ಶ್ರೀಗಳ ಚಾತುರ್ಮಾಸ್ಯ – ಅಶೋಕೆ!

July 25, 2011 ರ 11:49 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ!

ಸುವರ್ಣಿನಿಯಕ್ಕನ ’ಕಾಣೆಯಾದವರು’ ಪಟ್ಟಿಲಿ ಈ ಬಲ್ನಾಡುಮಾಣಿಯನ್ನುದೆ ಸೇರ್ಸೇಕ್ಕೋ  ಹೇಳಿ ಗುರಿಕ್ಕಾರ್ರು ಕೇಳಿದವು ಮೊನ್ನೆ..   ಪಟ್ಟಿ ಬಿಡುಗಡೆ ಅಪ್ಪ ಮೊದಲು ಶುದ್ದಿ ಬಿಡುಗಡೆ ಮಾಡುವಾ ಹೇಳಿ ಅನ್ಸಿತ್ತಿದಾ..

ಓ ಮೊನ್ನೆ ಗೋಕರ್ಣಕ್ಕೆ ಹೋಗಿತ್ತಿದ್ದೆ.. ಶ್ರೀ ಮಹಾಬಲೇಶ್ವರ ದೇವರ ದರ್ಶನ ಮಾಡಿಕ್ಕಿ, ಮತ್ತೆ ಅಶೋಕೆಗೆ ಹೋತು.. ಶ್ರೀ ಗುರುಗೊ ಚಾತುರ್ಮಾಸ್ಯಲ್ಲಿದ್ದವಲ್ಲದೋ..

ಅಶೋಕಾವನ ನಿಜಾರ್ಥಲ್ಲಿ ಶೋಕ ದೂರ ಮಾಡುವ ವನ.. ಅಷ್ಟು ಪ್ರಶಾಂತ ಪರಿಸರ, ಅಚ್ಚುಕಟ್ಟು ವ್ಯವಸ್ಥೆ..ಎಲ್ಲಿ ನೋಡಿರೂ ಹಸುರು. ಸುತ್ತ ಶುದ್ಧ ನೀರಿನ ಹರಿವು..

ಉದಿಯಪ್ಪಗ ಸುಮಾರು ಒಂಬತ್ತಕ್ಕೆ  ಅಶೋಕೆಗೆ ಎತ್ತಿತ್ತು.. ಅಂಬಗ ಸಂಸ್ಥಾನ ಪೂಜೆಗೆ ಕೂಯ್ದವು..  ಶ್ರೀಲಕ್ಷ್ಮಣಸಹಿತ ಸೀತಾರಾಮಚಂದ್ರ, ರಾಜರಾಜೇಶ್ವರೀ, ಚಂದ್ರಮೌಳೀಶ್ವರರ ಒಳಗೊಂಡ ಸರ್ವಾಲಂಕೃತ ಮಂಟಪ.. ಹೆಮ್ಮಕ್ಕಳೂ, ಗೆಂಡುಮಕ್ಕಳೂ ಶಿಸ್ತಿಲಿ ಕೂದಿತ್ತಿದ್ದವು.. ರುದ್ರಪಠಣ ಇತ್ಯಾದಿ ಚೆಂದಕ್ಕೆ ಕಳಾತು.. ಶ್ರೀಗೊ ಪೂಜೆಲಿಪ್ಪಾಗ ಅವರ ಮುಖಾರವಿಂದಲ್ಲಿಪ್ಪ ಇಪ್ಪ ಗಾಂಭೀರ್ಯವೇ ಬೇರೆ ಅಲ್ಲದಾ.. ಅಭಿಷೇಕ – ನೈವದ್ಯ ಆಗಿ ಮಹಾಮಂಗಳಾರತಿಯೂ ಆತು..
ದಿನವಿಶೇಷ ಹೇಳಿರೆ ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ ಕುಟುಂಬದವರಿಂದ ಗುರುಭಿಕ್ಷೆ ಇದ್ದತ್ತು..

ಮತ್ತೆ ಬೇರೆ ಒಂದೆರಡು ಕುಟುಂಬದೋರಿಂದ ಪಾದಪೂಜೆ ಇತ್ಯಾದಿಯೂ ಇದ್ದತ್ತು.. ವಲಯ ಭಿಕ್ಷೆ ಇತ್ತಿಲ್ಲೆ.

ಸುಮಾರು ಹನ್ನೆರಡೂವರೆ ಗಂಟೆಗೆ  ಶ್ರೀ ಸಂಸ್ಥಾನ ಸಭೆಗೆ ಬಂದವು..  ಯಾಗ ನಡಕ್ಕೊಂಡಿತ್ತದಾ, ಪೂರ್ಣಾಹುತಿ ಆತು..
ಮತ್ತೆ ಶ್ರೀಗಳು ಸಭೆಲಿ ವಿರಾಜಮಾನರಾದವು.. ಶ್ರೀಗಳು ಆಸೀನರಪ್ಪಲೇ ಕಾದು ಕೂದ ಹಾಂಗೆ ವರುಣರಾಯ ಒಂದರಿ ಆರ್ಭಟಿಸಿ, ಎರಡು ಮಿನಿಟು ಗೌಜಿ ಮಾಡಿ ಶ್ರೀಗಳಿಂಗೆ ಸ್ವಾಗತ ಕೋರಿದ್ದು ವಿಶೇಷ.


ಆ ದಿನ ಭಿಕ್ಷಾಸೇವೆ ಮಾಡ್ಸಿದ ಭೀಮೇಶ್ವರ ಜೋಷಿ ಮತ್ತೆ ಮನೆಯೋರಿಂಗೆ ಪ್ರಸಾದಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದವು.. ಹಾಂಗೆಯೇ ಪಾದಪೂಜೆ ಮಾಡ್ಸಿದೋರಿಂಗೂ ಮಂತ್ರಾಕ್ಷತೆ ಆತು.. ಬೆಂಗ್ಳೂರಿಂದ ಬಂದ ಮಹನೀಯರೊಬ್ಬರು ಶ್ರೀಸಂಸ್ಥಾನಕ್ಕೆ ಹಲವು ಬಗೆಯ ಫಲ ಸಮರ್ಪಣೆ ಮಾಡಿದವು. ಪಟ್ಟಿ ಮಾಡ್ಲೆ ಹೆರಟ್ರೆ ಶುದ್ದಿಂದ ಉದ್ದ ಅಕ್ಕು! ಮಹನೀಯರ ಹೆಸರು ಮರತ್ತು ಕ್ಷಮೆ ಇರಳಿ. :( , [ಪುತ್ತೂರ ಪುಟ್ಟಕ್ಕಂಗೆ ಗೊಂತಿದ್ದೋ ಏನೋ! ಅಶೋಕೆಲಿ ಕಂಡಾಂಗಾತು ಅದೇ ದಿನ!]
ಭೀಮೇಶ್ವರ ಜೋಶಿ ಮಠದ ಗುರುಕುಲಕ್ಕೆ ಧನಸಹಾಯ ನೀಡಿದ್ದಕ್ಕಾಗಿ ಅವಕ್ಕೆ ಅಭಿನಂದನಾ ಪತ್ರವ ಕೊಟ್ಟು ಆಶೀರ್ವದಿಸಿದವು..
ಮತ್ತೆ ಎಲ್ಲೋರು ಶ್ರೀಗಳಿಂಗೆ ಫಲ ಮಡುಗಿ ನಮಸ್ಕರಿಸಿದವು..  ಮತ್ತೆ ಎಲ್ಲೋರಿಂಗೂ ಶ್ರೀಗುರುಗೋ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದವು..
ಮತ್ತೆ ಊಟ – [ಬೋಸ ಭಾವಂದೆ ನೆಗೆಮಾಣಿಯುದೆ ಈ ವಿಷಯವ ಮಾತ್ರ ಓದುಗಷ್ಟೆ ಬೌಷ] , ತಾಳ್ಳು, ಸಾರು, ಬೆಂದಿ, ಮಜ್ಜಿಗೆ , ತಂಬುಳಿ ಅಲ್ಲದ್ದೆ, ಪಾಯಸವೂ , ಹೋಳಿಗೆಯೂ ಇದ್ದತ್ತು..  ಸರಳ ಆದರೆ ರುಚಿಕರ ಊಟ. ತುಂಬಾ ಅಚ್ಚುಕಟ್ಟಾದ ವ್ಯವಸ್ಥೆ..
ಮಧ್ಯಾಹ್ನಾ ನಂತರ ರಾಮಕಥಾ ಪ್ರವಚನ ಇದ್ದತ್ತು.. ಆನು ಕಸ್ತಲಾಯೆಕ್ಕಾರೆ ಮನೆಗೆತ್ತೆಕ್ಕಾದ ಅನಿವಾರ್ಯತೆ ಇದ್ದ ಕಾರಣ ಊಟ ಆದಪ್ಪದ್ದೆ ಹೆರಡೆಕ್ಕಾಗಿ ಬಂತು.. :(

ರಾಮಕಥೆ ಭಾರೀ ಚೆಂದಕ್ಕೆ ನಡೆತ್ತಾ ಇದ್ದು ಹೇಳಿ ಅಲ್ಲಿಪ್ಪೋರ ಬಾಯಿಂದ ಕೇಳ್ಪಟ್ಟೆ..  ರಾಮಕಥೆಗಾಗಿ ವಿಶೇಷ ಪೆಂಡಾಲು ಹಾಕಿದ್ದವು..

ಶ್ರೀಸಂಸ್ಥಾನದ ಉಪಸ್ಥಿತಿಯ ಪ್ರಭಾವವೂ, ಪ್ರಕೃತಿಯ ಮಡಿಲಿಲಿ ಮಲ್ಲಿಕಾರ್ಜುನನ ಸನ್ನಿಧಿಯ ಬಲವೂ, ಮೂಲ ಮಠದ ಶಕ್ತಿಯೂ ಇಪ್ಪ ಅಶೋಕಾವನವ ಬಿಟ್ಟು ಹೋಪಲೇ ಮನಸಾತಿಲ್ಲೆ..

ಒಲ್ಲದ ಮನಸ್ಸಿಂದ ಅಶೋಕಾವನಂದ ನಿರ್ಗಮಿಸಿದೆಯೋ..
ಅಂಬೆರ್ಪಿಲಿದ್ದ ಕಾರಣ ಸರಿಯಾಗಿ ವಿಷಯ ಸಂಗ್ರಹ ಮಾಡ್ಲಾತಿಲ್ಲೆ!  ಸುಮಾರು ವಿವರಂಗೋ ಬಿಟ್ಟು ಹೋದಿಕ್ಕು..

ಶ್ರೀಗಳ ಆಶೀರ್ವಚನ-ಚಾತುರ್ಮಾಸ್ಯದ ವ್ರತ ಸಂಕಲ್ಪ ಕಾರ್ಯಕ್ರಮದ ದ್ವನಿಮುದ್ರಿಕೆಯ ಈ ಸಂಕೋಲಿಲಿ ಕೇಳ್ಲಕ್ಕು..

http://hareraama.in/kn/av/audio/chaturmasa_vrata_sankalpa/

ಆನು ತೆಗದ ಕೆಲವು ಪಟಂಗಳ ನೇಲ್ಸುತ್ತಾ ಇದ್ದೆ.


ಅಶೋಕಾವನದ ಬಗ್ಗೆ, ಇನ್ನೊಂದರಿ ಹೋದಪ್ಪದ್ದೆ  ಸರಿಯಾಗಿ ವಿಷಯ ಸಂಗ್ರಹಿಸಿ ಒಂದು ವಿವರವಾದ ಶುದ್ದಿ ಬರವ ಪ್ರಯತ್ನ ಮಾಡ್ತೆ..

ಹರೇರಾಮ!

ಶ್ರೀಗಳ ಚಾತುರ್ಮಾಸ್ಯ - ಅಶೋಕೆ!, 4.5 out of 10 based on 2 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಹರೇರಾಮ.
  ಗುರುಗಳನ್ನೂ ಅಶೋಕೆಯನ್ನೂ ಬೈಲಿಲಿ ಒಟ್ಟಿಂಗೇ ನೋಡಿ ತುಂಬಾ ಕುಶಿಆತು. ಗುರುಗಳ ಪಟಂಗೊ ಬಾರೀ ಚೆಂದ ಬಯಿಂದು.

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಗುರುಗಳ ಪಟ ಏವತ್ತೂ ಚೆಂದವೇ ಬತ್ತಿದಾ, ಆನು ಕೆಮರಕ್ಕೆ ಹೊಸಬ್ಬ, ಕೆಮರ ಎನಗೆ ಹೊಸತ್ತು, ! ಆದರುದೆ ಚೆಂದ ಬಯಿಂದು ಹೇಳಿರೆ, ಗುರುಕೃಪೆಯೇ ಕಾರಣ ಅಷ್ಟೆ!
  ಹರೇರಾಮ!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೋ..ಹ್! ಆ ಕೇಮರ ಅಂತೆಯೋ ಅಂಬಗ!!

  [Reply]

  VA:F [1.9.22_1171]
  Rating: 0 (from 0 votes)
 2. ಪುತ್ತೂರಿನ ಪುಟ್ಟಕ್ಕ

  ಅಪ್ಪು ಆನು ಬ೦ದಿತ್ತಿದೆ…….. ಆದರೆ ಆ ಮಹನೀಯರ ಹೆಸರು ಎನಗೂ ಮರತ್ತುಹೋಯ್ದು…….
  ಆ ದಿನದ ರಾಮಕಥೆಯ ವರ್ಣಿಸಲು ಅಸಾಧ್ಯ ಅಲ್ಲದಾ?

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಪುಟ್ಟಕ್ಕೋ, ರಾಮಕಥೆಯ ವರ್ಣಿಸುಲೆ ನೀನೇ ಆಯೆಕ್ಕಟ್ಟೆ.. ಆನು ರಾಮಕಥೆ ಸುರುವಾಯೆಕ್ಕಾರೆ ಮೊದಲೇ ಹೆರಡೆಕ್ಕಾತು.. :( ಆ ಕಾರ್ಯಕ್ರಮಲ್ಲಿ ಭಾಗವಹಿಸುಲುದೆ ಯೋಗ ಬೇಕು ಅಲ್ಲದಾ!

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇದಾಗಿ ಬಯಿ೦ದು. ಅಭಿನ೦ದನೆಗೊ..

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಧನ್ಯವಾದಂಗೋ ಗಣೇಶಣ್ಣ, ಗುರುಕೃಪೆ ಎಲ್ಲರ ಮೇಲಿರಳಿ ಹೇಳ್ತದೇ ಹಾರೈಕೆ!!

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಹರೇ ರಾಮ. ಶುದ್ದಿ ಕುಶೀ ಆತು. ಪಟ ಚಂದ ಬಯಿಂದು. ಕಾರ್ಯ ಲಾಯಕ್ಕ ಆಯ್ದು ಹೇಳಿ ಒಪ್ಪ.

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಒಪ್ಪಕ್ಕೆ ಧನ್ಯವಾದ ಚೆನ್ನೈ ಭಾವ! ನಿಂಗಳ ಒಪ್ಪ ಬಾರದ್ರೆ ಶುದ್ದಿ ಅಪೂರ್ಣ ಆವ್ತಿದಾ!

  [Reply]

  VN:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಪಟಂಗೊ ಭಾರೀ ಲಾಯಿಕ ಬಯಿಂದು. ನಿನ್ನೆ ಗುರುಗಳ ಪ್ರಸಾದವೂ ಸಿಕ್ಕಿತ್ತಿದ್ದು. ಈಗ ಗುರುಗಳ ನೋಡಿದಾಂಗೆ ಆತು, ಧನ್ಯವಾದ.

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  [ಗುರುಗಳ ನೋಡಿದಾಂಗೆ ಆತು]
  ಹರೇರಾಮ, ಶುದ್ದಿಯ ಉದ್ದೇಶಸಾಧನೆ ಆತಿದಾ!

  [Reply]

  VN:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಬಲ್ನಾಡಣ್ಣ,
  ಅಶೋಕೆಗೆ ಹೋಯೆಕು ಹೇಳಿ ಆಶೆ ಮೂಗಿನ ಕೊಡಿಲಿ ಇದ್ದು..
  ಆದರೆಂತ ಮಾಡುದು? (tax audit season.. )

  ಸದ್ಯಲ್ಲೇ ಹೋಯೆಕು ಹೇಳಿದ್ದೆ..
  ಬೈಲಿಂದ ಎಲ್ಲೋರೂ ಒಂದರಿ ಒಟ್ಟಿಂಗೇ ಹೋಪನೋ? ( ಅಥವಾ ಅಲ್ಲಿ ಒಂದರಿ ಸೇರಿರೂ ಆಗದ್ದೆ ಇಲ್ಲೆ..?)

  ಫಟಂಗೊ ಚೆಂದ ಬೈಂದು. :)

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಓ. :) ಮಂಗ್ಳೂರಣ್ಣೋ, ನಿನ್ನ ತಲೆಗೆ ಕೊಡೆಕ್ಕಿದಾ! ಬೈಲಿನ ಸೇರ್ಸುವ ವಿಚಾರ ಒಳ್ಳೆದಿದ್ದು ಕಾಣ್ತು! ಗುರಿಕ್ಕಾರ್ರಿಂಗೆ ಕೇಳಿತ್ತೋ!!!???????????????????????

  ಪ್ರೋತ್ಸಾಹಕ್ಕೆ ಧನ್ಯವಾದಂಗೋ!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ದೊಡ್ಡಕೆ ಕೂಕ್ಳು ಹಾಕುವೊ… ಗುರಿಕ್ಕಾರ್ರೇಏಏಏ…!!!

  [Reply]

  VN:F [1.9.22_1171]
  Rating: +1 (from 1 vote)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಚಿಕ್ಕ ಚೊಕ್ಕ ಶುದ್ದಿ.
  ಶ್ರೀ ಶ್ರೀಗಳ ದರ್ಶನ ಇಲ್ಲಿಯೇ ಮಾಡಿಸಿಕೊಟ್ಟೆ ನೀನು.
  ಧನ್ಯೋಸ್ಮಿ

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಹರೇರಾಮ ಶರ್ಮಪ್ಪಚ್ಚಿ.. ಶ್ರೀಗಳ ಪಟ, ಶುದ್ದಿ ಹಾಕಿ ಆನುದೆ ಧನ್ಯನಾದೆ.. ಗುರುಭ್ಯೋಃ ನಮಃ..

  [Reply]

  VN:F [1.9.22_1171]
  Rating: 0 (from 0 votes)
 8. ಗೋಪಾಲಣ್ಣ
  Gopalakrishna BHAT S.K.

  ಬಲ್ನಾಡು ಮಾಣಿ ಪ್ರತ್ಯಕ್ಷ ಆದ್ದದು ಸಂತೋಷ ಆತು.

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಗೋಪಾಲಣ್ಣನ ಪ್ರೋತ್ಸಾಹಕ್ಕೆ ಧನ್ಯವಾದಂಗೋ, ನಿಂಗಳ ಕಥೆಗಳ ಓದದ್ರೆ ಅಸಕ್ಕ ಆವ್ತಿದಾ! ಬೈಲಿಂದ ಇಷ್ಟು ಸಮಯ ನಾಪತ್ತೆ ಆದ್ದಕ್ಕೆ ಕ್ಷಮೆ ಇರಳಿ!

  [Reply]

  VN:F [1.9.22_1171]
  Rating: 0 (from 0 votes)
 9. ಶ್ರೀಅಕ್ಕ°

  ಬಲ್ನಾಡು ಮಾಣಿ,

  ನೀನು ಅಶೋಕೆಯ ಬೈಲಿಂಗೆ ತಂದದರಿಂದಲೂ ಹೆಚ್ಚು, ಅಶೋಕೆ ನಿನ್ನ ಬೈಲಿಂಗೆ ತಂತು ಹೇಳುಲಕ್ಕು ಅಲ್ಲದಾ? ಸುಮಾರು ದಿನಂದ ಮತ್ತೆ ನೀನು ಶುದ್ದಿ ಹೇಳುವ ಹಾಂಗೆ ಆದ್ದದು ಅಶೋಕೆಗೆ ಹೋದ ಕಾರಣ ಅಲ್ಲದಾ?
  ಲಾಯ್ಕಲ್ಲಿ ಹೇಳಿದ್ದೆ ಆತಾ.. ಪಟ ನೇಲ್ಸಿದ್ದದೂ ಲಾಯ್ಕಾತು ಬೈಲಿಲಿ..

  ಬೈಲಿಲಿದೇ ಶುದ್ದಿಯೊಟ್ಟಿಂಗೆ ರಜ್ಜ ಸಂಚಾರ ಮಾಡು ಮಾರಾಯಾ……

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಬೈಲಿಲಿ ತಂಬೂರಿ ಹಿಡುದು ಸಂಚಾರ ಮಾಡೆಕ್ಕು ಹೇಳಿ ತುಂಬಾ ಆಶೆ ಇದ್ದು ಶ್ರೀ ಅಕ್ಕೋ! ಎಂತ್ಸು ಮಾಡ್ತು, ಪುರುಸೊತ್ತೇ ಆವ್ತಿಲ್ಲೆ ಇದಾ.. ಆಪೀಸಿಲಿ ಎನ್ನದು ಏಕಪಾತ್ರಾಭಿನಯ ಅಲ್ಲದೋ!
  ಅಶೋಕೆಯೇ ಎನ್ನ ಬೈಲಿಂಗೆ ತಂತು ಹೇಳುದು ನೂರಕ್ಕೆ ನೂರು ನಿಜ.. ! :) ಧನ್ಯವಾದಂಗೋ!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗನೀರ್ಕಜೆ ಮಹೇಶvreddhiತೆಕ್ಕುಂಜ ಕುಮಾರ ಮಾವ°ವೇಣೂರಣ್ಣಅಜ್ಜಕಾನ ಭಾವಪ್ರಕಾಶಪ್ಪಚ್ಚಿಕೇಜಿಮಾವ°ರಾಜಣ್ಣವಿಜಯತ್ತೆಗಣೇಶ ಮಾವ°ಮಂಗ್ಳೂರ ಮಾಣಿಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಡಾಗುಟ್ರಕ್ಕ°ಮಾಷ್ಟ್ರುಮಾವ°ಬೊಳುಂಬು ಮಾವ°ಒಪ್ಪಕ್ಕಶಾಂತತ್ತೆದೊಡ್ಮನೆ ಭಾವಪಟಿಕಲ್ಲಪ್ಪಚ್ಚಿಕಜೆವಸಂತ°ಸಂಪಾದಕ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ