ನಾವೇ ಹೀಂಗೆ ಮಾಡಿರೆ ಹೇಂಗೆ …. ????

May 1, 2011 ರ 8:30 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎರುಂಬು ಅಪ್ಪಚ್ಚಿಗೆ ಕಂಪ್ಯೂಟರು ಅರಡಿಗು.
ರಾಮಜ್ಜನ ಕೋಲೇಜಿಲಿ ಕಂಪ್ಯೂಟ್ರು ಡಾಗುಟ್ರು ಆಗಿದ್ದವು ಇವು.
ಮದಲಿಂದಲೇ ಬೈಲಿಂಗೆ ಬಂದು ಬಂದು; ಎಲ್ಲೋರನ್ನೂ ಮಾತಾಡುಸಿ ಗುರ್ತ ಇರ, ಆದರೆ ಕಂಡು ಗುರ್ತ ಇದ್ದೇ ಇದ್ದು!
ಇಂದು ಶುದ್ದಿ ಹೇಳುದರ ಮೂಲಕ ಬೈಲಿಂಗೆ ಇಳಿತ್ತಾ ಇದ್ದವು.
ಎಲ್ಲೋರುದೇ ಇವರ ಶುದ್ದಿಗೊಕ್ಕೆ ಒಪ್ಪ ಕೊಡುದರ ಮೂಲಕ ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಕೋರಿಕೆ.

ಎರುಂಬು ಅಪ್ಪಚ್ಚಿಯ ಪುಟಂಗೊ:
ಬೈಲಿನ ಪುಟ: http://oppanna.com/nerekare/yerumbuprasad/
ಮೋರೆಪುಟ: http://www.facebook.com/profile.php?id=100000535038276
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=15007730180061544949

ಮೊನ್ನೆ ಸೋಮವಾರ ಒಂದು ಮದುವೆಯ ಸಟ್ಟುಮುಡಿಗೆ ಹೋಗಿತ್ತೆ.
ಆದಿತ್ಯವಾರ ಪುತ್ತೂರು ರಾಮಜ್ಜನ ಕಾಲೇಜಿಂಗೆ ಹೋಪ ಬಸ್ ನಿಲ್ದಾಣದ ಹತ್ತೆರೆಣ ಒಂದು ಹಾಲಿಲಿ ಮದುವೆ…
ಕೂಸಿನ ಕಡೆಣ ಹೇಳಿಕೆ.. ಕೂಸು ರಜಾ ದೂರಂದ ಸಂಬಂದ, ಎರುಂಬು ಅಪ್ಪಚ್ಚಿಯ ಸೊಸೆ( ಚಿಕ್ಕಮ್ಮ ನ ಅತ್ತಿಗೆಯ ಮಗಳು).

ಅದಲ್ಲದ್ದೆ ಆ ಕೂಸಿನ ಮನೆಯ ಕಂಪ್ಯೂಟರ್ ನ ಮನೆ ಡಾಕ್ಟ್ರ(family doctor)!
ಹಾಂಗಾಗಿ ಎರಡೆರಡು ರೀತಿಲಿ ಸಂಬಂದ.

ಮದುವೆಗೆ ಹೊಪಲಾಯಿದಿಲ್ಲೆ…ರಜೆದಿನ ಪುತ್ತೂರಿಂಗೆ ಬರಕ್ಕನ್ನೇ ಹೇಳಿ ಆದರುದೇ, ನೆರೆಕರೆಲಿ ಒಂದು ಉಪನಯನ ಇತ್ತು.
ಸಟ್ಟುಮುಡಿ ದಿನ ಮದ್ಯಾಹ್ನ ಪುರುಸೊತ್ತು ಮಾಡಿಗೊಂದು ಹೋಗಿತ್ತೆ…ಸುಮಾರು 12:00 ಆಗಿತ್ತು ಎತ್ತುವಗ….
ಆಸರಿಂಗೆ ಕುಡುದು ಆಗಿ ಅಲ್ಲೆ ಕರೇಲಿ ಕುರ್ಶಿಲಿ ಕೂದಿತ್ತೆ…
ಕತ್ತರೆ ಕೂದಿತ್ತ ಎರಡು ಜನ ಅಪ್ಪಚ್ಚಿಯಕ್ಕ ಮಾತಾಡಿಗೊಂದಿತ್ತವು….

“ಭಟ್ರತ್ತರೆ ಹೇಳಿದೆ ಆನು, ಸುರುವಿಂಗೆ ವಸಗೆ ಮಾಡುವ – ಮತ್ತೆ ಹೋಮ ಮಾಡ್ಲಕ್ಕು ಹೇಳಿ…
ಕೇಳಿದವಿಲ್ಲೆ….
ಮದಾಲು ವಸಗೆ ಮಾಡಿ ಮತ್ತೆ ಹೋಮ ಮಾಡಿರೆ ಎಂತಾವುತ್ತಿತ್ತು…. ಇನ್ನು ಊಟಕ್ಕೆ ತಡವಪ್ಪದಿದ ….
ಸುಮಾರು ಹೊತ್ತಾತು ಹೋಮ ಸುರುಮಾಡಿ … ಇನ್ನುದೆ ಮುಗುದ್ದಿಲ್ಲೆ….
ಈ ಭಟ್ಟಕ್ಕ ಎಲ್ಲಾ ಹೀಂಗೆ… ಅವಕ್ಕೆ ಬೇಕಾದಾ ಹಾಂಗೆ ಮಾಡುದು…ಹೋಮ ಮುಗಿಶಿಕ್ಕಿ ವಸಗೆ ಮಾಡಿರೆ, ಮತ್ತೆ ಒಂದನೆ ಹಂತಿಲಿ ಉಂಡಿಕ್ಕಿ ಪಕ್ಕ ಹೋಪಲಕ್ಕಿದಾ…
ಹೊತ್ತಪ್ಪಗ ಎಲ್ಲಿಯಾದರು ದೊಡ್ಡ ಪೆಟ್ಟಿಕ್ಕು … ಹಾಂಗೆ ಹೋಮ ಮದಾಲು ಮಾಡುಗಿದ್ದು”

ನಿಜವಾಗಿ ಹೇಳುದಾದರೆ, ವಸಗೆ ಮದಲು ಮಾಡಿ ಮತ್ತೆ ಹೋಮ ಮಾಡುವ ಕ್ರಮ ಇಲ್ಲೆ ಹೇಳಿ ಕಾಣ್ತು … ಈಗಾಣ ಅನುಕೂಲ ಶಾಸ್ತ್ರಲ್ಲಿ ಇಪ್ಪಲೂ ಸಾಕು,ಗೊಂತಿಲ್ಲೆ…

ಆದರೆ ಈ ರೀತಿ ಹೇಳುದು ಎಷ್ಟು ಸರಿ ಹೇಳಿ ಗೊಂತಿಲ್ಲೆ…

ಕೊನೆಮಾತು: ಈ ರೀತಿ ನಮ್ಮ ಬಗ್ಗೆ comment ಮಾಡಿಗೊಂಬದು ಸರಿ ಇಲ್ಲೆ ಹೇಳಿ ಎನ್ನ ಅಭಿಪ್ರಾಯ.. ನಿಂಗಳ ಅಭಿಪ್ರಾಯ ಎಂತ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಸರಿಯೊ ತಪ್ಪೊ ನಮ್ಮ ಕಾರ್ಯಕ್ರಮಂಗಳ ರೀತಿಲಿ ಬದಲಾವಣೆ ಆಗಿಕೊಂಡೆ ಇದ್ದು.
  ಹೀಂಗಾಗಿ ನಿಂಗೊ ಹೇಳಿದರೀತಿಯೂ ಅಕ್ಕು.
  ಇನ್ನು ಮುಹೂರ್ತ ೧೨ ಗಂಟೆಗೆ ಆದರೆ ಅದಕ್ಕೆ ಮೊದಲೆ ವಸಗೆ ಮಾಡುವೊ ಮತ್ತೆ ಜನಿವಾರ ಹಾಕಿದ ಮೇಲೆ ಊಟ ಹಾಕಲಿ ಹೇಳಿಯೂ ಹೇಳುಗು.
  ನಮ್ಮ ಸಮಾಜದ ಹಿರಿಯರು,ವೈದಿಕ ಮನೆತನದವು ಸೇರಿ ಒಂದು ಸಭೆ ನಡೆಸಿ ಯಾವೆಲ್ಲಾ ಕ್ರಮಂಗಳ ನಾವು ಮದುವೆ ,ಉಪನಯನಂಗಳಲ್ಲಿ ಮಾಡೆಕ್ಕು ಯಾವುದರ ನಂತರ ಯಾವುದು,ಸಮಯಲ್ಲಿ ವ್ಯತ್ಯಾಸ ಇದ್ದರೆ ಹೇಂಗೆ ಹೇಂಗೆ ವ್ಯತ್ಯಾಸ ಮಾಡೆಕ್ಕು ಹೇಳಿ ಶಾಸ್ತ್ರೀಯ ನೆಲೆಲಿ ನಿರ್ಣಯ ಮಾಡೆಕ್ಕು.ಇಲ್ಲದಿದ್ದರೆ ಕೆಲವು ಅತ್ಯಗತ್ಯ ಕ್ರಮಂಗಳೂ ಬಿಟ್ಟು ಹೋಕು.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಅದು ಸರಿಯೇ.. ಆದರೆ ಸಟ್ಟುಮುಡಿ ದಿನ ತಡವಪ್ಪದು ಭಟ್ರಿಂದ ಆಗಿ ಅಲ್ಲ ಹೇಳಿ ಎನ್ನ ಅಬಿಮತ… ಸಟ್ಟುಮುಡಿ ದಿಬ್ಬಣ ಬಪ್ಪಗಲೇ ೯-೧೦ ಗಂಟೆ ಮಾಡಿರೆ ಭಟ್ರೆಂತ ಮಾಡ್ಲೆಡಿಗು ????

  [Reply]

  VA:F [1.9.22_1171]
  Rating: 0 (from 0 votes)
 2. ಕೇಜಿಮಾವ°
  ಕೆ ಜಿ ಭಟ್

  ಯೇವದೇ ಜೆಂಬಾರ ಆದರೂ ಉಂಬ ಹೊತ್ತು ಹೇಳಿ ಒಂದಿದ್ದದ,ಅದರ ಒಳ ಊಟ ಆಗದ್ದರೆ ಆರೋಗ್ಯಕ್ಕೆ ಖಂಡಿತಾ ಒೞೆದಲ್ಲ.ಜೆಂಬಾರ ಮಾಡ್ತವು ಒಂದೇ ಮಾಡ್ತದಾದರೂ ಹೇಳಿಕೆ ಹೇಳ್ಸಿಗೊಂಡು ಬಂದವು ಸರಿಯಾದ ಹೊತ್ತಿಂಗೆ ಉಣ್ಣಗದ್ದರೆ ಡಯಬಿಟಿಸ್ ಅಥವಾ ಅಸಿಡಿಟಿಯ ಹಾಂಗಿದ್ದ ಕಾಯಿಲೆ ಇಪ್ಪವು ಎಂತ ಮಾಡೆಕ್ಕು?ಕ್ರಮಂಗೊ ಬದಲಾವುತ್ತು.ಇಂದು ಆರಾರೂ ಮದುವೆ ಆಗಿ ಆರನೇ ದಿನಲ್ಲಿ ಸಟ್ಟುಮುಡಿ ಮಾಡ್ತವೋ?ನಾಲ್ಕನೇ ದಿನ ಚತುರ್ಥಿ ಮಾಡ್ತವೋ?ಉಪನಯನದ ದಿನವೇ ದಂಟೂರ್ತವೂ ಮಾಡ್ತದು ಯಾವ ಕ್ರಮ?
  ಕ್ರಮಂಗೊ ಬಿಟ್ಟು ಹೋಪದಕ್ಕೆ ಹೇಳಿಯೊಂಡು ಹೇಳಿಕೆ ಹೇಳಿದವಕ್ಕೆ ಹಿಂಸೆ ಅಪ್ಪಲಾಗ.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ನಿಂಗಳ ನವಾದವ ಆನು ಒಪ್ಪುತ್ತಿಲ್ಲೆ…. ಆತರ ಕಾಯಿಲೆ ಇಪ್ಪವಕ್ಕೋಸ್ಕರ ಊಟ ಬೇಗ ಮಾಡ್ಲೆ ಆವುತ್ತಿಲ್ಲೆ ಅಲ್ಲದಾ… ಆತರ ಮಾಡ್ಲೆ ಹೋದರೆ “ತಿರುಪತಿಲಿ ಮಕ್ಕ ಇಪ್ಪವು / ಪ್ರಾಯದವಕ್ಕೆ ಹೇಳಿ ಸ್ಪೆಷಲ್ ಕ್ಯೂ ” ಮಾಡಿದ ಹಾಂಗೆ ಅಕ್ಕು… ಎಲ್ಲರಿಂಗೂ ಕಾಯಿಲೆಂಗ ಬಕ್ಕು… ಬೇಗ ಮನೆಗೆ ಹೊಪಲೆ….

  [Reply]

  ಕೇಜಿಮಾವ°

  ಕೆ ಜಿ ಭಟ್ Reply:

  ಹಾಂಗಾರೆ ನಿಂಗೊ ಆರು ದಿನದ ಮದುವೆ ಮಾಡುವ ಕ್ರಮದವಾ?ಉಪನಯನ ಆಗಿ ನಾಲ್ಕನೇ ದಿನಲ್ಲೇ ದಂಟೂರ್ತ ಮಾಡ್ತಿರಾ?
  ತಿರುಪತಿಯ ನಮ್ಮ ಕ್ರಮಕ್ಕೆ ಹೋಲುಸುದು ಸರಿಯಲ್ಲ.
  ಕಾಯಿಲೆ ಇಪ್ಪವಕ್ಕೂ ಅಪ್ಪ ಹಾಂಗೆ ಮಾಡೆಕ್ಕು ಹೇಳಿ ಅಲ್ಲದ್ದೆ ಅವಕ್ಕೆ ಹೇಳಿ ಬೇರೇ ವ್ಯವಸ್ತೆ ಮಾಡೆಕ್ಕು ಹೇಳಿ ಏನೂ ಇಲ್ಲೆ.
  ಬೇಗ ಮನಗೆ ಹೋಗದ್ದೆ ಇಪ್ಪಲೆ ಜೆಂಬಾರಕ್ಕೆ ಹೋಪದೇ ಉದ್ಯೋಗ ಅಲ್ಲದಾ.
  ಇನ್ನೊಬ್ಬಂಗೆ ಹಿಂಸೆ ಅಪ್ಪಲಾಗ ಹೇಳುವ ವಾದವ ಒಪ್ಪದ್ದರೆ ಎನಗೇನೂ ಹೇಳ್ಲೆ ಸಾಧ್ಯ ಇಲ್ಲೆ.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಶಿರಸಿ ಹೊಡೆಲಿ ಈಗಲುದೇ ಆರು ದಿನ ಮದುವೆ ಕಾರ್ಯಕ್ರಮ ನಡೆತ್ತಡ .. ನಮ್ಮವಕ್ಕೆ ಆರು ದಿನ ಮದುವೆ ಕಾರ್ಯಕ್ರಮ ಮಾಡ್ಲೆ ನಿಂಗಳಾಂಗೆ ಪುರ್ಸೊತ್ತಿರ / ಕಷ್ಟ ಅಕ್ಕು .. ಹಾಂಗಾಗಿ ಒಂದೇ ದಿನಲ್ಲಿ ಮುಗಿಶುತ್ತವು … ಹಾಂಗೇಳಿ ಇಂತಿಷ್ಟೇ ಹೊತ್ತಿಂಗೆ ಊಟ ಮಡುಗೆಕ್ಕು ಹೇಳುದು ನ್ಯಾಯ ಅಲ್ಲ .. ಕೆಲವು ಜನಕ್ಕೆ ಊಟ ಲೇಟಾದರೆ ಅವರ “ಇನ್ ಕಂ ” ಗೆ ಹೊಡೆತ ಬೀಳುಗು … ಹಾಂಗಾಗಿ ಅಮಸರ ಮಾಡುದು … ಹಾಂಗಿಪ್ಪವು ಮದುವೆ/ಉಪನಯನಕ್ಕೆ ಹೋಪಲಾಗ .. ಹೋವುತ್ತರುದೇ ಎಲ್ಲ ಮುಗುದ ಮೇಲೆ ಹೊತ್ತೋಪ್ಪಗ ಹೋಯೆಕ್ಕು .. ಅಷ್ಟಪ್ಪಗ ಬೇಗ ಹೊಪಲುದೇ ಆವುತ್ತು …. ಕಾಯಿಲೆ ಇದ್ದರುದೇ ತೊಂದರೆ ಇಲ್ಲೆ …

  ಕೇಜಿಮಾವ°

  ಕೆ ಜಿ ಭಟ್ Reply:

  ಬಪ್ಪಲೆ ಹೇಳಿಯಪ್ಪಗ ಹೋಗದ್ದರೆ ಸರಿ ಆವುತ್ತಿಲ್ಲೆ,ಅದಕ್ಕೆ ಹೋಪದು.ಹಾಂಗಿದ್ದ ಸಂದರ್ಭಲ್ಲಿ ಆನು ಉಣ್ಣದ್ದೆ ಬತ್ತೆ.
  ಮತ್ತೆ ಪಪುರುಸೊತ್ತಿಲ್ಲದ್ದವೇ ಬೇಗ ಉಂಡಿಕ್ಕಿ ಹೋಯೆಕ್ಕು ಹೇಳಿ ತಯಾರಿ ಮಾಡಿಯೊಂಡು ಬಪ್ಪದು.

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ವಿಷಯ ಅಪ್ಪಾದ್ದೆ. ಆದರೆ, ಕಿಟ್ಳೆ ಹೋದರೆ ಕಚ್ಚಲೆ ಬಕ್ಕು. ಈಗಾಣ ಅನುಕೂಲಕ್ಕೆ ಕೆಲವೊಂದು ತಿದ್ದುಪಡಿ ಅಗತ್ಯ ಹೇಳಿ ಹಲವರ ಮತ. ಆದರೂ ಎಲ್ಲಿಂದ ಸುರುಮಾಡುತ್ಸು ಎಂಬುದು ಕೆಲವರ ಮತ. ಒಂದು ಹೀಂಗೆ ಸರಿಯಿಲ್ಲೆ ಹೇಳಿರೆ ಅಂಬಗ ಆಚದು ಸರಿ ಇದ್ದೋ ಹೇಳಿ ಚೋದ್ಯ ಬಕ್ಕು. ಮದಾಲು ಅದರ ಸರಿ ಮಾಡು ಮತ್ತೆ ಇದರ ಮಾತಾಡು ಹೇಳಿರೆ ವಾದ ಮಾಡಿಗೊಂಡು ಕೂಬಲೆ ಆರಿಂಗೆ ಪುರುಸೋತ್ತಿದ್ದು?!

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಅದೆಂತಕೆ ನವಗೆ ಹ್ಯವ್ಯಕರಿಂಗೆ ಮಾತ್ರ ಎಂತಕೆ ಬದಲಾವಣೆ ???? … ಶಿವಳಿ / ಇತರ ವು ಎಂತಕೆ ಈಗಲೂ ಎಲ್ಲಾ ಶಾಸ್ತ್ರಂಗವಕ್ಕೆ ಒತ್ತು ಕೊಡ್ತವು ????

  [Reply]

  ಕೇಜಿಮಾವ°

  ಕೆ ಜಿ ಭಟ್ Reply:

  ಶಿವಳಿಯವು ಹೊಳಗೆ ಹಾರ್ತವು ಹೇಳಿ ಆದರೆ ನಾವುದೇ ಹಾರುವೊ°

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಅವು ಹೊಳೆಗೆ ಹಾರ್ತವು ಹೇಳಿ ನಾವುದೇ ಹಾರುದಲ್ಲ … ಹಾಂಗೆ ಹೇಳಿ ನಾವು ಒಲ್ಲೆ ಸಂಪ್ರದಾಯಂಗಳ ಬಿಡುದಲ್ಲ …

  VA:F [1.9.22_1171]
  Rating: 0 (from 0 votes)
 4. ಮುಣ್ಚಿಕಾನ ಭಾವ

  ಈಗಾಣ ಕಾಲಲ್ಲಿ ಕ್ರಮಂಗೊ ಹೇಂಗೆ ಬೇಕಾದರೂ ನಡೆತ್ತು. ಬೇಕಾದರೆ ಒಂದು ಸತ್ಯನಾರಾಯಣ ಪೂಜೆಯ ಒಂದೇ ಘಂಟೆಲಿ ಮುಗುಶುತ್ತವು ಅಲ್ಲದಾ 😉
  {ಈ ರೀತಿ ನಮ್ಮ ಬಗ್ಗೆ comment ಮಾಡಿಗೊಂಬದು ಸರಿ ಇಲ್ಲೆ…}
  ಆನುದೇ ಒಪ್ಪುತ್ತೆ…

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಆ ಎರಡು ಅಪ್ಪಚ್ಚಿಯೋಕ್ಕೆ ಮನೆಯವ ಆಮಂತ್ರಣ ಕೊಡುವಾಗ ‘ಒಪ್ಪತ್ತು ಮುಂಚಿತವಾಗಿ ಬಂದು ಕಾರ್ಯಕ್ರಮ ಚಂದಗಾಣಿಸಿ ಕೊಟ್ಟು ವಧೂ ವರರನ್ನು ಆಶೀರ್ವದಿಸ ಬೇಕಾಗಿ ಅಪೇಕ್ಷೆ’ ಹೇಳಿ ಹೇಳಿದ್ದವಿಲ್ಲೆಯೋಪ.! ಅಲ್ಲಾ , ಹಾಂಗೆ ಹೇಳಿರೆ ಎಂತರ ಹೇಳಿ ಅರ್ಥ ಆಗದ್ದೆ ಹೋತೋ!

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಎರು೦ಬು ಅಪ್ಪಚ್ಚಿಗೆ ಸ್ವಾಗತ.
  “ಅನುಕೂಲಶಾಸ್ತ್ರ”ದ ಪ್ರಕಾರ ನೆಡವೊದೋ? ಮುಹೂರ್ತ ತಡವಾದರೆ ಊಟ ಕಳುದು ಮ೦ತ್ರಾಕ್ಷತೆ,ಒಸಗೆ ಮಾಡಿಗೊ೦ಡಿತ್ತಿದ್ದವು.ಆದರೆ ಪುರುಸೊತ್ತಿಲ್ಲದ್ದ ಈಗಾಣ ಪರಿಸ್ಥಿತಿಲಿ ಈ ಬದಲಾವಣೆ ಸಾಮಾನ್ಯ ಆಯಿದು.ಆದರೆ, ಕಡೇ ನಿಮಿಷಲ್ಲಿ ಈ ವಿಷಯಲ್ಲಿ ಗೊ೦ದಲ ಇಪ್ಪಲಾಗ.
  ಗೋಪಾಲಣ್ಣನ ಅಭಿಪ್ರಾಯಕ್ಕೆ ಎನ್ನದೂ ಸಹಮತ ಇದ್ದು.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಇನ್ನಿನ್ನು ಬೆಂಗಳೂರಿಲಿ ನೆಡವ ಹಾಂಗೆ ಮದುವೆ ಮುನ್ನಾಣ ದಿನ ಬಂಧುಗವಕ್ಕೆ ಊಟ – ಊಪಚಾರ.. ಮರದಿನ ಮದುವೆ ಶಾಸ್ತ್ರ (ವಧು-ವರ ರ ಮನೆಯವು ಮಾತ್ರ)…. ಗುರಿಕ್ಕಾರರತ್ರೆ ಹೇಳಿ ಭಟ್ಟ ಮಾವನತ್ರೆ ಮಾತಾಡುವ ….

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಪ್ಪಚ್ಚಿ,
  ಪೇಟೆ ಬೆಳದಷ್ಟು ಮನಸ್ಸು ಸಣ್ಣ ಆವುತ್ತು,ಸ೦ಬ೦ಧ೦ಗೊ ದೂರ ಆಗಿ ವ್ಯವಹಾರವೇ ಮುಖ್ಯ ಆವುತ್ತು.ಪೇಟೆಯ ಮದುವೆಗಳೇ ಶಾಸ್ತ್ರಕ್ಕೋ ಹೇಳಿ ಸ೦ಶಯವೂ ಬತ್ತು.
  ನಿ೦ಗೊ ಹೇಳಿದ ಹಾ೦ಗೆ ಮದುವೆ ಮುನ್ನಾಣ ದಿನ ಹೊತ್ತೋಪ್ಪಗ ಹಾಲ್ ಸಿಕ್ಕಿದ ಕೂಡಲೆ ಮದುಮ್ಮಾಯ-ಮದಿಮ್ಮಾಳು ವೇದಿಕೆಗೆ ಬ೦ದು ಮಾಲೆ ಹಾಕಿಗೊ೦ಡು (ಪಗರಿಸಿಗೊ೦ಡು) ನಿ೦ಗು.ಬ೦ದ ಜೆನ೦ಗೊ ಸಾಲಿಲಿ ನಿ೦ದು ಪಟಕ್ಕೆ ,ವಿಡಿಯೊಕ್ಕೆ ಒ೦ದರಿ ಮೋರೆ ತೋರುಸಿ,ಪೆಚ್ಚುನೆಗೆ ಮಾಡಿ ಊಟಕ್ಕೆ ನೆಡಗು,ಅಲ್ಲಿಗೆ ಮುಗಾತು.ಮರದಿನ ಮದುವೆಗೆ ಮನೆಯವ್ವು ಮಾ೦ತ್ರ.
  ಅನುಕೂಲ ಹೇಳಿಗೊ೦ಡು ನಮ್ಮ ಸಮಾಜ ಈ ಮಟ್ಟಕ್ಕೆ ಇಳಿವದು ಬೇಡಪ್ಪಾ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಒಂದು ರಜಾ ಹಿಂದೆ ಮುಂದೆ ಮಾಡಿ ಎಲ್ಲೋರಿಂಗು ತೊಂದರೆ ಆಗದ್ದ ಹಾಂಗೆ, ಕಾರ್ಯಕ್ರಮವ ಚೆಂದ ಮಾಡ್ಳೆ ಪುರೋಹಿತರು, ಗುರಿಕ್ಕಾರರು, ಮನೆ ಎಜಮಾನ ಪ್ರಯತ್ನ ಮಾಡಿಯೇ ಮಾಡುತ್ತವು. ಕೆಲವೊಂದರಿ ಪ್ರಯತ್ನ ಮೀರಿ ರಜಾ ಆಚೀಚೆ ಆವುತ್ತು. ಅದಕ್ಕೆ ನಾವು ಪರಂಚುತ್ತದು ಸರ್ವಥಾ ಸರಿಯಲ್ಲ. ಇತ್ತೀಚೆಗೆ ದೊಡ್ಡ ದೊಡ್ಡ ಪೇಟೆಗಳಲ್ಲಿ ಮದುವೆಯ ಮುನ್ನಾಳುದಿನ “ರಿಸೆಪ್ಶನ್” ಹೇಳಿ ಮಾಡಿ, ಮದುಮ್ಮಾಯನೂ ಮದುಮ್ಮಾಳುದೆ ಒಟ್ಟಿಂಗೆ ಬಂದವರ ಎದುರು ನಿಲ್ಲುತ್ತವಾಡ. ಸಭಾಂಗಣದ ವ್ಯವಸ್ಥೆ ಮಟ್ಟಿಂಗೆ ಹಾಂಗೆ ಮಾಡಿದ್ದದು ಹೇಳ್ತವು. ಈ ರೀತಿ ಮಾಡ್ತದು ಸರಿಯೊ ? ಸಣ್ಣ ಪುಟ್ಟ ಬದಲಾವಣೆ ಮಾಡ್ಳಕ್ಕು. ಆದರೆ, ಮದುವೆಂದ ಮದಲೆ, ದಿಂಡು ಅಥವಾ ಕೋಡಿ (ಸೀಮಂತ) ನೆಡವಲಾಗ ಅಷ್ಟೆ !

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಅದು ಸರಿಯೆ…. ಇನ್ನು ಇನ್ನು ಯಾವುದರನ್ನುದೇ ಕ್ರಮಬದ್ದವಾಗಿ ಅಕ್ಕು ಹೇಳಿ ಹೇಳುಲೆ ಎಡಿಯ… ನಿಂಗಳ(?) , ಎಂಗಳ ಮಕ್ಕಳ ಕಾಲಕ್ಕಪ್ಪಗ ಮಕ್ಕಳೇ “ಅಪ್ಪ .. ಆನು ಈ ಕೂಸಿನೊಟ್ಟಿಂಗೆ ಒಂದು ೧೦ ವರ್ಷಂದ ಇದ್ದೆ … ಈಗ ಎನಗೆ ಮ್ಯಾರೇಜ್ ಸರ್ಟಿಫಿಕೇಟ್ ಬೇಕಾವುತ್ತು ,ಆಫೀಸಿಲಿ ಕೊಡ್ಲೆ … ಎನಗೆ ಮದುವೆ ಮಾಡ್ಸಿ” ಹೇಳಿ ಹೇಳುವ ಕಾಲದೇ ಬಕ್ಕು ಹೇಳಿ ಕಾಣ್ತು………

  [Reply]

  VA:F [1.9.22_1171]
  Rating: 0 (from 0 votes)
 8. ಸುಕೇಶ ನೇರೊಳು

  ಮೊನ್ನೆ ಎನ್ನ ಅಕ್ಕನ ಮಗನ ಉಪನಯನಲ್ಲಿ ಹೀ೦ಗೆ ಆಯಿದು… ಭಟ್ಟಮಾವ ವಸಗೆ ಮೊದಲು ಮಾಡ್ಸಿ, ಹೊಮ ಮತ್ತೆ ಮಾಡ್ಸಿದ್ದು.. ಎನ್ನ ಅಪ್ಪ ಅವರ ಗುರಿಕ್ಕಾರರ ಹತ್ರೆ ಕೇಳಿದವು.. ಅವು ಭಟ್ಟಮಾವ ಹೇಳಿದಾ೦ಗೆ ಹೇಳಿ ಸುಮ್ಮನಾದವು.. ಅದು ಅಲ್ಲಿಗೆ ಮುಗುದತ್ತು.. ಇನ್ನೊ೦ದು ವಿಷಯ ಹೇಳಿರೆ, ಅ೦ದು ” ಬಾಡ೦. . ” ಮ೦ತ್ರವೆ ಹೇಳಿದ್ದವಿಲ್ಲೆ… ನಮ್ಮ ಆಚಾರ , ವಿಚಾರ, ಸ೦ಸ್ಕಾರಲ್ಲಿ ತು೦ಬಾ ಬದಲಾವಣೆ ಆವ್ತಾ ಇದ್ದು… ಎನಗೆ ಅನ್ಸುತ್ತು, ಒ೦ದು ದಿನ ಬಕ್ಕು, ಅ೦ದು ದಿಕ್ಕನ ಮದುವೆಲೆ ಕ್ರಮ೦ಗ ಜಾಸ್ತಿ ಆಗಿ, ನಮ್ಮವರ ಮದುವೆಲಿ, ಅ೦ತೆ ನಿ೦ದು ಅತ್ತೆ ಇತ್ತೆ ಹೂಗು ಹಾಕಿಗೊ೦ಗೆನೊ…. :(

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಹೆಚ್ಚಿನಾಂಶ ಬೇಗ ಮುಗಿಯೆಕ್ಕು ಹೇಳಿ “ಬಾಡಂ” ಬಿಟ್ಟದಾಡಿಕ್ಕು…. ಅದಲ್ಲದ್ದೆ ಭಟ್ರು ಹೇಳಿ ಕೊಟ್ರುದೇ ಎಷ್ಟು ಜನ ಪಾಲ್ಸುತ್ತವು ಅದರ …. ಅದಲ್ಲದ್ದೆ ಉಪನಯನ ಅಪ್ಪ ಮಾಣಿಗೆ ಅದರ ಅರ್ಥವೇ ಗೊಂತಿರ್ತ್ತಿಲ್ಲೆ … ಭಟ್ರು ಏನೋ ಹೇಳ್ತವು .. ಅವನುದೇ ಅವರ ಹೇಳ್ತಾ ಹೋವುತ್ತಾ ಅಲ್ಲದಾ …… ????

  [Reply]

  VA:F [1.9.22_1171]
  Rating: 0 (from 0 votes)
 9. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  ಈಗೀಗ ಎಲ್ಲ ಅನುಕೂಲ ಶಾಸ್ತ್ರವೇ! ಶಾಸ್ತ್ರವ ಬಿಡುಲೆ ಸುಲಾಭ!!! ಯೇವದೇ ಜೆ೦ಬ್ರ೦ಗಳಲ್ಲಿ ನೋಡಿ ಬೇಕಾದರೆ ಉ೦ಬಲಪ್ಪಗ ಚೆಪ್ಪರ ಫುಲ್ಲ್!!! ಉ೦ಡು ಕೈ ತೊಳದು ಎಸ್ಕೇಪ್ ಚೆಪ್ಪರ ಖಾಲಿ!!ಮತ್ತೆ೦ತಕೆ ಶಾಸ್ತ್ರ ಎಲ್ಲ?!!!! ಯಾರಿ೦ಗಿದ್ದು ಪುರ್ಸೊತ್ತು?
  ಜೀನ್ಸ್ ಪ್ಯಾ೦ಟು ಅ೦ಗಿ ಕೂಲಿಂಗ್ ಗ್ಲಾಸ್ (ಕನ್ನಡಕ ಹಾಕಿರೆ ಆರಿ೦ಗು ಕಾಣ ಇದಾ !!!!ಬಪ್ಪಗ ಕಣ್ಣು ಕೆ೦ಪಾದ್ದುದೆ ಗೊ೦ತಾಗ !!!) ಹಾಕಿ ಬಾರಿ೦ಗೂ ಹೋಕು!!
  ಅವು ಹೋಗಲಿ ನವಗೆ೦ತ? ನಿ೦ಗಳ ಪೈಸೆಯಾ? ಕೇಳುಗು!!

  test ಮ್ಯಾಚ್ ಹೋಗಿ ಒ೦ಡೇ ಮ್ಯಾಚು ಬ೦ತು..ಒ೦ಡೆ ಮ್ಯಾಚು ಹೋಗಿ ೨೦-೨೦ ಬ೦ತು ಮು೦ದೆ……???????
  ಆರಿ೦ಗೂ ಪುರ್ಸೊತ್ತಿಲ್ಲೆ ಇದಾ!!!!!!!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಹಳೆಮನೆ ಅಣ್ಣತೆಕ್ಕುಂಜ ಕುಮಾರ ಮಾವ°ದೇವಸ್ಯ ಮಾಣಿಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕಒಪ್ಪಕ್ಕvreddhiಯೇನಂಕೂಡ್ಳು ಅಣ್ಣಮುಳಿಯ ಭಾವಎರುಂಬು ಅಪ್ಪಚ್ಚಿಕಜೆವಸಂತ°ದೊಡ್ಮನೆ ಭಾವಪೆಂಗಣ್ಣ°ಶ್ಯಾಮಣ್ಣಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಮಾಷ್ಟ್ರುಮಾವ°ನೆಗೆಗಾರ°ದೊಡ್ಡಭಾವಉಡುಪುಮೂಲೆ ಅಪ್ಪಚ್ಚಿಸುಭಗಪ್ರಕಾಶಪ್ಪಚ್ಚಿಅಜ್ಜಕಾನ ಭಾವಚೆನ್ನಬೆಟ್ಟಣ್ಣಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ