ಎಂಗಳದ್ದು ಚೆನ್ನೈ., ನಿಂಗಳದ್ದೋ ?!

February 24, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ ಹೀಂಗೇ ಗುರುಟಿಯೊಂಡು ಇಪ್ಪಗ  ಎನಕಂಡತ್ತು – ನಾವೆಲ್ಲಿ ಇಪ್ಪದು, ಇಲ್ಲ್ಯಾಣ ವಿಶೇಷ ಎಂತರ ಹೇಳಿ ನೋಡುವ ತಿಳಿವ ಹೇದು.
ಆನು ಇಪ್ಪದು ಚೆನ್ನೈಲಿ.

ಇದು ಚೆನ್ನೈ ಯ ಕತೆ ಎಂತರ ಕೇಳಿರೆ, ಆರತ್ರೆ ಕೇಳೊದು ಹೇದು  ಯೋಚಿಸ್ವಾಗ ಗೂಗುಲ್ ಒಳ ಸಿಕ್ಕಿದ್ದು – ನೋಡಿ –  http://www.chennai.org.uk/history.html

ಇನ್ನೂ ರಜಾ ಗುರುಟಿಯಪ್ಪಗ ಸಿಕ್ಕಿದ್ದು  –

” ‘ಮದ್ರಾಸು’ ಎಂಬ ಹೆಸರು ‘ಮದ್ರಾಸುಪಟ್ನಂ’ಪದದಿಂದ ಬಂದಿದೆ, ಈ ಜಾಗವನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ ೧೬೩೯ರಲ್ಲಿ ಆಯ್ಕೆ ಮಾಡಿಕೊಂಡಿತು. ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ ‘ಚೆನ್ನಪಟ್ಟಣಂ’ ಎಂಬ ಚಿಕ್ಕ ಪೇಟೆಯಿದೆ.
ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ ‘ಮದರಾಸು’ ಬ್ರಿಟೀಷರ ಕೃಪೆಗೆ ಪಾತ್ರವಾಯಿತು. ಆದರೆ ಅಲ್ಲಿನ ಜನ ಅದನ್ನು ‘ಚೆನ್ನಪಟ್ಟಣ’ ಅಥವಾ ‘ಚೆನ್ನಪುರಿ’ ಎಂದೇ ಗುರುತಿಸುತ್ತಿದ್ದರು.
‘ಚೆನ್ನು’ ಎಂಬ ಪದ ತೆಲುಗು ಮೂಲದ ದಕ್ಷಿಣ ಮಧ್ಯ ದ್ರಾವಿಡ ಭಾಷೆಯ ಪದ ಇದರ ಅರ್ಥ “ಸುಂದರ” ಎಂದು ಹಾಗಾಗಿ ‘ಚೆನ್ನಪುರಿ’ ಅಥವಾ ‘ಚೆನ್ನಪಟ್ಟಣಂ’ ಎಂದರೆ “ಸುಂದರ ನಗರ” ಎಂದರ್ಥ.
ಈ ನಗರವನ್ನು ೧೯೯೬ ಆಗಸ್ಟ್ ತಿಂಗಳಲ್ಲಿ ‘ಚೆನ್ನೈ’ ಎಂದು ಮರುಹೆಸರಿಸಲಾಯಿತು. ‘ಮದ್ರಾಸು’ ಎಂಬ ಪದ ಪೋರ್ಚುಗೀಸ್ ಮೂಲದ್ದು. (ಭಾರತದ ಅನೇಕ ಇತರ ನಗರಗಳು ಕೂಡ ಅಂಥದೇ ಹೆಸರು ಬದಲಾವಣೆಗಳನ್ನು ಮಾಡಿವೆ.) ಮೂಲ ಪೋರ್ತುಗೀಸ್ ಹೆಸರು ಮಾದ್ರ ದೆ ಸಾಯ್ಸ್-೧೫೦೦ ರ ಅರಂಭಿಕ ವಸತಿಗಾರರಲ್ಲೊಬ್ಬ ಉನ್ನತ ಅಧಿಕಾರಿಯ ಹೆಸರು ಎಂದು ನಂಬಲಾಗಿದೆ. ಚೆನ್ನೈ ತಮಿಳು ಹೆಸರಾಗಿರಲಿಕ್ಕಿಲ್ಲ ಎಂದೂ ಮದ್ರಾಸ್ ಎಂಬುದು ತಮಿಳುಮೂಲದ್ದಾಗಿರಬಹುದೆಂದೂ ಕೆಲವರು ಹೇಳಿದ್ದಾರೆ”…

ಈ ನಮ್ಮ ಚೆನ್ನೈ ಯ ಇತಿಹಾಸ ಎಂತರ ಹೇಳಿ ತಿಳಿಯೇಕ್ಕಾರೆ ಇದಾ ಇಲ್ಲಿ ನೋಡಿ – http://kn.wikipedia.org/wiki/ಚೆನ್ನೈ

ಭಾರೀ ದೊಡ್ಡ ಪೇಟೆಯೇ ಆತೋ ಇದು. ಸೂಜಿ ನೂಲಿಂದ ಹಿಡುದು ಇಲ್ಲದ್ದಿಲ್ಲೇ ಇಲ್ಲಿ –  ಸಿಕ್ಕದ್ದಿಲ್ಲೇ ಇಲ್ಲಿ.

 ಶ್ರೀ ಸಾಮಾನ್ಯ ಲಾಗಾಯ್ತು ಸಿರಿ ಶ್ರೀಮಂತನೂ ನೆಮ್ಮದಿಲಿ ಜೀವನ ಮಾಡ್ಲೆ ಯೋಗ್ಯ ಜಾಗೆ.
ಹೇಳ್ವವು ಹೇಳುಗು ಕಂಡಾಪಟ್ಟೆ ಸೆಕೆ ಮಾರಾಯ ಅಲ್ಲಿ , ನೀರಿಲ್ಲೆ. ಅಪ್ಪೋ ಭಾವ ಈಗ ಸೆಕೆ ಇಲ್ಲದ್ದು ಎಲ್ಲಿ?
ನಮ್ಮೂರಿಲ್ಲಿ ಎಂತ ಚಿಲ್ಲರೆಯೋ? ನೀರು ಬೇಸಗೆಲಿ ನಮ್ಮೂರಿಲ್ಲಿಯೂ ಬತ್ತಿ ಹತ್ರಾಣ ಕೆರೆ ಬಾವಿ ಬೋರಿಂದ ಸಿಕ್ಕುಗೋ ಹೇಳಿ ಓಂಗುತ್ತಿಲ್ಯೋ! ಮಳೆ ಬಂದರೆ ಜಾಲ್ಸೂರೂ ಕಿರಿಂಚಿ  ಪುತ್ತುರಿಲ್ಲಿಯೂ ಎರ್ಕುತ್ತು ಸುಳ್ಳಿಯಲ್ಲಿಯೂ ಕಾಲು ಮಾಡುಕನ್ನೇಪಾ ಹೇಳಿ ಆವ್ತಿಲ್ಯೋ ಅಣ್ಣಾ.

ಪೇಟೆ ಹೇಳಿರೆ ಮತ್ತೆ ಪೇಟೆಯೇ ಇಕ್ಕಷ್ಟೆ ಪೇಟೇಲಿ. ಅಂದರೂ ಚೆನ್ನೈಯ ಬಸ್ಸು ನಿಲ್ದಾಣ, ರೈಲು ನಿಲ್ದಾಣ, ತರಕಾರಿ ಮಾರುಕ್ಕಟ್ಟೆ , ಹಣ್ಣು ಮಾರುಕಟ್ಟೆ ಇಲ್ಲಿಯಾಣದ್ದು ನೋಡ್ಲೆ ವಿಶೇಷವೇ ಆತೋ.
ಹಾಂಗೇ ಇತ್ತೀಚಿಗೆ ಬೆಳದು ನಿಂದ ಅನೇಕ ಮೇಲ್ಸೇತುವೆ , ಹಾರುವ ರೈಲು , ಸ್ಮಾರಕಕ್ಕೋ, ಬೀಚ್ , ಸಭಾ ಭವನಂಗೋ, ಕರ್ನಾಟಕ ಸಂಘ, ಮದರಾಸು ಯುನಿವರ್ಸಿಟಿ, ಪ್ರಮುಖ ದೇವಸ್ಥಾನಂಗೋ  ಇವೆಲ್ಲಾ ನೋಡೆಕ್ಕಪ್ಪಂತ ವಿಶೇಷಂಗೊ ಇಲ್ಲಿ.

ಸಂಗೀತ , ಕಲೆ, ಸಿನೆಮಾ ತಯಾರಿ ಇಲ್ಲಿ ಆಳಕ್ಕೆ ಬೇರು ಊರಿದ ವಿಷಯಂಗೊ. ಪ್ರಸಿದ್ದ ವಿದ್ವಾಂಸಂಗೊ ಇಲ್ಲಿ ಇದ್ದವು.

ಚೆನ್ನೈಲಿ ಹವ್ಯಕರ ಸಂಖ್ಯೆ ಕಡಮ್ಮೆ. ಒಂದು ಅಂಕಿ ಅಂಶ ಪ್ರಕಾರ ಸುಮಾರು ನೂರಕ್ಕೂ ಕಮ್ಮಿ ಕುಟುಂಬ ಲೆಕ್ಕಕ್ಕೆ.

ಮದರಾಸು ವಿಶ್ವ ವಿದ್ಯಾಲಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕೀರ್ತಿಪಡೆದವು ಪ್ರೊ. ಮರಿಯಪ್ಪ ಭಟ್. ಅದೆಷ್ಟು ಮಂದಿ ಅವರ ಮಾರ್ಗದರ್ಶನ, ಸಹಾಯ ಪಡಕ್ಕೊಂಡು ವಿದ್ಯಾಕ್ಷೆತ್ರಲ್ಲಿ ಹೆಸರು ಪಡದ್ದವೋ ಹೇಳೆಕಾರೆ ಎಂಗಳ ಡಾ. ಅರ್ತಿಕಜೆ ಶ್ರೀಕೃಷ್ಣ ಭಟ್ರೇ ಅಯೆಕ್ಕಷ್ಟೆ.
ಹಾಂಗೇ ಕಾನತ್ತಿಲ್ಲ ಮಹಾಲಿಂಗ ಭಟ್, ದಿ | ಡಾ. ಜೀ. ಆರ್ ಭಟ್ , ಡಾ. ಎಂ.ಜಿ ಭಟ್, ಡಾ. ಎಸ್.ಕೆ. ಭಟ್ , ಜಯಂತಿ ಪ್ರೆಸ್ ರಾಮಚಂದ್ರ ಭಟ್ ಹೀಂಗೇ ಹಲವಾರು ಮಂದಿ – ಇವೆಲ್ಲರ ಇಲ್ಲಿಯಾಣ ಸೇವೆ ಅನನ್ಯ.

ಚೆನ್ನೈಲಿ ಹವ್ಯಕ ಸಂಘ ಇದ್ದು. ಮಿತ್ತೂರು ಭೀಮ ಭಟ್ರ(ಆಡಿಟರ್) ನೇತ್ರತ್ವಲ್ಲಿ ಸಕ್ರಿಯವಾಗಿ ನಡಕ್ಕೊಂಡು ಬತ್ತಾ ಇದ್ದು ಸತತ ಕಳದ 11 ವರ್ಷಂದ.
ಅಂಬಗಂಬಗ  ಒಂದೊಂದು ಮನೆಗಳಲ್ಲಿ ಕುಂಕುಮಾರ್ಚನೆ ವಾ ಏನಾರು ಪೂಜೆ ಇತ್ಯಾದಿ ಕಾರ್ಯಕ್ರಮಂಗೋ ಹಮ್ಮಿಕೊಂಡು ತಿಂಗಳಿಗೊಂದರಿಯಾದರೂ ಒಟ್ಟು ಸೇರಿ ಅತ್ತಿತ್ತೆ ಮಾತಾಡಿಗೊಂಬಲೆ ಅವಕಾಶ ಸಿಕ್ಕುತ್ತು .
ಇದು ಎಂಗಳ ಹೆಮ್ಮೆ. ಒರ್ಷಕ್ಕೊಂದರಿ ಏ ಜಿ ಎಂ.(ANNUAL GENERAL BODY MEETING), ಪಿಕ್ನಿಕ್ , ತಿಂಡಿಮೇಳ, ಭಜನೆ  ಹೀಂಗೆಲ್ಲಾ ಕಾರ್ಯಕ್ರಮಂಗೋ ನಡೆತ್ತು.
ಶ್ರೀ ಗುರುಗಳ ಅಪ್ಪಣೆಯಂತೆ ಇಲ್ಲಿಂದಲೂ ಒಂದು ತಂಡ ತಯಾರು ಮಾಡಿ ರುದ್ರ ಕಲುತ್ತು ಶ್ರೀ ಗೋಕರ್ಣಕ್ಕೆ ಹೋಗಿ ಸೇವೆ ಸಲ್ಲಿಸಿಕ್ಕಿ ಬಯಿಂದು.

ಆನಿಪ್ಪದು ವಡಪಳನಿ ಹೇಳುವ ಜಾಗೆಲಿ.
ರೈಲ್ವೇ ಸ್ಟೇಷನ್ನಿಂದ ೧೨ ಕಿ.ಮೀ., ಕೋಯಂಬೇಡು ಮೈನ್ ಬಸ್ ಸ್ಟ್ಯಾಂಡ್ನಿಂದ ೩ ಕಿ.ಮೀ.

http://chennai.clickindia.com/travel/vadapalanitemple.html

ಬನ್ನಿ 6 ದಿನ ರಜೆ ಮಾಡಿಯೊಂಡು ಎಂಗಳ “ಶೃಂಗಾರ ಚೆನ್ನೈ“ಗೇ. (ಬಪ್ಪಗ ಕಿಸೆತುಂಬ ರುಪಾಯಿ ಮರದಿಕ್ಕೆಡಿ ಸುತ್ತಿ ತಿರುಗಿ ನೋಡ್ಲೆ.)

 

ಹಾಮ್, ಇದು ಎಂಗಳ ಚೆನ್ನೈ.
ಈಗ ನಿಂಗಳ ಊರ ಪರಿಚಯ ಮಾಡಿ ಕೊಡಿ. ಕಿದೂರು ಹೇಳಿರೆ ಹೇಂಗೆ  ದೊಡ್ಡಮಾಣಿ ಹೇದು ಸಣ್ಣ ಮಾಣಿಯೂ ಎಂತಕೆ ಹೇಳುತ್ಸು.  ಗಬ್ಬಲಡ್ಕ ಎಂತಕೆ ಎಂತಕೆ ಹೆಸರು,  ಬಂಡಾಡಿ ಹೇಳಿರೆ ಎಂತರಪ್ಪ ಚೆಂಡಾಟವೋ? ಬೊಳುಂಬು ಮುಳಿಯಾ ಉಮ್ಮ ಎಂತಕಪ್ಪಾ ಹೀಂಗೆಲ್ಲ ಹೆಸರು ಬಂತೋ?


ಹೇಳಿ , ಅತ್ತಿತ್ತೆ
ಅರ್ತೊಂಬೊ…

 
 
ಎಂಗಳದ್ದು ಚೆನ್ನೈ., ನಿಂಗಳದ್ದೋ ?!, 4.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಸುಭಗ
  ಸುಭಗ

  ಓಹೋಹೋಹೋಹೋ…! ಚೆನ್ನೈ ಹೇದರೆ ಇಷ್ಟೆಲ್ಲ ಇದ್ದೊ ಅಂಬಗ??! ಭಲೆ..ಭಲೆ..
  ಬರದ್ದು ಪಷ್ಟಾಯಿದು ಭಾವಾ..
  ಮತ್ತೆ, ಅಲ್ಲಿ ‘ಸಂಗೀತ’ ಕೇಸೆಟ್ಟು ಮಾಡ್ತ ಮಹೇಶಣ್ಣ ಒಳ್ಳೆ ಖ್ಯಾತಿ ಹೊಂದಿದವು. ಅಲ್ಲದೋ? (ಅವರ ಮೇನೇಜರ ರಾಮಕೃಷ್ಣಣ್ಣನ ಎನಗೆ ಒಳ್ಳೆತ ಗೊಂತಿದ್ದು! 😉 )

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಎಪ್ಪೋ….
  ಹೊನ್ನಾವರಂದ ಕೋಂಗೋಟು ದಾಂಟಿ ವಯನಾಡಿನ ವರೇಗೆ ಆರ ಕೇಳಿರೂ ನಿಂಗೋ ‘ಎನ ಗೊಂತಿಲ್ಲೆ’ ಹೇಳಿದ್ದು ಕಂಡಿದಿಲ್ಲೆಪ್ಪ ಆನು.
  ನಿಂಗಳ ಖಾನೆಶುಮಾರಿ ಪಟ್ಟಿ ನಿಜಕ್ಕೂ ಹೊಗಳೆಕ್ಕಾದ್ದೆ. ನಮ್ಮ ಶ್ರೀ ಗುರುಗೊ ಸರಿಯಾಗಿಯೇ ಆ ವಲಯಕ್ಕೆ ನಿಂಗಳೆ ಆಯೇಕು ಹೇಳಿ ಮಾಡಿದ್ದು ನಿಂಗಳ.

  ಪ್ರೀತಿಯಿರಲಪ್ಪ ಸದಾ.

  [Reply]

  ನೆಗೆಗಾರ°

  ನೆಗೆಗಾರ° Reply:

  { ಹೇಳಿದ್ದು ಕಂಡಿದಿಲ್ಲೆಪ್ಪ }
  ಎಂಗೊಗೆಲ್ಲ ಹೇಳಿದ್ದು ಕೇಳುದು ಮಾಂತ್ರ. :-)
  ಸುಬಗಣ್ಣ ಮಾತಾಡುವಗ ನಿಂಗೊ ಕೇಳುದು ಬಿಟ್ಟು ನೋಡಿದ್ದೆಂತಕಪ್ಪಾ? 😉

  [Reply]

  VA:F [1.9.22_1171]
  Rating: +2 (from 2 votes)
 2. ಸುಭಗ
  ಸುಭಗ

  ಇನ್ನೊಂದು ಸಂಗತಿ- ‘ಸೂಜಿ ನೂಲು’ ಎಂಗಳ ಜಾಲ್ಸೂರಿಲ್ಲಿಯೂ ಸಿಕ್ಕುತ್ತು! ಹೆ ಹೆ ಹೆ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಸೂಜಿ ನೂಲು ಸಿಕ್ಕುಗು. ‘ಪೊಂಗಲ್’ ಸಿಕ್ಕಾ.!!!!

  [Reply]

  VA:F [1.9.22_1171]
  Rating: 0 (from 0 votes)
 3. ವಿಷ್ಣು ನಂದನ
  vishnunandana

  Ho…

  Aanude Chennaili ippadu mava. Illige bandu 2.5 varsha aathu. Aanippadu thiruvanmayur li.

  Yenge illi yellavu adjust aaydu aadare jenango maha kolakkango. Devasthana kooda shuchi agi ippale bidavu. Open charandi.

  Yenthade aadaru adjust aaydu.

  [Reply]

  ನೆಗೆಗಾರ°

  ನೆಗೆಗಾರ° Reply:

  { Yenthade aadaru adjust aaydu }
  ಚೆ, ನಿಂಗೊಗಿನ್ನು ಊರಿಂಗೆ ಬಂದಿಪ್ಪಗ ಭಾರೀ ಕಷ್ಟ ಅಪ್ಪಲಿದ್ದನ್ನೇ ಅಂಬಗ!? 😉

  [Reply]

  VA:F [1.9.22_1171]
  Rating: +2 (from 2 votes)
  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಎರಡು ವರ್ಷಲ್ಲಿ 25ಕ್ಕಿಂತಲೂ ಹೆಚ್ಚಿಗೆ ಆದಿಕ್ಕು ಹವ್ಯಕ ಸಂಘ ಕರ್ನಾಟಕ ಸಂಘ ಕಾರ್ಯಕ್ರಮಂಗೊ. ಒಂದರಲ್ಲೂ ನಿಂಗಳ ಕಂಡ ಹಾಂಗೆ ಅವ್ತಿಲ್ಲೆನ್ನೇ?!!!

  ಕಂಡತ್ತೋ – ನಿಂಗಳೇ ಹೇಳಿದಿ. “… ಅಂದರೂ ಅಡ್ಜಸ್ಟ್ ಆಯ್ದು ” ಹೇಳಿ.
  ಇದುವೆ ನಮ್ಮ ಚೆನ್ನೈ ಸ್ಪೆಸ್ಸಲೈಟಿ. ಎಂತಾರು ಚೆನ್ನೈ ಇಪ್ಪದು ಇಂಡಿಯಾಲ್ಲಿ. ದುಬೈ ಸಿಂಗಾಪೂರ್ಲಿ ಅಲ್ಲನ್ನೇ?!

  [Reply]

  ಗಣೇಶ ಪೆರ್ವ

  ಗಣೇಶ Reply:

  ಅಲ್ಲ ಚೆನ್ನೈ ಭಾವಾ.. ದುಬೈ ಇಪ್ಪದು ಸಿ೦ಗಾಪುರಲ್ಲಿ ಅಲ್ಲ, ಯುನೈಟೆಡ್ ಅರಬ್ ಎಮಿರೇಟ್ಸಿಲ್ಲಿ.. 😉

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಚೆನ್ನೈಲಿ ಸೆಕೆಗಾಲ ಕಳುದು ಸೆಕೆಗಾಲ ,ಅದು ಕಳುದು ಸೆಕೆಗಾಲ ಇಪ್ಪದು,ಅಲ್ಲದೋ ಭಾವ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಅಂಬಗ ಒಂದು ವಾರದ ಎಂಗಳ ಮಳೆಗಾಲ??

  [Reply]

  ನೆಗೆಗಾರ°

  ನೆಗೆಗಾರ° Reply:

  ಓ ಮುಳಿಯಬಾವಂಗೆ ಅದು ಬಿಟ್ಟುಹೋದ್ದು, ಅಷ್ಟೆ.
  ಒಂದು ಸೆಕೆಗಾಲ ಕಳುದು ಊರಿಡೀ ಒಣಗಿ ಅಪ್ಪಗ ಮತ್ತಾಣ ಸೆಕೆಗಾಲಕ್ಕೆ ಒಣಗಲೆ ಹೇಳಿ ರಜ್ಜ ಕಿರಿಂಚಿ ಮಾಡಿ ಹಾಕುತ್ತದೇ – ಚೆನ್ನೈಬಾವ ಹೇಳಿದ “ಮಳೆಗಾಲ”.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ವರ್ಷಲ್ಲಿ ಒಂದು ದಿನಾರು ಸಂದು ಮಾರ್ಗಂಗಳಲ್ಲಿ ಅಡ್ಡ ರಸ್ತಗಳಲ್ಲಿ ಮೊಳಪ್ಪು ಸೊಂಟದವರೇಗೆ ನೀರು ಎರ್ಕುತ್ತನ್ನೇ!!! ಕರೆಂಟು ಇಲ್ಲದಾವ್ತನ್ನೆ. ಹಾಲು ಬಾರದ್ದವ್ತನ್ನೆ. ಪೇಪರ್ ಹಾಕದ್ದಾವ್ತನ್ನೆ. ಮನೆ ಬಿಟ್ಟು ಹೆರಡದ್ದಾಂಗೆ ಅಪ್ಪಗ ಇದಾ ಮನೆಲಿಪ್ಪ ಹೆಮ್ಮಕ್ಕೊಗೆ ಖುಶೀ – ‘ಅಬ್ಬ., ಒಂದು ದಿನಾರು ಮನೇಲಿ ಕೂದವನ್ನೇ..!!’

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ

  ಅಪ್ಪೊ ಚೆನ್ನೈ ಭಾವಾ.. ಈ ಹಾರುವ ರೈಲು ಹೇಳಿರೆ ಎ೦ತರ? ಉಗಿಬ೦ಡಿ, ಡೀಸೆಲು ರೈಲು, ಕರೆ೦ಟಿನ ರೈಲು, ಮೆಟ್ರೋ ರೈಲು ಹೇಳಿ ಎಲ್ಲ ಕೇಳಿ ಗೊ೦ತಿದ್ದು, ಈ ಹಾರುವ ರೈಲು ಎ೦ತರ? ಹಳಿಗೆ ತಾಗದ್ದೆ ಘ೦ಟೆಗೆ ೬೦೦ ಕಿ. ಮೀ.೦ದಲೂ ಹೆಚ್ಚು ವೇಗಲ್ಲಿ ಹೋಪ ರೈಲು ಜಪಾನಿಲ್ಲಿ ಇದ್ದು ಹೇಳಿ ಕೇಳಿ ಗೊ೦ತಿದ್ದು, ಇದುದೆ ಹಾ೦ಗೆ ಇಪ್ಪ ರೈಲೋ? ಅಲ್ಲ ಹಳಿಯೇ ಇಲ್ಲದ್ದ ರೈಲೋ? 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಹೋಯ್ ದುಬೈ ಸಿಂಗಪೋರ್ಲಿದ್ದು ಹೇಳಿ ಎಲ್ಲಿ ಹೇಳಿದ್ದಪ್ಪ ನಾವು. ಚೆನ್ನೈ ಇಪ್ಪದು ದುಬೈಲ್ಲಿಲ್ಯೋ ಸಿಂಗಾಪೋರ್ಲಿಯೋ ಅಲ್ಳನ್ನೇ ಹೆದು ಅಸ್ಟೇ ಭಾವ.

  ಹಾರುತ್ತ ರೈಲೋ….. ಇದ್ದು ಹೇಳಿ ಇಲ್ಲಿ. ಕಿಸೆ ತುಂಬಿಸಿಗೊಂಡು ಬನ್ನಿ. ತೋರ್ಸುತ್ತೆ . (ಉಮ್ಮಾ .., ಮತ್ತೆಂತಕ್ಕೆ ಇವ್ವು ಇದರ ಪರಕ್ಕುಂ ಟ್ರೈನ್ ( பறக்கும் ட்ரெயின்) ಹೇಳಿ ಹೇಳ್ತವು .!

  [Reply]

  ಗಣೇಶ ಪೆರ್ವ

  ಗಣೇಶ Reply:

  ನಿಜವಾಗಿಯು? ಎಲ್ಲಿ ಚೆನ್ನೈಲಿಯೊ? ಆನು ಚೆನ್ನೈ, ಎಗ್ಮೋರ್ ಎಲ್ಲ ಸುಮಾರು ಸರ್ತಿ ಬ೦ದಿತ್ತಿದ್ದೆ, ಈ ರೈಲಿನ ಮಾ೦ತ್ರ ಕ೦ಡಿದಿಲ್ಲೆ. ಸದ್ಯ ಸುರು ಆದ್ದದೊ? ಈ ಸರ್ತಿ ಊರಿ೦ಗೆ ಬಪ್ಪಗ ಚೆನ್ನೈಗೆ ಬಪ್ಪಲೆ ಪುರುಸೊತ್ತಿಲ್ಲೆನ್ನೆ ಭಾವಾ.. ಒಟ್ಟಾರೆ ಎರಡು ವಾರ ರಜೆ ಇಪ್ಪದು, ಅದುದೆ ಎರಡು ವರ್ಶ ಕಳುದು ಸಿಕ್ಕಿದ್ದದು.. ಅಲ್ಲದ್ರೆ ಚೆನ್ನೈಗೆ ಬ೦ದು ನಿ೦ಗಳ ಆತಿಥ್ಯ ಸ್ವೀಕರಿಸಿ ನಾಲ್ಕು ಆಟ ಇಸ್ಪೇಟುದೆ ಆಡಿಕ್ಕಲಾವ್ತಿತು..

  [Reply]

  VA:F [1.9.22_1171]
  Rating: 0 (from 0 votes)
 6. ಶ್ಯಾಮಣ್ಣ
  ಶ್ಯಾಮಣ್ಣ

  ಈ ಕಣ್ಣು ಕೆಂಪಪ್ಪ ಒಂದು ರೋಗ ಇದ್ದಲ್ಲದ ಅದಕ್ಕೆ ಮದ್ರಾಸ್ ಐ ಹೇಳ್ತವು… ಈಗ ಅದರ ಚೆನ್ನೈ ಹೇಳ್ತವಾ?
  ಕಣ್ಣು ಕೆಂಪಾದರೆ ಕಪ್ಪು ಕನ್ನಡ್ಕ ಹಾಕಕ್ಕಲ್ಲದ… ಆ ಕರುಣಾನಿಧಿಯ ನೋಡಿದರೆ ಗೊಂತಾವುತ್ತದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಡಾಮಹೇಶಣ್ಣಪೆರ್ಲದಣ್ಣದೊಡ್ಡಭಾವವಸಂತರಾಜ್ ಹಳೆಮನೆಗೋಪಾಲಣ್ಣಉಡುಪುಮೂಲೆ ಅಪ್ಪಚ್ಚಿಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣಶೀಲಾಲಕ್ಷ್ಮೀ ಕಾಸರಗೋಡುಪ್ರಕಾಶಪ್ಪಚ್ಚಿಶಾ...ರೀಪವನಜಮಾವಬಂಡಾಡಿ ಅಜ್ಜಿಶ್ಯಾಮಣ್ಣಕೊಳಚ್ಚಿಪ್ಪು ಬಾವಎರುಂಬು ಅಪ್ಪಚ್ಚಿಸುಭಗಪೆಂಗಣ್ಣ°ನೆಗೆಗಾರ°ಡೈಮಂಡು ಭಾವಪುತ್ತೂರುಬಾವಚೆನ್ನೈ ಬಾವ°ಪುಟ್ಟಬಾವ°ದೀಪಿಕಾಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ