಪು ಕೇಳಿರೆ ಕೇರ್ಪು ಹತ್ತುಗು ಅಲ್ಲದೋ ದೊಡ್ಡಭಾವ?

  9. ಅ೦ದು —
    ೧೪-೧೫ ವರ್ಷ ಮೊದಲು ಮಹೇಶನುದೆ ಆನುದೆ ಬೇರೆ ೨ ಜನ ಹುಡುಗರುದೆ ಸೇರಿಗೊ೦ಡು ಸ೦ಸ್ಕೃತ ಸ೦ಭಾಷಣಾ ಶಿಬಿರದ ಸಮಾರೋಪ ಸಮಾರ೦ಭಲ್ಲಿ ಬದಿಯಡ್ಕ ಗಣೇಶ ಮ೦ದಿರಲ್ಲಿ ಒ೦ದು ಸಣ್ಣ ಏಕಾ೦ಕ ನಾಟಕ ಮಾಡಿತ್ತಿದ್ದೆಯೊ೦. ಅ೦ದು ಶ್ರೀ ನಿಟಿಲಾಪುರ ಕೃಷ್ಣಮೂರ್ತಿಯವು (ಅಧ್ಯಕ್ಷರೋ, ಪ್ರಭಾಷಣಕಾರರೋ ಹೇಳಿ ನೆ೦ಪಿಲ್ಲೆ) ವೇದಿಕೆಲಿ ಇತ್ತಿದ್ದವು, ಅವರ ಭಾಷಣ ಆನುದೆ ಮಹೇಶನುದೆ ಕೆಳದಿಕೆ ಕೂದ೦ಡು ಕೇಳಿದ್ದದು… (ಮೆರವಣಿಗೆ ಹೋದ್ದದು, ಘೋಷಣೆ ಕೂಗಿ ದೊ೦ಡೆ ಬಚ್ಚಿಯಪ್ಪಗ ಮಜ್ಜಿಗೆ ನೀರು ಕುಡುದ್ದ್ದದು ಎಲ್ಲ ಮಹೇಶ೦ಗುದೆ ನೆ೦ಪಿಕ್ಕು ಹೇಳಿ ಅ೦ದಾಜು.. 🙂 ..)

    ಇ೦ದು—

    ಅದೇ ನಿಟಿಲಾಪುರ ಕೃಷ್ಣಮೂರ್ತಿಗಳು ಮಹೇಶನ ಶಾಲು ಹೊದೆಸಿ, ಫಲವಸ್ತುಗಳ ಕೊಟ್ಟು ವೇದಿಕೆ ಮೇಲೆ ಸಮಾನ ಸ್ಥಾನಲ್ಲಿ ಕೂರಿಸಿಗೊ೦ಡು ಸಮ್ಮಾನ ಮಾಡುತ್ತವು. ಅವನ ಸಾಧನೆಗಳ ಬಾಯ್ತು೦ಬ ಹೊಗಳಿದ್ದವಾಯಿಕ್ಕು.. ಎನಗೆ ಕೆಳದಿಕೆ ಸಭಾಸದರಲ್ಲಿ ಒಬ್ಬನಾಗಿ ಕೂಪಲೂ ಕೂಡ ಅವಕಾಶ ಇಲ್ಲೆ. ಆದರೂ ಅ೦ತರ್ಜಾಲವೂ, ನಮ್ಮ ಬೈಲೂ, ದೊಡ್ಡಭಾವನೂ ಇಪ್ಪ ಕಾರಣ ಇದರ ಶುದ್ದಿಯ ಆದರೂ ನೋಡ್ಳೆ ಎಡಿಗಾತು.. ಸ೦ತೋಷ ಮತ್ತು ಧನ್ಯವಾದ೦ಗೊ. ಮಹೇಶ೦ಗೆ ಪ್ರೀತಿಪೂರ್ವಕ ಅಭಿನ೦ದನೆಗೊ..

  10. ಒಬ್ಬ° ಮಾಡಿದ ಸಾಧನೆಯ ಊರೋರು ಗುರುತಿಸಿ ಅದರ ಗೌರವಿಸುತ್ತವು ಹೇಳಿದರೆ ನಿಜವಾಗಿಯೂ ಸಂತೋಷದ ಸಂಗತಿಯೇ!!!
    ನಮ್ಮ ಮಾಣಿ ಮಾಡಿದ ಸಾಧನೆಯ ಅವನ ಊರಿನವ್ವು, ಅವ ಕಲ್ತ ಶಾಲೆಲಿಯೇ, ಕಲಿಶಿದ ಗುರುಗಳೇ, ಊರೋರ ಒಟ್ಟಿನ್ಗೆ ಸೇರಿ ಸಂಘಟಿಸಿ ಮನೆಯೋರ, ಬಂಧುಗಳ, ಆತ್ಮೀಯ ಮಿತ್ರರ ಎದುರು, ದೊಡ್ಡ ವಿದ್ವಾಂಸರಿಂದ ಶಾಲು ಹೊದೆಸಿ ಸಮ್ಮಾನ ಮಾಡಿ, ಅವನ ಬಗ್ಗೆ ನವಗೆ ಗೊಂತಿಲ್ಲದ್ದ ಇನ್ನೂ ಒಳ್ಳೆಯ ಮಾತುಗಳ ಹೇಳಿ ಅಭಿನಂದಿಸಿದ ಕಾರ್ಯಕ್ರಮ ಮನಸ್ಸು ತುಂಬಿತ್ತು.
    ನಾವು ಎಷ್ಟೇ ಸಾಧನೆ ಮಾಡಿದರೂ, ನಮ್ಮ ಹೆತ್ತವರ ಮನಸ್ಸು, ಕಣ್ಣು ತುಂಬಿದರೆ ನಾವು ಮಾಡಿದ ಸಾಧನೆಗೆ ನಿಜವಾದ ಅರ್ಥ ಬಪ್ಪದು ಹೇಳಿ ಎನ್ನ ಅನಿಸಿಕೆ. ಮೊನ್ನೆ ಆ ದೃಶ್ಯವ ಕಾಂಬ ಅವಕಾಶ ಎನಗೆ ಸಿಕ್ಕಿತ್ತು.
    ನಮ್ಮ ಮಾಣಿಯ ಮಾತುಗೋ ಅವನ ಹೆತ್ತೋರ ಮನಸ್ಸು ತುಂಬಿ, ಕಣ್ಣು ತುಂಬಿ ಬಂದ ಆ ಕ್ಷಣ. ಎನಗೆ ಆ ಕಾರ್ಯಕ್ರಮಲ್ಲಿ ಅತೀ ಹೆಚ್ಚು ಮನಸ್ಸಿಂಗೆ ಇಳುದ, ಯಾವತ್ತೂ ನೆನಪ್ಪಿಲಿ ಮಾಡಿಕ್ಕೊಂಬ ಹಾಂಗೆ ಆತು. ಆ ಕಾರ್ಯಕ್ರಮ ಸಂಘಟಿಸುಲೇ ನಮ್ಮ ದೊಡ್ಡ ಭಾವ° ಸುರುವಾಣ ಕಲ್ಲು ಮಡುಗಿದ್ದು. ಮತ್ತೆ ಅದು ಬೆಳದತ್ತು. ಹಾಂಗೆ ಇಂಥಾ ಅಪೂರ್ವ ಅವಕಾಶ ಒದಗಿಸಿದ ಎಲ್ಲೋರಿಂಗೂ ಧನ್ಯವಾದ.
    ಡಾಮಹೇಶಣ್ಣ ಇನ್ನುದೇ ಸಾಧನೆಗಳ ಮಾಡಲಿ. ನಮ್ಮ ಮುಂದಾಣ ಮಕ್ಕೊಗೆ ಡಾಗುಟ್ರು ಮದ್ದು ಕೊಡ್ಲೆ ಮಾತ್ರ ಅಲ್ಲ ವಿದ್ವತ್ತಿಲೂ ಡಾಗುಟ್ರು ಅಪ್ಪಲಕ್ಕು, ನಮ್ಮ ಸಂಸ್ಕೃತಿಯ ಒಳಿಶಿ, ಬೆಳೆಶಿ ಮಾದರಿ ಅಪ್ಪಲಕ್ಕು ಹೇಳಿ ತೋರ್ಸಲಿ. ನಮ್ಮ ಮಕ್ಕಳೂ ಹೀಂಗಿಪ್ಪ ಸಾಧನೆ ಮಾಡಿ ನಮ್ಮ ಮನೆಗೆ, ಊರಿಂಗೆ, ಸಮಾಜಕ್ಕೆ ಕೀರ್ತಿ ತರಳಿ.
    ಡಾಮಹೇಶಣ್ಣ ಇನ್ನುದೇ ಸುಪ್ತವಾಗಿಪ್ಪ ನಮ್ಮ ಹಿರಿಯರ ಅನರ್ಘ್ಯ ರತ್ನಂಗಳ ಹೆರ ತಂದು ಜಗತ್ತಿನ ಮುಂದೆ ಮಡುಗುವ ಅವಕಾಶಂಗ ಸಿಕ್ಕಲಿ. ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯ ಆಳದ ಪರಿಚಯ ಮಾಡಿ ಕೊಡುವ ಹಾಂಗೆ ಆಗಲಿ ಹೇಳಿ ಹಾರೈಸುತ್ತೆ.
    ಶ್ರೀ ಗುರುಗಳ, ದೇವರುಗಳ, ಹಿರಿಯರ ಅನುಗ್ರಹ ಅವನ ಮೇಲೆ ಇದ್ದು ಇನ್ನುದೇ ಸಾಧನೆಯ ಮೆಟ್ಟಲೇರಲಿ. ಶುಭವಾಗಲಿ.

    1. (@ಅವ ಕಲ್ತ ಶಾಲೆಲಿಯೇ, ಕಲಿಶಿದ ಗುರುಗಳೇ, ಊರೋರ ಒಟ್ಟಿನ್ಗೆ ಸೇರಿ …)
      ಶ್ರೀ ಅಕ್ಕಾ.. ಮಹೇಶ ಕಲ್ತದು ನೀರ್ಚಾಲು ಶಾಲೆಲಿ ಅಲ್ಲದಾ..?

      1. ಡಾಮಹೇಶಣ್ಣನ ಶಾಲಾ ಜೀವನ ನೀರ್ಚಾಲಿಲ್ಲಿಯೇ ಆದ್ಸು.ಅಭಿನಂದನೆ ಕಾರ್ಯಕ್ರಮ ನವಜೀವನಲ್ಲಿ ಆದಕಾರಣ ಶ್ರೀ ಅಕ್ಕಂಗೆ ಚೂರು ತಪ್ಪಿದ್ದದಾಯಿಕ್ಕು.ಮಹಾಜನ ಅಪ್ಪಲೆ ಸಿಕ್ಕಿದ ಅವಕಾಶದ ಬಗ್ಗೆ ಮಹೇಶ ತುಂಬ ಚೆಂದಕೆ ಹೇಳಿದ್ದ°.ಈ ಹಿಂದೆಯೇ ಈ ಪುಟಂಗಳಲ್ಲಿ ಮಹೇಶನ ಬಗ್ಗೆ ತುಂಬ ವಿವರವಾಗಿ ಬಂದ ಕಾರಣ,ಆನು ಆ ವರದಿಲಿ ಮತ್ತೆ ಮಹೇಶನ ಶಾಲಾ ಜೀವನದ ಬಗ್ಗೆ ಸೇರುಸಿದ್ದಿಲ್ಲೆ.

        1. ದೊಡ್ಡಭಾವಾ.. ಆನು ಸುಮ್ಮನೆ ಕೇಳಿದ್ದಪ್ಪಾ.. ಎನಗೆ ಗೊ೦ತಿದ್ದು, ಆನುದೆ ಮಹೇಶನುದೆ ನೀರ್ಚಾಲಿಲ್ಲಿ ಕ್ಲಾಸುಮೇಟುಗೊ ಅಲ್ಲದೊ.. ಅವನ ಸಮ್ಮಾನದ ವರದಿಯ ಸುರುವಿ೦ಗೆ ನಮ್ಮ ನೀರ್ಚಾಲು ಶಾಲೆಯ ಬ್ಲೋಗಿಲ್ಲಿ ಓದಿದೆ.. ಆ ಬ್ಲೋಗು ಬರವದು ನಿ೦ಗಳೇ ಅಲ್ಲದೊ… ಒಳ್ಳೆದಾವ್ತಾ ಇದ್ದು.. ಅಭಿನ೦ದನೆಗೊ..

      2. ಗಣೇಶಣ್ಣ, ಕ್ಷಮೆ ಇರಲಿ ಬರದ್ದದು ತಪ್ಪಿದ್ದಕ್ಕೆ. ಆ ದಿನದ ಕಾರ್ಯಕ್ರಮದ ಗುಂಗು ಮನಸ್ಸಿಲಿ ಇದ್ದ ಕಾರಣ, ಅದರ ಭಾವನೆಯ ಅಭಿವ್ಯಕ್ತಿಯೇ ಅಲ್ಲಿ ಮುಖ್ಯ ಆದ ಕಾರಣ ಹಾಂಗೆ ಆದ್ದದು. ಆ ಸಮಾರಂಭ ಎಷ್ಟು ಮನಸ್ಸಿಂಗೆ ಆಪ್ತ ಅಪ್ಪ ಹಾಂಗೆ ಇತ್ತು ಹೇಳಿ ಭಾಗವಹಿದವ್ವೆ ಹೇಳೆಕ್ಕಷ್ಟೇ!! ಖಂಡಿತವಾಗಿಯೂ ಆ ದಿನ ಭಾಗವಹಿದ ಎಲ್ಲೋರಿಂಗೆ ಅದು ಹಿತ ಕೊಟ್ಟಿದು, ಆತ್ಮೀಯತೆಯ ಹೆಚ್ಚು ಮಾಡಿದ್ದು ಅಲ್ಲದ್ದೆ ನಮ್ಮ ಮಾಣಿ ಆ ಗೌರವಕ್ಕೆ ಪಾತ್ರ ಅಪ್ಪದರ ನೋಡಿ ಅಭಿಮಾನ ಪಡುವ ಅವಕಾಶ ಆಯಿದು.
        ಅವ° ಮಾತಾಡಿದ ರೀತಿ, ಅವನ ಭಾವನೆಗ, ಅಷ್ಟು ಸಾಧನೆ ಮಾಡಿದರೂ ತಾನಿನ್ನೂ ಏನೂ ಮಾಡಿದ್ದಿಲ್ಲೇ ಹೇಳುವ ಅವನ ದೊಡ್ಡಗುಣ ಎಲ್ಲವೂ ನವಗೆ ಅವನ ಇನ್ನೊಂದು ರೂಪವ ತೋರ್ಸುತ್ತು. ಬಹುಷಃ ಅವ ಬೇರೆ ಬೇರೆ ದಿಕ್ಕೆ ಪ್ರಬಂಧಂಗಳ ಮಂಡಿಸುದರ ವೀಡ್ಯ ಮಾಡಿ ಜೆನಂಗಳ ಹತ್ತರಂಗೆ ತಲ್ಪುಸುವ ಹಾಂಗೆ ಆಯೆಕ್ಕು ಹೇಳಿ ಅನಿಸಿತ್ತು ಆ ದಿನದ ಅವನ ಮಾತುಗಳ ಕೇಳುವಾಗ…
        ನಿಂಗೊ ಅವನ ಒಟ್ಟಿನ್ಗೆ ಕಲ್ತಿದಿ, ಅವನ ಬಗ್ಗೆ ಇನ್ನುದೇ ಗೊಂತಿಕ್ಕು. ಎನಗೆ ಅವನ ಬಗ್ಗೆ ಅಪಾರ ಗೌರವ ಇದ್ದು. ಅಭಿಮಾನ ಇದ್ದು.
        ಅವ° ಇನ್ನುದೇ ಮೇಲೆ ಏರೆಕ್ಕು ಹೇಳುವ ಅಭಿಲಾಷೆಯೂ ಇದ್ದು.
        @ದೊಡ್ಡ ಭಾವ°, ಧನ್ಯವಾದಂಗಾ…

        1. ಛೆ… ನಿ೦ಗೊ ಎ೦ತ ಅಕ್ಕಾ.. ಹೀ೦ಗೆ ಕ್ಷಮೆ ಎಲ್ಲ ಕೇಳಿ ಎನ್ನ ನಾಚಿಕೆ ಪಡುಸುದು?.. 🙂 ಮತ್ತೆ ಎನ್ನ ಅಣ್ಣ ಹೇಳುವದಕ್ಕಿ೦ತಲೂ ತಮ್ಮ ಹೇಳುವದಾದಿಕ್ಕು ಸರಿ.. ಆನು ಈಗಳುದೆ ಬಯಲಿಲ್ಲಿ ಸಣ್ಣ ಮಾಣಿ ಅಲ್ದಾ? ಸಣ್ಣವರ ಹತ್ತರೆ ದೊಡ್ಡವು ಹೀ೦ಗೆ ಕ್ಷಮೆ ಎಲ್ಲ ಕೇಳಲೆ ಅಕ್ಕಾ?..

          1. ಪೆರುವದ ಹಾಲು ಲಾಯಿಕಿದ್ದು ಹೇಳ್ತವು ಊರೋರು!
            ಪೆರುವದಣ್ಣನ ಮಾತುದೇ ಲಾಯಿಕಿದ್ದು ಹೇಳ್ತದು ಈಗ ಗೊಂತಾತು.

            ಏನೇ ಆಗಲಿ, ಡಾಮಹೇಶಣ್ಣಂಗೆ ಅಭಿನಂದನೆಗೊ.
            ಹೇಂಗೆ- ಆನು ಹೇಳಿದ್ದು ಸರಿಆಯಿದೋ ಇಲ್ಲೆಯೋ? ಕೈಕ್ಕಾಲು ಬಚ್ಚಿದ್ದಿಲ್ಲೆಯೋ ಅಷ್ಟೊತ್ತು ಅಂತೇ ಕೂದು!!? 😉

          2. ಅಪ್ಪು ನಗೆಭಾವ!! ಕೈಕಾಲು ಬಚ್ಚಿ, ಉದಾಸೀನ ಸುರುವಾಗಿ ಕೆಲಾವು ನುಸಿಗೊ ಸತ್ತವು .. ಮಹೇಶಣ್ಣನ ಭಾಷಣ ಸುರುವಾದಮತ್ತೆ ನುಸಿ ಕಚ್ಚಿದ್ದುದೆ ಗೊಂತಾಯ್ದಿಲ್ಲೆ.. (ಒರಗಿತ್ತಿಲ್ಲೆ ಆತಾ, ಭಾಷಣ ಕೇಳುದರಲ್ಲಿ ಮುಳುಗಿತ್ತಿದ್ದೆ! ) 😉

          3. ( ಮುಳುಗಿತ್ತಿದ್ದೆ)ಮುಳುಗಿದ್ದು ಎಲ್ಲಿ ಮಾಣಿ? ಪೆರಡಾಲ ಹೊಳೆಲಿಯೋ??

          4. ನಮ್ಮ ಬೈಲಿಲ್ಲಿ ಪಟ ಇಪ್ಪ ನೆಗೆಗಾರ° ಪಟ ಇಲ್ಲದ್ದ ನೆಗೆಗಾರ ಹೇಳಿ ಇಬ್ರು ಇದ್ದವೋ…? ಈ ನೆಗೆಗಾರನ ಪಟವೇ ಕಾಣ್ತಿಲ್ಲೆ.ಇದಾರೋ ನಮ್ಮ ನೆಗೆಗಾರಂಗೆ ಪಾರೆ ಮಡಗುಲೆ ಹೆರಟದೋ..ಹೇಳಿ ಎನಗೊಂದು ಸಂಶಯ.

          5. ಅಲ್ಲಪ್ಪ, ಎರಡುದೇ ಒಬ್ಬನೇ!
            ಪಕ್ಕನೆ ಬೆಗುಡುಮಾತಾಡಿದ್ದಕ್ಕೆ ಬೈಲಿನೋರು ಬಡುದಿಕ್ಕುದು ಬೇಡ ಹೇಳಿಗೊಂಡು ಹುಗ್ಗಿದ್ದು, ಅಷ್ಟೇ..
            ಈಗ ಬಂದೆ ಇದಾ.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×