ಕನ್ಯಾಬರ

December 4, 2011 ರ 10:58 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಹುಡುಗರಿಗೆ ಕನ್ಯಾಬರ ಇದ್ದು ಹೇಳೂದು ಎಲ್ಲವಕ್ಕೂ ಗೊತ್ತಿದ್ದು.
ಆ ದಿಶೆಯಲ್ಲಿ ನಾವು ಅದನ್ನ ಸರಿತೂಗಿಸುಲೆ ಹವ್ಯಕರ ಉಪಜಾತಿಯಿಂದ ಕುಸುಗಳ ತಪ್ಪುದು ಮತ್ತು ವಿಧವಾ ವಿವಾಹ ಮಾಡಿಸುದು ನಮ್ಮ ಸಂಸ್ಕೃತಿಯ ಅಂಗ ಹೇಳಿ ಬದಲಾವಣೆ ಮಾಡ..
ನಿಂಗ್ಳ ಅಭಿಪ್ರಾಯ?

ಕನ್ಯಾಬರ, 1.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಇದು ವೈಯುಕ್ತಿಕ ಅಭಿಪ್ರಾಯ . ಬಾಕಿದ್ದವರ ಅಭಿಪ್ರಾಯಕ್ಕೆ ನಮ್ಮ ಆಕ್ಷೇಪವೋ ಪ್ರತಿವಾದವೋ ಇಲ್ಲೆ. ಆದರೆ ಈಗಾಣ ಕಾಲಘಟ್ಟಲ್ಲಿ ಮದುವೆ ಆಗಿಯೇ ಅಯೇಕು ಹೇಳಿ ಇಪ್ಪಗ ಬೇರೆ ಹಾದಿ ?!

  ವಿಧವಾ ವಿವಾಹ ಅವರವರ ವೈಯುಕ್ತಿಕ ಇಚ್ಛೆ . ತಪ್ಪೋ ಸರಿಯೋ ಹೇಳಿ ನೋಡಿರೆ ಎನ್ನ ವಾದ ಸರಿ ಹೇಳಿಯೇ . ಅನ್ಯ ಪಂಗಡ ಅಕ್ಕೋ ಹೇಳಿ ಕೇಳಿರೆ ಬಫೆ ಊಟ ಅಕ್ಕೋ ಆಗದಾ ಹೇಳಿ ಕೇಳುತ್ತಾಂಗೆ ಆವ್ತು., ಹೇಳಿರೆ….. ಈಗಂಗೆ ಅಕ್ಕು ಹೇಳಿ ಅಕ್ಕಷ್ಟೇ.. ದೂರಲ್ಲಿ ಮುಂದೆ ಒಟ್ಟು ಒಂದು ಸಂಸಾರ ಹೇಳಿ ಮುಂದುವರಿಗಷ್ಟೇ. ನಮ್ಮತನ ಒಳಿಯ. ಮಾಣಿ ಕೂಸು ಇದ್ದು ತೀರ್ಮಾನ ಮಾಡಿ ಯಾವತನವ ಉಳುಸಿ ನಡೆಸಿ ಬೆಳೆಸೆಕ್ಕಾದ್ದು ಹೇಳಿ ಅವ್ವವ್ವೇ ಅರ್ತುಗೊಂಡು ಮುಂದುವರಿಯೇಕ್ಕಾದ ಕರ್ತವ್ಯ ನಮ್ಮತನ ಉಳಿಯೇಕ್ಕಾದರೆ ಇದ್ದು. ಹುಟ್ಟಿಲ್ಲಿ ನಾವೆಲ್ಲರೂ ಒಂದೇ. ಗಂಡು – ಹೆಣ್ಣು. ಮುಂದೆ ನಮ್ಮ ಮನೇಲಿ ನವಗೆ ಕೊಟ್ಟ ಸಂಸ್ಕಾರಂದ ಆವ್ತು ನಾವಿಷ್ಟು ದೊಡ್ಡ ಜೆನ ಆದ್ದು. ಅದು ಇಲ್ಲದಿರುತ್ತಿದ್ರೆ ನವಗೂ ಅವಕ್ಕೂ ಎಂತ ವ್ಯತ್ಯಾಸ ಇದ್ದು. ಅನ್ಯ ಪಂಗಡಂದ (ಜಾತಿಂದ) ತಪ್ಪದು ಹೇಳಿರೆ ಅಂತೇ ಬಲುಗಿಯೊಂಡು ಬಪ್ಪದಲ್ಲನ್ನೇ. ಅದರ ನಮ್ಮದಕ್ಕೆ ದತ್ತು ತೆಕ್ಕೊಂಡು ಸಂಸ್ಕರಿಸಿ ಮುಂದುವರುಸುವದು. ಕೂಸು ತಪ್ಪದು ಮದುವೆ ಅಪ್ಪದು ಹೇಳಿರೆ ಐಹಿಕ ವಿಷಯ ಒಂದೇ ಅಲ್ಲ. ಮುಂದೆ ನಮ್ಮ ವಂಶಾಭಿವೃದ್ಧಿಗೆ ಮಾರ್ಗ ಅದು. ಗುಡ್ಡೆ ಕಡುದು ಮಾರ್ಗ ಕೆತ್ತಿ ಸಪಾಯಿ ಮಾಡಿ ಡಾಮರು ಹಾಕಿ ಐರಾವತ ಬಸ್ಸು ಹೋಪಲೆ ಹೈವೇ ಮಾಡುತ್ತ ಹಾಂಗೆಯೇ. ಈ ಮದಲು ಹೇಂಗೆ ಇತ್ತಿದ್ದು ಹೇಳಿ ಅಲ್ಲಾ ಇನ್ನು ಮುಂದೆ ಹೀಂಗೆಯೇ ಇರೆಕ್ಕಾದ್ದು ಹೇಳಿ ನಿಘಂಟು ಮಾಡಿ ಆ ಗುರಿಯತ್ತ ಜೀವನವ ಕೊಂಡು ಹೋಯೇಕು. ಅದು ಅಷ್ಟು ಸುಲಭದ ಮಾತು ಅಲ್ಲ ಹಾಂಗೇಳಿ ಕಷ್ಟದ ಕುಂಬಳಕ್ಕಾಯಿಯೂ ಅಲ್ಲ. ಮುಂದೆ ಹೇಂಗೆ ಬೇಕಾದ್ದು ಹೇಳಿ ಆಲೋಚನೆ ಮಾಡಿ ಆ ಹಾದಿಲಿ ಸಕ್ರಿಯವಾಗಿ ಮುಂದುವರಿತ್ತಲ್ಲಿ ಇಪ್ಪದು. ಇಲ್ಲದ್ರೆ ಕಲಬೆರಕೆ ಕಲಬೆರಕೆಯೇ. ಶುದ್ದ ಮಾಡಿ ಮಾಡಿಕ್ಕೊಂಬದು ಅವರವರ ಕೈಲಿ ಇಪ್ಪದು ಎಂಬುದೀಗ – ‘ಚೆನ್ನೈವಾಣಿ’.

  [Reply]

  VA:F [1.9.22_1171]
  Rating: +5 (from 5 votes)
 2. ಹರೀಶ ಕೇವಳ

  Olle yochane,, Samskaravee illadda kelavu namma maani/ koosugala appa badalu samskara ippa estoo uttama hindu koosugala darala appalakku..

  [Reply]

  VA:F [1.9.22_1171]
  Rating: 0 (from 4 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಒಂದು ಸಣ್ಣ ಕಾಲ ಘಟ್ಟದ ಸಮಸ್ಯೆಗೋಸ್ಕರ ಇಡೀ ಸಂಸ್ಕೃತಿಲಿ ಬದಲಾವಣೆ ತಪ್ಪ ಬದಲು ಸಾಧ್ಯವಿದ್ದಷ್ಟು ಮತ್ಟಿಂಗೆ ಶುದ್ದತೆಯ ಕಾಪಾಡಿಗೊಂಡು ಅವವ್ವೆ ಪರಿಹಾರ ಕಂಡುಗೊಮ್ಬದು ಉಚಿತ ಹೇಳಿ ಅನ್ನಿಸುತ್ತು.

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಅವವ್ವೆ ಪರಿಹಾರ ಕ೦ಡುಗೊ೦ಬದು ಹೇಳಿರೆ? ಎ೦ತರ ಪರಿಹಾರ? ಎನಗೆ ಗೊ೦ತಿಪ್ಪ ಮಟ್ಟಿ೦ಗೆ ಈಗಾಣ ಜೀವನ ಮಟ್ಟ ಒಳ್ಳೆತ ಸುಧಾರಿಸಿದ್ದು. ಮಾ೦ತ್ರ ಅಲ್ಲ, ಕೂಸುಗೊಕ್ಕೆ ಈಗ ಆಯ್ಕೆಯ ವಿಷಯಲ್ಲಿ ಸ್ವಾತ೦ತ್ರ್ಯವೂ ಜಾಸ್ತಿ ಇದ್ದು, ಬೇಕಾದಷ್ಟು ಮಾಣಿಯ೦ಗಳೂ ಇದ್ದವು. ಎಲ್ಲೋರೂ ಅವಕ್ಕವಕ್ಕೆ ಆದಷ್ತೂ ಒಳ್ಳೆ ಮಾಣಿಯ೦ಗೊ ಬೇಕು ಹೇಳಿ ಆಶಿಸುವದುದೆ ಸ್ವಾಭಾವಿಕವೇ.
  ಹಾ೦ಗಿಪ್ಪಗ ಸಣ್ಣ ಮಟ್ಟಿನ ಕೃಷಿ, ಬಿಸಿನೆಸ್, ಪೌರೋಹಿತ್ಯ, ಸಣ್ಣ ಉದ್ಯೋಗ ಮಾಡ್ತ ಮಾಣಿಯ೦ಗೊಕ್ಕೆ ಕೂಸು ಸಿಕ್ಕುವದು ಕಷ್ಟದ ಮಾತಾಯಿದು. ಅವು ವೈವಾಹಿಕ ಜೀವನ ಬೇಡ ಹೇಳಿ ಮಡುಗೆಕೋ? ಅವರ ವಿಷಯಲ್ಲಿ ಎ೦ತರ ಪರಿಹಾರ?

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಅವ್ವವ್ವೆ ಪರಿಹಾರ ಕಂಡುಗೊಮ್ಬದು ಹೇಂಗೆ ಹೇಳಿ ಮೇಲೆ ಚೆನ್ನೈ ಭಾವ ವಿವರಿಸಿದ್ದವು.

  ಸಂಸ್ಕ್ರುತಿಲ್ಲಿ ಬದಲಾವಣೆ ಮಾಡಿರೆ ಮುಂದೆ ೫-೧೦ ವರ್ಷಗಳಲ್ಲಿ ಬೇಕಾದಷ್ಟು ಹವ್ಯಕ ಕೂಸುಗ ಇದ್ದರೂ ಬೇರೆ ಜಾತಿಯವರ ಮದುವೆ ಅಪ್ಪಲಕ್ಕು ಹೇಳಿ ಉಳುಕ್ಕೊಳ್ಳುತ್ತು…

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  :-)

  VA:F [1.9.22_1171]
  Rating: +2 (from 2 votes)
 4. ಯಲ್ಲಾಪುರ ಪ್ರಶಾಂತ
  ಯಲ್ಲಾಪುರ ಪ್ರಶಾಂತ

  ಶಣ್ಣ ವಿವರಣೆ:- ಹವ್ಯಕರ ುಪ ಪಂಗಡ ಹೇಳಿ ಆನು ಹೇಳಿದ್ದೆ, ಅಂದರೆ ಮೊದಲಿನ ಕಾಲದಲ್ಲಿ ವಿಧವೆಗೆ ಹುಟ್ಟಿದ ಮಕ್ಕಳನ್ನು ಸಮಾಜದಿಂದ ಬಹಿಷ್ಕಾರ ಹಾಕಿ ದೂರ ಇಡತಿದ್ದೊ, ಅಂಥವರನ್ನ ನಾವು ನಮ್ಮ ಜಾತಿಗೆ ಸೇರಿಸ್ಕಳ, .ಅಂಥವು ತಮ್ಮ ಹೆಸರನ್ನ ಭಟ್ಟ, ಹೆಗಡೆ ಎಂತಲೇ ಮೊದಲಿನ ತಾಯಿಯ ಅಡ್ಡಹೆಸರಿಗೆ ಜೋಡಿಸಿಗೈಂದೋ…ಆದರೆ ನಮ್ಮ ಗುರುಗಳು ಮತ್ತು ನಮ್ಮವರು ಕೆಲವರು ಅವರನ್ನ ನಮ್ಮ ಜಾತಿ ಹೇಳಿ ಒಪ್ಪಿಗೊಂಬಲೆ ಅನುಮಾನ ಮಾಡ್ತಾ ಇದ್ದ. ಅಂಥವರ ಬಗ್ಗೆ ನಾ ಹೇಳಿದ್ದು..>:)

  [Reply]

  VN:F [1.9.22_1171]
  Rating: -2 (from 4 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಅಂಥವರ ಬಗ್ಗೆ ನಾ ಹೇಳಿದ್ದು….??????!!!!

  ಎಲ್ಲಿ ಹೇಳಿದ್ದು? ಏನು ಹೇಳಿದ್ದು ?! ಪ್ರಶಾಂತಣ್ಣ, ಈ ರೀತಿಯ ಶುದ್ದಿ ನೀವು ಮಂಡನೆ ಇಡುವಾಗ ನಿಮ್ಮ ಅನಿಸಿಕೆ , ನಿಮ್ಮ ವಾದ , ನಿಮ್ಮ ಸೆಮಿ ಫೈನಲ್ ನಿರ್ಧಾರ ಮುಂದೆ ಇಡೆಕ್ಕಾಗಿತ್ತು. ಬರೇ “…ವಿವಾಹ ಮಾಡಿಸುವುದು’ – ‘ನಿಂಗ್ಳ ಅಭಿಪ್ರಾಯ ?’, ಹೇಳಿ ಬಾಕಿದ್ದವರತ್ರೆ ಮದಾಲು ಕೇಳುವುದು ಒಪ್ಪಣ್ಣ ಪುಟಕ್ಕೆ ಸಮಂಜಸ ಹೇಳಿ ನಂಗೆ ತೋರ್ತಿಲ್ಲೇ.!

  [Reply]

  VA:F [1.9.22_1171]
  Rating: +3 (from 3 votes)
 6. ಯಲ್ಲಾಪುರ ಪ್ರಶಾಂತ
  ಯಲ್ಲಾಪುರ ಪ್ರಶಾಂತ

  ಹಿಂದಿನ ಕಾಲದಲ್ಲಿ ವಿಧವೆಯರ ಕೀಳಾಗಿ ಕಂಡು ಅವರ ತಲೆ ಕೂದಲು ಕೆತ್ತಿ ವಿರೂಪ ಗೊಳಿಸಿ ಬಿಡುತ್ತಿದ್ದ. ಆ ಕಾಲದಲ್ಲಿ ಅಂಥ ವಿಧವೆಯರು ಸಮಾಜದಿಂದ ದೂರ ಇರಕಾಗಿತ್ತು.ಇಂದು ಹಾಂಗಿಲ್ಲೆ , ವಿಧವೆಯರು ಎಲ್ಲಾದರಲ್ಲಿಯೂ ಮುಂದುವರೆದೋ, ತಲೆ ಬೋಳಿಸುವ ಪಧ್ಧತಿಯೂ ಈಗಿಲ್ಲೆ.. ಮೊದಲಿನ ಕಾಲದಲ್ಲಿ ವಿಧವೆಯರು ಯಾವುದೋ ಪರಿಶಸ್ತಿತಿಯಲ್ಲಿ ಮಕ್ಕಳನ್ನು ಹಡೆದರೆ ಅವರನ್ನು ಜಾತಿಂದ ಹೊರಗೆ ಹಾಕ್ತಾ ಇದ್ದೊ.. ಈಗ ಹಲವರು ಅಂಥವರು ತಮ್ಮ ತಂದೆಯವರ ಗುರುತಿಲ್ಲದೇ ತಾಯಿಯ ಹೆಸರಿನೊಡನೇ ಜೀವನ ಮಾಡ್ತಾ ಇದ್ದೊ. ಅಂಥವರ ಸಂಸಾರ ದೊಡ್ಡ ಪ್ರಮಾಣದಲ್ಲಿ ಬೆಳೆದು ಈಗೀಗ ನಮ್ಮ ಜಾತಿಯವರನ್ನ ವರಿಸುವ ಕೆಲಸಕ್ಕೂ ಹಲವರು ಮುಂದಾಯ್ದೊ..( ಹೆರ ಹಾಕಿದವರನ್ನ ಯಲ್ಲಾಪುರ ಭಾಗದಲ್ಲಿ ‘ಗೌಡಿ’ ಹೇಳಿ ಕರೆಯುತ್ತಿದ್ದೊ)..ಅವರನ್ನ ನಮ್ಮ ುಪ ಪಂಗಡ ಹೇಳಿ ಹೇಳಿದ್ದು ನಾನು ಹೊರತು ಬೇರೆ ಜಾತಿಯವರನ್ನ ತರಿಸುವ ವಿಚಾರವನ್ನಲ್ಲ. ಅಂಥವರ ಮನೆಗೆ ನಮ್ಮ ಸಮಾಜದ ಹಿರಿಯರು, ಸ್ವಾಮೀಜಿಗಳೂ ಹೋಗಿ ಅವರನ್ನು ನಮ್ಮ ಸಮಾಜದ ಮುಖ್ಯವಾಹಿನಿಗೆ ಸೇರಿಸ್ಕಳ ಹೇಳೂದು ನನ್ನ ಅಭಿಮತ.. ಮದುವೆ ಆಗಲೇ ಬೇಕೆಂದು ಹೊರ ಜಾತಿಗಳಿಂದ ಹೆಣ್ಣು ತಪ್ಪುದಕಿಂತಾ ನಮ್ಮಲ್ಲೇ ಇರುವ ವಿಧವೆಯರಿಗೆ ಬಾಳು ಕೊಡುವುದು ಒಳ್ಳೆಯದೇ ಅಲ್ಲದಾ..? ( ಎನ್ನ ಮಾತುಗಳು ಇಲ್ಲಿ ಶೋಭಿಸತಕ್ಕವಲ್ಲವಾಗಿದ್ದರೆ ಕ್ಷಮಿಸಿ..)

  [Reply]

  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  {( ಎನ್ನ ಮಾತುಗಳು ಇಲ್ಲಿ ಶೋಭಿಸತಕ್ಕವಲ್ಲವಾಗಿದ್ದರೆ ಕ್ಷಮಿಸಿ..)}

  ನಿಂಗೊ “ಕ್ಷಮಿಸೆಕ್ಕಾದಂತಹ” ತಪ್ಪು ಮಾಡದ್ದರೂ ಚೆನ್ನೈ ಭಾವ ಹೇಳಿದ ಹಾಂಗೆ ಇದು ಒಪ್ಪಣ್ಣನ ಬೈಲಿಲ್ಲಿ ಬಪ್ಪದಕ್ಕಿಂತ ಮೋರೆಪುಟದ ಹವ್ಯಕ ಗ್ರೂಪುಗಳಲ್ಲಿ ಬರೆಕ್ಕಾದಂತ ಪೋಸ್ಟು ಹೇಳಿ ಕಾಣುತ್ತು… :-)

  [Reply]

  VN:F [1.9.22_1171]
  Rating: +4 (from 4 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ದೊಡ್ಡಭಾವಅನುಶ್ರೀ ಬಂಡಾಡಿಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಮುಳಿಯ ಭಾವಎರುಂಬು ಅಪ್ಪಚ್ಚಿಪುತ್ತೂರುಬಾವಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಕಳಾಯಿ ಗೀತತ್ತೆಡಾಮಹೇಶಣ್ಣಗೋಪಾಲಣ್ಣಶಾಂತತ್ತೆಚೆನ್ನೈ ಬಾವ°ಪವನಜಮಾವವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕವಿಜಯತ್ತೆವೇಣಿಯಕ್ಕ°ನೆಗೆಗಾರ°ಶ್ಯಾಮಣ್ಣಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ