ಹವ್ಯಕ ಸಂಸ್ಮರಣೆ ಕಾರ್ಯಕ್ರಮ

May 13, 2012 ರ 11:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಸ್ಥಾಪನೆ ಹಾಂಗೂ ಅದರ ಅಭಿವೃದ್ಧಿಗೆ ಬೇಕಾಗಿ ಬಹಳಷ್ಟು ಶ್ರಮಿಸಿದ ಪ್ರಕೃತ ದೈವಾಧೀನಾರಾದ ಮಹನೀಯರುಗಳ ಸಂಸ್ಮರಣೆ ಹಾಂಗೂ ಅವರ ಭಾವ ಚಿತ್ರ ಅನಾವರಣ ಕಾರ್ಯಕ್ರಮ ತಾ. ೦೧.೦೫.೨೦೧೨ನೇ ಮಂಗಳವಾರ ನಂತೂರಿನ ಶ್ರೀ ಭಾರತೀ ಕಾಲೇಜಿನ “ಶಂಕರಶ್ರೀ” ಸಭಾಂಗಣಲ್ಲಿ ನೆಡದತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವು ವಹಿಸಿದ್ದಿದ್ದವು. ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಎಂ.ಭಟ್ ಮುಳಿಯದವು ಸಂಘಟನೆಯ ಮಹತ್ವ ಉದ್ದೇಶಂಗಳ ವಿವರುಸಿ, ಸಭಾ ಸ್ಥಾಪನೆಗೊಂಡ ಹಿನ್ನೆಲೆಯ ವಿವರುಸಿ ಎಲ್ಲೋರನ್ನೂ ಸ್ವಾಗತಿಸಿದವು.

ಶ್ರೀ ಚಂದ್ರಶೇಖರ ದೈತೋಟ ಮಾತನಾಡಿ, ದಕ ಕಾಸರಗೋಡು ಹವ್ಯಕ ಮಹಾಜನ ಸಭಾ ೩೨ ವರ್ಷ ಹಿಂದೆ ಏವ ರೀತಿ ಸುರು ಆತು ಹೇಳಿ ವಿವರುಸಿದವು. ಹೆರಾಣ ಊರಿಂದ ಮಂಗ್ಳೂರಿಂಗೆ ಬಪ್ಪ ಹವ್ಯಕ ವಿದ್ಯಾರ್ಥಿನಿ/ ಮಹಿಳೆಯರಿಂಗೆ ವಸತಿಯ ಅನಿವಾರ್ಯತೆಂದ ನಿಲಯವೊಂದರ ಸ್ಥಾಪನೆಗೆ ಬೇಕಾಗಿ ಇದು ಸುರು ಆತು ಹೇಳಿದವು.  ಮತ್ತೆ,  ಶ್ರೀ ಭೀಮೇಶ್ವರ ಜೋಷಿಯವು  ಮಹನೀಯರುಗಳಾದ ದಿ.ಕೂಡೂರು ಕೃಷ್ಣ ಭಟ್, ದಿ. ಸಿ.ವಿ.ಶಾಂತಾ, ದಿ.ಶಂಕರನಾರಾಯಣ ಭಟ್ ಕಾಶೀಮಠ, ದಿ.ಖಂಡಿಗೆ ಶ್ಯಾಮ ಭಟ್ ಹಾಂಗೂ ದಿ.ವರ್ಮುಡಿ ರಾಮ ಭಟ್ ಅವರ ಸಂಸ್ಮರಣೆ ಮಾಡಿ ಅವರ ಭಾವಚಿತ್ರವ ಅನಾವರಣ ಗೊಳಿಸಿದವು.

ಶ್ರೀ ಭೀಮೇಶ್ವರ ಜೋಷಿ ಸಭಾಧ್ಯಕ್ಷರ ನೆಲೆಲಿ ಮಾತಾಡಿ,  ಸ್ಮರಣೆ ಎಲ್ಲೋರು ಮಾಡ್ತವು. ಆದರೆ ಸಂಸ್ಮರಣೆ ವಿಶೇಷ, ಆ ಆಚರಣೆ ಇನ್ನೂದೆ ಶ್ರೇಷ್ಠ. ಅದು ಕ್ರಿಯಾಶೀಲ ಚಿಂತನೆ, ದುಡಿಮೆ/ಸಾಧನೆಗಳ ಗುರುತಿಸಿದ ಸೂಚನೆ. ವ್ಯಕ್ತಿಯ ಸಾಧನೆ ಉಳಿದವಕ್ಕೆ ಆದರ್ಶವಾಗಿರಲಿ, ಸಾಧನೆ ನಿರಂತರವಾಗಿರಲಿ, ಹೇಳ ತತ್ವ ಸಂದೇಶ ಈ ಕಾರ್ಯಕ್ರಮದ ಹಿಂದೆ ಇದ್ದು. ಸ್ಮರಿಸಿದ ಸ್ಮರಣೆ ನಮಗೆ ಚೈತನ್ಯಪೂರಕವಾಗಿರಲಿ ಹೇಳಿ ಶುಭ ಹಾರೈಸಿದವು. ಸಮಾಜ, ಸಂಘ, ಸಂಘಟನೆ, ಸಭೆ, ಉದ್ದೇಶ ಹೇಳ್ತ ಐದು ವಿಷಯಂಗೊ ಒಂದೇ ವ್ಯವಸ್ಥೆಯ ಮುಖವಾಗಿದ್ದಲ್ಲಿ ಪಂಚಮಂ ಕಾರ್ಯಸಿದ್ದಿ: ಹೇಳಿ ಆವ್ತು. ಸಂಘಟನೆಂದ ನಮಗೆ ಎಂತ ಸಿಕ್ಕಿದ್ದು ಹೇಳ್ತ ಮನೋಭಾವನೆಂದ, ನಾವು ಸಂಘಟನೆ ಎಂತ ಕೊಟ್ಟಿದು ಹೇಳ್ತ ಚಿಂತನೆ ಮಂಥನ ಆಗಿ ಅಪ್ಪಗ ಬಲಿಷ್ಠತೆ, ಕಾರ್ಯಸಿದ್ದಿ ಸಾಧ್ಯ. ಸಂಘಟನೆಲಿ ಯುವಶಕ್ತಿಯನ್ನುದೆ ಸೇರ್ತ ಹಾಂಗೆ ಪ್ರೇರೇಪಣೆ ಕೊಡಿ. ನಮ್ಮಲ್ಲಿ ಏವದೇ ಕೊರತೆ ಇಲ್ಲೆ. ಇಚ್ಛಾ ಶಕ್ತಿ, ಜ್ಞಾನಶಕ್ತಿ, ಧನಮೂಲಶಕ್ತಿ ಎಲ್ಲವುದೆ ಇದ್ದು. ಆದರೆ, ನಮ್ಮಲ್ಲಿ ಮನಸ್ಸು ವಿಶಾಲ ಇಲ್ಲೆ, ಹೃದಯಶ್ರೀಮಂತಿಕೆ ಇಲ್ಲೆ. ಕೌಟುಂಬಿಕ ದೌರ್ಬಲ್ಯಂಗಳ ಮೆಟ್ಟಿನಿಂದು ಅಡಿಪಾಯಮಾಡಿ ಪ್ರಗತಿ ಕಡೇಂಗೆ ಚಿಂತನೆ ಹಾಂಗೂ ಅನುಷ್ಟಾನ ಮಾಡಿರೆ ಬೆಳವಣಿಗೆ ಸಾಧ್ಯ ಹೇಳಿ ಹೇಳಿದವು.

ಶ್ರೀಯುತ ಉಳ್ಳೋಡಿ ಗೋಪಾಲಕೃಷ್ಣ ಭಟ್ ಚೆಂದಕೆ ಕಾರ್ಯಕ್ರಮ ನಿರ್ವಹಣೆ ಮಾಡಿದವು. ವೇದಿಕೆಲಿ ನಿಕಟಪೂರ್ವ ಅಧ್ಯಕ್ಷ ಶ್ರೀ ಕೊಲ್ಲರ ಮಜಲು ಶಂಕರ ಭಟ್, ಉಪಾಧ್ಯಕ್ಷ ಶ್ರೀ ಕಜೆ ಈಶ್ವರ ಭಟ್, ಕೋಣಾಜೆ ಶ್ರೀ ಜಿ.ಕೆ.ಭಟ್ ಉಪಸ್ಥಿತರಿತ್ತಿದ್ದವು. ಸಭಾದ ಹಿಂದಾಣ ಅಧ್ಯಕ್ಷರುಗೊ, ಸಂಸ್ಮರಣೆಗೊಂಡ ಮಹನೀಯರ ಮನೆಯವು, ಅವರ ಹತ್ರಾಣ ಸಂಬಂಧಿಕರುದೆ ಕಾರ್ಯಕ್ರಮಲ್ಲಿ ಭಾಗವಹಿಸಿದವು. ಕಡೆಂಗೆ ಕಾರ್ಯದರ್ಶಿ ಶ್ರೀ ನಿಡುಗಳ ಕೃಷ್ಣ ಭಟ್ ವಂದಿಸಿದವು.

ರುಚಿಕರ ಭೋಜನದ ಜೆತೆಲೆ ಕಾರ್ಯಕ್ರಮ ಕೊನೆಗೊಂಡತ್ತು.

ಕೆಲವು ಪಟಂಗೊ:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ಕಾರ್ಯಕ್ರಮ. ಶುದ್ದಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಬೊಳು೦ಬು ಮಾವಾ, ಶುದ್ದಿಗೆ ಧನ್ಯವಾದ..
  ಇನ್ನಾಣ ವಾರ ಇಲ್ಲಿ ಸತ್ಯನಾರಾಯಣ ಪೂಜೆ ಇದ್ದಾಡ, ದೇವರೆತ್ತಿಸಿರೆ ಒ೦ದು ಘಳಿಗ್ಗೆ ಹೋಗಿ೦ಡು ಬರೆಕ್ಕು..

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಕಳುದೊರಿಶ ಹೋಯಿದಿರನ್ನೆ ಬಾವಾ..
  ಈ ವರುಶುವೂ ಹೋಗಿಯೊಂಡು ಬಂದು ಸುದ್ದಿ ಹೇಳೆಕ್ಕಿದಾ..

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ಕಾರ್ಯಕ್ರಮ.ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸಂತೋಷ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹಿರಿಯವು ಸಮಾಜಕ್ಕೆ ಕೊಟ್ಟ ಕೊಡುಗೆಯ ಸ್ಮರಣೆ ಮಾಡಿದ ಒಳ್ಳೆ ಕಾರ್ಯಕ್ರಮ.
  ಪಟಂಗೊ, ಒಟ್ಟು ಕಾರ್ಯಕ್ರಮದ ಸ್ಥೂಲ ಪರಿಚಯ ಕೊಟ್ಟತ್ತು.

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಡೈಮಂಡು ಭಾವ

  ಮಾವ° ವರದಿಗೆ ಧನ್ಯವಾದ .. ಒಳ್ಳೆ ಕಾರ್ಯಕ್ರಮ

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ಸವಿವರ ವರದಿ.ಧನ್ಯವಾದ ಬೊಳು೦ಬುಮಾವಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಸಂಪಾದಕ°ಪುಟ್ಟಬಾವ°ಸರ್ಪಮಲೆ ಮಾವ°ಚೆನ್ನೈ ಬಾವ°ದೊಡ್ಮನೆ ಭಾವಬಂಡಾಡಿ ಅಜ್ಜಿಅಜ್ಜಕಾನ ಭಾವಪೆಂಗಣ್ಣ°ದೊಡ್ಡಮಾವ°ಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಡಾಮಹೇಶಣ್ಣಕಾವಿನಮೂಲೆ ಮಾಣಿಕೇಜಿಮಾವ°ಗಣೇಶ ಮಾವ°ಮಾಷ್ಟ್ರುಮಾವ°ಪುಣಚ ಡಾಕ್ಟ್ರುವೇಣೂರಣ್ಣಶಾಂತತ್ತೆಸುವರ್ಣಿನೀ ಕೊಣಲೆಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ